ಬೆಳಗಾವಿ: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೈಸೂರಿನಲ್ಲಿ ನಂದಿನಿ ತುಪ್ಪವನ್ನು ನಕಲಿಯಾಗಿ ತಯಾರು ಮಾಡಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ನಕಲಿ ತುಪ್ಪ ತಯಾರಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೋಡೌನ್ ಮೇಲೆ ಅಧಿಕಾರಿಗಳ ದಾಳಿ
ರುಚಿ, ಪರಿಶುದ್ಧತೆಯ ಮೂಲಕ ನಂದಿನಿ ತುಪ್ಪ ಸಾಕಷ್ಟು ಪ್ರಖ್ಯಾತಿ ಆಗಿದೆ. ನಿತ್ಯ ನೂರು ಟನ್‍ಗೂ ಹೆಚ್ಚು ತುಪ್ಪ ಉತ್ಪಾದನೆ ಮಾಡಲಾಗುತ್ತದೆ. ತಿರುಪತಿ, ಅಯೋಧ್ಯೆಗೆ ನಂದಿನಿ ತುಪ್ಪ ಕಳುಹಿಸಲಾಗುತ್ತಿದೆ. ಸೇನೆಗೂ ಸಹ ನಂದಿನಿ ತುಪ್ಪ ಕಳುಹಿಸಲಾಗುತ್ತಿದೆ. ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿದರೆ ಸಾರ್ವಜನಿಕರು ಕೆಎಂಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಮಹಾರಾಷ್ಟ್ರದ ಗಡಿಯ 40 ಗ್ರಾಮಗಳು ಕರ್ನಾಟಕಕ್ಕೆ ಸೇರಿಸುವಂತೆ ಅರ್ಜಿ ಸಲ್ಲಿಕೆ
ಕಲಬೆರೆಕೆ ತುಪ್ಪದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ಕೆಎಂಎಫ್ ಜೊತೆ ಕೈಜೋಡಿಸಬೇಕು. ಮೈಸೂರಿನಲ್ಲಿ ನಕಲಿ ತುಪ್ಪ ತಯಾರಿಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ಬೆಂಗಳೂರು: ಶಾಸಕ ಎಸ್.ಟಿ.ಸೋಮಶೇಖರ್‍ರವರು ಕಳೆದ ಎಂಟು ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನವನ್ನು ಯಶವಂತಪುರ ಕ್ಷೇತ್ರಕ್ಕೆ ತಂದರೂ ಕ್ಷೇತ್ರ ಅಭಿವೃದ್ಧಿಯಾಗದಿರುವುದಕ್ಕೆ ಅವರು ಮಾಡಿರುವ 40% ಭ್ರಷ್ಟಾಚಾರವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.
ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ನಡೆಸುತ್ತಿರುವ ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ, ಯಶವಂತಪುರ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಿ ಸಂಗ್ರಹಿಸಿ ಮೋಹನ್ ದಾಸರಿ ಮಾತನಾಡಿದರು. ಯಶವಂತಪುರ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳಿವೆ. ಸರ್ಕಾರದ ಅನುದಾನವನ್ನು ತಮ್ಮ ಜೇಬಿಗೆ ಹಾಕಿಕೊಂಡು ಶಾಸಕರು ಅಭಿವೃದ್ಧಿಯಾಗಿದ್ದಾರೆ. ತೆರಿಗೆ ಕಟ್ಟಿದ ಸಾಮಾನ್ಯ ಜನರು ಜೀವಭಯದಲ್ಲಿ ವಾಹನ ಚಾಲನೆ ಮಾಡಬೇಕಾಗಿದೆ. ಸಹಿ ಸಂಗ್ರಹಿಸಲು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿರುವಾಗ ಜನರು ಶಾಸಕರಿಗೆ ಹಿಡಿಶಾಪ ಹಾಕುತ್ತಿರುವುದು ಕೇಳಿಸುತ್ತಿದೆ ಎಂದರು. ಇದನ್ನೂ ಓದಿ: ಬೀಗ ಹಾಕಿ ಕೆಲಸಕ್ಕೆ ಹೋಗಿದ್ವಿ, ಬಂದು ನೋಡುವಾಗ ಹೆಲಿಕಾಪ್ಟರ್ ಬಿದ್ದು ಮನೆಗೆ ಹಾನಿಯಾಗಿತ್ತು: ಜೈಶಂಕರ್
ಯಶವಂತಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಅಕ್ರಮವನ್ನು ಬಿಚ್ಚಿಟ್ಟಿದ್ದರೂ ಸೂಕ್ತ ತನಿಖೆಗೆ ಆದೇಶಿಸಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗದ ಹೊರತು ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್ ರಾವತ್ ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಸತೀಶ್ ಗೌಡ ಮಾತನಾಡಿ, ತೆರಿಗೆ ಕಟ್ಟುವ ಜನರಿಗೆ ಸರಿಯಾದ ರಸ್ತೆಗಳನ್ನು ಪಡೆಯುವ ಸಂಪೂರ್ಣ ಹಕ್ಕು ಇದೆ. ಇವುಗಳನ್ನು ಪಡೆಯುವುದಕ್ಕಾಗಿಯೇ ಜನರು ವಾಹನ ತೆರಿಗೆ, ರಸ್ತೆ ತೆರಿಗೆ, ಆಸ್ತಿ ತೆರಿಗೆ, ಜಿಎಸ್‍ಟಿ ಮುಂತಾದವುಗಳನ್ನು ಕಟ್ಟಿರುತ್ತಾರೆ. ರಸ್ತೆ ದುರಸ್ತಿಗಾಗಿ ಸರ್ಕಾರದ ಬೊಕ್ಕಸದಿಂದ 20 ಸಾವಿರ ಕೋಟಿ ರೂಪಾಯಿ ಖರ್ಚಾಗಿದ್ದರೂ ಗುಂಡಿಗಳು ಕಡಿಮೆಯಾಗಲಿಲ್ಲ. ದುಡ್ಡು ಕೊಳ್ಳೆ ಹೊಡೆಯುವುದಕ್ಕಾಗಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ, ಕೇವಲ ಒಂದು ತಿಂಗಳೊಳಗೆ ಕಿತ್ತುಹೋಗುವಷ್ಟು ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ನೇರ ಆರೋಪ ನಡೆಸಿದರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!
ಬೆಂಗಳೂರು ನಗರ ಎಎಪಿ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ, ಪಕ್ಷದ ಮುಖಂಡರಾದ ಸುರೇಶ್ ರಾಥೋಡ್, ಶಶಿಧರ್ , ಸುಹಾಸಿನಿ, ಚನ್ನಕೇಶವ, ಮಂಜುನಾಥ ಹಾಗೂ ಇನ್ನಿತರ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಮೈಸೂರು: ಕೋವಿಡ್‍ನಿಂದ ಮೃತಪಟ್ಟವರ ಮನೆಗೆ ಬ್ಯಾಂಕ್ ನೋಟಿಸ್ ಕೊಟ್ಟರೆ ಕ್ರಮ ನಿಶ್ಚಿತ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ಪಡೆದವರು ಕೋವಿಡ್‍ನಿಂದ ಮೃತಪಟ್ಟಿದ್ದರೆ, ಅವರು ಪಡೆದಿದ್ದ ಎಲ್ಲಾ ಸಾಲವನ್ನ ಮನ್ನಾ ಮಾಡಲಾಗಿದೆ. ಇದನ್ನು ಮೀರಿ ಯಾವುದಾದರೂ ಬ್ಯಾಂಕ್, ಮೃತಪಟ್ಟವರ ಮನೆಗೆ ನೋಟಿಸ್ ಕೊಟ್ಟರೆ ಬ್ಯಾಂಕ್‍ನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್
ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಧೀಮಂತ ನಾಯಕನಿಗೆ ಗೌರವಪೂರ್ಣ ನಮನಗಳು.
ಇಂದು ಮೈಸೂರಿನಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. pic.twitter.com/dao86RQMvt
ದಾವಣಗೆರೆಯ ಒಂದು ಸಹಕಾರ ಬ್ಯಾಂಕ್ ನೋಟಿಸ್ ನೀಡಿದೆ ಎಂಬ ವಿಚಾರ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿದೆ. ಆದರೆ ಬ್ಯಾಂಕ್‍ನವರು ನೋಟಿಸ್ ಕೊಟ್ಟಿಲ್ಲ ಎಂದಿದ್ದಾರೆ. ನಾನು ಬೆಂಗಳೂರಿಗೆ ಹೋಗಿ ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಈ ವಿಚಾರದಲ್ಲಿ ತಪ್ಪಾಗಿದ್ದರೆ ಕ್ರಮ ನಿಶ್ಚಿತ ಎಂzದು ತಿಳಿಸಿದ್ದಾರೆ. ಇದನ್ನೂ ಓದಿ: ನಾನ್ ಬೆಡ್‍ಶೀಟ್, ತಲೆದಿಂಬು- ಬೆಡ್‍ರೂಮ್ ಫೋಟೋ ವೈರಲ್
ಬೆಂಗಳೂರು: ರಾಜಕೀಯದಲ್ಲಿ ಇಂತದೆಲ್ಲಾ ಇದೆ ಅಂತ ಗೊತ್ತಾಗಿದ್ದರೆ ದೇವರಾಣೆ ರಾಜಕೀಯಕ್ಕೆ ಬರುತ್ತಿರಲಿಲ್ಲ. ಬಂದು ತಪ್ಪು ಮಾಡಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ ಯಾನೆ ಕೆಜಿಎಫ್ ಬಾಬು ಕಣ್ಣೀರಿಡುತ್ತಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಕೆಲದಿನಗಳ ಹಿಂದೆ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಆರೋಪಿಸಿದ್ದರು. ಈ ಬಗ್ಗೆ ವಸಂತ ನಗರದ ತಮ್ಮ ಕಚೇರಿಯಲ್ಲಿ ಹೆಂಡತಿ ಮಕ್ಕಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಕೆಜಿಎಫ್ ಬಾಬು, ನನಗೆ ಪತ್ರಿಕಾಗೋಷ್ಠಿ ನಡೆಸೋಕೆ ಇಷ್ಟ ಇರಲಿಲ್ಲ. ನನಗೆ ಹೆಂಡತಿ ಮಗಳು ಅಂದರೆ ಪ್ರಾಣ. ನವೀದ್ ಅನ್ನೋನು ನನ್ನ ಜೊತೆ ಜೆವಿಯಲ್ಲಿ 200-300 ಕೋಟಿ ವ್ಯವಹಾರಕ್ಕೆ ಮುಂದಾಗಿ ನನ್ನ ಆಸ್ತಿಯಲ್ಲಿ 200 ಕೋಟಿ ನಷ್ಟ ಮಾಡಿದ. ನಾನು ಮದುವೆ ಆದ ಎರಡನೇ ಹೆಂಡತಿ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. 2 ವರ್ಷ ನಾವಿಬ್ಬರು ಮದುವೆ ಆಗಿದ್ದು ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ನವೀದ್ ನನ್ನ ಮೊದಲ ಹೆಂಡತಿಗೆ ಈ ವಿಷಯ ತಿಳಿಸಿ ನಿಮಗೆ ಆಸ್ತಿ ಸಿಗಲ್ಲ ಅಂತ ತಲೆ ಕೆಡಿಸಿದ್ದರು. ಬೇರೆ ಬೇರೆ ಕಡೆ ಕರೆದೊಯ್ದು 6 ತಿಂಗಳು ಮೊದಲ ಹೆಂಡತಿ ನನ್ನ ಕೈಗೆ ಸಿಗದಂತೆ ಮಾಡಿದರು. ಕಷ್ಟದಲ್ಲಿ ಮೊದಲ ಹೆಂಡತಿ ನನ್ನ ಜೊತೆಗಿದ್ದಳು ಹಾಗಾಗಿ ಅವಳನ್ನು ನಾನು ಬಿಡಲು ಸಿದ್ಧನಿರಲಿಲ್ಲ. ಡೊಮೆಸ್ಟಿಕ್ ವೈಲೆನ್ಸ್ ಕೇಸ್ ಹಾಕಿಸಿದ್ದರು ಇಬ್ಬರು ವಕೀಲರು ಸೇರಿ. 6 ತಿಂಗಳು ಬಿಟ್ಟು ಹೆಂಡತಿ ಕೋರ್ಟ್‍ನಲ್ಲಿ ನನಗೆ ಸಿಕ್ಕಳು. ಸಾವಿರ ಕೋಟಿ ಕೇಸು ಹಾಕಿದ್ದೀಯಾ ಹುಚ್ಚಿ ಎಲ್ಲಾ ನೀನು ಬಂದ ಮೇಲೆ ಸಂಪಾದಿಸಿದ್ದು ಎಲ್ಲಾ ನಿನ್ನದೆ ನಾನೇ 2ನೇ ಹೆಂಡತಿಯನ್ನು ಕರೆದುಕೊಂಡು ಹೊರಗೆ ಹೋಗುತ್ತೇನೆ ಎಂದಿದ್ದೆ. ಆಗ ಅಲ್ಲೇ ಗಟ್ಡಿಯಾಗಿ ಹಿಡಿದು ಕೊಂಡು ಅತ್ತಳು ಆಮೇಲೆ ನಾವು ಒಟ್ಟಿಗೆ ಇದ್ದೇವೆ.
ನಂತರ ಮಾತನಾಡಿದ ಮೊದಲ ಪತ್ನಿ ರುಕ್ಸಾನ, ಯಾರ ಮನೆಯಲ್ಲಿ ಜಗಳ ಆಗಲ್ಲ. ನಮ್ಮನೆಯವರು ಎರಡನೇ ಮದುವೆ ಆದರು ಅಂತ ಜಗಳವಾಯಿತು. ಆ ಟೈಮಲ್ಲಿ ಈ ಕೇಸನ್ನು ಹಾಕಲಾಗಿತ್ತು. ನಮ್ಮನೆಯವರು ದೇವರಂತ ಮನುಷ್ಯ. ಒಟ್ಟಿಗೆ ಬಾಳುತ್ತಿದ್ದೇವೆ. ಕೋಪದಲ್ಲಿ ಆವಾಗ ಕೇಸು ಹಾಕಿದ್ದೆ. ಅವರೊಬ್ಬ ಒಳ್ಳೆಯ ಮನುಷ್ಯ. ಈ ಹಿಂದೆ ನಡೆದದ್ದು ಮುಗಿದ ಅಧ್ಯಾಯ. ರಾಜಕೀಯದಲ್ಲಿ ಅದೆಲ್ಲಾ ಮಾತನಾಡಿ ನಮ್ಮ ಮನೆ ಸಂಸಾರ ಹಾಳು ಮಾಡಬೇಡಿ. ಮಗಳ ಜೀವನ ಹಾಳುಮಾಡಬೇಡಿ ಎಂದು ಕಣ್ಣೀರಿಟ್ಟರು.
ಎರಡನೇ ಪತ್ನಿ ಶಾಝಿಯ ಮಾತನಾಡಿ, ರಾಜಕೀಯದಲ್ಲಿ ಯಾಕೆ ಆರೋಪ ಮಾಡ್ತೀರ ನಿಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು ಇಲ್ವಾ? ನಿಮಗೂ ಮಗಳು ಇಲ್ವಾ ಅವಳ ವಿಚಾರದಲ್ಲೂ ಹೀಗೆ ಮಾಡ್ತೀರಾ? ಕುಟುಂಬ ಬೇರೆ ರಾಜಕೀಯ ಬೇರೆ ಕುಟುಂಬದ ವಿಚಾರ ರಾಜಕೀಯಕ್ಕೆ ಯಾಕೆ ತರಬೇಕು? ಬಿಲ್ಡರ್ ನವೀದ್ ಈಗಲೂ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹಿಂದಿನ ಘಟನೆ ನಡೆದು 10 ವರ್ಷ ಆಗಿದೆ. ರಾಜಕಾರಣದಲ್ಲಿ ಹೀಗಾಗುತ್ತೆ ಅಂತ ಗೊತ್ತಿದ್ದರೆ ಇಬ್ಬರು ಹೆಂಡತಿಯರು ಸೇರಿ ಬಾಬು ಅವರ ಕಾಲು ಹಿಡಿದು ರಾಜಕೀಯ ಬೇಡ ಎನ್ನುತ್ತಿದ್ದೆವು. ಎಸ್.ಟಿ. ಸೋಮಶೇಖರ್‌ಗೆ ನವೀದ್ ಈ ಎಲ್ಲಾ ದಾಖಲೆ ಕೊಟ್ಟಿರುವುದು. ನಮ್ಮ ಕುಟುಂಬದ ವಿರುದ್ಧ ಮಾತನಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದರು. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!
ಮೈಸೂರು: ಸಿದ್ದರಾಮಯ್ಯ – ಜಿಟಿಡಿ ನಡುವಿನ ಲವ್ ನಿಂದ ನಮಗೆ ಯಾವ ಎಫೆಕ್ಟ್ ಆಗಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಟಿಡಿ ನಡುವಿನ ಲವ್ ನಿಂದ ನಮಗೆ ಯಾವ ಎಫೆಕ್ಟ್ ಆಗಲ್ಲ. ಕಾರಣ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಜಿಟಿಡಿ ಮೇಲೆ ದ್ವೇಷ ಕುದಿಯುತ್ತಿದ್ದಾರೆ. ಈಗ ಜಿಟಿಡಿ ಹೊಸದಾಗಿ ಸಿದ್ದರಾಮಯ್ಯ ಜೊತೆ ಲವ್ ಆರಂಭಿಸಿದ್ದಾರೆ. ಈ ಲವ್ ಕುದುರಿಸಲು, ಸಿದ್ದರಾಮಯ್ಯ ಅವರ ದ್ವೇಷ ಕಡಿಮೆ ಮಾಡಿಸಲು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅರ್ಚನೆ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ : ಅಖಿಲೇಶ್ ಯಾದವ್
ಸಿದ್ದರಾಮಯ್ಯ ತಮ್ಮ ಲೈಫ್‍ನಲ್ಲಿ ಯಾವತ್ತಿಗೂ ಕೂಲ್ ಆದವರೇ ಅಲ್ಲ. ಅವರದ್ದು ಯಾವತ್ತಿದ್ದರೂ ದ್ವೇಷ ದ್ವೇಷವೇ, ಜಿಟಿಡಿ ಮೇಲೆ ಅವರಿಗೆ ಬಹಳಷ್ಟು ದ್ವೇಷವಿದೆ. ಈ ದ್ವೇಷ ಕಡಿಮೆ ಆಗುವುದೇ ಇಲ್ಲ. ಅಲ್ಲದೇ ಒಂದೂವರೆ ವರ್ಷದ ನಂತರದ ಚುನಾವಣೆಗೆ ಈಗಲೇ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಜಿಟಿಡಿ ಸಂಕಲ್ಪ ಮಾಡಿಸಿದ್ದಾರೆ. ಒಂದೂವರೆ ವರ್ಷದ ನಂತರ ಇನ್ನೂ ಯಾರಿಗೆ ಸಂಕಲ್ಪ ಮಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು-WHO
ಇದೇ ವೇಳೆ ವಿಧಾನ ಪರಿಷ್ ಚುನಾವಣೆಯ ಮೈಸೂರಿನ ಜೆಡಿಎಸ್ ಅಭ್ಯರ್ಥಿ ಜನರ ಕಿಡ್ನಿ ಕದ್ದು ಮಾರಿದ್ದಾರೆ. ಇವರಿಂದ ನನ್ನ ಕಿಡ್ನಿಯನ್ನು ಜೋಪಾನವಾಗಿ ಇಟ್ಟು ಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರು: ದಿನದಿನದಿಂದ ದಿನಕ್ಕೆ ವಿಧಾನ ಪರಿಷತ್ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಮೈಸೂರು ಜೆಡಿಎಸ್ ಆಭ್ಯರ್ಥಿ ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಗರಂ ಆಗಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಒಂದು ಸೈಟನ್ನು ನಾಲ್ಕು ಜನರಿಗೆ ರಿಜಿಸ್ಟ್ರೇಷನ್ ಮಾಡಿಕೊಡುವವನು. ಯಾವುದೋ ನಿಗಮದ ಅಧ್ಯಕ್ಷ ಆಗಿದ್ದ ವೇಳೆ ಕಿಡ್ನಿ ಮಾರಾಟ ಮಾಡ್ತಿದ್ದ. ಆತ ಕಿಡ್ನಿ ಮಾರಾಟ ಮಾಡೋದ್ರಲ್ಲಿ ನಂಬರ್ ಒನ್ ಎಂದು ಮಂಜೇಗೌಡ ಅವರನ್ನು ಸೋಮಶೇಖರ್ ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಅಂತಿಮ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಸಿ.ಎನ್ ಮಂಜೇಗೌಡ ಅವರು ಜೆಡಿಎಸ್ ಗೆ ನೆಗೆದು ಆ ಪಕ್ಷದ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಮಂಜೇಗೌಡರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಹೊಸಬರಾಗಿದ್ದು ಮಾಜಿ ಸಚಿವ ಸಾ.ರಾ ಮಹೇಶ್, ಶಾಸಕರುಗಳಾದ ಕೆ.ಮಹಾದೇವ, ಎಂ.ಅಶ್ವಿನ್ ಕುಮಾರ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.
ಮೈಸೂರು: ಜನಪ್ರತಿನಿಧಿಗಳಿಗೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜನಪ್ರತಿನಿಧಿಗಳು ಖರೀದಿ ವಸ್ತುವಲ್ಲ. ಅವರು ಸಿಟಿ ಮಾರ್ಕೆಟ್ ನಲ್ಲಿ ಸಿಗುವ ಫಿಶ್ ಅಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರು ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರು ಸ್ಥಳೀಯ ಜನಪ್ರತಿನಿಧಿಗಳನ್ನು ಖರೀದಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರೂ ಖರೀದಿ ವಸ್ತುವಲ್ಲ. ಯಾವುದೇ ಖರೀದಿ ಇಲ್ಲ. ಕಾಂಗ್ರೆಸ್ಸಿವರಿಗೆ ಹೇಳಲು ಬೇರೇನೂ ಇಲ್ಲ. ಅವರು ಗಾಜಿನ ಮನೆಯಲ್ಲಿ ಕೂತು ಮತ್ತೊಬ್ಬರ ಮನೆಗೆ ಕಲ್ಲು ಎಸೆಯುವುದು ಸರಿಯಲ್ಲ ಎಂದರು.
ಇದೇ ವೇಳೆ ಮಂಡ್ಯದಲ್ಲಿ ದಿನೇಶ್ ಗೂಳಿಗೌಡ ಅವರ ಸ್ಪರ್ಧೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ 7-8 ದಿನದ ಹಿಂದೆ ಹೇಳಿದಾಗಲೇ ಗೊತ್ತಾಗಿದ್ದು. ಪಕ್ಷದ ಮುಖಂಡರ ಮಾತಿನ ಮೇರೆಗೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಕಾಂಗ್ರೆಸ್ ನಿಂದ ಮಂಡ್ಯದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ ನಂತರ ಕೆಲಸದಿಂದ ತೆಗೆದು ಪಕ್ಷದ ನಾಯಕರ ಗಮನಕ್ಕೂ ತರಲಾಯಿತು ಎಂದು ಹೇಳಿದರು.
ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ಸಿಗೆ ನಿಲ್ಲಿಸುವ ಹೇಯ ಕೆಲಸ ಮಾಡಿಲ್ಲ. ಯಾರು ಏನೇ ಹೇಳಲಿ ನನಗೆ ಆತ್ಮಸಾಕ್ಷಿಯಿದೆ. ನನ್ನ 22 ವರ್ಷ ರಾಜಕೀಯ ಜೀವನದಲ್ಲಿ ಹಲ್ಕಟ್ ರಾಜಕಾರಣ ಮಾಡಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಂಡಿದ್ದೇನೆ. ಪಕ್ಷ, ಸರ್ಕಾರ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನ 25 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ: ಅರವಿಂದ್ ಕೇಜ್ರಿವಾಲ್
ಮಳೆ ಹಾನಿಯಾಗಿದ್ದರೂ ಬಿಜೆಪಿಗೆ ಚುನಾವಣೆ ಮುಖ್ಯ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹಾನಿಗೀಡಾದ ಸ್ಥಳಗಳಿಗೆ ಮುಖ್ಯಮಂತ್ರಿಗಳೇ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಸಿಇಒಗಳ ಜೊತೆ ಮಾತುಕತೆ ನಡೆಸಿ ಹಣ ಬಿಡುಗಡೆ ಮಾಡುತ್ತಿದ್ದಾರೆ. 25 ಸ್ಥಾನಗಳಲ್ಲಿ 7 ಕಡೆ ಮಾತ್ರ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದೆಡೆ ಅವರಿಗೆ ಅವಕಾಶವಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಏನೂ ಹೇಳಲ್ಲ ಎಂದು ಹೇಳಿದರು.
ರಘು ಕೌಟಿಲ್ಯ ಅವರು ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲುವು ಪಡೆಯಲಿದ್ದಾರೆ. ಅವರ ಗೆಲುವಿಗೆ ತಂಡವಾಗಿ ಕೆಲಸ ಮಾಡಲಿದ್ದೇವೆ. ನಾವು ಕೂಡ ಕ್ಷೇತ್ರದಲ್ಲಿ ಉಳಿದು ಅವರ ಗೆಲುವಿಗೆ ಶ್ರಮಿಸಲಿದ್ದೇವೆ. ಚುನಾವಣೆ ಸಂಬಂಧ ಯಾರು ಯಾರನ್ನು ಬೇಕಾದರೂ ಭೇಟಿಯಾಗಬಹುದು. ಸಂದೇಶ್ ನಾಗರಾಜ್ ಹಿರಿಯರು, 12 ವರ್ಷ ಕೆಲಸ ಮಾಡಿದ್ದಾರೆ. ವಿಧಾನಪರಿಷತ್ ನಲ್ಲಿ, ಮೈಸೂರು ಮೇಯರ್ ಚುನಾವಣೆಯಲ್ಲಿ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.
ಮಂಡ್ಯ: ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ನಾನು ನನ್ನ ಸ್ವಂತ ಶಕ್ತಿಯಿಂದ ರಾಜಕೀಯ ಪ್ರವೇಶ ಮಾಡಿದೆ. 20-22 ವರ್ಷಗಳ ಕಾಲ ಎಲ್ಲಾ ಹಂತಗಳನ್ನು ಮುಗಿಸಿ ಈ ಹಂತಕ್ಕೆ ಬಂದಿದ್ದೇನೆ. ಯಡಿಯೂರಪ್ಪ ಅವರ ಆಶೀರ್ವಾದದಿಂದ ಸಹಕಾರ ಸಚಿವನಾಗಿದ್ದೇನೆ. ನಾನು ಪಕ್ಷಕ್ಕೆ ಮೋಸ ಮಾಡಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಜನ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನಮ್ಮ ಇಲಾಖೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನನ್ನ ಬಳಿ ಬಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದಾಕ್ಷಣವೇ ಕೆಲಸದಿಂದ ತೆಗೆಯಲಾಯಿತು. ನಿನ್ನ ಹಣೆಬರಹ, ನೀನುಂಟೂ, ನಿನ್ನ ಚುನಾವಣೆ ಉಂಟು ಎಂದು ಹೇಳಿ ಕಳುಹಿಸಿದೆ ಎಂದರು.
ನಾನು ಸಹಕಾರ ಸಚಿವರಾದ ಬಳಿಕ ನಮ್ಮ ಪಕ್ಷದ ಹಿರಿಯ ಮುಖಂಡರೊಬ್ಬರು ನನಗೆ ಕರೆ ಮಾಡಿ, ನಮ್ಮ ಹುಡುಗನೊಬ್ಬನಿದ್ದಾನೆ. ಆತನನ್ನು ನಿಮ್ಮ ಇಲಾಖೆಗೆ ತೆಗೆದುಕೊಳ್ಳಿ. ಹಿರಿಯರ ಮಾತಿಗೆ ಗೌರವಕೊಟ್ಟು ವಿಶೇಷ ಕರ್ತವ್ಯಾಧಿಕಾರಿಯಾಗಿ ತೆಗೆದುಕೊಳ್ಳಲಾಯಿತು. 7-8 ದಿನದ ಹಿಂದೆ ನನ್ನ ಮನೆಗೆ ಬಂದು ನಾನು ಎಂಎಲ್ ಸಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ ಎಂದರು. ಎಲ್ಲಿಂದ ಎಂದು ಕೇಳಿದ್ದಕ್ಕೆ ಮಂಡ್ಯ ಅಂದರು. ಆಗ ಆಶ್ಚರ್ಯ ಆಯ್ತು. ನಿನಗೆ ದೇವರು ಒಳ್ಳೇದು ಮಾಡಲಿ ಎಂದು ಹೇಳಿ ಕೆಲಸದಿಂದ ತೆರವು ಮಾಡಿದೆ. ಕೂಡಲೇ ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತಂದೆ ಎಂದರು.
ಮಂಡ್ಯದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಾರಾಯಣಗೌಡ ಮಾತನಾಡಿದ್ದರು. ಈ ವಿಚಾರವಾಗಿ ಮೈಸೂರಿನಲ್ಲಿ ಕೂಡ ಪ್ರಸ್ತಾಪವಾಗಿತ್ತು. ಆದರೆ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ ವ್ಯಕ್ತಿ ಇಲ್ಲಿಗೆ ಮತ್ತೊಂದು ಪಕ್ಷದಿಂದ ಅಭ್ಯರ್ಥಿ ಆಗುತ್ತಾರೆ ಎಂಬ ಮುನ್ಸೂಚನೆ ಕೂಡ ಸಿಗಲಿಲ್ಲ. ಇದು ವಾಸ್ತವ. ಕೆಲವರು ಮಂಡ್ಯ ನಮ್ಮದೇ, ಇಲ್ಲಿ ನಾವೇ ಎಂದುಕೊಂಡಿದ್ದಾರೆ. ಎಲ್ಲಿಂದಲೋ ಬಂದು ನಾವೇ ನಾವೇ ಎಂದುಕೊಂಡಿರುವವರನ್ನು ಇಲ್ಲಿಂದ ಹೋಗಿಸುವುದು ನಿಮ್ಮ ಕೈಯಲಿ ಇದೆ ಎಂದು ಮತದಾರರಿಗೆ ಕರೆಕೊಟ್ಟರು.
ಸಹಕಾರ ಇಲಾಖೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕಾಂಗ್ರೆಸ್ಸಿಗೆ ಹೋಗಿದ್ದಾರೆ. ಮುಂದೆ ಸೋಮಶೇಖರ್ ಕೂಡ ಕಾಂಗ್ರೆಸ್ಸಿಗೆ ಹೋಗ್ತಾರೆ ಎಂದು ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆ ವೆಟರ್ನರಿ ಇನ್ಸ್ ಪೆಕ್ಟರ್. ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ನಿಜವಾದ ಮಣ್ಣಿನ ಮಕ್ಕಳು ಸರ್ಕಾರದಲ್ಲಿ ಕೃಷಿ, ಸಹಕಾರ ಇಲಾಖೆ ಕೇಳಬೇಕು. ಆದರೆ ಈ ಎರಡು ಇಲಾಖೆ ಬಿಟ್ಟು ಪಿಡಬ್ಲ್ಯೂಡಿ, ಹಣಕಾಸು, ಇಂಧನ ಇಲಾಖೆ ಕೇಳ್ತಾರಾ ಎಂದು ಪ್ರಶ್ನಿಸಿದರು.
ಅವರು ಮಾತ್ರ ಮಣ್ಣಿನ ಮಕ್ಕಳು, ನಾವು ಮಣ್ಣಿನ ಮಕ್ಕಳಲ್ಲವೇ ಎಂದು ನಾರಾಯಣಗೌಡ ನನ್ನ ಬಳಿ ಬಂದು ಹೇಳಿದಾಗ ನೀನು ಮಣ್ಣಿನ ಮಗನಾದರೆ ಈ ಸರ್ಕಾರ ತೆಗಿ ಎಂದು ತಮಾಷೆಗೆ ಹೇಳಿದೆ. ಆದರೆ ಅದನ್ನು ಮಾಡೇ ಬಿಟ್ಟರು. ನಾವು ಬಾಂಬೆಗೆ ಹೋಗುವುದಕ್ಕೆ ಮುಂಚೆ ಅವರು ಕೂತಿದ್ದರು ಎಂದು ಹಿಂದಿನ ಘಟನಾವಳಿಗಳನ್ನು ನೆನೆಪಿಸಿದರು. ಯಾವುದೇ ಖಾತೆ ಕೊಡಲಿ ಅದಕ್ಕೆ ಜೀವ ತುಂಬಿ ಕೆಲಸ ಮಾಡುವವರು ನಾರಾಯಣಗೌಡ. ಅವರು ಮಂಡ್ಯದಲ್ಲಿ ಸೋಲುತ್ತಾರೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ನಾನು 100% ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಮಂಡ್ಯದ ಜನರ ಪ್ರೀತಿ ವಿಶ್ವಾಸ ಗಳಿಸಿ ಗೆದ್ದು ಬಂದರು. ಇದನ್ನೂ ಓದಿ: ಗೆಹ್ಲೋಟ್ ಸರ್ಕಾರದ ಸಚಿವ ಸಂಪುಟ ಪುನಾರಚನೆ – 15 ಮಂದಿ ಸಂಪುಟ ಸೇರ್ಪಡೆ
ಇದುವರೆಗೆ ಐದು ವಿಧಾನಪರಿಷತ್ ಚುನಾವಣೆ ನೋಡಿದ್ದೇನೆ. ಟಿಕೆಟ್ ಸಿಗಲಿ, ಬಿಡಲಿ ಗ್ರಾಪಂ ಸದಸ್ಯರ ಮನೆಮನೆಗೆ ತೆರಳಿ, ಅವರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸುವ ವ್ಯಕ್ತಿ ಇದ್ದರೆ ಅದು ಮಂಜು ಮಾತ್ರ. ಗ್ರಾಪಂ ಸದಸ್ಯರ ಮೇಲಿನ ಅವರ ಕಾಳಜಿ ನೋಡಿದರೆ ಅವರು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ. ಅದೇ ಅಪ್ಪಾಜಿಗೌಡ ಎಂದಾದರೂ ಗ್ರಾಪಂ ಸದಸ್ಯರ ಮನೆಗೆ ಭೇಟಿ ಕೊಟ್ಟಿದ್ದಾರೆಯೇ? ಎಲ್ಲಿ ಸೈಟ್ ಇದೆ, ಎಲ್ಲಿ ಜಮೀನಿದೆ? ಯಾವುದನ್ನು ಮಾರಬೇಕು, ಯಾವುದನ್ನು ಖರೀದಿಸಬೇಕು ಎಂಬುದರ ಕಡೆಯಷ್ಟೇ ವಿಶೇಷ ಗಮನ ಕೊಡುತ್ತಾರೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಶ್ವರಪ್ಪ ಕೊಟ್ಟ ಒಂದು ಹೇಳಿಕೆಯಿಂದ ಸಿದ್ದರಾಮಯ್ಯ 40 ಸಾವಿರ ಮತಗಳ ಅಂತರದಲ್ಲಿ ಸೋತರು. ಈಶ್ವರಪ್ಪ, ಶೋಭಾ ಕರಂದ್ಲಾಜೆ ಅವರು ರೈತರ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ 7 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಎಲ್ಲಾ ಕಡೆ ಯಶಸ್ವಿಯಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಲಿಗೆ ನೀರು ಬೆರೆಸಿ ಮೋಸದಿಂದ ಸಂಪಾದನೆ ಮಾಡುವುದನ್ನು ಎಲ್ಲೂ ಕಂಡಿಲ್ಲ. ಈ ಕುರಿತು ಸಿಒಡಿ ತನಿಖೆಗೆ ಆದೇಶಿಸಿದ್ದು ಶೀಘ್ರದಲ್ಲೇ ವರದಿ ಕೈ ಸೇರಲಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ರಾಜಸ್ಥಾನ : ಎಲ್ಲ ಸಚಿವರಿಂದ ರಾಜೀನಾಮೆ ಪಡೆದ ಗೆಹ್ಲೋಟ್
ಬೆಂಗಳೂರು: ಸ್ವತಂತ್ರ ಭಾರತದ ಮೊದಲ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ನಿಮಿತ್ತ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಗಣ್ಯರು ಸೋಶಿಯಲ್ ಮೀಡಿಯಾ ಮೂಲಕವಾಗಿ ಶುಭ ಕೋರುತ್ತಿದ್ದಾರೆ.
ಇಂದು ನವೆಂಬರ್ 14 ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದೇ ಕರೆಯುತ್ತಿದ್ದರು. ಅವರಿಗೂ ಮಕ್ಕಳೆಂದರೆ ತುಂಬ ಅಚ್ಚುಮೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರ ಜನ್ಮದಿನವನ್ನು ಭಾರತದಲ್ಲಿ ಬಾಲ ದಿವಸ್ ಅಥವಾ ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಜವಾಹರ್ ಲಾಲ್ ನೆಹರು ಅವರ 132ನೇ ಜನ್ಮಜಯಂತಿ ಆಚರಿಸಲಾಗುತ್ತಿದ್ದು ಮಕ್ಕಳ ದಿನಾಚರಣೆಯ ಅಂಗವಾಗಿ ಗಣ್ಯರು ಶುಭಕೋರಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 11 ವರ್ಷದ ಬಳಿಕ ಮೈದುಂಬಿದ ಸುವರ್ಣಾವತಿ ಜಲಾಶಯ- ನದಿ ಪಾತ್ರದ ಜನರಿಗೆ ಎಚ್ಚರಿಕೆ
ದೇಶದ ಪ್ರಥಮ ಪ್ರಧಾನಮಂತ್ರಿ ಪಂ. ಶ್ರೀ ಜವಾಹರಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು. #ChildrensDay2021pic.twitter.com/IpkoWFemT1
ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು ಎಂದು ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡುವ ಮೂಲಕವಾಗಿ ಮಕ್ಕಳ ದಿನಾಚರಣೆಯ ಶುಭ ಕೋರಿದ್ದಾರೆ.
Tributes to Pandit Jawaharlal Nehru Ji on his birth anniversary.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದೇ ಸಾಲಿನಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಜನ್ಮದಿನದಂದು ಅವರಿಗೆ ನಮನಗಳು ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?
ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ, ಪ್ರಥಮ ಪ್ರಧಾನಮಂತ್ರಿ, ಭಾರತರತ್ನ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿಯಂದು, ಅವರ ಸಂಸ್ಮರಣೆಗಳ ಜೊತೆಗೆ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಾಡಿನ ಎಲ್ಲ ನಲ್ಮೆಯ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಭವ್ಯಭಾರತದ ನಿರ್ಮಾಣಕಾರರಾದ ಮಕ್ಕಳ ಬೌದ್ಧಿಕ, ಶೈಕ್ಷಣಿಕ ಪ್ರಗತಿಗೆ ನೆರವಾಗುವ ಮೂಲಕ ಮಕ್ಕಳ ಬಾಳು ಬೆಳಗೋಣ. ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಜಯಂತಿಯ ನಮನಗಳನ್ನು ತಿಳಿಸಿದ್ದಾರೆ.
ಸಚಿವ ಎಸ್ ಟಿ ಸೋಮಶೇಖರ್ ಅವರು ನಾವು ನೋಡದ ಭವಿಷ್ಯದ ಸಮಯಕ್ಕೆ ನಾವು ಕಳುಹಿಸುವ ಜೀವಂತ ಸಂದೇಶಗಳೆಂದರೆ ಮಕ್ಕಳು. ಮಕ್ಕಳ ದಿನಾಚರಣೆಯ ಶುಭಾಶಯಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಶುಭಾಷಯ ತಿಳಿಸಿದ್ದಾರೆ.
ಮೈಸೂರು: ಸತತ 10 ದಿನಗಳಿಂದ ಬಿದ್ದ ಭಾರೀ ಮಳೆಯ ಪರಿಣಾಮ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ದುರಸ್ತಿ ಕಾರ್ಯ ತ್ವರಿತವಾಗಿ ನಡೆಸಲು ಜಿಲ್ಲಾಧಿಕಾರಿಗಳಿಗೆ ಸಹಕಾರ ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಖಡಕ್ ಸೂಚನೆ ನೀಡಿದ್ದಾರೆ.
ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಚಾಮುಂಡಿಬೆಟ್ಡದಲ್ಲಿ ಬೃಹತ್ ನಂದಿ ಪ್ರತಿಮೆಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ರಸ್ತೆ ಹಾನಿಗೀಡಾಗಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಮುಂದಾಗಬಹುದಾದ ಅನಾಹುತ ತಪ್ಪಿಸಲು ಕೂಡಲೇ ಆ ರಸ್ತೆ ಸಂಚಾರವನ್ನು ಬಂದ್ ಮಾಡಿ, ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಆದಷ್ಟು ಶೀಘ್ರದಲ್ಲಿ ನಾನು ಬಂದು ಪರಿಶೀಲಿಸುತ್ತೇನೆ. ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ತೆಗೆದುಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್ – ಅರ್ಧಗಂಟೆ ಸರ್ವಿಸ್ ರಸ್ತೆಯಲ್ಲಿ ನಿಂತ ವಾಹನಗಳು
ಕಳೆದ ಕೆಲದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸಹಿತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದಲ್ಲಿ ಮತ್ತೆ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ:ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ