Tag: ಎಸ್‌ ಶಂಕರ್

  • ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ರಿಲೀಸ್ ಡೇಟ್ ಫಿಕ್ಸ್

    ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ರಿಲೀಸ್ ಡೇಟ್ ಫಿಕ್ಸ್

    ಕಾಲಿವುಡ್ ನಟ ಕಮಲ್ ಹಾಸನ್ ‘ವಿಕ್ರಮ್’ (Vikram) ಸಿನಿಮಾದ ಸಕ್ಸಸ್ ನಂತರ ‘ಇಂಡಿಯನ್ 2’ (Indian 2) ಕಥೆ ಹೇಳೋದಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರ ರಿಲೀಸ್ ಯಾವಾಗ ಎಂದು ಕಾದು ಕುಳಿತವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ.

    ಕಮಲ್ ಹಾಸನ್ (Kamal Haasan) ನಟನೆಯ ‘ಇಂಡಿಯನ್ 2’ ಚಿತ್ರದ ಇದೇ ಜುಲೈ 12ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಇಂಡಿಯನ್ ಸೀಕ್ವೆಲ್‌ಗೆ ಎಸ್.ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು 1996ರ ‘ಇಂಡಿಯನ್’ ಚಿತ್ರದ ಮುಂದುವರೆದ ಭಾಗವಾಗಿದೆ. ಇದನ್ನೂ ಓದಿ:ಮಂಚು ಮನೋಜ್ ನಟನೆಯ ‘ಮಿರಾಯ್’ ಫಸ್ಟ್ ಲುಕ್ ರಿಲೀಸ್- ಸಾಥ್‌ ನೀಡಿದ ಡಿಬಾಸ್, ಕಿಚ್ಚ

    ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್ (Rakul Preet Singh), ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.


    ಎಸ್. ಶಂಕರ್ ನಿರ್ದೇಶನದಲ್ಲಿ ‘ಇಂಡಿಯನ್ 2’ ಸಿನಿಮಾ ಮೂಡಿ ಬರುತ್ತಿದ್ದು, ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

  • 2ನೇ ಮದುವೆಯಾದ ‘ಇಂಡಿಯನ್ 2’ ಚಿತ್ರ ನಿರ್ದೇಶಕನ ಪುತ್ರಿ

    2ನೇ ಮದುವೆಯಾದ ‘ಇಂಡಿಯನ್ 2’ ಚಿತ್ರ ನಿರ್ದೇಶಕನ ಪುತ್ರಿ

    ಗೇಮ್ ಚೇಂಜರ್, ಇಂಡಿಯನ್ 2 (Indian 2) ಸಿನಿಮಾಗಳ ಎಸ್. ಶಂಕರ್ ಅವರ ಪುತ್ರಿ ಐಶ್ವರ್ಯಾ (Aishwarya Shankar) ಮದುವೆಯು ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಸ್ಟಾರ್ ನಿರ್ದೇಶಕನ ಪುತ್ರಿಯ ಮದುವೆಗೆ ನಯನತಾರಾ ದಂಪತಿ, ರಜನಿಕಾಂತ್, ಸೂರ್ಯ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

    ಎಸ್. ಶಂಕರ್ (S Shankar) ಮಗಳು ಐಶ್ವರ್ಯಾ ಇದೀಗ ಸಹಯಕ ನಿರ್ದೇಶಕ ತರುಣ್ ಕಾರ್ತಿಕೇಯನ್ ಜೊತೆ ಜರುಗಿದೆ. ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸಹಾಯಕ ನಿರ್ದೇಶಕನ ಜೊತೆ ಐಶ್ವರ್ಯ ಮದುವೆ ಇಂದು (ಏ.15) ಗ್ರ್ಯಾಂಡ್‌ಯಾಗಿ ನಡೆದಿದೆ. ಇದನ್ನೂ ಓದಿ:‘ಕಂಗುವ’ ಸಿನಿಮಾದಲ್ಲಿ ಸೂರ್ಯ ಡಬಲ್ ರೋಲ್

    ಈ ಸಮಾರಂಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ, ನಟ ಚಿಯಾನ್ ವಿಕ್ರಮ್, ಮಣಿರತ್ನಂ, ಸುಹಾಸಿನಿ, ನಯನತಾರಾ, ತಲೈವ, ಕಮಲ್ ಹಾಸನ್ ಸೇರಿದಂತೆ ಸ್ಟಾರ್ ಕಲಾವಿದರ ದಂಡೇ ಶಂಕರ್ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಡೈರೆಕ್ಟರ್ ಶಂಕರ್ ಮಗಳು ಐಶ್ವರ್ಯಾ ಅವರು 2022ರಲ್ಲಿ ಕ್ರಿಕೆಟರ್ ರೋಹಿತ್ ದಾಮೋದರನ್ ಜೊತೆ ಮದುವೆಯಾಗಿತ್ತು. ಕೆಲ ಮನಸ್ತಾಪಗಳಿಂದ ಬೇಗನೇ ಈ ಮದುವೆ ಮುರಿದು ಬಿದ್ದಿತ್ತು. ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್ ಪಡೆದರು.

    ಇದೀಗ ತರುಣ್ ಜೊತೆ 2ನೇ ಮದುವೆಯಾಗಿ ಐಶ್ವರ್ಯಾ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನಿರ್ದೇಶಕನ ಪುತ್ರಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಅನಿಲ್ ಕಪೂರ್‌ರನ್ನು ಭೇಟಿಯಾದ ‘ಗೇಮ್ ಜೇಂಜರ್’ ನಿರ್ದೇಶಕ- ಹೊಸ ಚಿತ್ರ ಅನೌನ್ಸ್?

    ಅನಿಲ್ ಕಪೂರ್‌ರನ್ನು ಭೇಟಿಯಾದ ‘ಗೇಮ್ ಜೇಂಜರ್’ ನಿರ್ದೇಶಕ- ಹೊಸ ಚಿತ್ರ ಅನೌನ್ಸ್?

    ರಾಮ್ ಚರಣ್ ನಟನೆಯ ‘ಗೇಮ್ ಜೇಂಜರ್’ (Game Changer) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಶಂಕರ್ ಈಗ ಬಾಲಿವುಡ್ ನಟ ಅನಿಲ್ ಕಪೂರ್‌ರನ್ನು (Anil Kapoor) ಭೇಟಿಯಾಗಿದ್ದಾರೆ. ಇವರ ಜೊತೆ ಹೊಸ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ‌ಎಸ್.ಶಂಕರ್- ಅನಿಲ್ ಕಪೂರ್ ಫೋಟೋಗಳು ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ, ‘ನಾಯಕ್ 2’ ಚಿತ್ರಕ್ಕೆ ತಯಾರಿ ಮಾಡಲಾಗುತ್ತಿದೆ ಎನ್ನಲಾಗಿದೆ. ಕೆಲದಿನಗಳ ಹಿಂದೆ ಕೂಡ ಅನಿಲ್‌ರನ್ನು ಶಂಕರ್ ಭೇಟಿಯಾಗಿ ಚರ್ಚಿಸಿದ್ದರು. ಹಾಗಾಗಿ ಇಬ್ಬರೂ ಮತ್ತೆ ಸಿನಿಮಾ ಮಾಡುವ ಕುರಿತು ಗುಸು ಗುಸು ಶುರುವಾಗಿದೆ.‌ ಇದನ್ನೂ ಓದಿ:‘ಕಲ್ಪನಾ 2’ ಚಿತ್ರದ ಖಳನಟ ಪ್ರಕಾಶ್ ಹೆಗ್ಗೋಡು ನಿಧನ

    ‘ನಾಯಕ್ 2’ (Nayak 2) ಚಿತ್ರದಲ್ಲಿ ಅನಿಲ್ ಕಪೂರ್ ಜೊತೆ ಕರೀನಾ (Kareena) ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೊಸ ಬಗೆಯ ಕಥೆಯ ಜೊತೆ ಬರಲು ಶಂಕರ್ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ‘ಗೇಮ್ ಜೇಂಜರ್’ ಚಿತ್ರದ ಕೆಲಸ ಕೂಡ ಪೂರ್ಣಗೊಂಡಿದ್ದು, ಇದೀಗ ನಾಯಕ್ 2 ಚಿತ್ರ ಶಂಕರ್ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಪತಿಗೆ ಲಿಪ್‌ಲಾಕ್ ಮಾಡಿದ ‘ಕಭಿ ಖುಷಿ ಕಭಿ ಗಮ್’ ನಟಿ

    2001ರಲ್ಲಿ ‘ನಾಯಕ್’ ಸಿನಿಮಾದಲ್ಲಿ ಅನಿಲ್ ಕಪೂರ್, ರಾಣಿ ಮುಖರ್ಜಿ, ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಎಸ್. ಶಂಕರ್ ಅವರೇ ಮೊದಲ ಭಾಗವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ಮತ್ತೆ ‘ಗೇಮ್ ಚೇಂಜರ್’ ನಿರ್ದೇಶಕನ ಹೊಸ ಚಿತ್ರಕ್ಕೆ ಕೈಜೋಡಿಸಿದ್ರಾ ರಾಮ್ ಚರಣ್?

    ಮತ್ತೆ ‘ಗೇಮ್ ಚೇಂಜರ್’ ನಿರ್ದೇಶಕನ ಹೊಸ ಚಿತ್ರಕ್ಕೆ ಕೈಜೋಡಿಸಿದ್ರಾ ರಾಮ್ ಚರಣ್?

    ಟಾಲಿವುಡ್ (Tollywood) ನಟ ರಾಮ್ ಚರಣ್ ಅವರು ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಗ್ಲೋಬಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಇದರ ನಡುವೆ ಮೆಗಾ ಸ್ಟಾರ್ ಪುತ್ರನ ಗೇಮ್ ಚೇಂಜರ್ ಸಿನಿಮಾ ಅಪ್‌ಡೇಟ್ ಕಾಯ್ತಿದ್ದ ಫ್ಯಾನ್ಸ್‌ಗೆ, ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ‘ಗೇಮ್ ಚೇಂಜರ್’ ಸಿನಿಮಾದ ನಿರ್ದೇಶಕ ಎಸ್.ಶಂಕರ್ ಜೊತೆಗೆನೇ ಹೊಸ ಸಿನಿಮಾಗೆ ಕೈ ಜೋಡಿಸುತ್ತಾರಂತೆ.

    ಮುದ್ದು ಮಗಳ ಆಗಮನದಿಂದ ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗಳ ಪಾಲನೆಯಲ್ಲಿ ರಾಮ್ ಚರಣ್ ದಂಪತಿ ಬ್ಯುಸಿಯಿದ್ದಾರೆ. ಜೊತೆಗೆ ಹೊಸ ಪ್ರಾಜೆಕ್ಟ್‌ಗಳ ಕಡೆ ಕೂಡ ಗಮನ ಕೊಡ್ತಿದ್ದಾರೆ. ಆರ್‌ಆರ್‌ಆರ್ ಹೀರೋ ಚರಣ್, ಗೇಮ್ ಚೇಂಜರ್ ಸಿನಿಮಾದ ನಂತರ ಮುಂದೇನು? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ರಾಮ್ ಚರಣ್ ಗೇಮ್ ಚೇಂಜರ್ ಬಳಿಕ ಯಾವುದೇ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಾಗಿ ‘ಗೇಮ್ ಚೇಂಜರ್’ ನಂತರವೇ ಹೊಸ ಸಿನಿಮಾ ಸೆಟ್ಟೇರಬಹುದು ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಈ ತಿಂಗಳಲ್ಲಿಯೇ ಈ ಕುರಿತು ಬಿಗ್ ಅಪ್ಡೇಟ್ ಹೊರಬೀಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ‘ಗೇಮ್ ಚೇಂಜರ್’ ಶೂಟಿಂಗ್ ಸಮಯದಲ್ಲೇ ನಟ ರಾಮ್‌ನ ನಿರ್ದೇಶಕ ಶಂಕರ್ (S.Shankar) ಲಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹೊಸ ಪ್ರಾಜೆಕ್ಟ್‌ಗೆ ಚರಣ್ ಕಾಲ್‌ಶೀಟ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜಾನಾ? ಎಂಬುದನ್ನ ಮುಂದಿನ ದಿನಗಳವರೆಗೂ ಕಾಯಬೇಕಿದೆ. ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ರಾಮ್- ಕಿಯಾರಾ ಅಡ್ವಾಣಿ (Kiara Advani) ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾದ ಕೊನೆಯ ಹಂತದ ಕೆಲಸಗಳು ಜರುಗುತ್ತಿದೆ. ಸದ್ಯದಲ್ಲೇ ಎಲ್ಲದರ ಅಪ್‌ಡೇಟ್ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಡಾನ್ ಹಿಂಸಾಚಾರ – ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’

    ಸುಡಾನ್ ಹಿಂಸಾಚಾರ – ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’

    ನವದೆಹಲಿ: ಸುಡಾನ್‍ನ (Sudan) ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ದೇಶದ ನಾಗರಿಕರನ್ನು ಸ್ಥಳಾಂತರಿಸಲು ಭಾರತ (India) ಸರ್ಕಾರವು ಆಪರೇಷನ್ ಕಾವೇರಿ (Operation Kaveri) ಪ್ರಾರಂಭಿಸಿದೆ ಎಂದು ಕೇಂದ್ರ ಸಚಿವ ಎಸ್. ಶಂಕರ್ (S Jaishankar) ತಿಳಿಸಿದರು.

    ಈಗಾಗಲೇ ಸುಮಾರು 500 ಭಾರತೀಯರು ಸುಡಾನ್‌ನ ಬಂದರು ಬಳಿ ತಲುಪಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಆಪರೇಷನ್ ಕಾವೇರಿ ಎಂದು ಹೆಸರಿಡಲಾಗಿದೆ ಎಂದು ಟ್ವೀಟ್‍ನಲ್ಲಿ ಮಾಹಿತಿ ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಸುಡಾನ್‍ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ ಪ್ರಾರಂಭಗೊಂಡಿದೆ. ಸುಮಾರು 500 ಭಾರತೀಯರು ಸುಡಾನ್‍ನ ಬಂದರು ಬಳಿ ತಲುಪಿದ್ದಾರೆ. ಈಗಾಗಲೇ ಅವರನ್ನು ಸುರಕ್ಷಿತವಾಗಿ ಕರೆತರಲು ನಮ್ಮ ದೇಶದ ಹಡುಗುಗಳು ಹಾಗೂ ವಿಮಾನಗಳು ಸಜ್ಜಾಗಿವೆ. ಸುಡಾನ್‍ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ಬದ್ಧವಾಗಿದ್ದೇವೆ ಎಂದರು.

    ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದ ಸುಡಾನ್ ರಾಜಧಾನಿ ಸೇರಿದಂತೆ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ. ಈ ಹಿನ್ನೆಲೆ ಎರಡೂ ಕಡೆಗಳಿಂದ ಹಿಂಸಾಚಾರ ಭುಗಿಲೆದ್ದಿದೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

    ಈಗಾಗಲೇ ಘರ್ಷಣೆ ನಡೆಯುತ್ತಿರುವ ಪ್ರದೇಶಗಳಿಂದ ಭಾರತದ ನಾಗರಿಕರನ್ನು ರಕ್ಷಿಸಿ ಕರೆತರಲು ಭಾರತೀಯ ರಾಯಭಾರ ಕಚೇರಿಯ  (Indian Embassy) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ

  • ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದ ಶೂಟಿಂಗ್ ಶುರು

    ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದ ಶೂಟಿಂಗ್ ಶುರು

    ಸ್. ಶಂಕರ್ ನಿರ್ದೇಶನದ `ಇಂಡಿಯನ್ 2′ (Indian 2) ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಚಿತ್ರೀಕರಣಕ್ಕೆ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Hassan) ಹಾಜರ್ ಆಗಿದ್ದಾರೆ. ಸದ್ಯ ಈ ಫೋಟೋ ಮತ್ತು ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ವಿಕ್ರಮ್’ ಚಿತ್ರದ ಸಕ್ಸಸ್ ನಂತರ `ಇಂಡಿಯನ್ 2′ ಚಿತ್ರವನ್ನ ಕಮಲ್ ಹಾಸನ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಚಿತ್ರದ ಶೂಟಿಂಗ್‌ಗೆ ನಟ ಕಮಲ್ ಹಾಸನ್ ಕೂಡ ಭಾಗಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡುವ ಮೂಲಕ ಅಪ್‌ಡೇಟ್‌ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಎಸ್.ಶಂಕರ್ ನಿರ್ದೇಶನದ `ಇಂಡಿಯನ್ 2′ ಸಿನಿಮಾದಲ್ಲಿ ಡಿಫರೆಂಟ್ ಗೆಟಪ್‌ನಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಕಮಲ್‌ಗೆ ನಾಯಕಿಯರಾಗಿ ಕಾಜಲ್ ಅಗರ್‌ವಾಲ್, ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ.

    ಬಹುನಿರೀಕ್ಷಿತ `ಇಂಡಿಯನ್ 2′ ಚಿತ್ರದ ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. ವಿಕ್ರಮ್‌ ಅವತಾರ ನೋಡಿದ ಅಭಿಮಾನಿಗಳು, ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್ ನಟನೆ ನೋಡಲು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]