Tag: ಎಸ್ ಈಶ್ವರಪ್ಪ

  • ಕಾಂಗ್ರೆಸ್ಸಿನವರು ಬೆಂಕಿ ಹಚ್ಚಲು ಮಂಗ್ಳೂರು ಹೊರಟಿದ್ದು: ಈಶ್ವರಪ್ಪ

    ಕಾಂಗ್ರೆಸ್ಸಿನವರು ಬೆಂಕಿ ಹಚ್ಚಲು ಮಂಗ್ಳೂರು ಹೊರಟಿದ್ದು: ಈಶ್ವರಪ್ಪ

    ಹಾವೇರಿ: ಕಾಂಗ್ರೆಸ್ಸಿನವರಿಗೆ ದೇಶ ಒಂದಾಗೋದು ಬೇಕಾಗಿಲ್ಲ. ಅವರು ಮಂಗಳೂರಿಗೆ ಹೊರಟಿದ್ದು ಸಾಂತ್ವನ ಹೇಳಲು ಅಲ್ಲ, ಬದಲಾಗಿ ಬೆಂಕಿ ಹಚ್ಚಲು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಖಾದರ್ ಸೇರಿ ಕೆಲವರು ಬೆಂಕಿ ಹಚ್ಚಬೇಕಾಗುತ್ತೆ ಅನ್ನೋ ಮಾತನಾಡುತ್ತಿದ್ದಾರೆ. ಮನಸ್ಸಿನಲ್ಲಿ ಗಲಭೆ ಹಚ್ಚೋ ತೀರ್ಮಾನ ಕಾಂಗ್ರೆಸ್ ನವರು ಮಾಡಿದ್ದಾರೆ. ಈಗಾಗಲೇ ಎರಡು ಹೆಣಗಳು ಬಿದ್ದಿವೆ. ಇನ್ನೆಷ್ಟು ಹೆಣಗಳು ಬೀಳಬೇಕು ಎಂದು ಕಿಡಿಕಾರಿದರು.

    ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನ ಒಡೆದು ಛಿದ್ರಛಿದ್ರ ಮಾಡಿದರು. ಈಗಿನ ಕಾಂಗ್ರೆಸ್ಸಿನವರು ಹಿಂದೂ-ಮುಸ್ಲಿಂ ಧರ್ಮವನ್ನ ಒಡೆದು ಛಿದ್ರ ಛಿದ್ರ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗರಂ ಆದರು.

    ಪೌರತ್ವ ಕಾಯ್ದೆ ಇಡೀ ದೇಶವನ್ನ ಒಂದು ಮಾಡುತ್ತದೆ. ಕಾಂಗ್ರೆಸ್ಸಿನವರು ಇದನ್ನ ದುರುಪಯೋಗ ಮಾಡಿಕೊಂಡು ಗಲಭೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

     

  • ಡಿಸಿಎಂ ಮಾಡದ್ದಕ್ಕೆ ಈಶ್ವರಪ್ಪ, ಶ್ರೀರಾಮುಲು ಬೆಂಬಲಿಗರ ಆಕ್ರೋಶ

    ಡಿಸಿಎಂ ಮಾಡದ್ದಕ್ಕೆ ಈಶ್ವರಪ್ಪ, ಶ್ರೀರಾಮುಲು ಬೆಂಬಲಿಗರ ಆಕ್ರೋಶ

    ಬೆಂಗಳೂರು: ಖಾತೆ ಹಂಚಿಕೆಯಲ್ಲಿ ಆರ್ ಅಶೋಕ್, ಜಗದೀಶ್ ಶೆಟ್ಟರ್, ಸಿಟಿ ರವಿ ಹಾಗೂ ಸೋಮಣ್ಣ ಅಸಮಾಧಾನ ಹೊರ ಹಾಕುತ್ತಿದ್ದಂತೆಯೇ ಇತ್ತ ಈಶ್ವರಪ್ಪ ಮತ್ತು ಶ್ರೀರಾಮುಲು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಪಡೆದಿದ್ದ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಬಾರಿ ನಿರಾಸೆಯಾಗಿದೆ. ಈಶ್ವರಪ್ಪಗೆ ಡಿಸಿಎಂ ಪೋಸ್ಟ್ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತೆ ಆಕ್ಟೀವ್ ಆಗಿದೆ.

    ಇಂಧನ ಖಾತೆ ಕೇಳಿದ್ದ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಿದ್ದಾರೆಂದು ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಶ್ವರಪ್ಪರಿಗೆ ಡಿಸಿಎಂ ಹುದ್ದೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇತ್ತ ಶ್ರೀರಾಮುಲು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಶ್ರೀರಾಮುಲು ಒಬ್ಬರೇ ಡಿಸಿಎಂ ಹುದ್ದೆ ಬೇಡಿದ್ದರು. ಆದರೆ ಡಿಸಿಎಂ ಪಟ್ಟ ಕೇಳದವರಿಗೆ ನೀಡಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಶ್ರೀರಾಮುಲು ಅವರೇ ದಯಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿರಿ. ಇಡೀ ವಾಲ್ಮೀಕಿ, ಎಸ್‍ಸಿ, ಎಸ್‍ಟಿ, ಓಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಯಡಿಯೂರಪ್ಪ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು, ವಾಲ್ಮೀಕಿ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನವನ್ನು ನೀಡಿದ್ದೀರಿ. ಈ ಜಾತಿ ರಾಜಕಾರಣ ಹೆಚ್ಚು ದಿನ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧವೂ ಶ್ರೀರಾಮುಲು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.