Tag: ಎ ಮಂಜು

  • ಹಾಸನದಲ್ಲಿ ಮಾತ್ರ ಹಾರ್ಟ್ ಅಟ್ಯಾಕ್ ಕೇಸ್ ಜಾಸ್ತಿ ಆಗಿಲ್ಲ, ಇಡೀ ದೇಶದಲ್ಲಿ ಆಗ್ತಿದೆ: ಎ.ಮಂಜು

    ಹಾಸನದಲ್ಲಿ ಮಾತ್ರ ಹಾರ್ಟ್ ಅಟ್ಯಾಕ್ ಕೇಸ್ ಜಾಸ್ತಿ ಆಗಿಲ್ಲ, ಇಡೀ ದೇಶದಲ್ಲಿ ಆಗ್ತಿದೆ: ಎ.ಮಂಜು

    ಬೆಂಗಳೂರು: ಹಾಸನದಲ್ಲಿ (Hassan) ಮಾತ್ರವಲ್ಲ ಇಡೀ ದೇಶದಲ್ಲಿ ಹೃದಯಾಘಾತದಿಂದ (Heart Attack) ಸಾವು ಪ್ರಕರಣ ಆಗುತ್ತಿದೆ. ಕೇವಲ ಹಾಸನದಲ್ಲಿ ಮಾತ್ರ ಆಗುತ್ತಿದೆ ಎಂದು ಬಿಂಬಿಸಬೇಡಿ ಎಂದು ಮಾಜಿ ಸಚಿವ, ಶಾಸಕ ಎ.ಮಂಜು (A Manju) ಮನವಿ ಮಾಡಿದ್ದಾರೆ.

    ಹಾಸನದಲ್ಲಿ ಹೆಚ್ಚು ಹಾರ್ಟ್ ಅಟ್ಯಾಕ್ ಕೇಸ್ ಆಗುತ್ತಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೃದಯಾಘಾತದಿಂದ ಸಾವು ಕೇವಲ ಹಾಸನದಲ್ಲಿ ಮಾತ್ರ ಅಲ್ಲ, ಇಡೀ ದೇಶದಲ್ಲಿ ಆಗುತ್ತಿದೆ. ನೀವು ಟಿವಿಯವರು ಕೇವಲ ಹಾಸನದಲ್ಲಿ ಮಾತ್ರ ಆಗುತ್ತಿದೆ ಅಂತ ತೋರಿಸುತ್ತಿದ್ದೀರಾ. ಬೇರೆ ಜಿಲ್ಲೆ ಯಾಕೆ ತೋರಿಸುತ್ತಿಲ್ಲ? ನಿಮ್ಮನ್ನ ಜನ ಬುಕ್ ಮಾಡಿಕೊಂಡು ಹಾಸನ ಜನರನ್ನು ತೋರಿಸಿಕೊಂಡು ಮಾರ್ಕೆಟ್ ಮಾಡ್ತಿದ್ದಾರೆ ಎಂಬುದು ನನಗೆ ಅನುಮಾನ ಇದೆ.ಇದನ್ನ ದಯವಿಟ್ಟು ಮಾಡಬೇಡಿ. ಹೃದಯಾಘಾತ ಬರೀ ಹಾಸನದಲ್ಲಿ ಯಾಕೆ ತೊರಿಸುತ್ತೀರಾ? ಬೆಂಗಳೂರು ಮೈಸೂರು ಯಾಕೆ ತೋರಿಸಲ್ಲ? ಬರೀ ಹಾಸನದ ಮೇಲೆ ಯಾಕೆ ಗೂಬೆ ಕೂರಿಸುತ್ತೀರಾ? 100% ಬೇರೆ ಕಡೆಯೂ ಆಗಿದೆ, ನಿಮಗೆ ನಂಬರ್ ಗೊತ್ತಿಲ್ಲ ಅಷ್ಟೇ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ನಂತೆ ಕಲಬುರಗಿಯಲ್ಲೊಂದು ಕೊಲೆ – ಸೆಕ್ಸ್‌ಗಾಗಿ ಮೆಸೇಜ್ ಮಾಡಿದ್ದವನ ಹತ್ಯೆಗೈದಿದ್ದ ಲಿವ್ ಇನ್ ಪ್ರೇಮಿಗಳು ಅರೆಸ್ಟ್

    ಹಾಸನದಲ್ಲಿ ಸಾವನ್ನಪ್ಪಿರೋರಲ್ಲಿ ಇಬ್ಬರೇ ಪೋಸ್ಟ್ ಮಾರ್ಟಮ್ ಮಾಡಿಕೊಂಡಿದ್ದಾರೆ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಯಾವ ಹೃದಯಾಘಾತವೂ ಆಗೋದಿಲ್ಲ. ಇನ್ನೊಂದು ಕಡೆ ಕೋವಿಡ್ ಇಂಜೆಕ್ಷನ್‌ನಿಂದ ಬಂದಿದೆ ಅಂತ ಮುಖ್ಯಮಂತ್ರಿಗಳು ಹೇಳುತ್ತಾರೆ. ಅಲ್ಲಾ ರೀ ಮೋದಿ ಇಂಜೆಕ್ಷನ್ ತಯಾರು ಮಾಡ್ತಾರಾ? ಲ್ಯಾಬ್‌ನಲ್ಲಿ ಇಂಜೆಕ್ಷನ್ ತಯಾರು ಮಾಡುತ್ತಾರೆ. ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಅಂತ ನಂಗೆ ರಿಪೋರ್ಟ್ ಬಂದಿದೆ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಎಲ್ಲರೂ ಚೆನ್ನಾಗಿ ಇರುತ್ತಾರೆ. ಜಯದೇವ ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಿ ಯಾರೋ ಹೇಳಿದ್ದನ್ನ ತೋರಿಸಬೇಡಿ. ಎಲ್ಲಾ ಜಿಲ್ಲೆಗಳಲ್ಲೂ ಹೃದಯಾಘಾತವಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

    ಮಾಂಸ ತಿನ್ನೋರು ಎಲ್ಲಿ ಜಾಸ್ತಿ ಇದ್ದಾರೆ ಅಲ್ಲಿ ಜಾಸ್ತಿಯಾಗಿದೆ ಎಂದು ಮಾಧ್ಯಮದವರು ತೋರಿಸುತ್ತಿದ್ದೀರಿ, ದಯವಿಟ್ಟು ಹಾಗೆ ತೋರಿಸಬೇಡಿ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಎಲ್ಲರಿಗೂ ಒಳ್ಳೆಯದು ಎಂದು ಮನವಿ ಮಾಡಿದರು.  ಇದನ್ನೂ ಓದಿ: ಯಾದಗಿರಿ | ಕಲುಷಿತ ನೀರು ಸೇವನೆ ಶಂಕೆ – ಮೂವರು ಸಾವು, 20 ಮಂದಿ ಅಸ್ವಸ್ಥ

  • ನಮ್ಮ ತಂದೆ ಯಾವ್ದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಶಾಸಕ ಮಂಥರ್ ಗೌಡ

    ನಮ್ಮ ತಂದೆ ಯಾವ್ದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಶಾಸಕ ಮಂಥರ್ ಗೌಡ

    – ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ ಎಂದಿದ್ದ ಎ. ಮಂಜು

    ಮಡಿಕೇರಿ: ಜಾತಿ ಜನಗಣತಿ ವರದಿ ಜಾರಿಗೆ ತರುವ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲೇ ಆಂತಕರಿಕ ಕಚ್ಚಾಟ ಹೆಚ್ಚಾಗಿದೆ. ಪ್ರತಿಪಕ್ಷಗಳಿಂದಲೂ ವಾಗ್ದಾಳಿ ನಡೆಯುತ್ತಿದೆ. ಈ ನಡುವೆ ಜಾತಿ ಜನಗಣತಿ ವರದಿ ಜಾರಿಯಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಕ್ಕೂ ಸಿದ್ಧ ಎಂದು ಶಾಸಕ ಎ. ಮಂಜು (A Manju) ಹೇಳಿದ್ದಾರೆ. ಆದ್ರೆ ಅವರ ಪುತ್ರ ಮಡಿಕೇರಿಯ ಕಾಂಗ್ರೆಸ್‌ ಶಾಸಕ ಮಂಥರ್‌ ಗೌಡ (Mantar Gowda) ಯಾವುದೇ ಕಾರಣಕ್ಕೂ ನಮ್ಮ ತಂದೆ ರಾಜೀನಾಮೆ ಕೊಡಲ್ಲ ಅಂದಿದ್ದಾರೆ.

    ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ಜಾತಿ ಜನಗಣತಿ (Caste Census) ವಿಚಾರವಾಗಿ ಮೊನ್ನೆ ಉಪ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಜಾತಿ ಜನಗಣತಿ ಸರ್ವೇ ಇನ್ನೊಂದು ಬಾರಿ ಮಾಡಲಿ ಎಂಬ ಚರ್ಚೆಯಾಗಿದೆ. ಬಹಳಷ್ಟು ಮಂದಿ ನಮ್ಮನೆಗೆ ಬಂದಿಲ್ಲ ಅಂತಾರೆ, ಆದ್ದರಿಂದ ಮರು ಸರ್ವೆಗೆ ಸಿಎಂ ಒಪ್ಪಿಗೆ ಸೂಚಿಸುತ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    ನಮ್ಮ ತಂದೆ ಅವರು ಈ ವಿಚಾರವಾಗಿ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಮ್ಮ ತಂದೆಯ ಪಕ್ಷ ಬೇರೆ ಇದೆ. ಅದಕ್ಕೆ ನಾವು ನಮ್ಮ ಪಕ್ಷವನ್ನು ಬಿಟ್ಟು ಕೋಡೋಕೆ ಆಗಲ್ಲ. ರಾಜೀನಾಮೆ ವಿಚಾರ ಅವರ ಅನಿಸಿಕೆ… ಅವರ ಪಾರ್ಟಿ.. ಅವರ ನಿಲುವು ಇರಬಹುದು. ಅದಕ್ಕೂ ನಮಗೂ ಸಂಬಂಧ‌ ಇಲ್ಲ. ನಮ್ಮ ತಂದೆ ಅವರು ಹಿರಿಯ ರಾಜಕಾರಣಿಗಳು, ಮಕ್ಕಳ ಮಾತು ಯಾವತ್ತೂ ಕೇಳುವುದಿಲ್ಲ. ಒಟ್ಟಿನಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆ ಕೊಡಲ್ಲ. ಜಾತಿ ಜನಗಣತಿ ವರದಿ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನುಡಿದಿದ್ದಾರೆ.

    ಶಾಸಕ ಎ. ಮಂಜು ಹೇಳಿದ್ದೇನು?
    ಈ ಸರ್ಕಾರಕ್ಕೆ ಜಾತಿಗಣತಿ ಮಾಡಲು ಅಧಿಕಾರ‌ ಕೊಟ್ಟವರು ಯಾರು? ಜಾತಿಗಣತಿ ಮಾಡಬೇಕಿರೋದು ಕೇಂದ್ರ ಸರ್ಕಾರ. ರಾಜ್ಯ ಯಾಕೆ ಜನಗಣತಿ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ಮಾಡಿರೋದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ.ಇಂತಹ ಸಮೀಕ್ಷೆಯಲ್ಲಿ ಜನರ ಸಾಮಾಜಿಕ, ಶೈಕ್ಷಣಿಕ ವರದಿ ಬಗ್ಗೆ ಅಂಕಿಅಂಶಗಳನ್ನ ಕೊಡಬೇಕು. ಅದು ಬಿಟ್ಟು ಇವರು ಯಾಕೆ ಜಾತಿಗಣತಿ ಅಂಕಿಅಂಶಗಳನ್ನ ಕೊಡ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದೆ.ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ.ಇದು ಸರಿಯಲ್ಲ.  ಇದನ್ನೂ ಓದಿ: ಕೋಮುದ್ವೇಷ ಪ್ರಚೋದನಾ ಭಾಷಣ ಆರೋಪ; ಆಂದೋಲಾ ಶ್ರೀ ವಿರುದ್ಧ FIR ದಾಖಲು

    ಸಿದ್ದರಾಮಯ್ಯ ಅವರು ಈ ಜಾತಿಗಣತಿ ವರದಿ ಅಂಗೀಕಾರ ಮಾಡಬಾರದು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ‌ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಈ ಬಗ್ಗೆ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯ ಆದ್ರೆ ನಾವು ಸಹಿಸೊಲ್ಲ. ನನಗೆ ಸಮುದಾಯದ ಮುಖ್ಯ ಶಾಸಕ ಸ್ಥಾನ ಮುಖ್ಯ ಅಲ್ಲ. ಸಮುದಾಯಕ್ಕಾಗಿ ಬೇಕಿದ್ರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ‌ಕೊಡೋಕೆ ಸಿದ್ಧ.

    ನನ್ನ ಮನೆಗೆ ಬಂದು ಸಮೀಕ್ಷೆಯೇ ಮಾಡಿಲ್ಲ. ಇದಕ್ಕೇನು ಹೇಳೋದು. ಜಯಪ್ರಕಾಶ್ ಹೆಗ್ಡೆ ಇದನ್ನ ಜಾತಿ ಸಮೀಕ್ಷೆ ಅಂತ ಹೇಳಲಿ ನೋಡೋಣ.ಡಿಕೆಶಿವಕುಮಾರ್ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಡಬಾರದು. ಇವತ್ತಿನ ‌ಕ್ಯಾಬಿನೆಟ್‌ನಲ್ಲಿ ಇದನ್ನ ಅಂಗೀಕಾರ ‌ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಶಾಸಕ ಎ ಮಂಜು ಎಚ್ಚರಿಕೆ ಕೊಟ್ಟಿದ್ದರು.  ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ

  • ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    – ವರದಿ ಜಾರಿಯಾದ್ರೆ ಉಗ್ರ ಹೋರಾಟ; ಸರ್ಕಾರಕ್ಕೆ ಎಚ್ಚರಿಕೆ

    ಬೆಂಗಳೂರು: ಜಾತಿ ಜನಗಣತಿ (Caste Census) ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಸಿಎಂ ನನಗೆ ಜಾತಿ ಜನಗಣತಿ ಮಾಡಲು ಅಧಿಕಾರ ಇದೆ ಎಂದು ಹೇಳಲಿ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಎ. ಮಂಜು (A Manju) ಸವಾಲ್‌ ಹಾಕಿದ್ದಾರೆ.

    ಜಾತಿ ಜನಗಣತಿ ವಿಚಾರವಾಗಿ ʻಪಬ್ಲಿಕ್‌ ಟಿವಿʼ ಜೊತೆಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಜಾತಿ ಜನಗಣತಿ ಅಲ್ಲ ಇದು.. ಇವರಿಗೆ ಜಾತಿ ಜನಗಣತಿ ಮಾಡಲು ಅಧಿಕಾರ ಇಲ್ಲ. ಸಿಎಂ ನನಗೆ ಜಾತಿ ಜನಗಣತಿ ಮಾಡಲು ಅಧಿಕಾರ ಇದೆ ಎಂದು ಹೇಳಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮ್‌ ಮಾಹಿತಿ ಲೀಕ್‌ – ಗಂಭೀರ್‌ ಆಪ್ತ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದ ಬಿಸಿಸಿಐ

    ಈ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅಧಿಕಾರ ಕೊಟ್ಟವರು ಯಾರು? ಜಾತಿ ಜನಗಣತಿ ಮಾಡಬೇಕಿದ್ದು ಕೇಂದ್ರ ಸರ್ಕಾರ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆಯಲ್ಲಿ ಜಾತಿಗಣತಿ ಯಾಕೆ ಮಾಡಿದ್ದು ಯಾಕೆ? ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇರೋದಕ್ಕೆ ಇವೆಲ್ಲ ಮಾಡ್ತಿದ್ದಾರೆ. ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ. ಇದು ಸರಿಯಲ್ಲ, ಈ ಜಾತಿ ಜನಗಣತಿ ವರದಿ ಅಂಗೀಕಾರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಎಫೆಕ್ಟ್‌; ಕಾರಿನ ಮೇಲೆ ಬಿದ್ದ ಮರದ ಕೊಂಬೆ – ಬೈಕ್‌ ಸವಾರ ಜಸ್ಟ್‌ ಮಿಸ್‌

    ಈ ಜಾತಿ ಜನಗಣತಿ ವಿರುದ್ಧ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯ ಆದ್ರೆ ನಾವು ಸಹಿಸಲ್ಲ. ನನಗೆ ಸಮುದಾಯದ ಮುಖ್ಯ, ಶಾಸಕ ಸ್ಥಾನ ಮುಖ್ಯ ಅಲ್ಲ. ಸಮುದಾಯಕ್ಕಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡೋಕೆ ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

    ನನ್ನ ಮನೆಗೆ ಬಂದು ಸಮೀಕ್ಷೆಯೇ ಮಾಡಿಲ್ಲ. ಇದಕ್ಕೇನು ಹೇಳೋದು? ಜಯಪ್ರಕಾಶ್ ಹೆಗ್ಡೆ ಇದನ್ನ ಜಾತಿ ಸಮೀಕ್ಷೆ ಅಂತ ಹೇಳಲಿ ನೋಡೋಣ. ಡಿಕೆ ಶಿವಕುಮಾರ್ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಡಬಾರದು. ಇವತ್ತಿನ ಕ್ಯಾಬಿನೆಟ್‌ನಲ್ಲಿ ಇದನ್ನ ಅಂಗೀಕಾರ ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ. ಸರ್ಕಾರಕ್ಕೆ ಶಾಸಕ ಎ ಮಂಜು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

  • ತಲಕಾವೇರಿಯಲ್ಲಿ ತೀಥೋದ್ಭವ ಬಳಿಕ ಹಾರಂಗಿ ಜಲಾಶಯಕ್ಕೆ ಎ ಮಂಜು, ಮಂಥರ್ ಗೌಡ ಬಾಗಿನ ಅರ್ಪಣೆ

    ತಲಕಾವೇರಿಯಲ್ಲಿ ತೀಥೋದ್ಭವ ಬಳಿಕ ಹಾರಂಗಿ ಜಲಾಶಯಕ್ಕೆ ಎ ಮಂಜು, ಮಂಥರ್ ಗೌಡ ಬಾಗಿನ ಅರ್ಪಣೆ

    ಮಡಿಕೇರಿ: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಗುರುವಾರ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ನಾಡಿನ ಜನರಿಗೆ ದರ್ಶನ ನೀಡಿದ ಬಳಿಕ ಶುಕ್ರವಾರ ಹಾರಂಗಿ ಜಲಾಶಯಕ್ಕೆ ಅರಕಲಗೂಡು ಶಾಸಕ ಎ.ಮಂಜು (A Manju) ಹಾಗೂ ಮಡಿಕೇರಿ ಶಾಸಕ ಮಂಥರ್ ಗೌಡ (Manthar Gowda) ಬಾಗಿನ ಅರ್ಪಿಸಿದರು.

    ಕೊಡಗಿನ ಹಾರಂಗಿ ಜಲಾಶಯ (Harangi Dam) ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶಾಸಕರಿಬ್ಬರೂ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ. ಜಲಾಶಯದ ಆವರಣದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಶಾಸಕರು ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮೊದಲಿಗೆ ಪೂಜೆ ಸಲ್ಲಿಸಿದರು. ನಂತರ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ವಾದ್ಯಗೋಷ್ಠಿಗಳ ಜೊತೆ ಆಗಮಿಸಿ ಅಣೆಕಟ್ಟೆ ಮೇಲೆ ವ್ಯವಸ್ಥೆ ಮಾಡಿದ್ದ ಮಂಟಪದಲ್ಲಿ ನಿಂತು ಬಾಗಿನ ಸಮರ್ಪಿಸಿದರು.

    ಬಳಿಕ ಮಾತನಾಡಿದ ಶಾಸಕ ಮಂಥರ್ ಗೌಡ, ಕಾವೇರಿ ತೀಥೋದ್ಭವ ಅದ ಬಳಿಕ ಅಲ್ಲಿಂದ ತೀರ್ಥ ತೆಗೆದುಕೊಂಡು ಹಾರಂಗಿಯಲ್ಲಿರೋ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಬರುತ್ತಿದ್ದಾರೆ. ಅರಂತೆ ಇಂದು ಪೂಜೆ ಸಲ್ಲಿಸಿದ್ದೇವೆ. ಕಾವೇರಿ ನದಿಯನ್ನೇ ಅವಲಂಬಿಸಿರುವ ಹಾಸನ ಕೆ.ಆರ್ ನಗರ, ಪಿರಿಯಾಪಟ್ಟಣ, ಮೈಸೂರು ಸೇರಿದಂತೆ ಈ ಭಾಗದ ರೈತರಿಗೆ ಒಳ್ಳೆಯದಾಗಲಿ ಅಂತ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಚುನಾವಣೆ ನೀತಿ ಸಂಹಿತೆ ಕಾರಣದಿಂದ ಪಂಚಮಸಾಲಿ ಮೀಸಲಾತಿ ನಿರ್ಧಾರ ಸಾಧ್ಯವಿಲ್ಲ: ಸಿದ್ದರಾಮಯ್ಯ

    ಇನ್ನೂ 17 ಕಿಮೀ ವರೆಗೆ ಅಷ್ಟೇ ಹಾರಂಗಿ ನೀರು ಕೊಡಗಿನ ಜನರಿಗೆ ಬಳಕೆಯಾಗಿದೆ. ಹೆಚ್ಚಾಗಿ ಮೈಸೂರು, ಹಾಸನ ಭಾಗದ ಜನರಿಗೆ ವರದಾನ ಅಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: MUDA Scam| ಸಿಎಂ ತಕ್ಷಣ ರಾಜೀನಾಮೆ ನೀಡಬೇಕು, ಸಿಬಿಐಗೆ ನೀಡದಿದ್ರೆ ಕೇಸ್‌ ಮುಚ್ಚಿ ಹಾಕ್ತಾರೆ: ಛಲವಾದಿ ನಾರಾಯಣಸ್ವಾಮಿ

  • ಮುಡಾದಲ್ಲಿ ಬರೋಬ್ಬರಿ 5,000 ಕೋಟಿ ಅವ್ಯವಹಾರ ಆಗಿದೆ – ಶಾಸಕ ಎ ಮಂಜು ಹೊಸ ಬಾಂಬ್‌

    ಮುಡಾದಲ್ಲಿ ಬರೋಬ್ಬರಿ 5,000 ಕೋಟಿ ಅವ್ಯವಹಾರ ಆಗಿದೆ – ಶಾಸಕ ಎ ಮಂಜು ಹೊಸ ಬಾಂಬ್‌

    ಮಡಿಕೇರಿ: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಬರೋಬ್ಬರಿ 5,000 ಕೋಟಿ ರೂ. ಅವ್ಯವಹಾರ ಆಗಿದೆ‌ ಎಂದು ಅರಕಲಗೂಡು ಶಾಸಕ ಎ ಮಂಜು (A Manju) ಹೊಸ ಬಂಬ್ ಸಿಡಿಸಿದ್ದಾರೆ.

    ಕೊಡಗಿನ ಕುಶಾಲನಗರದಲ್ಲಿ (Kushalanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಸರಿಯಾಗಿ ತನಿಖೆಯಾಗಿ ಎಲ್ಲವೂ ಹೊರಬರಬೇಕು ಆಗಮಾತ್ರ ನ್ಯಾಯ ಸಿಗಲು ಸಾಧ್ಯ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಬಳಿಕ ಎಫ್ಐಆರ್ ಆಯ್ತು, ಎಫ್ಐಆರ್ ಆದ ಮೇಲೆ ರಾಜೀನಾಮೆ ಕೊಡಬೇಕು ಅಲ್ವಾ? ನಾವು 14 ಸೈಟುಗಳನ್ನು ವಾಪಸ್ ಕೊಡಿ ಎಂದಿರಲಿಲ್ಲ. ಕಳ್ಳನ ಮನಸ್ಸು ಉಳ್ಳುಉಳ್ಳುಗೆ ಅಂದಹಾಗೆ. ಇವರು ಸೈಟು ವಾಪಸ್ ಕೊಟ್ಟಿದ್ದಾರೆ. ಅಂದರೆ ತಪ್ಪು ಮಾಡಿರುವುದು ಸಾಬೀತಾದಂತೆ ಅಲ್ಲವೇ? ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕೂಡ ಅಪರಾಧವಾಗಿದೆ ಅಂತ ಸಾಬೀತಾದಂತೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

    ನಾನು ಲಾಯರ್ ನಂದೂ ಒಂದು ಕಾನೂನಿದೆ ಎನ್ನುತ್ತಿದ್ದವರು ಸಿದ್ದರಾಮಯ್ಯನವರು. ಈ ಹಿಂದೆ ರಾಮಕೃಷ್ಣ ಹೆಗಡೆ, ದೇವೇಗೌಡ್ರು ಅವರ ಮೇಲೆಲ್ಲಾ ಆರೋಪ ಬಂದಿದ್ದವು. ಆಗ ಅವರೆಲ್ಲಾ ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿ, ತಪ್ಪಿಲ್ಲ ಎಂದು ಸಾಬೀತಾದರೆ ಮತ್ತೆ ಸಿಎಂ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ, ಮುಡಾದಲ್ಲಿ 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದಿದ್ದೇ ಕಾಂಗ್ರೆಸ್‌ನವರು: ಅಶೋಕ್

    ಮುಡಾದಲ್ಲಿ ಬರೋಬ್ಬರಿ 5 ಸಾವಿರ ಕೋಟಿ ಅವ್ಯವಹಾರ ಆಗಿದೆ‌. ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು, ನನ್ನ ಹೆಸರಲ್ಲಿ ಸೈಟುಗಳಿದ್ದರೆ, ಆ ಬಗ್ಗೆಯೂ ತನಿಖೆಯಾಗಲಿ. ಯಾವುದೇ ಪಕ್ಷದವರದ್ದು ಇದ್ದರೂ ತನಿಖೆಯಾಗಲಿ. ಜನಸಾಮಾನ್ಯರ ತೆರಿಗೆ ಹಣ ನಷ್ಟವಾಗಬಾರದು ಅಷ್ಟೇ ಎಂದು ಹೇಳಿದ್ದಾರೆ.

  • ಸಿದ್ದರಾಮಯ್ಯ ಹಠ ಮಾಡದೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಎ.ಮಂಜು

    ಸಿದ್ದರಾಮಯ್ಯ ಹಠ ಮಾಡದೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಎ.ಮಂಜು

    ಬೆಂಗಳೂರು: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಶಾಸಕ, ಮಾಜಿ ಸಚಿವ ಎ.ಮಂಜು (A Manju) ಆಗ್ರಹಿಸಿದ್ದಾರೆ.

    ಈ ಬಗ್ಗೆ ಜೆಪಿ ಭವನದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ.ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಮೇಲೆ ರಾಜೀನಾಮೆ ಕೊಡಬೇಕು ಅಂತ ಕಾನೂನಿನಲ್ಲಿ ಇಲ್ಲ. ಆದರೆ ನೈತಿಕತೆ ಅಂತ ಇದೆ. ಲಾಯರ್ ಆಗಿದ್ದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕು. ರಾಜೀನಾಮೆ ಕೊಟ್ಟು ತನಿಖೆ ನಡೆದರೆ ಕ್ಲಿಯರ್ ಆಗಿರುತ್ತದೆ ಅಂತ ವಿಪಕ್ಷಗಳಾದ ನಾವು ರಾಜೀನಾಮೆ ಕೇಳುತ್ತಿದ್ದೇವೆ. ಅವರು ಕೊಡಲ್ಲ ಅಂದರೆ ಕಾನೂನು ಇದೆ. ಅದರ ಪ್ರಕಾರವೇ ಕ್ರಮ ಆಗುತ್ತದೆ ಎಂದರು. ಇದನ್ನೂ ಓದಿ: ನನ್ನ ವಿರುದ್ಧದ ಕೇಸ್ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಬೇಡ: ಕುಮಾರಸ್ವಾಮಿ

    ಕುಮಾರಸ್ವಾಮಿ (HD Kumaraswamy) ಕೇಸ್‌ಗೆ ರಾಜ್ಯಪಾಲರು ಅನುಮತಿ ಕೊಡಲಿಲ್ಲ ಎನ್ನುತ್ತಾರೆ. ಅವರು ಅಧಿಕಾರದಲ್ಲಿ ಇದ್ದಾಗ ನೋಡಿಕೊಳ್ಳಬೇಕಿತ್ತು. ನನಗೆ ಇರುವ ಮಾಹಿತಿ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸ್ಟೇ ಇದೆ. ಅದಕ್ಕೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ ಎನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಹೃದಯಾಘಾತ – ಬೆಳಗಾವಿಯಲ್ಲಿ ಯೋಧ ಸಾವು

    ಸಿಎಂ ಅವರು ಮುಡಾದಲ್ಲಿ (MUDA Scam) 14 ಸೈಟ್ ಪಡೆದಿರೋದು ನಿಜ ಎಂದು ಸಾಬೀತು ಆಗಿದೆ. ಬದಲಾವಣೆ ಸೈಟ್ ಪಡೆದುಕೊಂಡಿದ್ದಾರೆ. 62 ಕೋಟಿ ರೂ. ಅಂತಾನೂ ಹೇಳಿದ್ದಾರೆ. ಸಿಎಂ ಅವರೇ ಒಪ್ಪಿಕೊಂಡ ಮೇಲೆ ಬೇರೆ ಯಾಕೆ ಮಾತನಾಡಬೇಕು. ಕುಮಾರಸ್ವಾಮಿ ಕೇಂದ್ರದ ಜೊತೆ ಸೇರಿ ಸರ್ಕಾರ ಅಸ್ಥಿರ ಮಾಡುತ್ತಿದ್ದಾರೆ ಎಂಬುದು ಅವರ ಭ್ರಮೆ. ಸರ್ಕಾರ ಅಸ್ಥಿರ ಮಾಡುವ ಅವಶ್ಯಕತೆ ನಮಗೆ ಇಲ್ಲ. ಅವರಿಗೆ 135 ಶಾಸಕರನ್ನು ಜನ ಕೊಟ್ಟಿದ್ದಾರೆ. ಅವರು ಅಧಿಕಾರ ಮಾಡಲಿ ಎಂದು ಜನ ಗೆಲ್ಲಿಸಿದ್ದಾರೆ. ಹೀಗೆ ಹಗರಣ ಮಾಡಿ ಅಂತ ಅಧಿಕಾರ ಕೊಟ್ಟಿಲ್ಲ. ಹಗರಣ ಮಾಡಿ ಅಂತ ಬಿಜೆಪಿ, ಕುಮಾರಸ್ವಾಮಿ ಹೇಳಿದ್ರಾ? ಸಿದ್ದರಾಮಯ್ಯ ಹಠ ಹಿಡಿಯಬಾರದು. ತನಿಖೆ ಎದುರಿಸಬೇಕು. ನಿರ್ದೋಷಿ ಅಂತ ಆದ ಮೇಲೆ ಮತ್ತೆ ಸಿಎಂ ಆಗಲಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ: ಸುರೇಶ್ ಬಾಬು

    ಸಿಎಂ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಇವರು ತನಿಖೆಗೆ ಅವಕಾಶ ಮಾಡಿಕೊಡಲಿ. ಸಿದ್ದರಾಮಯ್ಯ ನಾನು ಲಾಯರ್ ಅಂತಾರೆ. ಲಾಯರ್ ಆಗಿರುವುದರಿಂದ ನೈತಿಕತೆಯಿಂದ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ನೀವು ತನಿಖೆಗೆ ಸಹಕಾರ ನೀಡಿದರೆ ದೇಶದಲ್ಲಿ ಒಳ್ಳೆಯ ರಾಜಕಾರಣಿ ಆಗುತ್ತೀರಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು

    ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಯಾವ ಸರ್ಕಾರ ಇತ್ತು? ಅವಾಗ ಇವರು ಏನು ಮಾತನಾಡಿದರು? 14 ಸೈಟ್ ಪಡೆದಿರೋದು ಚೆಕ್ ರೀತಿ ಅಲ್ಲವಾ? ಅವರ ಹೆಂಡತಿ ಹೆಸರಿಗೆ ಸೈಟ್ ಬಂದಿದೆ ಅಂದರೆ ಅದು ಚೆಕ್ ರೀತಿನೇ ಅಲ್ವಾ? 62 ಕೋಟಿ ರೂ. ಕೊಡಿ ಅಂತ ಅವರೇ ಕೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಸಿಎಂ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಂಡೆ ಅನ್ನೋದೇ ಡೇಂಜರ್ – ಸಿದ್ದರಾಮಯ್ಯ ಸ್ಥಿತಿಗೆ ಪರೋಕ್ಷವಾಗಿ ಡಿಕೆಶಿ ಕಾರಣ ಎಂದ ಹೆಚ್‍ಡಿಕೆ

  • ಪ್ರಜ್ವಲ್‌ ಜೊತೆ ರೇವಣ್ಣ, ಎ ಮಂಜು ಅನರ್ಹರಾಗುತ್ತಾರೆ: ಪ್ರಮೀಳಾ ನೇಸರ್ಗಿ

    ಪ್ರಜ್ವಲ್‌ ಜೊತೆ ರೇವಣ್ಣ, ಎ ಮಂಜು ಅನರ್ಹರಾಗುತ್ತಾರೆ: ಪ್ರಮೀಳಾ ನೇಸರ್ಗಿ

    ಬೆಂಗಳೂರು: ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರಂತೆಯೇ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಮತ್ತು ಹಾಲಿ ಜೆಡಿಎಸ್‌ ಶಾಸಕ ಎ ಮಂಜು (A Manju) ಅನರ್ಹರಾಗಲಿದ್ದಾರೆ ಎಂದು ಬಿಜೆಪಿ ಮುಖಂಡೆ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ (Pramila Nesargi) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಯಾವುದೇ ಚುನಾವಣೆಗೆ ಸ್ಪರ್ಧಿಸುವಾಗ ಆಸ್ತಿ, ಬ್ಯಾಂಕ್‌ ವಿವರ, ಜಮೀನು ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಆದರೆ ಪ್ರಜ್ವಲ್‌ ರೇವಣ್ಣ ಸರಿಯಾಗಿ ಮಾಹಿತಿ ನೀಡದ ಕಾರಣ ಅವರನ್ನು ಹೈಕೋರ್ಟ್‌ (High Cout) ಅನರ್ಹ ಮಾಡಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಹೆಚ್‌.ಡಿ. ರೇವಣ್ಣ ಕುಟುಂಬವನ್ನ ರಾಜಕೀಯದಿಂದ ಶಾಶ್ವತವಾಗಿ ತೆಗೆಯುವುದೇ ನನ್ನ ಗುರಿ: ದೂರುದಾರ ದೇವರಾಜೇಗೌಡ


    ಈ ಪ್ರಜ್ವಲ್‌ ರೇವಣ್ಣ ಅವರ ಅಕ್ರಮ ಕೆಲಸಕ್ಕೆ ಹೆಚ್‌ಡಿ ರೇವಣ್ಣ ಸಹಕಾರ ನೀಡಿದ್ದಾರೆ. ಸಹಕಾರ ನೀಡಿದ್ದರಿಂದ ಹೆಚ್‌ಡಿ ರೇವಣ್ಣ ಅವರು ತಪ್ಪಿತಸ್ಥರು. ಅವರನ್ನು ಅನರ್ಹಗೊಳಿಸಬೇಕೆಂದು ಎಂದು ನಾವು ಮನವಿ ಮಾಡಿದ್ದೇವೆ. ಕೋರ್ಟ್‌ ಮನವಿ ಪುರಸ್ಕರಿಸಿ ರೇವಣ್ಣ ಅವರಿಗೂ ನೋಟಿಸ್‌ ಜಾರಿ ಮಾಡಿದೆ ಎಂದು ಹೇಳಿದರು.

    ಮಂಜು ಸಹ ಅಕ್ರಮ ಮಾಡಿದ್ದಾರೆ ಎಂದು ಪ್ರಜ್ವಲ್‌ ರೇವಣ್ಣ ಕೋರ್ಟ್‌ ಗಮನಕ್ಕೆ ತಂದಿದ್ದರು. ಹೀಗಾಗಿ ಎ ಮಂಜು ಅವರಿಗೂ ನಿಮ್ಮನ್ನು ಯಾಕೆ ಅನರ್ಹ ಮಾಡಬಾರದು ಎಂದು ಕೋರಿ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಇಬ್ಬರು ಅನರ್ಹರಾಗಲಿದ್ದು ಇಬ್ಬರ ವಿರುದ್ಧವೂ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರಮೀಳಾ ನೇಸರ್ಗಿ ತಿಳಿಸಿದರು.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

    ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

    ಹಾಸನ: ರಾಜ್ಯದಲ್ಲಿ ಜೆಡಿಎಸ್ (JDS) ಬಿಟ್ಟು ಬೇರೆ ಯಾವ ಪಕ್ಷವೂ ಸರ್ಕಾರ ನಡೆಸಲು ತಾಕತ್ತಿಲ್ಲ ಎಂದು ಮಾಜಿ ಸಚಿವ ಎ.ಮಂಜು (A Manju) ಹೇಳಿದ್ದಾರೆ.

    ಹಾಸನ ಜಿಲ್ಲೆಯ (Hassan) ಹೊಳೆನರಸೀಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ದೊಡ್ಡವರಿಗೆ ಹುಷಾರಿಲ್ಲ ಎಂದು ನೋಡಲು ಹೋಗಿದ್ದೆ. ಆಗ ದೇವೇಗೌಡರು, ಎಷ್ಟು ದಿನ ಹೀಗೆ ರಾಜಕೀಯ ಮಾಡ್ತೀರಿ ಒಟ್ಟಾಗಿ ಹೋಗಿ ಅಂದ್ರು, ಆಮೇಲೆ ಕುಮಾರಣ್ಣ ಕೂಡ ಮಾತನಾಡಿದ್ರು, ಆಗ ನಾನು ನೀವೇನೋ ಹೇಳ್ತೀರಿ, ಅಲ್ಲಿ ರೇವಣ್ಣ ಇದ್ದಾರೆ ಅವರು ಒಪ್ಕೋಬೇಕಲ್ಲ ಅಂದೆ. ಆಮೇಲೆ ರೇವಣ್ಣ, ಪ್ರಜ್ವಲ್, ಸೂರಜ್ ಮಾತನಾಡಿ ಪಕ್ಷಕ್ಕೆ ಬನ್ನಿ ಅಂದ್ರು, ಆಗ ಜೆಡಿಎಸ್ ಸೇರಿದೆ ಎಂದು ನೆನಪು ಮಾಡಿಕೊಂಡರು.

    ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ ಎಂದ ಮಂಜು, ಕುಮಾರಣ್ಣ ಇಲ್ಲದೇ, ಜೆಡಿಎಸ್ ಇಲ್ಲದೆ ಸರ್ಕಾರ ಮಾಡಲು ಆಗಲ್ಲ ಎಂದರು.

    ಕಾಂಗ್ರೆಸ್‌ನಲ್ಲಿ ಟಿಕೆಟ್ (Congress Ticket) ಕೊಡ್ತೀನಿ ಅಂದ್ರು, ಇಲ್ಲಾ ಗೌಡ್ರಿಗೆ ಮಾತು ಕೊಟ್ಟಿದ್ದೀನಿ ಬರಲ್ಲ ಅಂದೆ. ಯಾರೇ ಚಾಡಿ ಹೇಳಿದ್ರೂ ನಾನು ಕೇಳಲ್ಲ. ರೇವಣ್ಣ ಅವರೇ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾವಿಬ್ಬರೂ ಒಂದೇ, ಮುಂದೆ ನಮ್ಮ ಮಕ್ಕಳು, ನಿಮ್ಮ ಮಕ್ಕಳು ಜೆಡಿಎಸ್ ಬೆಳೆಸಬೇಕು. ಈಗಾಗಲೇ ಗೆದ್ದ ಮೇಲೆ ಜೆಡಿಎಸ್ ಬಿಡ್ತಾರೆ ಅಂತಾರೆ ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಮಂಜು ಸ್ಪಷ್ಟಪಡಿಸಿದರು. ಇದನ್ನೂ ಓದಿ: 55 ವರ್ಷ ಆಡಳಿತ ಮಾಡಿದ್ರೂ ನೀರಿನ ದಾಹ ತೀರಿಸಲಾಗಿಲ್ಲ – ಕಾಂಗ್ರೆಸ್ ವಿರುದ್ಧ ಅನಿಲ್ ಮೆಣಸಿನಕಾಯಿ ಕಿಡಿ

    ಮಂಜು ಮಾತು ಮುಗಿಸುತ್ತಿದ್ದಂತೆಯೇ ಮೈಕ್ ತೆಗೆದುಕೊಂಡ ಭವಾನಿ ರೇವಣ್ಣ (Bhavani Revanna), ನಾನು ಮಂಜಣ್ಣ ಅವರಲ್ಲಿ ಕೇಳುತ್ತಿದ್ದೇನೆ, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನ ನೀವು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನೀವು ವಿಶ್ವಾಸಕ್ಕೆ ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಗೋಮೂತ್ರ ಮಾನವ ಸೇವನೆಗೆ ಯೋಗ್ಯವಲ್ಲ; ಎಮ್ಮೆಯ ಮೂತ್ರವೇ ಉತ್ತಮ ಎಂದ IVRI ಅಧ್ಯಯನ

    ಇದಕ್ಕೆ ಪ್ರತಿಕ್ರಿಯಿಸಿದ ಮಂಜು, ನಾನು ಯಾವಾಗಲಾದರೂ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿದ್ದೀನಾ ಕೇಳಿ, ನಾನು ಎಲ್ಲರನ್ನೂ ಒಂದೇ ರೀತಿ ನೋಡಿದ್ದೀನಿ, ನಾನು ತೊಂದರೆ ಕೊಟ್ಟಿದ್ದು ತೋರಿಸಿದ್ರೆ ನಾಮಪತ್ರನೇ ಸಲ್ಲಿಸಲ್ಲ ಎಂದು ಸವಾಲ್‌ ಹಾಕಿದರು.

  • ಟಿಕೆಟ್ ಗೊಂದಲ ಮಧ್ಯೆ ಪಂಚರತ್ನ ಯಾತ್ರೆ- ಎ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ

    ಟಿಕೆಟ್ ಗೊಂದಲ ಮಧ್ಯೆ ಪಂಚರತ್ನ ಯಾತ್ರೆ- ಎ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ

    – ಅರಕಲಗೂಡು ಕ್ಷೇತ್ರದ ಜೆಡಿಎಸ್‍ನಲ್ಲಿ ಅಪಸ್ವರ

    ಹಾಸನ: ಜೆಡಿಎಸ್ (JDS) ಭದ್ರಕೋಟೆ ಹಾಸನ ಜೆಲ್ಲೆಯಲ್ಲಿ ಗೊಂದಲ ಮುಂದುವರಿದಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಇದೆಲ್ಲದರ ನಡುವೆ ಮಂಗಳವಾರದಿಂದ 5 ದಿನಗಳ ಕಾಲ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ (Panchayatre Yatre) ನಡೆಯಲಿದೆ.

    ಹೌದು, ಹಾಸನ ಜಿಲ್ಲೆ ಜೆಡಿಎಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಹಾಸನ ಟಿಕೆಟ್ ಗೊಂದಲ ಮುಂದುವರಿದಿದೆ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda), ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (At Ramaswamy) ಜೆಡಿಎಸ್ ಪಕ್ಷ ತೊರೆದಿದ್ದಾರೆ. ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಾಗಲಿದೆ.

    ಎ.ಮಂಜು ಜೆಡಿಎಸ್ ಸೇರ್ಪಡೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅಧ್ಯಕ್ಷತೆಯಲ್ಲಿ ಜೆಡಿಎಸ್ ಪ್ರಮುಖರ ಸಭೆ ನಡೆಸಲಾಯಿತು. ಸಭೆಯಲ್ಲಿ ಎ.ಮಂಜು ಅಭ್ಯರ್ಥಿಯಾದರೆ ಹೇಗೆ ಎಂಬ ಅಭಿಪ್ರಾಯ ಸಂಗ್ರಹಿಸಲಾಯ್ತು. ಆದರೆ ಸಭೆಯಲ್ಲಿ ಮಾಜಿ ಸಚಿವ ಎ.ಮಂಜುಗೆ ಟಿಕೆಟ್ ಕೊಡಲು ಅಪಸ್ವರ ಕೇಳಿ ಬಂದಿದೆ. ಎ.ಟಿ.ರಾಮಸ್ವಾಮಿ ಪಕ್ಷದಲ್ಲಿ ಹಿಂದೆ ಸರಿದಂತಾಗಿದೆ. ಎ. ಮಂಜುಗೆ ಟಿಕೆಟ್ ಕೊಟ್ರೆ ನಮ್ಮ ಕಾರ್ಯಕರ್ತರಿಗೆ ಅವಕಾಶ ಸಿಗಲ್ಲ ಅಂತ ಅಸಮಾಧಾನ ಹೊರಹಾಕಿದ್ರು. ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಬೆಂಬಲ ಸೂಚಿಸಿದ್ರು. ಇದನ್ನೂ ಓದಿ: ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್

    ಆದರೆ ರೇವಣ್ಣ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಮಂಜು ಹೆಸರು ಘೋಷಣೆ ಮಾಡಿದ್ರು. ಅಧಿಕೃತವಾಗಿ ದೇವೇಗೌಡರು, ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅದಕ್ಕೆ ಸಮ್ಮತಿ ಇದೆ. ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಎ.ಮಂಜಣ್ಣ ಅವರು ನಿಲ್ತಾರೆ ಅಂತ ರೇವಣ್ಣ ಹೇಳಿದ್ರು.

    ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದಿನಿಂದ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಇಂದು ಚನ್ನರಾಯಪಟ್ಟಣ, ನಾಳೆ ಅರಸೀಕೆರೆ, ನಾಡಿದ್ದರು ಹೊಳೆನರಸೀಪುರ ಹೀಗೆ ಅರಕಲಗೂಡು, ಸಕಲೇಶಪುರದಲ್ಲಿ ಪಂಚರತ್ನ ನಡೆಯಲಿದೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕಗ್ಗಂಟಿನಿಂದ ಪಂಚರತ್ನ ಯಾತ್ರೆ ನಿಗದಿ ಮಾಡಿಲ್ಲ.

  • ಬಿಜೆಪಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆ

    ಬಿಜೆಪಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆ

    ಹಾಸನ: ಬಿಜೆಪಿ ಮಾಜಿ ಸಚಿವ ಎ.ಮಂಜು (A Manju) ಶನಿವಾರ ಅಧಿಕೃತವಾಗಿ ಜೆಡಿಎಸ್ (JDS) ಪಕ್ಷ ಸೇರ್ಪಡೆಯಾಗಿದ್ದಾರೆ.

    ರಾಮನಗರದಲ್ಲಿರುವ (Ramanagara) ಹೆಚ್‌ಡಿಕೆ ಅವರ ತೋಟದ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Devegowda), ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy), ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ್ದಾರೆ.

    ಬಳಿಕ ಬಿಡದಿಯ ತೋಟದ ಮನೆಯಲ್ಲಿ ಆಯೋಜಿಸಿದ್ದ ಪೂರ್ಣಾಹುತಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮೋದಿ ಗೌರವಿಸಿದ ವ್ಯಕ್ತಿ ಯಾರಾದ್ರೂ ಇದ್ರೆ ಅದು ಯಡಿಯೂರಪ್ಪ – ಮುನಿರತ್ನ

    ವಿಧಾನ ಪರಿಷತ್ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಎ.ಮಂಜು, ನಡುವೆ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಇದೀಗ ಜೆಡಿಎಸ್ ಪಕ್ಷದಿಂದ ಟಿಕೆಟ್ ಭರವಸೆ ನೀಡಿದ ಬಳಿಕ ಪಕ್ಷ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಧಾರವಾಡ ಐಐಟಿ ಆಗಲು ಕಾಂಗ್ರೆಸ್ ಕಾರಣ: ಮಾಜಿ ಸಚಿವ ವಿನಯ್ ಕುಲಕರ್ಣಿ

    ಇನ್ನೊಂದೆಡೆ ಹಾಲಿ ಶಾಸಕ ಎ.ಟಿ.ರಾಮಸ್ವಾಮಿಗೆ ಸೆಡ್ಡು ಹೊಡೆಯಲು ಎ.ಮಂಜುಗೆ ಜೆಡಿಎಸ್ ನಾಯಕರು ಗಾಳ ಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಎ.ಟಿ.ರಾಮಸ್ವಾಮಿ, ಎ.ಮಂಜು ಜೊತೆ-ಮಾತುಕತೆ ನಡೆಸಿ ಪಕ್ಷಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.