Tag: ಎಸ್. ರಾಮಪ್ಪ

  • ಮುಖ್ಯಮಂತ್ರಿ ಚೇಂಜ್ ಆದ್ರೂ ಆಗ್ಬಹುದು: ಶಾಸಕ ಎಸ್.ರಾಮಪ್ಪ

    ಮುಖ್ಯಮಂತ್ರಿ ಚೇಂಜ್ ಆದ್ರೂ ಆಗ್ಬಹುದು: ಶಾಸಕ ಎಸ್.ರಾಮಪ್ಪ

    ದಾವಣಗೆರೆ: ಮುಖ್ಯಮಂತ್ರಿಗಳು ಚೇಂಜ್ ಆದರೂ ಆಗಬಹುದು ಎಂದು ಹೇಳುವ ಮೂಲಕ ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ಕಾಂಗ್ರೆಸ್ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ಕಾಂಗ್ರೆಸ್ ಎಲ್ಲಿರುತ್ತೋ, ಅಲ್ಲಿ ನಾನಿರುತ್ತೇನೆ. ಹಾಗಾಗಿ ಯಾರು ರಾಜೀನಾಮೆ ಕೊಟ್ಟರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಬದಲಾವಣೆ ಆದರೆ ಆಗಬಹುದು. ಮೈತ್ರಿ ಸರ್ಕಾರ ಮಾತ್ರ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನಾನೋರ್ವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಕೆಲವರು ನನ್ನ ಹಿಂದೆ ಬಿದ್ದಿದ್ದಾರೆ. ಈಗಾಗಲೇ ನಾನು ಪಕ್ಷ ತೊರೆಯಲ್ಲ ಎಂಬುದನ್ನ ಅವರೆಲ್ಲರಿಗೂ ಸ್ಪಷ್ಟಪಡಿಸಿದ್ದೇನೆ. ನಾನು ಪಕ್ಷ ತೊರೆಯಲು ಸಿದ್ಧ ಎಂದರೆ ಹಣ ನೀಡಲು ತಯಾರಾಗಿದ್ದಾರೆ. ಆದ್ರೆ ನಾನು ಪಕ್ಷ ಬಿಡುವ ವಿಷಯವೇ ಇಲ್ಲಿ ಬರಲ್ಲ. ನಗರಸಭೆ ಸದಸ್ಯನಾಗಿದ್ದ ನನ್ನನ್ನು ಅಧ್ಯಕ್ಷ, ಶಾಸಕನಾಗಿ ಮತದಾರರು ಆಯ್ಕೆ ಮಾಡಿದ್ದಾರೆ. ಬೇರೆ ಪಕ್ಷಕ್ಕೆ ಹೋದ್ರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. 64 ಸಾವಿರ ಜನರು ಮತ ನೀಡಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದು, ಮತದಾರರಿಗೆ ಮೋಸ ಮಾಡಲ್ಲ ಎಂದು ತಿಳಿಸಿದರು.

    ಚುನವಾಣೆ ವೇಳೆ ನಾನು ಜನರಿಗೆ ನೀಡಿದ್ದ ಮಾತಿನಂತೆ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ ಮಾತಿನಂತೆ ನಡೆದುಕೊಳ್ಳುತ್ತೇನೆ. ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ವಿಸರ್ಜನೆ ಆಗಲ್ಲ. ಮಧ್ಯಂತರ ಚುನಾವಣೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವ ಶಾಸಕರು ಒಪ್ಪಿಕೊಳ್ಳಲ್ಲ. ಸಿಎಂ ಬದಲಾಗಬಹುದು ಅಷ್ಟೇ ಎಂದು ಹೇಳಿದರು.

  • ಮಹಾಭಾರತ ಬರೆದಿದ್ದು ವಾಲ್ಮೀಕಿ ಮಹರ್ಷಿಯಂತೆ – ಶಾಸಕರ ಎಡವಟ್ಟು

    ಮಹಾಭಾರತ ಬರೆದಿದ್ದು ವಾಲ್ಮೀಕಿ ಮಹರ್ಷಿಯಂತೆ – ಶಾಸಕರ ಎಡವಟ್ಟು

    ದಾವಣಗೆರೆ: ಜಿಲ್ಲೆಯ ಶಾಸಕರೊಬ್ಬರು ಭಾಷಣದ ಭರದಲ್ಲಿ ಮಹಾಭಾರತ ಬರೆದವರು ವಾಲ್ಮೀಕಿ ಮಹರ್ಷಿಗಳು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಅವರು ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಆಚರಣೆಗೆ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ರಾಮಪ್ಪ ಭಾಷಣದಲ್ಲಿ ಮಹಾಭಾರತ ಬರೆದವರು ವಾಲ್ಮೀಕಿ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಶಾಸಕರ ವಿರುದ್ಧ ನೆಟ್ಟಿಗರು ಲೇವಡಿ ಮಾಡಿದ್ದಾರೆ.

    ಶಾಸಕರು ಹೇಳಿದ್ದೇನು?:
    ಕಳ್ಳತನ, ದರೋಡೆ ಬಿಟ್ಟು ವಾಲ್ಮೀಕಿ ಮಹರ್ಷಿ ಪರಿವರ್ತನೆ ಹೊಂದಿ ಮಾಡಿದ ಸಾಧನೆ ಅದ್ಬುತ. ಅವರು ಭಾರತ ಹಾಗೂ ವಿಶ್ವದ ಜನರಿಗೆ ಮಾರ್ಗದರ್ಶನ ನೀಡುವಂತಹ ಮಹಾಭಾರತ ಬರೆದರು. ಈ ಕೊಡುಗೆ ಒಂದೇ ಸಮಾಜಕ್ಕೆ ಸಿಮಿತವಾಗಿಲ್ಲ, ಎಲ್ಲರಿಗೂ ದಾರಿ ದೀಪವಾಗುತ್ತಿದೆ ಎಂದು ಭಾಷಣ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದಶಕಗಳ ಬಳಿಕ ದಾವಣಗೆರೆಯ ಗ್ರಾಮಕ್ಕೆ ಸಿಕ್ತು ಸಾರಿಗೆ ವ್ಯವಸ್ಥೆ

    ದಶಕಗಳ ಬಳಿಕ ದಾವಣಗೆರೆಯ ಗ್ರಾಮಕ್ಕೆ ಸಿಕ್ತು ಸಾರಿಗೆ ವ್ಯವಸ್ಥೆ

    ದಾವಣಗೆರೆ: ದಶಕಗಳಿಂದ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಹರಿಹರ ತಾಲೂಕಿನ ನಾಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಈಗ ಸಾರಿಗೆ ವ್ಯವಸ್ಥೆಯಾಗಿದೆ.

    ದಾವಣಗೆರೆಯ ಹರಿಹರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ ಕೆಎಸ್ಆರ್‌ಟಿಸಿ ಬಸ್ ಓಡಿಸಿದ್ದಾರೆ. ಹಲವು ದಶಕಗಳಿಂದ ಬಸ್ ಬಾರದ ಹಳ್ಳಿಗಳಿಗೆ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಿದ್ದು, ಬಸ್ ಓಡಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ.

    ಹರಿಹರ ತಾಲೂಕಿನ ನಾಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಬಸ್ ಸೌಕರ್ಯ ಇಲ್ಲದೆ ಪರದಾಡುತ್ತಿದ್ದರು. ಮಕ್ಕಳು ಶಾಲೆಗೆ ಹೋಗುವುದಕ್ಕೆ ಆಟೋವನ್ನು ಅವಲಂಬಿಸಿದ್ದರು. ಇಲ್ಲಿಗೆ ಅನೇಕ ಶಾಸಕರ ಬಂದಿದ್ದರು. ಅವರಿಗೆಲ್ಲಾ ಬಸ್ ವ್ಯವಸ್ಥೆ ಮಾಡಿಸುವಂತೆ ಮನವಿ ಮಾಡಿದ್ದೇವು. ಆದರೆ ಯಾರು ಕೂಡ ಸಾರಿಗೆ ವ್ಯವಸ್ಥೆ ಮಾಡಿಕೊಡಲಿಲ್ಲ. ಆದರೆ ಈ ಶಾಸಕ ರಾಮಪ್ಪ ಅವರು ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ಕಾರ್ಯವನ್ನು ಹೊಗಳಿದರು.

    ಈ ವೇಳೆ ಸ್ವತಃ ಶಾಸಕರೇ ಹಸಿರು ಬಾವುಟ ತೋರಿಸಿ ಬಳಿಕ ಬಸ್ ಓಡಿಸಿದ್ದಾರೆ. ಆಗ ಮಕ್ಕಳು ಗ್ರಾಮಸ್ಥರು ರಾಮಪ್ಪ ಅವರಿಗೆ ಜೈಕಾರ ಹಾಕಿದ್ದು, ಬಸ್ ವ್ಯವಸ್ಥೆಯಿಂದ ಶಾಲೆ ಮಕ್ಕಳು ಹಾಗೂ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

    https://www.youtube.com/watch?v=cpM4iRKL9o8