Tag: ಎಸ್.ಪಿ ಅಣ್ಣಮಲೈ

  • ವೈದ್ಯೆಗೆ ಕಿರುಕುಳ- ಪೇದೆ ಅಮಾನತಿಗೆ ಅಧಿಕಾರ ಸ್ವೀಕರಿಸಿದ 2 ದಿನದಲ್ಲೇ ಅಣ್ಣಾಮಲೈ ಆದೇಶ

    ವೈದ್ಯೆಗೆ ಕಿರುಕುಳ- ಪೇದೆ ಅಮಾನತಿಗೆ ಅಧಿಕಾರ ಸ್ವೀಕರಿಸಿದ 2 ದಿನದಲ್ಲೇ ಅಣ್ಣಾಮಲೈ ಆದೇಶ

    ಬೆಂಗಳೂರು: ಡೆಂಟಲ್ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್ ಪೇದೆ ಸುದರ್ಶನ್ ಆಸ್ಕಿನ್ ನನ್ನು ಅಮಾನತು ಮಾಡುವಂತೆ ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ.

    ಗಿರಿನಗರ ಠಾಣೆಯ ಪೇದೆ ಸುದರ್ಶನ್ ಆಸ್ಕಿನ್ ಡೆಂಟಲ್ ಡಾಕ್ಟರ್ ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪೇದೆ ವಿರುದ್ಧ ದೂರು ದಾಖಲಿಸಿದ್ದರು. ಈಗ ಕಿರುಕುಳ ನೀಡುತ್ತಿದ್ದ ಪೇದೆಯನ್ನು ಕೆಲಸದಿಂದ ಅಮಾನತು ಮಾಡುವಂತೆ ಅಣ್ಣಾಮಲೈ ಅವರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ:  ಅಣ್ಣಾಮಲೈ ಅಧಿಕಾರ ಸ್ವೀಕಾರ- ನಾನು ಈಗ ಮಗು ಆಗಿದ್ದೀನಿ ಎಂದ್ರು ಡಿಸಿಪಿ

     

    ಏನಿದು ಪ್ರಕರಣ?
    ಪೇದೆ ಸುದರ್ಶನ್ ಆಸ್ಕಿನ್ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ನೀಡುತ್ತಿರುವುದಾಗಿ ವೈದ್ಯೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2013ರಲ್ಲಿ ಸುದರ್ಶನ್ ಹಲ್ಲಿನ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ನನ್ನ ಫೋನ್ ನಂಬರ್ ಇಟ್ಟುಕೊಂಡು ಚಿಕಿತ್ಸೆ ನೆಪ ಹೇಳಿಕೊಂಡು ಮಾತನಾಡುತ್ತಿದ್ದನು. ನಾನು ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಬಳಿಕ ಅವನು ನೇರವಾಗಿ ಕ್ಲಿನಿಕ್ ಗೆ ಬಂದು ನಾನು ಏನು ತೊಂದರೆ ಕೊಡುವುದಿಲ್ಲ ನನ್ನ ಬಳಿ ಮಾತನಾಡು ಎಂದು ಹೇಳುತ್ತಿದ್ದನು.

    ಮನೆ ಬದಲಾಯಿಸಿದರೂ ಫೋನ್ ಮಾಡುವುದನ್ನು ಬಿಡಲಿಲ್ಲ. ಹಿಂಬಾಲಿಸುಕೊಂಡು ಮಾತನಾಡುತ್ತಿದ್ದನು. ಒಂದೇ ವೇಳೆ ನಾನು ಆತನ ಬಳಿ ಮಾತನಾಡಲು ನಿರಾಕರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದನು ಎಂದು ಸಂತ್ರಸ್ತೆ ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಜ್ಞಾನ ಭಾರತಿ ಠಾಣೆಯಲ್ಲಿ ಸೆಕ್ಷನ್ 354, 506 ಆಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮಾಡಿ ಎಸ್.ಪಿ ಅಣ್ಣಾಮಲೈ ಅವರು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

    ಸೋಮವಾರ ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಣ್ಣಾಮಲೈ ಅವರು ಅಧಿಕಾರ ಸ್ವೀಕಾರ ಮಾಡಿದ್ದರು. ಸೌತ್ ಎಂಡ್ ಸರ್ಕಲ್ ನಲ್ಲಿರುವ ಡಿಸಿಪಿ ಕಚೇರಿಯಲ್ಲಿ ಹಿಂದಿನ ಡಿಸಿಪಿ ಡಾ ಶರಣಪ್ಪ ಶರಣಪ್ಪರಿಂದ ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಎಸ್‍ಪಿ ಅಣ್ಣಾಮಲೈ ಇರಲ್ಲ

    21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಎಸ್‍ಪಿ ಅಣ್ಣಾಮಲೈ ಇರಲ್ಲ

    ಚಿಕ್ಕಮಗಳೂರು: ಎಸ್.ಪಿ ಅಣ್ಣಾಮಲೈ ಇನ್ನು 21 ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುವುದಿಲ್ಲ.

    ಎಸ್.ಪಿ ಅಣ್ಣಮಲೈ ಅವರನ್ನು ರಾಜ್ಯ ಸರ್ಕಾರ ಮಾನಸ ಸರೋವರದಲ್ಲಿ ಸ್ಪೆಷಲ್ ಇನ್‍ಚಾರ್ಜ್ ಆಫೀಸರ್ ಆಗಿ ನೇಮಿಸಿದ್ದಾರೆ. ಆದ್ದರಿಂದ 21 ದಿನಗಳ ಕಾಲ ಅವರು ಮಾನಸ ಸರೋವರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಭಾರೀ ಗಾಳಿ, ಧಾರಾಕಾರ ಮಳೆಯಲ್ಲೂ ಎಸ್‍ಪಿ ಅಣ್ಣಾಮಲೈ 300 ಕಿ.ಮೀ ಸೈಕ್ಲಿಂಗ್!

    ಈ 21 ದಿನಗಳ ಕಾಲ ಚಿಕ್ಕಮಗಳೂರು ಎಸ್ಪಿಯಾಗಿ ನಕ್ಸಲ್ ನಿಗ್ರಹ ದಳದ ಎಸ್.ಪಿ ಆಗಿದ್ದ ಲಕ್ಷ್ಮಿ ಪ್ರಸಾದ್ ಚಿಕ್ಕಮಗಳೂರು ಎಸ್‍ಪಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.