Tag: ಎ.ಮಂಜುನಾಥ್

  • ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ

    ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ

    ರಾಮನಗರ: ವಿಧಾನಸಭಾ ಚುನಾವಣೆ (Election) ಹತ್ತಿರವಾಗುತ್ತಿದ್ದಂತೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಆರೋಪ, ಪ್ರತ್ಯಾರೋಪ ಮುಂದುವರಿದಿದೆ. ಮಾಜಿ ಶಾಸಕ ಬಾಲಕೃಷ್ಣ ಆರೋಪಕ್ಕೆ ಶಾಸಕ ಎ. ಮಂಜುನಾಥ್ (A Manjunath) ಪತ್ನಿ ಲಕ್ಷ್ಮಿಆಣೆ ಪ್ರಮಾಣದ ಮೂಲಕ ತಿರುಗೇಟು ನೀಡಿದ್ದಾರೆ.

    ಮಾಗಡಿ (Magadi) ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಆರೋಪ – ಪ್ರತ್ಯಾರೋಪದ ಜೊತೆಗೆ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಜೋರಾಗಿದೆ. ಕಮಿಷನ್‌ ಆರೋಪದ ಬೆನ್ನಲ್ಲೇ ಬಾಲಕೃಷ್ಣ (Balakrishna) ವಿರುದ್ಧ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿ ಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ.

    ಗುತ್ತಿಗೆದಾರರ ಜೊತೆ ಹಾಲಿ ಶಾಸಕ ಎ.ಮಂಜುನಾಥ್ ಪತ್ನಿ ಪಾಲುದಾರಿಕೆ ಮಾಡಿದ್ದಾರೆ. ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುತ್ತಿದ್ದಾರೆ. ಕಾರ್ಯಕರ್ತನಿಗೂ ಒಂದು ಸಣ್ಣ ಸಹಾಯ ಮಾಡಿಲ್ಲ ಎಂದು ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದರು. ನಾನು ಕಾರ್ಯಕರ್ತರಿಗೆ ಗುತ್ತಿಗೆ ನೀಡಿ ಕೆಲಸ ಮಾಡಿಸುತ್ತೇನೆ. ಆದರೆ ಅಮ್ಮವ್ರು ತಾ.ಪಂ ಸದಸ್ಯನಿಗೆ ಕಾಂಟ್ರಾಕ್ಟ್ ನೀಡಿ ಕಮಿಷನ್ ಪಡೆದಿದ್ದಾರೆ. ಇದ್ಯಾವುದು ನಿಮಗೆ ಗೊತ್ತಿಲ್ವಾ ಎಂದು ಟೀಕಿಸಿದರು. ಇದರಿಂದ ಬಾಲಕೃಷ್ಣ ವಿರುದ್ಧ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು – ಸುರೇಶ್‌ಗೌಡ

    ಮಾಗಡಿಯ ಇತಿಹಾಸ ಪ್ರಸಿದ್ಧ ರಂಗನಾಥ ಸ್ವಾಮಿ ದೇವಾಲಯಕ್ಕೆ ಬೆಂಬಲಿಗರ ಜೊತೆ ಆಗಮಿಸಿದ ಶಾಸಕ ಎ.ಮಂಜುನಾಥ್ ಪತ್ನಿ ಲಕ್ಷ್ಮಿ, ಅಲ್ಲಿ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಮುಂಭಾಗ ಕರ್ಪೂರ ಹಚ್ಚಿದ್ದಾರೆ. ಮಾಜಿ ಶಾಸಕ ಬಾಲಕೃಷ್ಣ ಹೇಳಿದ್ದೆಲ್ಲವೂ ಸುಳ್ಳು. ನಾನು ಯಾವ ಕಮಿಷನ್ ವ್ಯವಹಾರದಲ್ಲಾಗಲಿ, ಕಾಂಟ್ರ್ಯಾಕ್ಟ್ ವ್ಯವಹಾರದಲ್ಲಾಗಲೀ ಭಾಗಿಯಾಗಿಲ್ಲ. ನಾನು ಭಾಗಿಯಾಗಿದ್ದರೆ ನನಗೆ ಭಗವಂತ ರಂಗನಾಥಸ್ವಾಮಿ ಶಿಕ್ಷೆ ಕೊಡಲಿ. ಇಲ್ಲವಾದಲ್ಲಿ ನನ್ನ ಮೇಲೆ ಅನಗತ್ಯ ಆರೋಪ ಅಪವಾದ ಮಾಡುತ್ತಿರುವವರನ್ನು ಭಗವಂತ ರಂಗ ಶಿಕ್ಷಿಸಲಿ ಎಂದು ಹೇಳಿ ರಂಗನಾಥಸ್ವಾಮಿ ದೇವಾಲಯ ಮುಂದೆ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಆರೋಪ ಮಾಡಿ ಶಾಪ ಹಾಕಿಸಿಕೊಂಡು ಉದ್ಧಾರ ಆಗಿರೋದು ಚರಿತ್ರೆನೇ ಇಲ್ಲ. ಎಲ್ಲವನ್ನೂ ದೇವರು‌ ನೋಡಿಕೊಳ್ತಾನೆ ಎಂದು ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಲಕ್ಷ್ಮಿ ಮಂಜುನಾಥ್‌ ಗುಡುಗಿದ್ದಾರೆ. ಇದನ್ನೂ ಓದಿ: ರಸ್ತೆ ಕಿತ್ತುಬಂದಿಲ್ಲ, ನ್ಯೂನತೆ ಸರಿ ಮಾಡಲಾಗುತ್ತಿದೆ: ಪ್ರತಾಪ್‌ ಸಿಂಹ

  • ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್‌

    ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್‌

    ರಾಮನಗರ: ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಗಡಿಯ (Magadi) ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಟಾಕ್ ವಾರ್ ಶುರುವಾಗಿದೆ. ಶಾಸಕ ಎ.ಮಂಜುನಾಥ್ (A.Manjunath) ಬಿಜೆಪಿ (BJP) ಸೇರ್ಪಡೆಗೆ ಮುಂದಾಗಿದ್ರು ಎಂಬ ಮಾಜಿ ಶಾಸಕ ಬಾಲಕೃಷ್ಣ (H.C Balakrishna) ಆರೋಪಕ್ಕೆ ಎ.ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಶುರುವಾಗಿದ್ದು ದಿನೇ ದಿನೇ ರಾಜಕೀಯ ಚಟುವಟಿಕೆ ರಂಗೇರುತ್ತಿದೆ.

    ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಕ್ ಸಮರವೇ ಏರ್ಪಟ್ಟಿದೆ. ಶಾಸಕ ಎ.ಮಂಜುನಾಥ್ ಬಿಜೆಪಿ ಸೇರ್ಪಡೆಗೆ ಸಿಪಿ.ಯೋಗೇಶ್ವರ್ (C. P Yogeshwara) ಜೊತೆ ವಿಧಾನಸೌಧ ಸುತ್ತುತ್ತಿದ್ರು ಎಂದು ಮಾಜಿ ಶಾಸಕ ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಇದು ನಿಜವೋ ಸುಳ್ಳೊ ಎಂಬುದನ್ನು ಶಾಸಕರೇ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧೆ – ಸಿದ್ದರಾಮಯ್ಯ ಅಧಿಕೃತ ಘೋಷಣೆ

    ಮಾಗಡಿ ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮಂಜುನಾಥ್ ಶಾಸಕರಾಗಿ ಆಯ್ಕೆಯಾದಾಗ ಯೋಗೇಶ್ವರ್ ಬಳಿ ಮಾತನಾಡಿದ್ದರು. ಬಾಲಕೃಷ್ಣರನ್ನು ಬಿಜೆಪಿಗೆ ಕರೆಸಿ, ನಾನೂ ಬಿಜೆಪಿಗೆ ಬರುತ್ತೇನೆ ಎಂದಿದ್ದಾರಂತೆ. ಬಾಲಕೃಷ್ಣ ಲೋಕಸಭಾ ಚುನಾವಣೆಗೆ ನಿಲ್ಲಲಿ, ನಾನು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಸಿಪಿ ಯೋಗೇಶ್ವರ್ ನನ್ನ ಬಳಿ ಚರ್ಚಿಸಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣ ಆರೋಪಿಸಿದ್ದಾರೆ. ಅಲ್ಲದೇ ಎ.ಮಂಜುನಾಥ್ ಭಯದಿಂದ ಜೆಡಿಎಸ್‍ನಲ್ಲಿದ್ದಾರೆಯೇ ಹೊರತು ಜೆಡಿಎಸ್ ಮೇಲಿನ ಗೌರವದಿಂದಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ

    ಬಾಲಕೃಷ್ಣ ಆರೋಪಕ್ಕೆ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದ್ದಾರೆ. ಹೌದು ನನಗೆ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ ಆದರೆ ಬಾಲಕೃಷ್ಣ ರೀತಿ ಮಣ್ಣು ತಿನ್ನುವ ಕೆಲಸ ನಾನು ಮಾಡಲಿಲ್ಲ. ಅವರ ಹಾಗೆ 10 ಕೋಟಿಗೆ ತಲೆಮಾರಿಕೊಳ್ಳುವ ಕೆಲಸ ಮಾಡಲಿಲ್ಲ. ಮೈತ್ರಿ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯೋಗೇಶ್ವರ್ ಅವರೇ ನನ್ನನ್ನು ಭೇಟಿ ಆಗಿದ್ದರು. ಪಕ್ಷಕ್ಕೆ ಆಹ್ವಾನಿಸಿದ್ರು, ಆಗ ನಾನು ಅದನ್ನು ರಿಜೆಕ್ಟ್ ಮಾಡಿದ್ದೆ. ನಾನು ಮಾಜಿ ಶಾಸಕರ ರೀತಿ ಸೇಲ್ ಆಗೋ ಗಿರಾಕಿ ಅಲ್ಲ. ಬೇಕಿದ್ರೆ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ ಎಂದು ಬಾಲಕೃಷ್ಣಗೆ ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ

    ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ

    – ಹೋಂ ಕ್ವಾರಂಟೈನ್ ಆದ ಶಾಸಕ

    ರಾಮನಗರ: ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ ಶುರುವಾಗಿದೆ.

    ಶಾಸಕ ಎ.ಮಂಜುನಾಥ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಮತ್ತೋರ್ವ ಸ್ನೇಹಿತ ಒಕ್ಕಲಿಗರ ಸಂಘದ ನಿರ್ದೇಶಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಪಾಸಿಟಿವ್ ಬಂದಿರುವ ಇಬ್ಬರು ಕೂಡ ಶಾಸಕರ ಜೊತೆಗಿದ್ದವರು, ಈ ಹಿನ್ನೆಲೆಯಲ್ಲಿ ಎ.ಮಂಜುನಾಥ್ ಅವರು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಶಾಸಕರ ಆಪ್ತ ಕಾರ್ಯದರ್ಶಿಗೆ ಬೆಂಗಳೂರಿನ ರಾಜರಾಜೇಶ್ವರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ ತಾನು ಹೋಂ ಕ್ವಾರಂಟೈನ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ನಾಳೆ ಶಾಸಕರ ಪರೀಕ್ಷಾ ವರದಿ ಬರುವ ಸಾಧ್ಯತೆಯಿದೆ. ಜೊತೆಗೆ ನಾನು ಕ್ವಾರಂಟೈನ್ ಆಗುತ್ತಿದ್ದು, ಜನರು ನನ್ನನ್ನು ದೂರವಾಣಿ ಮೂಲಕ ಸಂಪರ್ಕ ಮಾಡಬಹುದು ಎಂದು ಹೇಳಿದ್ದಾರೆ.

  • ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು- ಹಿರೇಮಠ್‍ಗೆ ಶಾಸಕ ಮಂಜುನಾಥ್ ಪ್ರಶ್ನೆ

    ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು- ಹಿರೇಮಠ್‍ಗೆ ಶಾಸಕ ಮಂಜುನಾಥ್ ಪ್ರಶ್ನೆ

    – ಜಾಗ ಒತ್ತುವರಿಯಾಗಿದ್ದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ
    – ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಗಲಾಟೆ ಮಾಡುವುದೇಕೆ?

    ರಾಮನಗರ: ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಅವರನ್ನೊಳಗೊಂಡ ತಂಡ ಕೇತಗಾನಹಳ್ಳಿಗೆ ಬಂದು ಪ್ರಕ್ಷುಬ್ದ ವಾತಾವರಣ ನಿರ್ಮಿಸಿದೆ ಎಂದು ಶಾಸಕ ಎ.ಮಂಜುನಾಥ್ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಲೀಕತ್ವದ ಆಸ್ತಿ ಬಗ್ಗೆ ಹಿರೇಮಠ ಅಲ್ಲದೆ, ಹಲವರು ತನಿಖೆ ನಡೆಸಿದ್ದಾರೆ. ಪ್ರಪಂಚದಲ್ಲಿ ನಡೆಯದ್ದು ಕೇತಗಾನಹಳ್ಳಿಯಲ್ಲಿ ನಡೆದಿದೆ ಎಂಬ ಚರ್ಚೆ, ತನಿಖೆಗಳು ನಡೆದಿವೆ. ಈ ಮೂಲಕ ಗ್ರಾಮಸ್ಥರಲ್ಲೇ ತಂದಿಕ್ಕುವ ಕೆಲಸ ಮಾಡಿದ್ದು, ಗುಂಪುಗಳಾಗಿ ಒಡೆದಿದ್ದಾರೆ. ಏಕೆ ಕೇತಗಾನಹಳ್ಳಿಗೆ ಬಂದಿರಿ, ಕೋರ್ಟ್ ಹೇಳಿತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಚ್‍ಡಿಕೆ, ಡಿ.ಸಿ.ತಮ್ಮಣ್ಣಗೆ ಮಾನ ಮರ್ಯಾದೆ ಇದ್ದರೆ ಭೂಕಬಳಿಕೆ ಜಾಗವನ್ನ ಮರಳಿಸಲಿ: ಹಿರೇಮಠ್

    ಬೀದಿ ನಾಯಿ, ಸಾಕು ನಾಯಿ ಅಂತೀರಲ್ಲ ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು, ನಿಮಗಿಂತ ಮಾತನಾಡಲು ನಮಗೂ ಬರುತ್ತೆ. ಬೇರೆ ಊರಿನಿಂದ ಬಂದ ನೀವೇ ದೊಣ್ಣೆ ಹಿಡಿದು ನಿಂತಿದ್ದಿರಿ. ಹೀಗಿರುವಾಗ ಗ್ರಾಮಸ್ಥರು ಸುಮ್ಮನಿರಬೇಕಾ, ಕನಿಷ್ಟ ಊರಿನ ಹಿರಿಯರನ್ನೂ ಕೇಳದೆ ಊರಿಗೆ ನುಗ್ಗಿದ್ದೀರಿ ಎಂದು ಎಸ್.ಆರ್.ಹಿರೇಮಠ ಹಾಗೂ ರವಿಕೃಷ್ಣಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    ಒತ್ತುವರಿಯಾಗಿದೆ, ಅವ್ಯವಹಾರವಾಗಿದೆ ಎಂದರೆ ಕೇಳಲು ಕೋರ್ಟ್ ಗಳಿವೆ. ನೀವು ಯಾಕೆ ಇಲ್ಲಿಗೆ ಬಂದಿರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಡಾಕ್ಯುಮೆಂಟ್ ಆಗಬೇಕು, ಪ್ರಚಾರ ಪಡೆಯಬೇಕು ಸುದ್ದಿಯಾಗಬೇಕೆಂದು ಇಲ್ಲಿಗೆ ಬಂದಿದ್ದೀರಿ. ಸುಖಾ ಸುಮ್ಮನೆ ನಮ್ಮ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿದ್ದೀರಿ, ನಮ್ಮ ಕಾರ್ಯಕರ್ತರ ಮೇಲೆ ಆರೋಪ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

    ಎಚ್‍ಡಿಕೆ ಬಳಿ 46.27 ಎಕರೆ ಜಾಗವಿದೆ, ಸರಿಯಾಗಿ ಅಳತೆ ಮಾಡಿದರೆ, ಇನ್ನೂ ಎರಡು ಎಕರೆ ಸರ್ಕಾರ ನೀಡಬೇಕು. ಜಿ.ಮಾದೇಗೌಡರ ಹೋರಾಟದಿಂದ ನಾಲ್ಕುವರೆ ಎಕರೆ ಹೆಚ್ಚುವರಿ ಇದ್ದದ್ದನ್ನು ಬಿಟ್ಟಿದ್ದಾರೆ. ಅದನ್ನು ಬಿಡದಿ ಸ್ಮಶಾನಕ್ಕೆ ನೀಡಿದ್ದೇವೆ. 4.5 ಎಕರೆ ಜಾಗವನ್ನು ಬಿಟ್ಟುಕೊಡಲು ಆದೇಶ ಮಾಡಲಾಗಿದೆ, ಡಿ.ಸಿ.ತಮ್ಮಣ್ಣ ಅವರು ಬಿಟ್ಟು ಕೊಟ್ಟಿದ್ದಾರೆ. ಒಂದು ವೇಳೆ ಒತ್ತುವರಿಯಾಗಿದ್ದರೆ, ಕಂದಾಯ ಇಲಾಖೆಯವರನ್ನು ಯಾಕೆ ಮರಳಿ ನೀಡಿಲ್ಲ ಎಂದು ಕೇಳಿ ಎಂದು ಕಿಡಿಕಾರಿದರು.

    ಸರ್ಕಾರಿ ಜಾಗ, ಗೋಮಾಳ ಇದ್ದರೆ ಬಿಟ್ಟುಕೊಡಲು ಕುಮಾರಸ್ವಾಮಿ ಸಿದ್ಧರಿದ್ದಾರೆ. ಡಿ.ಸಿ.ತಮ್ಮಣ್ಣ ಅವರು 200 ಎಕರೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಬೆಂಗಳೂರಿಗೆ ಹತ್ತಿರವಿರುವ ಜಾಗದಲ್ಲಿ ಒತ್ತುವರಿ ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಗಲಾಟೆ ಮಾಡುವ ಉದ್ದೇಶದಿಂದಲೇ ಅವರು ಗ್ರಾಮಕ್ಕೆ ಬಂದಿದ್ದಾರೆ. ಎಚ್‍ಡಿಕೆ ಒತ್ತುವರಿ ಮಾಡಿದ್ದಾರೆ ಎಂದು ಹೇಳುವಂತೆ ಬಲವಂತವಾಗಿ ಕೇಳಿದ್ದಾರೆ, ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳನ್ನು ಎಚ್ಡಿಕೆ ಮನೆಗೆ ಕರೆದುಕೊಂಡು ಇಟ್ಕೊಂಡಿದ್ದಾರಾ, ಅಧಿಕಾರಿಗಳು ಬಂದು ಪರಿಶೀಲನೆ ನಡೆಸಲಿ, ಸರ್ಕಾರಿ ಖರಾಬು, ಗೋಮಾಳ ಇದೆ ಎಂದು ಸಾಬೀತಾದರೆ ಬಿಡಲು ಸಿದ್ಧರಿದ್ದಾರೆ ಎಂದರು.

  • ಎಸ್‍ಪಿ ವಿರುದ್ಧ ಡಿಕೆ ಸುರೇಶ್ ಮತ್ತೆ ಗರಂ: ಡಿಸಿ- ಶಾಸಕ ಮಂಜುನಾಥ್ ಮಾತಿನ ಚಕಮಕಿ

    ಎಸ್‍ಪಿ ವಿರುದ್ಧ ಡಿಕೆ ಸುರೇಶ್ ಮತ್ತೆ ಗರಂ: ಡಿಸಿ- ಶಾಸಕ ಮಂಜುನಾಥ್ ಮಾತಿನ ಚಕಮಕಿ

    ರಾಮನಗರ: ರಾಮನಗರದ ಎಸ್‍ಪಿ ಅನೂಪ್ ಶೆಟ್ಟಿ ವಿರುದ್ಧ ಕಳೆದ ನವೆಂಬರ್‌ನಲ್ಲಿ ಗರಂ ಆಗಿ ವಾರ್ನ್ ನೀಡಿದ್ದ ಸಂಸದ ಡಿ.ಕೆ.ಸುರೇಶ್ ಇಂದು ಕೂಡ ಗರಂ ಆಗಿದ್ದಲ್ಲದೇ, ಸಭೆಗೆ ಬರುವಂತೆ ಹೇಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಪ್ರಸಂಗ ರಾಮನಗರದ ಜಿಲ್ಲಾ ಪಂಚಾಯತ್‍ನಲ್ಲಿ ನಡೆಯಿತು.

    ಒಂದೆಡೆ ಎಸ್‍ಪಿ ವಿರುದ್ಧ ಸಂಸದ ಸುರೇಶ್ ಗರಂ ಆಗಿದ್ದರೆ, ಅದೇ ಸಭೆಯಲ್ಲಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ವಿರುದ್ಧ ಕಿಡಿಕಾರಿದರು. ಅಷ್ಟೇ ಅಲ್ಲದೆ ದಿಶಾ ಸಭೆಯಲ್ಲಿಯೇ ನೇರಾನೇರವಾಗಿ ಮಾತಿನ ಚಕಮಕಿ ಸಹ ನಡೆಯಿತು. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಕರೆದಿದ್ದ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಕಾದಾಟಕ್ಕೆ ದಿಶಾ ಸಭೆ ವೇದಿಕೆಯಾಗಿತ್ತು.

    ಜಿಲ್ಲಾಡಳಿತದಿಂದ ಜನಪ್ರತಿನಿಧಿಗಳನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ನಡೆಯುವ ಕೆಲಸಗಳನ್ನು ಸಹ ತಮ್ಮ ಗಮನಕ್ಕೆ ತರದೇ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ತಮ್ಮ ಅನುದಾನದಲ್ಲಿ ಕೆಲಸ ಮಾಡುತ್ತಿರುವುದಲ್ಲ ಅದರ ಬಗ್ಗೆ ಮಾಹಿತಿ ನೀಡಬೇಕೆಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಎ.ಮಂಜುನಾಥ್ ಅಸಮಧಾನ ವ್ಯಕ್ತಪಡಿಸಿದರು.

    ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು, ನಾನು ಹೇಳಿರುವುದನ್ನು ತಿರುಚಿ ಹೇಳುವುದಲ್ಲ. ಗದರಿ ಮಾತನಾಡಬೇಡಿ ಎಲ್ಲವನ್ನೂ ತಮ್ಮ ಗಮನಕ್ಕೆ ತಂದು ಕೆಲಸ ಮಾಡಬೇಕೆಂದೇನಿಲ್ಲ ಎಂದು ಪ್ರತ್ಯುತ್ತರ ನೀಡಿದರು. ಇಬ್ಬರ ಮಾತಿನ ಚಕಮಕಿ ನೋಡಿ ಸಂಸದ ಸುರೇಶ್ ಕೂಡ ಕೆಲಕಾಲ ತಬ್ಬಿಬ್ಬಾದರು.

    ಸಭೆಗೆ ಹಾಜರಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಸಂಸದ ಡಿ.ಕೆ.ಸುರೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಾಯಿಸಿದರು. ಅಧಿಕಾರಿಗಳಿಗೆ ಸಭೆಯಲ್ಲಿಯೇ ಚಳಿ ಬಿಡಿಸುವ ಮೂಲಕ ಸಂಸದ ಖಡಕ್ ಕ್ಲಾಸ್ ತೆಗೆದುಕೊಂಡರು.

    2019ರ ನವೆಂಬರ್‌ನಲ್ಲಿ ನಡೆದ ದಿಶಾ ಸಭೆಗೆ ಗೈರಾಗಿದ್ದ ರಾಮನಗರ ಎಸ್‍ಪಿ ಅನೂಪ್ ಎ ಶೆಟ್ಟಿ ಇಂದು ಕೂಡ ಗೈರಾಗಿದ್ದರು. ಹೀಗಾಗಿ ಎಸ್‍ಪಿ ಅನೂಪ್ ಶೆಟ್ಟಿ ವಿರುದ್ಧ ಗರಂ ಆದ ಡಿ.ಕೆ.ಸುರೇಶ್ ಅವರು, ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿ ಇದೆ ಅಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಹೋಟೆಲ್, ಅಂಗಡಿಗಳನ್ನು ರಾತ್ರಿ 11 ಗಂಟೆ ನಂತರ ಬಂದ್ ಮಾಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಎಸ್‍ಪಿಯನ್ನ ಸಭೆಗೆ ಕರೆಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಸ್ವತಃ ಜಿಲ್ಲಾಧಿಕಾರಿಯೇ ಎಸ್‍ಪಿಗೆ ಕರೆ ಮಾಡಿ ಬರುವಂತೆ ಮನವಿ ಮಾಡಿದರೂ ಎಸ್‍ಪಿ ಅನೂಪ್ ಶೆಟ್ಟಿ ಮಾತ್ರ ಸಭೆಗೆ ಬರಲೇ ಇಲ್ಲ.

    ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಲು ಕರೆಯಲಾಗಿದ್ದ ದಿಶಾ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಮಾತಿನ ಸಮರಕ್ಕೂ ವೇದಿಕೆಯಾಯಿತು. ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಸಮನ್ವಯತೆ ಇಲ್ಲ ಎಂಬುದು ಎದ್ದು ಕಾಣುತ್ತಿತ್ತು.

  • ನಾನ್ ಹೊಡೆಯಲ್ಲ, ಜನರ ಕೈಯಿಂದ ಮೆಟ್ಟಲ್ಲಿ ಹೊಡಸ್ತೀನಿ: ಜೆಡಿಎಸ್ ಶಾಸಕನ ಅವಾಜ್

    ನಾನ್ ಹೊಡೆಯಲ್ಲ, ಜನರ ಕೈಯಿಂದ ಮೆಟ್ಟಲ್ಲಿ ಹೊಡಸ್ತೀನಿ: ಜೆಡಿಎಸ್ ಶಾಸಕನ ಅವಾಜ್

    ರಾಮನಗರ: ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಅಧಿಕಾರಿಗಳಿಗೆ ತಹಶೀಲ್ದಾರ್ ಮುಂದೆಯೇ ಕೆಳಮಟ್ಟದ ಪದಗಳನ್ನು ಬಳಸಿ ಸಭೆಯಲ್ಲಿ ಅವಾಜ್ ಹಾಕಿದ್ದಾರೆ.

    ಮಾಗಡಿಯ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಕೆಲ ಕಾರ್ಯಕರ್ತರು ತಹಶೀಲ್ದಾರ್, ಅಧಿಕಾರಿಗಳು ತಮ್ಮ ಕೆಲಸಗಳನ್ನ ಮಾಡಿಕೊಡುತ್ತಿಲ್ಲ. ಸುಮ್ಮನೆ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ಗರಂ ಆದ ಶಾಸಕರು ತಹಸೀಲ್ದಾರ್‍ಗೆ ಸ್ಥಳದಲ್ಲೇ ವಾರ್ನಿಂಗ್ ಕೊಟ್ಟು, ಕೆಲಸ ಮಾಡಿಕೊಡದಿದ್ರೆ ಜನರನ್ನ ಕರೆತಂದು ಅವರ ಕೈಯಿಂದಲೇ ಮೆಟ್ಟಿನಲ್ಲಿ ಹೊಡೆಸುತ್ತೇನೆ. ನಾನ್ ಹೊಡೆಯುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ.

    ತಹಶೀಲ್ದಾರ್ ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟನೆ ನೀಡಿದ್ರೂ ಅಧಿಕಾರದ ದರ್ಪ ಮರೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನಪ್ರತಿನಿಧಿಗಳು ತಮ್ಮ ನಾಲಿಗೆ ಮೇಲೆ ಹಿಡಿತ ಹೊಂದಿರಬೇಕು. ಕೈಯಲ್ಲಿ ಅಧಿಕಾರವಿದೆ ಎಂದ ಮಾತ್ರಕ್ಕೆ ಅಧಿಕಾರಿಗಳಿಗೆ ಕೆಳಮಟ್ಟದ ಪದ ಬಳಸೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.