Tag: ಎ ಟಿ ರಾಮಸ್ವಾಮಿ

  • ಡಿಕೆಶಿ ಭೇಟಿಯಾದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ – ಕಾಂಗ್ರೆಸ್‌ ಸೇರಲು ಸಿದ್ಧತೆ

    ಡಿಕೆಶಿ ಭೇಟಿಯಾದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ – ಕಾಂಗ್ರೆಸ್‌ ಸೇರಲು ಸಿದ್ಧತೆ

    ಹಾಸನ: ಚುನಾವಣೆ ಹೊತ್ತಲ್ಲೇ ಜೆಡಿಎಸ್‌ (JDS) ಭದ್ರಕೋಟೆಯಲ್ಲಿ ಈಗ ತಳಮಳ ಶುರುವಾಗಿದೆ. ಹಾಲಿ ಶಾಸಕರ ಪಕ್ಷಾಂತರ ಹಾಗೂ ಟಿಕೆಟ್ ಗೊಂದಲದಿಂದ ಈ ಭಾರಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆಯೇ ಎಂಬ ಚರ್ಚೆಗಳು ಶುರುವಾಗಿವೆ.

    ಅರಸೀಕೆರೆಯ ಜೆಡಿಎಸ್‌ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಅವರು ಕಾಂಗ್ರೆಸ್ (Congress) ಪಕ್ಷ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸಿಟಿ ರವಿ ಆಪ್ತ ಹೆಚ್‌ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ

    ಶೀಘ್ರದಲ್ಲಿಯೇ ತಮ್ಮ ಬೆಂಬಲಿಗರು, ಅಭಿಮಾನಿಗಳ ಸಭೆ ಕರೆದು ಶಿವಲಿಂಗೇಗೌಡ ಅವರು ಚರ್ಚಿಸಲಿದ್ದಾರೆ. ಆನಂತರ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕ್ರಿಯೆಗಳ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಶಿವಲಿಂಗೇಗೌಡರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

    ಇನ್ನೊಂದೆಡೆ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರು ಬಿಜೆಪಿ-ಕಾಂಗ್ರೆಸ್ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಕಾಂಗ್ರೆಸ್‌ನಲ್ಲೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಇದರಿಂದ ರಾಮಸ್ವಾಮಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆಯೂ ರಾಮಸ್ವಾಮಿ ಅವರು ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಮ್ಮನ್ನು ನರಕದಲ್ಲಿಟ್ಟಿದ್ದಕ್ಕೆ ಕಾಂಗ್ರೆಸ್‍ನ್ನು ಜನ ಮನೆಗೆ ಕಳಿಸಿದ್ರು: ಬೊಮ್ಮಾಯಿ ಕಿಡಿ

    ಪಕ್ಷದ ಟಿಕೆಟ್ ಆಕಾಂಕ್ಷಿಗಳ ಮನವೊಲಿಸಿ ರಾಮಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುತ್ತಾ ಎನ್ನುವುದು ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ರಾಮಸ್ವಾಮಿ ನಡೆಯೂ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆ ರಾಮಸ್ವಾಮಿ ಅವರು ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಜೆಡಿಎಸ್‌ ವಿರುದ್ಧ ಸೆಣಸಲು ಇಬ್ಬರು ಹಾಲಿ ಶಾಸಕರು ರಣತಂತ್ರ ರೂಪಿಸುತ್ತಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ: ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ

    ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ: ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ

    ಹಾಸನ: ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (H.D Revanna) ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ (A.T Ramaswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೊಳೆನರಸೀಪುರ ತಾಲ್ಲೂಕಿನ ಜೋಗಿಕೊಪ್ಪಲು ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾವಣನಿಗೆ ಸಕಲ ಐಶ್ವರ್ಯ, ಈಶ್ವರನಿಂದ ಪಡೆದ ಶಕ್ತಿಶಾಲಿ ಅಸ್ತ್ರ ಇದ್ದು ಸಹ ನಾಶವಾದ. ಲಂಕೆ ಕೂಡ ಬೂದಿ ಆಯಿತು. ಯಾವುದಕ್ಕೆ ಆರಂಭ ಇರುತ್ತದೆಯೋ ಅದಕ್ಕೆ ಅಂತ್ಯ ಕೂಡ ಇರುತ್ತದೆ ಎಂದು ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು – ಗುಂಡಿನ ದಾಳಿ

    ನನ್ನಂತಹವನಿಗೆ ಹೀಗೆ ಮಾಡಿದ್ದಾರೆ. ನಿಮ್ಮನ್ನು ಬಿಡುತ್ತಾರಾ? ಎಂದು ಕಾರ್ಯಕರ್ತರಿಗೆ ಕರೆಕೊಟ್ಟ ಅವರು, ನೀವೆಲ್ಲಾ ಸ್ವಾಭಿಮಾನಿಗಳಾಗಬೇಕು. ಆತ್ಮಗೌರವದಿಂದ ನಿಲ್ಲಬೇಕು. ಯಾರ ಮುಂದು ಕೈಕಟ್ಟಿ ನಿಲ್ಲಬಾರದು. ಎಲ್ಲಿ ಜೊತೆಗೆ ಕುಳಿತುಕೊಳ್ಳುವ ಸ್ಥಾನಮಾನ ಇರುತ್ತದೆಯೋ ಅಲ್ಲಿಗೆ ಹೋಗಿ ಎಂದಿದ್ದಾರೆ.

    ಅವರಿಗೆ ಒಳ್ಳೆಯವರು ಬೇಕಾಗಿಲ್ಲ. ಕೆಲವು ಜನ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಸತ್ಯವನ್ನೇ ಸಾಯಿಸುತ್ತಾರೆ. ಅದನ್ನು ಎದುರಿಸುವ ಶಕ್ತಿ ನನಗೆ ಜನ ಕೊಟ್ಟಿದ್ದಾರೆ. ರಾಜಕೀಯವಾಗಿ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

    ದೇವೇಗೌಡರು (H.D. Deve Gowda) ಪ್ರಧಾನಿ ಆಗಿದ್ದವರು. ಈ ದೇಶದ ದೊಡ್ಡ ಹುದ್ದೆಗೆ ಏರಿದ್ದವರು. ಅಂತವರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಹಾಕಿದಂತವರು ನನ್ನನ್ನು ಬಿಡುತ್ತಾರಾ? ಅವರು ಎಂಪಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರೆ ಸರಿ, ಬೇರೆಯವರು ನಿಂತುಕೊಳ್ಳಬಹುದಿತ್ತು. ಆದರೆ ಅವರನ್ನು ತುಮಕೂರಿನಿಂದ ನಿಲ್ಲಿಸಿ ಸೋಲಿಸಿದ್ದನ್ನು ಯಾರು ಮರೆಯುವಂತಿಲ್ಲ ಎಂದು ರೇವಣ್ಣ ವಿರುದ್ಧ ಹರಿಹಾಯ್ದಿದ್ದಾರೆ.

    ದೇವೇಗೌಡರನ್ನು ಕೇವಲ ಉತ್ಸವ ಮೂರ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅಂತಹ ಮುತ್ಸದ್ಧಿ ರಾಜಕಾರಣಿಯನ್ನು ಮೂಲೆಗುಂಪು ಮಾಡಿ ಅವರ ಮಾತನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸರಿಯಾಗಿ ಆಸ್ತಿ ಘೋಷಣೆ ಮಾಡದೆ, ಕೋರ್ಟ್‍ನಲ್ಲಿ ವಿಚಾರಣೆ ನಡೆದು ಶಿಕ್ಷಯಾಗುವ ಸಂದರ್ಭ ಬಂದಾಗ ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರು ಎಂದಿದ್ದಾರೆ.

    ನನ್ನ ಪಕ್ಷದ ಕಾರ್ಯಕರ್ತರು ನನ್ನ ಕುಟುಂಬದವರಿಗಿಂತಲೂ ಹೆಚ್ಚು. ನನ್ನ ಮಕ್ಕಳು ಬೇರೆ ಅಲ್ಲ, ನನ್ನ ಕಾರ್ಯಕರ್ತರು ಬೇರೆ ಅಲ್ಲ ಎಂಬ ಭಾವನೆಯಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ನನ್ನ ಕುಟುಂಬ ಮನೆಗೆ ಮಾತ್ರ ಸೀಮಿತ. ಗಟ್ಟಿ ತಳಪಾಯ ಹಾಕಿಕೊಂಡು ಮುಂದಿನ ರಾಜಕೀಯ ನಿರ್ಧಾರ ತಿಳಿಸುತ್ತೇನೆ. ಮತ್ತೆ ವಿಧಾನಸೌಧಕ್ಕೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.

    ರೇವಣ್ಣ ಅಧಿವೇಶನದಲ್ಲಿ, ರಾಮಸ್ವಾಮಿ ಪ್ರಾಮಾಣಿಕರು ಅದರಲ್ಲಿ ಬೇರೆ ಮಾತಿಲ್ಲ ಎಂದಿದ್ದಾರೆ. ಅವರ ಒಳಗೊಂದು ಹೊರಗೊಂದು ಇದ್ದರೆ ನಾನೇನು ಮಾಡಲಿ ಎಂದು ಪ್ರತಿಕ್ರಿಸಿದ್ದಾರೆ.

    ರೈತರ ಪಕ್ಷ ಎಂದು ಕಟ್ಟಿರುವ ಪಕ್ಷ ಕ್ಷೀಣಿಸುತ್ತಿದೆ ಎಂದು ಮೂರು ವರ್ಷಗಳ ಹಿಂದೆ ಸದನದಲ್ಲಿ ಹೇಳಿದ್ದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತಿವೆ. ಹಿಂದಿನಿಂದ ಇದ್ದ ಪ್ರಾದೇಶಿಕ ಪಕ್ಷ ಯಾಕೆ ಕ್ಷೀಣಿಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

    ರೈತರ ಹೆಸರು ಹೇಳುತ್ತಾರೆ. ರೈತರಿಗೆ ಜಮೀನು ಮಂಜೂರು ಮಾಡಲು ಹೋದರೆ, ಮಾಡಿಕೊಡಬೇಡಿ ಎಂದು ಅಧಿಕಾರಿಗಳಿಗೆ ಹೇಳುತ್ತಾರೆ ಇದು ರೈತರ ಪಕ್ಷನಾ? ರೈತರ ಪರವಾಗಿ ಕೆಲಸ ಮಾಡುತ್ತಿದೆಯಾ? ರೈತರ ಹಿತ ಕಾಪಾಡುವ ಕೆಲಸ ಆಗಿದೆಯೇ? ರೈತರು ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಜನ ಇದ್ದಾರೆ. ಅದನ್ನು ಎದುರಿಸುವ ಶಕ್ತಿ ನನಗಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

    ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದುಕೊಂಡಿದ್ದಾರೆ ಅದು ಸಾಧ್ಯವಿಲ್ಲ. ನಾನು ಮತ್ತೆ ಶಾಸಕನಾಗುತ್ತೇನೆ. ನೆಲ ಹಾಗೂ ಜನರ ರಕ್ಷಣೆಗೆ ನನ್ನ ತಲೆ ಬೇಕಾದ್ರೂ ತೆಗೆಯಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಿಡ್ನಿ ಮಾರಿ ದುಡ್ಡು ಕೊಡ್ತೀನಿ.. ನಮ್ಮ ನಾಯಕರಿಗೆ ಟಿಕೆಟ್ ಕೊಡಿ – ಯುವಕನ ಹುಚ್ಚಾಟ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಎ.ಮಂಜು – ರೇವಣ್ಣ ವಿರುದ್ಧ ಎ.ಟಿ ರಾಮಸ್ವಾಮಿ ಬೇಸರದ ಮಾತು

    ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಎ.ಮಂಜು – ರೇವಣ್ಣ ವಿರುದ್ಧ ಎ.ಟಿ ರಾಮಸ್ವಾಮಿ ಬೇಸರದ ಮಾತು

    ಹಾಸನ: ಜೆಡಿಎಸ್‍ (JDS) ನ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಹಾಲಿ ಇಬ್ಬರು ಶಾಸಕರು ಜೆಡಿಎಸ್‍ಗೆ ಗುಡ್‍ಬೈ ಹೇಳುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಹಾಸನದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದಿದೆ.

    ಹಾಸನ ಜಿಲ್ಲೆ ಜೆಡಿಎಸ್‍ನಲ್ಲಿ ಅಚ್ಚರಿ ಬೆಳವಣಿಗೆ ನಡೆಯುತ್ತಿದೆ. ಹಾಸನ ಜಿಲ್ಲೆಯ ಅರಸೀಕೆರೆ, ಅರಕಲಗೂಡು ವಿಧಾನಸಭಾ ಕ್ಷೇತ್ರ (Arakalagudu vidhanasabha Constituency) ಗಳ ಹಾಲಿ ಶಾಸಕರುಗಳಾದ ಎ.ಟಿ.ರಾಮಸ್ವಾಮಿ (A.T Ramaswamy) ಹಾಗೂ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಮಧ್ಯೆ 2023ರ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಎ.ಮಂಜು (A Manju) ಅಂತ ಸ್ವತಃ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೊಂದೆಡೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಫೆ.14 ತಮ್ಮ ಹುಟ್ಟುಹಬ್ಬದ ದಿನದಂದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ 2 ವಿಕೆಟ್ ಪತನ- ಕಾಂಗ್ರೆಸ್ ಸೇರ್ತಾರಾ ಶಿವಲಿಂಗೇಗೌಡ, ಎಟಿಆರ್?

    ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಎ. ಮಂಜು ಕಣಕ್ಕಿಳಿಯಲಿದ್ದಾರೆ. ಅಲ್ಲದೇ ತಮ್ಮ ಮಗನನ್ನೂ ಜೆಡಿಎಸ್‍ಗೆ ಮಂಜು ಆಹ್ವಾನಿಸಿದ್ದಾರೆ. ಕಾಂಗ್ರೆಸ್ (Congress) ತೊರೆಯಲು ಪಕ್ಷದಲ್ಲಿನ ಕಡಗಣನೆ ಅಂತ ದೂರಿದ್ದಾರೆ. ಎ.ಮಂಜು ಜೆಡಿಎಸ್ ಸೇರ್ಪಡೆ ಬೆನ್ನಲ್ಲೇ ಅರಕಲಗೂಡು ಕ್ಷೇತ್ರದಲ್ಲಿ ಕೋಲಾಹಲ ಶುರುವಾಗಿದೆ. ಶಾಸಕ ಎ.ಟಿ.ರಾಮಸ್ವಾಮಿ ಎಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿಯೇ ತನ್ನ ಮಗುವಿಗೆ ಹಾಲು ಕೊಡದೆ ವಿಷ ಕೊಟ್ಟರೆ ಮಗು ಹೇಗೆ ಬದುಕುತ್ತೆ..? ನನ್ನ ನಡೆ ಬಗ್ಗೆ. ಜನರ ತೀರ್ಮಾನಕ್ಕೆ ಬಿಟ್ಟಿದ್ದೀನಿ ಅಂತ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

    ಜೆಡಿಎಸ್‍ನ ಭದ್ರಕೋಟೆಯಲ್ಲೇ ಹಾಲಿ ಶಾಸಕರು ಪಕ್ಷ ತೊರೆಯುತ್ತಿರುವುದು ಜೆಡಿಎಸ್ ನಾಯಕರಿಗೆ ದೊಡ್ಡ ತಲೆ ನೋವಾಗಿತ್ತು. ಆದರೆ ಅರಕಲಗೂಡು ಕ್ಷೇತ್ರಕ್ಕೆ ಎ.ಟಿ.ರಾಮಸ್ವಾಮಿ ತಂದಂತೆ, ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೂ ಅಚ್ಚರಿಯ ಅಭ್ಯರ್ಥಿ ಘೋಷಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎ.ಟಿ ರಾಮಸ್ವಾಮಿ ರಾಜೀನಾಮೆ

    ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎ.ಟಿ ರಾಮಸ್ವಾಮಿ ರಾಜೀನಾಮೆ

    ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮತ್ತೊಂದು ವಿಕೆಟ್ ಪತನಗೊಂಡಿದ್ದು, ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ.

    ರಾಮಸ್ವಾಮಿ ಅವರು ಈಗಾಗಲೇ ತನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್ ಮತ್ತು ಮುಖ್ಯಮಂತ್ರಿಗೆ ರವಾನಿಸಿದ್ದಾರೆ. ಈ ಮೂಲಕ ಶಾಸಕರ ರಾಜೀನಾಮೆಯ ಹಿಂದೆ ಸರ್ಕಾರ ಭೂಗಳ್ಳರ ರಕ್ಷಣೆಗೆ ಮುಂದಾಗಿದೆಯಾ ಅನ್ನೋ ಅನುಮಾನವೊಂದು ಮೂಡಿದೆ.

    ಕೆಂಗೇರಿ ಸಮೀಪದ ಬಿಎಂ ಕಾವಲು ಪ್ರದೇಶದಲ್ಲಿ 305 ಎಕರೆ ಭೂಗಳ್ಳರ ಪಾಲಾಗಿದೆ. ಭೂಗಳ್ಳರಿಂದ ಸರ್ಕಾರಿ ಭೂಮಿ ವಶಕ್ಕೆ ಪಡೆಯಲು ಮೈತ್ರಿ ಸರ್ಕಾರ ಹಿಂದೆ ಸರಿದಿದೆ. ಅಲ್ಲದೆ 300 ಎಕರೆಗೂ ಹೆಚ್ಚು ಭೂಮಿ ತೆರವಿಗೆ ಸರ್ಕಾರ ಮುಂದಾಗಲಿಲ್ಲ. ಇದರಿಂದ ಬೇಸರಗೊಂಡು ರಾಮಸ್ವಾಮಿ ಅವರು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಎಚ್ ವಿಶ್ವನಾಥ್ ಹೇಳಿದ್ದು ಹೀಗೆ

    ಭೂಗಳ್ಳತನದ ವಿಚಾರವನ್ನು ಶಾಸಕರು ಕಳೆದ ಬೆಳಗಾವಿ ಅಧಿವೇಶನದಲ್ಲೂ ಸರ್ಕಾರದ ಗಮನಕ್ಕೆ ತಂದಿದ್ದರು. ಆ ಸಂದರ್ಭದಲ್ಲಿ ಲ್ಯಾಂಡ್ ಮಾಫಿಯಾಕ್ಕೆ ಸರ್ಕಾರ ಮಣಿದಿತ್ತು. ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ರಾಜೀನಾಮೆ ನೀಡಿದ್ದರು.