Tag: ಎ.ಎಚ್ ಲಕ್ಷ್ಮಣ್

  • ಹಾಸನ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಎ.ಎಚ್ ಲಕ್ಷ್ಮಣ್ ನೇಮಕ

    ಹಾಸನ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಎ.ಎಚ್ ಲಕ್ಷ್ಮಣ್ ನೇಮಕ

    ಹಾಸನ: ಜಿಲ್ಲಾ ಕಾಂಗ್ರೆಸ್ (Congress) ನೂತನ ಅಧ್ಯಕ್ಷರನ್ನಾಗಿ ಎ.ಎಚ್.ಲಕ್ಷ್ಮಣ್ (A H Laxman) ಅವರನ್ನು ನೇಮಿಸಿ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿದೆ.

    ಲಕ್ಷ್ಮಣ್ ಜಿ.ಪಂ. ಮಾಜಿ ಸದಸ್ಯರಾಗಿದ್ದು, ಎಂಟು ತಿಂಗಳ ಹಿಂದೆ ಬಿಜೆಪಿ (BJP) ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ರೇಸ್‍ನಲ್ಲಿ ಮಾಜಿ ವಿಧಾನ ಪತಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್ ಇದ್ದರು. ನಿಷ್ಠಾವಂತ ಕಾರ್ಯಕರ್ತರು ಮುಖಂಡರನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಹೈಕಮಾಂಡ್ ಲಕ್ಷ್ಮಣ್‍ಗೆ ಮಣೆ ಹಾಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

    ಲಕ್ಷ್ಮಣ್ ಅವರ ನೇಮಕಕ್ಕೆ ಕಾಂಗ್ರೆಸ್‍ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಎಂಟು ತಿಂಗಳ ಹಿಂದೆ ಬಿಜೆಪಿ ಪಕ್ಷ ಬಿಟ್ಟು ಬಂದವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಸ್ಥಾನ ನೀಡಿದೆ. ಮುಂದಿನ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಭೂತಾರಾಧನೆ ಈಗ ಬೆಂಗಳೂರಿಗೂ ಶಿಫ್ಟ್- ಕೊರಗಜ್ಜನ ಹೆಸರಲ್ಲಿ ಹಣ ವಸೂಲಿ?

    ಬಿಜೆಪಿಯಲ್ಲಿ ಯಾವ ಸ್ಥಾನಮಾನ ಇಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್ ನಾಯಕರ ಅಸಮರ್ಥತೆ ತೋರಿಸುತ್ತದೆ. ಹಾಸನ ಜಿಲ್ಲಾ ಕಾಂಗ್ರೆಸ್‍ನಲ್ಲಿ ಪಕ್ಷ ಕಟ್ಟಲು ಯಾವ ನಾಯಕರಿಲ್ಲದ ಕಾರಣ ಬಿಜೆಪಿಯಿಂದ ಸಾಲ ಪಡೆಯಲಾಗಿದೆ ಎಂದು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಣ್ ನೇಮಕಕ್ಕೆ ಕೈ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗಲೇ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದು ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]