Tag: ಎ ಮಂಜು

  • ಚುನಾವಣೆ ವೇಳೆ ಟಿಕೆಟ್‍ಗೆ 4-5 ಕೋಟಿ ಇಸ್ಕೋಳೋರಿಗೆ ಏನ್ ಅನ್ಬೇಕು: ಎ.ಮಂಜು

    ಚುನಾವಣೆ ವೇಳೆ ಟಿಕೆಟ್‍ಗೆ 4-5 ಕೋಟಿ ಇಸ್ಕೋಳೋರಿಗೆ ಏನ್ ಅನ್ಬೇಕು: ಎ.ಮಂಜು

    ಹಾಸನ: ರಾಮಮಂದಿರಕ್ಕೆ ಹಣ ಕೇಳುವವರು ಗೂಂಡಾಗಳು ಎನ್ನುವವರು ಚುನಾವಣೆ ಬಂದಾಗ ಒಂದು ಟಿಕೆಟ್‍ಗೆ 4-5 ಕೋಟಿ ಇಸಿಕೊಳ್ಳುವವರಿಗೆ ಏನೆಂದು ಹೇಳಬೇಕು ಎಂದು ಮಾಜಿ ಸಚಿವ ಎ.ಮಂಜು, ಹೆಚ್ ಡಿ ಕುಮಾರಸ್ವಾಮಿಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಭಾರತ ಇರುವುದೇ ಸಂಪ್ರದಾಯ ಮತ್ತು ಸಂಸ್ಕೃತಿಯ ಮೇಲೆ. ರಾಮಮಂದಿರ ಕಟ್ಟುತ್ತಿರುವುದು ಒಂದು ಮಹತ್ತರ ಕಾರ್ಯ. ಇಂತಹ ಕಾರ್ಯಕ್ಕೆ ದೇಶದ ಜನರು ಹತ್ತು ರೂಪಾಯಿಂದ ತಮ್ಮ ಕೈಲಾದಷ್ಟು ಹಣ ಸಂದಾಯ ಮಾಡಿದ್ದಾರೆ. ಹಣ ಸಂಗ್ರಹಣೆ ಮಾಡುವವರನ್ನು ಪುಂಡ ಪೊಕರಿಗಳು ಎನ್ನುವುದಾದರೇ ಚುನಾವಣೆ ಸಂದರ್ಭದಲ್ಲಿ ಒಂದು ಟಿಕೆಟಿಗೆ ಕೋಟಿ ಕೋಟಿ ಇಸ್ಕೋತರಲ್ಲ ಅವರಿಗೆ ಏನು ಹೇಳಬೇಕು ಎಂದು ಹೇಳಿದ್ದಾರೆ.

    ನಾವು ದೇಶಕ್ಕಾಗಿ ಸಂಸ್ಕೃತಿ ಸಂಪ್ರದಾಯ ಮತ್ತು ದೇವರ ಕಾರ್ಯಕ್ಕಾಗಿ ಹಣ ಸಂಗ್ರಹಣೆ ಮಾಡಿದ್ದೇವೆ. ಅತೀ ಹೆಚ್ಚು ದೇಣಿಗೆ ಇಸ್ಕೊಂಡು ಬಿ-ಫಾರಂ ನೀಡುವ ಪಕ್ಷವಲ್ಲ ಎಂದು ಗೂಂಡಾ ಎಂದ ವಿಚಾರಕ್ಕೆ ಕಿಡಿಕಾರಿದ್ದಾರೆ.

  • ಮತ್ತೆ ನಾನೇ ಹಾಸನ ಸಂಸದನಾಗುವ ಭರವಸೆ ಇದೆ: ಎ.ಮಂಜು

    ಮತ್ತೆ ನಾನೇ ಹಾಸನ ಸಂಸದನಾಗುವ ಭರವಸೆ ಇದೆ: ಎ.ಮಂಜು

    ಹಾಸನ: 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ವರದಿ ನೀಡುವಂತೆ ಚುನಾವಣಾ ಆಯೋಗ ಹಾಸನ ಜಿಲ್ಲಾಧಿಕಾರಿಗೆ ನೋಟೀಸ್ ನೀಡಿದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಎ.ಮಂಜು ಅವರು, ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ನೀಡುವಂತೆ ಇದೀಗ ಚುನಾವಣಾ ಆಯೋಗದಿಂದ ಹಾಸನ ಜಿಲ್ಲಾಧಿಕಾರಿಗೆ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಯವರು ಸರಿಯಾಗಿ ವರದಿ ನೀಡುವಂತೆ ಮಾಜಿ ಸಚಿವ ಎ.ಮಂಜು ಮನವಿ ಮಾಡಿದ್ದಾರೆ.

    ಮತ್ತೆ ನಾನೇ ಸಂಸದನಾಗುತ್ತೇನೆ ಎಂದು ಈಗಲೂ ನನಗೆ ಭರವಸೆ ಇದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಓರ್ವ ಶಾಸಕರು ಇದೇ ರೀತಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದು, ಮಹಾರಾಷ್ಟ್ರ ಚುನಾವಣಾ ಆಯೋಗವೇ ಕ್ರಮ ಕೈಗೊಂಡು ಆ ಶಾಸಕರ ಸದಸ್ಯತ್ವ ವಜಾಗೊಳಿಸಿದೆ. ಅದೇ ರೀತಿ ಈ ಪ್ರಕರಣದಲ್ಲಿ ನನಗೆ ನ್ಯಾಯ ಸಿಗಲಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ನಾನು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದ್ದೇನೆ. ಅಲ್ಲಿ ನಾನು ಗೆಲ್ಲುವ ಭರವಸೆ ಇದೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಮಾಹಿತಿ ಆರೋಪ- ವಿಚಾರಣೆಗೆ ಸುಪ್ರೀಂ ಸಮ್ಮತಿ

    ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಮಾಹಿತಿ ಆರೋಪ- ವಿಚಾರಣೆಗೆ ಸುಪ್ರೀಂ ಸಮ್ಮತಿ

    ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವುದಾಗಿ ಆರೋಪಿಸಿ ಮಾಜಿ ಸಚಿವ ಎ.ಮಂಜು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.

    ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಪ್ರಜ್ವಲ್ ರೇವಣ್ಣಗೆ ನೋಟಿಸ್ ಜಾರಿ ಮಾಡಿದೆ.

    ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿದ್ದಾರೆ. ಹಲವು ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಅವರ ಜೊತೆಗಿನ ಸಾಲದ ವ್ಯವಹಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಎ.ಮಂಜು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

    ಸರ್ಕಾರಿ ಆಸ್ತಿಯನ್ನು ಅವರ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಸುಮಾರು 1.88 ಕೋಟಿ ರೂ. ಹಣವನ್ನು ಸರ್ಕಾರ ಅವರ ಖಾತೆಗೆ ವರ್ಗಾವಣೆ ಮಾಡಿದೆ. ಇದ್ಯಾವುದೂ ಚುನಾವಣಾ ಅಫಿಡವಿಟ್‍ನಲ್ಲಿ ನಮೂದಾಗಿಲ್ಲ. ತನಗೆ ಆದಾಯವೇ ಇಲ್ಲ ಎನ್ನುವ ಪ್ರಜ್ವಲ್ ರೇವಣ್ಣ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

    ಈ ಹಿಂದೆ ಎ.ಮಂಜು ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಸೂಕ್ತ ಸಮಯದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನಲೆ ಅರ್ಜಿಯನ್ನು ವಜಾ ಮಾಡಲಾಗಿತ್ತು. ಅರ್ಜಿ ವಜಾಗೊಳಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿದ್ದು ಸುಪ್ರೀಂಕೋರ್ಟ್ ಸದ್ಯ ವಿಚಾರಣೆಗೆ ಒಪ್ಪಿದೆ.

  • ರೇವಣ್ಣನಿಂದಾಗಿ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗ್ತಿಲ್ಲ – ಎ.ಮಂಜು

    ರೇವಣ್ಣನಿಂದಾಗಿ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗ್ತಿಲ್ಲ – ಎ.ಮಂಜು

    ಹಾಸನ: ದಲಿತರು ಬಂದರೆ ಮತ್ತೆ ಹೋಗಿ ಸ್ನಾನ ಮಾಡುವ ನೀಚ ರಾಜಕಾರಣಿ ರೇವಣ್ಣನಿಂದಾಗಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಎ.ಮಂಜು ಗಂಭೀರ ಆರೋಪ ಮಾಡಿದ್ದಾರೆ.

    ಹಾಸನದ ಶಾಂತಿಗ್ರಾಮದಲ್ಲಿ ನೂತನ ಮಂಡಲ ಅಧ್ಯಕ್ಷ ಮೋಹನ್‍ಕುಮಾರ್ ಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಸಚಿವ ಎ.ಮಂಜು, ಅವರು ಪೊಲೀಸರ ಮೂಲಕ ಕೇಸ್ ಹಾಕಿಸುತ್ತೇನೆ ಎಂದು ಹೆದರಿಸಿ ಪಕ್ಷ ಮತ್ತು ಮನೆಯನ್ನು ಸಂಘಟನೆ ಮಾಡಿಕೊಂಡಿದ್ದಾರೆ. ಅವರು ಪ್ರೀತಿಯಿಂದ ಜಿಲ್ಲೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ ಎಂದರು.

    ಯಾರಾದರೂ ಸತ್ತರೆ ರೇವಣ್ಣ ತನ್ನ ಸ್ವಂತ ಕಾರಲ್ಲಿ ಹೋಗಲ್ಲ. ಏನೋ ಮಂತ್ರ ಮಾಡಿಸಿಕೊಂಡು ಬಂದಿದ್ದಾರೆ ಅಂತ ಶರ್ಟ್ ಗುಂಡಿ ಬಿಚ್ಚಿಕೊಂಡು ಏಲಕ್ಕಿ ಹಾರ ಎಲ್ಲ ತೋರಿಸ್ತಾನೆ. ಅವರು ಮಾಡಿರುವ ಕೆಲಸದಿಂದ ಹಿಂದೆ ಮುಂದೆ ಪೊಲೀಸ್ ಇಲ್ಲದೇ ಅವರಿಗೆ ಊರಿಗೆ ಬರಲು ಆಗಲ್ಲ. ಒಂದು ದಿನ ಜನ ಅವರಿಗೆ ಪಾಠ ಕಲಿಸುತ್ತಾರೆ. ರೇವಣ್ಣನಿಂದ ಈ ಭಾಗದಲ್ಲಿ ಯುವಕರಿಗೆ ಹೆಣ್ಣು ಸಿಗದಂತಾಗಿದೆ. ಅವರ ಜೊತೆ ಸೇರಿ ಆ ಕೇಸ್, ಈ ಕೇಸ್ ಅಂತಾ ಆಗಿ ಯಾರೂ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ ಜನರಿಗೆ ಒಳ್ಳೆಯದಾಗಲು ನಮ್ಮ ಜೊತೆ ಬನ್ನಿ ಎಂದು ಎ.ಮಂಜು ತಿಳಿಸಿದರು.

    ಎ.ಮಂಜು ಮಾತನ್ನು ಬೆಂಬಲಿಸಿದ ನೂತನ ಮಂಡಲ ಅಧ್ಯಕ್ಷ ಮೋಹನ್ ಕುಮಾರ್, ರೇವಣ್ಣ ಅವರಿಂದಾಗಿ ಯುವಕರ ಮೇಲೆ ಕೇಸ್ ಬೀಳುತ್ತಿರುವುದು ಹೆಚ್ಚಾಗಿದೆ. ಯುವರಿಗೆ ಹೆಣ್ಣು ಸಿಗದಿರುವುದು ಕೂಡ ನಿಜ ಎಂದು ಹೇಳಿದರು.

  • ಹಾಸನದಲ್ಲಿ ಈಗ ಇರೋದು ದೇವೇಗೌಡ್ರ ಕುಟುಂಬದ ವಿರುದ್ಧದ ರಾಜಕಾರಣ: ಎ.ಮಂಜು

    ಹಾಸನದಲ್ಲಿ ಈಗ ಇರೋದು ದೇವೇಗೌಡ್ರ ಕುಟುಂಬದ ವಿರುದ್ಧದ ರಾಜಕಾರಣ: ಎ.ಮಂಜು

    ಹಾಸನ: ಎಚ್‍ಡಿ ಕುಮಾರಸ್ವಾಮಿ, ರೇವಣ್ಣ ತಮ್ಮ ಮಕ್ಕಳಿಗಾಗಿ ದೇವೇಗೌಡರನ್ನು ತೆಗೆದರು. ಆದರೆ ಲಾಭ ಪಡೆದವರು ರೇವಣ್ಣ ಮತ್ತು ಮಗ ಮಾತ್ರ ಎಂದು ಮಾಜಿ ಸಚಿವ ಎ.ಮಂಜು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್, ದಳ, ಬಿಜೆಪಿ ಅಂತ ರಾಜಕಾರಣ ಇಲ್ಲ. ಇಲ್ಲಿ ಇರೋದು ದೇವೇಗೌಡರ ಕುಟುಂಬದ ವಿರುದ್ಧದ ರಾಜಕಾರಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಉಳಿಯಬೇಕು ಅಂದ್ರೆ ನಾವು ಒಟ್ಟಿಗೆ ಸೇರಿ ಅವರನ್ನು ಸದೆಬಡಿಯಬೇಕು ಎಂದು ತಿಳಿಸಿದ್ರು.

    ಈಗ ನಮ್ಮ ಸರ್ಕಾರ ಇದೆ. ಜನಪರವಾದ ಕೆಲಸ ಮಾಡಲು ಅವಕಾಶ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ 4 ರಿಂದ 5 ಕ್ಷೇತ್ರ ಗೆಲ್ಲುತ್ತೇವೆ. ನಾವು ದೇವೇಗೌಡರ ಕುಟುಂಬದ ವಿರೋಧಿಗಳು. ಇಡೀ ಜಿಲ್ಲೆಯ 70 ರಷ್ಟು ಜನ ದೇವೇಗೌಡರ ಕುಟುಂಬದ ವಿರೋಧ ಇದ್ದಾರೆ. ದೇವೇಗೌಡರು ಕೊನೆ ಸಾರಿ ಪಾರ್ಲಿಮೆಂಟ್‍ನಲ್ಲಿ ಗೆಲ್ಲಲಿ ಎಂದು ಆಸೆಪಟ್ಟೆ. ಆದರೆ ಮಕ್ಕಳು ಮೊಮ್ಮಕ್ಕಳನ್ನ ರಾಜಕೀಯವಾಗಿ ಉಳಿಸಲು ಹೊರಟರು. ದೇವೇಗೌಡರು ಇದುವರೆಗೂ ಪಕ್ಷ ಸಂಘಟನೆ ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ರಾಜಕಾರಣ ಮಾಡುತ್ತೇನೆ ಎಂದು ಹೇಳಿಲ್ಲ ಎ.ಮಂಜು ಕಿಡಿಕಾರಿದ್ದಾರೆ.

    ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರೇವಣ್ಣ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರೇವಣ್ಣ ಆರೋಪ ಮಾಡೋದ್ರಲ್ಲಿ ನಿಸ್ಸೀಮರು. ಇವರಿಬ್ಬರು ಅಣ್ಣ-ತಮ್ಮಂದಿರು ಸೇರಿಕೊಂಡು ಕ್ಯಾಬಿನೆಟ್, ಸರ್ಕಾರದ ಆದೇಶ ಇಲ್ಲದೇ ಇರೋದನ್ನು ಸ್ಯಾಂಕ್ಷನ್ ಮಾಡಿದ್ದಾರೆ. ಈ ರೀತಿಯ ಕಾನೂನು ಅವರು ಅಣ್ಣ, ತಮ್ಮಂದಿರು ಇದ್ದಾಗ ಮಾತ್ರ ನಡೆಯುತ್ತೆ. ಯಡಿಯೂರಪ್ಪ ರಾಜ್ಯದ ಬಗ್ಗೆ ಚಿಂತೆ ಇರುವ ಅಪರೂಪದ ಮುಖ್ಯಮಂತ್ರಿ. ಯಡಿಯೂರಪ್ಪ ಹೋರಾಟದಿಂದ ಬಂದವರು. ಆದರೆ ಇವರು ಅಪ್ಪನ ಹೆಸರು, ಕೃಪಾಪೋಷಿತದಿಂದ ಬಂದವರು ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್

    ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್

    ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಕೆ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಸಂಸದ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿದೆ.

    ಮಾಜಿ ಸಚಿವ ಎ. ಮಂಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ನೋಟಿಸ್ ನೀಡಿದ್ದು, ನಾಲ್ಕು ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.

    ಈ ಹಿಂದೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ಎ.ಮಂಜು, ಚುನಾವಣಾ ಆಯೋಗಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ಆರೋಪಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಮೈಕಲ್ ಡಿ ಕುನ್ಹಾ ಪೀಠ ಪ್ರಮಾಣ ಪತ್ರ ಸಲ್ಲಿಸಲು ಎ.ಮಂಜು ಗೆ ಸೂಚಿಸಿತ್ತು. ಆದರೆ ಪ್ರಮಾಣ ಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಈ ಅರ್ಜಿಯನ್ನು ವಜಾ ಮಾಡಲಾಗಿತ್ತು.

    ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಎ.ಮಂಜು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಎ.ಮಂಜು ಪರ ವಕೀಲ ಅಶೋಕ್ ಬನ್ನಿದಿನ್ನಿ ವಾದ ಮಂಡಿಸಿದರು. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ – ಎ ಮಂಜು ಸ್ಫೋಟಕ ಆರೋಪ

  • ಎಚ್‍ಡಿಕೆ ಓರ್ವ ಅಪಕ್ವ ರಾಜಕಾರಣಿ: ಎ. ಮಂಜು ವಾಗ್ದಾಳಿ

    ಎಚ್‍ಡಿಕೆ ಓರ್ವ ಅಪಕ್ವ ರಾಜಕಾರಣಿ: ಎ. ಮಂಜು ವಾಗ್ದಾಳಿ

    ಮೈಸೂರು: ಭಾರತದ ಕಾನೂನಿಗೆ ಗೌರವ ಕೊಡದ ಮೇಲೆ ಅವರೆಲ್ಲ ಯಾಕೆ ಭಾರತದಲ್ಲಿ ಇರಬೇಕು ಎಂದು ಮಾಜಿ ಸಚಿವ ಎ.ಮಂಜು ಪೌರತ್ವ ಕಾಯ್ದೆ ತಿದ್ದುಪಡಿ ಪ್ರತಿಭಟನೆಯಲ್ಲಿ ಸೆಕ್ಷನ್ 144 ಅನ್ನು ಉಲ್ಲಂಘಿಸಿದವರನ್ನು ಪ್ರಶ್ನಿಸಿದರು.

    ಮೈಸೂರಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್ಲಿಯತನಕ ನಾವು ಭಾರತದ ಕಾನೂನನ್ನು ಗೌರವಿಸುದಿಲ್ಲವೋ ಅಲ್ಲಿಯವರೆಗೆ ನಾವು ಭಾರತೀಯರು ಅನ್ನೋದಕ್ಕೆ ಅನ್‍ಫಿಟ್. ಮಂಗಳೂರು ಗಲಭೆ ಪೂರ್ವ ನಿಯೋಜಿತ ಘಟನೆ. ಇದರ ನೈತಿಕ ಹೊಣೆಯನ್ನ ವಿರೋಧ ಪಕ್ಷಗಳೇ ಹೊರಬೇಕು ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

    ವಿರೋಧ ಪಕ್ಷದವರು ಜನರನ್ನ ಪ್ರಚೋದನೆ ಮಾಡಿ ಗಲಭೆಗೆ ಕಾರಣರಾಗಿದ್ದಾರೆ. ರಮೇಶ್ ಕುಮಾರ್‍ರಿಂದ ಇದನ್ನ ನಾನು ನೀರಿಕ್ಷೆ ಮಾಡಿರಲಿಲ್ಲ. ವಿರೋಧ ಪಕ್ಷಗಳು ಎಲ್ಲವನ್ನು ವಿರೋಧ ಮಾಡ್ತಿದ್ದಾರೆ. ಮಾಜಿ ಸಿಎಂಗಳು ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಪೊಲೀಸರು ಮೊದಲು ಗುಂಡು ಹೊಡೆದಿಲ್ಲ. ಅವರಿಗೆ ಕಲ್ಲು ಬಿದ್ದ ಮೇಲೆಯೇ ಗುಂಡು ಹೊಡೆದಿದ್ದಾರೆ. ಕುಮಾರಸ್ವಾಮಿ ಓರ್ವ ಅಪಕ್ವ ರಾಜಕಾರಣಿ. ಅನುಭವ ಇಲ್ಲದೆ ಮುಖ್ಯಮಂತ್ರಿಯಾದ್ರೆ ಹೀಗೆ ಮಾತನಾಡೋದು ಎಂದು ಟೀಕಿಸಿದರು.

    ಇವರೆಲ್ಲ ಬಿಜೆಪಿಯನ್ನು ವಿರೋಧ ಮಾಡುವ ಸಲುವಾಗಿ ಕಾಯ್ದೆ ವಿರೋಧಿಸುತ್ತಿದ್ದಾರೆ. ಕಾಯ್ದೆ ಬಗ್ಗೆ ಸುಪ್ರೀಂ ತೀರ್ಪು ಕೊಟ್ಟ ಮೇಲೆ ಚರ್ಚೆ ಮಾಡಲಿ. ಅದಕ್ಕೂ ಮುಂಚೆ ಯಾಕೆ ಪ್ರತಿಭಟನೆ ಮಾಡಬೇಕು ಎಂದು ಪ್ರಶ್ನಿಸಿದರು.

  • ಬಿಜೆಪಿಯ ಎ.ಮಂಜು ಹುಟ್ಟು ಹಬ್ಬದ ಬ್ಯಾನರ್‌ನಲ್ಲಿ ಸಿದ್ದರಾಮಯ್ಯ ಭಾವಚಿತ್ರ

    ಬಿಜೆಪಿಯ ಎ.ಮಂಜು ಹುಟ್ಟು ಹಬ್ಬದ ಬ್ಯಾನರ್‌ನಲ್ಲಿ ಸಿದ್ದರಾಮಯ್ಯ ಭಾವಚಿತ್ರ

    – ಮತ್ತೆ ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವರು?

    ಹಾಸನ: ಹಾಸನ ಲೋಕಸಭಾ ಚುನಾವಣೆಯ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹುಟ್ಟು ಹಬ್ಬದ ಬ್ಯಾನರ್‌ನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭಾವಚಿತ್ರ ಹಾಕಿ ಶುಭಕೋರಲಾಗಿದೆ.

    ನವೆಂಬರ್ 1ರಂದು ಎ.ಮಂಜು ಹುಟ್ಟುಹಬ್ಬ. ಹೀಗಾಗಿ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಅಭಿಮಾನಿಗಳು ಕರ್ನಾಟಕ ರಾಜ್ಯೋತ್ಸವ ಹಾಗೂ ಎ.ಮಂಜು ಅವರ ಹುಟ್ಟು ಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಮಾಡಿಸಿ ಗ್ರಾಮದಲ್ಲಿ ಹಾಕಿದ್ದಾರೆ. ಈ ಬ್ಯಾನರ್ ಭಾರೀ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‍ನಿಂದ ಹೊರ ಬಂದಿದ್ದ ಎ.ಮಂಜು, ಹಾಸನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಈಗ ಅವರ ಹುಟ್ಟು ಹಬ್ಬದ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಾಕಲಾಗಿದೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎ.ಮಂಜು ಮಂತ್ರಿಯಾಗಿದ್ದರು. ಜೊತೆಗೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಿದ್ದಕ್ಕೆ ಎ.ಮಂಜು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಲೋಕಸಭಾ ಚುನಾವಣಾ ಸ್ಪರ್ಧೆ ಎದುರಿಸಿ, ಸೋತಿದ್ದರು.

    ಎ.ಮಂಜು ಬಿಜೆಪಿಯಿಂದ ಹೊರ ಬಂದು ಮತ್ತೆ ಕಾಂಗ್ರೆಸ್ ಮನೆ ಸೇರುತ್ತಾರಾ? ಹಾಸನ ಜಿಲ್ಲೆಯಲ್ಲಿ ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಬಿಜೆಪಿಗೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.

  • ದಳದಿಂದ 12 ರಿಂದ 15 ಶಾಸಕರು ಬಿಜೆಪಿಗೆ ಜಂಪ್ – ಎ.ಮಂಜು ಬಾಂಬ್

    ದಳದಿಂದ 12 ರಿಂದ 15 ಶಾಸಕರು ಬಿಜೆಪಿಗೆ ಜಂಪ್ – ಎ.ಮಂಜು ಬಾಂಬ್

    ಹಾಸನ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸಖ್ಯ ಬೆಳೆಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಬಾಂಬ್ ಸಿಡಿಸಿದ್ದಾರೆ.

    ಹಾಸನಾಂಬೆಯ ದರ್ಶನದ ನಂತರ ಈ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದಳದಿಂದ 12 ರಿಂದ 15 ಜನ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಹೀಗಾಗಿ ಕುಮಾರಸ್ವಾಮಿಯವರೇ ಬಿಜೆಪಿ ಜೊತೆ ಸಖ್ಯ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿಯವರು ಈ ಹಿಂದೆ ಹೇಳಿದಂತೆ ರಾಜಕೀಯ ನಿವೃತ್ತಿ ತೆಗೆದುಕೊಂಡರೆ ಒಳ್ಳೆಯದು. ನಿವೃತ್ತಿಯಾಗಲು ಇದು ಸೂಕ್ತ ಕಾಲ. ಒಂದು ತಿಂಗಳ ಹಿಂದೆ ಸರ್ದಾರ್ ವಲ್ಲಭಭಾಯ್ ಪಟೇಲ್ ಜೊತೆ ನಿಂತು ಮಾಜಿ ಪ್ರಧಾನಿ ದೇವೇಗೌಡರು ಫೋಟೋಗೆ ಪೋಸ್ ನೋಡಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಬಿಜೆಪಿ ನಾಯಕರು ಎಚ್ಚರಿಕೆಯಿಂದ ಇರಬೇಕು ಎಂದರು.

    ಯಾವುದೇ ಕಾರಣಕ್ಕೂ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಡಿ ಎಂದು ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಸಿದ್ದರಾಮಯ್ಯನವರಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಜೆಡಿಎಸ್ ಕುರಿತು ಅವರಿಗೆ ಈಗ ಅರಿವಾಗಿದೆ. ನಾನು ಹೇಳಿದಂತೆಯೇ ಮೈತ್ರಿ ಹೆಚ್ಚು ದಿನ ಉಳಿಯಲಿಲ್ಲ ಎಂದರು.

    ನಮ್ಮ ಬಿಜೆಪಿಯವರು ಹುಷಾರಾಗಿರಬೇಕು. ಅಧಿಕಾರಕ್ಕಾಗಿ ಜೆಡಿಎಸ್‍ನವರು ಯಾರ ಜೊತೆ ಬೇಕಾದರೂ ಸಖ್ಯ ಬೆಳೆಸುತ್ತಾರೆ. ಯಾವುದಕ್ಕೂ ಎಚ್ಚರದಿಂದಿರುವುದು ಒಳ್ಳೆಯದು ಎಂದು ತಿಳಿಸಿದರು.

  • ಅನರ್ಹ ಶಾಸಕ ಎಚ್.ವಿಶ್ವನಾಥ್‍ರನ್ನ ಭೇಟಿ ಮಾಡಿದ ಮಾಜಿ ಸಚಿವ ಎ.ಮಂಜು

    ಅನರ್ಹ ಶಾಸಕ ಎಚ್.ವಿಶ್ವನಾಥ್‍ರನ್ನ ಭೇಟಿ ಮಾಡಿದ ಮಾಜಿ ಸಚಿವ ಎ.ಮಂಜು

    ಮೈಸೂರು: ಮಾಜಿ ಸಚಿವ ಎ. ಮಂಜು ಅವರು ಇಂದು ಮೈಸೂರಿನಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ರನ್ನ ಭೇಟಿ ಮಾಡಿದ್ದು, ಇಬ್ಬರ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

    ಮೈಸೂರಿನ ಜಲದರ್ಶಿನಿ ಅಥಿತಿ ಗೃಹದಲ್ಲಿ ಭೇಟಿಯಾದ ಉಭಯ ನಾಯಕರು ಕೆಲ ಸಮಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮೈಮುಲ್‍ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾವಿನಹಳ್ಳಿ ಸಿದ್ದೇಗೌಡ ಅವರು ಕೂಡ ಭೇಟಿ ನೀಡಿ ವಿಶ್ವನಾಥ್ ಅವರಿಗೆ ವಂದನೆ ಸಲ್ಲಿಸಿದರು. ಮಾಜಿ ಸಚಿವ ಜಿಟಿಡಿ ಪರಮಾಪ್ತ ಮಾವಿನಹಳ್ಳಿ ಸಿದ್ದೇಗೌಡ ಅವರು ಇತ್ತೀಚೆಗಷ್ಟೇ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

    ಈ ಸಂದರ್ಭದಲ್ಲಿ ಎ. ಮಂಜು ಅವರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಅವರು ಕೂಡ ನಮ್ಮ ಪಕ್ಷದ ಲೀಡರ್ ಅಲ್ವಾ ಎಂದು ನಕ್ಕರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ಫೋನ್ ಕದ್ದಾಲಿಕೆಯನ್ನು ಸಿಎಂ ಅವರ ಗಮನಕ್ಕೆ ತರದಂತೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸಿಎಂ ಅವರ ಅಡಿಯಲ್ಲೇ ಗುಪ್ತಚರ ಇಲಾಖೆ ಬರುತ್ತದೆ. ಗೃಹ ಸಚಿವರ ಕೈಯಲ್ಲಿ ಮಾತ್ರ ಪೊಲೀಸ್ ಇಲಾಖೆ ಇರುತ್ತದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.