Tag: ಎಸ್.ಎಲ್.ಧರ್ಮೇಗೌಡ

  • ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ರು ಹಳಿಯಲ್ಲಿ ನಿಂತಿದ್ರು – ಧರ್ಮೇಗೌಡ್ರ ಸಾವಿನ ಬಗ್ಗೆ ರೈಲು ಚಾಲಕ ಹೇಳಿದ್ದೇನು?

    ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ರು ಹಳಿಯಲ್ಲಿ ನಿಂತಿದ್ರು – ಧರ್ಮೇಗೌಡ್ರ ಸಾವಿನ ಬಗ್ಗೆ ರೈಲು ಚಾಲಕ ಹೇಳಿದ್ದೇನು?

    ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ರೈಲು ಚಾಲಕ ಅವರ ಸಾವಿನ ರಹಸ್ಯವನ್ನು ತಿಳಿಸಿದ್ದಾರೆ.

    ರೈಲು ಚಾಲಕ ಸಿದ್ದರಾಮ್ ಅವರು ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಧರ್ಮೇಗೌಡರಿಗೆ ಡಿಕ್ಕಿ ಹೊಡೆದಿದ್ದು ಜನ ಶತಾಬ್ದಿ ರೈಲು ಅನ್ನೋದು ಕನ್ಫರ್ಮ್ ಆಗಿದೆ.

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರದ ಬಳಿ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನಿಂತಿದ್ದರು. ಹಳಿ ಮೇಲೆ ರೈಲಿಗೆ ನೇರಾ-ನೇರ ನಿಂತಿರುವುದು ಕಾಣಿಸಿತ್ತು. ರೈಲು ವೇಗವಾಗಿದ್ದ ಕಾರಣ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

    ನಡೆದಿದ್ದೇನು..?
    ಎಸ್.ಎಲ್ ಧರ್ಮೇಗೌಡ ಅವರು ಸೋಮವಾರ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಅವರು, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು, ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

    ನಂತರ ಜನಶತಾಬ್ದಿ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿತ್ತು. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ ವಿಚಾರ, ಹಣಕಾಸು ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದರು. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದರು.

  • ನಿನ್ನೆಯಷ್ಟೇ ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು ಧರ್ಮೇಗೌಡ!

    ನಿನ್ನೆಯಷ್ಟೇ ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು ಧರ್ಮೇಗೌಡ!

    ಚಿಕ್ಕಮಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದು, ನಿನ್ನೆಯಷ್ಟೇ ಅವರು ಹೊಸ ಮನೆ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಿದ್ದರು.

    ಧರ್ಮೇಗೌಡರ ಮನೆಯಲ್ಲಿ ನಿನ್ನೆ ಸಂತೋಷ, ಇಂದು ನೀರವ ಮೌನ ಆವರಿಸಿದೆ. ತಮ್ಮ ಫಾರಂಹೌಸ್ ನಲ್ಲಿ ಮತ್ತೊಂದು ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದ ಧರ್ಮೇಗೌಡರು, ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕೂಡ ನೆರವೇರಿಸಿದ್ದರು. ಬೆಳಗ್ಗೆಯಿಂದಲೂ ಲವಲವಿಕೆಯಿಂದಲೇ ಇದ್ದ ಅವರು ಪೂಜೆ ಮುಗಿಸಿ, ಚಿಕ್ಕಮಗಳೂರು ಕಾರ್ಯಕ್ರಮ ಮುಗಿಸಿ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜೆ ನೆರವೇರಿಸಿದ್ದ ಗುದ್ದಲಿ, ಪಿಕಾಸಿ ಇನ್ನೂ ಅಲ್ಲೇ ಬಿದ್ದಿವೆ.

    ಧರ್ಮೇಗೌಡರ ತೋಟದ ರೈಟರ್ ಮಾತನಾಡಿ, ಕಳೆದ ಮೂರು ದಿನಗಳಿಂದ ಧರ್ಮೇಗೌಡ ಅವರು ತೊಟದ ಮನೆಯಲ್ಲಿಯೇ ಇದ್ದರು. ಮಧ್ಯಾಹ್ನದವರೆಗೂ ತೋಟದಲ್ಲೇ ಇದ್ದರು. ಬೆಳಗ್ಗೆ ವಾಕ್ ಮಾಡಿದ್ರು, ತೋಟದ ಕೆಲಸ ಹೇಳಿದ್ರು. ಮಧ್ಯಾಹ್ನದ ಬಳಿಕ ಎಲ್ಲಿಗೆ ಹೋದರು ಅನ್ನೋ ಬಗ್ಗೆ ಮಾಹಿತಿ ಇಲ್ಲ. ಕಾಫಿತೋಟ, ತೆಂಗು, ಅಡಿಕೆ ತೋಟ ಅಂದ್ರೆ ಅವರಿಗೆ ಬಹಳ ಪ್ರೀತಿ. ಪ್ರತಿಯೊಂದನ್ನೂ ಚೆನ್ನಾಗಿ ಗಮನಿಸುತ್ತಿದ್ದರು. ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರನ್ನು ಕಳೆದುಕೊಂಡು ತುಂಬಾ ನೋವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

    ನಡೆದಿದ್ದೇನು..?
    ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಅವರು, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು, ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

    ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ ವಿಚಾರ, ಹಣಕಾಸು ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದಾರೆ.

  • ಧರ್ಮಣ್ಣನ ಸಾವು ಆತ್ಮಹತ್ಯೆ ಅಲ್ಲ, ರಾಜಕೀಯ ಕೊಲೆ: ಹೆಚ್‍ಡಿಕೆ ಆರೋಪ

    ಧರ್ಮಣ್ಣನ ಸಾವು ಆತ್ಮಹತ್ಯೆ ಅಲ್ಲ, ರಾಜಕೀಯ ಕೊಲೆ: ಹೆಚ್‍ಡಿಕೆ ಆರೋಪ

    – ಕಾಫಿ ಡೇ ಸಿದ್ಧಾರ್ಥ್ ನೆನಪಿಸಿಕೊಂಡ ಮಾಜಿ ಸಿಎಂ

    ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ಸಾವು ಆತ್ಮಹತ್ಯೆಯಲ್ಲ, ರಾಜಕೀಯ ಕೊಲೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1995 ರಿಂದ ಧರ್ಮೇಗೌಡರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯವರಾಗಿರಲಿಲ್ಲ, ಆದರೆ ಇಂದು ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಜೀವನದ ಮರೆಯಲಾಗದ ದುರಂತ ದಿನವಾಗಿದೆ. ಇದು ಆತ್ಮಹತ್ಯೆಯಲ್ಲ ರಾಜಕೀಯ ಕೊಲೆ ಎಂದು ಆರೋಪಿಸಿದರು.

    ಹಲವಾರು ಸ್ನೇಹಿತರನ್ನು ಕಳೆದ 15 ವರ್ಷದ ರಾಜಕೀಯ ಜೀವನದಲ್ಲಿ ಕಳೆದುಕೊಂಡಿದ್ದೇನೆ. ಆದರೆ ನನ್ನ ಸಹೋದರನ ಸಮಾನರಾದ ಧರ್ಮಣ್ಣನ ಸಾವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಮಾತ್ರವಲ್ಲದೆ ಎಲ್ಲಾ ರಾಜಕಾರಣಿಗಳು ಈ ಘಟನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮೇಗೌಡರ ತಂದೆ ಲಕ್ಷ್ಮಯ್ಯರ ಹೇಳಿಕೊಂಡಿದ್ದರು, ನಾನಂತೂ ಮಂತ್ರಿ ಆಗಲಿಲ್ಲ ನಾನು ಸಾಯುವ ಮುನ್ನ ನನ್ನ ಮಗ ಮಂತ್ರಿ ಆಗಬೇಕು ಎನ್ನುವ ಬಯಕೆ ವ್ಯಕ್ತಪಡಿಸಿದ್ದರು. ಅವರು ಆಸೆ ಪಟ್ಟಂತೆ ರಾಜಕೀಯಕ್ಕೆ ಬಂದ ಅಣ- ತಮ್ಮ ಧರ್ಮೇಗೌಡ ಮತ್ತು ಭೋಜೆ ಗೌಡರು ಕಾಂಗ್ರೆಸ್ಸಿಗೆ ಸೇರಲು ಸಿದ್ಧರಾಗಿದ್ದರು. ನಂತರ ನನ್ನ ಬಳಿ ಬಂದು ಮಾತಾನಾಡಿದರು. ನಾನು ನಮ್ಮ ಪಕ್ಷದಲ್ಲಿ ಎಂಎಲ್‍ಎ ಸ್ಥಾನ ಕೊಡಿಸುವುದಾಗಿ ತಿಳಿಸಿದ ನಂತರ ನಮ್ಮ ಪಕ್ಷ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಅದರಂತೆ ನಾನು ಅವರನ್ನು ವಿಧಾನಪರಿಷತ್ ಉಪಸಭಾಪತಿ ಮಾಡಿದ್ದೆ. ಆದರೆ ಅದೇ ಅವರ ಜೀವ ಹೋಗೋದಕ್ಕೆ ಕಾರಣವಾಯಿತು ಅಂತ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪ್ರತಿಭಾವಂತ ಕೃಷಿಕನಾಗಿ, ಪರಿಸರ ಪ್ರೇಮಿಯಾಗಿದ್ದ ಧರ್ಮೇಗೌಡರು ಗಿಡಕ್ಕೆ ಏಟಾದರು ನೊಂದುಕೊಳ್ಳುವಂತ ಮನಸ್ಥಿತಿಯವರು. ಆದರೆ ಇಂದು ರಾಜಕೀಯದ ಒತ್ತಾಸೆಯಿಂದ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ಮಾಧ್ಯಮದರೊಂದಿಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ, ಸದನದ ಘಟನೆಯ ಪರಿಣಾಮದಿಂದ ಈ ಘಟನೆ ನಡೆದಿದೆ ಎಂದು ಮತ್ತೊಮ್ಮೆ ಆರೋಪಿಸಿದರು.

    ಭೋಜೆ ಗೌಡರು ಕಳೆದ 8-10 ದಿನದ ಹಿಂದೆ ಸಂಪರ್ಕಿಸಿದ್ದರು. ನಮ್ಮಣ್ಣ ಬಹಳ ಧೃತಿಗೆಟ್ಟಿದ್ದಾನೆ, ಜೀವಕ್ಕೆ ಅಪಾಯ ಮಾಡಿಕೊಳ್ಳುತ್ತಾನೆ ಎಂದು ಅನಿಸುತ್ತಿದೆ ಎಂದಿದ್ದರು. ನಾನು ಅರ್ಧಗಂಟೆ ಮಾತಾಡಿ ನಿನ್ನ ತಪ್ಪಿಲ್ಲ ಎಂದಿದ್ದೆ. ದೇವೇಗೌಡರು ಮಾತಾಡಿದ್ದರು, ಕೌನ್ಸಿಲ್ ಸೆಕ್ರೆಟರಿ ಹೆಣ್ಣುಮಗಳು ಮಹಾಲಕ್ಷ್ಮಿ ಸಭಾಪತಿ ನೋಟಿಸ್ ಗೆ ಉತ್ತರ ಕೊಡಲಾಗದೆ, ಒಂದೂವರೆ ಪುಟದ ವರದಿ ಕೊಟ್ಟಿದ್ದಾರೆ. ಅದರಲ್ಲಿ ಧರ್ಮೇಗೌಡರ ವಿರುದ್ಧ ಚಾರ್ಜ್ ಮಾಡಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಈ ಘಟನೆ ಆಗಿರಬಹುದು ಎಂದು ಅನಿಸುತ್ತಿದೆ. ವ್ಯಕ್ತಿಯ ಕೊಲೆಗೆ ರಾಜಕೀಯ ವ್ಯವಸ್ಥೆ ಕಾರಣವಾಗಿದೆ ಎಂದು ಅನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

    ಧರ್ಮೇಗೌಡ ಎಂಬ ಹೆಸರಿನ ಇವರು ನಿಜವಾದ ಧರ್ಮರಾಯರಾಗಿದ್ದರು. ನಿಜವಾದ ಧರ್ಮರಾಯನನ್ನು ಕಳೆದುಕೊಂಡಿದ್ದೇನೆ. ನಾನು ಮಾನ ಮರ್ಯಾದೆ ಇಲ್ಲದೆ ಜೀವನ ಮಾಡುವ ರಾಜಕಾರಣಿಗಳು ನೋಡಿದ್ದೇನೆ. ಅದೇ ರೀತಿ ಇಂತಹ ಸೂಕ್ಷ್ಮ ಜೀವಿಗಳನ್ನು ರಾಜಕೀಯದಲ್ಲಿ ನೋಡಿದ್ದೇನೆ. ಇಂತ ಕೆಟ್ಟ ಕ್ಷಣ ನನ್ನ ಜೀವನದಲ್ಲಿ ಬರುತ್ತೆ ಅಂತ ನಾನು ಯಾವತ್ತೂ ಊಹಿಸಿರಲಿಲ್ಲ. ನಾವೆಲ್ಲಾ ಸೇರಿ ಅವರನ್ನ ಕೊಲೆ ಮಾಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

    ಹಿಂದೆ ಎಸ್.ಎಂ ಕೃಷ್ಣ ಕುಟುಂಬದಲ್ಲಿ ಆತ್ಮಹತ್ಯೆ ನಡೆದಿತ್ತು. ಎರಡು ದಿನದ ಹಿಂದೆ ಸಿದ್ಧಾರ್ಥ್ ಸಾವಿನ ಬಗ್ಗೆ ಆಪ್ತರ ಬಳಿ ಮಾತನಾಡಿದ್ದಾರೆ. ಇವರಿಗೆ ಈಜು ಬರ್ತಿತ್ತು ಅದೆಲ್ಲವನ್ನು ಯೋಚನೆ ಮಾಡಿಯೇ ಹೀಗೆ ತೀರ್ಮಾನ ಮಾಡಿದ್ದಾರೆ. ಅಂತಿಮವಾಗಿ ವಿಧಿ ಈ ರೀತಿ ಇತಿ ಶ್ರೀ ಹಾಡಿದ್ದು ದುರಂತ. ಬ್ಲ್ಯಾಕ್ ಡೇ ಇದು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯಬಾರದು. ಯಾರ ಜೀವನದಲ್ಲೂ ಹೀಗಾಗಬಾರದು. ಈ ವ್ಯವಸ್ಥೆ ಮರುಕಳಿಸದಂತೆ ಘಟನೆಯ ಬಗ್ಗೆ ಸ್ಪಷ್ಟವಾದ ಸತ್ಯ ಹೊರಬರಬೇಕು. ಕಾನೂನಿನ ವಿರುದ್ಧವಾಗಿ ಯಾವತ್ತು ನಿರ್ಧಾರ ಕೈಗೊಂಡಿಲ್ಲ. ಅವರು ಮಗು ಇದ್ದಂತೆ ಮಗುವಿನಂತ ಮನಸ್ಸು ಅವರದ್ದು, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಘಟನೆಯಲ್ಲಿ ಯಾರ್ಯಾರ ಪಾತ್ರ ಇದೆ ಅವರೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

    ಎರೆಡು ಸದನದಲ್ಲಿಯೂ ಇದರ ಸತ್ಯ ಹೊರಬರಬೇಕು. ರಾಜ್ಯದ ರಾಜಕಾರಣದಲ್ಲೇ ಇದು ಕಪ್ಪು ಚುಕ್ಕೆ. ಅವರು ಎಂದಿಗೂ ಹೇಡಿ ಅಲ್ಲ. ಕೆಲವೇ ಕೆಲವು ಮಂದಿಗೆ ಅಂತ ಪಾಪ ಪ್ರಜ್ಞೆ ಕಾಡೋದು. ಅವರು ಮಾಡದ ತಪ್ಪಿಗೆ ಅವರು ಬಲಿಯಾಗಿದ್ದಾರೆ. ಜಾತಿ ವ್ಯವಸ್ಥೆಯ ಬಗ್ಗೆಯೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆ ಸಮಾಜಕ್ಕೆ ನಾನು ಕೇಳುತ್ತೇನೆ. ನನ್ನ ಸ್ವಂತ ಅಣ್ಣ-ತಮ್ಮಂದಿರಿಗಿಂತ ಹೆಚ್ಚಾಗಿದ್ದರು. ಬಾಂಧವ್ಯದ ಬೆಲೆಯನ್ನ ಈ ಕುಟುಂಬ ತೋರಿಸಿದೆ. ಅಣ್ಣ ತಮ್ಮಂದಿರ ಹತ್ತಿರ ನಾನು ಆತ್ಮೀಯನಾಗಿದ್ದೆ ಅಂತ ಕೆಲವರು ನನ್ನ ಮೇಲೆ ಕೋಪಿಸಿಕೊಂಡರು ಎಂದು ಹೆಚ್‍ಡಿಕೆ ತಿಳಿಸಿದರು.

  • ಕುಮಾರಸ್ವಾಮಿ ನೋವಿನಲ್ಲಿದ್ದು, ಏನೋ ಮಾತಾಡಿದ್ದಾರೆ: ಡಿಕೆಶಿ

    ಕುಮಾರಸ್ವಾಮಿ ನೋವಿನಲ್ಲಿದ್ದು, ಏನೋ ಮಾತಾಡಿದ್ದಾರೆ: ಡಿಕೆಶಿ

    ಬೆಂಗಳೂರು: ಉಪಸಭಾಪತಿ ಎಸ್. ಎಸ್ ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ನೋವಿನಲ್ಲಿದ್ದಾರೆ. ಹಾಗಾಗಿ ಏನೋ ಮಾತಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪರಿಷತ್ತು ಗಲಾಟೆಯಿಂದ ಧರ್ಮೇಗೌಡರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ ಅನ್ನೋ ಕುಮಾರ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ನೋವಿನಲ್ಲಿದ್ದಾರೆ. ಹಾಗಾಗಿ ಏನೋ ಮಾತಾಡಿದ್ದಾರೆ. ಅವರ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ ಎಂದರು.

    ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಡೆತ್ ನೋಟ್ ಸಾರಾಂಶ ಇನ್ನೂ ನಂಗೆ ಗೊತ್ತಾಗಿಲ್ಲ. ಯಾವ ಕಾರಣಕ್ಕಾಗಿ ಧೈರ್ಯ ಕಳ್ಕೊಂಡ್ರು ಅಂತ ಗೊತ್ತಿಲ್ಲ. ಅವರ ವೈಯಕ್ತಿಕ ವಿಚಾರನೋ ಅಥವಾ ರಾಜಕೀಯನೋ ಗೊತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

    ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಸಾಗರ ಬಳಿಯ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

    ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ, ಹಣಕಾಸು ವಿಚಾರ ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಅರ್ಧಕ್ಕೆ ನಿಲ್ಲಿಸಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದಾರೆ.

  • ಎಸ್.ಎಲ್ ಧರ್ಮೇಗೌಡರನ್ನು ನೆನೆದು ಮಾಜಿ ಪ್ರಧಾನಿ ದೇವೇಗೌಡ ಕಣ್ಣೀರು

    ಎಸ್.ಎಲ್ ಧರ್ಮೇಗೌಡರನ್ನು ನೆನೆದು ಮಾಜಿ ಪ್ರಧಾನಿ ದೇವೇಗೌಡ ಕಣ್ಣೀರು

    ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ನಿಧನ ವೈಯಕ್ತಿಕವಾಗಿ ನನಗೆ ಜೀವನದಲ್ಲಿ ಅಂತ್ಯಂತ ಘೋರವಾದ ಘಟನೆ. ನನ್ನ ರಾಜಕೀಯ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವು ಇದು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಣ್ಣೀರಿಟ್ಟಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರ ತಂದೆ ಲಕ್ಷ್ಮಯ್ಯ ಕಾಲದಿಂದಲೂ ನನಗೂ ಮತ್ತು ಅವರ ಕುಟುಂಬಕ್ಕೂ ಬಾಂಧವ್ಯ ಇತ್ತು. ಧರ್ಮೇಗೌಡರು ತಂದೆಯ ಹೆಸರು ಉಳಿಸುವ ಕೆಲಸ ಮಾಡಿದ್ದರು. ಪಂಚಾಯ್ತಿಯಿಂದ ಹಿಡಿದು ಬ್ಯಾಂಕ್ ಕ್ಷೇತ್ರ, ರಾಜಕೀಯದಲ್ಲಿ ಶಾಸಕರಾಗಿ, ಉಪ ಸಭಾಪತಿಯಾಗಿ, ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಕೊನೆಯ ಕಾಲದಲ್ಲಿ ಆದ ಘಟನೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಧರ್ಮೇಗೌಡರನ್ನು ನೆನೆದು ಭಾವುಕರಾದರು.

    ನನ್ನ ರಾಜಕೀಯ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವು ಇದಾಗಿದೆ. ಅತ್ಯಂತ ಸೂಕ್ಷ್ಮ ವ್ಯಕ್ತಿತ್ವದವರನ್ನು ಕಳೆದುಕೊಂಡಿದ್ದೇವೆ. ತನ್ನ ನೋವು ಯಾರಿಗೂ ಹೇಳದೆ ಹೆಂಡತಿ, ಮಕ್ಕಳಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಆಶಯದಂತೆ ಅವರ ಕುಟುಂಬ ಮುಂದೆ ಕೆಲಸ ಮಾಡಲಿ. ಧರ್ಮೇಗೌಡರ ಹೆಸರು ಉಳಿಸುವ ಕೆಲಸ ಕುಟುಂಬ ಮಾಡುವಂತಾಗಲಿ. ನಾನು ಅಂತ್ಯ ಸಂಸ್ಕಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.

    ಪರಿಷತ್ ಘಟನೆ ಆದ ಬಳಿಕ ಬೆಳಗ್ಗೆ ಬಂದು ನನ್ನ ಬಳಿ ಮಾತನಾಡಿದ್ದರು. ನಾನು ಅವರಿಗೆ ಸಲಹೆ ಕೊಟ್ಟಿದ್ದೆ. ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನಕ್ಕೆ ನಿಮ್ಮನ್ನ ಕರೆದು ಕೂರಿಸಿದಾಗ ಬಂದು ಕೂರಬೇಕು ಅಂತ ಹೇಳಿದ್ದೆ. ನನ್ನ ಸಲಹೆ ಪಾಲಿಸಲು ನಾನು ಹೇಳಿದ್ದೆ ಎಂದರು.

  • ರಾಜಕೀಯ ಗುರುಗಳ ಸಾವಿನಿಂದ ತುಂಬಾ ನೋವಾಗಿದೆ: ಬೆಳ್ಳಿಪ್ರಕಾಶ್

    ರಾಜಕೀಯ ಗುರುಗಳ ಸಾವಿನಿಂದ ತುಂಬಾ ನೋವಾಗಿದೆ: ಬೆಳ್ಳಿಪ್ರಕಾಶ್

    ಚಿಕ್ಕಮಗಳೂರು: ನನ್ನ ರಾಜಕೀಯ ಗುರುಗಳ ಸಾವಿನಿಂದ ನನಗೆ ತುಂಬಾ ನೋವಾಗಿದೆ ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರು ನನ್ನ ರಾಜಕೀಯ ಗುರುಗಳು. ಅವರ ಸಾವಿನಿಂದ ನನಗೆ ತುಂಬಾ ನೋವಾಗಿದೆ. 13 ವರ್ಷಗಳಿಂದ ಅವರ ಜೊತೆ ಒಡನಾಟವಿತ್ತು ಎಂದು ತಿಳಿಸಿದರು.

    ರಾಜಕೀಯ ವಿಚಾರವಾಗಿ ಬೆಂಬಲಿಸುತ್ತಿದ್ದರು. ನನ್ನ ರಾಜಕೀಯಕ್ಕೆ ತರಲು ಪ್ರಯತ್ನ ಮಾಡಿದ್ರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ಇವರ ಸಾವಿನಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

    ಧರ್ಮೇಗೌಡರು ಮಧ್ಯರಾತ್ರಿ 12 ಗಂಟೆಯ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯಿಂದ ಧರ್ಮೇಗೌಡರ ದೇಹ ಛಿದ್ರಛಿದ್ರವಾಗಿದ್ದು, 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್ ನಲ್ಲಿ ನಡೆದ ಗಲಾಟೆಯಿಂದ ನೊಂದಿದ್ದಾರೆ ಎಂದು ಹೇಳಲಾಗಿದೆ. ಮನೆಯ ಆಸ್ತಿ, ಹಣಕಾಸು ವಿಚಾರವಾಗಿ ಡೆತ್ ನೋಟಿನಲ್ಲಿ ಬರೆದಿರುವ ಧರ್ಮೇಗೌಡರು ಪತ್ನಿ, ಮಗ ಹಾಗೂ ಮಗಳಲ್ಲಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ಅರ್ಧಕ್ಕೆ ನಿಲ್ಲಿಸಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ಡೆತ್‍ನೋಟ್ ನಲ್ಲಿ ಸೂಚಿಸಿದ್ದಾರೆ. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್ ಬಳಿ ಕಾರು ನಿಲ್ಲಿಸಲು ಹೇಳಿ ಡ್ರೈವರ್ ವಾಪಸ್ ಕಳಿಸಿದ್ರು ಧರ್ಮೇಗೌಡ!

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಸ್ವಗ್ರಾಮ ಸರ್ಪನಹಳ್ಳಿಯಲ್ಲಿ ತಂದೆಯ ಸಮಾಧಿ ಪಕ್ಕದಲ್ಲೇ ಸಂಜೆ ಉಪಸಭಾಪತಿಗಳ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ತೋಟದ ಮನೆ ಆವರಣದಲ್ಲಿ ಅಂತಿಮದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಕುಟುಂಬದ ಸದಸ್ಯರು ತೋಟದ ಮನೆ ಆವರಣದಲ್ಲಿ ಎರಡು ಜೆಸಿಬಿಗಳಿಂದ ಸ್ಥಳ ಸಿದ್ಧತೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಮೃತದೇಹ ಸರಪನಹಳ್ಳಿಗೆ ಬರೋ ನಿರೀಕ್ಷೆ ಇದ್ದು, ಆ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆ ರೆಡಿ ಮಾಡಲಾಗುತ್ತಿದೆ.

    https://www.youtube.com/watch?v=jETdpSkvaGM&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

  • ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

    ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

    ಚಿಕ್ಕಮಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ರೈಲಿಗೆ ತಲೆಕೊಡುವ ಮೂಲಕ ಆತ್ಮಹತ್ಮೆಗೆ ಶರಣಾಗಿದ್ದು, ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರ ನಿಧನಕ್ಕೆ ಇದೀಗ ರಾಜಕೀಯ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ.

    ಹುಟ್ಟು ಹಾಗೂ ರಾಜಕೀಯ ಹಿನ್ನೆಲೆ
    ಎಸ್ ಎಲ್ ಧರ್ಮೆಗೌಡ ಅವರು ಮಾಜಿ ಶಾಸಕ ಲಕ್ಷ್ಮಯ್ಯ ಅವರ ಪುತ್ರ. ಧರ್ಮೆಗೌಡ ಅವರ ತಂದೆ ಲಕ್ಷ್ಮಯ್ಯ ಜನತಾ ಪರಿವಾರದ ಹಿರಿಯ ನಾಯಕರಾಗಿದ್ದರು. ಲಕ್ಷ್ಮಯ್ಯ 1983, 1985 ಹಾಗೂ 1994 ಹೀಗೆ ಒಟ್ಟು 3 ಬಾರಿ ಬೀರೂರಿನಿಂದ ಶಾಸಕರಾಗಿದ್ದರು.

    ವೈಯಕ್ತಿಕ ಜೀವನ:
    ಧರ್ಮೇಗೌಡ ಅವರಿಗೆ 65 ವರ್ಷವಾಗಿತ್ತು. ಇವರು ಪತ್ನಿ ಹೆಸರು ಮಮತಾ. ಈ ದಂಪತಿಗೆ ಮಗ ಸೋನಾಲ್, ಮಗಳು ಸಲೋನಿ ಇದ್ದಾರೆ. ರಾಜಕೀಯ ಮಾತ್ರವಲ್ಲದೇ ಧರ್ಮೇಗೌಡ ಇತ್ತೀಚೆಗೆ ಕೃಷಿ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದರು. ಕೃಷಿಯ ಕುರಿತಾಗಿ ಹೆಚ್ಚಿನ ಗಮನ ಮತ್ತು ಆಸಕ್ತಿಯನ್ನು ತೋರಿಸುತ್ತಿದ್ದರು.

    ರಾಜಕೀಯ ಬದುಕು:
    ಧರ್ಮೇಗೌಡ ಅವರು ಬಿಳಕಲ್ ಹಳ್ಳಿ ಗ್ರಾಮಪಂಚಾಯತ್ ಸದಸ್ಯರಾಗಿ ರಾಜಕೀಯ ಬದುಕನ್ನು ಆರಂಭಿಸಿದ್ದರು. ನಂತರ ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿಯೂ ಧರ್ಮೇಗೌಡ ಅವರು ಸೇವೆ ಸಲ್ಲಿಸಿದ್ದಾರೆ. ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿದ್ದರು. ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾಗಿದ್ದರು.

    ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ರಾಜ್ಯ ವಿಮಾ ಸಹಕಾರ ಸಂಘದ ನಿರ್ದೇಶಕ, ದೆಹಲಿಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ, ನ್ಯಾಫೆಡ್ ಸಂಸ್ಥೆ ನಿರ್ದೇಶಕ, ಇಂಡಿಯನ್ ಪೋಟಾಸ್ ಲಿಮಿಟೆಡ್ ನಿರ್ದೇಶಕ, ತಾಲೂಕು ಪಂಚಾಯತ್ ಸದಸ್ಯ, ಜಿಲ್ಲಾಪಂಚಾಯತ್ 2 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೀರೂರು ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದರು ಹಾಗೂ ಒಂದು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

    ದೇವೆಗೌಡ ಅವರ ಕುಟುಂಬದ ಒಡನಾಟ:
    ಧರ್ಮೇಗೌಡ ಅವರು ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಆಪ್ತ ಸ್ನೇಹಿತರಾಗಿದ್ದರು. ಅದೇ ಕಾರಣಕ್ಕೆ ಅವರನ್ನ ವಿಧಾನಪರಿಷತ್ ಸದಸ್ಯರನ್ನಾಗಿ ಕುಮಾರಸ್ವಾಮಿ ಆಯ್ಕೆ ಮಾಡಿದ್ದರು. ಕುಮಾರಸ್ವಾಮಿ ಜೊತೆಗಿನ ಸ್ನೇಹವೇ ಧರ್ಮೆಗೌಡ ಅವರಿಗೆ ಉಪ ಸಭಾಪತಿ ಸ್ಥಾನವು ಒಲಿಯುವಂತೆ ಮಾಡಿತ್ತು.

    ಮೈತ್ರಿ ಸರ್ಕಾರದಲ್ಲಿ ಒಲಿದಿದ್ದ ಉಪಸಭಾಪತಿ ಸ್ಥಾನ:
    ಮೊದಲು ಸಭಾಪತಿಗೆ ದೇವೇಗೌಡರು ಮತ್ತು ಸಿದ್ದರಾಮಯ್ಯ ಪಟ್ಟು ಹಿಡಿಯುತ್ತಾರೆ. ಇಬ್ಬರ ಹಠ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿತ್ತದೆ. ಸಭಾಪತಿ ಸ್ಥಾನಕ್ಕೆ ಇಬ್ಬರು ನಾಯಕರು ಸೂಚಿಸಿದ ಹೆಸರುಗಳನ್ನ ಹೈಕಮಾಂಡ್ ತಿರಸ್ಕರಿಸುತ್ತಾರೆ. ಆಗ ಇಬ್ಬರ ಹೆಸರು ಬೇಡ, ಕಾಂಗ್ರೆಸ್ಸಿಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟರೆ ಹೈಕಮಾಂಡ್ ಸೂಚಿಸಿದ ವ್ಯಕ್ತಿ ಸಭಾಪತಿ ಆಗ್ತಾರೆ. ಜೆಡಿಎಸ್ ಗೆ ಉಪಸಭಾಪತಿ ಎಂದು ತೀರ್ಮಾನದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಇನ್ನೊಂದು ದಾಳ ಉರುಳಿಸ್ತಾರೆ. ಆಗ ಆಪ್ತ ಸ್ನೇಹಿತ ಧರ್ಮೇಗೌಡರ ಹೆಸರನ್ನು ಉಪಸಭಾಪತಿ ಸ್ಥಾನಕ್ಕೆ ಪ್ರಸ್ತಾಪಿಸ್ತಾರೆ. ಹೀಗಾಗಿ ಅಂತಿಮವಾಗಿ ಹೆಚ್ ಡಿಕೆ ಹೇಳಿದ ಧರ್ಮೇಗೌಡರೇ ಉಪಸಭಾಪತಿ ಆಗಿ ನೇಮಕವಾಗುತ್ತಾರೆ.

    ಪರಿಷತ್ ನಲ್ಲಿ ನಡೆದ ಗಲಾಟೆ :
    ಡಿಸೆಂಬರ್ 16 ರಂದು ಪರಿಷತ್ ನಲ್ಲಿ ನಡೆದ ಹೈಡ್ರಾಮಾದಿಂದ ಧರ್ಮೇಗೌಡ ಬೇಸತ್ತಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಪರಿಷತ್ ಗಲಾಟೆ ಬಳಿಕ ಸಭಾಪತಿ ಮೇಲೆ, ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರ ನಡೆ ಎಲ್ಲರ ಗಮನ ಸೆಳೆದಿತ್ತು. ಆದ್ರೆ ಉಪಸಭಾಪತಿ ಧರ್ಮೇಗೌಡ ಒಬ್ಬಂಟಿಯಾಗಿದ್ದರು. ಅಂದೇ ಮಾನಸಿಕವಾಗಿ ಧರ್ಮೇಗೌಡ ಕುಸಿದಿದ್ದರು. ಉಪಸಭಾಪತಿ ಗೌಜು ಗದ್ದಲದಲ್ಲಿ ಧರ್ಮೇಗೌಡರ ಮಾನಸಿಕ ತುಮುಲಗಳನ್ನು ಯಾರೂ ಗಮನಿಸಲಿಲ್ಲ.

    ಪರಿಷತ್ ಕಲಾಪದ ಅಂದು ನಡೆದಿದ್ದು:
    ವಿಶೇಷ ಅಧಿವೇಶನ ವಿಧಾನಮಂಡಲದ ಇತಿಹಾಸದ ಪುಟಗಳಲ್ಲಿ ಕರಾಳ ಅಧ್ಯಾಯವಾಗಿತ್ತು. ಕಲಾಪದ ಬೆಲ್ ಮುಗಿಯುವ ಮುನ್ನವೇ ಪುಂಡರಂತೆ ಪರಸ್ಪರ ನೂಕಾಟ, ಕೂಗಾಟ, ತಳ್ಳಾಟ, ಎಳೆದಾಟ ಸದಸ್ಯರು ಶುರು ಮಾಡಿದ್ದರು. ಬೆಲ್ ಮುಗಿಯುವ ಮುನ್ನವೇ ಉಪ ಸಭಾಪತಿ ಪೀಠದಲ್ಲಿ ಧರ್ಮೇಗೌಡ ಕುಳಿತಿದ್ದರು. ಉಪಸಭಾಪತಿಯವ್ರನ್ನು ಕೈ ಸದಸ್ಯರು ದರದರನೇ ಎಳೆದು ಹಾಕಲು ಮುಂದಾಗಿದ್ದರು. ಇದನ್ನು ತಡೆದು ಉಪ ಸಭಾಪತಿ ಅವರನ್ನು ಖುರ್ಚಿಯಲ್ಲೇ ಕೂತಿರುವಂತೆ ನೋಡಿಕೊಳ್ಳಲು ಬಿಜೆಪಿ-ಜೆಡಿಎಸ್ ಸದಸ್ಯರು ಕಸರತ್ತು ನಡೆಸಿದ್ದರು. ಈ ವೇಳೆ ಸದಸ್ಯರ ನಡುವೆ ಜಂಗಿ ಕುಸ್ತಿ ಪ್ರಾರಂಭವಾಗಿತ್ತು.

    ಆತ್ಮಹತ್ಯೆಯ ಸುತ್ತ ಅನುಮಾನ:
    ಕಳೆದ 25 ವರ್ಷದಿಂದ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಲ್ಲಿ ಹಿಡಿತ ಸಾಧಿಸಿದ್ದ ಧರ್ಮೇಗೌಡ, ಚಿಕ್ಕಮಗಳೂರು ಸಹಕಾರಿ ಧುರೀಣ ರಲ್ಲಿ ಪ್ರಮುಖರೆನ್ನಿಸಿಕೊಂಡಿದ್ದವರು ಇಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಸಭಾಪತಿ ಆತ್ಮಹತ್ಯೆ ಸುತ್ತ ಅನುಮಾನದ ಆವರಿಸಿದೆ. ರಾಜಕೀಯ ಕಾರಣನಾ? ವೈಯಕ್ತಿಕ ಕಾರಣವಾ? ಮೊನ್ನೆ ಪರಿಷತ್ ಗಲಾಟೆ ವೇಳೆಯೂ ಮಾನಸಿಕವಾಗಿ ಕುಸಿದಿದ್ದ ಧರ್ಮೇಗೌಡರು ಯಾರ ಮೇಲೂ ದೂರದೇ ಮೌನಕ್ಕೆ ಶರಣಾಗಿದ್ದರು. ಪರಿಷತ್ ಒಳಗೆ ಗಲಾಟೆ ಆದ ಬಳಿಕ ರಾಜಕೀಯ ಕಿತ್ತಾಟದ ಬಗ್ಗೆ ಅಸಮಾಧಾನಗೊಂಡಿದ್ದರು. ಧರ್ಮೇಗೌಡ ಅವರು 2004 ರಲ್ಲಿ ಬೀರೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ವಿಂಗಡನೆ ನಂತರ ನೀರೂರು ಕ್ಷೇತ್ರ ಇಲ್ಲವಾದ ನಂತರ ಚುನಾವಣಾ ರಾಜಕಾರಣದಿಂದ ದೂರವಾಗಿದ್ದರು. ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿಡಿತ ಕಳೆದುಕೊಂಡ ನಂತರ ಮಾನಸಿಕ ಖಿನ್ನತೆ ಗೆ ಒಳಗಾಗಿದ್ದರು. ಡಿಸಿಸಿ ಬ್ಯಾಂಕ್ ಚುನಾವಣೆ ಸೋಲಿನ ನಂತರ 1 ದಿನ ಒಬ್ಬರೇ ತೋಟದ ಮನೆಯಲ್ಲಿ ಕಳೆದಿದ್ದರು.

  • ನಿಜಕ್ಕೂ ದಿಗ್ಭ್ರಮೆಯಾಯಿತು, ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ: ಸುರೇಶ್ ಕುಮಾರ್

    ನಿಜಕ್ಕೂ ದಿಗ್ಭ್ರಮೆಯಾಯಿತು, ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ: ಸುರೇಶ್ ಕುಮಾರ್

    ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಆತ್ಮಹತ್ಮೆಗೆ ಶರಣಾಗಿದ್ದು, ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂದು ಸಂತಾಪ ಸೂಚಿಸಿದ್ದಾರೆ.

    ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದೇನು..?
    ಪರಿಷತ್ತಿನ ಉಪಸಭಾಪತಿ ಶ್ರೀ ಧರ್ಮೇಗೌಡರೇ, ಏಕೆ ಹೀಗಾಯಿತು?
    ಇಂದು ಬೆಳಗ್ಗೆ ನಾನು ನನ್ನ ಬೆಳಗಿನ ವ್ಯಾಯಾಮ ಮುಗಿಸಿ ಯಾರಿಗೊ ಮೆಸೇಜ್ ಕಳಿಸಬೇಕೆಂದು ಮೊಬೈಲ್ ತೆರೆದಾಗ ಧರ್ಮೇಗೌಡ ಅಕಾಲಿಕ ನಿಧನದ ಸುದ್ದಿ ಓದಿದೆ. ನಿಜಕ್ಕೂ ದಿಗ್ಭ್ರಮೆಯಾಯಿತು. ಆಗ ಸುಮಾರು ಬೆಳಗ್ಗಿನ ಜಾವ 5.30. ತಕ್ಷಣ ಅವರ ಸಹೋದರ, ಮತ್ತೋರ್ವ ವಿಧಾನಪರಿಷತ್ ಸದಸ್ಯ ಬೋಜೇಗೌಡರಿಗೆ ಫೋನ್ ಮಾಡಿದೆ. ಆದರೆ ನನ್ನ ಕರೆಯನ್ನು ಸ್ವೀಕರಿಸಿದ್ದು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು.

    ನಾನು ಅತ್ಯಂತ ಮೆಲುದನಿಯಲ್ಲಿ “ಏನೋ ಸುದ್ದಿ ಕೇಳಿದೆ ನಿಜವಾ” ಎಂದು ಸಿಟಿ ರವಿ ಅವರನ್ನು ಪ್ರಶ್ನಿಸಿದೆ. ಆಗ ರವಿಯವರು “ಹೌದು, ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ನಾವೆಲ್ಲರೂ ಒಂದೇ ಕಾರ್ಯಕ್ರಮದ ವೇದಿಕೆಯಲ್ಲಿದ್ದೆವು. ಧರ್ಮೇಗೌಡರು ಆರಾಮಾಗಿ ನಮ್ಮೆಲ್ಲರ ಜೊತೆ ನಗುನಗುತ್ತಾ ಇದ್ದರು. ಡಿಸೆಂಬರ್ 25ರಂದು ನಮ್ಮ ಮನೆಗೂ ಬಂದು ಸ್ವಲ್ಪ ನಮ್ಮೆಲ್ಲರ ಜೊತೆ ಮಾತನಾಡುತ್ತ ಸಮಯ ಕಳೆದಿದ್ದರೂ. ನಿನ್ನೆ ಅವರ ತೋಟದಲ್ಲಿ ಒಂದು ಪೂಜೆ ಸಹ ಮಾಡಿದ್ದರು” ಎಂದೆಲ್ಲ ತಿಳಿಸಿದರು.

    ನಂತರ ಏಕೆ ಹೀಗಾಯಿತು?, ನಾನು ಕಳೆದ ವಾರ ಧರ್ಮೇಗೌಡ ಜೊತೆ ಮಾತನಾಡಿದ ವಿಷಯಗಳ ಬಗ್ಗೆ ಚರ್ಚಿಸಿದ್ದೆ. ಧರ್ಮೇಗೌಡರು ವಿಧಾನಪರಿಷತ್ತಿನಲ್ಲಿ ನಾನು ನೋಡಿದಂತೆ ಬಹಳ ಶಾಂತ ಸ್ವಭಾವದವರು. ಹೆಚ್ಚು ಮಾತನಾಡುತ್ತಿರಲಿಲ್ಲ. ನಿಜಕ್ಕೂ ಅವರ ಅಕಾಲಿಕ ಸಾವು ಯಾರಿಗಾದರೂ ದಿಗ್ಬ್ರಮೆ ಉಂಟುಮಾಡುವಂತಹದೇ! ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

    ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ ವಿಚಾರ, ಹಣಕಾಸು ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಅರ್ಧಕ್ಕೆ ನಿಲ್ಲಿಸಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದಾರೆ.

  • ಉಪಸಭಾಪತಿ ಎಸ್. ಎಲ್ ಧರ್ಮೇಗೌಡ ಆತ್ಮಹತ್ಯೆ- ಗಣ್ಯರಿಂದ ಸಂತಾಪ

    ಉಪಸಭಾಪತಿ ಎಸ್. ಎಲ್ ಧರ್ಮೇಗೌಡ ಆತ್ಮಹತ್ಯೆ- ಗಣ್ಯರಿಂದ ಸಂತಾಪ

    ಬೆಂಗಳೂರು: ಉಪ ಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಸಕ್ಕರಾಯಪಟ್ಟಣದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಬಂಧ ಇದೀಗ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಟ್ವೀಟ್ ಮಾಡಿ, ವಿಧಾನಪರಿಷತ್ ಉಪಸಭಾಪತಿ ಹಾಗೂ ಜೆಡಿಎಸ್ ಮುಖಂಡರಾದ ಎಸ್.ಎಲ್. ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಆಘಾತವಾಗಿದೆ. ಸಜ್ಜನ, ಸನ್ನಡತೆಯ ಉಪಸಭಾಪತಿಗಳನ್ನು ಕಳೆದುಕೊಂಡದ್ದು ನಮ್ಮ ರಾಜ್ಯದ ನಷ್ಟ. ಅವರ ಕುಟುಂಬ ಹಾಗೂ ಬಂಧುಮಿತ್ರರಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

    ಇನ್ನೊಂದು ಟ್ವೀಟ್ ಮಾಡಿ, ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಇದನ್ನು ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಶಾಸಕರಾಗಿ, ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖವನ್ನುಂಟು ಮಾಡಿದೆ. ಹಿರಿಯ ಅಧಿಕಾರಿಗಳಿಂದ ಘಟನೆಯ ವಿವರ ಪಡೆದುಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ವಿಧಾನಪರಿಷತ್ ಉಪಸಭಾಪತಿ, ಪಕ್ಷದ ಹಿರಿಯ ಮುಖಂಡರು ಹಾಗೂ ನನ್ನ ಸಹೋದರರಂತಿದ್ದ ಎಸ್.ಎಲ್ ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಧರ್ಮೇಗೌಡರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ತಿಳಿಸಿದ್ದಾರೆ.

    https://twitter.com/HdRevanna/status/1343729970028314624

    ಮಾಜಿ ಸಚಿವ ಹೆಚ್.ಡಿ ರೇವಣ್ಣ ಟ್ವೀಟ್ ಮಾಡಿ, ಆತ್ಮೀಯ ಗೆಳೆಯರು ಹಾಗೂ ವಿಧಾನ ಪರಿಷತ್ತಿನ ಉಪಸಭಾಪತಿಗಳು ಮತ್ತು ಜೆಡಿಎಸ್ ಮುಖಂಡರಾದ ಎಸ್. ಎಲ್. ಧರ್ಮೇಗೌಡ ರವರು ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವಿಟ್ ಮಾಡಿ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ರವರ ಅಕಾಲಿಕ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

  • ರೈಲ್ವೇ ಟ್ರ್ಯಾಕ್ ಬಳಿ ಕಾರು ನಿಲ್ಲಿಸಲು ಹೇಳಿ ಡ್ರೈವರ್ ವಾಪಸ್ ಕಳಿಸಿದ್ರು ಧರ್ಮೇಗೌಡ!

    ರೈಲ್ವೇ ಟ್ರ್ಯಾಕ್ ಬಳಿ ಕಾರು ನಿಲ್ಲಿಸಲು ಹೇಳಿ ಡ್ರೈವರ್ ವಾಪಸ್ ಕಳಿಸಿದ್ರು ಧರ್ಮೇಗೌಡ!

    – ಆಸ್ತಿ ವಿಚಾರ, ಪರಿಷತ್‍ನಲ್ಲಿ ನಡೆದಿದ್ದ ಗಲಾಟೆಯಿಂದ ಬೇಸರ
    – ಡೆತ್‍ನೋಟ್ ನಲ್ಲಿ ಪತ್ನಿ, ಮಗ, ಮಗಳಲ್ಲಿ ಕ್ಷಮೆ

    ಚಿಕ್ಕಮಗಳೂರು: ರೈಲಿಗೆ ತಲೆಕೊಟ್ಟು ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರ ಹಾಗೂ ಇತ್ತೀಚೆಗೆ ಪರಿಷತ್ ನಲ್ಲಿ ನಡೆದಿದ್ದ ಗಲಾಟೆಯಿಂದ ಧರ್ಮೇಗೌಡ ನೊಂದಿದ್ದರು ಎಂದು ಹೇಳಳಾಗುತ್ತಿದೆ. ಈ ಎಲ್ಲಾ ವಿಚಾರಗಳನ್ನು ಅವರು ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

    ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ.

    ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

    ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ, ಹಣಕಾಸು ವಿಚಾರ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದಾರೆ.