Tag: ಎ ಸಿನಿಮಾ

  • ‘ಎ’ ಪಾರ್ಟ್ 2 ಬಗ್ಗೆ ಅಪ್‌ಡೇಟ್ ಹಂಚಿಕೊಂಡ ನಟಿ ಚಾಂದಿನಿ

    ‘ಎ’ ಪಾರ್ಟ್ 2 ಬಗ್ಗೆ ಅಪ್‌ಡೇಟ್ ಹಂಚಿಕೊಂಡ ನಟಿ ಚಾಂದಿನಿ

    ಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಎ’ (A Film) ಸಿನಿಮಾ 28 ವರ್ಷಗಳ ಹಿಂದೆ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಇದೀಗ ಈ ಚಿತ್ರ ಕಳೆದ ವಾರ ರೀ-ರಿಲೀಸ್ ಆಗಿದೆ. ಮತ್ತೆ ಅದೇ ಕ್ರೇಜ್‌ನಿಂದ ಚಿತ್ರಪ್ರೇಮಿಗಳು ಈ ಸಿನಿಮಾಗೆ ಬೆಂಬಲಿಸಿದ್ದಾರೆ. ಸದ್ಯ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಎ’ ಚಿತ್ರದ ಪಾರ್ಟ್ 2 ಬಗ್ಗೆ ನಟಿ ಚಾಂದಿನಿ (Chandini) ಮಾಹಿತಿ ನೀಡಿದ್ದಾರೆ.

    ‘ಎ’ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವ ಬಗ್ಗೆ ಹಳೆಯ ದಿನಗಳನ್ನು ನಟಿ ಸ್ಮರಿಸಿದ್ದಾರೆ. ನನಗೆ ಆಗ ತುಂಬಾ ಚಿಕ್ಕ ವಯಸ್ಸು. ನಾನು ಸಿನಿಮಾ ನಟಿಯಾಗುವ ಯಾವ ಕನಸನ್ನೂ ಕಂಡವಳಲ್ಲ. ವಿ. ಮನೋಹರ್ ಸರ್ ಮೂಲಕ ಅಮೆರಿಕಾದಲ್ಲಿದ್ದ, ನನ್ನನ್ನು ಉಪೇಂದ್ರ ಅಪ್ರೋಚ್ ಮಾಡಿ ಸಿನಿಮಾಗೆ ಹೀರೋಯಿನ್ ಮಾಡಿದ್ದರು. ನನಗೆ ನಟನೆ, ಸಿನಿಮಾ ಏನೆಂದೂ ಸಹ ಗೊತ್ತಿರಲಿಲ್ಲ. ಆದರೆ, ನನ್ನನ್ನು ಯಶಸ್ವಿ ನಟಿಯಾಗಿ ಮಾಡಿದ ಎಲ್ಲಾ ಕ್ರೆಡಿಟ್ ಉಪೇಂದ್ರ ಅವರಿಗೆ ಸಲ್ಲಬೇಕು ಎಂದು ಮಾತನಾಡಿದ್ದಾರೆ.

    ಈ ವೇಳೆ, ‘ಎ’ ಚಿತ್ರದ ಪಾರ್ಟ್ 2 ಮಾಡೋದಾಗಿ ನಟಿ ಚಾಂದಿನಿ ಘೋಷಿಸಿದ್ದಾರೆ. ಎ ಚಿತ್ರದ ಪಾರ್ಟ್ 2ಗೆ ಕಥೆ, ಚಿತ್ರಕಥೆ ನಾನೇ ಬರೆದಿದ್ದೇನೆ. ನಮ್ಮ ಚಿತ್ರಕ್ಕೆ ನಿರ್ಮಾಪಕ ಮಂಜು ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಕೈ ಜೋಡಿಸಿದ್ದಾರೆ. ಉಪೇಂದ್ರ ಬಳಿ ಹೋಗಿ ಪಾರ್ಟ್ 2ಗೆ ನಟಿಸಲು ಮತ್ತು ನಿರ್ದೇಶನ ಮಾಡಲು ಮನವಿ ಮಾಡುತ್ತೇವೆ. ಉಪೇಂದ್ರ ಅವರು ಓಕೆ ಎನ್ನುತ್ತಾರಾ? ಹೇಗೆ ಗೊತ್ತಿಲ್ಲ. ಆದರೆ ನಮ್ಮ ಚಿತ್ರಕ್ಕೆ ಬೆಂಬಲಿಸಲು ಕೋರಿಕೊಳ್ಳುತ್ತವೆ ಎಂದು ನಟಿ ತಿಳಿಸಿದ್ದಾರೆ.

    ಮದುವೆ ಕುರಿತು ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಟಿ ಚಾಂದಿನಿ, ‘ಎ’ ಸಿನಿಮಾ ನನ್ನ ತಲೆಯನ್ನು ಹಾಳು ಮಾಡಿಬಿಟ್ಟಿದೆ. ನನಗೆ ಮದುವೆಯೆಂದರೇ ಭಯ ಎನ್ನುವಂತಾಗಿದೆ ಎಂದು ಜೋಕ್ ಮಾಡಿದ್ದಾರೆ. ಬಳಿಕ, ನಾನು ಮದುವೆಯೆಂದರೆ ಸ್ವಲ್ಪ ಭಯ ಬೀಳುವುದು ಹೌದು. ಏಕೆಂದರೆ, ಅದೊಂದು ಪಕ್ಕಾ ಕಮಿಟ್‌ಮೆಂಟ್. ಸಿಂಗಲ್ ಆಗಿರುವುದನ್ನು ನಾನು ಸದ್ಯ ಇಷ್ಟಪಡುತ್ತಿದ್ದೇನೆ, ಲೈಫ್ ಎಂಜಾಯ್ ಮಾಡುತ್ತಿದ್ದೇನೆ. ನನ್ನ ಪ್ರಕಾರ, ಮದುವೆ ಎಂದರೆ ಅದೊಂದು ಸ್ಯಾಕ್ರಿ ಫೈಸ್. ನಾವು ಮದುವೆಯಾದರೆ ಬಹಳಷ್ಟನ್ನು ತ್ಯಾಗ ಮಾಡಬೇಕಾಗುತ್ತದೆ.


    ಹೀಗಾಗಿ ನಾನು ಮದುವೆ ಬಗ್ಗೆ ಬಹಳಷ್ಟನ್ನು ಯೋಚಿಸಿ ನಿರ್ಧಾರ ತಗೆದುಕೊಳ್ಳಬೇಕಿದೆ. ಅಂಥ ಕಮಿಟ್‌ಮೆಂಟ್‌ಗೆ ಯೋಗ್ಯ ವ್ಯಕ್ತಿ ಸಿಕ್ಕಾಗ ನಾನು ಖಂಡಿತ ಮದುವೆ ಆಗುತ್ತೇನೆ ಎಂದು ಚಾಂದಿನಿ ಮಾತನಾಡಿದ್ದಾರೆ.

  • ಉಪೇಂದ್ರ ನಟನೆಯ ‘ಎ’ ಸಿನಿಮಾ ರೀ ರಿಲೀಸ್

    ಉಪೇಂದ್ರ ನಟನೆಯ ‘ಎ’ ಸಿನಿಮಾ ರೀ ರಿಲೀಸ್

    ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ (UI Film) ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದರ ನಡುವೆ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿದ್ದ ‘ಎ’ (A Film) ಚಿತ್ರವನ್ನು ಮರು‌ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

    1998ರಲ್ಲಿ ರಿಲೀಸ್ ಆದ ‘ಎ’ ಸಿನಿಮಾಗೆ ಅಂದು ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೂರು ಜನ ಹೀರೋಯಿನ್‌ಗಳ ಜೊತೆ ಉಪೇಂದ್ರ ಡ್ಯುಯೇಟ್ ಹಾಡಿದ್ದರು. ಉಪೇಂದ್ರ ಬರೆದ ಕಥೆಗೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಇದನ್ನೂ ಓದಿ:‘ಗಾಳಿಗುಡ್ಡ’ ಚಿತ್ರತಂಡ ಸೇರಿಕೊಂಡ ದರ್ಶಕ್‌, ಅರ್ಚನಾ ಕೊಟ್ಟಿಗೆ, ಯಶ್‌ವಂತ್

     

    View this post on Instagram

     

    A post shared by Upendra Kumar (@nimmaupendra)

    ಇದೀಗ ಇದೇ ಮೇ 17ಕ್ಕೆ ‘ಎ’ ಸಿನಿಮಾ ಮಾಡಲು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಯುಐ ಸಿನಿಮಾಗಾಗಿ ಕಾದು ಕುಳಿತವರಿಗೆ ‘ಎ’ ಚಿತ್ರದ ಅಪ್‌ಡೇಟ್ ಸಿಕ್ಕಿದೆ. ಮತ್ತೆ ಉಪೇಂದ್ರ ಫಾರ್ಮುಲಾ ಮತ್ತೆ ವರ್ಕೌಟ್ ಆಗುತ್ತಾ? ಎಂದು ಕಾಯಬೇಕಿದೆ.

    ಅಂದಹಾಗೆ, ಉಪೇಂದ್ರ ನಟಿಸಿ, ನಿರ್ದೇಶಿಸಿದ ‘ಎ’ ಸಿನಿಮಾದಲ್ಲಿ ಪ್ರೇಮ, ರವೀನಾ ಟಂಡನ್‌, ದಾಮಿನಿ ನಾಯಕಿಯರಾಗಿ ನಟಿಸಿದ್ದರು. ಈ ಚಿತ್ರಕ್ಕೆ ಗುರುಕಿರಣ್‌ ಸಂಗೀತ ನಿರ್ದೇಶನ ಮಾಡಿದ್ದರು.

  • ಉಪೇಂದ್ರ ನಿರ್ದೇಶನದ ʻಎʼ ಸಿನಿಮಾಗೆ ಸಿಲ್ವರ್ ಸಂಭ್ರಮ

    ಉಪೇಂದ್ರ ನಿರ್ದೇಶನದ ʻಎʼ ಸಿನಿಮಾಗೆ ಸಿಲ್ವರ್ ಸಂಭ್ರಮ

    ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಿರ್ದೇಶನ ಸೂಪರ್ ಹಿಟ್ `ಎ’ (A Film) ಸಿನಿಮಾಗೆ 25 ವರ್ಷಗಳನ್ನ ಪೂರೈಸಿದೆ. ಸಾಕಷ್ಟು ವರ್ಷಗಳ ಹಿಂದೆಯೇ ಕೋಟಿ ಬಜೆಟ್‌ನ್ನ ಸಿನಿಮಾ ಮಾಡಿ ಉಪ್ಪಿ ಸೈ ಎನಿಸಿಕೊಂಡಿದ್ದರು.

    ಉಪೇಂದ್ರ ನಿರ್ದೇಶನ ಎ ಸಿನಿಮಾ, ಗಾಂಧಿನಗರದಲ್ಲಿ ಹೊಸ ಅಲೆ ಎಬ್ಬಿಸಿದ ಚಿತ್ರವಾಗಿತ್ತು. ಜ.16, 2023ಕ್ಕೆ ಎ ಚಿತ್ರ ತೆರೆಕಂಡು 25 ವರ್ಷಗಳನ್ನ (25 Years) ಪೊರೈಸಿದೆ. ಅದರ ಜೊತೆಗೆ ಹೀರೋ ಆಗಿ ಚಿತ್ರರಂಗಕ್ಕೆ ಉಪ್ಪಿ ಎಂಟ್ರಿ ಕೊಟ್ಟು 25 ವರ್ಷಗಳಾಗಿದೆ.

    `ತರ್ಲೆ ನನ್ಮಗ’ (Tarle Nanamaga) ಸಿನಿಮಾ ಮೂಲಕ ಉಪ್ಪಿ ಅವರು ನಿರ್ದೇಶನಕ್ಕೆ ಕಾಲಿಟ್ಟರು. ಶ್, ಓಂ, ಆಪರೇಷನ್ ಅಂತ ಚಿತ್ರಗಳನ್ನು ನೀಡಿ ಉಪೇಂದ್ರ ಫೇಮಸ್ ಆದರು. 1998ರ ಉಪೇಂದ್ರ ನಿರ್ದೇಶನದ `ಎ’ ಸಿನಿಮಾ ಯಶಸ್ಸು ಕಂಡಿತು. ಎ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡರು. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ಉಪ್ಪಿ ಎಂಟರ್‌ಟೈನರ್ಸ್ (Uppi Entertainers) ಮೂಲಕ ಮೂಲಕ ʻಎʼ ಸಿನಿಮಾ ಮೂಡಿಬಂದಿತ್ತು. ಕೋಟಿ ಬಜೆಟ್‌ನಲ್ಲಿ ಸಿದ್ಧವಾದ ಈ ಸಿನಿಮಾ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಉಪೇಂದ್ರ ಅವರು ಸಿದ್ಧಸೂತ್ರಗಳನ್ನು ಬದಿಗಿಟ್ಟು ಗಮನ ಸೆಳೆದಿದ್ದರು. ಈ ಮೂಲಕ ಬೇರೆ ರೀತಿಯಲ್ಲಿ ಆಲೋಚನೆ ಮಾಡುವುದನ್ನು ಹೇಳಿಕೊಟ್ಟರು.

    ಈ ಸಿನಿಮಾದ ಮಾರಿ ಕಣ್ಣು ಮೊದಲಾದ ಹಾಡುಗಳು ಹಿಟ್ ಆದವು. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ಉಪ್ಪಿಗೆ ಜತೆಯಾಗಿ ಚಾಂದಿನಿ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಸೈಕಾಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k