Tag: ಎ.ಆರ್.ರೆಹಮಾನ್

  • ನಮ್ಮ ವಿಚ್ಛೇದನ ವೈಯಕ್ತಿಕ ಸಮಸ್ಯೆಗಳಿಂದ ನಡೆದಿದ್ದು, ವೈಷಮ್ಯದಿಂದ ಅಲ್ಲ: ಎ.ಆರ್ ರೆಹಮಾನ್

    ನಮ್ಮ ವಿಚ್ಛೇದನ ವೈಯಕ್ತಿಕ ಸಮಸ್ಯೆಗಳಿಂದ ನಡೆದಿದ್ದು, ವೈಷಮ್ಯದಿಂದ ಅಲ್ಲ: ಎ.ಆರ್ ರೆಹಮಾನ್

    ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ (A.R Rahman) 5 ತಿಂಗಳ ಬಳಿಕ ಡಿವೋರ್ಸ್ (Divorce) ಕುರಿತಾಗಿ ಮೌನ ಮುರಿದಿದ್ದಾರೆ. ನಮ್ಮ ವಿಚ್ಛೇದನ ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ನಡೆದಿದೆ. ಯಾವುದೇ ವೈಷಮ್ಯದಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಎ.ಆರ್‌.ರೆಹಮಾನ್‌-ಸಾಯಿರಾ ಬಾನು ವಿಚ್ಛೇದನ; 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

    ಡಿವೋರ್ಸ್ ಘೋಷಣೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಮತ್ತು ಟೀಕೆಗಳು ವ್ಯಕ್ತವಾಗಿತ್ತು. ಈ ಹಿನ್ನೆಲೆ ಎ.ಆರ್ ರೆಹಮಾನ್ ಮೌನಕ್ಕೆ ಶರಣಾಗಿದ್ದರು. ಈಗ ಸೈರಾ ಬಾನು (Saira Banu) ಜೊತೆಗಿನ ಡಿವೋರ್ಸ್ ಬಗ್ಗೆ ಮೊದಲ ಬಾರಿಗೆ ಮಾತನಾಡಿ, ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡುವುದು ಉದ್ದೇಶಪೂರ್ವಕ. ಆದ್ದರಿಂದ ಪ್ರತಿಯೊಬ್ಬರೂ ವಿಮರ್ಶೆಗೆ ಒಳಗಾಗುತ್ತಾರೆ. ಶ್ರೀಮಂತ ವ್ಯಕ್ತಿಯಿಂದ ಹಿಡಿದು ದೇವರುಗಳವರೆಗೆ ಎಲ್ಲರೂ ವಿಮರ್ಶೆಗೆ ಒಳಗಾಗುತ್ತಾರೆ. ನಾನು ಹಾಗೆಯೇ ಎಂದಿದ್ದಾರೆ. ಇದನ್ನೂ ಓದಿ:‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ

    ನಾನು ಯಾರದ್ದೋ ಕುಟುಂಬದ ಬಗ್ಗೆ ಕೆಟ್ಟದಾಗಿ ಹೇಳಿದರೆ, ಬೇರೆ ಯಾರಾದರೂ ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ನಾವು ಭಾರತೀಯರು ಇದನ್ನು ನಂಬುತ್ತೇವೆ. ಯಾರೂ ಅನಗತ್ಯವಾಗಿ ಬೇರೆ ಅವರ ಬಗ್ಗೆ ಮಾತನಾಡಬಾರದು, ಏಕೆಂದರೆ ಪ್ರತಿಯೊಬ್ಬರಿಗೂ ಸಹೋದರಿ, ಪತ್ನಿ, ತಾಯಿ ಇರುತ್ತಾರೆ. ಸೈರಾ ಬಾನು ಅವರು ತಮ್ಮ ಕಾನೂನು ಪ್ರತಿನಿಧಿಗಳ ಮೂಲಕ ಈ ನಿರ್ಣಯ ಕೈಗೊಂಡಿದ್ದಾರೆ. ಡಿವೋರ್ಸ್ ವೈಯಕ್ತಿಕ ಸಮಸ್ಯೆಗಳ ಕಾರಣದಿಂದಾಗಿ ನಡೆದಿದ್ದು, ಯಾವುದೇ ವೈಷಮ್ಯದಿಂದ ಅಲ್ಲ ಎಂದು ಎ.ಆರ್ ರೆಹಮಾನ್ ಸ್ಪಷ್ಟಪಡಿಸಿದ್ದಾರೆ.

    ಅಂದಹಾಗೆ, 1995ರಲ್ಲಿ ಇಬ್ಬರೂ ವಿವಾಹವಾಗಿದ್ದರು. ಸೈರಾ ಜೊತೆಗಿನ 29 ವರ್ಷಗಳ ದಾಂಪತ್ಯಕ್ಕೆ ಕಳೆದ ನವೆಂಬರ್‌ನಲ್ಲಿ ಎ.ಆರ್ ರೆಹಮಾನ್ ಅಂತ್ಯ ಹಾಡಿದರು. 2024ರ ನವೆಂಬರ್ 19ರಂದು ಡಿವೋರ್ಸ್ ಘೋಷಿಸಿದರು.

  • ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎ.ಆರ್.ರೆಹಮಾನ್

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎ.ಆರ್.ರೆಹಮಾನ್

    ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ (A.R.Rahman) ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಅವರು ಈಗ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ಇಂದು ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣ – ಸಮಾರಂಭಕ್ಕೆ ಮನೆಮಗ ದರ್ಶನ್ ಬರ್ತಾರಾ?

    ಎ.ಆರ್.ರೆಹಮಾನ್ ಅವರ ಆರೋಗ್ಯ ಸ್ಥಿತಿ ಹೇಗಿದೆ? ಎಂಬುದನ್ನು ಖುದ್ದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಎ.ಆರ್. ರೆಹಮಾನ್ ಆರೋಗ್ಯವಾಗಿದೆ. ಚಿಂತೆಪಡುವ ಅವಶ್ಯಕತೆಯಿಲ್ಲ, ಅವರು ಆರಾಮಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ರೆಹಮಾನ್ ಪುತ್ರ ಎ.ಆರ್.ಅಮೀನ್ ತಂದೆಯ ಆರೋಗ್ಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೀತಿಯ ಅಭಿಮಾನಿಗಳು ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು. ನಿರ್ಜಲೀಕರಣದಿಂದ ನನ್ನ ತಂದೆ ಸ್ವಲ್ಪ ನಿಶ್ಯಕ್ತಿ ಹೊಂದಿದ್ದರು. ಆದ್ದರಿಂದ ನಾವು ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಿಸಿದೆವು. ಆದರೆ ಅವರು ಈಗ ಚೆನ್ನಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್‌ ನಿರಾಳವಾಗಿದ್ದಾರೆ.

    ಎದೆನೋವಿನಿಂದ ಬಳಲುತ್ತಿದ್ದ ರೆಹಮಾನ್ ಅವರನ್ನು ಇಂದು ಬೆಳಗ್ಗೆ 7:30ಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರು. ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಕೆಲವು ಪರೀಕ್ಷೆಗಳಿಗೆ ಒಳಪಡಿಸಿದ್ದರು.

    ಕಳೆದ ತಿಂಗಳು, ಎಆರ್ ರೆಹಮಾನ್ ಚೆನ್ನೈನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯಲ್ಲಿ ಎಡ್ ಶೀರನ್ ಅವರೊಂದಿಗೆ ಪ್ರದರ್ಶನ ನೀಡಿದ್ದರು. ಒಂದು ವಾರದ ನಂತರ, ಅವರು ‘ಛಾವಾ’ ಸಿನಿಮಾದ ಸಂಗೀತ ಬಿಡುಗಡೆ ಸಮಾರಂಭದಲ್ಲಿಯೂ ಕಾಣಿಸಿಕೊಂಡಿದ್ದರು.

    ಸುಮಾರು 29 ವರ್ಷಗಳ ದಾಂಪತ್ಯಕ್ಕೆ ಕಳೆದ ವರ್ಷ ನವೆಂಬರ್‌ನಲ್ಲಿ ಸೈರಾ ಬಾನು ಮತ್ತು ಎಆರ್ ರೆಹಮಾನ್ ಅಂತ್ಯ ಹಾಡಿದ್ದರು. ಇಬ್ಬರೂ ಡಿವೋರ್ಸ್ ಪಡೆದಿದ್ದರು.

  • ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಆಸ್ಪತ್ರೆಗೆ ದಾಖಲು

    ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಆಸ್ಪತ್ರೆಗೆ ದಾಖಲು

    ಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ (A.R.Rahman) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆನೋವು ಕಾಣಿಸಿಕೊಂಡ ನಂತರ ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೆಹಮಾನ್ (58) ಅವರನ್ನು ಬೆಳಗ್ಗೆ 7:30 ಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಕೆಲವು ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಅವರು ಆಂಜಿಯೋಗ್ರಾಮ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಕಳೆದ ತಿಂಗಳು, ಎಆರ್ ರೆಹಮಾನ್ ಚೆನ್ನೈನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯಲ್ಲಿ ಎಡ್ ಶೀರನ್ ಅವರೊಂದಿಗೆ ಪ್ರದರ್ಶನ ನೀಡಿದ್ದರು. ಒಂದು ವಾರದ ನಂತರ, ಅವರು ‘ಚಾವಾ’ ಸಿನಿಮಾದ ಸಂಗೀತ ಬಿಡುಗಡೆ ಸಮಾರಂಭದಲ್ಲಿಯೂ ಕಾಣಿಸಿಕೊಂಡಿದ್ದರು.

    ಇತ್ತೀಚೆಗೆ, ರೆಹಮಾನ್ ಅವರ ಮಾಜಿ ಪತ್ನಿ ಸೈರಾ ಬಾನು ಕೂಡ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸುದ್ದಿಯನ್ನು ಅವರ ವಕೀಲೆ ವಂದನಾ ಶಾ ಅಧಿಕೃತ ಹೇಳಿಕೆಯ ಮೂಲಕ ಹಂಚಿಕೊಂಡಿದ್ದಾರೆ.

    ಸುಮಾರು 29 ವರ್ಷಗಳ ದಾಂಪತ್ಯಕ್ಕೆ ಕಳೆದ ವರ್ಷ ನವೆಂಬರ್‌ನಲ್ಲಿ ಸೈರಾ ಬಾನು ಮತ್ತು ಎಆರ್ ರೆಹಮಾನ್ ಅಂತ್ಯ ಹಾಡಿದ್ದರು. ಇಬ್ಬರೂ ಡಿವೋರ್ಸ್‌ ಪಡೆದಿದ್ದರು.

  • ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಖ್ಯಾತ ಸಂಗೀತ ಸಂಯೋಜಕ, ಗಾಯಕ ಎ.ಆರ್. ರೆಹಮಾನ್ (A.R. Rahman) ಮತ್ತು ಸಾಯಿರಾ ಬಾನು (Saira Banu) 29 ವರ್ಷಗಳ ದಾಂಪತ್ಯಕ್ಕೆ (Divorce) ಅಂತ್ಯ ಹಾಡಿದ್ದಾರೆ. ಡಿವೋರ್ಸ್ ಕುರಿತು ನಿನ್ನೆ (ನ.19) ಅಧಿಕೃತವಾಗಿ ಸಾಯಿರಾ ಖಚಿತಪಡಿಸಿದ್ದರು. ಇದೀಗ ಎ.ಆರ್. ರೆಹಮಾನ್ ಅವರು ವಿಚ್ಛೇದನ ಕುರಿತು ಮೌನ ಮುರಿದ್ದಾರೆ.  ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೀರ್ತಿ ಸುರೇಶ್?- ಫೋಟೋ ವೈರಲ್

    ಸೋಶಿಯಲ್ ಮೀಡಿಯಾದಲ್ಲಿ ಎ.ಆರ್. ರೆಹಮಾನ್ ಪ್ರತಿಕ್ರಿಯಿಸಿ, ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ ಎಂದಿದ್ದಾರೆ.

    ಅಂದಹಾಗೆ, ಈ ನಿರ್ಧಾರವು ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡದ ನಂತರ ಬಂದಿದೆ. ಒಬ್ಬರಿಗೊಬ್ಬರು ಆಳವಾದ ಪ್ರೀತಿಯ ಹೊರತಾಗಿಯೂ, ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ದುಸ್ತರವಾದ ಅಂತರವನ್ನು ಸೃಷ್ಟಿಸಿವೆ ಎಂದು ಸಾಯಿರಾ ಬಾನು ಅವರು ದಾಂಪತ್ಯ ಅಂತ್ಯವಾಗಿರುವ ಬಗ್ಗೆ ಖಚಿತಪಡಿಸಿದ್ದರು.

    ಎ.ಆರ್.ರೆಹಮಾನ್ ಅವರು 1995ರಲ್ಲಿ ಸಾಯಿರಾ ಬಾನು ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.

  • ಎ.ಆರ್‌.ರೆಹಮಾನ್‌-ಸಾಯಿರಾ ಬಾನು ವಿಚ್ಛೇದನ; 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

    ಎ.ಆರ್‌.ರೆಹಮಾನ್‌-ಸಾಯಿರಾ ಬಾನು ವಿಚ್ಛೇದನ; 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

    ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಪತ್ನಿ ಸಾಯಿರಾ ಬಾನು ಸುಮಾರು ಮೂರು ದಶಕಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 29 ವರ್ಷಗಳ ಬಳಿಕ ದಂಪತಿ ವಿಚ್ಛೇದನ ಘೋಷಿಸಿಕೊಂಡಿದ್ದಾರೆ.

    ಸಾಯಿರಾ ಅವರ ವಕೀಲ ವಂದನಾ ಶಾ ಅವರು, ದಂಪತಿಯ ವಿಚ್ಛೇದನ ನಿರ್ಧಾರದ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.

    ಎ.ಆರ್.ರೆಹಮಾನ್ ಅವರು 1995 ರಲ್ಲಿ ಸಾಯಿರಾ ಬಾನು ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.

    ಮದುವೆಯಾದ ಹಲವು ವರ್ಷಗಳ ನಂತರ, ಸಾಯಿರಾ ಅವರು ತಮ್ಮ ಪತಿ ಎ.ಆರ್.ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರವು ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡದ ನಂತರ ಬಂದಿದೆ. ಒಬ್ಬರಿಗೊಬ್ಬರು ಆಳವಾದ ಪ್ರೀತಿಯ ಹೊರತಾಗಿಯೂ, ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ದುಸ್ತರವಾದ ಅಂತರವನ್ನು ಸೃಷ್ಟಿಸಿವೆ ಎಂದು ಹೇಳಿಕೊಂಡಿದ್ದಾರೆ. ಸಾಯಿರಾ ಅವರು ನೋವು ಮತ್ತು ಸಂಕಟದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವಕೀಲರಾದ ವಂದನಾ ಶಾ ತಿಳಿಸಿದ್ದಾರೆ.

  • 1 ಹಾಡಿಗೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎ.ಆರ್. ರೆಹಮಾನ್

    1 ಹಾಡಿಗೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎ.ಆರ್. ರೆಹಮಾನ್

    ಖ್ಯಾತ ಗಾಯಕ, ಮ್ಯೂಸಿಕ್ ಡೈರೆಕ್ಟರ್ ಆಗಿ ಗಮನ ಸೆಳೆದಿರುವ ಎ.ಆರ್. ರೆಹಮಾನ್  (A.R. Rahman) ಅವರು ತಮ್ಮ ಸಂಗೀತದ ಮೂಲಕವೇ ಅದೆಷ್ಟೋ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ವಿಶ್ವಾದ್ಯಂತ ಅವರಿಗೆ ಖ್ಯಾತಿ ಇದೆ. ಇನ್ನೂ ಸ್ಟಾರ್ ಸಿಂಗರ್ಸ್ ಸೋನು ನಿಗಮ್, ಶ್ರೇಯಾ ಘೋಷಾಲ್ ಸೇರಿದಂತೆ ಮುಂತಾದರ ಸಂಭಾವನೆಗಿಂತಲೂ 15 ಪಟ್ಟು ಅಧಿಕ ಸಂಭಾವನೆಯನ್ನು ಎ.ಆರ್. ರೆಹಮಾನ್ ಪಡೆಯುತ್ತಾರೆ. ಒಂದು ಹಾಡು ಹಾಡಿದ್ರೆ, ಅದಕ್ಕೆ 3 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡುತ್ತಾರೆ.‌

    ಹೌದು, ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಎ.ಆರ್. ರೆಹಮಾನ್ ಅವರು ಒಂದು ಸಾಂಗ್‌ಗೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಎ.ಆರ್. ರೆಹಮಾನ್ ಅವರು ಪೂರ್ಣಾವಧಿ ಸಿಂಗರ್ ಅಲ್ಲ. ಸಂಗೀತ ನಿರ್ದೇಶಕನಾಗಿ ಅವರು ಬ್ಯುಸಿಯಾಗಿದ್ದಾರೆ. ಹಾಗಿದ್ದರೂ ಕೂಡ ಆಗಾಗ ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಅವರಿಂದ ಒಂದು ಹಾಡು ಹಾಡಿಸಬೇಕು ಎಂದರೆ ನಿರ್ಮಾಪಕರು 3 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡುತ್ತಾರೆ. ಇದನ್ನೂ ಓದಿ:ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್‌ ಟಾಕ್

    ಇನ್ನೂ ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ಸೋನು ನಿಗಮ್ ಅವರು ಪ್ರತಿ ಹಾಡಿಗೆ ಹಲವು ಲಕ್ಷ ರೂ. ಚಾರ್ಜ್ ಮಾಡುತ್ತಾರೆ. ಹಾಗಿದ್ದರೂ ಅಪರೂಪಕ್ಕೆ ಹಾಡುವ ಎ.ಆರ್. ರೆಹಮಾನ್ ಸಂಭಾವನೆ ಕೇಳಿ ಬಾಲಿವುಡ್ ಮಂದಿ ಮತ್ತು ಫ್ಯಾನ್ಸ್ ದಂಗಾಗಿದ್ದಾರೆ.

  • Cannes Film Festival 2024: ಎ.ಆರ್ ರೆಹಮಾನ್ ಭೇಟಿಯಾದ ಸಾಧು ಕೋಕಿಲ

    Cannes Film Festival 2024: ಎ.ಆರ್ ರೆಹಮಾನ್ ಭೇಟಿಯಾದ ಸಾಧು ಕೋಕಿಲ

    ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ (Cannes Film Festival 2024) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹಲವು ಚಿತ್ರರಂಗದ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕಾನ್ಸ್ ಚಿತ್ರೋತ್ಸವದಲ್ಲಿ ಸಾಧು ಕೋಕಿಲ (Sadhu Kokila) ಭಾಗಿಯಾಗಿದ್ದಾರೆ. ಈ ವೇಳೆ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ರನ್ನು (A.R. Rahman) ಭೇಟಿಯಾಗಿದ್ದಾರೆ. ಹಳೆಯ ದಿನಗಳನ್ನು ಸಾಧು ಕೋಕಿಲ ಸ್ಮರಿಸಿದ್ದಾರೆ.

     

    View this post on Instagram

     

    A post shared by Sadhukokila (@nimmasadhukokila)

    ನಟ ಕಮ್ ಗಾಯಕ ಸಾಧು ಕೋಕಿಲ ಅವರು ನಟನೆ ಮಾತ್ರವಲ್ಲ ಸಂಗೀತ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದ್ದಾರೆ. ಇದೀಗ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎ.ಆರ್ ರೆಹಮಾನ್‌ರನ್ನು ಅನಿರೀಕ್ಷಿತ ಭೇಟಿಯ ಬಗ್ಗೆ ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿಗೆ ಹೋಗುವ ಅಭ್ಯಾಸ ನನಗಿಲ್ಲ ಎಂದು ಸ್ಟಷ್ಟನೆ ನೀಡಿದ ನಟ ಶ್ರೀಕಾಂತ್

    ಹಲವಾರು ವರ್ಷದ ನಂತರ ಅಪರೂಪದ ಅನಿರೀಕ್ಷಿತ ಭೇಟಿ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಜೊತೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ತುಂಬಾ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳ ನೆನಪು ಹಂಚಿಕೊಂಡೆವು ಎಂದು ಹಳೆಯ ದಿನಗಳ ಬಗ್ಗೆ ಸಾಧು ಕೋಕಿಲ ಸ್ಮರಿಸಿದ್ದಾರೆ. ಜೊತೆಗೆ ಎ.ಆರ್ ರೆಹಮಾನ್ ಜೊತೆಗಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ. ತಮ್ಮ ಕೆರಿಯರನ್‌ ಪ್ರಾರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರೂ ದಿಗ್ಗಜರನ್ನು ಒಟ್ಟಿಗೆ ನೋಡಿ ಫ್ಯಾನ್ಸ್‌ ಖುಷಿಪಡ್ತಿದ್ದಾರೆ.

  • ಎರಡೂವರೆ ದಶಕದ ನಂತರ ಒಂದಾದ ಪ್ರಭುದೇವ-ರೆಹಮಾನ್

    ಎರಡೂವರೆ ದಶಕದ ನಂತರ ಒಂದಾದ ಪ್ರಭುದೇವ-ರೆಹಮಾನ್

    ಟ, ನಿರ್ದೇಶಕ ಪ್ರಭುದೇವ (Prabhudeva) ಮತ್ತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಬರೋಬ್ಬರಿ 25 ವರ್ಷಗಳ ನಂತರ ಒಂದಾಗಿ ಕೆಲಸ ಮಾಡಲಿದ್ದಾರೆ. ಎಆರ್.ಆರ್.ಪಿಡಿ 6 ಎನ್ನುವ ಹೆಸರಿನ ಚಿತ್ರದಲ್ಲಿ ಈ ಜೋಡಿ ಒಂದಾಗಿದ್ದಾರೆ. ಮನೋಜ್ ಎಂ.ಎಸ್ ನಿರ್ದೇಶನದ ಈ ಚಿತ್ರದ ಮೊದಲ ಪೋಸ್ಟರ್ ಕೂಡ ರಿಲೀಸ್ ಆಗಿದೆ.

    ಈ ಕುರಿತಂತೆ ನಟ ಪ್ರಭುದೇವ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯೋಗಿ ಬಾಬು, ಅಜು ವರ್ಗೀಸ್, ಸಿಂಗಂ ಪುಲಿ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಅನೂಪ್ ಶೈಲಜಾ ಸಿನಿಮಾಟೋಗ್ರಫಿಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ರೇಮಂಡ್ ಡೆರಿಕ್ ಕ್ರಿಸ್ಟಾ ಅವರ ಸಂಕಲನ ಚಿತ್ರಕ್ಕಿದೆ.

     

    ಜಂಟಲ್ ಮನ್ ಸಿನಿಮಾದಲ್ಲಿ ಈ ಜೋಡಿ ಒಂದಾಗಿತ್ತು. ಈ ಸಿನಿಮಾದ ಚಿಕ್ಕು ಬುಕ್ಕು ರೈಲೇ ಹಾಡು ಫೇಮಸ್ ಆಗಿತ್ತು. ಆನಂತರ ಈ ಜೋಡಿ ಮತ್ತೆ ಜೊತೆಯಾಲಿ ಕೆಲಸ ಮಾಡಲೇ ಇಲ್ಲ. ಈಗ ಮತ್ತೆ ಅಂಥದ್ದೊಂದು ಅವಕಾಶ ಒದಗಿ ಬಂದಿದೆ.

  • ಕಮಲ್‌-ಮಣಿರತ್ನಂ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ?: ಹೊರಬಿತ್ತು ಪಟ್ಟಿ

    ಕಮಲ್‌-ಮಣಿರತ್ನಂ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ?: ಹೊರಬಿತ್ತು ಪಟ್ಟಿ

    ಮಲ್‌ ಹಾಸನ್‌  ಮತ್ತು ಮಣಿರತ್ನಂ ಕಾಂಬಿನೇಷನ್‌ ನ ಹೊಸ ಸಿನಿಮಾದ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಈ ಸಿನಿಮಾವನ್ನು ಆರ್.ಮಹೇಂದ್ರನ್‌, ಶಿವ ಅನಂತ್‌ ಹಾಗೂ ಕಮಲ್‌, ಮಣಿರತ್ನಂ ಅವರು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ಎ.ಆರ್.ರೆಹಮಾನ್‌ (AR Rahman) ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ರವಿ ಕೆ. ಚಂದ್ರನ್‌ ಸಿನಿಮಾಟೋಗ್ರಾಫರ್.‌ ಶ್ರೀಕರ್‌ ಪ್ರಸಾದ್‌ ಸಂಕಲನಕಾರರಾಗಿದ್ದರೆ, ಅನ್ಬರಿವ್‌ ಅವರ ಸಾಹಸ ಚಿತ್ರಕ್ಕೆ ಇರಲಿದೆ.

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

     

    ಈ ಕುರಿತಂತೆ ಮೇಕಪ್ ಆರ್ಟಿಸ್ಟ್ ರಂಜಿತ್ ಅಂಬಾಡಿ ಎನ್ನುವವರು ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಇವರೆಲ್ಲ ಕೆಲಸ ಮಾಡಲಿದ್ದಾರೆ ಎಂದು ಸಣ್ಣ ಸುಳಿವು ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಅಚ್ಚರಿಯ ಸಂಗತಿಗಳು ಈ ಸಿನಿಮಾದಲ್ಲಿ ಇರಲಿವೆ ಎಂದೂ ಅವರು ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎ.ಆರ್.ರೆಹಮಾನ್ ಕಾರ್ಯಕ್ರಮ ವಿರುದ್ಧ ತನಿಖೆಗೆ ಆದೇಶ

    ಎ.ಆರ್.ರೆಹಮಾನ್ ಕಾರ್ಯಕ್ರಮ ವಿರುದ್ಧ ತನಿಖೆಗೆ ಆದೇಶ

    ತ್ತೀಚೆಗಷ್ಟೇ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A.R. Rahman) ಅವರ ಕಾರ್ಯಕ್ರಮದಲ್ಲಿ ಸಾಕಷ್ಟು ಜನರಿಗೆ ತೊಂದರೆ ಆಯಿತು ಎನ್ನುವ ಕಾರಣಕ್ಕಾಗಿ ಆಕ್ರೋಶ ವ್ಯಕ್ತವಾಗಿತ್ತು. ಹತ್ತು ಸಾವಿರ ಜನರಷ್ಟೇ ಸೇರಬಹುದಾದ ಸ್ಥಳದಲ್ಲಿ 40 ಸಾವಿರಕ್ಕೂ ಹೆಚ್ಚು ಜನರಿಗೆ ಟಿಕೆಟ್ ನೀಡಿ ಸಂಘಟಿಕರು ಅವ್ಯವಸ್ಥೆಗೆ ಕಾರಣವಾಗಿದ್ದರು. ಇದರಿಂದಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾಗಿತ್ತು ಎಂದು ದೂರಿದ್ದರು. ಈ ಕುರಿತು ರೆಹಮಾನ್ ಕ್ಷಮೆ ಕೂಡ ಕೇಳಿದ್ದರು.

    ಈ ಕಾರ್ಯಕ್ರಮದಲ್ಲಿ ನನ್ನದು ಸಂಗೀತ ನೀಡುವ ಪಾತ್ರವಷ್ಟೇ. ಉಳಿದಂತೆ ಯಾವ ವಿಚಾರವೂ ನನಗೆ ಗೊತ್ತಿರಲಿಲ್ಲ. ಹೆಚ್ಚು ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಮತ್ತು ಈ ಕುರಿತಂತೆ ಯಾರನ್ನೂ ನಾನು ದೂರುವುದಿಲ್ಲ ಎಂದು ರೆಹಮಾನ್ ಟ್ವೀಟ್ ಮಾಡಿದ್ದರು. ಈ ಕಾರ್ಯಕ್ರಮದ ಕುರಿತಂತೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ (Police) ಇಲಾಖೆ ತನಿಖೆಗೆ (Investigation) ಮುಂದಾಗಿದೆ. ಇದನ್ನೂ ಓದಿ:ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್

    ರೆಹಮಾನ್ ಅವರ ಈ ಸಂಗೀತ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಕೂಡ ಆಗಿದೆ ಎಂದು ವರದಿಗಳು ಆಗಿವೆ. ಅಲ್ಲದೇ ಪೊಲೀಸ್ ಭದ್ರತೆ ಕೂಡ ಸೂಕ್ತವಾಗಿ ಇರಲಿಲ್ಲ ಎನ್ನುವ ದೂರುಗಳಿವೆ. ಇವೆಲ್ಲವನ್ನೂ ಪರಿಗಣಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈಗಾಗಲೇ ಭದ್ರತೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಕೂಡ ನೀಡಲಾಗಿದೆ.

     

    ಈ ಕಾರ್ಯಕ್ರಮದಲ್ಲಿ ಒಟ್ಟು 36 ಸಾವಿರ ಟಿಕೆಟ್ ಮಾರಾಟವಾಗಿವೆಯಂತೆ. ಜೊತೆಗೆ ಟಿಕೆಟ್ ಇಲ್ಲದೇ ಅನೇಕರು ಒಳ ನುಗ್ಗಿದ್ದಾರೆ ಎಂದು ಹೇಳಲಾಗುತ್ತಿದೆ. ನಕಲಿ ಟಿಕೆಟ್ ಪಡೆದೂ ಜನರು ನುಗ್ಗಿದ್ದಾರೆ ಎನ್ನುವ ಮಾಹಿತಿ ಇದೆ. ಈ ಎಲ್ಲವನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]