Tag: ಎ.ನಾರಾಯಣ ಸ್ವಾಮಿ

  • ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ – ಶಾಲೆಗೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಆರ್‌.ಅಶೋಕ್‌ ಭೇಟಿ

    ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ – ಶಾಲೆಗೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಆರ್‌.ಅಶೋಕ್‌ ಭೇಟಿ

    – ರಾಜ್ಯ ಸರ್ಕಾರದ ಕಮಿಷನ್‌ ದಂಧೆಯ ಒಂದು ಭಾಗವೇ ಈ ಘಟನೆ: ವಿಪಕ್ಷ ನಾಯಕ

    ಕೋಲಾರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ನೀಡಿ, ಮಕ್ಕಳಿಂದ ಮಲದ ಗುಂಡಿ ಕ್ಲೀನ್ (Septic Tank​) ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕೇಂದ್ರ ಸಚಿವ ಎ.ನಾರಾಯಣಸ್ವಾಮಿ (A.Narayanaswmy), ಸಂಸದ ಮುನಿಸ್ವಾಮಿ (Muniswamy), ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ (Byrathi Suresh), ಶಾಸಕ ಕೆ.ವೈ.ನಂಜೇಗೌಡ, ವಿಪಕ್ಷ ನಾಯಕ ಆರ್.ಅಶೋಕ್‌ (R.Ashok) ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್

    ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ, ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ವಿಷಯವೇ ಇಲ್ಲ. ಈಗಾಗಲೇ ನಾಲ್ಕು ಜನರ ಮೇಲೆ ಎಫ್​ಐಆರ್​ ಮಾಡಲಾಗಿದೆ. ಇಬ್ಬರನ್ನು ಬಂಧಿಸಿದ್ದು, ಉಳಿದವರನ್ನು ಬಂಧಿಸುತ್ತೇವೆ. ಇದು ಹಣ ಹಂಚಿಕೊಳ್ಳುವ ವಿಚಾರಕ್ಕೆ ನಡೆದಿರುವ ಗಲಾಟೆ. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಎರಡು ಗುಂಪುಗಳಾಗಿದ್ದು, ಅದಾದ ನಂತರ ಇಷ್ಟೆಲ್ಲಾ ಘಟನೆ ನಡೆದಿದೆ. ಒಂದು ತಿಂಗಳ ಹಿಂದಷ್ಟೇ ವಸತಿ ಶಾಲೆಯ ನಿರ್ವಹಣೆಗೆಂದು 25 ಸಾವಿರ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲೂ ಗಲಾಟೆ ಮಾಡಿಕೊಂಡಿದ್ದಾರೆ. ದುಡ್ಡು ಕೊಟ್ಟು ಕ್ಲೀನ್​ ಮಾಡಿಸೋದೇಕೆ ಅಂತಾ ಮಕ್ಕಳ ಕೈಯಿಂದ ಕ್ಲೀನ್​ ಮಾಡಿಸಿದ್ದಾರೆ. ಇಲ್ಲೂ ಹಣ ಹೊಡೆಯುವ ಕಮಿಷನ್​ ದಂಧೆ, ಮಕ್ಕಳಿಂದ ಇಂಥ ಹೇಯ ಕೃತ್ಯ ಮಾಡಿಸಿರುವವರ ವಿರುದ್ದ ನಾವು ತೆಗೆದುಕೊಳ್ಳುವ ಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆ ಎಂದು ತಿಳಿಸಿದರು.

    ವಿಪಕ್ಷ ನಾಯಕ ಆರ್​.ಅಶೋಕ್​ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಛಲವಾಧಿ ನಾರಾಯಣಸ್ವಾಮಿ, ಭಾರತಿಶೆಟ್ಟಿ ಹಾಗೂ ತೇಜಸ್ವಿನಿ ರಮೇಶ್​ ಸೇರಿದಂತೆ ಬಿಜೆಪಿ ನಾಯಕರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಆರ್‌.ಅಶೋಕ್‌, ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಈ ಘಟನೆ. ರಾಜ್ಯ ಸರ್ಕಾರದಲ್ಲಿ ಕಮಿಷನ್​ ದಂಧೆ ನಡೆಯುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇವೆ. ಕಮಿಷನ್​ ದಂಧೆಯ ಒಂದು ಭಾಗವೇ ಈ ಘಟನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಕೋಲಾರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅಮಾನವೀಯ ಘಟನೆ

    ಘಟನೆ ಏನು?
    ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ​ ಮಾಡಿಸಿರುವ ವೀಡಿಯೋ ವೈರಲ್‌ ಆಗಿತ್ತು. ಈ ಹಿನ್ನೆಲೆ ಸಮಾಜ ಕಲ್ಯಾಣ ಸಚಿವರು, ಶಾಲೆಯ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕರಾದ ಮುನಿಯಪ್ಪ, ಅಭಿಷೇಕ್​ ಹಾಗೂ ವಾರ್ಡನ್​ ಮಂಜುನಾಥ್ ಅವರನ್ನು ಅಮಾನತು ಮಾಡಲು ಸೂಚಿಸಿದ್ದರು. ಅಲ್ಲದೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿತ್ತು. ನಂತರ ಪ್ರಾಂಶುಪಾಲೆ ಭಾರತಮ್ಮ ಮತ್ತು ಮುನಿಯಪ್ಪರನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಮಾಸ್ತಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಕಾಂಗ್ರೆಸ್ ಕುರ್ಚಿಗಾಗಿ ರಾಜಕಾರಣ ಮಾಡೋದು‌ : ಎ. ನಾರಾಯಣ ಸ್ವಾಮಿ

    ಕಾಂಗ್ರೆಸ್ ಕುರ್ಚಿಗಾಗಿ ರಾಜಕಾರಣ ಮಾಡೋದು‌ : ಎ. ನಾರಾಯಣ ಸ್ವಾಮಿ

    ಚಿತ್ರದುರ್ಗ: ಕಾಂಗ್ರೆಸ್ ಕುರ್ಚಿಗಾಗಿ‌ ರಾಜಕಾರಣ‌ ಮಾಡೋದು ಜಗಜ್ಜಾಹಿರು ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ವಿರೋಧ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಚಿತ್ರದುರ್ಗದ‌ ಜಿಲ್ಲಾ ಪಂ‌ಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಕೆಡಿಪಿ‌ ಸಭೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ‌ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ವಿವೇಚನೆ ಇಲ್ಲದೇ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಿಗೆ ವಿವೇಚನೆ‌ ಇಲ್ಲ, ಅನ್ನೊದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿವೆ.  ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಕೋವಿಡ್ ಸಂಖ್ಯೆ ‌ಹೆಚ್ಚಾಗುತ್ತಿದೆ.15 ರಿಂದ 17000 ಕೇಸ್ ಬರ್ತಿವೆ. ಈ ವೇಳೆ ಕಾಂಗ್ರೆಸ್‌ ನಾಯಕರು ದಂಡು ಕಟ್ಕೊಂಡು ಬೆಂಗಳೂರಿಗೆ ಬರ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯದ ಜನರನ್ನು ತಪ್ಪು‌ದಾರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ರಾಜ್ಯದ ಹಿತಕ್ಕಿಂತ ಕೈ ನಾಯಕರಿಗೆ ರಾಜಕಾರಣ‌ವೇ ಮುಖ್ಯವಾಗಿದೆ. ಅವರು ಉದ್ದೇಶ ಗಮನಿಸಿದಾಗ ಅಧಿಕಾರ ಹಾಗೂ ಕುರ್ಚಿ ಮುಖ್ಯ ಅಂತ ತೋರುತ್ತಿದೆ. ಜನರ ಆರೋಗ್ಯ ಹಾಗೂ ರಾಜ್ಯ, ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಾಂಗ್ರೆಸ್‌ಗೆ ಕಮಿಟ್ಮೆಂಟ್ ಇಲ್ಲ. ಕೇವಲ ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ‌ ಎಲ್ಲಾ ರಾಜಕಾರಣ ಮಾಡುತ್ತಿದ್ದಾರೆ, ಅನ್ನೋದು ಜಗಜ್ಜಾಹಿರಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಕೈ ನಾಯಕರು ಕೋವಿಡ್ ನಿಯಂತ್ರಣಕ್ಕೆ‌ ಬಂದ‌ ಬಳಿಕ ಪ್ರತಿಭಟಿಸಲು ಅನೇಕ ದಾರಿಗಳು, ಸಮಯವಿದೆ. ಕೊರೊನಾ ನಿಯಂತ್ರಣ ಬಂದ ಬಳಿಕ ಮಾಡುವ ಪ್ರತಿಭಟನೆಗಳನ್ನ ಬಿಜೆಪಿ ಸರ್ಕಾರ ಕೂಡ ಸ್ವಾಗತಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿಗೆ ಪತ್ರ ಬರೆದ ನೈಜ ಹೋರಾಟಗಾರರ ವೇದಿಕೆ

    bjp - congress

     ಡಿ.ಕೆ.ಸುರೇಶ್ ‘ಗಂಡಸ್ತನ’ ಕುರಿತ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಕಾಂಗ್ರೆಸ್ ನವರಿಗೆ ಈ ಬಗ್ಗೆ ಮರುಪ್ರಶ್ನೆ ಮಾಡಬೇಕಾಗುತ್ತದೆ. ರಾಜ್ಯ, ದೇಶದಲ್ಲಿ ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಆಡಳಿತ ನಡೆಸಿದೆ. ಆಗ ನಿಮ್ಮ ಆಡಳಿತದಲ್ಲಿ ನೀವೇನು ಮಾಡಿದ್ದೀರಿ ಅಂತ ಜನ ಗಮನಿಸಿದ್ದಾರೆ. ಅಲ್ಲದೇ ಕೇಂದ್ರ‌ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ದಾಗ ಏಕೆ ಅನಮತಿ ಪಡೆಯಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಸರ್ಕಾರ ಕೇಸು‌ ಹಾಕಿ ಕೈತೊಳೆದು ಕೊಂಡರೆ ಕೋರ್ಟ್ ಸುಮ್ಮನಿರಲ್ಲ. ಈಗಾಗಲೇ ಕೇಸ್ ಹಾಕಿದ್ದು ಕಾನೂನು ಕ್ರಮ ಸಹ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ

    ಹಿರಿಯ ಸಚಿವ ಗೋವಿಂದ ಕಾರಜೋಳ ನಾಲಾಯಕ್ ಎಂದಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕೆಂಡಮಂಡಲವಾದ ಸಚಿವ ನಾರಾಯಣ ಸ್ವಾಮಿ ಅವರು, ನಾಲಾಯಕ್ ಯಾರಾಗಿದ್ದರು, ಯಾಕೆ ಅವರನ್ನು ಮಂತ್ರಿ ಮಾಡದೆ ಕೈಬಿಟ್ಟರು ಅನ್ನೋ ಬಗ್ಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅರ್ಥ ಮಾಡಿಕೊಳ್ಳಲಿ.ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಹೋಗಿದ್ದಾಗ ಅವರ ಪಕ್ಷವೇ ಅವರನ್ನು ಕೈಬಿಟ್ಟಿದೆ. ಇಂತಹ ವೇಳೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ವಯಸ್ಸಿಗೆ ತಕ್ಕಂತೆ ಮಾತಾಡಬೇಕು‌ ಎಂದು ಕಿಡಿಕಾರಿದರು.

    ಈಗ‌ ನಿಮ್ಮ ಬಳಿ ದುಡ್ಡಿರಬಹುದು, ದುರಹಂಕಾರ ಇರಬಹುದು ಆದರೆ, ಕಾರಜೋಳ ಬಗ್ಗೆ ಹೀಯಾಳಿಸಿ ಮಾತಾಡಿದರೆ ನಮ್ಮ ಘನತೆಗೆ ಧಕ್ಕೆಯಾಗಲಿದೆ‌ ಎಚ್ವರವಾಗಿ ಮಾತನಾಡಬೇಕಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ತಿರುಗೇಟು‌ನೀಡಿದರು.

  • ಮೋದಿ ಹುಟ್ಟುಹಬ್ಬ ಪ್ರಯುಕ್ತ ಮಕ್ಕಳಿಗೆ ಬ್ಯಾಗ್, ಪೆನ್ನು ವಿತರಿಸಿದ ನಾರಾಯಣ ಸ್ವಾಮಿ

    ಮೋದಿ ಹುಟ್ಟುಹಬ್ಬ ಪ್ರಯುಕ್ತ ಮಕ್ಕಳಿಗೆ ಬ್ಯಾಗ್, ಪೆನ್ನು ವಿತರಿಸಿದ ನಾರಾಯಣ ಸ್ವಾಮಿ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಬ್ಯಾಗ್ ಪುಸ್ತಕ ಮತ್ತು ಪೆನ್ನುಗಳನ್ನು ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ವಿತರಿಸಿದ್ದಾರೆ.

    ನಾರಾಯಣ ಸ್ವಾಮಿ ಇಂದು ಪ್ರಧಾನಿ ನರೇಂದ್ರ ಮೋದಿರವರ 71 ಜನ್ಮದಿನವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಗಿಹಟ್ಟಿ (ಗೊಲ್ಲರ ಹಟ್ಟಿ) ಗ್ರಾಮದಲ್ಲಿ ಆಚರಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೋಗಿಹಟ್ಟಿ ಗ್ರಾಮದ ಪ್ರಾರ್ಥಮಿಕ ಶಾಲೆಗೆ ಹೆಚ್ಚಿನ ಕೊಠಡಿಗಳನ್ನು ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ನೀಡುವ ಭರವಸೆ ನೀಡಿದ್ದಾರೆ.

    ಶಿಕ್ಷಣದಿಂದ ಮಾತ್ರ ಸಮಾಜ ಮತ್ತು ದೇಶದ ಅಭಿವೃಧ್ಧಿ ಸಾಧ್ಯ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ. ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಬಸ್ ಬಿಡುವಂತೆ ನಿರ್ದೇಶನ ನೀಡುವುದಾಗಿ ಹೇಳಿದರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ, ಪೆನ್ಸಿಲ್, ಪೆನ್ ವಿತರಣೆ ಮಾಡಿದ್ದಾರೆ.

  • BJPಅಂದ್ರೆ ಬ್ರಾಹ್ಮಣರ ಪಕ್ಷ ಅಂತ ಅಪಪ್ರಚಾರ ಮಾಡಿದ್ದರು: ನಾರಾಯಣ ಸ್ವಾಮಿ

    BJPಅಂದ್ರೆ ಬ್ರಾಹ್ಮಣರ ಪಕ್ಷ ಅಂತ ಅಪಪ್ರಚಾರ ಮಾಡಿದ್ದರು: ನಾರಾಯಣ ಸ್ವಾಮಿ

    ದಾವಣಗೆರೆ: ಬಿಜೆಪಿ ಅಂದ್ರೆ ಬ್ರಾಹ್ಮಣರ ಪಕ್ಷ ದಲಿತರು ಹಿಂದುಳಿದವರು ಅಲ್ಲಿ ಹೋಗ ಬೇಡಿ ಅಪಪ್ರಚಾರ ಮಾಡಲಾಗಿತ್ತು ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದ್ದಾರೆ.

    ಬಿಜೆಪಿ ಅಂದ್ರೆ ಬ್ರಾಹ್ಮಣರ ಪಕ್ಷ, ದಲಿತರು ಹಿಂದುಳಿದವರು ಅಲ್ಲಿ ಹೋಗಬೇಡಿ. ಅದು ಗರ್ಭಗುಡಿ ಸಂಸ್ಕೃತಿ ಪಕ್ಷ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು ಎಂದು ನಾರಾಯಣ ಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

     

    ದಾವಣಗೆರೆ ನಗರದಲ್ಲಿರುವ ಶಾಮನೂರು ಶಿವಶಂಕರಪ್ಪ ಸಭಾಗಣದಲ್ಲಿ ನಡೆದ ಜನಶೀರ್ವಾದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಆರ್‍ಎಸ್‍ಎಸ್ ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಹಿಂದುಳಿದ ಜನಾಂಗ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಿದೆ. ಇದು ಬಿಜೆಪಿ ಶಕ್ತಿ ಎಂದು ಆಕ್ರೋಶಭರಿತವಾಗಿ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಸಚಿವ ಸಂಪುಟದಲ್ಲಿ 22 ಜನ ಎಸ್‍ಸಿ, ಎಸ್ ಟಿ ಸಂಸದರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿ

    ಕೇಂದ್ರ ಸರ್ಕಾರ ಬಜೆಟ್ ಗಳಲ್ಲಿ ಶೇ.22 ರಷ್ಟು ಹಣ ಎನ್.ಜಿ.ಓಗಳಿಗೆ ಹೋಗುತ್ತದೆ. ಈ ಎನ್.ಜಿ.ಓಗಳನ್ನ ಬಿಜೆಪಿ ಆರ್.ಎಸ್.ಎಸ್ ಅಥವಾ ಡಿಎಸ್‍ಎಸ್ ನಡೆಸುತ್ತಿಲ್ಲ. ಈ ಎನ್.ಜಿ.ಓ ಗಳು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ. ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ನೇರ ಬೆಂಗಳೂರು ಮಾರ್ಗಕ್ಕೆ ಕೇಂದ್ರ ಒಪ್ಪಿದೆ. ಇದಕ್ಕಾಗಿ 925 ಕೋಟಿ ಹಣ ಕೇಂದ್ರ ಬಿಡುಗಡೆ ಮಾಡಿದೆ. ಶೇಖಡಾ 50 ರಷ್ಟು ಹಣ ರಾಜ್ಯ ಸರ್ಕಾರ ಕೊಡಬೇಕು. ಇಷ್ಟರಲ್ಲಿ ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಎ ನಾರಾಯಣ ಸ್ವಾಮಿ ತಿಳಿಸಿದರು.

  • ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

    ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

    – ಸಿಎಂ ಸ್ಥಾನ ಬದಲಾವಣೆ ವಿಚಾರ ಮುಗಿದ ಅಧ್ಯಾಯ

    ಚಿತ್ರದುರ್ಗ: ಕೊರೊನಾ ಎರಡನೇ ಅಲೆ ಆರ್ಭಟ ದಿಂದಾಗಿ ಹಲವು ಕುಟುಂಬಗಳು ಮನೆಯ ಸದಸ್ಯರನ್ನು ಕಳೆದುಕೊಂಡು ವಿನಾಶದ ಅಂಚಿನಲ್ಲಿವೆ ಆದರು ಸಾರ್ವಜನಿಕವಾಗಿ ಜನರು ಜಾಗೃತರಾಗಿಲ್ಲವೆಂದು ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೋಂಕಿನಿಂದ ನಿಧನರಾದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ಅರವಿಂದ ಲಿಂಬಾವಳಿ

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಬಿಎಂ ಜಿಹೆಚ್ ಪ್ರೌಢಶಾಲಾ ಆವರಣದಲ್ಲಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡನೇ ಅಲೆಯ ಬಗ್ಗೆ ಯಾರು ಸಹ ಗಂಭೀರವಾಗಿ ಪರಿಗಣಿಸಲಿಲ್ಲ. ಈಗಾಗಲೇ ಕೋರೊನಾದಿಂದಾಗಿ ಹಲವರು ತಂದೆ ತಾಯಿಗಳನ್ನು ಕಳೆದುಕೊಂಡಿದ್ದಾರೆ. ಕೆಲವರು ಮಕ್ಕಳು ಅಣ್ಣತಮ್ಮರನ್ನು ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲೂ ನಿರ್ಲಕ್ಷ್ಯವಹಿಸದೇ ಎಲ್ಲರು ತಪ್ಪದೇ ಕೊರೊನಾ ವ್ಯಾಕ್ಸಿನ್ ಪಡೆದು ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯರನ್ನ ಪತಿಯಾಗಿ ಪಡೆದ ನಾನೇ ಅದೃಷ್ಟವಂತೆ: ಕೊಂಡಾಡಿದ ಪತ್ನಿ ಸುಮಿತ್ರಾ

    ಸಾರ್ವಜನಿಕರು ಎಲ್ಲೆಡೆ ಕಡ್ಟಾಯವಾಗಿ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡ ಕೊರೊನಾವನ್ನು ಹಿಮ್ಮೆಟ್ಟಿಸಬೇಕು. ಪೌರಕಾರ್ಮಿಕರು ಇಲ್ಲದಿದ್ದರೆ ನಗರ ಪರಸ್ಥಿತಿ ಹೇಳತೀರದಾಗಿರುತ್ತು. ನಗರ ಸ್ವಚ್ಚ ಕಾರ್ಯದಲ್ಲಿ ತೋಡಗುವ ಕಾರ್ಮಿಕರು ವೈಯಕ್ತಿಕ ಬದುಕನ್ನು ಬದಿಗೊತ್ತಿ ನಗರ ಸ್ವಚ್ಚತೆಗೆ ಆದ್ಯತೆ ನೀಡುತ್ತಾರೆ. ಮೊದಲು ಪೌರಕಾರ್ಮಿರು ಲಸಿಕೆಯನ್ನು ಪಡೆಯಿರಿ ತಮ್ಮ ಅರೋಗ್ಯ ಕಾಪಾಡುವ ಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ಸಿಎಂ ಸ್ಥಾನ ಬದಲಾವಣೆ ವಿಚಾರ ಮುಗಿದ ಅಧ್ಯಾಯ ಎನಿಸಿದೆ. ನಿನ್ನೆ ರಾಜ್ಯ ಉಸ್ತುವಾರಿ ಅರುಣ್ ಜಿ ಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಸಿಎಂ ಬದಲಾವಣೆ ವಿಚಾರ ಕೇಂದ್ರದಲ್ಲೂ ಇಲ್ಲ, ರಾಜ್ಯದಲ್ಲೂ ಇಲ್ಲ ಹೀಗಾಗಿ ಸಾಮಾನ್ಯ ಕಾರ್ಯಕರ್ತನಿಂದ ರಾಜ್ಯ ನಾಯಕರವರೆಗೆ ಇದೇ ಧೋರಣೆ ನಮ್ಮಲ್ಲಿದೆ. ಸಿಎಂ ಸ್ಥಾನದಿಂದ ಬಿಎಸ್‍ವೈ ಬದಲಾವಣೆ ಚರ್ಚೆ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

    ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ನಗರಸಭೆ ಸದಸ್ಯ ಜಯಣ್ಣ,ಶಿವಕುಮಾರ್, ಬಿಜೆಪಿ ಮುಖಂಡರಾದ ಜಯಪಾಲ ಬಾಳೆಮಂಡಿ ರಾಮದಾಸ್, ದೇವರಾಜ್, ತಿಮ್ಮರಾಜ್, ಶಿಮಮೂರ್ತಿ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್ ಇತರರಿದ್ದರು.