Tag: ಎಸ್.ನಾಗರಾಜ ಶೆಟ್ಟಿ

  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ನಾಗರಾಜ ಶೆಟ್ಟಿ ಇನ್ನಿಲ್ಲ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ನಾಗರಾಜ ಶೆಟ್ಟಿ ಇನ್ನಿಲ್ಲ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ನಾಗರಾಜ ಶೆಟ್ಟಿ ಇಂದು ವಿಧಿವಶರಾಗಿದ್ದಾರೆ.

    ಚಿಕ್ಕಮಗಳೂರು ಮೂಲದ ಎಸ್.ನಾಗರಾಜ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಪರಾಜಿಯ, ನಾಗರಹೊಳೆ, ನೂರುಜನ್ಮ, ಕೂಡಿಬಾಳಿದರೆ ಸ್ವರ್ಗ ಸುಖ ಹಾಗೂ ಶ್ರಾವಣ ಸಂಜೆ ಚಿತ್ರಗಳಿಗೆ ಬಂಡವಾಲ ಹಾಕಿದ್ದರು.

    ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ವಿಭಾಗದಲ್ಲಿ ಅವರು ಗುರುತಿಸಿಕೊಂಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ನಾಗರಾಜ ಶೆಟ್ಟಿ ಅವರಿಗೆ ಏಳು ಜನ ಮಕ್ಕಳಿದ್ದಾರೆ. ಕನ್ನಡ ಚಿತ್ರರಂಗ ನಾಗರಾಜ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv