Tag: ಎ.ಎಸ್.ಪೊನ್ನಣ್ಣ

  • ಮಡಿಕೇರಿ-ನಾಪೋಕ್ಲು-ವಿರಾಜಪೇಟೆ ಮಾರ್ಗ ಬಸ್ ಸಂಚಾರಕ್ಕೆ ಪೊನ್ನಣ್ಣ ಚಾಲನೆ

    ಮಡಿಕೇರಿ-ನಾಪೋಕ್ಲು-ವಿರಾಜಪೇಟೆ ಮಾರ್ಗ ಬಸ್ ಸಂಚಾರಕ್ಕೆ ಪೊನ್ನಣ್ಣ ಚಾಲನೆ

    ಕೊಡಗು: ಮಡಿಕೇರಿ-ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗವಾಗಿ ಮೈಸೂರಿಗೆ ಹಾಗೆಯೇ ಮೈಸೂರು-ವಿರಾಜಪೇಟೆ-ಕೆದಮುಳ್ಳೂರು-ಯಡಪಾಲ-ನಾಪೋಕ್ಲು-ಮಡಿಕೇರಿ ಮಾರ್ಗದ ಕೆಎಸ್‍ಆರ್‌ಟಿಸಿ ಬಸ್ ಸಂಚಾರಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ (A.S.Ponnanna) ಬುಧವಾರ ಚಾಲನೆ ನೀಡಿದರು.

    ನಾಪೋಕ್ಲುವಿನಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಬೆಳಗ್ಗೆ 7 ಗಂಟೆಗೆ ಮಡಿಕೇರಿಯಿಂದ ಹೊರಟು ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗವಾಗಿ ಮೈಸೂರಿಗೆ ತೆರಳಿ ಮತ್ತೆ ಅದೇ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಹೇಳಿದರು. ಹಲವು ವರ್ಷಗಳಿಂದ ಇಲ್ಲಿನ ಸ್ಥಳೀಯರು ಕೆಎಸ್‍ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸಾರ್ವಜನಿಕರ ಬೇಡಿಕೆ ಈಡೇರಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ – ರಾಜ್ಯದಲ್ಲಿ 2 ಡಿಫೆನ್ಸ್ ಕಾರಿಡಾರ್‌ಗೆ ಮನವಿ

    ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಕರಾದ ಅಮರಲಿಂಗಯ್ಯ, ವಿಭಾಗೀಯ ಸಂಚಲನಾಧಿಕಾರಿ ಜಯ ಶಾಂತಕುಮಾರ್, ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕದ ವ್ಯವಸ್ಥಾಪಕ ಎಂ.ಮೆಹಬೂಬ್ ಅಲಿ ಇತರರು ಇದ್ದರು.

    ಇದೇ ಸಂದರ್ಭದಲ್ಲಿ ಗ್ರಾ.ಪಂ. ವತಿಯಿಂದ ನಿರ್ಮಾಣ ಮಾಡಿರುವ ಬಸ್ ನಿಲ್ದಾಣವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಾಪೋಕ್ಲು ಗ್ರಾ.ಪಂ. ಅಧ್ಯಕ್ಷರಾದ ವನಜಾಕ್ಷಿ, ಉಪಾಧ್ಯಕ್ಷ ಶಶಿ ಮಂದಣ್ಣ, ಪಿಡಿಒ ಚೋಂದಕ್ಕಿ, ಸದಸ್ಯರು ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

  • ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್‌ – ಶಾಸಕ ಪೊನ್ನಣ್ಣ & ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ನಲ್ಲೇನಿದೆ?

    ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್‌ – ಶಾಸಕ ಪೊನ್ನಣ್ಣ & ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ನಲ್ಲೇನಿದೆ?

    – ಶಾಸಕ ಪೊನ್ನಣ್ಣ & ಬಿಜೆಪಿ ಕಾರ್ಯಕರ್ತನ ನಡುವೆ ನಡೆದ ವಾಟ್ಸಪ್‌ ಚಾಟ್‌ನಲ್ಲೇನಿದೆ?
    – ಶಾಸಕರಿಗೆ ವಿನಯ್ ಕೇಳಿದ್ದ ಪ್ರಶ್ನೆ ಏನು? ಅದಕ್ಕೆ ಶಾಸಕರ ರಿಪ್ಲೈ ಹೇಗಿತ್ತು?

    ಮೈಸೂರು: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಶಾಸಕ ಪೊನ್ನಣ್ಣ ಮತ್ತು ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ ಬಹಿರಂಗವಾಗಿದೆ.

    ಜನವರಿಯಲ್ಲಿ ಪೊನ್ನಣ್ಣಗೆ ವಿನಯ್ ಸೋಮಯ್ಯ ಮೆಸೇಜ್‌ ಮಾಡಿದ್ದರು. ಕೊಡಗಿನ ಸಮಸ್ಯೆ, ಸಲಹೆ, ಸೂಚನೆಗಳು ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ಪೊನ್ನಣ್ಣ ಮತ್ತು ವಿನಯ್ ಸೋಮಯ್ಯ ಇಬ್ಬರೂ ಸದಸ್ಯರಾಗಿದ್ದರು. ಆ ವಾಟ್ಸಪ್‌ ಗ್ರೂಪ್‌ನಲ್ಲಿ ಬಂದ ಒಂದು ಆಡಿಯೋ ಡಿಲೀಟ್ ಮಾಡಿಸುವಂತೆ ವೈಯಕ್ತಿಕವಾಗಿ ವಿನಯ್ ಸೋಮಯ್ಯ ಮೆಸೇಜ್‌ ಮಾಡಿದ್ದರು.

    ಆಡಿಯೋ ಕಳಿಸಿದವರ ಮೇಲೆ ಕ್ರಮ ಕೈಗೊಳ್ಳುವ ಅರ್ಹತೆ ಇಲ್ವಾ ಎಂದು ಶಾಸಕ ಪೊನ್ನಣ್ಣರನ್ನು ವಿನಯ್ ಪ್ರಶ್ನಿಸಿದ್ದ. ಅದಕ್ಕೆ, ‘ನಾನು ಸಾವಿರ ಗ್ರೂಪ್‌ನಲ್ಲಿದ್ದೇನೆ. ಎಲ್ಲಾ ನೋಡಿ ಡಿಲೀಟ್ ಮಾಡೋದು ನನ್ನ ಕೆಲಸ ಅಲ್ಲ. ಯೋಚನೆ ಮಾಡಿ ಮೆಸೇಜ್ ಮಾಡಿ. ರಸ್ತೆ, ನೀರು, ಅಭಿವೃದ್ಧಿ ಬಗ್ಗೆ ಕೇಳಿ’ ಎಂದು ಆ ಮೆಸೇಜ್‌ಗೆ ಶಾಸಕರು ರಿಪ್ಲೈ ಮಾಡಿದ್ದರು.

    ಅದಕ್ಕೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ಜನಪ್ರತಿನಿಧಿ ಕೆಲಸ ಅಲ್ಲ ಎಂಬುದು ಈಗ ಗೊತ್ತಾಯಿತು. ನಿಮಗೆ ಹೇಳಿ ಏನೂ ಪ್ರಯೋಜನ ಇಲ್ಲ. Will not disturb any more on this ಎಂದು ವಿನಯ್ ರಿಪ್ಲೈ ಬರೆದಿದ್ದರು. ಈ ಮೆಸೇಜ್‌ಗಳ ಬಗ್ಗೆ ಶಾಸಕ ಪೊನ್ನಣ್ಣ ಅವರು ‘ಪಬ್ಲಿಕ್‌ ಟಿವಿ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  • ರಾಜವಂಶದವರು ಜನರ ಕೈಗೆ ಸಿಗ್ತಾರಾ? ಎದೆ ಮುಟ್ಟಿಕೊಂಡು ಸಿಗ್ತಾರೆ ಎನಿಸಿದ್ರೆ ಮತ ಹಾಕಿ: ಪೊನ್ನಣ್ಣ

    ರಾಜವಂಶದವರು ಜನರ ಕೈಗೆ ಸಿಗ್ತಾರಾ? ಎದೆ ಮುಟ್ಟಿಕೊಂಡು ಸಿಗ್ತಾರೆ ಎನಿಸಿದ್ರೆ ಮತ ಹಾಕಿ: ಪೊನ್ನಣ್ಣ

    – ಪ್ರತಾಪ್ ಸಿಂಹ ಹಲವಾರು ಕೆಲಸ ಮಾಡ್ತಿದ್ರು

    ಮಡಿಕೇರಿ: ಜನಸಾಮಾನ್ಯರಿಗೆ ಯದುವೀರ್ (Yaduveer Wadiyar) ಸಿಗ್ತಾರಾ? ರಾಜವಂಶದಿಂದ ಬಂದವರು ಜನರ ಕೈಗೆ ಸಿಗ್ತಾರೆ ಎಂಬ ಪ್ರಶ್ನೆಗೆ ಯಾರದರೂ ತಮ್ಮ ಎದೆ ಮುಟ್ಟಿಕೊಂಡು ಹೌದು ಎಂಬ ಉತ್ತರ ಸಿಕ್ಕರೆ ಮತ ಹಾಕಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ (A.S Ponnanna) ಹೇಳಿದ್ದಾರೆ.

    ಕೊಡಗಿನ ವಿರಾಜಪೇಟೆಯಲ್ಲಿ ಮಾತಾನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಆಯ್ಕೆಯಾಗಿ ಬಂದ ವ್ಯಕ್ತಿ ಪ್ರತಾಪ್ ಸಿಂಹ (Pratap Simha) ಹಲವಾರು ಕೆಲಸ ಮಾಡ್ತಾ ಇದ್ದರು. ಅವರಿಗೆ ಕಾರಣವೇ ನೀಡದೇ ವಿನಾಕಾರಣ ಎತ್ತಿ ದೂರ ಹಾಕಿದ್ದಾರೆ. ಆಸಕ್ತಿ ಇಲ್ಲದೇ ಇದ್ದವರನ್ನು ರಾಜಕೀಯಕ್ಕೆ ಕರೆತರುವ ಕೆಲಸ ಮಾಡಿದ್ದಾರೆ ಎಂದು ಸಂಸದರ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಇಲ್ಲಿ ಎಲ್ಲಾ ಜಾತಿಗೂ ಗೆಲುವು! ಎಲ್ಲಾ ಜಾತಿಗೂ ಸೋಲು!

    ಸ್ಥಳೀಯವಾಗಿ 24/7 ಜನರೊಂದಿಗೆ ಇದ್ದರೂ ಅವರ ನಿರೀಕ್ಷೆಗಳನ್ನು ಮುಟ್ಟಲು ಸಾದ್ಯವಾಗುತ್ತಿಲ್ಲ. ಜನರು ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು ಎಂದು ಬಯಸುತ್ತಾರೆ. ಆ ನಿರೀಕ್ಷೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬುದು ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ. ಈ ಕೆಲಸ ರಾಜಮನೆತನದಿಂದ ಬಂದವರ ಬಳಿ ಆಗುತ್ತಾ? ಈ ರೀತಿ ಜನ ಆಲೋಚಿಸುತ್ತಿದ್ದಾರೆ. ಯಾರು ಜನಸಾಮಾನ್ಯರ ಕೈಗೆ ಸಿಗ್ತಾರೆ, ಯಾರು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ಈಗ ಅವರ ಬಾಯಿಯಲ್ಲೇ ಬರುತ್ತಿದೆ. ಏಸಿ ರೂಮ್‍ನಲ್ಲಿ ಇದ್ದವರು ಪೊಲೀಸ್ ಠಾಣೆಗೆ ಬರುತ್ತಾರಾ? ಜನರಿಗೆ ಸಮಸ್ಯೆಯಾಗುವಾಗ ಅವರು ಬರುತ್ತಾರಾ? ಎಂದು, ಬಿಜೆಪಿ ಅಭ್ಯರ್ಥಿ ಯದುವೀರ್ ಹೆಸರು ಹೇಳದೆ ಟೀಕಿಸಿದ್ದಾರೆ.

    ರಾಷ್ಟ್ರೀಯ ನಾಯಕರು ಅವರನ್ನು ಆಯ್ಕೆ ಮಾಡಿಕೊಂಡಿರುವುದೇ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆಯನ್ನು ಕೇಳಬೇಕು. ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಪ್ರಶ್ನೆ ಇಷ್ಟೇ, ಜನಸಾಮಾನ್ಯರಿಗೆ ಯದುವೀರ್ ಸಿಗ್ತಾರಾ? ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಇದನ್ನು ಕೆಲ ತಿಂಗಳ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ. ಈಗ ರಾಜಕೀಯ ಆಸಕ್ತಿ ಇಲ್ಲದೇ ಇರುವವರನ್ನು ಜನಸಾಮಾನ್ಯರ ಮೇಲೆ ಯಾಕೆ ಹೇರುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ

  • ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ

    ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಅಮಾನವೀಯವಾಗಿದೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಟೀಕಿಸಿದರು.

    ಕರ್ಫ್ಯೂ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಈಗ ಕಾಫಿ ಬೆಳೆಗಾರರು ತಮ್ಮ ಫಸಲನ್ನು ಕಟಾವು ಮಾಡುವ ಸಮಯ. ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರು, ರೈತರ ಜೀವನೋಪಾಯಕ್ಕೆ ಮಾರಕವಾದಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಕೃಷಿ ಚಟುವಟಿಕೆಗಳಿಗೆ ಅನ್ವಯ ಆಗದಂತೆ ಈ ಕೂಡಲೇ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲದೆ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಹಾಸ್ಯಾಸ್ಪದವಾದ ಕ್ರಮ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ತಮ್ಮ ವಿವೇಚನೆಯನ್ನು ಬಳಸಿ ಕಾನೂನನ್ನು ಜನರ ಪರವಾಗಿ ಅಳವಡಿಸಬೇಕೇ ಹೊರತು ಜನವಿರೋಧಿ ನೀತಿಗಳಿಗೋಸ್ಕರ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

    ಕೂಡಲೇ ಜಿಲ್ಲಾಧಿಕಾರಿಗಳು ಕೊಡಗಿನಲ್ಲಿ ಕಾಫಿ, ಕಾಳು ಮೆಣಸು ಹಾಗೂ ಇತರ ಯಾವುದೇ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಆದೇಶವನ್ನು ಹೊರಡಿಸಿ. ಈ ವೀಕೆಂಡ್ ಕರ್ಫ್ಯೂವನ್ನು ಸಡಿಲಗೊಳಿಸಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

    ಯಾವುದೇ ಕಾನೂನಾತ್ಮಕವಾದಂತಹ ಕ್ರಮಗಳನ್ನು ಕೈಗೊಳ್ಳುವ ಮೊದಲು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಈ ಒತ್ತಾಯವನ್ನು ಪರಿಗಣಿಸಬೇಕು. ಈ ಒತ್ತಾಯವನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತಲುಪಿಸಿ ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.