Tag: ಎ.ಆರ್.ರಹಮಾನ್

  • ಎ.ಆರ್.ರಹಮಾನ್ ತಾಯಿ ನಿಧನ

    ಎ.ಆರ್.ರಹಮಾನ್ ತಾಯಿ ನಿಧನ

    ಚೆನ್ನೈ: ಗಾಯಕ, ಸಂಗೀತ ಸಂಯೋಜಕ ಎ.ಆರ್.ರಹಮಾನ್ ತಾಯಿ ಕರೀಮಾ ಬೇಗಂ ನಿಧನರಾಗಿದ್ದಾರೆ. ಎ.ಆರ್.ರಹಮಾನ್ ತಾಯಿ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ವಿಷಯವನ್ನ ತಿಳಿಸಿದ್ದಾರೆ.

    ಅಮ್ಮ ನನ್ನಲ್ಲಿರುವ ಸಂಗೀತದ ಪ್ರತಿಭೆಯನ್ನು ಗುರುತಿಸಿದ್ದರೇ ಹೊರತು ನಾನಲ್ಲ ಎಂದು ರಹಮಾನ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಅಭಿಮಾನಿಗಳು ಸಹ ಕರೀಮಾ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಕಸ್ತೂರಿಯವರು ಇಸ್ಲಾಂಗೆ ಮತಾಂತರವಾದ ಬಳಿಕ ತಮ್ಮ ಹೆಸರನ್ನ ಕರೀಮಾ ಬೇಗಂ ಆಗಿ ಬದಲಿಸಿಕೊಂಡಿದ್ದರು.

    ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ತಾಯಿ ಬಗ್ಗೆ ಮಾತನಾಡಿದ್ದ ರಹಮಾನ್, ನಾವು ಬಾಲ್ಯದಲ್ಲಿ ತಂದೆಯನ್ನ ಕಳೆದುಕೊಂಡಾಗ ಅಮ್ಮ ಮನೆಯನ್ನ ನಡೆಸುತ್ತಿದ್ದರು. ತಂದೆಯ ಮ್ಯೂಸಿಕಲ್ ಸಾಧನಗಳನ್ನ ಮಾರಿ ಬಂದ ಹಣವನ್ನ ಠೇವಣಿ ಇರಿಸಿ. ಠೇವಣಿಗೆ ಬರುತ್ತಿದ್ದ ಬಡ್ಡಿ ಹಣದಿಂದಲೇ ಜೀವನ ನಡೆಸಿ ಎಂದು ಆಪ್ತರು ಸಲಹೆ ನೀಡಿದ್ದರು. ಆದರೆ ನನ್ನ ಮಗನಿದ್ದಾನೆ, ಆತ ಅವುಗಳನ್ನ ಬಳಸುತ್ತಾನೆ ಎಂದು ಹೇಳಿದ್ದರು.

  • ಎ.ಆರ್.ರಹಮಾನ್ ಪುತ್ರಿ ನೋಡಿದ್ರೆ ಉಸಿರುಗಟ್ಟಿದಂತಾಗುತ್ತೆ: ತಸ್ಲಿಮಾ ನಸ್ರೀನ್

    ಎ.ಆರ್.ರಹಮಾನ್ ಪುತ್ರಿ ನೋಡಿದ್ರೆ ಉಸಿರುಗಟ್ಟಿದಂತಾಗುತ್ತೆ: ತಸ್ಲಿಮಾ ನಸ್ರೀನ್

    ನವದೆಹಲಿ: ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರಹಮಾನ್ ಪುತ್ರಿಯನ್ನು ನೋಡಿದ್ರೆ ಉಸಿರುಗಟ್ಟಿದಂತಾಗುತ್ತೆ ಎಂದು ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ಎ.ಆರ್.ರಹಮಾನ್ ಪುತ್ರಿ ಹಿಜಬ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದಿದ್ದರಿಂದ ಎ.ಆರ್.ರಹಮಾನ್ ಸ್ಪಷ್ಟನೆ ನೀಡಿದ್ದರು. ಇದೀಗ ತಸ್ಲಿಮಾ ನಸ್ರೀನ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ನನಗೆ ಎ.ಆರ್.ರಹಮಾನ್ ಸಂಗೀತ ಅಂದ್ರೆ ತುಂಬಾ ಇಷ್ಟ. ಆದ್ರೆ ಪ್ರತಿಬಾರಿ ಅವರ ಪುತ್ರಿಯನ್ನು ನೋಡಿದಾಗ ಉಸಿರು ಗಟ್ಟಿದಂತಾಗುತ್ತದೆ. ಒಬ್ಬ ವಿದ್ಯಾವಂತೆಯನ್ನು ಕುಟುಂಬದ ಸಂಪ್ರದಾಯದ ಹೆಸರಿನಲ್ಲಿ ಸರಳವಾಗಿ ಬ್ರೈನ್ ವಾಶ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

    ‘ಸ್ಲಂಡಾಗ್ ಮಿಲಿಯೇನರ್’ ಸಿನಿಮಾ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ರೆಹಮಾನ್ ಪುತ್ರಿ ಖತೀಜಾ ಸಹ ಭಾಗಿಯಾಗಿದ್ದರು. ಸೀರೆ ಧರಿಸಿದ್ದ ಖತೀಜಾ, ಮುಖ ಕಾಣದಂತೆ ಹಿಜಬ್ ಧರಿಸಿದ್ದರು. ಕಾರ್ಯಕ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಪುತ್ರಿಗೆ ರಹಮಾನ್ ಬಲವಂತವಾಗಿ ಹಿಜಬ್ ಧರಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು.

    ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ್ದ ರಹಮಾನ್, ಬುರ್ಖಾ ಧರಿಸೋದು ಪುತ್ರಿಯ ನಿರ್ಧಾರವಾಗಿದೆ ಎಂದಿದ್ದರು. ಇನ್ನು ಫೇಸ್‍ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದ ಖತೀಜಾ, ನಾನು ಹೇಗೆ ಇರಬೇಕೆಂಬುವುದು ಗೊತ್ತಿದೆ. ವಿಷಯದ ಬಗ್ಗೆ ಗೊತ್ತಿಲ್ಲದೇ ನಿಮ್ಮ ಊಹೆಗಳನ್ನು ಸತ್ಯ ಎಂದು ವಾದಿಸಬೇಡಿ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದರು.

    https://www.instagram.com/p/BtjSI1KlTfW/?utm_source=ig_embed