Tag: ಎ.ಪಿ.ಅರ್ಜುನ್

  • ಉಪಾಧ್ಯಕ್ಷ ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’- ‌’ಮಾರ್ಟಿನ್‌’ ಡೈರೆಕ್ಟರ್‌ ಎ.ಪಿ ಅರ್ಜುನ್ ಸಾಥ್

    ಉಪಾಧ್ಯಕ್ಷ ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’- ‌’ಮಾರ್ಟಿನ್‌’ ಡೈರೆಕ್ಟರ್‌ ಎ.ಪಿ ಅರ್ಜುನ್ ಸಾಥ್

    ಅಂಬಾರಿ, ಅದ್ಧೂರಿ, ಐರಾವತ, ರಾಟೆಯಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಪಿ.ಅರ್ಜುನ್ ತಮ್ಮದೇ ಎ.ಪಿ ಅರ್ಜುನ್ (A.P Arjun) ಫಿಲ್ಮಂಸ್ ನಡಿ ಕಿಸ್, ಅದ್ಧೂರಿ ಲವರ್ಸ್ ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದೇ ಎ.ಪಿ ಅರ್ಜುನ್ ಫಿಲ್ಮಂಸ್‌ನ 3ನೇ ಸಿನಿಮಾ ಅನೌನ್ಸ್ ಆಗಿದೆ. ಇದನ್ನೂ ಓದಿ:ನಾನು ಕ್ಷೇಮವಾಗಿದ್ದೇನೆ: ಚೂರಿ ಇರಿತದ ಬಳಿಕ ಸೈಫ್ ಅಲಿ ಖಾನ್ ಫಸ್ಟ್ ರಿಯಾಕ್ಷನ್

    ಎ.ಪಿ ಅರ್ಜುನ್ ನಿರ್ಮಾಣ ಸಂಸ್ಥೆಯ 3ನೇ ಪ್ರಯತ್ನಕ್ಕೆ ʻಲಕ್ಷ್ಮೀಪುತ್ರʼ (Laksmiputra) ಎಂಬ ಟೈಟಲ್ ಇಡಲಾಗಿದ್ದು, ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆಯುತ್ತಿದ್ದಾರೆ. ‘ಲಕ್ಷ್ಮೀಪುತ್ರ’ನಾಗಿ ಸ್ಯಾಂಡಲ್‌ವುಡ್ ‘ಉಪಾಧ್ಯಕ್ಷ’ ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ. ಎ.ಪಿ ಅರ್ಜುನ್ ಗರಡಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ವಿಜಯ್ ಎಸ್ ಸ್ವಾಮಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿದ್ದಾರೆ. ಅರ್ಜುನ್ ಅವರಿಂದ ನಿರ್ದೇಶನದ ಪಟುಗಳನ್ನು ಕಲಿತಿರುವ ವಿಜಯ್ ಅವರೀಗ ಪೂರ್ಣಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

    ಚಿಕ್ಕಣ್ಣ ಹಾಗೂ ಸ್ಟಾರ್ ಡೈರೆಕ್ಟರ್ ಎ.ಪಿ ಅರ್ಜುನ್ ಕಾಂಬೋದ ಮೊದಲ ಸಿನಿಮಾವನ್ನು ಅರ್ಜುನ್ ಮಡದಿ ಅನ್ನಪೂರ್ಣ ಎಪಿ ಅರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ಲಕ್ಷ್ಮೀಪುತ್ರ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ರವಿಕಿರಣ್ ಗೌಡ ಸಹ ನಿರ್ಮಾಪಕರಾಗಿ ಸಾಥ್ ಕೊಡುತ್ತಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ಡಾ.ಕೆ.ರವಿ ವರ್ಮಾ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಎ.ಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ, ರಾಜೇಶ್ ರಾವ್ ಸಹ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.

    ಇದೇ ಜ.24ಕ್ಕೆ ಲಕ್ಷ್ಮೀಪುತ್ರನಿಗೆ ಮುಹೂರ್ತ ನಡೆಯಲಿದೆ. ‘ಲಕ್ಷ್ಮೀಪುತ್ರ’ ಎಂಬ ಕ್ಯಾಚಿ ಟೈಟಲ್‌ನೊಂದಿಗೆ ಚಿಕ್ಕಣ್ಣ ಹಾಗೂ ಎ.ಪಿ ಅರ್ಜುನ್ ಅಖಾಡಕ್ಕೆ ಇಳಿಯುತ್ತಿದ್ದು, ಇದೇ ತಿಂಗಳ ಜ.24ಕ್ಕೆ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ಸಜ್ಜಾಗಿದೆ.

  • 50 ಲಕ್ಷ ಕಮಿಷನ್‌ ಆರೋಪ; ನನ್ನಿಂದ ವಂಚನೆ ನಡೆದಿಲ್ಲ, ಆರೋಪ ಸುಳ್ಳು – ʻಮಾರ್ಟಿನ್ʼ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟನೆ

    50 ಲಕ್ಷ ಕಮಿಷನ್‌ ಆರೋಪ; ನನ್ನಿಂದ ವಂಚನೆ ನಡೆದಿಲ್ಲ, ಆರೋಪ ಸುಳ್ಳು – ʻಮಾರ್ಟಿನ್ʼ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟನೆ

    ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ʻಮಾರ್ಟಿನ್ʼ ಸಿನಿಮಾವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಾಡಿರುವ ಈ ಸಿನಿಮಾ ದೇಶಾದ್ಯಂತ ಅಬ್ಬರಿಸಲಿದೆ ಎಂದೇ ಹೇಳಲಾಗುತ್ತಿದೆ. ಸಿನಿಮಾ ರಿಲೀಸ್‌ಗಾಗಿ ಧ್ರುವ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೀಗ ವಂಚನೆ ವಿಚಾರವಾಗಿ ‘ಮಾರ್ಟಿನ್’ ಸಿನಿಮಾ ವಿವಾದದ ಕೇಂದ್ರಬಿಂದುವಾಗಿದೆ. ʻಡಿಜಿಟಲ್ ಟೆರೆನ್ʼ ಎಂಬ ಸಂಸ್ಥೆ ವಿರುದ್ಧ ‘ಮಾರ್ಟಿನ್’ ನಿರ್ಮಾಪಕ ಉದಯ್ ಕೆ ಮೆಹ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧವೂ 50 ಲಕ್ಷ ರೂ. ಕಮಿಷನ್‌ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್ ಸ್ಪಷ್ಟನೆ ಕೊಟ್ಟಿದ್ದಾರೆ.

    ನನ್ನನ್ನ ಪೊಲೀಸ್ ಸ್ಟೇಷನ್‌ಗೆ ಕರೆದಿದ್ದ ಉದ್ದೇಶ ಏನಂದರೆ, ಸತ್ಯಾ ರೆಡ್ಡಿ ಅನ್ನೋನು ನನ್ನ ಮೇಲೆ ಆರೋಪ ಮಾಡಿದ್ದಾನೆ. ಅದಕ್ಕೆ ಪೊಲೀಸರು ನಮ್ಮನ್ನೆಲ್ಲ ವಿಚಾರಣೆಗೆ ಕರೆದಿದ್ದರು. ನನ್ನ ಮೇಲೆ ಯಾಕೆ ಆರೋಪ ಮಾಡಿದ್ದಾನೆ ಅಂತ ಗೊತ್ತಿಲ್ಲ. ಆದರೆ, ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದು ಗೊತ್ತಾಗಿದೆ. ನನಗೆ ಅಷ್ಟೊಂದು ದುಡ್ಡು ಕೊಟ್ಟಿದ್ದರೆ, ಏನಾದರೂ ಒಂದು ದಾಖಲೆ ಇರಬೇಕಿತ್ತಲ್ಲವಾ? ಅಂತಾ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: Women’s Asia Cup: ಸ್ಮೃತಿ, ರೇಣುಕಾ ಶೈನ್‌ – ಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ; ಫೈನಲ್‌ ಪ್ರವೇಶಿಸಿದ ಭಾರತ!

    ನನಗೂ ಮಾಧ್ಯಮದ ಮೂಲಕ ವಿಷಯ ಗೊತ್ತಾಯ್ತು. 50 ಲಕ್ಷ ರೂ., 75 ಲಕ್ಷ ರೂ. ಕಮಿಷನ್ ತಗೊಂಡಿದ್ದೀನಿ ಅಂತ‌ ಆರೋಪಿಸಿ ನನ್ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಈ ಪ್ರಕರಣದಲ್ಲಿ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಇಬ್ಬರೂ ಆರೋಪಿಗಳು. ಆ ಎಫ್‌ಐಆರ್‌ನಲ್ಲೂ ನನ್ನ ಹೆಸರು ಇರಲಿಲ್ಲ.. ನನ್ನ ಮೇಲಿನ ಆರೋಪ ಸುಳ್ಳು ಅಂತ ಒತ್ತಿ ಹೇಳಿದರಲ್ಲದೇ ಅತ್ಯರೆಡ್ಡಿ ರವಿಶಂಕರ್‌ಗೂ 10 ಲಕ್ಷ ರೂ. ಮೋಸ ಮಾಡಿದ್ದಾರೆ, ಕಾಟೇರ ಸಿನಿಮಾಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: 2028ರೊಳಗೆ ಮತ್ತೆ ರಾಮನಗರ ಅಂತ ಬರುತ್ತೆ – ರಾಮನ ಹೆಸರು ತೆಗೆಯಲು ಸಾಧ್ಯವಿಲ್ಲ: ಹೆಚ್‌ಡಿಕೆ ತಿರುಗೇಟು

    ಇನ್ನೂ ನಿರ್ಮಾಪಕರ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ ಎಪಿ ಅರ್ಜುನ್, ʻದೊಡ್ಡ ಸಿನಿಮಾ ಅಂದ್ಮೇಲೆ ಜಗಳ, ಮನಸ್ತಾಪ ಇದ್ದೇ ಇರುತ್ತದೆ. ನನ್ನ ಮೇಲೆ ಮಾತ್ರ ಅವನು (ಸತ್ಯಾ ರೆಡ್ಡಿ) ಆರೋಪ ಮಾಡಿಲ್ಲ. ನಮ್ಮ ಕ್ಯಾಮರಾಮ್ಯಾನ್, ಎಡಿಟರ್‌ ಹಾಗೂ ಸಹಾಯಕ ನಿರ್ದೇಶಕನ ಮೇಲೂ ಆರೋಪ ಮಾಡಿದ್ದಾನೆ. ಪೊಲೀಸರ ಮುಂದೆ ನಾನು ಏನೇನು ಹೇಳಬೇಕಿತ್ತೋ, ಎಲ್ಲಾ ಹೇಳಿದ್ದೇನೆ. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ. ಅಕ್ಟೋಬರ್ 11 ರಂದು ‘ಮಾರ್ಟಿನ್’ ಪಕ್ಕಾ ರಿಲೀಸ್ ಆಗುತ್ತೆ’’ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಯಾವ ರಾಜ್ಯಕ್ಕೂ ಏನನ್ನೂ ನಿರಾಕರಿಸಿಲ್ಲ, ಹಣ ತರಬೇಕೆಂದು ತೆರಿಗೆ ಹೆಚ್ಚಿಸಿಲ್ಲ: ನಿರ್ಮಲಾ ಸೀತಾರಾಮನ್‌

    ನನಗೂ – ಉದಯ್ ಮೆಹ್ತಾ ಮಧ್ಯೆ ಬೇರೆ ವಿಚಾರಕ್ಕೆ ಮನಃಸ್ತಾಪ ಆಗಿತ್ತು. ಆದ್ರೆ ಸತ್ಯ ರೆಡ್ಡಿ ನನ್ನ ಹೆಸ್ರು ಹಾಳು ಮಾಡೋಕೆ ಟ್ರೈ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಅಂದಾಗ ಬಜೆಟ್ ಡಿಫರೆನ್ಸ್ ಬರುತ್ತೆ, ಆದ್ರೆ ಈ ಸಿನಿಮಾದಲ್ಲಿ ಅದೂ ಕೂಡ ಜಾಸ್ತಿ ಆಗಿಲ್ಲ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ನಾಯಿ ಮಾಂಸ ತಂದು ಬೆಂಗಳೂರಿನಲ್ಲಿ ಮಾರಾಟ ಆರೋಪ – ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಹೈಡ್ರಾಮ

  • ‘ಮಾರ್ಟಿನ್’ ಡಬ್ಬಿಂಗ್ ಮುಗಿಸಿದ ಧ್ರುವ ಸರ್ಜಾ

    ‘ಮಾರ್ಟಿನ್’ ಡಬ್ಬಿಂಗ್ ಮುಗಿಸಿದ ಧ್ರುವ ಸರ್ಜಾ

    ಅಂತೂ ಇಂತೂ ‘ಮಾರ್ಟಿನ್’ ಸಿನಿಮಾದ ಡಬ್ಬಿಂಗ್ (Dubbing) ಕೂಡ ಮುಗಿದಿದೆ. ಸುದೀರ್ಘ ಶೂಟಿಂಗ್ ನಂತರ ಮಾರ್ಟಿನ್ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ. ಶೂಟಿಂಗ್ ಮುಗಿದ ಬೆನ್ನಲ್ಲೇ ತಮ್ಮ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮುಗಿಸಿದ್ದಾರೆ. ಆ ಫೋಟೋವನ್ನು ನಿರ್ದೇಶಕ ಎ.ಪಿ. ಅರ್ಜುನ್ (AP Arjun) ಹಂಚಿಕೊಂಡಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾದ ಕಂಪ್ಲೀಟ್ ಶೂಟಿಂಗ್ ಮುಗಿಸಿದ್ದರು ನಿರ್ದೇಶಕರು. ಹಲವು ತಿಂಗಳಿಂದ ಈ ಚಿತ್ರದ ಶೂಟಿಂಗ್ ನಡೆಯುತ್ತಲೇ ಇತ್ತು. ಇದೀಗ ಬದಾಮಿಯಲ್ಲಿ ಕೊನೆಯ ಹಂತದ ಚಿತ್ರೀಕರಣ ಮಾಡುವ ಮೂಲಕ ಕುಂಬಳಕಾಯಿ ಒಡೆಯಲಾಗಿದೆ. ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ ಸಿನಿಮಾ ಎಲ್ಲಿಗೆ ಬಂತು ಎಂದು ಅವರ ಅಭಿಮಾನಿಗಳು ಅನೇಕ ಸಲ ಕೇಳಿದ್ದಿದೆ. ಅದಕ್ಕೀಗ ಉತ್ತರ ಸಿಕ್ಕಿದೆ.

    ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಯಾವಾಗ ಸಿನಿಮಾ ಬಿಡುಗಡೆ ಮಾಡೋದು ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

     

    ಸದ್ಯಕ್ಕೆ ಶೂಟಿಂಗ್ ಮುಗಿಸಿಕೊಂಡು, ಡಬ್ಬಿಂಗ್ ಕೂಡ ಪೂರೈಸಿದ್ದಾರೆ. ಮಾರ್ಟಿನ್ ಮೊದಲು ಬರತ್ತಾ ಅಥವಾ ಕೆಡಿ ಬರತ್ತಾ ಕಾದು ನೋಡಬೇಕು. ಮಾರ್ಟಿನ್ ಗಿಂತ ಮುಂಚೆಯೇ ಕೆಡಿ ಮುಗಿದಿರೋದ್ರಿಂದ ಚರ್ಚೆಯಂತೂ ಶುರುವಾಗಿದೆ.

  • ವಿಮಾನ ದುರಂತದ ಕಹಿ ಅನುಭವ ಬಿಚ್ಚಿಟ್ಟ ‘ಮಾರ್ಟಿನ್’ ನಿರ್ದೇಶಕ

    ವಿಮಾನ ದುರಂತದ ಕಹಿ ಅನುಭವ ಬಿಚ್ಚಿಟ್ಟ ‘ಮಾರ್ಟಿನ್’ ನಿರ್ದೇಶಕ

    ತ್ತೀಚೆಗೆ ನಟ ಧ್ರುವ ಸರ್ಜಾ (Dhruva Sarja) ಸೇರಿದಂತೆ ‘ಮಾರ್ಟಿನ್’ (Martin) ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಚಿತ್ರತಂಡದವರಿಗೆ ಆ ಘಟನೆ ಯಾವ ರೀತಿ ಕಹಿ ಅನುಭವ ಕೊಟ್ಟಿತ್ತು ಎಂದು ನಿರ್ದೇಶಕ ಎ.ಪಿ ಅರ್ಜುನ್ (A.p Arjun) ಇದೀಗ ಚಿತ್ರದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ:ರಾಜಮೌಳಿ ಚಿತ್ರದಲ್ಲಿ 8 ಗೆಟಪ್‌ನಲ್ಲಿ ಕಾಣಿಸಿಕೊಳ್ತಾರೆ ಪ್ರಿನ್ಸ್

    ಕಳೆದ ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಸಿಕೊಂಡು ವಿಮಾನದಲ್ಲಿ ಬರುತ್ತಿದ್ದ ‘ಮಾರ್ಟಿನ್’ ಸಿನಿಮಾ ತಂಡದವರಿಗೆ ಶಾಕ್ ಆಗಿತ್ತು. ಕಾರಣಾಂತರಗಳಿಂದ ವಿಮಾನದ ಹಾರಾಟದಲ್ಲಿ ತೊಂದರೆ ಉಂಟಾಗಿತ್ತು. ಇನ್ನೇನು ಆ ವಿಮಾನ ಅಪಘಾತ ಆಗುತ್ತದೆ ಎಂದು ಇಡೀ ಚಿತ್ರತಂಡದವರು ಭಯಗೊಂಡಿದ್ದರು. ಆ ಕ್ಷಣ ಹೇಗಿತ್ತು ಎಂಬುದನ್ನು ಎ.ಪಿ. ಅರ್ಜುನ್ ಬಿಚ್ಚಿಟ್ಟಿದ್ದಾರೆ.

    ಅಂದು ನಮ್ಮೆಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಪಕ್ಕದಲ್ಲಿ ಸ್ವಾಮಿ ಕುಳಿತಿದ್ದರು. ಅವರ ಪಕ್ಕದಲ್ಲಿ ನಾಯಕಿ ವೈಭವಿ ಇದ್ದರು. ಅಂದು ಯಾರೂ ಧೈರ್ಯವಾಗಿ ಇರಲಿಲ್ಲ. ಅಷ್ಟು ಹೊತ್ತಿಗಾಗಲೇ ನಟಿ ವೈಭವಿ ಅವರು ತಂದೆ-ತಾಯಿಗೆ ಮೆಸೇಜ್ ಮಾಡಿದ್ದರು. ನಾವೆಲ್ಲ ಸತ್ತು ಹೋಗುತ್ತಿದ್ದೇವೆ. ನಾವೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಅಂತ ಮೆಸೇಜ್ ಮಾಡಿ ಜೋರಾಗಿ ಅಳುತ್ತಿದ್ದರು. ಅಂದು ಏನು ಅವಘಡ ನಡೆಯದೇ ಸೇಫ್ ಆದೆವು. ಆ ದೇವರೇ ನಮ್ಮನ್ನು ಕಾಪಾಡಿದ್ದು. ಇದು ಎಲ್ಲರಿಗೂ ಪುನರ್ ಜನ್ಮ ಎಂದು ಎ.ಪಿ. ಅರ್ಜುನ್ ಸ್ಮರಿಸಿದ್ದರು.

    ಮಾರ್ಟಿನ್ ಸಿನಿಮಾ ಶೂಟಿಂಗ್ ಕಂಪ್ಲಿಟ್ ಆಗಿದೆ. ಧ್ರುವ ಸರ್ಜಾಗೆ ವೈಭವಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ಬಗ್ಗೆ ತಿಳಿಸೋದಾಗಿ ಚಿತ್ರತಂಡ ಅಪ್‌ಡೇಟ್ ನೀಡಿದೆ.

  • ಮಾರ್ಟಿನ್: ಅಂತಿಮ ಹಂತದ ಚಿತ್ರೀಕರಣದಲ್ಲಿ ಧ್ರುವ ಸರ್ಜಾ

    ಮಾರ್ಟಿನ್: ಅಂತಿಮ ಹಂತದ ಚಿತ್ರೀಕರಣದಲ್ಲಿ ಧ್ರುವ ಸರ್ಜಾ

    ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ ಸಿನಿಮಾ ಎಲ್ಲಿಗೆ ಬಂತು ಎಂದು ಅವರ ಅಭಿಮಾನಿಗಳು ಅನೇಕ ಸಲ ಕೇಳಿದ್ದಿದೆ. ಅದಕ್ಕೀಗ ಉತ್ತರ ಸಿಕ್ಕಿದೆ. ಕೊನೆಯ ಹಂತದ ಚಿತ್ರೀಕರಣ (Shooting) ಸದ್ಯ ನಡೆಯುತ್ತಿದ್ದು, ಧ್ರುವ ಸರ್ಜಾ ಭಾಗಿಯಾಗಿದ್ದಾರೆ. ಕೆಲ ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಅಲ್ಲಿಗೆ ಕುಂಬಳಕಾಯಿ ಒಡೆಯಲಾಗುತ್ತದೆ.

    ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ.

    ಹೊಸ ವರ್ಷದ ದಿನದಂದು ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮಾರ್ಟಿನ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮಾರ್ಟಿನ್ ಗಿಂತ ಮುಂಚೆ ಕೆಡಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಡಿ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಮಾರ್ಟಿನ್ ಕೆಲಸದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.

    ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ.

     

    ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಶೂಟಿಂಗ್ ಇನ್ನೂ ಬಾಕಿ

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಶೂಟಿಂಗ್ ಇನ್ನೂ ಬಾಕಿ

    ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ ನ ‘ಮಾರ್ಟಿನ್’ ಸಿನಿಮಾದ ಶೂಟಿಂಗ್ (Shooting) ಮುಗಿದಿದೆ ಎಂದು ಅಂದಾಜಿಸಲಾಗಿತ್ತು. ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದೆ ಎಂದು ನಂಬಲಾಗಿತ್ತು. ಆದರೆ, ಅಭಿಮಾನಿಗಳ ಅಂದಾಜು ಸುಳ್ಳಾಗಿದೆ. ಚಿತ್ರತಂಡವೇ ಮಾಹಿತಿ ಕೊಟ್ಟಿರುವಂತೆ ಇನ್ನೂ ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆಯಂತೆ. ಈ ವಾರ ಒಂದು ಹಾಡಿನ ಚಿತ್ರೀಕರಣಕ್ಕೂ ಚಿತ್ರತಂಡ ಸಿದ್ಧವಾಗಿದೆ.

    ಇತ್ತೀಚೆಗಷ್ಟೇ ಈ ಸಿನಿಮಾದ ಒಂದು ಹಾಡು ಚಿತ್ರೀಕರಣವಾಗಿತ್ತು. ಈ ಹಾಡಿನಲ್ಲಿ ಇಟಾಲಿಯನ್ ಸುಂದರಿ ಜಾರ್ಜಿಯಾ (Giorgia Andriani)  ಜೊತೆ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದರು. ಈ ಮೂಲಕ ಬಾಲಿವುಡ್‌ ನಟಿ ಜಾರ್ಜಿಯಾ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ:ಉಪೇಂದ್ರ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು: ಉಪ್ಪಿ ಕೊಟ್ಟ ಭರವಸೆ ಏನು?

    ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಬಿಂದಾಸ್ ಹಾಡಿಗೆ ಚಿತ್ರೀಕರಣ ಮಾಡಲಾತ್ತು. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾವಾಗಿದೆ. ಮಣಿ ಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. 3.5 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ದೂರಿಯಾಗಿ ಈ ಸಾಂಗ್ ಶೂಟಿಂಗ್ ನಡೆದಿದೆ.

    ‘ಪೊಗರು’ ಸಿನಿಮಾ ನಂತರ ಮಾರ್ಟಿನ್ ಆಗಿ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ. ಅದ್ದೂರಿ ಚಿತ್ರದ ನಂತರ 2ನೇ ಬಾರಿ ಧ್ರುವಗೆ ಎ.ಪಿ ಅರ್ಜುನ್ (A.p Arjun) ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಟಿನ್‌ಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ.

     

    ಕಳೆದ ವರ್ಷ ಮಾರ್ಟಿನ್ (Martin) ಟೀಸರ್‌ಗೆ ಬಿಗ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾರ್ಟಿನ್ ಟೀಸರ್ ಟ್ರೆಂಡಿಂಗ್ : ಸ್ಟಾರ್ ಜೊತೆ ಪೈಪೋಟಿ ಇಲ್ಲ ಎಂದ ಧ್ರುವ ಸರ್ಜಾ

    ಮಾರ್ಟಿನ್ ಟೀಸರ್ ಟ್ರೆಂಡಿಂಗ್ : ಸ್ಟಾರ್ ಜೊತೆ ಪೈಪೋಟಿ ಇಲ್ಲ ಎಂದ ಧ್ರುವ ಸರ್ಜಾ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin) ಸಿನಿಮಾದ ಟೀಸರ್ (Teaser) ಎರಡ್ಮೂರು ದಿನಗಳಿಂದ ಟ್ರೆಂಡಿಂಗ್ ನಲ್ಲಿದೆ. ಕೋಟಿ ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಗಳಲ್ಲೂ ಸಿನಿಮಾ ಬಗ್ಗೆ ಮಾತನಾಡುವಂತಾಗಿದೆ. ಹಾಗಾಗಿ ಧ್ರುವ ಸರ್ಜಾ ಬೇರೆ ಸ್ಟಾರ್ ನಟರ ಜೊತೆ ಪೈಪೋಟಿಗೆ ಇಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

    ಈ ಹಿಂದಿ ಕನ್ನಡದ ಚಾರ್ಲಿ 777, ಕೆಜಿಎಫ್ 2, ಕಾಂತಾರ, ಕಬ್ಜ, ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಗಳು ಕೂಡ ಟ್ರೆಂಡಿಂಗ್ ಆಗಿದ್ದವು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಯಶ್, ಉಪೇಂದ್ರ ಹಾಗೂ ಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರ ಜೊತೆ ಪೈಪೋಟಿಗೆ ಇಳಿದಿದ್ದರು. ಕನ್ನಡದ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದ್ದವು. ಇದೀಗ ಮಾರ್ಟಿನ್ ಆ ಸಿನಿಮಾದ ಸಾಲಿಗೆ ಸೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.  ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಮಾರ್ಟಿನ್ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತೆಯೇ ಧ್ರುವ ಸರ್ಜಾ ಕೂಡ ಭಾರತೀಯ ಸಿನಿಮಾ ರಂಗದ ಸ್ಟಾರ್ ನಟರ ಜೊತೆ ಪೈಪೋಟಿಗೆ ಇಳಿದಿದ್ದಾರೆ ಎನ್ನುವ ಮಾತು ಬಂದಿದ್ದು ಸಹಜ. ಅದಕ್ಕೆ ಸ್ವತಃ ಧ್ರುವ ಅವರೇ ಉತ್ತರ ನೀಡಿದ್ದಾರೆ. ತಾವು ಯಾವುದೇ ಕಾರಣಕ್ಕೂ ಯಾವುದೇ ನಟರ ಜೊತೆ ಪೈಪೋಟಿಗೆ ಇಳಿಯಲಾರೆ. ನನ್ನ ಸಿನಿಮಾ ಮತ್ತು ನಾನು ಅಂದಷ್ಟೇ ಉತ್ತರಿಸಿದ್ದಾರೆ.

    ಎ.ಪಿ ಅರ್ಜುನ್ ಮತ್ತು ಧ್ರುವ ಕಾಂಬಿನೇಷನ್ ನ ಚಿತ್ರಗಳು ಗೆಲ್ಲುತ್ತವೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಹಾಗಾಗಿ ಮಾರ್ಟಿನ್ ಕೂಡ ಭರ್ಜರಿ ಗೆಲ್ಲುತ್ತದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕಾಗಿ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

  • ‘ಮಾರ್ಟಿನ್’ ಚಿತ್ರದ ಟೀಸರ್ : ಸಿನಿಮಾ ತಂಡದ ಮೊದಲ ಪ್ರತಿಕ್ರಿಯೆ

    ‘ಮಾರ್ಟಿನ್’ ಚಿತ್ರದ ಟೀಸರ್ : ಸಿನಿಮಾ ತಂಡದ ಮೊದಲ ಪ್ರತಿಕ್ರಿಯೆ

    ಸಾಮಾನ್ಯವಾಗಿ ಚಿತ್ರಗಳ ಪ್ರೀಮಿಯರ್ ಶೋ ನಡೆಯುವುದು ವಾಡಿಕೆ. ಆದರೆ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ “ಮಾರ್ಟಿನ್” ಚಿತ್ರದ  ಟೀಸರ್ ಗೆ ಪ್ರೀಮಿಯರ್‌ ನಡೆದಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವೀರೇಶ ಚಿತ್ರಮಂದಿರದಲ್ಲಿ “ಮಾರ್ಟಿನ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಬೇರೆ ಯಾವ ಚಿತ್ರರಂಗದಲ್ಲೂ ಈ ರೀತಿ ಟೀಸರ್ ಪ್ರೀಮಿಯರ್ ನಡೆದಿರುವುದು ತಿಳಿದಿಲ್ಲ. ಇದೇ ಮೊದಲು ಎನ್ನಬಹುದು.

    ಇತ್ತೀಚೆಗೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ “ಮಾರ್ಟಿನ್” ಚಿತ್ರದ ಟೀಸರ್ ವೀರೇಶ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಇದಕ್ಕೂ ಮುನ್ನ ಜಾನಪದ ಕಲಾ ತಂಡಗಳ ಜೊತೆ ವೈಭವದ ಮೆರವಣಿಗೆಯ ಮೂಲಕ ಚಿತ್ರತಂಡದ ಸದಸ್ಯರು ವೀರೇಶ ಚಿತ್ರಮಂದಿರ ಪ್ರವೇಶಿಸಿದರು. ಪ್ರೀಮಿಯರ್ ನಲ್ಲಿ ಟೀಸರ್ ವೀಕ್ಷಿಸಿದ ಧ್ರುವ ಸರ್ಜಾ ಅಭಿಮಾನಿಗಳು ಟೀಸರ್ ಗೆ ಫಿದಾ ಆಗಿದ್ದಾರೆ ಅದೇ ದಿನ ಸಂಜೆ ಚಿತ್ರದ ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಠಿ ಸಹ ನಡೆಯಿತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಚಿತ್ರತಂಡದ ಸದಸ್ಯರು “ಮಾರ್ಟಿನ್” ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    ನಾನು ಹಾಗೂ ಧ್ರುವ  ಹೀರೋ ಹಾಗೂ ನಿರ್ದೇಶಕರ ತರಹ ಕೆಲಸ ಮಾಡಲ್ಲ. ಸ್ನೇಹಿತರಾಗಿ ಕೆಲಸ ಮಾಡುತ್ತೇವೆ. ಹತ್ತು ವರ್ಷಗಳ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬಂದಿದ್ದ “ಅದ್ದೂರಿ” ಚಿತ್ರ “ಅದ್ದೂರಿ” ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಈಗ “ಮಾರ್ಟಿನ್” ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. “ಮಾರ್ಟಿನ್” ಪಕ್ಕಾ ಆಕ್ಷನ್ ಚಿತ್ರ. ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದಾರೆ. ಉದಯ್ ಕೆ ಮೆಹತಾ ಯಾವುದಕ್ಕೂ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ.  ನಾವು ಇಷ್ಟು ದಿನ ಕರ್ನಾಟಕದಲ್ಲಿ ಮಾತ್ರ ಪರೀಕ್ಷೆ ಬರೆಯುತ್ತಿದ್ದೆವು. ಇದು ಪ್ಯಾನ್ ಇಂಡಿಯಾ ಚಿತ್ರ. ಎಲ್ಲರನ್ನು ಮೆಚ್ಚಿಸುವ ಜವಾಬ್ದಾರಿ ನಮಗಿದೆ. ಇಡೀ ನನ್ನ ತಂಡದ ಸಹಕಾರದಿಂದ “ಮಾರ್ಟಿನ್” ಉತ್ತಮವಾಗಿ ಬಂದಿದೆ. ಟೀಸರ್ ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಿರ್ದೇಶಕ ಎ.ಪಿ.ಅರ್ಜುನ್.

    ನಮ್ಮ ಸಂಸ್ಥೆಯಿಂದ ಪ್ಯಾನ್ ಇಂಡಿಯಾ “ಮಾರ್ಟಿನ್” ಚಿತ್ರ ನಿರ್ಮಾಣವಾಗಿರುವುದು ಸಂತೋಷವಾಗಿದೆ‌. ಚಿತ್ರ ಏನು ಕೇಳುತ್ತದೊ ಅದನೆಲ್ಲಾ ನಿರ್ಮಾಪಕನಾಗಿ ಒದಗಿಸಿದ್ದೇನೆ‌. ಧ್ರುವ ಸರ್ಜಾ, ಎ.ಪಿ.ಅರ್ಜುನ್, ಅರ್ಜುನ್ ಸರ್ಜಾ, ಸತ್ಯ ಹೆಗಡೆ, ರವಿ ಬಸ್ರೂರ್ ಸೇರಿದಂತೆ ಇಡೀ ತಂಡದ ಸಹಕಾರಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಉದಯ್ ಕೆ ಮೆಹತಾ. “ಮಾರ್ಟಿನ್” ಚಿತ್ರದ ಟೀಸರ್ ಚೆನ್ನಾಗಿದೆ. ಇದು ಧ್ರುವ ಅಭಿನಯದ ಐದನೇ ಚಿತ್ರ. ನಾನು ಈ ಚಿತ್ರಕ್ಕೆ ಕಥೆ ಬರೆದಿದ್ದೇನೆ.  ಧ್ರುವ ನಿಗೆ ಕಥೆ ಒಪ್ಪಿಸುವುದು ಅಷ್ಟು ಸುಲಭವಲ್ಲ. ಆತ ಚಿತ್ರಕ್ಕಾಗಿ ತುಂಬಾ ಶ್ರಮ ಪಡುತ್ತಾನೆ. ನಿದ್ದೆ ಕೂಡ ಸರಿಯಾಗಿ ಮಾಡಲ್ಲ. ನಮ್ಮ ಕುಟುಂಬದವರಿಗೆ ಧ್ರುವ ಎಂದರೆ ಪ್ರೀತಿ. ಅದರಲ್ಲೂ ನಮ್ಮ ತಾಯಿಗೆ ಧ್ರುವ ಎಂದರೆ ತುಂಬಾ ಪ್ರೀತಿ. ಅವರು ಇವತ್ತು ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನಿರ್ದೇಶಕ ಎ.ಪಿ.ಅರ್ಜುನ್ , ನಿರ್ಮಾಪಕ ಉದಯ್ ಕೆ ಮೆಹತಾ ಹಾಗೂ ಇಡೀ “ಮಾರ್ಟಿನ್” ಚಿತ್ರತಂಡಕ್ಕೆ ನಟ ಅರ್ಜುನ್ ಸರ್ಜಾ ಶುಭಾಶಯ ತಿಳಿಸಿದರು.

    ನಮ್ಮ ಮಾವ ಅರ್ಜುನ್ ಸರ್ಜಾ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಎ.ಪಿ.ಅರ್ಜುನ್ ಸುಂದರವಾಗಿ ನಿರ್ದೇಶಿಸಿದ್ದಾರೆ. ಉದಯ್ ಕೆ ಮೆಹತಾ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ರಾಮ್ – ಲಕ್ಷ್ಮಣ್ ಸೇರಿದಂತೆ ಖ್ಯಾತ ಸಾಹಸ ನಿರ್ದೇಶಕರ ಸಾಹಸ ಸಂಯೋಜನೆಯಲ್ಲಿ ಮೂಡಿ ಬಂದಿರುವ ಸಾಹಸ ದೃಶ್ಯಗಳು ಚೆನ್ನಾಗಿದೆ. ಇಡೀ ತಂಡದ ಕಾರ್ಯವೈಖರಿ ಟೀಸರ್ ನಲ್ಲಿ ಕಾಣುತ್ತಿದೆ. ಟೀಸರ್ ಗೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಹಾಗೂ ಅವರು ಆಡುತ್ತಿರುವ ಮೆಚ್ಚುಗೆಯ ಮಾತುಗಳಿಗೆ ಮನ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಾಯಕ ಧ್ರುವ ಸರ್ಜಾ. ಚಿತ್ರದ ನಾಯಕಿಯರಾದ ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಸ ಸಂಯೋಜಕರಾದ ರಾಮ್ – ಲಕ್ಷ್ಮಣ್ ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.

  • ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗೆ ನೀಡುವೆವು : ಮಾರ್ಟಿನ್ ನಿರ್ದೇಶಕ ಅರ್ಜುನ್ ಘೋಷಣೆ

    ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗೆ ನೀಡುವೆವು : ಮಾರ್ಟಿನ್ ನಿರ್ದೇಶಕ ಅರ್ಜುನ್ ಘೋಷಣೆ

    ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಟೀಸರ್ (Teaser) ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಬಂದಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಟೀಸರ್ ಅನ್ನು ಟಿಕೆಟ್ ಖರೀದಿಸಿ ನೋಡುವಂತಹ ವ್ಯವಸ್ಥೆಯನ್ನು ಚಿತ್ರತಂಡ ಮಾಡಿತ್ತು. ಅದರಿಂದ ಬಂದ ಹಣವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುವುದಾಗಿ ನಿರ್ದೇಶಕ ಎ.ಪಿ.ಅರ್ಜುನ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗಳಿಗೆ ನೀಡುವುದಾಗಿ ತಿಳಿಸಿದ್ದಾರೆ.

    ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಪರಭಾಷಾ ನಟರು ಹಾಗೂ ತಂತ್ರಜ್ಞರು ಅಭಿನಂದನೆಯ ಸುರಿಮಳೆಗೈದಿದ್ದಾರೆ. ಕನ್ನಡದಲ್ಲಿ ಈ ಮಟ್ಟದ ಚಿತ್ರಗಳು ಬರುತ್ತಿರುವುದಕ್ಕೆ ಅಕ್ಷರಶಃ ಬಾಲಿವುಡ್ ಕಂಗಾಲಾಗಿದೆ. ಈಗಾಗಲೇ ಕೆಜಿಎಫ್, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿವೆ. ಕಬ್ಜ ಸಿನಿಮಾ ಇನ್ನಷ್ಟೇ ರಿಲೀಸ್ ಆಗುತ್ತಿದೆ. ನಂತರ ಮಾರ್ಟಿನ್ ಮತ್ತೆ ಬಾಲಿವುಡ್ ಅನ್ನು ನಿದ್ದೆಗೆಡಿಸಲಿದೆ.

    ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ನ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆ ಆಗಿದೆ. ಈ ಟೀಸರ್ ನೋಡಲೆಂದೇ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಇದೇ ಮೊದಲ ಬಾರಿಗೆ ಟೀಸರ್ ನೋಡುವುದಕ್ಕಾಗಿ ಟಿಕೆಟ್ ಖರೀದಿಸಬೇಕಿತ್ತು. ಟೀಸರ್ ನೋಡಿದ ನಂತರ ಟಿಕೆಟ್ ಹಣಕ್ಕೆ ಮೋಸವಾಗಿಲ್ಲ ಎಂದಿದ್ದಾರೆ ಅಭಿಮಾನಿಗಳು. ಆ ರೀತಿಯಲ್ಲಿ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಮಾರ್ಟಿನ್ ಸಾಹಸ ಪ್ರಧಾನ ಸಿನಿಮಾ ಎನ್ನುವುದು ಟೀಸರ್ ನ ಪ್ರತಿ ಫ್ರೇಮ್ ಹೇಳುತ್ತದೆ. ಅದರಲ್ಲೂ ಅಚ್ಚರಿ ಮೂಡುವಂತಹ ಮೈಕಟ್ಟಿನ ಧ್ರುವ ಸರ್ಜಾ ಎದುರಾಳಿಗಳನ್ನು ಕುಟ್ಟಿ ಪುಡಿ ಮಾಡುವುದನ್ನು ನೋಡುವುದೇ ರೋಮಾಂಚನ. ಆ ಮಟ್ಟಿಗೆ ಚಿತ್ರದಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ ಧ್ರುವ ಸರ್ಜಾ. ಟೀಸರ್ ತುಂಬಾ ಹೊಡೆದಾಟ, ಬಂದೂಕು, ಬಾಂಬುಗಳೇ ಘರ್ಜಿಸಿವೆ. ಅದರಲ್ಲೂ ಕಾರ್ ಚೇಸ್ ದೃಶ್ಯ ಮತ್ತಷ್ಟು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

    ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ. ಆ ನಾಯಕನ ಸುತ್ತ ಹೆಣೆದಿರುವ ಕಥೆ ಮಾರ್ಟಿನ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್ ಏನಿರಲಿದೆ ಎನ್ನುವುದು ಕುತೂಹಲದ ಪ್ರಶ್ನೆ. ಒಟ್ಟಿನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ನಿರ್ದೇಶಕರ ಶ್ರಮವೂ ಎದ್ದು ಕಾಣುತ್ತದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್ ನಿದ್ದೆಗೆಡಿಸಿದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಟೀಸರ್

    ಬಾಲಿವುಡ್ ನಿದ್ದೆಗೆಡಿಸಿದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಟೀಸರ್

    ನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin) ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ (Teaser) ನೋಡಿದ ಪರಭಾಷಾ ನಟರು ಹಾಗೂ ತಂತ್ರಜ್ಞರು ಅಭಿನಂದನೆಯ ಸುರಿಮಳೆಗೈದಿದ್ದಾರೆ. ಕನ್ನಡದಲ್ಲಿ ಈ ಮಟ್ಟದ ಚಿತ್ರಗಳು ಬರುತ್ತಿರುವುದಕ್ಕೆ ಅಕ್ಷರಶಃ ಬಾಲಿವುಡ್ ಕಂಗಾಲಾಗಿದೆ. ಈಗಾಗಲೇ ಕೆಜಿಎಫ್, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿವೆ. ಕಬ್ಜ ಸಿನಿಮಾ ಇನ್ನಷ್ಟೇ ರಿಲೀಸ್ ಆಗುತ್ತಿದೆ. ನಂತರ ಮಾರ್ಟಿನ್ ಮತ್ತೆ ಬಾಲಿವುಡ್ (Bollywood) ಅನ್ನು ನಿದ್ದೆಗೆಡಿಸಲಿದೆ.

    ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ನ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆ ಆಗಿದೆ. ಈ ಟೀಸರ್ ನೋಡಲೆಂದೇ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಇದೇ ಮೊದಲ ಬಾರಿಗೆ ಟೀಸರ್ ನೋಡುವುದಕ್ಕಾಗಿ ಟಿಕೆಟ್ ಖರೀದಿಸಬೇಕಿತ್ತು. ಟೀಸರ್ ನೋಡಿದ ನಂತರ ಟಿಕೆಟ್ ಹಣಕ್ಕೆ ಮೋಸವಾಗಿಲ್ಲ ಎಂದಿದ್ದಾರೆ ಅಭಿಮಾನಿಗಳು. ಆ ರೀತಿಯಲ್ಲಿ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ.

    ಮಾರ್ಟಿನ್ ಸಾಹಸ ಪ್ರಧಾನ ಸಿನಿಮಾ ಎನ್ನುವುದು ಟೀಸರ್ ನ ಪ್ರತಿ ಫ್ರೇಮ್ ಹೇಳುತ್ತದೆ. ಅದರಲ್ಲೂ ಅಚ್ಚರಿ ಮೂಡುವಂತಹ ಮೈಕಟ್ಟಿನ ಧ್ರುವ ಸರ್ಜಾ ಎದುರಾಳಿಗಳನ್ನು ಕುಟ್ಟಿ ಪುಡಿ ಮಾಡುವುದನ್ನು ನೋಡುವುದೇ ರೋಮಾಂಚನ. ಆ ಮಟ್ಟಿಗೆ ಚಿತ್ರದಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ ಧ್ರುವ ಸರ್ಜಾ. ಟೀಸರ್ ತುಂಬಾ ಹೊಡೆದಾಟ, ಬಂದೂಕು, ಬಾಂಬುಗಳೇ ಘರ್ಜಿಸಿವೆ. ಅದರಲ್ಲೂ ಕಾರ್ ಚೇಸ್ ದೃಶ್ಯ ಮತ್ತಷ್ಟು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

    ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ. ಆ ನಾಯಕನ ಸುತ್ತ ಹೆಣೆದಿರುವ ಕಥೆ ಮಾರ್ಟಿನ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್ ಏನಿರಲಿದೆ ಎನ್ನುವುದು ಕುತೂಹಲದ ಪ್ರಶ್ನೆ. ಒಟ್ಟಿನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ನಿರ್ದೇಶಕರ ಶ್ರಮವೂ ಎದ್ದು ಕಾಣುತ್ತದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k