Tag: ಎಸ್.ಎನ್. ನಾರಾಯಣಸ್ವಾಮಿ

  • ಶಾಸಕ ನಾರಾಯಣಸ್ವಾಮಿ ಬಿಪಿಎಲ್ ಕಾರ್ಡ್ ಆಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಕೆ.ವೈ ನಂಜೇಗೌಡ

    ಶಾಸಕ ನಾರಾಯಣಸ್ವಾಮಿ ಬಿಪಿಎಲ್ ಕಾರ್ಡ್ ಆಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಕೆ.ವೈ ನಂಜೇಗೌಡ

    – ಕೋಲಾರದಲ್ಲಿ ಮುಂದುವರಿದ ಕಾಂಗ್ರೆಸ್ ಶಾಸಕರ ವಾಕ್ಸಮರ

    ಕೋಲಾರ: ಕೋಲಾರದಲ್ಲಿ (Kolar) ಕಳೆದೊಂದು ವಾರದಿಂದ ಕಾಂಗ್ರೆಸ್ ಶಾಸಕರ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಸ್ವಪಕ್ಷೀಯ ಕಾಂಗ್ರೆಸ್ ಶಾಸಕರು ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಭಾನುವಾರ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Naraynaswamy) ನಾನು ಬಿಪಿಎಲ್ ಕಾರ್ಡ್ ಎಂಎಲ್‌ಎ, ಮಾಲೂರು ಶಾಸಕ ಕೆ.ವೈ.ನಂಜೇಗೌಡ (KY Nanjegowda) ಎಪಿಎಲ್ ಶಾಸಕರೆಂದು ಆರೋಪಿಸಿದ್ದರು. ಅಲ್ಲದೇ ಅವರಿಗೆ ಉಸ್ತುವಾರಿ ಸಚಿವರು ಎರಡೂವರೆ ಸಾವಿರ ಕೋಟಿ ಅನುದಾನ ಕೊಟ್ಟಿದ್ರೆ ಅವರ ಸ್ವಾಮಿನಿಷ್ಠೆ ಇರಲಿ ಎಂದು ಶಾಸಕ ನಂಜೇಗೌಡಗೆ ಟಾಂಗ್ ನೀಡಿದ್ದರು. ಈ ಹಿನ್ನೆಲೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಇಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದು, ಬಿಪಿಎಲ್ ಕಾರ್ಡ್ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಡಿಜೆಗೆ ಅನುಮತಿ ನಮ್ಮ ಹೋರಾಟಕ್ಕೆ ಸಿಕ್ಕ ಫಲ – ರಾಜಕೀಯ ಮುಖಂಡರಿಂದ ಸುಳ್ಳು ಪೋಸ್ಟ್

    ಕೋಲಾರ ಜಿಲ್ಲೆ ಮಾಲೂರು ಹಾಲು ಒಕ್ಕೂಟದಲ್ಲಿ ಮಾತನಾಡಿದ ಅವರು, ನಾರಾಯಣಸ್ವಾಮಿ ಅವರು ದೊಡ್ಡ ಇನ್‌ಕಮ್ ಟಾಕ್ಸ್ ಹೋಲ್ಡರ್ ಆಗಿದ್ದಾರೆ. ಬಿಪಿಎಲ್ ಕಾರ್ಡ್‌ನವರೆಂದು ಇನ್ನೊಮ್ಮೆ ಮಾತನಾಡಬೇಡಿ. ಬಿಪಿಎಲ್ ಕಾರ್ಡ್ ಅಂತ ನೀವು ಡಿಕ್ಲೇರ್ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ನಿಮ್ಮ ತಂದೆ ತಾಯಿ ಅವರು ಆಗ ಬಿಪಿಎಲ್ ಕಾರ್ಡ್ ಹೊಂದಿರಬಹುದು ಆದ್ರೆ ನೀನು ಬುದ್ಧಿವಂತ, ಎಪಿಎಲ್ ಆಗಿದ್ದೀಯಾ. ಈಗಲೂ ನೀನು ಬಿಪಿಎಲ್ ಕಾರ್ಡ್ ಎಂದು ಪ್ರೂವ್ ಮಾಡಿದರೆ ನಾನು ರಾಜಕೀಯದಲ್ಲಿ ಇರುವುದಿಲ್ಲ ಎಂದು ಸವಾಲಾಕಿದ್ದಾರೆ. ನಾನು ನಮ್ಮ ತಾತನವರ ಕಾಲದಿಂದ ಎಪಿಎಲ್ ಕಾರ್ಡ್ ಹೊಂದಿರುವೆ. ನಾವು ಏನು ಮಾಡುತ್ತೀವಿ, ಮಾತನಾಡುತ್ತಿದ್ದೇವೆ ಅಂತ ಜನರು ನೋಡುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿದ್ದೀರಿ, ಯಾರ ಬಗ್ಗೆ ಮಾತನಾಡುತ್ತಿದ್ದೀರಿ ತಿಳಿದುಕೊಳ್ಳಿ ಎಂದರು. ಇದನ್ನೂ ಓದಿ: ಸರ್ಕಾರಿ ಕೆಲಸಗಳಿಗೆ ಇನ್ಮುಂದೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್ ಸೇವೆ ಪಡೆಯಲು ನಿರ್ಧಾರ

    ಇನ್ನು ಎಂಎಲ್‌ಸಿ ಅನಿಲ್ ಕುಮಾರ್ ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ಕೆಡಿಸುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅನಿಲ್ ಕುಮಾರ್ ಹೇಳಿದೆಲ್ಲ ಕೇಳುವುದಕ್ಕೆ ನಾನು ಮಗುವೆ? ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನಲ್ಲ, ಕೆಳ ಹಂತದಿಂದ ನಾನು ಬಂದಿರುವೆ. ಈ ಹಿಂದೆ ಅನಿಲ್ ಕುಮಾರ್ ಮತ್ತು ನಾರಾಯಣಸ್ವಾಮಿ ಎಷ್ಟು ಒಗ್ಗಟ್ಟು ಆಗಿದ್ದರು. ಅನಿಲ್ ಕುಮಾರ್ ಸಾಮಾನ್ಯ ವ್ಯಕ್ತಿ, ಒಳ್ಳೆತನ ಇಲ್ಲಿ ಇರುತ್ತೆ ಅಲ್ಲಿ ಇರುತ್ತಾರೆ ಎಂದು ಶಾಸಕ ನಾರಾಯಣಸ್ವಾಮಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ – ಪ್ರಿಯಾಂಕ್ ಖರ್ಗೆ

  • ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ

    ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ

    ಕೋಲಾರ: ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣ (S N Narayanaswamy) ಸ್ವಾಮಿಯೇ ಭೂ ಗಳ್ಳ ಎಂದು ಕೋಲಾರ ಸಂಸದ ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.

    ಕೊಲಾರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಂಚಾಳ ಬಳಿ ಗಾಲ್ಫ್ ಕೋರ್ಸ್ ನಲ್ಲಿ ಅಂದಿನ ದಿವಂಗತ ಜಿಲ್ಲಾಧಿಕಾರಿ ಡಿ.ಕೆ.ರವಿ ಇದ್ದಾಗ 50 ಎಕರೆ ಕಾಂಪೌಂಡ್ ಹಾಕಿದ್ರು. ಎಸ್.ಎನ್.ಸಿಟಿ ಯಲ್ಲಿ ತಾಯಿ ಹೆಸರಲ್ಲಿ ಭೂ ಮಂಜೂರಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ಸಿಬ್ಬಂದಿಯ ಕೈಗಳನ್ನು ಕಟ್ಟಿ ಹಾಕಿ ಥಳಿಸಿ, ಬೆನ್ನಿನಲ್ಲಿ PFI ಅಂತಾ ಬರೆದ ಕಿಡಿಗೇಡಿಗಳು

    ಸರ್ಕಾರಿ ಜಮೀನುಗಳನ್ನ ಅವರ ಸಂಬಂಧಿಕರ ಹೆಸರಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅಕ್ರಮ ಮಂಜೂರಾತಿ ಸೇರಿದಂತೆ ಹಲವು ಪ್ರಕರಣಗಳು ಅವರ ವಿರುದ್ಧ ಇದೆ. ಯಾರಾದರೂ ಒಬ್ಬ ಶಾಸಕನ ಮೇಲೆ ಹೆಚ್ಚು ಪ್ರಕರಣ ಇದ್ರೆ ಅದು ಎಸ್.ಎನ್.ನಾರಾಯಣಸ್ವಾಮಿ ಮೇಲೆ. ಶಾಸಕ ನಾರಾಯಣಸ್ವಾಮಿ ಒಡೆತನದ ಎಸ್.ಎನ್.ಸಿಟಿಗೆ ದಾರಿ ಮಾಡಿಕೊಂಡಿರುವ ಸರ್ಕಾರಿ ಗುಂಡಿ ತೋಪು ತೆರವುಗೊಳಿಸಿದಾಗ ಸರ್ಕಾರದ ಮೇಲೆ ವಿಶ್ವಾಸ ಬರಲಿದೆ.

    ನಮ್ಮದೇ ಸರ್ಕಾರ ಇದ್ದಾಗ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ವಾಚ್ ಮೆನ್ ಆಗಿ ಅವರು ಯಾವತ್ತೋ ಕೆಲಸ ಮಾಡಬೇಕಿತ್ತು. ಅವರಪ್ಪನ ಆಸ್ತಿಗೆ ನಾನು ಯಾವತ್ತೂ ಹೋಗಿಲ್ಲ ವಾಚ್‍ಮೆನ್ ಕೆಲಸ ನನಗೆ ಅಲ್ಲ. ಸರ್ಕಾರಿ ಜಮೀನು ಉಳಿಸಿ ಸರ್ಕಾರಕ್ಕೆ ವಾಚ್‍ಮೆನ್ ಆಗಿ ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್

    ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್

    ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ತಾಯಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ.

    ಬಿಪಿಎಲ್ ತಾಯಿಗೆ ಮಂಜೂರಾದ ಜಮೀನು ಪಕ್ಕದಲ್ಲಿಯೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಎಸ್.ಎನ್.ಸಿಟಿ ಮಾಡಿಕೊಂಡಿದ್ದಾರೆ. ಆದರೆ ತಾಯಿ ಮುನಿಯಮ್ಮ ಮಾತ್ರ ಈಗಲೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಸರ್ವೇ ನಂ.256 ರಲ್ಲಿ 3 ಎಕರೆ 10 ಗುಂಟೆ ಸರ್ಕಾರಿ ಜಮೀನನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ತಾಯಿ ಮುನಿಯಮ್ಮ ಹೆಸರಿಗೆ 2018-19ರಲ್ಲಿ ಮಂಜೂರು ಮಾಡಿದ್ದಾರೆ.

    1998 ರಲ್ಲಿಯೇ ಅರ್ಜಿ ಸಲ್ಲಿಸಿದಂತೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸರ್ಕಾರಿ ಭೂಮಿಯನ್ನು ತಮ್ಮ ತಾಯಿ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರಮುಖವಾಗಿ ಭೂಮಿ ಮಂಜೂರು ಮಾಡಿದಾಗ ದರಾಖಾಸ್ತು ಕಮಿಟಿ ಅಧ್ಯಕ್ಷರಾಗಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಟಿ ಬೆಲೆ ಬಾಳುವ ಜಮೀನನ್ನು ಕಮಿಟಿಯಲ್ಲಿ ತಮ್ಮ ತಾಯಿ ಹೆಸರಿಗೆ ಮಂಜೂರು ಮಾಡುವುದು ಸ್ವಜನ ಪಕ್ಷಪಾತ. ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

    ಇದಕ್ಕಾಗಿ ಅವರು ದರಖಾಸ್ತು ಕಮಿಟಿಯ ಸದಸ್ಯರನ್ನು ಕೂಡ ಬಳಕೆ ಮಾಡಿಕೊಂಡು ಸರ್ಕಾರಿ ಭೂಮಿಯನ್ನು ಶಾಸಕ ನಾರಾಯಣಸ್ವಾಮಿ ಕಬಳಿಕೆ ಮಾಡಿಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಮುನಿಯಪ್ಪ ಅವರು ಶಾಸಕರಿಂದ ದೂರು ಉಳಿದಿದ್ದು ವಾರ್ಷಿಕ 15 ಸಾವಿರ ಆದಾಯ ಹೊಂದಿದ್ದಾರೆ. ಜೊತೆಗೆ ಅವರು 1998 ರಲ್ಲಿಯೇ ಸಾಗುವಳಿ ಚೀಟಿ ಜೊತೆ ಅರ್ಜಿ ಸಲ್ಲಿಸಿರುವ ದಾಖಲೆಗಳಿವೆ. ಅವರು ಭೂಮಿ ಮಂಜೂರಿಗಾಗಿ ಕೋರಿರುವ ದಾಖಲೆಗಳೆಲ್ಲವೂ ಕೂಡಾ ನ್ಯಾಯ ಬದ್ದವಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

    ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ ಇದೇ ಮೊದಲೇನಲ್ಲ. ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಕೂಡ ಗಾಲ್ಫ್ ರೆಸಾರ್ಟ್‍ಗಾಗಿ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ದಾಖಲೆ ಸಮೇತ ಆರೋಪ ಮಾಡಿದ್ದರು. ಆದರೆ ಅದು ಹೈಕೋರ್ಟ್‍ನಲ್ಲಿಯೇ ಇತ್ಯರ್ಥವಾಗಿತ್ತು. ಕೆಲ ತಿಂಗಳ ಹಿಂದೆಯಷ್ಟೇ ಸಂಸದ ಮುನಿಸ್ವಾಮಿ ಕೂಡ ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರೆ, ಆದರೆ ಇದ್ಯಾವುದು ಕೂಡ ಸಾಬೀತಾಗದೆ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ – ನಟ ದಿಲೀಪ್ ಸ್ನೇಹಿತ ಅರೆಸ್ಟ್‌

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ನಾರಾಯಣಸ್ವಾಮಿ, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನನ್ನ ಹಾಗೂ ನನ್ನ ತಾಯಿ ಜೊತೆಗೆ ಕೇವಲ ರಕ್ತ ಸಂಬಂಧ ಇದೆ, ಹೊರತು ನಮ್ಮ ನಡುವೆ ಯಾವುದೇ ವ್ಯವಹಾರಿಕ ಸಂಬಂಧ ಹೊಂದಿಲ್ಲ. ನಾವು 1995 ರಲ್ಲಿಯೇ ಅದರಿಂದ ಹೊರ ಬಂದಿದ್ದೇವೆ. ನಾನು ಶಾಸಕನಾಗುವ ಮೊದಲೇ ಅಂದರೆ 1998 ರಲ್ಲಿ ಭೂಮಿ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಭೂಮಿ ಮಂಜೂರು ಮಾಡಲು ಬೇಕಿರುವ ಎಲ್ಲಾ ದಾಖಲೆಗಳು ಸರಿಯಾಗಿರುವ ಕಾರಣ ಭೂಮಿ ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ಸ್ವಜನ ಪಕ್ಷಪಾತವಿಲ್ಲ ಎನ್ನುತ್ತಿದ್ದಾರೆ.

    ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ 2021ರ ಏಪ್ರಿಲ್ 26 ರಂದು ಬಂಗಾರಪೇಟೆ ಪೊಲೀಸ್ ಠಾಣೆಗೆ ಶಾಸಕರ ಬಗರ್‌ಹಕುಂ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ದಾಖಲೆಗಳು ನಾಪತ್ತೆಯಾಗಿದೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧವೇ ದೂರು ನೀಡಿರುವುದು ಮತ್ತೊಂದು ಅಂಶ. ಇದು ಶಾಸಕರು ತಮ್ಮ ಪ್ರಭಾವ ಬಳಸಿ ಮೂಲ ದಾಖಲೆಗಳನ್ನು ನಾಪತ್ತೆ ಮಾಡಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರಾ ಎನ್ನುವ ಅನುಮಾನ ಕೂಡ ಮೂಡಿಬರುತ್ತಿದೆ.

    ಒಟ್ಟಾರೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ ದಾಖಲೆ ಸಹಿತವಾಗಿದ್ದು, ಅದಕ್ಕೆ ಬೇಕಾದ ದಾಖಲೆಗಳು, ಶಾಸಕರ ಪ್ರಭಾವವೂ ಇರಬಹುದು. ಇಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಕೈವಾಡವೂ ಇರಬಹುದು, ನಿಷ್ಪಕ್ಷಪಾತ ತನಿಖೆ ನಡೆದಾಗ ಮಾತ್ರ ಈ ಎಲ್ಲಾ ಆರೋಪಗಳಿಗೆ ಸರಿಯಾದ ಉತ್ತರ ಸಿಗಲಿದೆ.

  • ಬೆಲೆ ಏರಿಕೆ, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ: ನಾರಾಯಣಸ್ವಾಮಿ

    ಬೆಲೆ ಏರಿಕೆ, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ: ನಾರಾಯಣಸ್ವಾಮಿ

    ಕೋಲಾರ: ಪೆಟ್ರೋಲ್, ಡಿಸೇಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಡವರು, ಜನ ಸಾಮಾನ್ಯರ ದುಸ್ಥಿಗೆ ಸರ್ಕಾರ ಹೊಣೆ ಎಂದು ಕಾಂಗ್ರೆಸ್ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಕೋಲಾರದ ಬಂಗಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು, ಜನ ಸಾಮಾನ್ಯರ ಪಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಸ್ಥರವಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡವರು, ಜನ ಸಾಮಾನ್ಯರ ಪಾಲಿಗೆ ಕ್ರೂರ ಸ್ವರೂಪದ, ರೌದ್ರವಾತಾರ ದಂತ್ತಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನ ತಡೆರಹಿತ ವೋಲ್ವೊ ಬಸ್ ವ್ಯವಸ್ಥೆ

    ಪೆಟ್ರೋಲ್, ಡಿಸೇಲ್ ಸೇರಿದಂತೆ ಅಡುಗೆ ಎಣ್ಣೆ, ಅಗತ್ಯ ವಸ್ತುಗಳ ಬೆಲೆ ಆಕಾಶಕ್ಕೆ ಏರಿಕೆಯಾಗಿದೆ. ರೈತರು, ಬಡವರ ಕೂಗು ಈ ಸರ್ಕಾರಕ್ಕೆ ಕೇಳುತ್ತಿಲ್ಲ, ಹೀಗಾಗಿ ಈ ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಸಾರ್ಕಾರ ಬಂದಾಗಿನಿಂದಲೂ ಕೇವಲ ಹಣ ಮಾಡುವುದು, ಸುಳ್ಳು ಸುದ್ದಿಗಳನ್ನ ಹರಡುವುದರಲ್ಲಿ ನಿರತವಾಗಿದೆ. ಬಿಜೆಪಿ ಶಾಸಕರು, ಸಂಸದರು ಕೇವಲ ಉಢಾಫೆ ಉತ್ತರಗಳನ್ನ ಕೊಡುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ

    ಸರ್ಕಾರದ ಮೇಲೆ ಒತ್ತಡ ಹಾಕಿ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ತೈಲ ಕಂಪನಿಗಳ ಲಾಭಿಯಲ್ಲಿ ಈ ಸರ್ಕಾರಗಳು ನಡೆಯುತ್ತಿವೆ. ಸಿಎಂ ಹಾದಿಯಾಗಿ ಬಿಜೆಪಿ ಶಾಸಕರು, ಸಂಸದರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಉಡಾಫೆ ಉತ್ತರ ಕೊಡುತ್ತಾ ಕಾಲ ಕಳೆಯುತ್ತಿದ್ದಾರೆ. ವ್ಯಾಕ್ಸಿನ್ ಇದೆ ಸಿರಂಜ್ ಕೊಡುತ್ತಿಲ್ಲ, ಈ ಸರ್ಕಾರಗಳಿಗೆ ಸಿರಂಜು ಸರಬರಾಜು ಮಾಡುವ ಸೌಜನ್ಯ ಇಲ್ಲ. ನನ್ನ ಮತ ಕ್ಷೇತ್ರದಲ್ಲಿ ಬೇಕಾದ ಸಿರಂಜು ವ್ಯವಸ್ಥೆಯನ್ನ ನಾನೆ ಮಾಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ.

  • ಕೊರೊನಾ ಜಾಗೃತಿ ಮೂಡಿಸಲು ಫೀಲ್ಡಿಗಿಳಿದ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ

    ಕೊರೊನಾ ಜಾಗೃತಿ ಮೂಡಿಸಲು ಫೀಲ್ಡಿಗಿಳಿದ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ

    – ಪ್ರಮುಖ ರಸ್ತೆಗಳಲ್ಲಿ ಮೈಕ್ ಹಿಡಿದು ಜನರಲ್ಲಿ ಜಾಗೃತಿ

    ಕೋಲಾರ: ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರಸ್ತೆಗಿಳಿದು ಜನರಿಗೆ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

    ಎಸ್.ಎನ್.ನಾರಾಯಣಸ್ವಾಮಿ, ಖುದ್ದು ನಗರದಲ್ಲಿ ಮೈಕ್ ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಿ ಕೋಲಾರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಿಂದ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಹಾಗಾಗಿ ಯಾರೋ ಕೂಡ ನಿರ್ಲಕ್ಷ್ಯವಹಿಸುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾದಿಂದ ಮುಕ್ತರಾಗುವಂತೆ ಸಲಹೆ ನೀಡಿದರು.

    ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ತಹಶೀಲ್ದಾರ್ ದಯಾನಂದ್, ಸಿಪಿಐ ಸುನಿಲ್ ಕುಮಾರ್, ಸೇರಿದಂತೆ ಅರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರು, ಪುರಸಭೆ ಸದಸ್ಯರು ಕೊರೊನಾ ಜಾಗೃತಿ ಮೂಡಿಸಲು ಸಾಥ್ ನೀಡಿದರು.