Tag: ಎಸ್.ಎನ್ ಸುಬ್ಬಾರೆಡ್ಡಿ

  • ನನಗೆ ಮಿನಿಸ್ಟರ್ ಪೋಸ್ಟ್ ಬೇಕೇ ಬೇಕು – ಶಾಸಕ ಸುಬ್ಬಾರೆಡ್ಡಿ ಡಿಮ್ಯಾಂಡ್!

    ನನಗೆ ಮಿನಿಸ್ಟರ್ ಪೋಸ್ಟ್ ಬೇಕೇ ಬೇಕು – ಶಾಸಕ ಸುಬ್ಬಾರೆಡ್ಡಿ ಡಿಮ್ಯಾಂಡ್!

    – ಆಪರೇಷನ್‌ ಕಮಲದ ವೇಳೆ ಸಚಿವ ಸ್ಥಾನ ಆಫರ್‌ ಬಂದಿತ್ತು ಎಂದ ಶಾಸಕ
    – ಪವರ್ ಶೇರಿಂಗ್ ವಿಚಾರ ಹೈಕಮಾಂಡ್ ಗುಪ್ತವಾಗಿಟ್ಟಿದೆ

    ಚಿಕ್ಕಬಳ್ಳಾಪುರ: ನನಗೆ ಸಚಿವ ಸ್ಥಾನ ಕೇಳುವ ಹಕ್ಕಿದೆ, ನಾನು ಹಿರಿಯ ಶಾಸಕ, ಮುಂದಿನ ಬಾರಿ ಸಚಿವ ಸಂಪುಟ ಪುನಾರಚನೆ ವೇಳೆ ನನಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಡಿಮ್ಯಾಂಡ್ ಮಾಡ್ತಿದ್ದೇನೆ ಅಂತ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ (SN Subba Reddy) ಹೇಳಿದರು.

    ಬಾಗೇಪಲ್ಲಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಯೋಜನೆಯ ಸಿದ್ಧತೆಗಳನ್ನ ಪರಿಶೀಲನೆ ಮಾಡಿ ಮಾತನಾಡಿದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು, ಎಲ್ಲಾ ಕ್ಷೇತ್ರದವರೂ ಸಚಿವರಾಗಿದ್ದಾರೆ. ಆದ್ರೆ ಇದುವರೆಗೂ ಬಾಗೇಪಲ್ಲಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅದರಲ್ಲೂ ಬಿಜೆಪಿ ಅಪರೇಷನ್ ಕಮಲದ ವೇಳೆ ನನಗೆ ಸಚಿವ ಸ್ಥಾನದ ಆಫರ್ ಕೊಟ್ಟರು. ಆದ್ರೂ ನಾನು ಕಾಂಗ್ರೆಸ್ ಪಕ್ಷಕ್ಕೆ (Congress Party) ನಿಷ್ಟೆಯಿಂದ ಇದ್ದೆ ಎಂದು ಹೇಳಿದ್ದಾರೆ.

    ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ನಂತರ ಕಾಂಗ್ರೆಸ್ ಪಕ್ಷಕ್ಕೆ ಬಂದೆ. ಇಲ್ಲಿ ಬಂದು ಪಕ್ಷಕ್ಕಾಗಿ ಸಾಕಷ್ಟು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಹಾಗಾಗಿ ನನಗೆ ಈ ಬಾರಿ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಕೊಡಲೇಬೇಕು ಅಂತ ಸಿಎಂ ಹಾಗೂ ಡಿಸಿಎಂಗೆ ಡಿಮ್ಯಾಂಡ್ ಮಾಡುವುದಾಗಿ ಹೇಳಿದರು.

    ಪವರ್‌ ಶೇರಿಂಗ್‌ ಗುಪ್ತವಾಗಿಟ್ಟಿದೆ:
    ಇದೇ ವೇಳೆ ಸಿಎಂ-ಡಿಸಿಎಂ ನಡುವೆ ಪವರ್ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನಗಳು ನಮಗೆ ಗೊತ್ತಾಗಲ್ಲ. ಹೈಕಮಾಂಡ್ ಆ ವಿಚಾರವನ್ನು ಗುಪ್ತವಾಗಿ ಇಟ್ಟಿದೆ. ನಮಗೆ ಸಿಎಂ -ಡಿಸಿಎಂ ಇಬ್ಬರು ಎರಡು ಕಣ್ಣುಗಳು ಇದ್ದಂತೆ. ಇಬ್ಬರಲ್ಲಿ ಯಾರು ಸಿಎಂ ಆದರೂ ನನಗೆ ಸಂತೋಷ ಎಂದು ಹೇಳಿದ್ದಾರೆ.

  • ಸಿಎಂ ಬಿಎಸ್‍ವೈ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ: ಕಾಂಗ್ರೆಸ್ ಶಾಸಕ

    ಸಿಎಂ ಬಿಎಸ್‍ವೈ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ: ಕಾಂಗ್ರೆಸ್ ಶಾಸಕ

    ಚಿಕ್ಕಬಳ್ಳಾಪುರ: ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಕೊಟ್ಟ ಮಾತು ತಪ್ಪುತ್ತಿದ್ದಾರೆ ಎಂದು ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

    ಬಾಗೇಪಲ್ಲಿ ಪಟ್ಟಣದಲ್ಲಿ ಮಾತನಾಡಿದ ಶಾಸಕರು, ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ 64 ಕೋಟಿ ರೂ. ಅನುದಾನವನ್ನು ತಡೆ ಹಿಡಿಯಲಾಗಿದೆ. ಅನುದಾನ ತಡೆ ಹಿಡಿದ ಕಾರಣ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಬಹಳ ಕಷ್ಟ ಆಗುತ್ತಿದೆ. ಹೀಗಾಗಿ ನಾನು ಇತ್ತೀಚೆಗೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ, ತಡೆ ಹಿಡಿದ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆ ಎಂದು ತಿಳಿಸಿದರು.

    ತಮ್ಮ ಭೇಟಿಯ ಸಂದರ್ಭದಲ್ಲಿ ತಡೆ ಹಿಡಿತ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಇಂದಿಗೂ ಅನುದಾನ ಕೊಟ್ಟಿಲ್ಲ. ಬಿಎಸ್‍ವೈ ಕೊಟ್ಟ ಮಾತು ತಪ್ಪಿದ್ದಾರೆ. ಅಧಿವೇಶನ ಮುಗಿಯುವ ವೇಳೆಗೆ ಅನುದಾನ ಕೊಟ್ಟರೆ ಕೊಡಲಿ, ಇಲ್ಲವಾದರೆ ಅಧಿವೇಶನದಲ್ಲಿ ಇದಕ್ಕೆ ಉತ್ತರ ನೀಡುತ್ತೇನೆ. ಅನುದಾನ ಯಾವ ರೀತಿ ತೆಗೆದುಕೊಳ್ಳಬೇಕು ಎಂಬುವುದು ನನಗೆ ಗೊತ್ತಿದೆ. ಸಿದ್ದರಾಮಯ್ಯರೊಂದಿಗೆ ಮಾತನಾಡಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ಸಮ್ಮಿಶ್ರ ಸರ್ಕಾದ ಬಗ್ಗೆ ಮನಸ್ತಾಪವಿದೆ, ರಾಜೀನಾಮೆ ಕೊಡಲ್ಲ – ಸುಬ್ಬಾರೆಡ್ಡಿ

    ಸಮ್ಮಿಶ್ರ ಸರ್ಕಾದ ಬಗ್ಗೆ ಮನಸ್ತಾಪವಿದೆ, ರಾಜೀನಾಮೆ ಕೊಡಲ್ಲ – ಸುಬ್ಬಾರೆಡ್ಡಿ

    ಚಿಕ್ಕಬಳ್ಳಾಪುರ: ನೀರಾವರಿ ವಿಚಾರದಲ್ಲಿ ನನಗೆ ಅನ್ಯಾಯವಾಗಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ನನಗೆ ಮನಸ್ತಾಪ ಇರುವುದು ನಿಜ. ಆದರೆ ಸರ್ಕಾರವೇ ಸಂಕಷ್ಟದಲ್ಲಿ ಇರುವಾಗ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ಬಾಗೇಪಲ್ಲಿ ಪಟ್ಟಣದ ತಮ್ಮ ನಿವಾಸದಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 13 ಮಂದಿ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ನಾನು ಕೂಡ ರಾಜೀನಾಮೆ ನೀಡುತ್ತೇನೆ ಎಂದು ಕೆಲ ಮಾಧ್ಯಮದವರು ತೋರಿಸಿದ್ದಾರೆ. ಇದರಿಂದ ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.

    ಅಂದಹಾಗೆ ಚೇಳೂರು ಗ್ರಾಮದಲ್ಲಿನ ಜನಸ್ಪಂದನ ಕಾರ್ಯಕ್ರಮದಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ. ನನ್ನ ಬಾಗೇಪಲ್ಲಿ ಕ್ಷೇತ್ರಕ್ಕೆ ಎಚ್.ಎನ್ ವ್ಯಾಲಿ ನೀರು ಬರದಿದ್ದರೆ ಮುಂದಿನ ಕ್ಯಾಬಿನೆಟ್‍ನಲ್ಲಿ ಕೇಳಿ ಅನಂತರ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಅಷ್ಟರಲ್ಲಿ 13 ಮಂದಿ ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನವಾಗುವ ಲಕ್ಷಣಗಳು ಕಂಡು ಬಂದವು ಎಂದು ತಿಳಿಸಿದರು.

    ಅವರ ರಾಜೀನಾಮೆಗೂ ನನ್ನ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಅವರು ವೈಯುಕ್ತಿಕ ಸೇರಿದಂತೆ ಅನುದಾನ ಕೊರತೆ, ಅಧಿಕಾರಿಗಳ ವರ್ಗಾವಣೆ ಸೇರಿ ಅನೇಕ ಕಾರಣಗಳಿಗೆ ರಾಜೀನಾಮೆ ಕೊಟ್ಟಿರಬಹುದು. ಆದರೆ ನಾನು ಜನರಿಗೆ ಸಂಕಷ್ಟ ಬಂದಾಗ ಕಷ್ಟ ಪರಿಹರಿಸಲು ರಾಜೀನಾಮೆ ನೀಡುವೆ ಹೊರತು ಈ ಸಂದರ್ಭದಲ್ಲಿ ರಾಜೀನಾಮೆ ನೀಡುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಹೇಳಿದರು.

    ಈಗಲೂ ಕಾಯುತ್ತೇನೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಬಾಗೇಪಲ್ಲಿ ಕ್ಷೇತ್ರಕ್ಕೆ ಎಚ್.ಎನ್ ವ್ಯಾಲಿ ಹಾಗೂ ಎತ್ತಿನಹೊಳೆ ನೀರು ಬರಲಿಲ್ಲ ಅಂದರೆ ನನಗೆ ಮತ ಹಾಕಿದ ಜನರ ಸಮೇತ ವಿಧಾನಸೌಧಕ್ಕೆ ಪಾದಯಾತ್ರೆ ಮೂಲಕ ತೆರಳಿ ಜನರ ಮುಂದೆಯೇ ನನ್ನ ರಾಜೀನಾಮೆ ಪತ್ರ ನಿಡೋದಾಗಿ ತಿಳಿಸಿದರು.