Tag: ಎಸ್.ರವಿ

  • ಅಹಿಂದ ಸಚಿವರ ಸಭೆ ಮಾಡಿದ ತಕ್ಷಣ ಸಿಎಂ ಬದಲಾವಣೆ ಆಗಲ್ಲ: ಎಂಎಲ್‌ಸಿ ಎಸ್.ರವಿ

    ಅಹಿಂದ ಸಚಿವರ ಸಭೆ ಮಾಡಿದ ತಕ್ಷಣ ಸಿಎಂ ಬದಲಾವಣೆ ಆಗಲ್ಲ: ಎಂಎಲ್‌ಸಿ ಎಸ್.ರವಿ

    ರಾಮನಗರ: ಅಹಿಂದ ಸಚಿವರ ಸಭೆಗೆ ಬೇರೆ ಅರ್ಥ ಕಲ್ಪಿಸೋದು ಬೇಡ, ಸಭೆ ಮಾಡಿದ ತಕ್ಷಣ ಸಿಎಂ ಬದಲಾವಣೆ ಆಗಲ್ಲ ಎಂದು ಕಾಂಗ್ರೆಸ್ (Congress) ಎಂಎಲ್‌ಸಿ ಎಸ್.ರವಿ (MLC S Ravi) ಹೇಳಿದ್ದಾರೆ.

    ಸಿಎಂ ಬದಲಾವಣೆ ಚರ್ಚೆ ಹಾಗೂ ದಲಿತ ಸಚಿವರ ಡಿನ್ನರ್ ಮೀಟಿಂಗ್ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಯಾರೂ ಕೂಡಾ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ನಾನೊಬ್ಬ ಪರಿಷತ್ ಶಾಸಕನಾಗಿ ಪಕ್ಷದ ಆಂತರಿಕ ಚರ್ಚೆಗಳಲ್ಲೂ ಭಾಗಿಯಾಗಿದ್ದೇನೆ. ಕಳೆದ ವಾರ ನಾವೆಲ್ಲಾ ಒಕ್ಕಲಿಗ ಸಚಿವರು, ಶಾಸಕರು ಸೇರಿದ್ದೆವು. ಅಭಿವೃದ್ಧಿ ಹಾಗೂ ಸಮಾಜದ ಒಳಿತಿನ ಬಗ್ಗೆ ಚರ್ಚೆ ಮಾಡಿದ್ದೇವೆ. ಪಕ್ಷದ ಆಗು-ಹೋಗುಗಳ ಬಗ್ಗೆ ಚರ್ಚೆ ಆಗುತ್ತದೆ. ಸಭೆ ಸೇರಿ ಮಾತನಾಡಿದ್ದಕ್ಕೆಲ್ಲಾ ಬೇರೆ ಅರ್ಥಗಳನ್ನು ಕಲ್ಪಿಸುವುದು ತಪ್ಪು. ಯಾರೋ ನಾಲ್ಕು ಹಿರಿಯ ಸಚಿವರು ಸಭೆ ಸೇರಿ ಮಾತಾನಾಡಿದ್ದನ್ನೇ ಸಿಎಂ ಬದಲಾವಣೆಗೆ ಸಭೆ ಮಾಡಿದ್ದಾರೆ ಅಂತಾ ಯಾಕೆ ತಿಳಿದುಕೊಳ್ಳುತ್ತೀರಿ ಎಂದು ಹೇಳಿದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!

    ಸತೀಶ್ ಜಾರಕಿಹೊಳಿ ನಮ್ಮ ಕಾರ್ಯಾಧ್ಯಕ್ಷರಾಗಿದ್ದವರು. ಸಚಿವರು ಕರೆದರೆ ಎಲ್ಲರೂ ಹೋಗುತ್ತಾರೆ. ಅವರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ. ಮುಡಾ ಕೇಸ್‌ಗೂ ಸಭೆ ಮಾಡೋದಕ್ಕೂ ಏನು ಸಂಬಂಧ? ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ರಾಜ್ಯ ಪ್ರವಾಸ ಮಾಡ್ತಾ ಇದ್ದಾರೆ. ಸಿಎಂ ಯಾರು ಅನ್ನೋದನ್ನ ಹೈಕಮಾಂಡ್ ನಿರ್ಣಯ ಮಾಡುತ್ತೆ. ಶಿವಕುಮಾರ್ ಅಥವಾ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಅನ್ನೋದು ನಮ್ಮ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್‌ಗೆ ಅನಾರೋಗ್ಯ – ಆಸ್ಪತ್ರೆಗೆ ದಾಖಲು

    ಜಾತಿಗಣತಿ ವರದಿ ಬಿಡುಗಡೆ ವಿಚಾರ ಕುರಿತು ಮಾತನಾಡಿದ ಅವರು, ಜಾತಿಗಣತಿ ವರದಿ ಬಿಡುಗಡೆ ಮಾಡಬೇಕೆಂದು ನಮ್ಮ ಪಕ್ಷದ ಹೈಕಮಾಂಡ್ ಪ್ರಣಾಳಿಕೆಯಲ್ಲೇ ತಿಳಿಸಿದೆ. ನಮ್ಮ ಪಕ್ಷದ ಸಿದ್ಧಾಂತ ಕೂಡ ಅದೇ ಇದೆ. ಶೋಷಿತ ಸಮಾಜಕ್ಕೆ ಸಮ ಸಮಾಜ ನಿರ್ಮಾಣ ಆಗಬೇಕು. ಎಲ್ಲರಿಗೂ ನ್ಯಾಯ ಸಿಗಬೇಕು. ಆ ನಿಟ್ಟಿನಲ್ಲಿ ಜಾತಿಗಣತಿ ವರದಿ ಬಗ್ಗೆ ಚರ್ಚೆ ಆಗಬೇಕು. ಚರ್ಚೆಗಳು ಆದಾಗಲೇ ವಾಸ್ತವ ತಿಳಿಯುತ್ತದೆ. ಜೆಡಿಎಸ್, ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ (H D Kumaraswamy), ವಿಜಯೇಂದ್ರ (B Y Vijayendra), ರಾಜಕೀಯವಾಗಿ ಲಾಭ ನೋಡುತ್ತಾರೆ. ಬಿ.ಕೆ.ಹರಿಪ್ರಸಾದ್ ಹೇಳಿಕೆ ಅವರ ವೈಯಕ್ತಿಕ. ಅವರ ನಿಲುವನ್ನ ತಿಳಿಸಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಸಿದ್ದು ನಂತರ ರಾಜ್ಯದಲ್ಲಿ ಅಂತಹ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಮಾತ್ರ: ಹೆಚ್.ಡಿ.ತಮ್ಮಯ್ಯ

  • ಬಿಜೆಪಿ, ಜೆಡಿಎಸ್ ಒಳ ಒಪ್ಪಂದ – ಎಚ್‍ಡಿಕೆ ಸುಳ್ಳೇಶ್ವರ ಎಂದ ಎಂಎಲ್‍ಸಿ ರವಿ

    ಬಿಜೆಪಿ, ಜೆಡಿಎಸ್ ಒಳ ಒಪ್ಪಂದ – ಎಚ್‍ಡಿಕೆ ಸುಳ್ಳೇಶ್ವರ ಎಂದ ಎಂಎಲ್‍ಸಿ ರವಿ

    ರಾಮನಗರ: ಈ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಬೆಂಗಳೂರು ಗ್ರಾಮಾಂತರ ನೂತನ ಎಂಎಲ್‍ಸಿ ಎಸ್.ರವಿ ಹೇಳಿದರು.

    ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯರ ನಡುವೆ ಬೆಂಗಳೂರು ಗ್ರಾಮಾಂತರದಲ್ಲಿ ಒಳ ಒಪ್ಪಂದವಾಗಿತ್ತು. ಎಂಟಿಬಿ ನಾಗರಾಜ್ ರವರೇ ಈ ಒಳ ಒಪ್ಪಂದವನ್ನು ಅನುಷ್ಠಾನ ಮಾಡಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

    ಈ ಒಪ್ಪಂದ ಚನ್ನಪಟ್ಟಣದಲ್ಲಿ ಅದು ಸಫಲವಾಗಲಿಲ್ಲ. ಚನ್ನಪಟ್ಟಣದ ಬಿಜೆಪಿ ಸದಸ್ಯರು ನಮಗೆ ಮತ ನೀಡಿದ್ದಾರೆ. ಹೆಚ್‍ಡಿಕೆ ವಿರೋಧಕ್ಕೆ ನಮಗೆ ಮತ ನೀಡಿದ್ದಾರೆ. ನಾನು ಕರ್ನಾಟಕ ಪ್ರವಾಸೋದ್ಯಮ ಪರಿಸರ ಮತ್ತು ಪರಿಸರ ಇಲಾಖೆ ಸಚಿವ ಯೋಗೇಶ್ವರ್ ಗೆ ಬೆಂಬಲ ಕೇಳಿರಲಿಲ್ಲ ಎಂದರು.

    ಯೋಗೆಶ್ವರ್ ಖಾಸಗಿ ಕಾರ್ಯಕ್ರಮದಲ್ಲಿ ಸಿಕ್ಕಿದ್ದಾಗ ಮಾತನಾಡಿದ್ದೆ ಅಷ್ಟೇ. ಆದರೆ ನಮಗೆ ಚನ್ನಪಟ್ಟಣದಲ್ಲಿ ಬಿಜೆಪಿ ಮತ ಸಿಕ್ಕಿದೆ. ಇನ್ನು ಕಾಂಗ್ರೆಸ್, ಬಿಜೆಪಿ ಒಳ ಒಪ್ಪಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸುಳ್ಳೇಶ್ವರ ಹಾಗಾಗಿ ಹೇಳಿರಬಹುದು ಅಷ್ಟೇ. ಜೆಡಿಎಸ್ ಪಕ್ಷ ಯಾರ ಜೊತೆಗಾದರೂ ಹೋಗಲಿದೆ. ಆದರೆ ಕಾಂಗ್ರೆಸ್ ಬಿಜೆಪಿ ಎಂದಿಗೂ ಒಂದಾಗಲೂ ಸಾಧ್ಯವಿಲ್ಲ ಎಂದು ನುಡಿದರು. ಇದನ್ನೂ ಓದಿ: ಪ.ಬಂಗಾಳದಲ್ಲಿ 7 ವರ್ಷದ ಬಾಲಕನಿಗೆ ಓಮಿಕ್ರಾನ್‌ ಸೋಂಕು- ತೆಲಂಗಾಣದಲ್ಲೂ 2 ಪ್ರಕರಣ ದೃಢ

    ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳು ನಮ್ಮ ಕೈಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆ ಹಾಗೂ ಅಕ್ಕ ಪಕ್ಕದಲ್ಲಿಯೂ ಕಾಂಗ್ರೆಸ್ ಹವಾ ಇರಲಿದೆ ಎಂದರು.

    ಭವಿಷ್ಯದಲ್ಲಿ ಅನೇಕರು ಕಾಂಗ್ರೆಸ್ ಸೇರಲಿದ್ದಾರೆ. ಅದು ಯಾರು, ಯಾವ ಪಕ್ಷ ಎಂದು ಈಗಲೇ ಹೇಳಲಾಗಲ್ಲ. ಡಿಕೆ ಶಿವಕುಮಾರ್ ರವರ ನಾಯಕತ್ವ ನಂಬಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.