Tag: ಎ ಮಂಜು

  • ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕರ ಪಾದ ತೊಳೆದ ಮಂಜು!

    ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕರ ಪಾದ ತೊಳೆದ ಮಂಜು!

    ಹಾಸನ: ಇಂದು ಬಿಜೆಪಿ ಅಭ್ಯರ್ಥಿಯಾದ ಮಾಜಿ ಸಚಿವ ಎ.ಮಂಜು ಅವರು ನಾಮಪತ್ರ ಸಲ್ಲಿಕೆಗೂ ಮುನ್ನಾ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಯ ಪಾದ ತೊಳೆದು ಪೂಜೆ ಮಾಡಿದ್ದಾರೆ.

    ಈ ಹಿಂದೆ ಕುಂಭಮೇಳದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್‍ನಲ್ಲಿ ಪೌರಕಾಮಿಕರ ಪಾದ ತೊಳೆದು ಪೂಜೆ ಮಾಡಿ ಸುದ್ದಿಯಾಗಿದ್ದರು. ಈಗ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವ ಎ. ಮಂಜು ಅವರು ಇಂದು ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ, ಪೌರಕಾರ್ಮಿಕ ದಂಪತಿಯ ಪಾದ ತೊಳೆದು ಪೂಜೆ ಮಾಡಿ ಮೋದಿ ಅವರನ್ನು ಫಾಲೋ ಮಾಡಿದ್ದಾರೆ. ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದಪೂಜೆ – ವಿಡಿಯೋ ನೋಡಿ

    ಹಾಸನದ ನಿರ್ಮಾಲ ನಗರದಲ್ಲಿ ಚಂದ್ರು ಹಾಗೂ ಅಶ್ವಿನಿ ದಂಪತಿಯ ಕಾಲು ತೊಳೆದು ಎ.ಮಂಜು ಪೂಜೆ ಮಾಡಿದ್ದಾರೆ. ಪಾದ ತೊಳೆದ ನಂತರ, ನಾವು ಪೌರಕಾರ್ಮಿಕರ ಪಾದ ತೊಳೆದಿದ್ದ ಮೋದಿಯನ್ನು ಟಿವಿಯಲ್ಲಿ ಮಾತ್ರ ನೊಡಿದ್ದೇವು. ಅದರೇ ಇಂದು ಎ.ಮಂಜು ನಮ್ಮ ಮನೆಗೆ ಬಂದು ನಮ್ಮ ಪಾದ ತೊಳೆದಿದ್ದಾರೆ. ಮೊದಲು ಸ್ವಲ್ಪ ಮುಜುಗರವಾದರೂ ನಂತರ ಸಂತೋಷವಾಯಿತು ಎಂದ ಚಂದ್ರು ದಂಪತಿ ಪ್ರತಿಕ್ರಿಯಿಸಿದ್ದಾರೆ.

  • ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸೋದಾಗಿ ಎ.ಮಂಜು ಶಪಥ

    ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸೋದಾಗಿ ಎ.ಮಂಜು ಶಪಥ

    ಹಾಸನ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವುದಾಗಿ ಶಪಥ ಮಾಡುವ ಮೂಲಕ ಮಾಜಿ ಸಚಿವ ಎ.ಮಂಜು ಎಡವಟ್ಟು ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾತನಾಡಿದ ಮಾಜಿ ಸಚಿವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲಾದ್ಯಂತ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದರು. ತಕ್ಷಣವೇ ವೇದಿಕೆ ಮೇಲಿದ್ದ ಸ್ಥಳೀಯ ಮುಖಂಡರು ಹಾಗೂ ಕೆಲ ಕಾರ್ಯಕರ್ತರು ಕಾಂಗ್ರೆಸ್ ಅಲ್ಲ, ಬಿಜೆಪಿ ಬಿಜೆಪಿ ಎಂದು ತಿಳಿಸಿದರು.

    ಎ.ಮಂಜು ಅವರು ಭಾಷಣವನ್ನು ಮುಂದುವರಿಸಿ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧವಾಗಿವೆ. ಆದರೆ ಕಾಂಗ್ರೆಸ್ ಪ್ರಮುಖ ಕ್ಷೇತ್ರಗಳನ್ನೇ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

    ಇದಕ್ಕೂ ಮುನ್ನ ಬೇಲೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಬಣಗಳಲ್ಲಿ ಭಿನ್ನಮತ ಕಾಣಿಸಿಕೊಂಡಿತ್ತು. ಪರಿಣಾಮ ಎರಡೂ ಬಣಗಳ ಕಾರ್ಯಕರ್ತರು ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ ವೇಳೆ ಸಭೆಗೆ ಆಗಮಿಸಿದ ಮಾಜಿ ಸಚಿವ ಹಾಗೂ ಸ್ಥಳೀಯ ಕೆಲ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

    ಭಿನ್ನಮತ ಏಕೆ?:
    ಸಭೆಯ ಫ್ಲೆಕ್ಸ್ ನಲ್ಲಿ ಕಳೆದ ವಿಧಾನಸಭಾ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಅವರ ಭಾವಚಿತ್ರ ಹಾಕಿರಲಿಲ್ಲ. ಆದರೆ ತಾಲೂಕಿನ ಬಿಜೆಪಿ ನಾಯಕ ಕೊರಟಗೆರೆ ಪ್ರಕಾಶ್ ಅವರ ಫೋಟೋ ಮಾತ್ರ ಹಾಕಲಾಗಿತ್ತು. ಇದರಿಂದಾಗಿ ಕೋಪಗೊಂಡ ಸುರೇಶ್ ಅವರ ಬೆಂಬಲಿಗರು ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಸಭೆಗೆ ಆಗಮಿಸಿದ ಎ.ಮಂಜು ಅವರು ಎರಡೂ ಗುಂಪುಗಳ ಕಾರ್ಯಕರ್ತರಿಗೆ ಸಮಾಧಾನ ಹೇಳಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

  • ಬಿಸ್ಕೆಟ್ ಎಸೆದಿದ್ದ ರೇವಣ್ಣ ಈಗ ಮನೆಮನೆಗೆ ಹೋಗ್ತಿದ್ದಾನೆ: ಎ.ಮಂಜು ವ್ಯಂಗ್ಯ

    ಬಿಸ್ಕೆಟ್ ಎಸೆದಿದ್ದ ರೇವಣ್ಣ ಈಗ ಮನೆಮನೆಗೆ ಹೋಗ್ತಿದ್ದಾನೆ: ಎ.ಮಂಜು ವ್ಯಂಗ್ಯ

    ಹಾಸನ: ಸಚಿವ ಎಚ್.ಡಿ.ರೇವಣ್ಣ ರಾಮನಾಥಪುರಕ್ಕೆ ಬಂದಾಗ ಬಿಸ್ಕೆಟ್ ಎಸೆದಿದ್ದ. ಈಗ ಮನೆ ಮನೆಗೆ ಹೋಗ್ತಿದ್ದಾನೆ ಎಂದು ಹಾಸನ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎ. ಮಂಜು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ಇಡೀ ಪ್ರಪಂಚ ಇಂದು ನಮ್ಮ ದೇಶವನ್ನು ನೋಡುತ್ತಿದೆ. ಎಲ್ಲೋ ಇದ್ದ ನಮ್ಮ ದೇಶವನ್ನು ಈಗ ನಾಲ್ಕನೇ ಸ್ಥಾನಕ್ಕೆ ತಂದ ಕೀರ್ತಿ ಮೋದಿಯವರಿಗೆ ಸಲ್ಲಬೇಕು. ನೆರೆ ರಾಷ್ಟ್ರಗಳ ಬೆಂಬಲದಲ್ಲಿ ಉಗ್ರರ ದಮನ ಮಾಡಿದರು. ಇದು ನಮ್ಮ ದೇಶಕ್ಕೆ ಕೀರ್ತಿಯ ವಿಚಾರ. ಸ್ವಾತಂತ್ರ್ಯ ಬಂದಾಗಿನಿಂದಲೂ ನಮಗೆ ನೆಮ್ಮದಿ ಇರಲಿಲ್ಲ. ಮೋದಿ ಸ್ವಾರ್ಥವಿಲ ದೇಶಕ್ಕಾಗಿ ದುಡಿಯುವ ವ್ಯಕ್ತಿ. ಕಾಂಗ್ರೆಸ್‍ನಲ್ಲಿ ಡಿಕೆಶಿ ಹೊರತು ಪಡಿಸಿದರೆ ನಾನೇ ನಮ್ಮ ಸಮುದಾಯದ ನಾಯಕನಾಗಿದ್ದೆ. ಆದರೆ ಇಂದು ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಹಿಂದೆ ನಾನು ಮೊದಲ ಬಾರಿಗೆ ಶಾಸಕನಾಗಿದ್ದು ಬಿಜೆಪಿಯಿಂದ, ಈಗ ಎಂಪಿ ಆಗುವುದು ಸಹ ಇದೇ ಪಕ್ಷದಿಂದ ಎಂದು ಹೇಳಿದ್ದಾರೆ.

    ಹಾಸನ ಜಿಲ್ಲೆಯಲ್ಲಿ 1999ರಲ್ಲಿ ಆದ ಚುನಾವಣೆ ಫಲಿತಾಂಶ ಆಗಿದ್ದೇ ಈಗ ಮರುಕಳಿಸುತ್ತದೆ. ಏಕೆಂದರೆ 9 ನಂಬರ್ ಅವರಿಗೆ ಕಂಟಕ. ಅವರಿಗೆ ಅವರೇ ಅಪಶಕುನ. ಅವರಿಗೆ ಮಾತ್ರ ದೇವರಲ್ಲ ನಮಗೂ ದೇವರಿದ್ದಾನೆ. ಒಳ್ಳೆಯದು ಕೆಟ್ಟದು ದೇವರಿಗೆ ಗೊತ್ತು. ಪೂಜೆ ಮಾಡಿ ಮಾಡಿ ಜಯಗಳಿಸಿದ್ದಾರೆ ಅಂತಾರೆ. ಆದರೆ ಅವರನ್ನು ನಿಮ್ಮ ಮನೆ ಮನೆಗೆ ಹೋಗುವಂತೆ ಮಾಡಿರೋದು ನಮ್ಮ ಮೊದಲ ಗೆಲುವು. ರೇವಣ್ಣ ರಾಮನಾಥಪುರಕ್ಕೆ ಬಂದಾಗ ಬಿಸ್ಕೆಟ್ ಎಸೆದಿದ್ದ. ಈಗ ಮನೆ ಮನೆಗೆ ಹೋಗ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.

    ಇವರಿಗೆ ನಂಬರ್ ಗಳು ಮಾತ್ರ ಬೇಕು. ಏಕೆಂದರೆ ನಾನು ಆರು ತಿಂಗಳ ಹಿಂದೆಯೇ ಬಿಜೆಪಿಗೆ ಹೋಗುವ ಕುರಿತು ತೀರ್ಮಾನಿಸಿದ್ದೆ. ಬಿಜೆಪಿ ದೇಶದಲ್ಲಿ 350 ಸ್ಥಾನಗಳು ಗೆಲ್ಲುತ್ತದೆ. ಸೂರ್ಯ-ಚಂದ್ರ ಇರುವುದು ಎಷ್ಟು ನಿಜವೋ, ಅದೇ ರೀತಿ ಮೋದಿ ಪ್ರಧಾನಿ ಆಗೋದು ಅಷ್ಟೇ ಸತ್ಯ. ಹಿಂದಿನ ಚುನಾವಣೆಯಲ್ಲಿ ನನಗೆ ಇನ್ನೂ ಐವತ್ತು ಸಾವಿರ ಮತಗಳ ಅವಶ್ಯಕತೆ ಇತ್ತು ಅಷ್ಟೇ. 50,000 ಮತ ಸಿಕ್ಕಿದಿದ್ದರೆ, ನನಗೆ ದೇವೇಗೌಡರ ವಿರುದ್ಧ ಗೆಲುವು ಸಿಗುತಿತ್ತು. ಇವರ ವಂಶವನ್ನು ರಾಜಕೀಯದಿಂದ ತೆಗೆಯಲು ನೀವೆಲ್ಲ ಸಹಕರಿಸಿ ಎಂದು ಎ. ಮಂಜು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

    ಎಂಟು ತಿಂಗಳಾದರೂ ಸರ್ಕಾರ ಬಂದು ಯಾರನ್ನು ಮಾತನಾಡಿಸದವರು ಈಗ ಎಲ್ಲರ ಮನೆ ಬಾಗಿಲಿಗೆ ಹೋಗ್ತಿದ್ದಾರೆ. ದೇವೇಗೌಡರು ಕಣ್ಣೀರು ಹಾಕಿದ್ರು. ಅವರ ಮಕ್ಕಳು-ಮೊಮ್ಮಕ್ಕಳು ಸಹ ಅತ್ತು ಬಿಟ್ಟು ನಾಟಕ ಮಾಡಿದರು. ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಕಾಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿದರೆ ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ನಾಯಕರಿಗೆ ಅವಕಾಶ ಸಿಗಬಹುದು.

    ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡುವುದಕ್ಕೆ ನಾನು ರಾಹುಲ್ ಗಾಂಧಿಗೆ ಹೇಳಿದ್ದೆ. ಆದರೆ ನಿಮ್ಮ ಮಗನನ್ನೇ ಮಾಡಿ ಎಂದು ರಾಹುಲ್ ಗಾಂಧಿಯೇ ಹೇಳಿದ್ದು ಎಂದು ಗೌಡರು ಸುಳ್ಳು ಹೇಳುತ್ತಾರೆ. ಇವರ ಮನೆಯವರಿಗೆ ದುಡ್ಡಿರುವ ಖಾತೆಯೇ ಬೇಕು. ರೈತರ ಬಗ್ಗೆ, ಕೃಷಿ ಬಗ್ಗೆ ಇರುವ ಇಲಾಖೆಗೆ ಇವರು ಮಂತ್ರಿಯಾಗಲ್ಲ ಎಂದು ಎ. ಮಂಜು, ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 25 ರಂದು 12ಗಂಟೆಗೆ ನಮ್ಮ ನಾಮಪತ್ರ ಸಲ್ಲಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಐತಿಹಾಸಿಕ ಸಭೆಯನ್ನು ನಡೆಸುತ್ತೇವೆ ಎಂದು ಹಾಸನದಲ್ಲಿ ಎ.ಮಂಜು ಹೇಳಿದ್ದಾರೆ.

    https://www.youtube.com/watch?v=0ZzoSd4G8O4

  • ಹೊಂದಾಣಿಕೆಯಾಗದಿದ್ದರೆ ಚುನಾವಣೆಯಲ್ಲಿ ಫಲಿತಾಂಶ ಸಿಗಲ್ಲ- ಕೆಪಿಸಿಸಿ ಉಪಾಧ್ಯಕ್ಷ ಭವಿಷ್ಯ

    ಹೊಂದಾಣಿಕೆಯಾಗದಿದ್ದರೆ ಚುನಾವಣೆಯಲ್ಲಿ ಫಲಿತಾಂಶ ಸಿಗಲ್ಲ- ಕೆಪಿಸಿಸಿ ಉಪಾಧ್ಯಕ್ಷ ಭವಿಷ್ಯ

    ಹಾಸನ: ರಾಜ್ಯಾದ್ಯಂತ ಎರಡೂ ಪಕ್ಷಗಳ ಕಾರ್ಯಕರ್ತರ ಜಂಟಿ ಸಭೆಗಳನ್ನು ನಡೆಸಿಲ್ಲ. ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಹೈಕಮಾಂಡ್ ನಿರೀಕ್ಷೆಯಂತೆ ಚುನಾವಣೆಯಲ್ಲಿ ಫಲಿತಾಂಶ ಸಿಗುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಹೊಂದಾಣಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ದಯನೀಯವಾಗಿದೆ. ರಾಜ್ಯದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ಜಂಟಿ ಸಭೆಗಳನ್ನು ನಡೆಸಿಲ್ಲ. ಹೀಗಾಗಿ ಸರಿಯಾಗಿ ಹೊಂದಾಣಿಕೆ ಆಗದಿದ್ದಲ್ಲಿ ಹೈಕಮಾಂಡ್ ನಿರೀಕ್ಷೆಯಂತೆ ಚುನಾವಣೆಯಲ್ಲಿ ಫಲಿತಾಂಶ ಸಿಗುವುದು ಕಷ್ಟ ಎಂದು ಹೇಳಿದ್ರು.

    ನಮ್ಮ ಪಕ್ಷದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಮಾಜಿ ಸಚಿವ ಎ.ಮಂಜು ಪಕ್ಷಕ್ಕೆ ದ್ರೋಹ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶ್ವಾಸವನ್ನೂ ಎ ಮಂಜು ಉಳಿಸಿಕೊಳ್ಳಲಿಲ್ಲ. ಇದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು. ಎ.ಮಂಜುಗೆ ಪಕ್ಷಾಂತರ ಹೊಸದಲ್ಲ. ಈ ಹಿಂದೆಯೂ ಅವರು ಮೂರು ಬಾರಿ ಪಕ್ಷಾಂತರ ಮಾಡಿದ್ದಾರೆ ಎಂದು ಕಾಲೆಳೆದರು.

    ಈ ರೀತಿಯ ಪಕ್ಷಾಂತರಗಳಿಗೆ ಕಾಂಗ್ರೆಸ್ ನಲ್ಲಿ ಬೆಲೆ ಮತ್ತು ಗೌರವ ಕೊಡ್ತಾರೆ. ನಿಷ್ಠಾವಂತರಿಗೆ ಗೌರವ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಎ.ಮಂಜು ಜಿಲ್ಲೆಯಾದ್ಯಂತ ನಡೆಸುತ್ತಿರುವ ಸಭೆಗಳಲ್ಲಿ ಭಾಗವಹಿಸುತ್ತಿರುವ ಜನಪ್ರತಿನಿಧಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಶೀಘ್ರವೇ ಶಿಸ್ತುಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  • ರಾಜೀನಾಮೆ ನಿರ್ಧಾರ ಮುಂದೂಡಿದ ಮಾಜಿ ಸಚಿವ ಎ ಮಂಜು..!

    ರಾಜೀನಾಮೆ ನಿರ್ಧಾರ ಮುಂದೂಡಿದ ಮಾಜಿ ಸಚಿವ ಎ ಮಂಜು..!

    ಹಾಸನ: ಇಲ್ಲಿನ ಕಾಂಗ್ರೆಸ್ ಪಾಲಿಟಿಕ್ಸ್ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆಯುತ್ತಿದ್ದು, ಮಾಜಿ ಸಚಿವ ಎ ಮಂಜು ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಅವರು ದಿಢೀರ್ ಆಗಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

    ಹೌದು. ಎ ಮಂಜು ಇಂದು ಕಾಂಗ್ರೆಸ್‍ಗೆ ರಾಜೀನಾಮೆ ನೀಡುವ ಕುರಿತು ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಇಂದು ರಾಜೀನಾಮೆ ನೀಡುತ್ತಿಲ್ಲ. ಬದಲಾಗಿ ಸೋಮವಾರ ಅಂತಿಮ ತೀರ್ಮಾನ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ.

    ನಿರ್ಧಾರ ಬದಲಿಸಿದ್ದು ಯಾಕೆ..?
    ಎ ಮಂಜು ಇಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಇದೇ ವೇಳೆ ರಾಜೀನಾಮೆಯ ಕುರಿತು ಮನವೊಲಿಸಲು ಮಾಜಿ ಸಿಎಂ ಮುಂದಾದ್ರು. ಈ ಹಿನ್ನೆಲೆಯಲ್ಲಿ ಎ ಮಂಜು ತಮ್ಮ ನಿರ್ಧಾರವನ್ನು ಮುಂದೂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿದ್ದರಾಮಯ್ಯ ಏನ್ ಹೇಳಿದ್ರು..?
    “ಬಿಜೆಪಿ ಸೇರುವ ನಿರ್ಧಾರ ತಗೋಬೇಡ. ಅಲ್ಲಿ ಹೋದರೆ ನಿನ್ನ ರಾಜಕೀಯ ಭವಿಷ್ಯ ಹಾಳಾಗುತ್ತದೆ. ಬಿಜೆಪಿಗೆ ಹೋಗದೆ ಕಾಂಗ್ರೆಸ್ ನಲ್ಲೇ ಇರು. ಬಿಜೆಪಿಗೆ ಹೋದರೆ ಅಲ್ಲಿ ಕಡೆಗಣನೆಗೆ ಒಳಗಾಗ್ತೀಯ. ಆ ನಂತ್ರ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅನ್ನುವ ಸ್ಥಿತಿ ತಂದುಕೊಳ್ಳಬೇಡ ಎಂದು ಬುದ್ಧಿ ಮಾತು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿದ್ದರಾಮಯ್ಯ ಅವರ ಮಾತಿಗೆ ಎ. ಮಂಜು, ಹಾಸನದಲ್ಲಿ ನೀವ್ಯಾರೂ ಜೆಡಿಎಸ್ ನವರ ಕಾಟ ತಡೆಯಲಿಲ್ಲ. ಪ್ರಜ್ವಲ್ ನಂಥವರ ಪರ ಕಾಂಗ್ರೆಸ್ ನವರು ಹೇಗೆ ಮತ ಕೇಳೋದು?. ಮೊಮ್ಮಗನನ್ನು ನಿಲ್ಲಿಸುವ ದೇವೇಗೌಡರ ನಿರ್ಧಾರ ಸರಿಯಲ್ಲ. ನಾವು ಆಗಿನಿಂದಲೂ ಜೆಡಿಎಸ್ ವಿರುದ್ಧವೇ ಹೋರಾಡಿಕೊಂಡು ಬಂದಿದ್ದೇವೆ. ಈಗ ಪ್ರಜ್ವಲ್ ಪರ ಮತ ಕೇಳಲು ಹೋದರೆ ಜನ ಏನನ್ನಲ್ಲ?. ಜೆಡಿಎಸ್ ನವರಿಗೆ ಬುದ್ಧಿ ಕಲಿಸೋದಿಕ್ಕೆ ಇದೇ ಒಳ್ಳೆಯ ಅವಕಾಶ ಎಂದು ಮಂಜು, ಸಿದ್ದರಾಮಯ್ಯ ಬುದ್ಧಿ ಮಾತಿಗೊಪ್ಪದೆ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದರು ಎನ್ನಲಾಗಿತ್ತು.

    ಶುಕ್ರವಾರ ಹಾಸನದ ಅರಸೀಕೆರೆ ಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಕಾಂಗ್ರೆಸ್ ತೊರೆಯುವ ಬಗ್ಗೆ ಎ.ಮಂಜು ಅವರು ಘೋಷಿಸಿದ್ದರು. ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ. ಹಾಗೆಯೇ ಕಾಂಗ್ರೆಸ್‍ನಿಂದ ಬಿಜೆಪಿಗೆ ಎ. ಮಂಜು ಜಿಗಿಯಲಿದ್ದಾರೆ. ಮಂಜು ಜೊತೆಗೆ ಕಾಂಗ್ರೆಸ್‍ನ ಬಹುತೇಕ ಜನಪ್ರತಿನಿಧಿಗಳು ಸಹ ಕಾಂಗ್ರೆಸ್ ಬಿಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಚಿವ ಎ.ಮಂಜು ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ..!

    ಮಾಜಿ ಸಚಿವ ಎ.ಮಂಜು ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ..!

    ಬೆಂಗಳೂರು: ಬಿಜೆಪಿ ಸೇರುವ ನಿರ್ಧಾರವನ್ನು ತೆಗೆದುಕೊಳ್ಳಬೇಡ ಎಂದು ಮಾಜಿ ಸಚಿವ ಎ. ಮಂಜು ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

    ಸಿದ್ದರಾಮಯ್ಯ ತನ್ನ ಶಿಷ್ಯ ಎ.ಮಂಜು ಅವರಿಗೆ ದೂರವಾಣಿ ಕರೆ ಮಾಡಿ, “ಬಿಜೆಪಿ ಸೇರುವ ನಿರ್ಧಾರ ತಗೋಬೇಡ. ಅಲ್ಲಿ ಹೋದರೆ ನಿನ್ನ ರಾಜಕೀಯ ಭವಿಷ್ಯ ಹಾಳಾಗುತ್ತೆ. ಬಿಜೆಪಿಗೆ ಹೋಗದೇ ಕಾಂಗ್ರೆಸ್ ನಲ್ಲೇ ಇರು. ಬಿಜೆಪಿಗೆ ಹೋದರೆ ಅಲ್ಲಿ ಕಡೆಗಣನೆಗೆ ಒಳಗಾಗ್ತೀಯ. ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅನ್ನುವ ಸ್ಥಿತಿ ತಂದುಕೊಳ್ಳಬೇಡ ಎಂದು ಬುದ್ಧಿ ಮಾತು ಹೇಳಿದ್ದಾರೆ” ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎ. ಮಂಜು ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿರುವ ಬಗ್ಗೆ ಸಿದ್ದರಾಮಯ್ಯಗೆ ಖಚಿತ ಪಡಿಸಿದ್ದಾರೆ. ಹಾಸನದಲ್ಲಿ ನೀವ್ಯಾರೂ ಜೆಡಿಎಸ್ ನವರ ಕಾಟ ತಡೆಯಲಿಲ್ಲ. ಪ್ರಜ್ವಲ್ ನಂಥವರ ಪರ ಕಾಂಗ್ರೆಸ್ ನವರು ಹೇಗೆ ಮತ ಕೇಳೋದು?. ಮೊಮ್ಮಗನನ್ನು ನಿಲ್ಲಿಸುವ ದೇವೇಗೌಡರ ನಿರ್ಧಾರ ಸರಿಯಲ್ಲ. ನಾವು ಆಗಿನಿಂದಲೂ ಜೆಡಿಎಸ್ ವಿರುದ್ಧವೇ ಹೋರಾಡಿಕೊಂಡು ಬಂದಿದ್ದೇವೆ. ಈಗ ಪ್ರಜ್ವಲ್ ಪರ ಮತ ಕೇಳಲು ಹೋದರೆ ಜನ ಏನನ್ನಲ್ಲ?. ಜೆಡಿಎಸ್ ನವರಿಗೆ ಬುದ್ಧಿ ಕಲಿಸೋದಿಕ್ಕೆ ಇದೇ ಒಳ್ಳೆಯ ಅವಕಾಶ ಎಂದು ಮಂಜು, ಸಿದ್ದರಾಮಯ್ಯ ಬುದ್ಧಿ ಮಾತಿಗೊಪ್ಪದೆ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಶುಕ್ರವಾರ ಹಾಸನದ ಅರಸೀಕೆರೆ ಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಕಾಂಗ್ರೆಸ್ ತೊರೆಯುವ ಬಗ್ಗೆ ಎ.ಮಂಜು ಅವರು ಘೋಷಿಸಿದ್ದರು. ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಕಾಂಗ್ರೆಸ್ಸಿಗೆ ಗುಡ್‍ಬೈ ಹೇಳುವ ಸಾಧ್ಯತೆಯಿದೆ. ಹಾಗೆಯೇ ಕಾಂಗ್ರೆಸ್‍ನಿಂದ ಬಿಜೆಪಿಗೆ ಎ. ಮಂಜು ಜಿಗಿಯಲಿದ್ದಾರೆ. ಮಂಜು ಜೊತೆಗೆ ಕಾಂಗ್ರೆಸ್‍ನ ಬಹುತೇಕ ಜನಪ್ರತಿನಿಧಿಗಳು ಸಹ ಕಾಂಗ್ರೆಸ್ ಬಿಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಕಾಂಗ್ರೆಸ್‍ಗೆ ಮಾಜಿ ಸಚಿವ ಎಂ.ಮಂಜು ಗುಡ್‍ಬೈ..!

    ಇಂದು ಕಾಂಗ್ರೆಸ್‍ಗೆ ಮಾಜಿ ಸಚಿವ ಎಂ.ಮಂಜು ಗುಡ್‍ಬೈ..!

    – ಕೈ ತೊರೆಯಲಿದ್ದಾರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ

    ಹಾಸನ: ಲೋಕಸಭಾ ಚುನಾವಣೆಯ ಹಿನ್ನೆಲೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆಗಳಾಗುತ್ತಿದ್ದು, ಇಂದು ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‍ಗೆ ಗುಡ್‍ಬೈ ಹೇಳಲಿದ್ದಾರೆ.

    ಶುಕ್ರವಾರ ಹಾಸನದ ಅರಸೀಕೆರೆ ಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಎ.ಮಂಜು ಅವರು ಘೋಷಿಸಿದ್ದಾರೆ. ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಕಾಂಗ್ರೆಸ್ಸಿಗೆ ಗುಡ್‍ಬೈ ಹೇಳುವ ಸಾಧ್ಯತೆಯಿದೆ. ಹಾಗೆಯೇ ಕಾಂಗ್ರೆಸ್‍ನಿಂದ ಬಿಜೆಪಿಗೆ ಎ. ಮಂಜು ಜಿಗಿಯಲಿದ್ದಾರೆ. ಮಂಜು ಜೊತೆಗೆ ಕಾಂಗ್ರೆಸ್‍ನ ಬಹುತೇಕ ಜನಪ್ರತಿನಿಧಿಗಳು ಸಹ ಕಾಂಗ್ರೆಸ್ ಬಿಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಿಜೆಪಿಗೆ ಸೇರಿ ಹಾಸನದಲ್ಲಿ ಕಾಂಗ್ರೆಸ್‍ಗೆ ಬಿಗ್ ಶಾಕ್ ನೀಡಲು ಎ.ಮಂಜು ಸಿದ್ಧರಾಗಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧಿಸುವ ಸಾಧ್ಯತೆ ಇದ್ದು, ಮಂಜು ತನ್ನ ಜೊತೆ ನೂರಾರು ಪ್ರಮುಖ ಜಿಲ್ಲಾ ನಾಯಕರನ್ನ ಬಿಜೆಪಿಗೆ ಕರೆದುಕೊಂಡು ಹೋಗ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

    ಸದ್ಯ ಎ.ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ದೇವರಾಜ್ ಕೂಡ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳಸಿದ ಅನ್ನವನ್ನು ಯಾರೂ ತಿನ್ನಲ್ಲ, ನಮ್ಗೂ ಬೇಡ- ಎ ಮಂಜು ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ವಾಗ್ದಾಳಿ

    ಹಳಸಿದ ಅನ್ನವನ್ನು ಯಾರೂ ತಿನ್ನಲ್ಲ, ನಮ್ಗೂ ಬೇಡ- ಎ ಮಂಜು ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ವಾಗ್ದಾಳಿ

    ಹಾಸನ: ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‍ಗೆ ಹಳಸಿದ ಅನ್ನದ ರೀತಿಯಲ್ಲಿದ್ದಾರೆ. ಎ ಮಂಜು ಎಂಬ ಹಳಸಿದ ಅನ್ನವನ್ನು ಯಾರೂ ತಿನ್ನುವುದಿಲ್ಲ ಎಂದು ಹೇಳುವ ಮೂಲಕ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಅವರು ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ ಮಂಜು ಸೇರ್ಪಡೆ ಬಗ್ಗೆ ವರಿಷ್ಠರು ಚರ್ಚಿಸಿದ್ದಲ್ಲಿ ನಾವು ಇದೇ ವಿಚಾರವನ್ನೇ ಹೇಳ್ತೇವೆ. ದೇವೇಗೌಡರು ಸ್ಪರ್ಧಿಸಿದ್ರೆ ನನ್ನ ಬೆಂಬಲ ಇದೆ ಎಂದವರನ್ನು ನಂಬೋದು ಹೇಗೆ? ಅವರು ಪಕ್ಷದ ಸೇರ್ಪಡೆ ಊಹಾಪೂಹದ ವಿಚಾರವಾಗಿದೆ. ರಾಜ್ಯ ನಾಯಕರು ನಮ್ಮನ್ನು ಈ ಕುರಿತು ಅಭಿಪ್ರಾಯ ಕೇಳಿಲ್ಲ ಎಂದು ಹೇಳಿದ್ದಾರೆ.

    ದೇವೇಗೌಡರು ಅಭ್ಯರ್ಥಿಯಾದರೆ ನಾನು ಬೆಂಬಲಿಸುತ್ತೇನೆ ಎಂದು ಎ.ಮಂಜು ಹೇಳಿದ್ದಾರೆ. ಹಾಗಿದ್ದಾಗ ನಾವು ಈ ಕುರಿತು ಮಾತನಾಡುವುದಕ್ಕೆ ಸಾಧ್ಯವಿಲ್ಲ. ಈ ಕುರಿತು ಪಕ್ಷದ ನಾಯಕರು ಜಿಲ್ಲಾ ಕಾರ್ಯಕರ್ತರಲ್ಲಿ ಚರ್ಚಿಸಿಲ್ಲ. ಬಿಜೆಪಿಗೆ ಗೆಲುವು ಕೊಡಿಸುವ ಯಾವುದೇ ಅಭ್ಯರ್ಥಿಯನ್ನು ವರಿಷ್ಠರು ಸೂಚಿಸಿದರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ರು.

    ಹಾಸನ ಜಿಲ್ಲೆಯಲ್ಲಿ ಇಂದಿನ ಕಾಂಗ್ರೆಸ್ ಪರಿಸ್ಥಿತಿಗೆ ಎ.ಮಂಜು ಕಾರಣವಾಗಿದ್ದಾರೆ. ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಸೋತರು ಎಂದು ಪ್ರಶ್ನಿಸಿ ಎ.ಮಂಜು ಪಕ್ಷ ಸೇರ್ಪಡೆಗೆ ಪರೋಕ್ಷವಾಗಿ ಜಿಲ್ಲಾ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

    ನಮ್ಮ ಪಕ್ಷ ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಇದೆ. ಇಡೀ ಭಾರತಾದ್ಯಂತ ಮೋದಿಯವರ ಕಾರ್ಯಕ್ರಮಗಳು ಮತ್ತು ಅವರ ನಾಯಕತ್ವ ನಮ್ಮ ಪಕ್ಷದ ಗೆಲುವಿಗೆ ಪೂರಕವಾಗಿದೆ. ಹಿಂದೆ ಅಧಿಕಾರದಲ್ಲಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಜನ ತಿರಸ್ಕರಿಸಿದರು. ಅಪವಿತ್ರ ಮೈತ್ರಿಯ ಸರ್ಕಾರ ಆಂತರಿಕ ಸಮಸ್ಯೆಗಳಿಂದಾಗಿ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ. ರಾಜ್ಯದ ಪ್ರಗತಿ ರಾಜ್ಯದ ಸಮ್ಮಿಶ್ರ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಮರಿಚೀಕೆಯಾಗಿದೆ ಎಂದರು.

    ಕೇವಲ ಹೊಳೇನರಸೀಪುರ ಮಾತ್ರ ಅಭಿವೃದ್ಧಿಯಾಗುತ್ತಿದೆ. ರೇವಣ್ಣನವರು ಕುಟುಂಬ ರಾಜಕಾರಣ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲ ಯೋಜನೆಗಳ ಫಲಾನುಭವಿಗಳಾಗಿ ಅವರ ಕುಟುಂಬಸ್ಥರು ಅನುಭವಿಸುತಿದ್ದಾರೆ. ರೇವಣ್ಣ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲಾಧಿಕಾರಿ ವರ್ಗಾವಣೆಯಾಯಿತು. ಎ.ಮಂಜು ಉಸ್ತುವಾರಿ ಸಚಿವರಾಗಿದ್ದಾಗ ಕೂಡ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಎರಡೂ ಪಕ್ಷಗಳನ್ನು ನೋಡಿದ ಜಿಲ್ಲೆಯ ಮತದಾರರು ಈ ಬಾರಿ ಬಿಜೆಪಿಗೆ ಒಲವು ತೋರುತ್ತಾರೆ. ನರೇಂದ್ರ ಮೋದಿಯವರು ಸ್ವಾತಂತ್ರ್ಯದ ಇತಿಹಾಸದಲ್ಲಿ ಯಾರೂ ಮಾಡದಷ್ಟು ಕೆಲಸಗಳನ್ನು ಮಾಡಿದ್ದಾರೆ. ವಿದೇಶಿ ಸಂಬಂಧಗಳನ್ನು ಬಲಪಡಿಸಿದ್ದಾರೆ. ಅಂತರಾಷ್ಟ್ರೀಯ ಸಂಬಂಧಗಳನ್ನು ಬೆಸೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಲಗೊಂಡಿದ್ದು ಚುನಾವಣೆಗೆ ಸಿದ್ಧಗೊಂಡಿದೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರಜ್ವಲ್ ಸ್ಪರ್ಧಿಸಿದ್ರೆ ಮಾಜಿ ಸಚಿವ ಮಂಜು ಬಿಜೆಪಿಗೆ ಸೇರ್ಪಡೆ?

    ಪ್ರಜ್ವಲ್ ಸ್ಪರ್ಧಿಸಿದ್ರೆ ಮಾಜಿ ಸಚಿವ ಮಂಜು ಬಿಜೆಪಿಗೆ ಸೇರ್ಪಡೆ?

    ಬೆಂಗಳೂರು: ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಮಾಜಿ ಸಚಿವ ಎ ಮಂಜು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಈಗಾಗಲೇ ಪ್ರಜ್ವಲ್ ಸ್ಪರ್ಧೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸುತ್ತಿರುವ ಮಂಜು ಅವರು ಇಂದು ನೀಡಿದ ಪ್ರತಿಕ್ರಿಯೆಯಿಂದ ಈ ಪ್ರಶ್ನೆ ಎದ್ದಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೆ ಈ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇದೆ. ಹೀಗಾಗಿ ಅವರೇ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದೇನೆ. ಇಲ್ಲ ಅಂದ್ರೆ ರಾಜಕಾರಣವೇನು ನಿಂತ ನೀರಲ್ಲ. ಬಳಿಕ ಆ ಯೋಚನೆ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ನಮ್ಮ ಹಿತೈಷಿಗಳು, ಕಾರ್ಯಕರ್ತರ ಜೊತೆ ಮಾತನಾಡಿ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಮ್ಮ ಕಾರ್ಯಕರ್ತರು ಹೇಳಿದ್ರೆ ಅದು ಪಕ್ಕಾ. ಬಿಜೆಪಿ ನಾಯಕರ ಜೊತೆ ಮಾತಾಡಿದ್ದೇನೆ. ಹಾಸನದಲ್ಲಿ ದೋಸ್ತಿ ಅಭ್ಯರ್ಥಿ ಆಗಿ ದೇವೇಗೌಡರು ನಿಲ್ಲಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಪ್ರಜ್ವಲ್ ರೇವಣ್ಣ ನಿಂತ್ರೆ ನನ್ನ ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಒಂದು ಕಡೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಅಡ್ಡಿಯಾದ್ರೆ ಮತ್ತೊಂದೆಡೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಕಾಂಗ್ರೆಸ್ ಮಾಜಿ ಸಚಿವ ಎ ಮಂಜು ಅಡ್ಡಿಯಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv\

  • ಹಾಸನದಲ್ಲಿ ಸ್ಪರ್ಧೆ ಮಾಡುವುದು ದೇವೇಗೌಡರ ಹಕ್ಕು: ಪ್ರಜ್ವಲ್ ರೇವಣ್ಣ

    ಹಾಸನದಲ್ಲಿ ಸ್ಪರ್ಧೆ ಮಾಡುವುದು ದೇವೇಗೌಡರ ಹಕ್ಕು: ಪ್ರಜ್ವಲ್ ರೇವಣ್ಣ

    – ಎ. ಮಂಜು, ಪ್ರೀತಂಗೌಡ ಅವರಿಗೆ ಪ್ರಜ್ವಲ್ ತಿರುಗೇಟು

    ಹಾಸನ: ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸುವುದು ದೇವೇಗೌಡರ ಹಕ್ಕು. ಈ ಕ್ಷೇತ್ರದಿಂದ ದೇವೇಗೌಡರೇ ನಮ್ಮ ಅಭ್ಯರ್ಥಿಯಾದ್ರೆ 3.5 ಲಕ್ಷ ಅಲ್ಲ, 5 ಲಕ್ಷ ಮತಗಳ ಅಂತರಿಂದ ಅವರನ್ನು ಗೆಲ್ಲಿಸುವ ಜವಬ್ದಾರಿ ನನ್ನದು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಭರವಸೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾನು ಬದ್ಧ. ದೇವೇಗೌಡ ಸಾಹೇಬ್ರು ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ನಿಜ. ಹಾಸನದಲ್ಲಿ ಸ್ಪರ್ಧೆ ಮಾಡುವುದು ದೇವೇಗೌಡರ ಹಕ್ಕು. ಕೊನೆಗೂ ಅವರೇ ನಿಲ್ಲಲಿ ಎಂದು ನಾನು ಬಯಸುತ್ತೇನೆ ಎಂದರು.

    ಇದೇ ವೇಳೆ ಎ.ಮಂಜು ಅವರು ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ನಿಲ್ಲುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬೇಕಾದ್ರೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಹಾಕಿಕೊಳ್ಳಲಿ ನಮಗೇನು. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ಪಕ್ಷದ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

    ನರೇಂದ್ರ ಮೋದಿಯವರೇ ದೇವೇಗೌಡರ ಬಗ್ಗೆ ಮಾತನಾಡುವುದಕ್ಕೆ ಯೋಚನೆ ಮಾಡುತ್ತಾರೆ. ಅಂತದ್ದರಲ್ಲಿ ಮೊದಲನೇ ಬಾರಿ ಶಾಸಕನಾಗಿರುವ ಪ್ರೀತಂ ಗೌಡ ಅವರು ದೇವೇಗೌಡರ ವಿರುದ್ಧ ಮಾತನಾಡುವ ಮೊದಲು ಅವರ ವ್ಯಕ್ತಿತ್ವ ಏನು, ಘನತೆಯೇನು ಅಂತ ತಿಳಿಯಬೇಕು. ನಂತರ ಮಾತನಾಡಬೇಕು. ಅದು ಅವನ ಸಂಸ್ಕೃತಿಯನ್ನು ತೋರಿಸುತ್ತದೆ. ಆತ ಪೊಳ್ಳು ಪೊಳ್ಳಾಗಿ ಮಾತನಾಡುತ್ತಾನೆ ಅಂತ ನಾನು ಅವನ ಬಗ್ಗೆ ಮಾತನಾಡಿದರೆ ನಾನೂ ಪೊಳ್ಳೆದ್ದು ಹೋಗುತ್ತೆನೆ. ಈಗ ತಾನೇ ಆತ ಹೊಸದಾಗಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಜನ ಎಲ್ಲವನ್ನು ನೋಡಿರುತ್ತಾರೆ ಎಂದು ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ಹರಿಹಾಯ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv