Tag: ಎಸ್.ಕೆ ಉತ್ತಪ್ಪ

  • ಸರಳವಾಗಿ ವಿವಾಹವಾದ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್.ಕೆ ಉತ್ತಪ್ಪ

    ಸರಳವಾಗಿ ವಿವಾಹವಾದ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್.ಕೆ ಉತ್ತಪ್ಪ

    ಮಡಿಕೇರಿ: ಅಂತಾರಾಷ್ಟ್ರೀಯ ಹಾಕಿ ಆಟಗಾರ ಕೊಡಗಿನ ಎಸ್.ಕೆ.ಉತ್ತಪ್ಪ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕೊಡಗಿನ ವಿರಾಜಪೇಟೆ ಬಾಲಾಜಿ ಗ್ರಾಮದ ರೆಸಾರ್ಟ್‍ವೊಂದರಲ್ಲಿ ಸರಳವಾಗಿ ಕೇವಲ ಬೆರಳೆಣಿಕೆಯಷ್ಟು ಕುಟುಂಬ ಸದಸ್ಯ ಒಳಗೊಂಡು ಮದುವೆ ಕಾರ್ಯಕ್ರಮ ನಡೆದಿದೆ. ಎಸ್.ಕೆ.ಉತ್ತಪ್ಪ ಅವರ ನಿಶ್ಚಿತಾರ್ಥ ಕೊಡಗಿನ ಮೂಲದ ಪುಟ್ಟಿಚಂಡ ಸಂಜನಾಳೊಂದಿಗೆ ನಿನ್ನೆ ಮುಗಿದಿದ್ದು, ಇಂದು ಈ ಜೋಡಿ ಹಸೆಮಣೆಯೇರಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮವನ್ನು ಮಾಡಲಾಗಿದೆ. ಇಂದು ರಾತ್ರಿ ದಂಪತಿ ಮುಹೂರ್ತ ನಿಗದಿಯಾಗಿದ್ದು, ಕುಟುಂಬದವರು ಮತ್ತು ಬಂಧುಗಳಿಗೆ ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ. ಎಸ್.ಕೆ ಉತ್ತಪ್ಪ ಏಕಲವ್ಯ ಪ್ರಶಸ್ತಿ ವಿಜೇತರಾಗಿದ್ದಾರೆ. ಹಾಗೂ 164 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

  • #weneedemergencyhospitalinkodagu – ಕೊಡಗಿನಲ್ಲಿ ಆಸ್ಪತ್ರೆಗಾಗಿ ಅಭಿಯಾನ

    #weneedemergencyhospitalinkodagu – ಕೊಡಗಿನಲ್ಲಿ ಆಸ್ಪತ್ರೆಗಾಗಿ ಅಭಿಯಾನ

    ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಕನ್ನಡದಲ್ಲಿ ಹೈಟೆಕ್ ಆಸ್ಪತ್ರೆ ಬೇಕೆಂದು ಅಲ್ಲಿನ ಜನ ಅಭಿಯಾನ ಆರಂಭಿಸಿದ್ದರು. ಈಗ ಕೊಡಗಿನ ಮಂದಿ ಸಹ ನಮ್ಮ ಜಿಲ್ಲೆಯಲ್ಲೂ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

    ಅಪಘಾತವಾದರೆ ತಕ್ಷಣ ಚಿಕಿತ್ಸೆ ಪಡೆಯಲು ಕೊಡಗಿನಲ್ಲಿ ಒಂದು ಉತ್ತಮ ಅಸ್ಪತ್ರೆಯಿಲ್ಲ. ಅದ್ದರಿಂದ ನಮಗೆ ಹೈಟೆಕ್ ಅಸ್ಪತ್ರೆ ಬೇಕೆಂದು ಸಂಸದ ಪ್ರತಾಪ್ ಸಿಂಹ, ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಬೇಡಿಕೆ ಇಡುತ್ತಿದ್ದಾರೆ.

    ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಸರ್ಕಾರವು ಉತ್ಸುಕವಾಗಿದೆ. ಆದರೆ ಜಿಲ್ಲೆಯಲ್ಲಿ ನಡೆಯುವ ತೀವ್ರ ಅಪಘಾತಗಳು ಮತ್ತು ಹೃದಯಾಘಾತವಾದರೆ ಚಿಕಿತ್ಸೆ ಪಡೆಯಲು ಕೊಡಗಿನಲ್ಲಿ ಒಂದೇ ಆಸ್ಪತ್ರೆಯೂ ಇಲ್ಲ. ಒಂದೋ ಮಂಗಳೂರಿಗೆ ಹೋಗಬೇಕು. ಇಲ್ಲದೇ ಇದ್ದರೆ ಮೈಸೂರಿಗೆ ಹೋಗಬೇಕು. ಒಂದು ಜಿಲ್ಲೆಯಾಗಿ ರೂಪುಗೊಂಡರೂ ಇನ್ನು ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಿಲ್ಲ ಯಾಕೆ ಎಂದು ಜನರು ಜನಪ್ರತಿನಿಧಿಗಳಿಗೆ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಈ ವಿಚಾರದ ಕುರಿತು ಟ್ವೀಟ್ ಮಾಡಿರುವ ಭಾರತ ಹಾಕಿ ತಂಡದ ಆಟಗಾರ ಕೊಡಗಿನ ಎಸ್.ಕೆ ಉತ್ತಪ್ಪ ಅವರು ಕೊಡಗಿನಲ್ಲಿ 3 ತಾಲೂಕುಗಳು, 5 ಪಟ್ಟಣಗಳು, 97 ಗ್ರಾಮ ಪಂಚಾಯತ್, 303 ಗ್ರಾಮಗಳು ಹೊಂದಿರುವ ಜಿಲ್ಲೆಯಲ್ಲಿ 2019 ಆದರೂ ಒಂದು ಹೈಟೆಕ್ ಆಸ್ಪತ್ರೆಯಿಲ್ಲ. ಈ ವಿಚಾರದಲ್ಲಿ ಕೊಡಗಿನ ಜನರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ನಾನು ಇದನ್ನು ವೈಯಕ್ತಿಕವಾಗಿ ಅನುಭವಿಸಿದ್ದೇನೆ. ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.