Tag: ಎಸ್ ಎಸ್ ಮಲ್ಲಿಕಾರ್ಜುನ

  • ಎಲೆ ಚುಕ್ಕೆ ರೋಗ, ಹಳದಿ ರೋಗ ಪರಿಹಾರ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ – ಎಸ್.ಎಸ್.ಮಲ್ಲಿಕಾರ್ಜುನ

    ಎಲೆ ಚುಕ್ಕೆ ರೋಗ, ಹಳದಿ ರೋಗ ಪರಿಹಾರ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ – ಎಸ್.ಎಸ್.ಮಲ್ಲಿಕಾರ್ಜುನ

    ಬೆಂಗಳೂರು: ಎಲೆ ಚುಕ್ಕೆ ರೋಗ ಮತ್ತು ಹಳದಿ ರೋಗ ಪರಿಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ (SS Mallikarjun) ತಿಳಿಸಿದರು.ಇದನ್ನೂ ಓದಿ: ಯಶ್, ಸುದೀಪ್ ಬಂದ್ರೆ ಸಮಸ್ಯೆ ಆಗುತ್ತದೆ: ಸಾಧುಕೋಕಿಲ

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಪ್ರಶ್ನಿಸಿ, ರಾಜ್ಯದ ಕರಾವಳಿ ಭಾಗಗಳಲ್ಲಿ ಅಡಿಕೆಗೆ ಎಲೆ ಚುಕ್ಕೆ ರೋಗ, ಹಳದಿ ರೋಗ ಬಂದಿದೆ. ಸರ್ಕಾರ ರೈತರಿಗೆ ಪರಿಹಾರ ಸರಿಯಾಗಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ 60% ಅನುದಾನ ಕೊಟ್ಟಿದ್ದರು. ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ. ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ಇದಕ್ಕೆ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಉತ್ತರ ನೀಡಿ, ಕೇಂದ್ರದಿಂದ ಹಣ ಬಂದಿದೆ. ರಾಜ್ಯದ ಹಣ ಸೇರಿಸಿ ಶೀಘ್ರವೇ ಪರಿಹಾರದ ಹಣ ಬಿಡುಗಡೆ ಮಾಡ್ತೀವಿ. ಪ್ರತಿ ಹೆಕ್ಟೇರ್‌ಗೆ ಈಗ 1,200 ರೂ. ಪರಿಹಾರ ಕೊಡುತ್ತಿದ್ದೇವೆ. ಪರಿಹಾರ ಜಾಸ್ತಿ ಮಾಡುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದಿAದ ಉತ್ತರ ಬಂದ ಕೂಡಲೇ ಪರಿಹಾರ ಹೆಚ್ಚು ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.ಇದನ್ನೂ ಓದಿ: ಸ್ಲಿಮ್‌ ಆಗಿರೊರೇ ಬೇಕಿದ್ರೆ ಮಾಡೆಲ್‌ ಆಯ್ಕೆ ಮಾಡಿಕೊಳ್ಳಿ – ರೋಹಿತ್‌ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್‌ ಆಕ್ಷೇಪ

     

  • ಬೆಣ್ಣೆ ನಗರಿಯಲ್ಲಿ ರಾಬರ್ಟ್ ರಿಲ್ಯಾಕ್ಸ್

    ಬೆಣ್ಣೆ ನಗರಿಯಲ್ಲಿ ರಾಬರ್ಟ್ ರಿಲ್ಯಾಕ್ಸ್

    ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮ ಮುಗಿಸಿ ಬೆಣ್ಣೆ ನಗರಿಗೆ ಆಗಮಿಸಿದ್ದ ದರ್ಶನ್ ಕೆಲ ಕಾಲ ರಿಲ್ಯಾಕ್ ಆಗಿ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ದಾರೆ.

    ನಗರದ ಬಾಪೂಜಿ ಗೆಸ್ಟ್ ಹೌಸ್‍ಗೆ, ದರ್ಶನ್ ಜೊತೆ ಹಾಸ್ಯ ನಟ ಚಿಕ್ಕಣ್ಣ ಹಾಗೂ ವಿನೋದ್ ಪ್ರಭಾಕರ್ ಕೂಡ ಆಗಮಿಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಪ್ರೀ ರಿಲೀಸ್ ಮುಗಿಸಿ ನೇರವಾಗಿ ದಾವಣಗೆರೆಗೆ ಆಗಮಿಸಿದ್ದು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮನೆಗೆ ಕೂಡ ಭೇಟಿ ನೀಡಿ ಅವರ ಜೊತೆ ಊಟ ಮಾಡಿ ಕೆಲ ಹೊತ್ತು ಹರಟೆ ಹೊಡೆದು ಸಮಯ ಕಳೆದು ರಿಲಾಕ್ಸ್ ಆಗಿದ್ದ ಬೆಂಗಳೂರಿಗೆ ಮರಳಿದ್ದಾರೆ.

    ದರ್ಶನ್ ಜೊತೆ ವಿನೋದ್ ಪ್ರಭಾಕರ್ ಹಾಗೂ ಚಿಕ್ಕಣ್ಣ ಸೇರಿ ಹತ್ತಕ್ಕೂ ಹೆಚ್ಚು ಜನ ಚಿತ್ರರಂಗದ ಕಲಾವಿದರಿದ್ದರು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಂದ ಆಗಮಿಸಿದ್ದ ನಟರಿಗೆ ಸನ್ಮಾನ ಮಾಡಲಾಯಿತು. ಇನ್ನು ದರ್ಶನ್ ನೋಡಲು ಅಭಿಮಾನಿಗಳು ಬಾಪೂಜಿ ಗೆಸ್ಟ್ ಹೌಸ್ ಬಳಿ ಜಮಾಯಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

  • ಕೈ ನಾಯಕರ ಆಪ್ತರ ಮನೆಯ ಮೇಲೆ ಐಟಿ ದಾಳಿ

    ಕೈ ನಾಯಕರ ಆಪ್ತರ ಮನೆಯ ಮೇಲೆ ಐಟಿ ದಾಳಿ

    ದಾವಣಗೆರೆ/ಬೆಳಗಾವಿ: ರಾಜ್ಯ ಕಾಂಗ್ರೆಸ್-ಜೆಡಿಎಸ್ ನಾಯಕರ ಆಪ್ತರಿಗೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಕಳೆದ ವಾರ ಬಿಸಿ ಮುಟ್ಟಿಸಿದ್ದರು. ಇಂದು ರಾಜ್ಯದ ನಾಲ್ಕು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಮಾಜಿ ಸಚಿವ ಅನಿಲ್ ಲಾಡ್ ಅವರ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ.

    ದಾವಣಗೆರೆಯ ವಿದ್ಯಾನಗರದ ವಿವೇಕಾನಂದ ಬಡಾವಣೆಯಲ್ಲಿರುವ ಉದಯ ಶಿವಕುಮಾರ್ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 10 ಜನ ಐಟಿ ಅಧಿಕಾರಿಗಳ ತಂಡವು ಉದಯ ಶಿವಕುಮಾರ್ ಅವರ ಮನೆಯಲ್ಲಿರುವ ಅಪಾರ ಪ್ರಮಾಣದ ಕಡತಗಳ ಪರಿಶೀಲನೆ ನಡೆಸಿದೆ.

    ಉದಯ ಶಿವಕುಮಾರ್, ಎಸ್.ಎಸ್.ಮಲ್ಲಿಕಾರ್ಜುನ ಅವರ ಆಪ್ತರಾಗಿದ್ದಾರೆ. ಅವರು ದಾವಣಗೆರೆ ಜಿಲ್ಲೆಯ ಬಹುತೇಕ ಕಾಮಗಾರಿಗಳನ್ನು ಅವರು ಗುತ್ತಿಗೆ ಪಡೆದಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರಾದ ಆಪ್ತ, ಉದ್ಯಮಿ ಜಯಶೀಲ ಶೆಟ್ಟಿ ಅವರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಗೋವಾ ಮೂಲದವರಾಗಿದ್ದು, ದಾಖಲೆಗಳ ಪರಿಶೀಲೆ ನಡೆಸಿದ್ದಾರೆ.

    ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಬೆಂಬಲಿಗ, ಗುತ್ತಿಗೆದಾರ ಪ್ರಕಾಶ ವಂಟಮುತ್ತೆ ಅವರ ಚಿಕ್ಕೋಡಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದರು, ಚುನಾವಣಾ ಸಂದರ್ಭದಲ್ಲಿ ಐಟಿ ದಾಳಿ ಮಾಡಿದ್ದು ತಪ್ಪು. ಗುತ್ತಿಗೆದಾರರ ಮೇಲೆ ಐಟಿ ರೇಡ್ ಮಾಡುವ ಮೂಲಕ ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ. ನಾನು ಇದಕ್ಕೆ ಭಯಪಡುವುದಿಲ್ಲ ಎಂದು ತಿಳಿಸಿದ್ದಾರೆ.

  • ಸ್ವ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ ಕೈ ನಾಯಕ!

    ಸ್ವ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ ಕೈ ನಾಯಕ!

    ದಾವಣಗೆರೆ: ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಕೈ ನಾಯಕರೇ ಕಾರಣ ಎಂದು ದಾವಣಗೆರೆಯ ಜಿಲ್ಲಾಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಸಂತಪ್ಪ ವಾಗ್ದಾಳಿ ನಡೆಸಿದ್ದಾರೆ.

    ನಗರದ ರೇಣುಕಾ ಮಂದಿರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಎಸ್ ಮಲ್ಲಿಕಾರ್ಜುನ್ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದರು. ಬಡ ಜನರಿಗೆ 10 ಸಾವಿರ ಮನೆಗಳನ್ನು ನೀಡಿದ್ದರು. ಅಲ್ಲದೆ ಪಕ್ಷದ ಮುಖಂಡರಿಗೆ ತಲಾ ನೂರು ಮನೆಗಳನ್ನು ಕೊಟ್ಟು ಬಡವರಿಗೆ ಹಂಚಿ ಎಂದು ಜವಾಬ್ದಾರಿ ವಹಿಸಿದ್ದರು. ಆದರೆ ಮುಖಂಡರು ಮಾತ್ರ ತನ್ನ ಹೆಂಡತಿ ಮಕ್ಕಳು ಹಾಗೂ ಅನೈತಿಕ ಸಂಬಂಧ ಹೊಂದಿರುವವರಿಗೆ ಮನೆಗಳನ್ನು ನೀಡಿದ್ದಾರೆ ಹೊರತು ಬಡವರಿಗೆ ನೀಡಿಲ್ಲ. ಮಲ್ಲಿಕಾರ್ಜುನ್ ಅವರ ಸೋಲಿಗೆ ಪಕ್ಷದ ಮುಖಂಡರೇ ಕಾರಣ ಎಂದು ವೇದಿಕೆ ಮೇಲೆಯೇ ಕಿಡಿಕಾರಿದ್ದಾರೆ.

    ಒಂದೆಡೆ ಮಾಜಿ ಸಚಿವರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುತ್ತಿದ್ದರೆ ಇನ್ನೊಂದೆಡೆ ಅವರ ಜೊತೆಗಿರುವ ಮುಖಂಡರು ಅವರ ಅಭಿವೃದ್ಧಿ ಕೆಲಸಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲು ಅನುಭವಿಸುವಂತಾಯಿತು ಎಂದು ಸ್ವ ಪಕ್ಷ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

    ಪಕ್ಷಕ್ಕೆ ಎಲ್ಲಾ ವರ್ಗದ ಜನರು ಮತ ಹಾಕಿದ್ದಾರೆ. ನಾವು ಧರ್ಮದ ಆಧಾರದ ಮೇಲೆ ಕೆಲಸ ಮಾಡುವುದು ಬೇಡ. ಜನರಿಗಾಗಿ ಕೆಲಸ ಮಾಡಬೇಕು. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಮತಗಳು ಕಾಂಗ್ರೆಸ್‍ಗೆ ಬೀಳುವಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಹಾಯ ಕೇಳಿ ಬಂದ ಅಂಧನನ್ನೇ ಹೊರದಬ್ಬಿದ ಸಚಿವರು- ಶಕ್ತಿ ಕೇಂದ್ರದಲ್ಲಿ ನಡೀತು ಅಮಾನವೀಯ ಘಟನೆ

    ಸಹಾಯ ಕೇಳಿ ಬಂದ ಅಂಧನನ್ನೇ ಹೊರದಬ್ಬಿದ ಸಚಿವರು- ಶಕ್ತಿ ಕೇಂದ್ರದಲ್ಲಿ ನಡೀತು ಅಮಾನವೀಯ ಘಟನೆ

    ಬೆಂಗಳೂರು: ಸಹಾಯ ಕೇಳಿ ಬಂದ ದಿವ್ಯಾಂಗನ ಮೇಲೆ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ದೌರ್ಜನ್ಯವೆಸಗಿದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ವಿಧಾನಸೌಧ ಮೂರನೇ ಮಹಡಿ ಲಿಫ್ಟ್ ಬಳಿ ಶನಿವಾರ ರಾತ್ರಿ ನಡೆದಿದೆ. ಬೀದರ್ ಮೂಲದ ದಿವ್ಯಾಂಗ ಮಂಜುನಾಥ ಎಂಬವರೇ ದೌರ್ಜನ್ಯಕ್ಕೊಳಗಾದ ವ್ಯಕ್ತಿ.

    ಸಚಿವ ಸಂಪುಟ ಸಭೆಯ ಬಳಿಕ ಮಂಜುನಾಥ ಅವರು ಸಹಾಯಹಸ್ತ ಕೋರಿ ಸಚಿವರ ಬೆನ್ನತ್ತಿದರು. ಆದ್ರೆ ದಿವ್ಯಾಂಗನ ಅಳಲಿಗೆ ಕಿವಿಗೊಡದ ಸಚಿವರು ಕೈ ತೆಗಿಯೋ ಎಂದು ಗದರಿಸಿದ್ರು. ಅಲ್ಲದೇ ಸಚಿವರ ಅಂಗರಕ್ಷಕರು ಕೂಡ ಕಣ್ಣಿದ್ದವರೇ ಮನೆ ಸೇರೋದು ಕಷ್ಟ. ಇನ್ನು ನೀನೇನೋ ಮನೆ ಸೇರ್ತಿಯಾ ರಾತ್ರಿಯಾಗಿದೆ. ಹಗಲಿನಲ್ಲಿ ಬರಬೇಕು ತಾನೇ ಎಂದು ಗದರಿಸಿ ಲಿಫ್ಟ್ ಒಳಗಿಂದ ಹೊರದೂಡಿದ್ದಾರೆ.

    ಕಣ್ಣಿಲ್ಲದಿದ್ದರೂ ಸಚಿವರನ್ನು ಬೆನ್ನತ್ತಿ ಹೋದ್ರೂ ಕ್ಯಾರೆ ಎನ್ನದ ಕಾರಣ ಮಂಜುನಾಥ್ ಪರದಾಟ ನಡೆಸಿದ್ರು. ಕೊನೆಗೆ ಸಚಿವ ಎಂ.ಬಿ.ಪಾಟೀಲ್ ದಿವ್ಯಾಂಗನಿಗೆ ಸ್ಪಂದಿಸಿ, ಅವರ ಮನವಿ ಸ್ವೀಕರಿಸಿದ್ರು.

    https://www.youtube.com/watch?v=fTDVjsijZ_A