Tag: ಎಸ್.ಎಸ್.ಎಲ್.ಸಿ

  • ನಾನು SSLC ಫೇಲ್, ಆದರೆ ಯಾರು ಈ ಕಷ್ಟ ಅನುಭವಿಸಬಾರ್ದು- ಟಾಪರ್ ವಿದ್ಯಾರ್ಥಿಗಳಿಗೆ ದ್ವಿಚಕ್ರ ಕೊಟ್ಟ ಜಮೀರ್

    ನಾನು SSLC ಫೇಲ್, ಆದರೆ ಯಾರು ಈ ಕಷ್ಟ ಅನುಭವಿಸಬಾರ್ದು- ಟಾಪರ್ ವಿದ್ಯಾರ್ಥಿಗಳಿಗೆ ದ್ವಿಚಕ್ರ ಕೊಟ್ಟ ಜಮೀರ್

    ಬೆಂಗಳೂರು: ನನಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕೊರಗು ಯಾವಾಗಲೂ ಕಾಡುತ್ತಿರುತ್ತದೆ. ಇದರಿಂದಾಗಿ ನನ್ನ ಕ್ಷೇತ್ರದ ವಿದ್ಯಾರ್ಥಿಗಳ ವಿಚಾರದಲ್ಲಿ ಹಾಗಾಗಬಾರದು ಎಂದು ದ್ವಿಚಕ್ರ ವಾಹನವನ್ನು ವಿತರಿಸುತ್ತಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

    ಚಾಮರಾಜಪೇಟೆ ಕ್ಷೇತ್ರದ ಎಸ್‍ಎಸ್‍ಎಲ್‍ಸಿಯಲ್ಲಿ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನಗಳ ವಿತರಣೆ ಹಾಗೂ ಹಲವು ವಿದ್ಯಾರ್ಥಿಗಳ ಶಾಲಾ ಶುಲ್ಕ ಭರಿಸಲು ತಲಾ 50,000 ರೂ. ನೆರವು ಆರ್ಥಿಕ ನೆರವು ನೀಡಿದ ಅವರು, ನಾನು ಇಂದು ಶಾಸಕನಾಗಿದ್ದೇನೆ. ನನ್ನ ಬಳಿ ಅಧಿಕಾರ, ಐಶ್ವರ್ಯ, ಜನರ ಪ್ರೀತಿ ಅಭಿಮಾನ ಎಲ್ಲವೂ ಇದೆ. ಆದರೆ ನನ್ನ ಬಳಿ ವಿದ್ಯೆ ಇಲ್ಲ ಎಂಬ ಕೊರಗಿದೆ. ಇದನ್ನು ನೆನೆಸಿಕೊಂಡು ಅನೇಕ ಬಾರಿ ಕಣ್ಣೀರಿಟ್ಟಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

    ವಿದ್ಯೆ ಇಲ್ಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕೊರಗು ಸದಾ ನನ್ನನ್ನು ಕಾಡುತ್ತಿರುತ್ತದೆ. ಹಾಗಾಗಿ, ನನ್ನ ಕ್ಷೇತ್ರದ ವಿದ್ಯಾರ್ಥಿಗಳ ವಿಚಾರದಲ್ಲಿ ಯಾರೂ ವಿದ್ಯೆ ಇಲ್ಲದೇ ಕಷ್ಟ ಅನುಭವಿಸಬಾರದು. ಅದಕ್ಕಾಗಿ ಅವರ ಶಿಕ್ಷಣಕ್ಕೆ ಅಗತ್ಯವಾದ ನೆರವನ್ನು ನಾನು ನೀಡುತ್ತಲೇ ಬಂದಿದ್ದೇನೆ. ಮುಂದೆಯೂ ನೀಡುತ್ತೇನೆ ಎಂದು ತಿಳಿಸಿದರು.

    ಚಾಮರಾಜಪೇಟೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಪಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಪ್ರತಿವರ್ಷ ನನ್ನ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಿ, ಕೈಲಾದ ನೆರವು ನೀಡಲು ನಿರ್ಧರಿಸಿದ್ದೇನೆ ಎಂದ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನಗಳು ಹಾಗೂ ಇಬ್ಬರು ವಿಶೇಷ ಚೇತನರಿಗೆ ವಿಶೇಷ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಇಂದು ಫಲಿತಾಂಶ ಪ್ರಕಟ – ದ್ರೌಪದಿ ಮುರ್ಮು ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ

    ಇದೇ ವೇಳೆ, ನಮಗೆ ವಾಹನ ಬೇಡ, ಬದಲಾಗಿ ಶಾಲೆಯ ಶುಲ್ಕ ಪಾವತಿಸಲು ನೆರವು ನೀಡಿ ಎಂದು ಮನವಿ ಮಾಡಿದ ಹಲವು ವಿದ್ಯಾರ್ಥಿಗಳಿಗೆ ತಲಾ 50,000 ರೂ.ಗಳಂತೆ ಆರ್ಥಿಕ ನೆರವು ನೀಡಿದರು. ಈ ಪೈಕಿ ಪರೀಕ್ಷೆಯಲ್ಲಿ ಶೇ.97ರಷ್ಟು ಫಲಿತಾಂಶ ಗಳಿಸಿರುವ ವೈಷ್ಣವಿ ಎಂಬ ವಿದ್ಯಾರ್ಥಿನಿಗೆ 80,000 ರೂ. ಧನ ಸಹಾಯದ ಜೊತೆಗೆ ದ್ವಿಚಕ್ರ ವಾಹನವನ್ನು ನೀಡಿದರು. ಇದನ್ನೂ ಓದಿ: INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ

    Live Tv
    [brid partner=56869869 player=32851 video=960834 autoplay=true]

  • ಆರೋಗ್ಯ ಇಲಾಖೆಯ ಸಲಹೆಯಂತೆಯೇ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ: ಸುರೇಶ್ ಕುಮಾರ್

    ಆರೋಗ್ಯ ಇಲಾಖೆಯ ಸಲಹೆಯಂತೆಯೇ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ: ಸುರೇಶ್ ಕುಮಾರ್

    ಬೆಂಗಳೂರು: ಆರೋಗ್ಯ ಇಲಾಖೆ ಸಲಹೆಯಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಾಂಕ ಪ್ರಕಟ ಮಾಡಲಾಗಿದೆ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಇಲಾಖೆ ಜೊತೆ ಚರ್ಚೆ ಮಾಡಿಲ್ಲ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆ ವಿಚಾರವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಸುರೇಶ್ ಕುಮಾರ್, ಆರೋಗ್ಯ ಇಲಾಖೆ ಸಲಹೆ ಪಡೆಯಲಾಗಿದೆ ಅಂತ ಸ್ಪಷ್ಟಪಡಿಸಿದರು.

    ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಇಂದು ಸಭೆ ನಡೆಸಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಅವರೂ ಸಹ, ಆರೋಗ್ಯ ಇಲಾಖೆಯ ಸಹಕಾರದ ಬಗ್ಗೆ ವಿಷದಪಡಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

    ಅಲ್ಲದೇ ಇಂದು ನಡೆದ ಎರಡು ಗಂಟೆಗಳ ಸುದೀರ್ಘ ಜಿಲ್ಲಾಧಿಕಾರಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು ಪಾಲ್ಗೊಂಡಿದ್ದಾರೆ. ಇಲಾಖೆಯು ನೀಡಿರುವ ಎಸ್.ಓ.ಪಿ ಅನುಸರಣೆಗೆ ಬೇಕಾದ ಸಿದ್ಧತೆಗಳ ಕುರಿತು ತಮ್ಮ ಸದಭಿಪ್ರಾಯವನ್ನು ಎಲ್ಲ ಜಿಲ್ಲಾಡಳಿತಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿಗಳನ್ನು ಇಂದು ಸಭೆಗೆ ಮುನ್ನ ಖುದ್ದಾಗಿ ಭೇಟಿ ಮಾಡಿ ಪರೀಕ್ಷಾ ದಿನಾಂಕ ಪ್ರಕಟಣೆಗೆ ಮೌಖಿಕ ಒಪ್ಪಿಗೆ ಪಡೆಯಲಾಗಿದೆ ಎಂದು ಸುರೇಶ್ ಕುಮಾರ್ ವಿವರಣೆ ನೀಡಿದ್ದಾರೆ. ಇದನ್ನೂ ಓದಿ:  ಜುಲೈ 19, 22ಕ್ಕೆ SSLC ಎಕ್ಸಾಂ ಫಿಕ್ಸ್ – 2 ದಿನದಲ್ಲಿ ಸರಳ ಪರೀಕ್ಷೆ, ಯಾರೂ ಫೇಲ್ ಇಲ್ಲ

    ಆರೋಗ್ಯ ಇಲಾಖೆಯು ಸಿದ್ಧ ಪಡಿಸಿ ನೀಡಿರುವ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಆಧಾರದಲ್ಲಿ ಜುಲೈ ಮಾಹೆಯಲ್ಲಿ ನಿಗದಿತ ದಿನಾಂಕಗಳಂದು ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸುವ ವಿಶ್ವಾಸ ಇದೆ. ಸುರಕ್ಷಿತವಾಗಿ ನಡೆಯಲಿರುವ ಈ ಪರೀಕ್ಷೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯವೆನ್ನುವುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

  • ಛತ್ತೀಸ್‍ಗಢದಲ್ಲಿ ಜೂನ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ- ಮನೆಯಲ್ಲಿಯೇ ಎಕ್ಸಾಂ

    ಛತ್ತೀಸ್‍ಗಢದಲ್ಲಿ ಜೂನ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ- ಮನೆಯಲ್ಲಿಯೇ ಎಕ್ಸಾಂ

    – 5 ದಿನಗಳೊಳಗಾಗಿ ಉತ್ತರ ಪತ್ರಿಕೆ ಹಿಂದಿರುಗಿಸಬೇಕು

    ರಾಯ್‍ಪುರ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಜೂನ್ 1ರಿಂದ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು, ‘ಎಕ್ಸಾಂ ಫ್ರಮ್ ಹೋಂ’ ಎಂಬ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ.

     

    ಕೊರೊನಾ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲು ಈಗಾಗಲೇ ತಯಾರಿಯನ್ನು ನಡೆಸಲಾಗಿದ್ದು, ಜೂನ್ 1ರಿಂದ 5 ರವರೆಗೆ ವಿದ್ಯಾರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಳಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದ್ದು, ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಪಡೆದುಕೊಂಡ ಐದು ದಿನಗಳ ಒಳಗಾಗಿ ಪರೀಕ್ಷೆ ಬರೆದು ಆಯಾ ಪರೀಕ್ಷಾ ಕೇಂದ್ರಗಳಿಗೆ ಹಿಂದಿರುಗಿಸಿ ಕೊಡುವಂತೆ ಸೂಚನೆ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಛತ್ತೀಸ್‍ಗಢದಲ್ಲಿ ಒಟ್ಟು 2.86 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈಗಾಗಲೇ ಜೂನ್ 1ರ ಬಳಿಕ ಪರೀಕ್ಷೆ ನಡೆಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಛತ್ತೀಸ್‍ಗಢದ ಸಿಬಿಎಸ್‍ಇ ಕಾರ್ಯದರ್ಶಿ ವಿ.ಕೆ ಗೋಯಲ್ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಪಡೆದುಕೊಂಡ ನಂತರ ಕಡ್ಡಾಯವಾಗಿ ಉತ್ತರ ಪತ್ರಿಕೆಯೊಂದಿಗೆ ಪಡೆದುಕೊಂಡ 5 ದಿನಗಳ ಒಳಗಾಗಿ ಪರೀಕ್ಷಾ ಕೇಂದ್ರಗಳಿಗೆ ಹಿಂದಿರುಗಿಸಬೇಕು. ಇದೀಗ ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಜೂನ್ 1 ರಂದು ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡರೆ ಜೂನ್ 6 ಒಳಗಾಗಿ ಹಿಂದಿರುಗಿಸಬೇಕು ಇಲ್ಲವಾದವಲ್ಲಿ ಅಂತವರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಛತ್ತೀಸ್‍ಗಢದಲ್ಲಿ ಈಗಾಗಲೇ ಕೊರೊನಾದಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.

  • ನಿಗದಿತ ವೇಳಾಪಟ್ಟಿಯಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವಂತೆ ಶಿಕ್ಷಣ ಸಚಿವರಿಗೆ ಹೊರಟ್ಟಿ ಪತ್ರ

    ನಿಗದಿತ ವೇಳಾಪಟ್ಟಿಯಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವಂತೆ ಶಿಕ್ಷಣ ಸಚಿವರಿಗೆ ಹೊರಟ್ಟಿ ಪತ್ರ

    ಹುಬ್ಬಳ್ಳಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಮುಂದೂಡುವುದರಿಂದ ಯಾವುದೇ ಪ್ರಯೋಜನವಿಲ್ಲ, ನಿಗದಿಯಾದ ಪರೀಕ್ಷೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ ನಡೆಸಿದರೆ ಮಕ್ಕಳ ಕಲಿಕೆ ಹಾಗೂ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡದೇ ನಿಗದಿತ ವೇಳಾಪಟ್ಟಿಯಂತೆ ನಡೆಸಬೇಕು ಎಂದು ಒತ್ತಾಯಿಸಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

    ಸಿಬಿಎಸ್‍ಇ ಪಠ್ಯಕ್ರಮ ಹಾಗೂ ಕೇಂದ್ರಿಯ ವಿದ್ಯಾಲಯಗಳಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪರೀಕ್ಷೆ ಮಾಡುವ ಒತ್ತಡ ಏಕೆ? ಎಂದು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ. ಪ್ರಮುಖ ಹಂತಗಳ ಪರೀಕ್ಷೆಗಳಿಗೆ ವ್ಯತ್ಯಯ ಉಂಟಾಗಬಾರದು. ಕರ್ನಾಟಕ ಮಾಧ್ಯಮಿಕ ಪರೀಕ್ಷಾ ಮಂಡಳಿಯು 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಅದರಂತೆ ಪರೀಕ್ಷೆಗಳು ರಾಜ್ಯದಲ್ಲಿ ನಡೆಯಲಿ ಎಂದರು.

    ಕಳೆದ ವರ್ಷದಂತೆ ಈ ವರ್ಷವೂ ಎಸ್‍ಎಲ್‍ಎಲ್‍ಸಿ ಪರೀಕ್ಷೆ ನಡೆಸುವುದು ಸೂಕ್ತ. ಪರೀಕ್ಷೆಗಳನ್ನು ಮುಂದೂಡಿದರೆ ಮಕ್ಕಳು ಕಲಿಕೆಯಿಂದ ದೂರ ಸರಿಯುತ್ತಾರೆ. ಕಲಿಕೆಯ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುವಂತಾಗುತ್ತದೆ. ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದಿನ ಎಲ್ಲಾ ಚಟುವಟಿಕೆಗಳಿಗೆ ಕೇಂದ್ರೀಕೃತವಾಗಿರುತ್ತದೆ. ಪರೀಕ್ಷೆಗಳನ್ನು ಕೋವಿಡ್-19ರ ಎಲ್ಲಾ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಿ ನಡೆಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

    ಸರ್ಕಾರ ಈ ನಿಟ್ಟಿನಲ್ಲಿ ಮಕ್ಕಳನ್ನು ಸಂರಕ್ಷಿಸಲು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸುರಕ್ಷತಾ ಕ್ರಮ ಜಾರಿಗೊಳಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಚಿವರು ನಿರ್ಧಾರ ತೆಗೆದುಕೊಂಡು ನಿಯಮಗಳ ಪ್ರಕಾರ ಪರೀಕ್ಷೆ ನಡೆಸಬೇಕು. ಮಕ್ಕಳ ಹಿತದೃಷ್ಟಿಯಿಂದ ಚಿಂತನೆ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಹೊಣೆ ಹಾಗೂ ಜವಾಬ್ದಾರಿಯಾಗಿರುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ನಕಾರಾತ್ಮಕ ಆಲೋಚನೆಗಳಿಗೆ ಮಣಿಯದೇ, ನಿಯಮಾನುಸಾರ ನಿಗದಿಯಂತೆ ಪರೀಕ್ಷೆ ನಡೆಸಬೇಕೆಂದು ಬಸವರಾಜ ಹೊರಟ್ಟಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.

  • SSLC ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕ ಸಾವು

    SSLC ಮೌಲ್ಯಮಾಪನಕ್ಕೆ ಹಾಜರಾಗಿದ್ದ ಶಿಕ್ಷಕ ಸಾವು

    ಶಿವಮೊಗ್ಗ : ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ.

    ಮೃತಪಟ್ಟ ಶಿಕ್ಷಕ ಭದ್ರಾವತಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಕುಮಾರ್ (48) ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕ ಕುಮಾರ್ ಶಿವಮೊಗ್ಗದ ಎನ್.ಇ.ಎಸ್ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಮಾಜ ವಿಜ್ಞಾನ ವಿಷಯದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು. ಇಂದು ಮಧ್ಯಾಹ್ನದವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದ ಮೃತ ಶಿಕ್ಷಕ ಕುಮಾರ್ ಮಧ್ಯಾಹ್ನ ಊಟಕ್ಕೆ ತೆರಳಲು ಹೊರಡುತ್ತಿದ್ದರು. ಈ ವೇಳೆ ಶಾಲಾ ಆವರದಲ್ಲಿಯೇ ಕುಸಿದು ಬಿದ್ದ ಶಿಕ್ಷಕನನ್ನು ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಶಿಕ್ಷಕ ಕುಮಾರ್ ಮೃತಪಟ್ಟಿದ್ದಾರೆ.

    ಮೃತ ಶಿಕ್ಷಕ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತ ಶಿಕ್ಷಕನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ಡಿಡಿಪಿಐ ರಮೇಶ್ ಭೇಟಿ ನೀಡಿ ಮೃತ ಶಿಕ್ಷಕನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

  • SSLC ಪರೀಕ್ಷೆಗೆ ಆತಂಕ ಬೇಡ – ಸುರೇಶ್ ಕುಮಾರ್ ಅಭಯ

    SSLC ಪರೀಕ್ಷೆಗೆ ಆತಂಕ ಬೇಡ – ಸುರೇಶ್ ಕುಮಾರ್ ಅಭಯ

    ಬೆಂಗಳೂರು: ಭಾರೀ ಗೊಂದಲಕ್ಕೆ ಕಾರಣವಾಗಿರೋ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಕೊನೆಗೂ ಸಚಿವ ಸುರೇಶ್ ಕುಮಾರ್ ಮೌನ ಮುರಿದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಮರು ಪರೀಕ್ಷೆಯೂ ಮಾಡುವುದಿಲ್ಲ. ಯಾವುದೇ ವಿದ್ಯಾರ್ಥಿಗಳು ಆತಂಕ ಆಗೋದು ಬೇಡ. ಪಬ್ಲಿಕ್ ಪರೀಕ್ಷೆಯೂ ನಿರಾತಂಕವಾಗಿ ನಡೆಯುತ್ತೆ ಎಂದು ಭರವಸೆ ನೀಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕಿನಲ್ಲಿ ಸ್ಪಷ್ಟನೆ ನೀಡಿರುವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಭಯ ನೀಡಿದ್ದಾರೆ. ಪೂರ್ವ ಸಿದ್ಧತಾ ಪರೀಕ್ಷೆ ಮಕ್ಕಳಿಗೆ ಮುಖ್ಯ. ಪರೀಕ್ಷೆ ಪ್ರಶ್ನೆ ಪತ್ರಿಕೆ ವಿಧಾನ ತಿಳಿಸಿಕೊಡಲು ನಡೆಸುವ ಪರೀಕ್ಷೆ ಅಷ್ಟೇ. ರಾಜ್ಯದಲ್ಲಿ 15 ಸಾವಿರ ಪ್ರೌಢಶಾಲಾ ಇವೆ. ಇದರಲ್ಲಿ 2 ಸಾವಿರ ಪ್ರೌಢ ಶಾಲೆಗಳಲ್ಲಿ ಪ್ರಾಂಶುಪಾಲರ ಸಂಘವೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಸುತ್ತೆ. ಉಳಿದ ಶಾಲೆಗಳಿಗೆ ಎಸ್.ಎಸ್.ಎಲ್.ಸಿ ಬೋರ್ಡ್ ನಿಂದಲೇ ಪರೀಕ್ಷೆ ನಡೆಸಲಾಗುತ್ತೆ ಎಂದರು.

    ಪ್ರಶ್ನೆ ಪತ್ರಿಕೆಯನ್ನು 3 ದಿನಗಳ ಮುಂಚೆಯೇ ಆಯಾ ಶಾಲೆಗಳಿಗೆ ತಲುಪಿಸಿದ್ದೇವೆ. ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತೆ. ಅದೇ ಶಾಲೆಯಲ್ಲಿಯೇ ಮೌಲ್ಯಮಾಪನ ನಡೆಯುತ್ತೆ. ಹೀಗಿರುವಾಗಿ ಇದನ್ನು ಸೋರಿಕೆ ಅಂತ ಕರೆಯೋದು ಸರಿಯಲ್ಲ. ಈ ವಿಚಾರವಾಗಿ ಶಿಕ್ಷಕರು ತಮ್ಮ ನೈತಿಕತೆಗೆ ಅನುಗುಣವಾಗಿ ಕೆಲಸ ಮಾಡೋದು ಮುಖ್ಯ ಅಂತ ತಿಳಿಸಿದ್ದಾರೆ. ಪೇಪರ್ ಲೀಕ್ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮವಹಿಸುತ್ತೇನೆ ಅಂತ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಮರು ಪೂರ್ವ ಸಿದ್ಧತಾ ಪರೀಕ್ಷೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಮಾರ್ಚ್-ಏಪ್ರಿಲ್ ನಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವುದು ಬೇಡ. ಪಬ್ಲಿಕ್ ಪರೀಕ್ಷೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭದ್ರತೆ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಯುತ್ತದೆ. ಮಕ್ಕಳು ಮತ್ತು ಪೋಷಕರು ಆತಂಕ ಆಗೋದು ಬೇಡ. ಎಸ್.ಎಸ್.ಎಲ್.ಸಿ ಬೋರ್ಡ್ ಮತ್ತು ಶಿಕ್ಷಣ ಇಲಾಖೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುತ್ತದೆ ಎಂದು ತಿಳಿಸಿದ್ದಾರೆ.

  • ಮರು ಮೌಲ್ಯಮಾಪನ- ಬೆಳಗಾವಿಯ ಮೊಹಮ್ಮದ್ ಕೈಫ್ ಮುಲ್ಲಾ ಈಗ ರಾಜ್ಯಕ್ಕೆ ಪ್ರಥಮ

    ಮರು ಮೌಲ್ಯಮಾಪನ- ಬೆಳಗಾವಿಯ ಮೊಹಮ್ಮದ್ ಕೈಫ್ ಮುಲ್ಲಾ ಈಗ ರಾಜ್ಯಕ್ಕೆ ಪ್ರಥಮ

    ನವದೆಹಲಿ: ಕರ್ನಾಟಕದ ಮೊಹಮ್ಮದ್ ಕೈಫ್ ಮುಲ್ಲಾ 10 ನೇ ತರಗತಿ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.

    ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಸಮಧಾನಗೊಂಡಿದ್ದ ವಿದ್ಯಾರ್ಥಿ ಮುಲ್ಲಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

    2017-18ರ ಶೈಕ್ಷಣಿಕ ವರ್ಷದ 10 ನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಬೆಳಗಾವಿಯ ಸೇಂಟ್ ಸ್ಸೇವಿಯಾರ್ ಹೈಸ್ಕೂಲಿನ ವಿದ್ಯಾರ್ಥಿ ಮೊಹಮ್ಮದ್ ಕೈಫ್ ಮುಲ್ಲಾ 625 ಅಂಕಗಳಿಗೆ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದನು. ವಿಜ್ಞಾನ ವಿಷಯದಲ್ಲಿ ಮೊಹಮ್ಮದ್ ಕೈಫ್ ಮುಲ್ಲಾ 100ಕ್ಕೆ 99 ಅಂಕಗಳನ್ನು ಪಡೆದಿದ್ದರು . ಇದರಿಂದ ಅಸಮಾಧಾನಗೊಂಡಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದನು.

    ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ಮೊಹಮ್ಮದ್ ಕೈಫ್ ಮುಲ್ಲಾ ವಿಜ್ಞಾನ ವಿಷಯದಲ್ಲೂ 100 ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾನು. ಈ ಮೂಲಕ ಎಶೆಸ್ ಎಮ್ ಎಸ್ ಹಾಗೂ ಸುದರ್ಶನ್ ಕೆ ಎಸ್ ಸಾಲಿನಲ್ಲಿ ಮೊಹಮ್ಮದ್ ಕೈಫ್ ಮುಲ್ಲಾ 10 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಿಂಚಿದ್ದಾನೆ. ಇದನ್ನು ಓದಿ:  SSLC ಫಲಿತಾಂಶ ಬಂದಾಗ 6 ನೇ ರ‍್ಯಾಂಕ್, ಮರು ಮೌಲ್ಯಮಾಪನದ ನಂತ್ರ ಜಿಲ್ಲೆಗೆ ಪ್ರಥಮ!

    ಮೊಹಮ್ಮದ್ ಕೈಫ್ ಮುಲ್ಲಾ ಸರಕಾರಿ ಸೇವೆಗೆ ಸೇರಲು ಇಚ್ಛಿಸುತ್ತಿದ್ದು, ಬಾಲ ಕಾರ್ಮಿಕರ ಶಿಕ್ಷಣಕ್ಕಾಗಿ ಶ್ರಮಿಸುವ ಉದ್ದೇಶ ಹೊಂದಿದ್ದಾನೆ. ಮೊಹಮ್ಮದ್‍ರ ಈ ಸಾಧನೆ ಪಾಲಕರು, ಶಿಕ್ಷಕರು ಹಾಗೂ ಬಂಧುಗಳಿಗೆ ಹೆಮ್ಮೆ ತಂದಿದೆ. ಈ ಬಗ್ಗೆ ಮೊಹಮ್ಮದ್ ತಾಯಿ ಪ್ರತಿಕ್ರಿಯಿಸಿದ್ದು, ಮಗನ ಸಾಧನೆಗೆ ಮೆಚ್ಚಿದ್ದಾರೆ. ಅಲ್ಲದೇ ನಮ್ಮ ಸಾಮಾಜಿಕ ಸ್ಥಾನಮಾನವೇ ಬದಲಾಯಿತು. ದೊಡ್ಡ ಎನ್ ಜಿ ಓ ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ನಮ್ಮ ಮಗನನ್ನು ಸನ್ಮಾನಿಸಲು ಆಹ್ವಾನಿಸುತ್ತಿದ್ದಾರೆ ಎಂದು ಹೇಳಿದರು.

    ತಮ್ಮ ಈ ಸಾಧನೆಯನ್ನು ಕುರಿತು ಮಾತನಾಡಿದ ಮೊಹಮ್ಮದ್ ಕೈಫ್ ಮುಲ್ಲಾ, ನನಗೆ 100% ಫಲಿತಾಂಶ ಬರುವ ನಂಬಿಕೆ ಇತ್ತು. ನಾನು ಪರೀಕ್ಷೆ ಮುಕ್ತಾಯಗೊಂಡ ನಂತರ ನನ್ನ ಶಿಕ್ಷಕರೊಂದಿಗೆ ಈ ಕುರಿತು ಚರ್ಚೆ ಮಾಡಿದ್ದೆ. ದಿನಕ್ಕೆ 12 ಗಂಟೆ ಸತತ ಓದಿಗೆ ಪ್ರತಿಫಲ ಸಿಕ್ಕಂತಾಗಿದೆ ಅಂತ ಹೇಳಿದ್ದಾನೆ.

    ಒಟ್ಟಾರೆ ಈ ಬಾರಿ 10 ತರಗತಿ ಪರೀಕ್ಷೆಗೆ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ರು. ಅವರಲ್ಲಿ 602802 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದರು. ಈಗ ಮೊಹಮ್ಮದ್ ಕೈಫ್ ಮುಲ್ಲಾ ಕೂಡ ಟಾಪರ್ ಸಾಲಿಗೆ ಸೇರಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.

  • ಅಮ್ಮನ ಅಡುಗೆ, ಅಪ್ಪ- ಅಣ್ಣನ ಟಿಪ್ಸ್: ಉಡುಪಿಯ ಮನೋಜ್ ರಾಜ್ಯಕ್ಕೆ ಮೂರನೇ ಸ್ಥಾನ

    ಅಮ್ಮನ ಅಡುಗೆ, ಅಪ್ಪ- ಅಣ್ಣನ ಟಿಪ್ಸ್: ಉಡುಪಿಯ ಮನೋಜ್ ರಾಜ್ಯಕ್ಕೆ ಮೂರನೇ ಸ್ಥಾನ

    ಉಡುಪಿ: ಇಂದ್ರಾಳಿ ಇಂಗ್ಲೀಷ್ ಮೀಡಿಯಂ ನ ಮನೋಜ್ ಎಂ ಮಲ್ಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಬಂದಿದ್ದಾನೆ. ಈತನ ಸಾಧನೆಗೆ ಅಪ್ಪ ಅಣ್ಣನ ಟಿಪ್ಸ್. ಅಮ್ಮನ ರುಚಿಕರ ಕೈ ಅಡುಗೆಯೇ ಕಾರಂವಂತೆ.

    ಉಡುಪಿಯ ಮನೋಜ್ ಮಲ್ಯನ ತಾಯಿ ಜಯಶ್ರೀ ಎಲ್‍ಐಸಿ ಉದ್ಯೋಗಿ. ಪರೀಕ್ಷೆ ಸಂದರ್ಭ ತಾಯಿ 10 ದಿನ ರಜೆ ಹಾಕಿದ್ದಾರೆ. ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೆ ಮಗನಿಗೆ ಸೂಕ್ತ ಸಮಯಕ್ಕೆ ಬೇಕಾದ ಎಲ್ಲಾ ತಿಂಡಿ, ಊಟ, ಜೂಸ್, ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಡುವಂತಹ ಸಾತ್ವಿಕ ಆಹಾರ ತಯಾರಿ ಮಾಡಿಕೊಟ್ಟಿದ್ದಾರೆ.

    ಊಟ ತಿಂಡಿಯನ್ನು ಸರಿಯಾದ ಸಮಯದಲ್ಲಿ ಮಾಡಿಕೊಡೋದ್ರಿಂದ ಆ ಬಗ್ಗೆ ಮಕ್ಕಳಿಗೆ ಚಿಂತೆ ಇರೋದಿಲ್ಲ. ಮನಸ್ಸು ಬೇರೆಡೆ ಸೆಳೆಯುವುದಿಲ್ಲ. ಆರೋಗ್ಯ ಚೆನ್ನಾಗಿದ್ದರೆ, ಅದೂ ಈ ಬಿಸಿಲಿನಲ್ಲಿ ಅದನ್ನು ಸರಿಯಾಗಿ ಮೈನ್ಟೇನ್ ಮಾಡಿದ್ರೆ ಓದಿನ ಕಡೆ ಪರೀಕ್ಷೆಯ ಕಡೆ ಗಮನ ಕೊಡಬಹುದು ಅಂತ ಜಯಶ್ರೀ ಹೇಳಿದ್ದಾರೆ.

    ಮನೋಜ್ ತಂದೆ ಮಣಿಪಾಲ ವಿವಿಯಲ್ಲಿ ಪ್ರೊಫೆಸರ್. ಆಟದ ಜೊತೆ ಪಾಠ ಓದಿದ್ದೆ ಈ ಸಾಧನೆಗೆ ಕಾರಣ ಅಂತಾನೆ ಮನೋಜ್ ಮಲ್ಯ. ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಬೇಕೆಂಬ ಹಂಬಲ ಇಟ್ಟುಕೊಂಡಿದ್ದಾನೆ. ಸದ್ಯ ಮೈಸ್ ನಲ್ಲಿ ಕೋಚಿಂಗ್ ಪಡೆಯುತ್ತಿರುವ ಈತ, ಪಿಸಿಎಂಎಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮನೋಜ್ ಮಲ್ಯ, ದಿನಕ್ಕೆ ನಾಲ್ಕು ಗಂಟೆ ಓದುತ್ತಿದ್ದೆ. ರಾತ್ರಿ 11 ಗಂಟೆ ಮೇಲೆ ಓದುತ್ತಿರಲಿಲ್ಲ. ಹೆಚ್ಚು ಒತ್ತಡ ಹಾಕಿಕೊಂಡು ಓದಿದ್ರೆ ಸ್ಕೋರ್ ಮಾಡೋದಿಕ್ಕೆ ಆಗಲ್ಲ. ಶಾಲೆಯಲ್ಲಿ ಒಳ್ಳೆಯ ಸಪೋರ್ಟ್ ಮಾಡ್ತಿದ್ದರು. ತಾಯಿ ನನ್ನ ಜೊತೆ ಕೂತು ಓದುತ್ತಿದ್ದರು. ತಂದೆ ಪ್ರೊಫೆಸರ್ ಆಗಿರೋದ್ರಿಂದ ಕೆಲವು ಟಿಪ್ಸ್ ಎಲ್ಲಾ ಸಿಗ್ತಾಯಿತ್ತು. ನನ್ನ ಅಣ್ಣ ಕೂಡಾ ನನಗೆ ಮೆಂಟರ್. ಅವನು ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದ್ದ. ಇದೂ ನನಗೆ ಹೆಲ್ಪ್ ಆಯ್ತು. ಬ್ಯಾಡ್ಮಿಂಟನ್ ನಲ್ಲಿ ಮೂರು ವರ್ಷ ತೊಡಗಿಸಿಕೊಂಡಿದ್ದೆ. 10 ನೇ ಕ್ಲಾಸಲ್ಲಿ ಆಟ ಬಿಟ್ಟು ಪಾಠದ ಕಡೆ ಮಾತ್ರ ಗಮನ ಕೊಟ್ಟಿರುವುದರಿಂದ ಈ ಅಂಕ ಬರಲು ಸಾಧ್ಯವಾಯ್ತು ಅಂತ ಹೇಳಿದ್ದಾನೆ.

  • ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ

    ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ

    ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ.

    ನಾಳೆ ಬೆಳಗ್ಗೆ 11 ಗಂಟೆಗೆ ಎಸ್.ಎಸ್.ಎಲ್.ಸಿ ಬೋರ್ಡ್ ನಿಂದ ಸುದ್ದಿಗೋಷ್ಟಿ ನಡೆಯಲಿದೆ. ಸುಮಾರು ಮಧ್ಯಾಹ್ನ 1 ಗಂಟೆ ನಂತರ ಇಲಾಖೆ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ ಮಾಡುತ್ತದೆ. ಈ ಬಾರಿ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಪರೀಕ್ಷಾ ಭವಿಷ್ಯ ನಿರ್ಧಾರವಾಗುತ್ತದೆ.

    ಮೇ 8 ರಂದು ಅಂದರೆ ಮಂಗಳವಾರ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗುತ್ತದೆ.

    ಫಲಿತಾಂಶ ಲಭ್ಯವಾಗುವ ವೆಬ್ ಸೈಟ್

    1.  http://karresults.nic.in/

    2http://karresults.nic.in/