Tag: ಎಸ್.ಆರ್ ಹಿರೇಮಠ್

  • ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ವಜಾ ಮಾಡಿ – ಎಸ್.ಆರ್ ಹಿರೇಮಠ್ ಆಗ್ರಹ

    ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ವಜಾ ಮಾಡಿ – ಎಸ್.ಆರ್ ಹಿರೇಮಠ್ ಆಗ್ರಹ

    ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ನೇಮಕ ಮಾಡಿರುವ ಎಐಸಿಸಿ ನಡೆ ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹೀರೆಮಠ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳಂಕ ರಹಿತ ವ್ಯಕ್ತಿಗಳಿಗೆ ಉನ್ನತ ಹುದ್ದೆಗಳನ್ನು ನೀಡುವಂತೆ ಅವರು ಒತ್ತಾಯಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಎಐಸಿಸಿ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಿಕೆಶಿ ವಿರುದ್ಧ ಬೆನ್ನಿಗಾನಳ್ಳಿ ಕೇಸ್ ಸೇರಿ ಕೋಟ್ಯಂತರ ರೂ.ಗಳ ಅಕ್ರಮ ಹಗರಣಗಳ ಆರೋಪ ಇದೆ. ಈಗಾಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.

    ಡಿಕೆಶಿ ವಿರುದ್ಧದ ಹಲವು ಕೇಸುಗಳು ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಮುಂದೇ ಏನು ಬೇಕಾದರೂ ಆಗಬಹುದಾದ ಸಾಧ್ಯತೆಗಳಿದೆ. ಈ ನಡುವೆ ಅವರಿಗೆ ಕೆಪಿಸಿಸಿ ಅಧ್ಯಕ್ಷರನ್ನ ಮಾಡಿರುವುದು ಸರಿಯಲ್ಲ. ಕಳಂಕಿತರಿಗೆ ಅವಕಾಶ ನೀಡದೆ ಎಐಸಿಸಿ ಹೊಸ ರಾಜಕಾರಣಕ್ಕೆ ನಾಂದಿ ಹಾಡಬೇಕು. ಕೂಡಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ವಜಾ ಮಾಡುವಂತೆ ಹೀರೆಮಠ್ ಆಗ್ರಹಿಸಿದರು.

  • ಹೆಚ್‍ಡಿಡಿ, ಹೆಚ್‍ಡಿಕೆ, ಡಿ.ಸಿ ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಹಿರೇಮಠ್

    ಹೆಚ್‍ಡಿಡಿ, ಹೆಚ್‍ಡಿಕೆ, ಡಿ.ಸಿ ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಹಿರೇಮಠ್

    ಗದಗ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ ತಮ್ಮಣ್ಣ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಭೂಕಬಳಿಕೆ ಆರೋಪ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಡಿ.ಸಿ ತಮ್ಮಣ್ಣ, ರಾಮನಗರ ತಾಲೂಕಿನ ಬಿಡದಿ ಹೋಬಳಿ ಕೆತಿನಹಳ್ಳಿ ಗ್ರಾಮದ 110 ಗೋಮಾಳ ಸೇರಿದಂತೆ 200 ಎಕರೆ ಜಮೀನನ್ನು ಕಬಳಿಸಿದ್ದಾರೆ. ಅತಿಕ್ರಮಣ ಮಾಡಿದವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಇದೇ ವೇಳೆ ಕಪ್ಪತ್ತಗುಡ್ಡಕ್ಕೆ ಕಂಟಕ ಬಂದರೆ ಮತ್ತೆ ಹೋರಾಟ ಮಾಡುವುದಾಗಿ ಎಸ್.ಆರ್ ಹಿರೇಮಠ್ ಎಚ್ಚರಿಕೆ ನೀಡಿದರು. ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅಕ್ರಮ ಗಣಿಗಾರಿಕೆ ನಡೆಸಲು ಕಂಪನಿಗಳು ಮುಂದೆ ಬಂದಿದ್ದವು. ಬಲ್ಡೋಟಾ ಹಾಗೂ ಪೋಸ್ಕೋ ಕಂಪನಿಗಳು ಹುನ್ನಾರ ನಡೆಸಿದ್ದವು. ತೋಂಟದಾರ್ಯ ಸ್ವಾಮೀಜಿ ಹಾಗೂ ಹೋರಾಟಗಾರರು ಪ್ರತಿಭಟನೆ ನಡೆಸಿದ ಪ್ರತಿಫಲವಾಗಿ ಈ ಕಂಪನಿಗಳು ದೂರ ಸರಿದ್ದವು.

    ಬಲ್ಡೋಟಾ ಕಂಪನಿ ಪಿಐಎಎಲ್ ಸೋಗಿನಲ್ಲಿ ಬಹಳಷ್ಟು ಪ್ರಯತ್ನ ನಡೆಸಿತು. ಆದರೆ ಅದೆಲ್ಲವೂ ಶತಾಯಗತಾಯ ಸೋಲನುಭವಿಸಬೇಕಾಯಿತು. ನೂತನ ಸಚಿವ ಆನಂದ ಸಿಂಗ್ ಹಾಗೂ ಗಣಿ ಮತ್ತು ವಿಜ್ಞಾನ ಸಚಿವ ಸಿ.ಸಿ ಪಾಟೀಲ್ ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದ್ದಾರೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಯತ್ನ ಮುಂದುವರಿಸಿವೆ. ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಸುದ್ದಿಗೋಷ್ಠಿನಲ್ಲಿ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಕುಷ್ಟಗಿ, ಎಸ್.ಕೆ ಪೂಜಾರ್, ಚಂದ್ರು ಚವ್ಹಾಣ್ ಉಪಸ್ಥಿತರಿದ್ದರು.

  • ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    – ಎಚ್‍ಡಿಕೆ ಬೆಂಬಲಿಗರಿಂದ ಕೃತ್ಯ ಎಂದು ಆರೋಪ
    – ಕಾರಿನ ಚಕ್ರದ ಗಾಳಿ ತೆಗೆದ ಬೆಂಬಲಿಗರು

    ರಾಮನಗರ: ಗೋಮಾಳ ಜಮೀನು ಒತ್ತುವರಿ ಸಂಬಂಧ ಗ್ರಾಮಸ್ಥರಿಂದ ಮಾಹಿತಿ ಪಡೆಯಲು ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹಾಗೂ ಅವರ ಬೆಂಬಲಿಗರಿಗೆ ಕೋಳಿ ಮೊಟ್ಟೆಯಿಂದ ಹೊಡೆದು ಹಲ್ಲೆಗೆ ಯತ್ನಿಸಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ನಡೆದಿದೆ.

    ತಮ್ಮ ಮೇಲೆ ಹಲ್ಲೆಗೆ ಎಚ್‍ಡಿ ಕುಮಾರಸ್ವಾಮಿ ಅವರ ಬೆಂಬಲಿಗರೇ ಕಾರಣ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್, ಸ್ವರಾಜ್ ಪಕ್ಷದ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

    ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಹಾಗೂ ಅವರ ಬೆಂಬಲಿಗರು ಕೇತಗಾನಹಳ್ಳಿಗೆ ಭೇಟಿ ನೀಡಿದ್ದಾರೆ. ಗ್ರಾಮದ ದಲಿತರೊಬ್ಬರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುವ ವೇಳೆ ಬಂದ ಕೆಲವು ಗ್ರಾಮಸ್ಥರು ಹಾಗೂ ಎಚ್‍ಡಿಕೆ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ದೂರಿದ್ದಾರೆ.

    ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ ತಮ್ಮಣ್ಣ ಹಾಗೂ ಅವರ ಸಂಬಂಧಿಕರು ಬಿಡದಿ ಸಮೀಪದಲ್ಲಿ ಒಟ್ಟು 196 ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಹೈಕೋರ್ಟ್ ನಲ್ಲೂ ಸಹ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡ ಜನರ ಬಳಿ ಮಾಹಿತಿ ಪಡೆಯಲು ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಆಗಮಿಸಿದ್ದರು.

    ಎಸ್.ಆರ್ ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಬಂದಿರುವ ಮಾಹಿತಿ ಪಡೆದ ಎಚ್‍ಡಿಕೆ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಅಲ್ಲದೆ ಕೆಲವರ ಮೇಲೆ ಹಲ್ಲೆ ನಡೆಸಿ ಮೊಟ್ಟೆಯಿಂದ ಹೊಡೆದಿದ್ದು ಕಾರಿನ ಚಕ್ರಗಳ ಗಾಳಿಯನ್ನು ಸಹ ತೆಗೆದಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.

    ಬೇಕೆಂತಲೇ ಎಚ್‍ಡಿಕೆ ಬೆಂಬಲಿಗರು ಹಾಗೂ ಅವರ ಕಡೆಯವರು ಈ ರೀತಿ ಗಲಾಟೆ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಗ್ರಾಮದ ಹನುಮಂತೇಗೌಡ ಹಾಗೂ ಕೆಲವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಭ್ರಷ್ಟವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷ ಮಾಡಲು ಹೊರಟಿದ್ದಾರೆ: ಎಸ್.ಆರ್.ಹಿರೇಮಠ್

    ಭ್ರಷ್ಟವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷ ಮಾಡಲು ಹೊರಟಿದ್ದಾರೆ: ಎಸ್.ಆರ್.ಹಿರೇಮಠ್

    ಬಾಗಲಕೋಟೆ: ಕೆಪಿಸಿಸಿಗೆ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟವ್ಯಕ್ತಿಯನ್ನು ಆಯ್ಕೆ ಮಾಡಲು ಹೊರಟಿದ್ದಾರೆ ಎಂದರೆ ಅವರೆಂತ (ಕಾಂಗ್ರೆಸ್ ವರಿಷ್ಠರು) ದೀಢ ಪಂಡಿತರು ಇರಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆಶಿ ಅತ್ಯಂತ ಭ್ರಷ್ಟ ವ್ಯಕ್ತಿ. ಭ್ರಷ್ಟಾಚಾರದ ಸ್ವರೂಪ. ನಾಗರಿಕ ಸಮಾಜದಲ್ಲಿ ಇರದೆ ಜೈಲಿನಲ್ಲಿ ಇರಬೇಕಾದವರು ಎಂದು ವಾಗ್ದಾಳಿ ನಡೆಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ಏಕವನದಲ್ಲಿ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸಿಎಂ ಇದ್ದಾಗ ಏನೇನು ಮಾಡಿದ? ಅತಿಭ್ರಷ್ಟ ಶಾಮ್‍ಭಟ್‍ನನ್ನು ತಂದು ಕೆಪಿಎಸ್‍ಸಿಗೆ ಮುಖ್ಯಸ್ಥ ಮಾಡಿದ. ದರೋಡೆಕೋರ ಲಕ್ಷ್ಮಣನ ತಂದು ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥರಾನ್ನಗಿ ಮಾಡಿದ್ದರು. ಲೋಕಾಯುಕ್ತ ಸಂಸ್ಥೆ ಶಕ್ತಿಯನ್ನು ಕಸಿದುಗೊಂಡು ಎಸಿಬಿ ಮಾಡಿದರು. ಬಿಎಸ್‍ವೈ ಅಕ್ರಮ ಗಣಿಗಾರಿಕೆ ಮಾಡಿದ್ದರು. ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆ, ಭೂಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.

    ಮತದಾರರು ಸಕ್ರೀಯರಾಗಬೇಕು. ಈ ಸಾರ್ವಜನಿಕ ಸೇವೆ ಮಾಡುವವರನ್ನು ಸರಿಮಾಡಬೇಕು. ದೇಶದಲ್ಲಿ ಸರ್ವಾಧಿಕಾರ ನಡೆಯುದಿಲ್ಲ. ಈ ಹಿಂದೆ ಇಂದಿರಾಗಾಂಧಿ ಕೂಡ ಮಾಡಬಾರದ ಕೆಲಸ ಮಾಡಿದ್ದರು. ಅವರ ಮಗ ಸಂಜಯಗಾಂಧಿ, ಇಂದಿರಾಗಾಂಧಿ ಅವರು ಕ್ಯಾಬಿನೇಟ್ ಸದಸ್ಯರು ಸೋತಿದ್ದಾರೆ. ಇವತ್ತಿನ ಸ್ಥಿತಿ ನೋಡಿದರೆ ಇವರಿಗೂ ಅದೇ ಪರಿಸ್ಥಿತಿ ಬರುತ್ತೆ ಎಂದು ಪರೋಕ್ಷವಾಗಿ ಕಿಡಿಕಾರಿದರು. ಕಪ್ಪು ಹಣ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿ, ಆ ಕಡೆ ಗಮನ ಹರಿಸಿಲ್ಲ. ದೇಶದ ಆರ್ಥಿಕ ಸ್ಥಿತಿ ಕಳವಳಕಾರಿಯಾಗಿದೆ ಎಂದರು.

    ಮುಂದಿನ ಫೆಬ್ರವರಿ, ಮಾರ್ಚ್ ನಲ್ಲಿ ಶರಣ, ಸಂತ ಸಂದೇಶ ಯಾತ್ರೆ ನಡೆಯಲಿದೆ. ಒಂದು ರಾಜ್ಯದಲ್ಲಿ ಮತ್ತೊಂದು ರಾಷ್ಟ್ರಮಟ್ಟದಲ್ಲಿ ಯಾತ್ರೆ ನಡೆಯಲಿದ್ದು, ಕರ್ನಾಟಕದ ಕಾಗಿನೆಲೆಯಿಂದ ಕೂಡಲಸಂಗಮದವರೆಗೆ ಸಂದೇಶ ಯಾತ್ರೆ ನಡೆಯಲಿದೆ. ಬಳಿಕ ಬಸವಕಲ್ಯಾಣದಿಂದ ಮಹಾರಾಷ್ಟದ ಪಂಡರಾಪುರ ಮೂಲಕ ತುಕಾರಾಮ್‍ರ ಜನ್ಮಸ್ಥಳದವರೆಗೂ ಯಾತ್ರೆ ಸಾಗಲಿದೆ. ನಮ್ಮ ಸಂಸ್ಕೃತಿ, ಸಂವಿಧಾನದ ಆಶಯಗಳನ್ನು ಪುನರ್ ಸ್ಥಾಪಿಸಲು ಈ ಯಾತ್ರೆ ಮುಖ್ಯವಾಗಿದೆ ಎಂದರು.

    ಮಂಗಳೂರು ಗೋಲಿಬಾರ್ ಘಟನೆ ವಿಚಾರ, ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧವಾಗಿ ಕೆಲವೇ ಧರ್ಮಗಳನ್ನು ಉಲ್ಲೇಖಿಸಿದ್ದಾರೆ. ಗೋಲಿಬಾರ್ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇಲ್ಲವೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಈಗ ಪೊಲೀಸರ ಮೂಲಕ ತನಿಖೆ ಮಾಡಿಸಿದರೆ ಸತ್ಯ ಹೊರಬರಲ್ಲ. ಪೊಲೀಸ್ ಇಲಾಖೆ ಮುಖ್ಯಸ್ಥರಾಗಿ ತಾವೇ ಇರುವಾಗ ತನಿಖೆ ಹೇಗಾಗುತ್ತೆ? ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು ಎಂದು ಹೇಳಿದರು.

  • ಸಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡ್ಬೇಕು – ಹಿರೇಮಠ್

    ಸಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡ್ಬೇಕು – ಹಿರೇಮಠ್

    – ನಾಚಿಕೆ ಬಿಟ್ಟು ಆಪರೇಷನ್ ಕಮಲ ಮಾಡುತ್ತಿದೆ

    ಧಾರವಾಡ: ನಮ್ಮ ರಾಜ್ಯದ ರಾಜಕೀಯ ಬಿಕ್ಕಟ್ಟು ನಗೆಪಾಟಲಿನ ವಿಷಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ಕೀಳುಮಟ್ಟಕ್ಕೆ ಹೋಗಲು ಶಾಸಕರು ಮಾರಾಟಕ್ಕೆ ಇಳಿದಿದ್ದೇ ಕಾರಣ. ಇದು ಮೂರು ಪಕ್ಷಗಳಲ್ಲಿ ನಡೆದಿದೆ ಎಂದು ಕಿಡಿಕಾರಿದರು. ಕುರ್ಚಿಗಾಗಿ ಮೈತ್ರಿ ಪಕ್ಷ ಕಸರತ್ತು ನಡೆಸುತ್ತಿರುವುದನ್ನು ನೋಡಿದರೆ ನಾಚಿಕೆಯಾಗುತ್ತಿದೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ, ಬಹುಮತ ಇಲ್ಲದೆ ಹೋದರೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

    ವಿಪಕ್ಷ ಕೂಡಾ ಅದೇ ರೀತಿಯ ಕೆಲಸ ಮಾಡುತ್ತಿದೆ. ನಾಚಿಕೆ ಬಿಟ್ಟು ಆಪರೇಷನ್ ಕಮಲ ಮಾಡುತ್ತಿದೆ. ವಿಪಕ್ಷ ತನ್ನ ಕೆಲಸ ಬಿಟ್ಟು ಬೇರೆ ಏನೋ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕರ ಖರೀದಿ ಮಾಡುತ್ತಿರುವುದು ಮಹಾ ದ್ರೋಹ ಎಂದು ಕಮಲ ನಾಯಕರ ಮೇಲೆ ಕಿಡಿಕಾರಿದರು.

    ಸರ್ಕಾರ ನಡೆಸಲು ಬೇರೆಯವರಿಗೆ ಅವಕಾಶ ಕೊಡಬೇಕೋ ಅಥವಾ ಚುನಾವಣೆಗೆ ಹೋಗಬೇಕೋ ಎಂಬ ವಿವೇಚನೆ ರಾಜ್ಯಪಾಲರಿಗೆ ಬಿಡಬೇಕು. ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿ ಅಧಿಕಾರಕ್ಕಾಗಿ ಹಣದ ಆಸೆ ತೋರಿಸುವುದನ್ನು ಕೈಬಿಡಲಿ, ಸ್ಪೀಕರ್ ಈ ಗಂಭೀರ ಸಮಸ್ಯೆಯಲ್ಲಿ ಸಂವಿಧಾನದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಲಿ ಎಂದು ಹೇಳಿದರು.