Tag: ಎಸ್.ಕೆ.ಭಗವಾನ್

  • ಅಯ್ಯಂಗಾರ್‌ ಸಂಪ್ರದಾಯದಂತೆ ನಿರ್ದೇಶಕ ಎಸ್.ಕೆ ಭಗವಾನ್ ಅಂತ್ಯಕ್ರಿಯೆ

    ಅಯ್ಯಂಗಾರ್‌ ಸಂಪ್ರದಾಯದಂತೆ ನಿರ್ದೇಶಕ ಎಸ್.ಕೆ ಭಗವಾನ್ ಅಂತ್ಯಕ್ರಿಯೆ

    ನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ (Director S.k Bhagawan) ಅವರ ಅಂತ್ಯಕ್ರಿಯೆ (Funeral) ನಡೆದಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಅಂತಿಮ ವಿಧಿ ವಿಧಾನ ಕಾರ್ಯ ಮಾಡಲಾಯಿತು.

    ಡಾ.ರಾಜ್‌ಕುಮಾರ್, ಅನಂತ್ ನಾಗ್ ಅವರ ಸಿನಿಮಾಗಳು ಸೇರಿದಂತೆ ಹಲವು ಖ್ಯಾತ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಎಸ್.ಕೆ ಭಗವಾನ್ ಅವರು ಫೆ.20ರಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜಯದೇವ ಆಸ್ಪತ್ರೆಯಲ್ಲಿ ಭಗವಾನ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ನಿರ್ದೇಶಕ ಭಗವಾನ್ ನಿಧನಕ್ಕೆ ಸಿಎಂ, ಮಾಜಿ ಸಿಎಂ ಸಂತಾಪ

    ಎಸ್.ಕೆ ಭಗವಾನ್ ಅವರ ಅಂತಿಮ ದರ್ಶನಕ್ಕೆ ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ಭೇಟಿ ನೀಡಿ ಸಂತಾಪ ಸೂಚಿಸಿದರು. ಇದೀಗ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಯಿತು. ವಿಧಿ ವಿದಾನವನ್ನು ಹಿರಿಯ ಪುತ್ರ ಜೊತಿಂಧರ್ ನೆರವೇರಿಸಿದರು. ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಿರ್ದೇಶಕ ಭಗವಾನ್ ಅಂತಿಮ ದರ್ಶನಕ್ಕೆ ಸಿದ್ಧತೆ

    ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಿರ್ದೇಶಕ ಭಗವಾನ್ ಅಂತಿಮ ದರ್ಶನಕ್ಕೆ ಸಿದ್ಧತೆ

    ಇಂದು ಬೆಳಗ್ಗೆ ನಿಧನರಾಗಿರುವ ಕನ್ನಡದ ಹೆಸರಾಂತ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (Dorai Bhagavan) ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಸಹಕಾರಿ ನಗರದ ಅವರ ನಿವಾಸಕ್ಕೆ ತರಲಾಗಿದೆ. ಕುಟುಂಬಸ್ಥರು ವಿಧಿ ವಿಧಾನ ಮುಗಿಸಿದ ನಂತರ ಅಭಿಮಾನಿಗಳಿಗಾಗಿ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಮಧ್ಯಾಹ್ನ 12.30ರ  ನಂತರ ವ್ಯವಸ್ಥೆ ಮಾಡಿರುವುದಾಗಿ ಭಗವಾನ್ ಪುತ್ರ ರಿಚ್ಚಿ ತಿಳಿಸಿದ್ದಾರೆ.

    ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್ ಇವರು ಪೂರ್ಣ ಹೆಸರು. 1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ರಂಗಭೂಮಿ ಹಿನ್ನೆಲೆಯುಳ್ಳವರು. ಕಾಲೇಜು ದಿನಗಳಲ್ಲಿ ರಂಗಭೂಮಿಯ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಇದನ್ನೂ ಓದಿ: ಸದ್ದಿಲ್ಲದೇ ಆದಿಯೋಗಿ ಶಿವನ ದರ್ಶನ ಪಡೆದ ರಜನಿಕಾಂತ್

    1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದವರು. ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

    ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ

    ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ

    ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (Dorai Bhagavan) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಗವಾನ್ (90) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ (death). ಕನ್ನಡ ಸಿನಿಮಾ ರಂಗದಲ್ಲಿ ದೊರೈ ಭಗವಾನ್ ಎಂದೇ ಜೋಡಿ ಖ್ಯಾತಿಯಾಗಿತ್ತು. ಈಗಾಗಲೇ ದೊರೆ ದೂರವಾಗಿದ್ದಾರೆ. ಅವರನ್ನು ಅರಸಿಕೊಂಡು ಭಗವಾನ್ ಹೊರಟಿದ್ದಾರೆ.

    ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್ (SK Bhagavan) ಇವರು ಪೂರ್ಣ ಹೆಸರು. 1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ರಂಗಭೂಮಿ ಹಿನ್ನೆಲೆಯುಳ್ಳವರು. ಕಾಲೇಜು ದಿನಗಳಲ್ಲಿ ರಂಗಭೂಮಿಯ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಇದನ್ನೂ ಓದಿ:ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್