Tag: ಎ.ಆರ್.ರೆಹಮಾನ್

  • ರೆಹಮಾನ್ ಧ್ವನಿಗಾಗಿ ಮದುವೆ ಆದರಂತೆ ಪತ್ನಿ ಸಾಯಿರಾ ಬಾನು

    ರೆಹಮಾನ್ ಧ್ವನಿಗಾಗಿ ಮದುವೆ ಆದರಂತೆ ಪತ್ನಿ ಸಾಯಿರಾ ಬಾನು

    ಸಂಗೀತದ ಮೂಲಕ ಜಗತ್ತನ್ನೇ ತಮ್ಮತ್ತ ಸೆಳೆದುಕೊಂಡಿರುವ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ (AR Rahman) ಕುರಿತಾಗಿ ಪತ್ನಿ ಸಾಯಿರಾ ಬಾನು (Saira Banu) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜೊತೆಗೆ ತಾವು ರೆಹಮಾನ್ ಅವರನ್ನು ಮದುವೆ (Marriage) ಆಗಲು ಅವರ ಕಂಚಿನಕಂಠವೇ ಕಾರಣ ಎಂಬುದನ್ನೂ ತಿಳಿಸಿದ್ದಾರೆ. ಪತಿಯ ಬಗ್ಗೆ ಮಾತನಾಡುವಾಗ ತುಸು ಭಾವುಕರೇ ಆಗಿದ್ದರು ಸಾಯಿರಾ ಬಾನು.

    ಇತ್ತೀಚೆಗಷ್ಟೇ  ವಿಕಟನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು ರೆಹಮಾನ್ ಮತ್ತು ಸಾಯಿರಾ ಬಾನು. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ರೆಹಮಾನ್ ಪತ್ನಿಯನ್ನೂ ವೇದಿಕೆಗೆ ಕರೆದರು. ಎರಡು ಮಾತುಗಳನ್ನು ಹೇಳುವಂತೆ ಕೇಳಿಕೊಂಡರು. ಆ ಸಮಯದಲ್ಲಿ ಸಾಯಿರಾ ಹಿಂದಿಯಲ್ಲಿ ಮಾತನಾಡುವುದಕ್ಕೆ ಶುರು ಮಾಡಿದರು. ಕೂಡಲೇ ಮಧ್ಯ ಪ್ರವೇಶ ಮಾಡಿದ ರೆಹಮಾನ್, ‘ಹಿಂದಿ ಬೇಡ ತಮಿಳಿನಲ್ಲೇ ಮಾತನಾಡು’ ಎಂದು ಹೇಳಿದರು. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಹೆಂಡತಿಗೆ ತಮಿಳಿನಲ್ಲಿ ಮಾತನಾಡು ಎಂದು ರೆಹಮಾನ್ ಹೇಳುವ ವಿಡಿಯೋ ಸಖತ್ ವೈರಲ್ ಆಗಿದೆ. ಪತಿಯ ಮಾತಿಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಾಯಿರಾ, ‘ನನಗೆ ಸಲೀಸಾಗಿ ತಮಿಳು ಮಾತನಾಡಲು ಬರುವುದಿಲ್ಲ, ಕ್ಷಮಿಸಿ’ ಎಂದು ಹೇಳುತ್ತಾ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ. ನಾನು ರೆಹಮಾನ್ ದೊಡ್ಡ ಅಭಿಮಾನಿ. ಅವರ ಕಂಠಕ್ಕೆ ಫಿದಾ ಆದೆ. ನಾನು ಮದುವೆ ಆಗಿದ್ದು ಅವರ ಗಾಯನಕ್ಕಾಗಿ’ ಎಂದಿದ್ದಾರೆ.

  • ಮೂರೂವರೆ ದಶಕದ ನಂತರ ಒಂದಾದ ಕಮಲ್ ಹಾಸನ್ ಮತ್ತು ಮಣಿರತ್ನಂ

    ಮೂರೂವರೆ ದಶಕದ ನಂತರ ಒಂದಾದ ಕಮಲ್ ಹಾಸನ್ ಮತ್ತು ಮಣಿರತ್ನಂ

    ನಾಯಗನ್ ಸಿನಿಮಾದ ನಂತರ ಕಮಲ್ ಹಾಸನ್ (Kamal Haasan) ಮತ್ತು ಮಣಿರತ್ನಂ ಮತ್ತೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ಭಾರತೀಯ ಸಿನಿಮಾ ರಂಗದ ಕನಸಾಗಿತ್ತು. 1987ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ ಅನ್ನೇ ಶೇಕ್ ಮಾಡಿತ್ತು. ಅಲ್ಲದೇ ಇಂಥದ್ದೊಂದು ಸಿನಿಮಾ ಇದೇ ಮೊದಲ ಬಾರಿಗೆ ಬಂದಿದೆಯೇನೋ ಎನ್ನುವಂತೆ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ತುಂಬಿಸಿದ್ದು ಮಾತ್ರವಲ್ಲ, ರಾಷ್ಟ್ರ ಪ್ರಶಸ್ತಿಯನ್ನೂ ತಮ್ಮ ಅಭಿನಯಕ್ಕಾಗಿ ಪಡೆದುಕೊಂಡಿದ್ದರು ಕಮಲ್.

    ಆನಂತರ ಕಮಲ್ ಮತ್ತು ಮಣಿರತ್ನಂ ಮತ್ತೆ ಒಟ್ಟಾಗಿ ಕೆಲಸ ಮಾಡುವುದಕ್ಕೆ ಆಗಲೇ ಇಲ್ಲ. ನಾಯಗನ್ ಸಿನಿಮಾ 175ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡರೂ, ಮತ್ತೆ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲೇ ಇಲ್ಲ. ಹಾಗಾಗಿ ಸಹಜವಾಗಿಯೇ ಈ ಜೋಡಿಯಲ್ಲಿ ಮತ್ತೊಂದು ಸಿನಿಮಾ ಬರಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಬರೋಬ್ಬರಿ 35 ವರ್ಷಗಳ ನಂತರ ಆ ಆಸೆ ಈಡೇರುತ್ತಿದೆ. ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ ಇದೀಗ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಈ ಸಿನಿಮಾವನ್ನು  ಉದಯನಿಧಿ  (Udayanidhi) ನಿರ್ಮಾಣ ಮಾಡಲಿದ್ದು, ಎ.ಆರ್.ರೆಹಮಾನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.

    ಇದು ಕಮಲ್ ಹಾಸನ್ ಅವರ 234ನೇ ಸಿನಿಮಾವಾಗಿದ್ದು, 2024ರಲ್ಲಿ ಈ ಸಿನಿಮಾ ತೆರಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಸತತ ಸೋಲಿನ ಸುಳಿಯಲ್ಲೇ ಸಿಲುಕುತ್ತಿದ್ದ ಕಮಲ್ ಹಾಸನ್, ಏಜೆಂಟ್ ವಿಕ್ರಮ್ ಸಿನಿಮಾದ ಮೂಲಕ ಮತ್ತೆ ಅಬ್ಬರಿಸಿದ್ದಾರೆ. ಈ ಸಿನಿಮಾ ಕಮಲ್ ಅವರ  ಅಷ್ಟೂ ಸಾಲ ತೀರಿಸಿದೆ ಎನ್ನಲಾಗುತ್ತಿದೆ. ಇತ್ತ ಮಣಿರತ್ನಂ ಕೂಡ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಮೂಲಕ ಮತ್ತೊಂದು ಹಿಟ್ ಪಡೆದಿದ್ದಾರೆ. ಈ ಹಿಟ್ ಜೋಡಿಯಿಂದ ಮತ್ತೊಂದು ಹಿಟ್ ಸಿನಿಮಾ ಬರಲಿದೆ ಎನ್ನುವುದು ಇಂಡಸ್ಟ್ರಿ ಕನಸು.

    Live Tv
    [brid partner=56869869 player=32851 video=960834 autoplay=true]

  • ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಭೇಟಿ ಮಾಡಿದ ಆಸ್ಕರ್ ಪ್ರಶಸ್ತಿ ವಿಜೇತ ವಿಲ್ ಸ್ಮಿತ್

    ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಭೇಟಿ ಮಾಡಿದ ಆಸ್ಕರ್ ಪ್ರಶಸ್ತಿ ವಿಜೇತ ವಿಲ್ ಸ್ಮಿತ್

    ಮೊನ್ನೆಯಷ್ಟೇ ಭಾರತಕ್ಕೆ ಬಂದಿಳಿದಿರುವ ಆಸ್ಕರ್ ಪ್ರಶಸ್ತಿ ವಿಜೇತ, ಬಾಲಿವುಡ್ ನಟ  ವಿಲ್ ಸ್ಮಿತ್, ಭಾರತೀಯ ಸಿನಿಮಾ ರಂಗದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಮಾಡಿದ ವಿಷಯವನ್ನು ಬಹಿರಂಗ ಪಡಿಸದೇ ಇದ್ದರೂ, ಇಬ್ಬರ ಭೇಟಿಗೆ ಕುರುಹು ಎನ್ನುವಂತೆ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ರೆಹಮಾನ್ ಮತ್ತು ವಿಲ್ ಸ್ಮಿತ್ ಭೇಟಿಯಾಗಿದ್ದು ಇದು ಎರಡನೇ ಬಾರಿ. ರೆಹಮಾನ್ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆತಾಗ ವಿಲ್ ಸ್ಮಿತ್ ಅವರನ್ನು ಹತ್ತಿರದಿಂದ ಭೇಟಿಯಾಗಿದ್ದರಂತೆ. ಈ ವಿಷಯವನ್ನು ಅವರು ಕಪಿಲ್ ಶರ್ಮಾ ಶೋನಲ್ಲಿ ಹೇಳಿಕೊಂಡಿದ್ದರು. ವಿಲ್ ಸ್ಮಿತ್ ಅವರನ್ನು ಹಾಡಿಹೊಗಳಿದ್ದರು. ಅವರೊಬ್ಬ ಅದ್ಭುತ ವ್ಯಕ್ತಿಯೆಂದು ಕೊಂಡಾಡಿದ್ದರು. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ವಿಲ್ ಸ್ಮಿತ್ ಇದೀಗ ಸದ್ಗುರು ಆಶ್ರಮದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಮನಃಶಾಂತಿಗಾಗಿ ಅವರು ಭಾರತವನ್ನು ಹುಡುಕಿಕೊಂಡು ಬಂದಿದ್ದಾರೆ. ರೆಹಮಾನ್ ಅವರು ಆಗಾಗ್ಗೆ ಸದ್ಗುರು ಆಶ್ರಮಕ್ಕೆ ಹೋಗುತ್ತಲೇ ಇರುತ್ತಾರೆ. ಬಹುಶಃ ಅಲ್ಲಿಯೇ ಇಬ್ಬರೂ ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಮಾಹಿತಿಯನ್ನು ರೆಹಮಾನ್ ಹಂಚಿಕೊಂಡಿಲ್ಲ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಕಳೆದ ತಿಂಗಳು ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪತ್ನಿಗೆ ನಿರೂಪಕ ಅಪಹಾಸ್ಯ ಮಾಡಿದರು ಎನ್ನುವ ಕಾರಣಕ್ಕಾಗಿ ವೇದಿಕೆಯ ಮೇಲೆಯೇ ವಿಲ್ ಸ್ಮಿತ್, ನಿರೂಪಕನ ಕಪಾಳಮೋಕ್ಷ ಮಾಡಿದ್ದರು. ಅದು ಭಾರೀ ಸುದ್ದಿ ಆಗಿತ್ತು. ಆಸ್ಕರ್ ಪ್ರಶಸ್ತಿ ಸಮಾರಂಭದಿಂದ ವಿಲ್ ಸ್ಮಿತ್ ಅವರನ್ನು ಬ್ಯಾನ್ ಮಾಡಲಾಗಿತ್ತು. ಅಲ್ಲಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿಯೇ ಅವರು ಶಾಂತಿಯನ್ನು ಬಯಸಿ ಭಾರತಕ್ಕೆ ಬಂದಿದ್ದಾರೆ ಎನ್ನುತ್ತವೆ ಮೂಲಗಳು.

  • 6.75 ಲಕ್ಷಕ್ಕೆ ಹರಾಜಾಯಿತು ಸಂಗೀತ ಮಾಂತ್ರಿಕ ರೆಹಮಾನ್ ಡ್ರೆಸ್ಸು

    6.75 ಲಕ್ಷಕ್ಕೆ ಹರಾಜಾಯಿತು ಸಂಗೀತ ಮಾಂತ್ರಿಕ ರೆಹಮಾನ್ ಡ್ರೆಸ್ಸು

    ಸಿನಿಮಾ ಕಲಾವಿದರು, ಸೆಲೆಬ್ರಿಟಿ, ಸ್ಟಾರ್‌ಗಳು ಧರಿಸಿದ ಬಟ್ಟೆಯನ್ನು ಅಭಿಮಾನಿಗಳು ಹಾಗೂ ಆಸಕ್ತರು ದುಬಾರಿ ಹಣಕ್ಕೆ ಖರೀದಿ ಮಾಡುತ್ತಾರೆ. ಬಟ್ಟೆ ಸಂಗ್ರಹ ಮಾಡುವುದು ಹಲವರಿಗೆ ಕ್ರೇಜ್ ಆಗಿದೆ. ಆದರೆ ಈ ಬಟ್ಟೆಯನ್ನು ಸೆಲ್ ಮಾಡುವುದರ ಹಿಂದಿನ ಉದ್ದೇಶವೇ ಬೇರೆ ಇರುತ್ತದೆ. ಹೌದು ಇತ್ತೀಚೆಗಷ್ಟೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಬಟ್ಟೆಯನ್ನು ಲಕ್ಷ, ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

    ಎ.ಆರ್.ರೆಹಮಾನ್ ತೊಟ್ಟಿದ್ದ ಉಡುಪು 6.75 ಲಕ್ಷಕ್ಕೆ ಹರಾಜಾಗಿದೆ. ಪ್ರಮೋದ್ ಸುರಾಡಿಯಾ ಅವರು ಹರಾಜಿನಲ್ಲಿ ಬಟ್ಟೆಯನ್ನು ಖರೀದಿ ಮಾಡಿದ್ದಾರೆ. ಬಳಕೆ ಮಾಡಿ ಬಿಟ್ಟಿರುವ ಬಟ್ಟೆಯನ್ನು ಹರಾಜು ಮಾಡಿ ಎ.ಆರ್.ರೆಹಮಾನ್ ಆ ಹಣವನ್ನು ಏನು ಮಾಡಿದರು ಎನ್ನುವುದರ ಹಿಂದೆ ಅಚ್ಚರಿಯ ಸ್ಟೋರಿ ಕೂಡ ಇದೆ.

    MONEY

    ರಾಜಸ್ಥಾನ ಕಾಸ್ಮೋ ಕ್ಲಬ್ ಫೌಂಡೇಶನ್‌ನ 28ನೇ ಸಂಸ್ಥಾಪಕರ ದಿನಾಚರಣೆಯನ್ನು ಇತ್ತೀಚೆಗೆ ಆಳ್ವಾರ್ಪೇಟೆ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಮಿಳುನಾಡು ಕೈಮಗ್ಗ ಸಚಿವ ಆರ್.ಗಾಂಧಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಟ್ಟೆಯನ್ನು ಖರೀದಿಸಲು ಅಶಕ್ತರಾದವರಿಗೆ ಸಹಾಯ ಮಾಡುವ ಯೋಜನೆಯಡಿ, ಸಹಾಯವಾಗಲಿ ಎಂದು ಎ.ಆರ್. ರೆಹಮಾನ್ ಧರಿಸಿದ್ದ ಉಡುಪನ್ನು ಹರಾಜು ಹಾಕುವುದಾಗಿ ಹೇಳಿದ್ದರು.

    ಆರ್ಥಿಕವಾಗಿ ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಹರಾಜಿಗೆ ಹಾಕಲಾಗಿದ್ದ ಎಆರ್ ರೆಹಮಾನ್ ಧರಿಸಿದ್ದ ಉಡುಗೆ 6.75 ಲಕ್ಷ ರೂ.ಗೆ ಮಾರಾಟವಾಗಿದೆ. ಪ್ರಮೋದ್ ಸುರಾಡಿಯಾ ಅವರು ಈ ಉಡುಪನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಹರಾಜಿನ ಉದ್ದೇಶಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಓಡ್ಸೋದಾದ್ರೂ ಹೇಗೆ : ಡಿಕೆಶಿ ಪ್ರಶ್ನೆ

    ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್.ರೆಹಮಾನ್ ಭಾರತೀಯ ಚಿತ್ರ ಸಂಗೀತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದವರು. 2009ರಲ್ಲಿ ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎರಡೆರಡು ಆಸ್ಕರ್ ಪ್ರಶಸ್ತಿ ಪಡೆದ ಪ್ರತಿಭಾವಂತ ಸಂಗೀತ ಸಂಯೋಜಕರು. ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ಕೊಟ್ಟ ಇವರು ಸಾಮಾಜಿಕ ಕಾರ್ಯಕ್ಕೂ ಮುನ್ನೆಲೆಗೆ ಬಂದಿರುವುದು ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

  • ನಿನ್ನೆ ಸರಸ್ವತಿ ಪೂಜೆ, ಇಂದು ತಾನು ಆಶೀರ್ವಾದ ನೀಡಿದ ತಾಯಿಯನ್ನು ತನ್ನ ಬಳಿಗೆ ಕರೆದೊಯ್ದಿದ್ದಾಳೆ

    ನಿನ್ನೆ ಸರಸ್ವತಿ ಪೂಜೆ, ಇಂದು ತಾನು ಆಶೀರ್ವಾದ ನೀಡಿದ ತಾಯಿಯನ್ನು ತನ್ನ ಬಳಿಗೆ ಕರೆದೊಯ್ದಿದ್ದಾಳೆ

    ನವದೆಹಲಿ: ಭಾರತದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಇಂದು ನಿಧನರಾದರು. ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

    ಲತಾ ಮಂಗೇಶ್ಕರ್‌ ಅವರೊಂದಿಗೆ ಹಲವಾರು ಬಾರಿ ಕೆಲಸ ಮಾಡಿದ ಸಂಗೀತ ಸಂಯೋಜಕ, ಗಾಯಕ ಎ.ಆರ್‌.ರೆಹಮಾನ್‌, ಗಾನ ಕೋಗಿಲೆಯೊಂದಿಗಿನ ಫೋಟೋ ಹಂಚಿಕೊಂಡು ಸಂತಾಪದ ನುಡಿಗಳನ್ನಾಡಿದ್ದಾರೆ. ಪ್ರೀತಿ, ಗೌರವ, ಪ್ರಾರ್ಥನೆಗಳು ಎಂದು ರೆಹಮಾನ್‌ ಟ್ವೀಟ್‌ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

     

    View this post on Instagram

     

    A post shared by shreyaghoshal (@shreyaghoshal)

    ಲತಾ ಮಂಗೇಶ್ಕರ್‌ ಅವರ ಕಪ್ಪು-ಬಿಳುಪಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಗಾಯಕಿ ಶ್ರೇಯಾ ಘೋಷಾಲ್, ʼಮನಸ್ಸಿಗೆ ಘಾಸಿಯಾಯಿತು. ನಿನ್ನೆ ಸರಸ್ವತಿ ಪೂಜೆ. ಇಂದು ತಾಯಿ ತನ್ನ ಆಶೀರ್ವಾದವನ್ನು ತನ್ನೊಂದಿಗೆ ಕರೆದೊಯ್ದಿದ್ದಾಳೆ. ಅದೇಕೋ ಇಂದು ಪಕ್ಷಿಗಳು, ಮರಗಳು, ಗಾಳಿ ಕೂಡ ಮೌನವಾಗಿದೆ ಎನಿಸುತ್ತಿದೆ. ಸ್ವರ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್‌ ಜೀ ನಿಮ್ಮ ದೈವಿಕ ಧ್ವನಿಯು ಶಾಶ್ವತವಾಗಿ ಪ್ರತಿಧ್ವನಿಸುತ್ತದೆ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ. ಓಂ ಶಾಂತಿʼ ವಿಷಾದ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Adnan Sami (@adnansamiworld)

    ಸಂಗೀತ ಸಂಯೋಜಕ, ಗಾಯಕ ಅದ್ನಾನ್‌ ಸಾಮಿ, ʻಸಂಗೀತ ಲೋಕ ಇಂದು ಅನಾಥವಾಗಿದೆ. ನಮ್ಮ ಕೋಗಿಲೆ ಹಾರಿಹೋಗಿದೆ. ನಾವು ಕತ್ತಲೆಯಲ್ಲಿ ಧ್ವನಿಯಿಲ್ಲದೇ ಬಿದ್ದಿದ್ದೇವೆ. ನಾವು ಅವರನ್ನು ಕಳೆದುಕೊಂಡಿದ್ದೇವೆ. ಆದರೂ ನಾವು ಅವರ ಜೀವಿತಾವಧಿಯಲ್ಲಿ ಇದ್ದೆವು. ಅವರು ಉಸಿರಾಡಿದ ಗಾಳಿಯನ್ನು ನಾವು ಉಸಿರಾಡುತ್ತಿರುವುದು ನಮ್ಮ ಸೌಭಾಗ್ಯ. ಧನ್ಯವಾದಗಳು ಪ್ರಿಯ ದೀದಿʼ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

     

    View this post on Instagram

     

    A post shared by Shaan Mukherji (@singer_shaan)

    ಲತಾ ಮಂಗೇಶ್ಕರ್‌ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ಗಾಯಕ ಸುರೇಶ್‌ ವಾಡ್ಕರ್‌, ನಮ್ಮ ತಾಯಿ ಸರಸ್ವತಿ ತನ್ನ ಲೋಕಕ್ಕೆ ಮರಳಿದರು. ಅವರ ಧ್ವನಿಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತಾರೆ ಎಂದು ಗಾಯಕ ಸುರೇಶ್‌ ವಾಡ್ಕರ್‌ ಸಂತಾಪ ಸೂಚಿಸಿದ್ದಾರೆ.

    ಮಂಗೇಶ್ಕರ್‌ ಅವರ ಫೋಟೋವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿರುವ ಗಾಯಕಿ ಲಿಸಾ ಮಿಶ್ರಾ, ನನ್ನ ಬಾಲ್ಯದ ಮನೆಯ ಪ್ರತಿಯೊಂದು ಕೋಣೆಯಲ್ಲೂ ನನ್ನ ತಾಯಿ, ಲತಾ ಜೀ ಅವರ ಹಾಡುಗಳನ್ನು ಹಾಡಿದ್ದ ನೆನಪುಗಳಿವೆ. ಆ ಹಾಡುಗಳು ನನ್ನನ್ನು ಹಾಡುವಂತೆ ಮಾಡಿದವು. ಅವರ ಧ್ವನಿ ನನಗೆ ಸಿಕ್ಕಿತು ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

    ಲತಾ ಮಂಗೇಶ್ಕರ್‌ ಅವರಂತೆ ಇರಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಾಯಕ ನೇಹಾ ಕಕ್ಕರ್‌ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

  • ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ: ನಂದಮುರಿ ಬಾಲಕೃಷ್ಣ

    ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ: ನಂದಮುರಿ ಬಾಲಕೃಷ್ಣ

    ಹೈದರಾಬಾದ್: ಸದಾ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕವೇ ಟ್ರೋಲ್‍ಗೆ ಒಳಗಾಗುವ ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ನಂದಮುರಿ ಬಾಲಕೃಷ್ಣ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಯಾರೆಂದು ನನಗೆ ಗೊತ್ತಿಲ್ಲ. ಭಾರತ ರತ್ನ ನನ್ನ ತಂದೆ ಎನ್.ಟಿ.ರಾಮರಾವ್ ಅವರ ಕಾಲಿನ ಬೆರಳಿನ ಉಗುರಿಗೆ ಸಮ ಎಂದಿದ್ದಾರೆ. ಈ ಮೂಲಕ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ.

    ನನಗೆ ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ, ನಾನು ಕೇರ್ ಮಾಡುವುದಿಲ್ಲ. ದಶಕಗಳ ಹಿಂದೆ ಅವರು ಹಿಟ್ ಹಾಡುಗಳನ್ನು ನೀಡಿ ಆಸ್ಕರ್ ಅವಾರ್ಡ್ ಪಡೆದಿರಬಹುದು. ಆದರೆ ಆಸ್ಕರ್ ಪ್ರಶಸ್ತಿ ಮಾತ್ರವಲ್ಲ ಭಾರತ ರತ್ನವನ್ನೂ ನಾನು ಗೌರವಿಸುವುದಿಲ್ಲ. ಭಾರತ ರತ್ನ ನಮ್ಮ ತಂದೆ ಎನ್.ಟಿ.ರಾಮ ರಾವ್ ಅವರ ಕಾಲ್ಬೆರಳಿನ ಉಗುರಿಗೂ ಸಮವಿಲ್ಲ. ಎಲ್ಲ ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ ಎಂದು ಹೇಳಿದ್ದಾರೆ.

    ಟಾಲಿವುಡ್‍ಗೆ ನಮ್ಮ ಕುಟುಂಬ ನೀಡಿದ ಕೊಡುಗೆಯನ್ನು ಯಾವುದೇ ಪ್ರಶಸ್ತಿ ಸರಿದೂಗಿಸಲು ಸಾಧ್ಯವಿಲ್ಲ. ಪ್ರಶಸ್ತಿಗಳು ಮಾತ್ರ ಕೆಟ್ಟದ್ದನ್ನು ಅನುಭವಿಸಬೇಕು. ನನ್ನ ಕುಟುಂಬ ಅಥವಾ ನನ್ನ ತಂದೆ ಅಲ್ಲ ಎಂದು ಖಾರವಾಗಿ ಹೇಳಿದ್ದಾರೆ.

    ಎ.ಆರ್.ರೆಹಮಾನ್ ಅವರು 1993ರಲ್ಲಿ ಬಾಲಕೃಷ್ಣ ಅವರ ನಿಪ್ಪು ರವ್ವಾ ಸಿನಿಮಾಗೆ ಹಿನ್ನೆಲೆ ಸಂಗೀತ ಕಂಪೋಸ್ ಮಾಡಿದ್ದರು. ಬಾಲಕೃಷ್ಣ ಅವರ ಸಂದರ್ಶನದ ವೀಡಿಯೋ ನೋಡುತ್ತಿದ್ದಂತೆ ರೆಹಮಾನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

  • ನನ್ನ ವಿರುದ್ಧ ಇಡೀ ಗ್ಯಾಂಗ್ ಕೆಲಸ ಮಾಡ್ತಿದೆ: ಎ.ಆರ್.ರೆಹಮಾನ್

    ನನ್ನ ವಿರುದ್ಧ ಇಡೀ ಗ್ಯಾಂಗ್ ಕೆಲಸ ಮಾಡ್ತಿದೆ: ಎ.ಆರ್.ರೆಹಮಾನ್

    -ಸ್ವಜನಪಕ್ಷಪಾತದ ಬಗ್ಗೆ ರೆಹಮಾನ್ ಮಾತು

    ಮುಂಬೈ: ಮ್ಯೂಸಿಕ್ ಮಾಂತ್ರಿಕ ಎ.ಆರ್. ರಹಮಾನ್ ಮೊದಲ ಬಾರಿಗೆ ಬಾಲಿವುಡ್ ನಲ್ಲಿಯ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ.

    ಆಸ್ಕರ್ ಪ್ರಶಸ್ತಿ ವಿಜೇತ ರೆಹಮಾನ್ ಅವರನ್ನ ಸಹ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತವನ್ನು ಎದುರಿಸಿದ್ದಾರೆ. ಇಡೀ ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿತ್ತು. ಹಾಗಾಗಿ ನಾನು ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ:  ಓ ನನ್ನ ಕಂದ, ಬಂಗಾರವೇ ಕ್ಷಮಿಸು ಬಿಡು: ಸುಶಾಂತ್‍ಗೆ ಅಕ್ಕನ ಪತ್ರ

    ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕೇಳುಗರೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನು ಸಂಗೀತ ನೀಡಿರುವ ಸಿನಿಮಾಗಳು ಚೆನ್ನಾಗಿಲ್ಲ ಎಂದು ಹೇಳಲಾರೆ. ನನ್ನ ವಿರುದ್ಧ ಷಡ್ಯಂತ್ರ ರಚಿಸುತ್ತಿದ್ದ ಗುಂಪು ತಪ್ಪು ಸಂದೇಶಗಳನ್ನು ರವಾನಿಸುತ್ತಿತ್ತು. ನನ್ನ ಬಗ್ಗೆ ಅಪಪ್ರಚಾರ ಮಾಡೋದರಲ್ಲಿ ಆ ಗುಂಪು ಕೆಲಸ ಮಾಡುತ್ತಿತ್ತು. ಒಮ್ಮೆ ಮುಖೇಶ್ ಛಾಬ್ರಾ ಹಾಡುಗಳಿಗಾಗಿ ನನ್ನ ಬಳಿ ಬಂದಿದ್ದರು. ಎರಡು ದಿನಗಳಲ್ಲಿ ನಾಲ್ಕು ಹಾಡುಗಳನ್ನು ನೀಡಿದೆ. ನನ್ನ ಜೊತೆ ಮಾತನಾಡುತ್ತಾ, ನಿಮ್ಮ ಬಳಿ ಹೋಗಬಾರದು ಅಂತ ಹಲವರು ಒತ್ತಡ ಹಾಕಿರುವ ವಿಷಯ ತಿಳಿಸಿದರು. ಇದನ್ನೂ ಓದಿ:

    ಅಂದು ದೀಪಕ್ ಛಾಬ್ರಾ ಮಾತು ಕೇಳಿದಾಗ ಇದೇ ಕಾರಣಕ್ಕೆ ನಾನು ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ ಎಂಬ ವಿಷಯ ಮನವರಿಕೆ ಆಯ್ತು. ಒಂದು ಗುಂಪು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದ ಪರಿಣಾಮ ಕಡಿಮೆ ಬಜೆಟ್ ಚಿತ್ರ (ಡಾರ್ಕ್ ಮೂವಿ)ಗಳಿಗೆ ಸಂಗೀತ ನೀಡಿದ್ದೇನೆ. ಅವರು ತಮಗೆ ಗೊತ್ತಿಲ್ಲದೇ ಬೇರೆಯವರಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಆರೋಪ ಸುಳ್ಳೆಂದರೆ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡ್ತೇನೆ: ಕಂಗನಾ

    ಇತ್ತೀಚೆಗೆ ನಿಧನವಾಗಿರುವ ಸುಶಾಂತ್ ಸಿಂಗ್ ರಜಪೂತ್ ನಟನೆಯ ದಿಲ್ ಬೇಚೇರಾ ಸಿನಿಮಾದ ಹಾಡಿಗೆ ಸಂಗೀತ ಸಂಯೋಜನೆ ಮಾಡಲು ರೆಹಮಾನ್ ಒಪ್ಪಿಕೊಂಡಿದ್ದಾರೆ.

  • ಎ.ಆರ್ ರೆಹಮಾನ್‍ರನ್ನು ಭೇಟಿ ಮಾಡಿದ ಕೊಪ್ಪಳದ ಗಂಗಮ್ಮ

    ಎ.ಆರ್ ರೆಹಮಾನ್‍ರನ್ನು ಭೇಟಿ ಮಾಡಿದ ಕೊಪ್ಪಳದ ಗಂಗಮ್ಮ

    ಬೆಂಗಳೂರು: ಸಂಗೀತ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಕೊಪ್ಪಳದ ಗಂಗಮ್ಮ ಭೇಟಿ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದ ಗಂಗಮ್ಮನ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದಾರೆ. 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದರು.

    ಇದೇ ತಿಂಗಳು 22ಕ್ಕೆ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಾಗಿ ಎ.ಆರ್ ರೆಹಮಾನ್ ಬೆಂಗಳೂರಿಗೆ ಆಗಮಿಸಿದ್ದರು. ಇದೇ ವೇಳೆ ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ ಶುಭ ಹಾರೈಸಿದ್ದಾರೆ.

    ಗಂಗಮ್ಮ 20 ವರ್ಷದಿಂದಲೂ ಹಾಡುತ್ತಿದ್ದು, ಫೇಸ್‍ಬುಕ್ ವಿಡಿಯೋದಿಂದಾಗಿ ಎಲ್ಲೆಡೆ ಫೇಮಸ್ ಆಗಿದ್ದರು. ಇವರು ಹಾಡುತ್ತಿದ್ದ ವಿಡಿಯೋವನ್ನು ಸ್ಟುಡಿಯೋ ಮಾಲೀಕ ಶಿವಪ್ರಸಾದ್ ಲೈವ್ ಮಾಡಿದ್ದರು. ಆ ವಿಡಿಯೋ 24 ಗಂಟೆಯಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಹಾಡು ಕೇಳಿದ್ದರು.

    ನಾನು ಚಿಕ್ಕವಯಸ್ಸಿನಿಂದಲೂ ಹಾಡನ್ನು ಹಾಡಲು ಶುರು ಮಾಡಿದೆ. ಆದರೆ ಆಗ ಆರ್ಕೆಸ್ಟ್ರಾ ಇರಲಿಲ್ಲ. ನಂತರ ಕೊಪ್ಪಳದಲ್ಲಿ ಆರ್ಕೆಸ್ಟ್ರಾ ಶುರುವಾದಾಗ 20 ವರ್ಷದಿಂದ ಹಾಡಲು ಶುರು ಮಾಡಿದ್ದೇನೆ. ಈಗ ನಾನು ಗುರುತಿಸಿಕೊಳ್ಳುತ್ತಿದ್ದೇನೆ. ವಿಡಿಯೋ ವೈರಲ್ ಆಗಿದ್ದಕ್ಕೆ ನನ್ನ ಕುಟುಂಬದವರು ಸಂತೋಷವಾಗಿದ್ದಾರೆ ಎಂದು ಗಂಗಮ್ಮ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೌರಿ ಲಂಕೇಶ್ ಹತ್ಯೆ: ಇದು ನನ್ನ ಭಾರತವಲ್ಲ ಎಂದ ಎ.ಆರ್.ರೆಹಮಾನ್

    ಗೌರಿ ಲಂಕೇಶ್ ಹತ್ಯೆ: ಇದು ನನ್ನ ಭಾರತವಲ್ಲ ಎಂದ ಎ.ಆರ್.ರೆಹಮಾನ್

    ಮುಂಬೈ: ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ಪ್ರತಿಕ್ರಿಯಿಸಿದ್ದು, ಇದು ನನ್ನ ಭಾರತವಲ್ಲ. ನನಗೆ ಅಭಿವೃದ್ಧಿಯ ಪಥದತ್ತ ಸಾಗುವ ದೇಶವನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಗೌರಿ ಅವರ ಹತ್ಯೆ ನನಗೆ ಅತೀವ ದುಃಖವನ್ನು ತರಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡೆಯದಿರಲಿ. ಈ ರೀತಿಯ ಘಟನೆಗಳು ನಡೆದರೆ ಇದು ನನ್ನ ದೇಶವಲ್ಲ. ನನ್ನ ಭಾರತ ಯಾವಾಗಲೂ ಪ್ರಗತಿಪರ ವಿಚಾರ ಮತ್ತು ಶಾಂತಿಯುತ ದೇಶವಾಗಲಿ ಎಂದು ರೆಹಮಾನ್ ಆಶೀಸಿದರು.

    ಆಸ್ಕರ್ ವಿಜೇತ ರೆಹಮಾನ್ ತಮ್ಮ ಮುಂದಿನ ಸಿನಿಮಾ `ಒನ್ ಹಾರ್ಟ್: ದ ಎ.ಆರ್.ರೆಹಮಾನ್ ಕನ್ಸರ್ಟ್ ಫಿಲ್ಮ್’ ಪ್ರಚಾರದ ತೊಡಗಿದ್ದಾರೆ. ಒನ್ ಹಾರ್ಟ್‍ನ ಇದು ಉತ್ತರ ಅಮೆರಿಕಾದ 14 ನಗರಗಳ ಕುರಿತಾದ ಕಥೆಯನ್ನು ಹೊಂದಿದೆ. ಇದೂವೆರೆಗೂ ಭಾರತದಲ್ಲಿ ಆ್ಯಕ್ಷನ್, ರೋಮ್ಯಾಂಟಿಕ್, ಕಾಮಿಡಿ, ಥ್ರಿಲರ್ ಕಥಾನಕವುಳ್ಳ ಸಿನಿಮಾಗಳನ್ನು ನೋಡಿದಾಗಿದೆ. ಇದೊಂದು ಸಂಗೀತಮಯ ಸಿನಿಮಾ ಆಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ.

    ದೇಶಾದ್ಯಂತ ಸದ್ದು ಮಾಡಿದ್ದ ಗೌರಿ ಲಂಕೇಶ್ ಹತ್ಯೆಗೆ ದೇಶದ ಅನೇಕ ಗಣ್ಯರು ಖಂಡಿಸಿದ್ದಾರೆ. ಸೆಪ್ಟಂಬರ್ 5ರ ರಾತ್ರಿ ಅವರ ಮನೆಯ ಮುಂದೆಯೇ ಹಂತಕರು ಗುಂಡು ಹಾರಿಸಿ ಕೊಲೆಗೈದಿದ್ದರು.