Tag: ಎ ಮಂಜು

  • ಜೆಡಿಎಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಕೊಂಡ ಮಾಜಿ ಸಚಿವ ಎ.ಮಂಜು

    ಜೆಡಿಎಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಕೊಂಡ ಮಾಜಿ ಸಚಿವ ಎ.ಮಂಜು

    ಹಾಸನ: ಚುನಾವಣೆ (Election) ಸಮೀಪಿಸುತ್ತಿದ್ದು ಚುನಾವಣಾ ಕಣ ರಂಗೇರುತ್ತಿದೆ. ಅರಕಲಗೂಡು (Arakalagudu) ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿ ನಾನೇ ಎಂದು ಮಾಜಿ ಸಚಿವ ಎ. ಮಂಜು (A Manju) ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ.

    ಸ್ವಗ್ರಾಮ ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದಲ್ಲಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿದ ಎ.ಮಂಜು, ಎಲ್ಲರ ಸಮ್ಮುಖದಲ್ಲಿ ನಾನು ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದರು.‌ ನಂತರ ನೆರೆದಿದ್ದವರಿಂದ ಆಣೆ‌ ಪ್ರಮಾಣ ಮಾಡಿಸಿದರು.

    ಇಂದಿನಿಂದ ಜೆಡಿಎಸ್‌ಗೆ ಸೇರಿ ಮಂಜು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು. ಇನ್ಮೇಲೆ ನಾವೆಲ್ಲರೂ ಜೆಡಿಎಸ್ ಎಂದು ಕೈಮುಂದೆ ಚಾಚಿ ಆಣೆ ಪ್ರಮಾಣ ಮಾಡಿದರು.

    ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಎ. ಮಂಜುವಿಗೆ ಜೈಕಾರ ಕೂಗಿದರು. ಇತ್ತೀಚೆಗಷ್ಟೇ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಎ.ಮಂಜುಗೆ ಟಿಕೆಟ್ ಕೊಡುತ್ತೇವೆ ಎಂದು ಹೆಚ್‌ಡಿಕೆ ಹೇಳಿದ್ದರು. ಇದನ್ನೂ ಓದಿ: ದೇವರನ್ನು ಹೊತ್ತು ಕುಣಿದು ವಿಶೇಷ ಸೇವೆ ಸಲ್ಲಿಸಿದ ಬಿಜೆಪಿ ಶಾಸಕ

    ಮಾ.11/12ರಂದು ಜೆಡಿಎಸ್‌ಗೆ ಅಧಿಕೃತ ಸೇರ್ಪಡೆ: ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಎ. ಮಂಜು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಹೆಚ್‌ಡಿಡಿ ನಿವಾಸದಲ್ಲಿ ಭೇಟಿ ಮಾಡಿ ಅಂತಿಮ ಹಂತದ ಮಾತುಕತೆ ನಡೆಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಉಪಸ್ಥಿತರಿದ್ದರು. ಮಾ.11 ಅಥವಾ ಮಾ.12ರಂದು ಬೆಂಗಳೂರಿನಲ್ಲಿ ದೇವೇಗೌಡರ ಸಮ್ಮುಖದಲ್ಲಿ ಎ. ಮಂಜು ಜೆಡಿಎಸ್ ಪಕ್ಷ ಸೇರಲಿದ್ದಾರೆ. ಮಾ.16 ರಂದು ಅರಕಲಗೂಡಿನಲ್ಲಿ ಪಂಚರತ್ನ ಯಾತ್ರೆ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಬೇಕು- ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

  • ಅಪ್ಪ ಅಲ್ಲಿ, ಮಗ ಇಲ್ಲಿ.. ಟಿಕೆಟ್ ಕೊಡೋದು ಹೇಗೆ? ‘ಕೈ’ ನಾಯಕರಿಗೆ ಹೊಸ ತಲೆಬಿಸಿ

    ಅಪ್ಪ ಅಲ್ಲಿ, ಮಗ ಇಲ್ಲಿ.. ಟಿಕೆಟ್ ಕೊಡೋದು ಹೇಗೆ? ‘ಕೈ’ ನಾಯಕರಿಗೆ ಹೊಸ ತಲೆಬಿಸಿ

    ಬೆಂಗಳೂರು: ಅಪ್ಪ ಅಲ್ಲಿ, ಮಗ ಇಲ್ಲಿ. ಬಿಜೆಪಿಯಿಂದ (BJP) ಕಾಂಗ್ರೆಸ್‌ಗೆ (Congress) ಬರಬೇಕಿದ್ದ ಅಪ್ಪ ಜೆಡಿಎಸ್‌ಗೆ (JDS) ಹೊರಟು ನಿಂತಿದ್ದಾರೆ. ಅಪ್ಪ ಜೆಡಿಎಸ್‌ಗೆ ಹೋದ ಮೇಲೆ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡೋದು ಹೇಗೆ? ಇದು ರಾಜ್ಯ ʼಕೈʼ ನಾಯಕರ ಹೊಸ ತಲೆಬಿಸಿ.

    ಅಪ್ಪ ಕಾಂಗ್ರೆಸ್ ಬಿಟ್ಟರೂ, ನಾನು ಕಾಂಗ್ರೆಸ್‌ ಅಂತಲೇ ಉಳಿದಿದ್ದ ಮಗನಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಫಿಕ್ಸ್ ಆಗಿತ್ತು. ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‌ಗೆ ಬರುವ ಬಗ್ಗೆ ಮಾತನಾಡಿ ಪುತ್ರನಿಗೆ ಮಡಿಕೇರಿ ಕಾಂಗ್ರೆಸ್ ಟಿಕೆಟ್ ಖಚಿತ ಪಡಿಸಿದ್ದರು. ಆದರೆ ಈಗ ಎ.ಮಂಜು (A.Manju) ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಬಿಎಸ್‌ವೈಗೆ ಬಹುಪರಾಕ್, ವಿಜಯೇಂದ್ರಗೆ ಸಮಾವೇಶಗಳ ಹೊಣೆ – ಬಿಜೆಪಿ ಎಚ್ಚರಿಕೆ ನಡೆ

    ಅಪ್ಪ ಜೆಡಿಎಸ್‌ಗೆ ಹೋದರೇನು. ನಾನಗೆ ಕಾಂಗ್ರೆಸ್‌ ಟಿಕೆಟ್ ಕೊಡಿ ಎಂದು ಪುತ್ರ ಮಂತರ್ ಗೌಡ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಎ.ಮಂಜು ಜೆಡಿಎಸ್ ಹೋಗಲು ಸಿದ್ಧವಾದರೂ ಮಗನದು ಮಾತ್ರ ಕಾಂಗ್ರೆಸ್ ಟಿಕೆಟ್ ಡಿಮ್ಯಾಂಡ್ ಎನ್ನಲಾಗಿದೆ.

    ಎ.ಮಂಜು ಪುತ್ರ ಮಂಥರ್ ಗೌಡ ನಡೆ ಕೈ ನಾಯಕರಿಗೆ ಹೊಸ ಪಜೀತಿ ತಂದಿಟ್ಟಿದೆ ಎನ್ನಲಾಗಿದೆ. ಬಹುತೇಕ ಮಡಿಕೇರಿ (Madikeri) ಟಿಕೆಟ್‌ಗೆ ಮಂಥರ್ ಗೌಡರ ಹೆಸರನ್ನ ಕೈ ನಾಯಕರು ಅಂತಿಮ ಮಾಡಿದ್ದರು ಎನ್ನಲಾಗುತ್ತಿದೆ. ಅಲ್ಲಿಂದಲೇ ಮಂಥರ್ ಗೌಡಗೆ ಈ ಹಿಂದೆ ಕಾಂಗ್ರೆಸ್‌ನಿಂದ ಪರಿಷತ್ ಟಿಕೆಟ್ ನೀಡಲಾಗಿತ್ತು. ಎ.ಮಂಜು ಪುತ್ರ ಎಂಬ ಮಾನದಂಡದಲ್ಲೆ ಎಂಎಲ್‌ಸಿ ಟಿಕೆಟ್ ನೀಡಲಾಗಿತ್ತು. ಈಗ ವಿಧಾನಸಭೆಯ ಟಿಕೆಟ್ ಕೊಡುವ ಸಿದ್ದತೆಯಲ್ಲಿದ್ದಾಗಲೆ ಅಪ್ಪ ಜೆಡಿಎಸ್ ಸೇರಿ ತೆನೆ ಹೊರಲು ಮುಂದಾಗಿದ್ದಾರೆ. ಆದರೆ ಮಗ ಮಾತ್ರ ಮಡಿಕೇರಿ ಟಿಕೆಟ್ ಡಿಮ್ಯಾಂಡ್ ಮಾಡಿರೋದು ಕೈ ನಾಯಕರೆ ಗೊಂದಲಕ್ಕೆ ಸಿಲುಕುವಂತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಎ.ಮಂಜು – ರೇವಣ್ಣ ವಿರುದ್ಧ ಎ.ಟಿ ರಾಮಸ್ವಾಮಿ ಬೇಸರದ ಮಾತು

    ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಎ.ಮಂಜು – ರೇವಣ್ಣ ವಿರುದ್ಧ ಎ.ಟಿ ರಾಮಸ್ವಾಮಿ ಬೇಸರದ ಮಾತು

    ಹಾಸನ: ಜೆಡಿಎಸ್‍ (JDS) ನ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಹಾಲಿ ಇಬ್ಬರು ಶಾಸಕರು ಜೆಡಿಎಸ್‍ಗೆ ಗುಡ್‍ಬೈ ಹೇಳುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಹಾಸನದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದಿದೆ.

    ಹಾಸನ ಜಿಲ್ಲೆ ಜೆಡಿಎಸ್‍ನಲ್ಲಿ ಅಚ್ಚರಿ ಬೆಳವಣಿಗೆ ನಡೆಯುತ್ತಿದೆ. ಹಾಸನ ಜಿಲ್ಲೆಯ ಅರಸೀಕೆರೆ, ಅರಕಲಗೂಡು ವಿಧಾನಸಭಾ ಕ್ಷೇತ್ರ (Arakalagudu vidhanasabha Constituency) ಗಳ ಹಾಲಿ ಶಾಸಕರುಗಳಾದ ಎ.ಟಿ.ರಾಮಸ್ವಾಮಿ (A.T Ramaswamy) ಹಾಗೂ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಮಧ್ಯೆ 2023ರ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಎ.ಮಂಜು (A Manju) ಅಂತ ಸ್ವತಃ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೊಂದೆಡೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಫೆ.14 ತಮ್ಮ ಹುಟ್ಟುಹಬ್ಬದ ದಿನದಂದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ 2 ವಿಕೆಟ್ ಪತನ- ಕಾಂಗ್ರೆಸ್ ಸೇರ್ತಾರಾ ಶಿವಲಿಂಗೇಗೌಡ, ಎಟಿಆರ್?

    ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಎ. ಮಂಜು ಕಣಕ್ಕಿಳಿಯಲಿದ್ದಾರೆ. ಅಲ್ಲದೇ ತಮ್ಮ ಮಗನನ್ನೂ ಜೆಡಿಎಸ್‍ಗೆ ಮಂಜು ಆಹ್ವಾನಿಸಿದ್ದಾರೆ. ಕಾಂಗ್ರೆಸ್ (Congress) ತೊರೆಯಲು ಪಕ್ಷದಲ್ಲಿನ ಕಡಗಣನೆ ಅಂತ ದೂರಿದ್ದಾರೆ. ಎ.ಮಂಜು ಜೆಡಿಎಸ್ ಸೇರ್ಪಡೆ ಬೆನ್ನಲ್ಲೇ ಅರಕಲಗೂಡು ಕ್ಷೇತ್ರದಲ್ಲಿ ಕೋಲಾಹಲ ಶುರುವಾಗಿದೆ. ಶಾಸಕ ಎ.ಟಿ.ರಾಮಸ್ವಾಮಿ ಎಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿಯೇ ತನ್ನ ಮಗುವಿಗೆ ಹಾಲು ಕೊಡದೆ ವಿಷ ಕೊಟ್ಟರೆ ಮಗು ಹೇಗೆ ಬದುಕುತ್ತೆ..? ನನ್ನ ನಡೆ ಬಗ್ಗೆ. ಜನರ ತೀರ್ಮಾನಕ್ಕೆ ಬಿಟ್ಟಿದ್ದೀನಿ ಅಂತ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

    ಜೆಡಿಎಸ್‍ನ ಭದ್ರಕೋಟೆಯಲ್ಲೇ ಹಾಲಿ ಶಾಸಕರು ಪಕ್ಷ ತೊರೆಯುತ್ತಿರುವುದು ಜೆಡಿಎಸ್ ನಾಯಕರಿಗೆ ದೊಡ್ಡ ತಲೆ ನೋವಾಗಿತ್ತು. ಆದರೆ ಅರಕಲಗೂಡು ಕ್ಷೇತ್ರಕ್ಕೆ ಎ.ಟಿ.ರಾಮಸ್ವಾಮಿ ತಂದಂತೆ, ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೂ ಅಚ್ಚರಿಯ ಅಭ್ಯರ್ಥಿ ಘೋಷಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು

    50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು

    – ನಾನು ಕುಮಾರಣ್ಣನಿಗೆ ಚಾಕಲೇಟ್ ಕೊಟ್ಟರೆ ಜನ ನನಗೆ ಬತಾಸ್ ಕೊಡ್ತಾರೆ

    ಬಿಡದಿ: 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಆರೋಪಕ್ಕೆ ಮಾಗಡಿ ಹಾಲಿ ಜೆಡಿಎಸ್ ಶಾಸಕ ಎ.ಮಂಜು ತಿರುಗೇಟು ನೀಡಿದ್ದಾರೆ.

    ಬಾಲಕೃಷ್ಣ ಅವರ ಆರೋಪಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜು ಅವರು, ನಾನು ಮಾತನಾಡಿದರೆ ಅವರ ಪೂರ್ವಜರಷ್ಟು ಮಾತನಾಡ್ತೇನೆ. ಇವರ ರೀತಿ ಹಲ್ಕಟ್ ರಾಜಕೀಯ ನಾನು ಮಾಡಲ್ಲ. 10 ಕೋಟಿ ಹಣ ಪಡೆದು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಇವತ್ತು ನನ್ನ ಬಗ್ಗೆ ಇಲ್ಲಸಲ್ಲದನ್ನು ಮಾತನಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

    ಡಿ.ಕೆ.ಶಿವಕುಮಾರ್ ಅವರಿಗೆ, ಡಿ.ಕೆ.ಸುರೇಶ್ ಅವರಿಗೆ ನನ್ನಿಂದ ಸಹಾಯ ಆಗಿದೆ. ಆದರೆ ಅವರಿಂದ ನನಗೇನು ಸಹಾಯ ಆಗಿಲ್ಲ. ತೆಗೆದುಕೊಂಡಿದ್ದ ಹಣಕ್ಕೆ ಬಡ್ಡಿ ಸಮೇತ ವಾಪಸ್ ನೀಡಿದ್ದೇನೆ. ಅವರು ನನ್ನ ಪರವಾಗಿ ಇದ್ದಿದ್ದನ್ನ ಸಾಬೀತು ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇವರು ಕುಮಾರಸ್ವಾಮಿ ಅವರಿಗೆ ಚಾಕಲೇಟ್ ಕೊಟ್ಟು ಐಸ್‍ಕ್ರೀಂ ನೆಕ್ಕಿ ಹೋದರು. ನಾನು ಕುಮಾರಣ್ಣನಿಗೆ ಚಾಕಲೇಟ್ ಕೊಟ್ಟರೆ ಜನ ನನಗೆ ಬತಾಸ್ ಕೊಡ್ತಾರೆ. ಅದು ನನಗೆ ಗೊತ್ತಿದೆ. ಹಾಗಾಗಿ ನಾನು ಕುಮಾರಣ್ಣನ ಜೊತೆಗೆ ಇರುತ್ತೇನೆ ಎಂದರು.

  • ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ – ಎ.ಮಂಜು ವಿರುದ್ಧ ಪ್ರೀತಂಗೌಡ ಕಿಡಿ

    ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ – ಎ.ಮಂಜು ವಿರುದ್ಧ ಪ್ರೀತಂಗೌಡ ಕಿಡಿ

    ಹಾಸನ : ನನ್ನನ್ನು ಜನ ಹತ್ತು ವರ್ಷದಿಂದ ನೋಡುತ್ತಿದ್ದಾರೆ, ಅವರನ್ನು ಮೂವತ್ತು ವರ್ಷದಿಂದ ನೋಡುತ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರುತ್ತಾರೆ ಎಂದು ಗೊತ್ತಿದೆ. ನಾನು ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

    ಪ್ರೀತಂಗೌಡ ನಡೆಯಿಂದ ನನ್ನ ಫ್ಯಾಮಿಲಿ ಡಿಸ್ಟರ್ಬ್ ಆಗಿದ್ದರು. ಐದು ಕೋಟಿ ಕೊಡುತ್ತೇನೆ ನಿಮ್ಮ ಮಗನನ್ನು ಹಾಸನದಿಂದ ಎಂಎಲ್‍ಸಿ ಚುನಾವಣೆಗೆ ನಿಲ್ಲಿಸಿ ಎಂದು ಹೇಳಿ ಆನಂತರ ಉಲ್ಟಾ ಹೊಡೆದಿದ್ದರು ಎಂದು ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದರು.  ಇದನ್ನೂ ಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಈ ಕುರಿತಂತೆ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೀತಂಗೌಡ ಅವರು, ನನ್ನನ್ನ ಜನ ಹತ್ತು ವರ್ಷದಿಂದ ನೋಡುತ್ತಿದ್ದಾರೆ, ಅವರನ್ನು ಮೂವತ್ತು ವರ್ಷದಿಂದ ನೋಡುತ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರುತ್ತಾರೆ. ಯಾರೂ ಯಾವ್ಯಾವ ಪಾರ್ಟಿಗೆ ಯಾವ್ಯಾವ ಟೈಪಲಿ ಲಾಂಗ್ ಜಂಪ್ ಮಾಡುತ್ತಾರೆ ಎನ್ನುವುದು ಗೊತ್ತಿದೆ. ನಾನು ಬದುಕಿರುವವರೆಗೂ ಬಿಜೆಪಿ, ಸಾಯೋವರೆಗೂ ಬಿಜೆಪಿ. ಯಾರೂ ಮಾತನಾಡುತ್ತಿಸದಸ ಅವರ ಬಾಯಲ್ಲಿ ಇವತ್ತು ಯಾವ ಪಕ್ಷ, ನಾಳೆ ಯಾವ ಪಕ್ಷ ಅಂದರೆ ಬಾಯಿ ಹೊರಳಲ್ಲ ಅಂಥವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

     

    ಅವರ ಮನೆ ಒಡೆಯುವಂತಹ ಕೆಲಸ ಮಾಡಿಲ್ಲ, ಅವರ ಮನಸ್ಥಿತಿ ಅಷ್ಟು ವೀಕಿದೆ, ನಾನು ಅಷ್ಟೊಂದು ಸ್ಟ್ರಾಂಗ್ ಅಂಥ ಈಗ ಗೊತ್ತಾಗುತ್ತಿದೆ. ನಮ್ಮ ಹತ್ತಿರ ಬಿಜೆಪಿ ಅಭ್ಯರ್ಥಿ ಆಗುತ್ತೀನಿ ಅಂತ ಚರ್ಚೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆಗಲು ಯಾವಾಗ ಡಿಡಿ ಕೊಟ್ಟಿದ್ದಾರೆ ಎನ್ನುವುದನ್ನು ಕೆಪಿಸಿಸಿ ಕಚೇರಿಯಲ್ಲಿ ಚೆಕ್ ಮಾಡಲಿ. ಇವರು ಓದಿರುವ ಸ್ಕೂಲ್‍ನಲ್ಲಿ ಓದಿದರೆ, ಆ ಸ್ಕೂಲಿನಲ್ಲಿ ಟೀಚರ್ ಆಗಿ, ಪ್ರಿನ್ಸಿಪಲ್ ಆಗಿ, ರಿಟೈರ್ಡ್ ಆಗಿ ಮ್ಯಾನೇಜ್ ಮೆಂಟ್ ಕಮಿಟಿ ಅಧ್ಯಕ್ಷನಾದ್ದೀನಿ. ಅವರಿನ್ನೂ ಆ ಸ್ಕೂಲ್‍ನಲ್ಲಿ ಓದುತ್ತಿದ್ದಾರೆ, ಜಗತ್ತಿಗೆ ನಾನೋಬ್ಬನೆ ಬುದ್ದಿವಂತ ಅಂದುಕೊಂಡಿದ್ದಾರೆ. ಆ ಕಾಲ ಮುಗಿದು ಹೋಗಿದೆ. ಅಂತಹವರು ಸುಮಾರು ಜನ ಬಂದಿದ್ದಾರೆ. ಹಾಗಾಗಿ ಹೆಚ್ಚು ಚಾಣಾಕ್ಷತನ ತೋರಿಸೋದು ಬೇಡ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

    ನನಗೆ ಬಿಜೆಪಿ ಇಷ್ಟವಿಲ್ಲ, ಚುನಾವಣೆ ಮಾಡದೇ ಗೆಲ್ಲುವುದಕ್ಕೆ ಆಗಲಿಲ್ಲ. ವಾಪಾಸ್ ಹೋಗುತ್ತೇನೆ ಅಂದರೆ ಜಿಲ್ಲೆಯ ಜನ ಒಪ್ಪಿಕೊಳ್ಳುತ್ತಾರೆ. ಯಾರಿಂದನೂ ಬಿಜೆಪಿ ಏನು ವ್ಯಾತ್ಯಾಸ ಆಗಲ್ಲ. ರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ. ಹಾಸನ ಜಿಲ್ಲೆಯಲ್ಲೂ ಮುಂದೆ ದೊಡ್ಡ ಪಕ್ಷ ಆಗುತ್ತದೆ. ಎಲ್ಲಾ ರೆಡಿ ಆಗಿರುವ ಮನೆಗೆ ಬಂದು ಗೃಹಪ್ರವೇಶ ಮಾಡುವುದಲ್ಲ. ಹೊಸದಾಗಿ ಸೈಟ್ ಹುಡುಕಿ, ಫೌಂಡೇಶನ್ ತೆಗೆದು, ಕ್ಯೂರಿಂಗ್ ಮಾಡಿ, ಆರ್.ಸಿ.ಸಿ. ಹಾಕಿ ಬಣ್ಣ ಹೊಡೆದು ವಾಸ ಮಾಡಬೇಕೆಂದು ಬಂದಿರುವವನು ನಾನು. ಅವರು ಎಲ್ಲೆಲ್ಲಿ ಮನೆ ಇರುತ್ತೋ ಅಲ್ಲಲ್ಲಿ ಹೋಗಿ ವಾಸ ಮಾಡಿ ಬಾಡಿಗೆ ಮನೆಯಲ್ಲಿ ಹೋಗಿರುತ್ತಾರೆ. ನಾನು ಪರ್ಮನೆಂಟ್ ಗಿರಾಕಿ, ಬಾಡಿಗೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ ಎಂದು ವ್ಯಂಗ್ಯವಾಡಿದ್ದಾರೆ.

  • ಪೊಲೀಸರ ತನಿಖೆ ನಂತರ ಶಾಸಕರ ಕೊಲೆ ಸಂಚು ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ: ಡಿ.ಕೆ ಸುರೇಶ್

    ಪೊಲೀಸರ ತನಿಖೆ ನಂತರ ಶಾಸಕರ ಕೊಲೆ ಸಂಚು ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ: ಡಿ.ಕೆ ಸುರೇಶ್

    ಹಾಸನ: ಪೊಲೀಸರ ತನಿಖೆ ನಂತರ ಶಾಸಕ ಎಸ್‍ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗೋಪಾಲಕೃಷ್ಣ ಅವರು ವೀಡಿಯೋ ಮತ್ತು ಆಡಿಯೋ ರಿಲೀಸ್ ಮಾಡಿದ್ದೇವೆ ಅಂತಿದ್ದಾರೆ. ಈಗಿರುವುದು ಫೇಕ್ ವೀಡಿಯೋ ಎಂದು ಸಿಸಿಬಿಗೆ ಮನವಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಯಾರೂ ಬೇಕಾದರೂ ಯಾವ ಪಕ್ಷದಲ್ಲಾದರೂ ಇರಲಿ ರಾಜಕೀಯವಾಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ರಾಜಕಾರಣದಲ್ಲಿ ವೈಯಕ್ತಿಕ ದ್ವೇಷ ಮಾಡುವುದು ಒಳ್ಳೆಯದಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷದಲ್ಲಿದ್ದಲ್ಲಿದ್ದರೂ ಈ ರೀತಿ ಮಾಡುವುದು ಸರಿಯಾಗಿಲ್ಲ ಎಂದರು.

    ನಮಗೆ ಕೊಟ್ಟಿರುವ ಮಾಹಿತಿ ಪ್ರಕಾರ, ಫೇಕ್ ವೀಡಿಯೋ ಎಂದು ಹೇಳಿದ್ದಾರೆ. ಪೊಲೀಸರು ಅದಕ್ಕೆ ಬೇಕಾದ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಕುರಿತಾಗಿ ಗೋಪಾಲಕೃಷ್ಣ ಅವರು ಈಗಾಗಲೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಕೂಡ ಒಂದೊಂದು ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷ ಯಾವತ್ತೂ ಇಂಥ ಕೆಲಸ ಬೆಂಬಲಿಸಲ್ಲ ಎಂದು ತಿಳಿಸಿದರು.

    ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ: ಹಾಸನ ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ಜನತಾದಳದ ನಾಯಕರು ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಕ್ತ ಚುನಾವಣೆಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ಮತದಾನದ ಹಕ್ಕಿರುವ ಗ್ರಾಪಂ ಸದಸ್ಯರಿಗೆ ತಮ್ಮ ಏಜೆಂಟ್‍ಗೆ ತೋರಿಸಿ ಮತ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಸಂಸದ ಡಿಕೆ.ಸುರೇಶ್ ಆರೋಪ ಮಾಡಿದರು.

    ಚುನಾವಣೆ ನೀತಿ ಸಂಹಿತೆ ಇದ್ದರೂ ಸರ್ಕಾರಿ ವಾಹನ ಹಿಂಪಡೆದಿಲ್ಲ. ಲೋಕಸಭಾ ಕಚೇರಿ ಚುನಾವಣಾ ಕಾರ್ಯತಂತ್ರದ ಕೇಂದ್ರ ಸ್ಥಾನವಾಗಿದೆ. ಜಿಲ್ಲಾಡಳಿತ ಜೆಡಿಎಸ್ ಜೊತೆ ಶಾಮೀಲಾಗಿದೆ ಎಂದು ಕಾಣುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರ ಸಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ:  ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ದೇವೇಗೌಡರ ಪ್ರಧಾನಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ, ಜೆಡಿಎಸ್ ಮತ್ತು ಬಿಜೆಪಿ ಯಾವುದೇ ಕ್ಷಣದಲ್ಲಿ ಬೇಕಾದರೂ ಒಂದಾಗ್ತಾರೆ ಎಂಬುದು ಗೊತ್ತಿದೆ. ಜೆಡಿಎಸ್‍ನವರು ಬಿಜೆಪಿ ಜೊತೆಯಲ್ಲಿ ಅಥವಾ ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅಧಿಕಾರಕ್ಕೋಸ್ಕರ ಹಾಗೂ ಸ್ಥಾನ ಉಳಿಯಲು ಅವರು ಏನು ಬೇಕಾದರೂ ಮಾಡುತ್ತಾರೆ. ಅವರು ಅದನ್ನು ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ ಮುಂದೆಯೂ ಈ ರೀತಿಯಾಗೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ಎ.ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಎ.ಮಂಜು ಅವರು ಈಗಾಗಲೇ ಬಿಜೆಪಿಯ ಸಕ್ರಿಯ ನಾಯಕರಾಗಿದ್ದಾರೆ. ಅವರು ಏನು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದರ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು. ಇದನ್ನೂ ಓದಿ: ನನಗೆ ಮತ ಹಾಕದಂತೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕ್ತಿದ್ದಾರೆ: ಎಂ.ಶಂಕರ್ ಆರೋಪ

    ಕೊಡಗಿನಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಮಂಥರ್ ಕಾಂಗ್ರೆಸ್‍ಗಾಗಿ ಅನೇಕ ಕೆಲಸ ಮಾಡಿದ್ದಾರೆ. ಪಕ್ಷ ಅವರನ್ನು ಗುರುತಿಸಿ ಟಿಕೆಟ್ ನೀಡಿದೆ. ಮಂಥರ್ ಪರ ಎ.ಮಂಜು ಅವರು ಹೋಗಿ ಚುನಾವಣೆ ಪ್ರಚಾರ ಮಾಡೋದು ಅವರ ವೈಯಕ್ತಿಕ ವಿಷಯವಾಗಿದೆ. ಪಕ್ಷ ಅದನ್ನು ಸಮರ್ಥನೆ ಮಾಡಿಕೊಳ್ಳಲ್ಲ. ನಾನು ಶಾಸಕರಾದ ಶಿವಲಿಂಗೇಗೌಡ, ಪ್ರೀತಂಗೌಡ, ಬಾಲಕೃಷ್ಣ, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರ ಬೆಂಬಲ ಕೋರುತ್ತೇನೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಶಂಕರ್‍ಗೆ ಮತ ನೀಡಿ ಅಂತ ಮನವಿ ಮಾಡಿದರು.

  • ಕುಮಾರಸ್ವಾಮಿ, ಯಡಿಯೂರಪ್ಪ ಕಾಂಗ್ರೆಸ್‍ನಿಂದ ಸಿಎಂ ಆದೆ ಅಂತ ಹೇಳಬೇಕು: ಎ.ಮಂಜು

    ಕುಮಾರಸ್ವಾಮಿ, ಯಡಿಯೂರಪ್ಪ ಕಾಂಗ್ರೆಸ್‍ನಿಂದ ಸಿಎಂ ಆದೆ ಅಂತ ಹೇಳಬೇಕು: ಎ.ಮಂಜು

    ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ನಾನು ದೇವರ ಆಶೀರ್ವಾದದಿಂದ ಸಿಎಂ ಆದೆ ಎನ್ನುತ್ತಾರೆ. ಆದರೆ ದೇವರಲ್ಲ ಮಾಜಿ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಅವರಿಂದ ಸಿಎಂ ಆದೆ ಅಂತ ಹೇಳಬೇಕು ಎಂದು ಮಾಜಿ ಸಚಿವ ಎ.ಮಂಜು ಕಿಡಿಕಾರಿದರು.

    ಹಾಸನನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹೆಚ್‍ಡಿಕೆ ನಡುವಿನ ವಾಕ್ಸಮರ ವಿಚಾರವಾಗಿ ಹೇಳಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಪುಟಗೋಸಿ ಎಂಬ ಪದಬಳಕೆಯನ್ನು ಕುಮಾರಸ್ವಾಮಿ ಅವರು ಬಳಸಿರುವುದು ಬೇಸರವಾಗಿದೆ. ಇಂತಹ ಪದ ಬಳಕೆ ಮಾಡುವಂತದ್ದು ಒಳ್ಳೆಯದಲ್ಲ ಎಂದರು. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

    ಕುಮಾರಸ್ವಾಮಿ ಅವರು ಇದನ್ನು ನಿಲ್ಲಿಸದೆ ಹೋದರೆ ಎಲ್ಲರಿಗೂ ಅವಮಾನ. ಇಂತಹ ಪದ ಬಳಸಿದ್ದರಿಂದಲೇ ಮಂಡ್ಯದಲ್ಲಿ ನಿಖಿಲ್ ಸೋತಿದ್ದು. ಜನರು ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮಾತನಾಡಬೇಕಾದರೆ ಯೋಚನೆ ಮಾಡಿ ಮಾತನಾಡಬೇಕು ಎಂದು ಸೂಚಿಸಿದರು.


    ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿರುವುದು ತಪ್ಪು. ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿ ಇದ್ದಿದ್ದರಿಂದಲೇ 58 ಸೀಟ್ ಬಂದಿದ್ದು. ಯಡಿಯೂರಪ್ಪ ಅವರ ಸಹಕಾರ, ಆಶೀರ್ವಾದದಿಂದ ಕಳೆದ ಬಾರಿ ನಲವತ್ತು ಸೀಟ್ ಬಂತು. ಕುಮಾರಸ್ವಾಮಿ ಅವರ ಹೇಳಿಕೆ ಹಾಸನ ಜಿಲ್ಲೆ, ರಾಜ್ಯಕ್ಕೆ ಅವಮಾನ. ಅವರು ನಾನು ದೇವರ ಆಶೀರ್ವಾದದಿಂದ ಮುಖ್ಯಮಂತ್ರಿ ಆದೆ ಎನ್ನುತ್ತಾರೆ. ಆದರೆ ದೇವರು ಅಲ್ಲ ಯಡಿಯೂರಪ್ಪ ಅವರಿಂದ ಸಿಎಂ ಆದೆ ಅಂತ ಹೇಳಬೇಕು. ಕಾಂಗ್ರೆಸ್ ಪಕ್ಷದಿಂದ ಸಿಎಂ ಆದೆ ಅಂತ ಹೇಳಬೇಕು ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು

  • ಹೆಚ್‍ಡಿಕೆ-ಸುಮಲತಾ ಟಾಕ್ ಫೈಟ್ – ದೇವೇಗೌಡರ ಮಧ್ಯಸ್ಥಿಕೆ ಅಗತ್ಯ ಅಂದ್ರು ಎ.ಮಂಜು

    ಹೆಚ್‍ಡಿಕೆ-ಸುಮಲತಾ ಟಾಕ್ ಫೈಟ್ – ದೇವೇಗೌಡರ ಮಧ್ಯಸ್ಥಿಕೆ ಅಗತ್ಯ ಅಂದ್ರು ಎ.ಮಂಜು

    ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಮಾತಿನ ಸಮರ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಬ್ಬರನ್ನು ಕರೆದು ಮಾತುಕತೆ ನಡೆಸಿದರೆ ಉತ್ತಮ ಎಂದು ಮಾಜಿ ಸಚಿವ ಎ .ಮಂಜು ಅಭಿಪ್ರಾಯಪಟ್ಟರು.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಜನಪ್ರತಿನಿಧಿಗಳಾಗಿದ್ದು ಪರಸ್ಪರ ಗೌರವದೊಂದಿಗೆ ಮಾತನಾಡುವುದು ಸೂಕ್ತ. ಯಾವುದೇ ಒಂದು ವಿಚಾರದಲ್ಲಿ ಯೋಚನೆ ಮಾಡಿ ಮಾತನಾಡಬೇಕಾಗಿತ್ತು. ಹೀಗಿರುವಾಗ ಗೊಂದಲವನ್ನು ನಿವಾರಿಸಲು ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖ ಮಾತುಕತೆ ನಡೆದರೆ ಉತ್ತಮ ಎಂದು ಹೇಳಿದರು.

    ಅಲ್ಲದೆ ಸಮುದಾಯದ ಸ್ವಾಮೀಜಿಗಳು ಕೂಡ ಕರೆದು ಇವರ ನಡುವಿನ ಮಾತಿನ ಸಮರಕ್ಕೆ ತೆರ ಎಳೆಯಬೇಕಿದೆ ಎಂದು ಸಲಹೆ ನೀಡಿದರು. ಆಯಾ ಕ್ಷೇತ್ರದ ಸಂಸದರು ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮಾತನಾಡುತ್ತಾರೆ. ಜನಪ್ರತಿನಿಧಿಗೆ ನಮ್ಮ ಮಾತಿನ ಮೂಲಕ ಗೌರವ ಕೊಡುವುದು ಒಳ್ಳೆಯದು ಎಂದರು. ಇದನ್ನೂ ಓದಿ: ಸಂಸದೆ ಸುಮಲತಾ ಆರೋಪಕ್ಕೆ ಸರ್ಕಾರದಿಂದ ಉತ್ತರವಿಲ್ಲ – ಸಿದ್ದರಾಮಯ್ಯ ವಾಗ್ದಾಳಿ

    ಕಳೆದ ಬಾರಿ ರೇವಣ್ಣ ಅವರು ಮಾತನಾಡಿ ಅಂದಿನ ಸೋಲಿಗೆ ಕಾರಣರಾದರು. ಇಂದು ಕುಮಾರಸ್ವಾಮಿ ಮಾತನಾಡಿ ಅವರ ಮಗನ ಭವಿಷ್ಯ ಅವರೇ ಹಾಳು ಮಾಡುತ್ತಿದ್ದಾರೆ. ಯಾವುದೇ ಹೇಳಿಕೆಗಳನ್ನು ನೀಡುವಾಗ ಸಣ್ಣಪುಟ್ಟ ವ್ಯತ್ಯಾಸಗಳು ಸಾಮಾನ್ಯ. ಕೆಲವರು ತಮ್ಮ ಅನುಕೂಲಕ್ಕಾಗಿ ಸಂಸದೆ ಪರ, ಕುಮಾರಸ್ವಾಮಿ ಪರ ಮಾತನಾಡುತ್ತಾರೆ. ಕೆಆರ್‍ಎಸ್ ಬಿರುಕು ಬಿಟ್ಟಿದ್ದರೆ ಕಾನೂನಿನ ಪ್ರಕಾರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಂಜು ತಿಳಿಸಿದರು. ಇದನ್ನೂ ಓದಿ: ಆತಂಕ ಹುಟ್ಟಿಸೋ ಚೀಪ್ ಪಾಪ್ಯುಲಾರಿಟಿ ಬಗ್ಗೆ ಮಾತಾಡೋಕೆ ಇಷ್ಟವಿಲ್ಲ- ಸುಮಲತಾಗೆ ಡಿಕೆಶಿ ಟಾಂಗ್

  • ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತ ಹೇಳೋಕೆ ಬಂದೆ: ಎ. ಮಂಜು

    ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತ ಹೇಳೋಕೆ ಬಂದೆ: ಎ. ಮಂಜು

    ಮೈಸೂರು: ಡಿಸಿ ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತ ಹೇಳುವುದಕ್ಕೆ ಮೈಸೂರಿಗೆ ಬಂದೆ ಎಂದು ಮಾಜಿ ಸಚಿವ ಎ. ಮಂಜು ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ರೋಹಿಣಿ ಸಿಂಧೂರಿ ಬಗ್ಗೆ ಮಾತನಾಡಿ, ನಾನು ಯಾರ ಪರವೂ, ವಿರುದ್ಧವೂ ಮಾತನಾಡಿಲ್ಲ. ಡಿಸಿ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ, ಹಿರಿಯ ರಾಜಕಾರಣಿಗಳಿಗೆ ಗೌರವ ಕೊಡಲ್ಲ ಅಂತಾ ಹೇಳೋಕೆ ಬಂದಿದ್ದೆ. ಒಬ್ಬ ಶಾಸಕರನ್ನ ಏಕವಚನದಲ್ಲಿ ಮಾತನಾಡೋದು ವೆರಿ ಬ್ಯಾಡ್. ಈ ರೀತಿಯ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು ಎಂದರು.

    ಇದೇ ವೇಳೆ ಈ ಹಿಂದೆ ತನ್ನ ಕಾಲೆಳೆದಿದ್ದ ಹೆಚ್. ವಿಶ್ವನಾಥ್ ಗೆ ಟಾಂಗ್ ನೀಡಿದ ಮಾಚಿ ಸಚಿವರು, ಹಾಸನದಿಂದ ಇಲ್ಲಿ ಬಂದು ಡಿಸಿ ವಿರುದ್ಧ ಮಾತನಾಡುತ್ತಾರೆ ಎಂದು ವಿಶ್ವನಾಥ್ ಹೇಳಿದ್ದರು. ಇದಕ್ಕೆ ಟಾಂಗ್ ಕೊಟ್ಟರು. ಕೆರೆ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡ್ಬೇಕು ಅಂತ ರೋಹಿಣಿ ಸಿಂಧೂರಿ ಹೇಳಿದ್ರು. ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ಹಾಸನದಲ್ಲಿ ಕೆರೆ ಉಳುವಿಗಾಗಿ ಜನರು ಸ್ವಂತ ಹಣದಲ್ಲಿ ಕೆರೆ ಮಾಡಲು ಮುಂದಾಗಿದ್ರು. ಈ ವೇಳೆ ರೋಹಿಣಿ ಸಿಂಧೂರಿಯೇ ಅಲ್ಲಿನ ಡಿಸಿಯಾಗಿದ್ರು. ಆಗ ಆಹ್ವಾನ ನೀಡಿದ್ದ ವೇಳೆ ಕೆರೆ ಬಳಿ ಬಂದು ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ ಎಂದು ಹೇಳುತ್ತಾ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.

    ಮೈಸೂರಿನಲ್ಲಿ ಭೂ ಮಾಫಿಯಾ ಮಾಡಿದ್ದಾರೆ ಅಂತಾರೆ. ಆದ್ರೆ ಈವರೆಗೂ ಭೂ ಮಾಫಿಯಾ ಮಾಡಿದವರ ವಿರುದ್ಧ ಒಂದೇ ಒಂದು ಎಫ್‍ಐಆರ್ ಆಗಿಲ್ಲ ಏಕೆ?. ಎಲ್ಲರೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿ ದಂಧೆ ಮಾಡಬಾರದು. ಎಷ್ಟು ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾ ಮಾಡುವವರ ಮೇಲೆ ಎಫ್ ಐ ಆರ್ ಆಗಿಲ್ಲ ಯಾಕೆ?. ಭೂ ಮಾಫಿಯಾ ಮಾಡಿದ್ದಾರೆ ಅಂತ ಡಿಸಿಯಾಗಿದ್ದ ರೋಹಿಣಿ ಹೇಳಿದ್ದಾರೆ. ಆದರೆ ಅವರ ಮೇಲೆ ಎಫ್‍ಐಆರ್ ಯಾಕೆ ಮಾಡಿಸಿಲ್ಲ. ಕೇವಲ ಪ್ರಚಾರಕ್ಕೆ ಮಾಡೋದಲ್ಲ. ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿಯ ಬಗ್ಗೆ ಆನ್ ರೆಕಾರ್ಡ್ ಇರುತ್ತದೆ ಅದನ್ನು ರಕ್ಷಿಸಬೇಕು ಎಂದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ

  • ಕೆಲವು ಅಧಿಕಾರಿಗಳು ಒಂದು ಕುಟುಂಬದ ರಾಜಕಾರಣಿಗಳ ಕೆಳಗೆ ಜೀತ ಪದ್ದತಿಯಲ್ಲಿಯೇ ಇದ್ದಾರೆ: ಎ.ಮಂಜು

    ಕೆಲವು ಅಧಿಕಾರಿಗಳು ಒಂದು ಕುಟುಂಬದ ರಾಜಕಾರಣಿಗಳ ಕೆಳಗೆ ಜೀತ ಪದ್ದತಿಯಲ್ಲಿಯೇ ಇದ್ದಾರೆ: ಎ.ಮಂಜು

    ಹಾಸನ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಕೂಡಾ ಹಾಸನ ಜಿಲ್ಲೆಯ ಕೆಲವು ಅಧಿಕಾರಿಗಳು ಒಂದು ಕುಟುಂಬದ ರಾಜಕಾರಣಿಗಳ ಕೆಳಗೆ ಜೀತ ಪದ್ದತಿಯಲ್ಲಿಯೇ ಇದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆಕ್ರೋಶ ಹೊರಹಾಕಿದ್ದಾರೆ.

    ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಜಿಲ್ಲಾಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಕ್ಷೇತ್ರ ಮರು ವಿಂಗಡಣೆಯಾಗುತ್ತಿದ್ದು, ರಾಜಕೀಯದ ಕೆಲವು ನಾಯಕರುಗಳ ಒತ್ತಡಕ್ಕೆ ಮಣಿದು ಜಿಲ್ಲೆಯ ಕೆಲವು ಅಧಿಕಾರಿಗಳು ನಿಯಮ ಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ಅಧಿಕಾರಿಗಳು ಒಂದು ಕುಟುಂಬಕ್ಕೆ ಇನ್ನು ಜೀತ ಪದ್ದತಿಯ ರೀತಿಯಲ್ಲಿ ಇದ್ದಾರೆ ಎಂದು ಭಾಸವಾಗುತ್ತಿದೆ ಎಂದು ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

    ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಪಡುವಲಹಿಪ್ಪೆಯನ್ನು ಜಿಲ್ಲಾ ಪಂಚಾಯ್ತಿ ಕ್ಷೇತ್ರವನ್ನಾಗಿ ಮಾಡುವ ಸಲುವಾಗಿ, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಬರುವ ಕೆರಗೋಡು ಗ್ರಾಮ ಪಂಚಾಯ್ತಿಯನ್ನು ಪಡುವಲಹಿಪ್ಪೆ ಕ್ಷೇತ್ರಕ್ಕೆ ಸೇರಿಸಲು ಹೊರಟಿದ್ದಾರೆ. ಮರುವಿಂಗಡಣೆಯ ಸಮಯದಲ್ಲಿ ಆಯಾ ಕ್ಷೇತ್ರ ಸಮೀಪದ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಸಮೀಪದಲ್ಲಿರುವ ಎರಡು ಗ್ರಾಮಪಂಚಾಯ್ತಿಯನ್ನು ಬಿಟ್ಟು ಅರಕಲಗೂಡು ತಾಲ್ಲೂಕಿನ ಕೆರಗೋಡುನ್ನು ಸೇರ್ಪಡೆ ಮಾಡಿಕೊಳ್ಳುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಅಧಿಕಾರಿಗಳು ರಾಜಕೀಯದ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದರೆ ಅವರು ಜೀತ ಪದ್ದತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.