Tag: ಎಸ್ ಟಿ ಸೋಮಶೇಖರ್

  • ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಆಫರ್ ಬರಲಿಲ್ಲ: ಸೋಮಶೇಖರ್ ಸ್ಪಷ್ಟನೆ

    ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಆಫರ್ ಬರಲಿಲ್ಲ: ಸೋಮಶೇಖರ್ ಸ್ಪಷ್ಟನೆ

    ಮೈಸೂರು: ನನಗೆ ಕಾಂಗ್ರೆಸ್ (Congress) ಪಕ್ಷದಿಂದ ಯಾವುದೇ ಆಫರ್‌ಗಳು ಬರಲಿಲ್ಲ. ಸಚಿವ ನಾರಾಯಣ ಗೌಡ (Narayana Gowda) ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ನನಗೆ ಆಫರ್ ಬರಲಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ (BJP) ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿ ಎಂದು ಜವಾಬ್ದಾರಿ ಕೊಟ್ಟಿದ್ದಾರೆ. ಆ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್ (S.T.Somashekhar) ಸ್ಪಷ್ಟನೆ ನೀಡಿದರು.

    ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಒಂದು ತಿಂಗಳಿನಿಂದ ಬರದಿರುವುದಕ್ಕೆ ಚುನಾವಣೆ(Election) ಕಾರಣವಲ್ಲ. ಇಲಾಖೆಯ ಬೇರೆ ಬೇರೆ ಕಾರ್ಯಕ್ರಮಗಳ ಕಾರಣದಿಂದಾಗಿ ಬೇರೆ ಜಿಲ್ಲೆಗಳಿಗೆ ಓಡಾಡುತ್ತಿದ್ದೇನೆ. ಹೀಗಾಗಿ ಬರಲಿಲ್ಲ ಅಷ್ಟೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijay Sankalpa Yatra) ನನಗೆ ಬೆಂಗಳೂರು ಜವಾಬ್ದಾರಿ ಇದೆ. ಅಲ್ಲಿ ಆ ಕೆಲಸ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ- 8.12 ಕೋಟಿ ಹಣ ಸೀಜ್

    ಬಿಜೆಪಿ ಶಾಸಕನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ. ಲೋಕಾಯುಕ್ತ ಬಲಪಡಿಸಿದ ಕಾರಣಕ್ಕೆ ಇಂತಹ ದಾಳಿ ನಡೆದಿದೆ. ನನಗೆ ಇನ್ನೂ ಹೆಚ್ಚಿನ ವಿವರಗಳು ಬರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ದಾಖಲೆಯಲ್ಲವೇ?- ಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಟಿ

    S.T. Somashekhar

    ಚಾಮರಾಜನಗರ (Chamarajanagara) ಜಿಲ್ಲೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರ‍್ರೆ ಕಾರ್ಯಕ್ರಮಕ್ಕೆ ವಿ.ಸೋಮಣ್ಣ (V.Somanna) ಗೈರು ವಿಚಾರವಾಗಿ ಮಾತನಾಡಿದ ಅವರು, ಸೋಮಣ್ಣ 45 ವರ್ಷದ ರಾಜಕೀಯ ಅನುಭವ ಇರುವವರು. ಈ ಬಗ್ಗೆ ಅವರೇ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಕೋಟಿ-ಕೋಟಿ ವಿಚಾರ, ವಿರೂಪಾಕ್ಷಪ್ಪ ವಿಚಾರಣೆ ಬಳಿಕ ಸತ್ಯ ತಿಳಿಯಲಿದೆ: ಆರಗ ಜ್ಞಾನೇಂದ್ರ

  • ಸಹಕಾರಿ ಬ್ಯಾಂಕ್‌ಗಳ ಅಕ್ರಮದ ತನಿಖೆ ಸಿಬಿಐಗೆ: ಎಸ್‌.ಟಿ.ಸೋಮಶೇಖರ್

    ಸಹಕಾರಿ ಬ್ಯಾಂಕ್‌ಗಳ ಅಕ್ರಮದ ತನಿಖೆ ಸಿಬಿಐಗೆ: ಎಸ್‌.ಟಿ.ಸೋಮಶೇಖರ್

    ಬೆಂಗಳೂರು: ಸಹಕಾರಿ ಬ್ಯಾಂಕ್‌ಗಳ ಅಕ್ರಮ ತನಿಖೆಯನ್ನು ಸಿಬಿಐಗೆ ಸರ್ಕಾರ ವಹಿಸಲಿದೆ. 2-3 ದಿನಗಳಲ್ಲಿ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್ (ST Somashekhar) ತಿಳಿಸಿದರು.

    ವಿಧಾನ ಪರಿಷತ್ (Vidhan Parishad) ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ (Congress) ಯು‌.ಬಿ. ವೆಂಕಟೇಶ್‌ ಪ್ರಶ್ನೆ ಕೇಳಿದರು. ಈ ಸರ್ಕಾರ ಸಹಕಾರಿ ಬ್ಯಾಂಕ್‌ಗಳ (Co Operative Bank) ಅಕ್ರಮದ‌ ಪ್ರಕರಣದಲ್ಲಿ ಸುಳ್ಳು ಹೇಳುತ್ತಿದೆ. ಸಿಬಿಐಗೆ ಕೇಸ್ ಕೊಡುವುದಕ್ಕೆ ಹಿಂದೇಟು ಹಾಕುತ್ತಿದೆ. ಕೂಡಲೇ ಸಿಬಿಐ ತನಿಖೆಗೆ ಪ್ರಕರಣ ಕೊಡುವಂತೆ ಆಗ್ರಹ ಮಾಡಿದರು. ಇದನ್ನೂ ಓದಿ: DCC Bankನಲ್ಲಿ ಅಕ್ರಮ ಮಾಡಿರುವವರ ಮೇಲೆ ಕ್ರಮ ಗ್ಯಾರಂಟಿ: ಎಸ್.ಟಿ ಸೋಮಶೇಖರ್

    ಇದಕ್ಕೆ ಉತ್ತರ ನೀಡಿದ ಸಚಿವ ಎಸ್.ಟಿ. ಸೋಮಶೇಖರ್, ಗುರು ರಾಘವೇಂದ್ರ ಬ್ಯಾಂಕ್, ಗುರುಸಾರ್ವಭೌಮ ಸಹಕಾರಿ ಬ್ಯಾಂಕ್, ವಶಿಷ್ಠ ಕ್ರೆಡಿಟ್ ಸಹಕಾರ ಬ್ಯಾಂಕ್ ಅಕ್ರಮ ಸಿಬಿಐಗೆ ವಹಿಸಲು ಸಹಕಾರ ಸಂಘಗಳ ನಿಬಂಧಕರು ಶಿಫಾರಸು ಮಾಡಿದ್ದಾರೆ. ಈ ಮೂರು ಬ್ಯಾಂಕ್‌ನಲ್ಲಿ ದೊಡ್ಡ ಅಕ್ರಮ ಆಗಿದೆ. ಈಗಾಗಲೇ ನಾವು ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಶಿಫಾರಸನ್ನು ಈಗ ಗೃಹ ಇಲಾಖೆಗೆ ಮತ್ತು ಸಿಎಂಗೆ ಕಳಿಸುತ್ತೇವೆ. 2-3 ದಿನಗಳಲ್ಲಿ ಸಿಎಂಗೆ ಶಿಫಾರಸು ಕಳಿಸುತ್ತೇವೆ. ಸಿಎಂ ಜೊತೆ ಚರ್ಚೆ ಮಾಡಿ ಸಿಬಿಐಗೆ ತನಿಖೆ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಸಿಬಿಐಗೆ ಪ್ರಕರಣ ಕೊಡಲು ನಿರ್ಧಾರ ಮಾಡಲಾಗಿದೆ. ಶೀಘ್ರವಾಗಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ: ರಮೇಶ್‌ ಜಾರಕಿಹೊಳಿ‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • DCC Bankನಲ್ಲಿ ಅಕ್ರಮ ಮಾಡಿರುವವರ ಮೇಲೆ ಕ್ರಮ ಗ್ಯಾರಂಟಿ: ಎಸ್.ಟಿ ಸೋಮಶೇಖರ್

    DCC Bankನಲ್ಲಿ ಅಕ್ರಮ ಮಾಡಿರುವವರ ಮೇಲೆ ಕ್ರಮ ಗ್ಯಾರಂಟಿ: ಎಸ್.ಟಿ ಸೋಮಶೇಖರ್

    ಬೆಂಗಳೂರು: ಡಿಸಿಸಿ ಬ್ಯಾಂಕ್‍ (DCC Bank) ಗಳ ಅಕ್ರಮದ ತನಿಖೆ ಸರ್ಕಾರ ನಡೆಸುತ್ತಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ ಅಂತ ಸಹಕಾರಿ ಸಚಿವ ಸೋಮಶೇಖರ್ (ST Somashekhar) ಸ್ಪಷ್ಟಪಡಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆ ಕೇಳಿದರು. ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ನಡೆದ ಅಕ್ರಮಗಳ ತನಿಖೆಯನ್ನ ಸರ್ಕಾರ ಸಿಬಿಐಗೆ ಕೊಡಬೇಕು. ಅಮಿತ್ ಶಾ (AmitShah) ಕೈ ಕೆಳಗೆ ಇಲಾಖೆ ಬರುತ್ತೆ. ಸಿಓಡಿ (COD) ತನಿಖೆ ಇದಕ್ಕೆ ಸಾಲದು. ಯಾರನ್ನಾದ್ರು ಬಲಿ ಕೊಟ್ಟರೆ ಮಾತ್ರ ಅಕ್ರಮ ತಡೆಯಬಹುದು. ರೈತರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಅಕ್ರಮ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಅಂತ ಆಗ್ರಹ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಸೋಮಶೇಖರ್, 5 ಡಿಸಿಸಿ ಬ್ಯಾಂಕ್ ಗಳಲ್ಲಿ ಅಕ್ರಮ ಆಗಿದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಅಕ್ರಮ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನ ವಜಾ ಮಾಡಲಾಗಿದೆ. ಅಕ್ರಮ ಮಾಡಿರೋ ಡಿಸಿಸಿ ಬ್ಯಾಂಕ್ ನಿಂದ ರಿಕವರಿ ಮಾಡೋ ಕೆಲಸ ಆಗ್ತಿದೆ ಎಂದರು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಪ್ರತಿಸ್ಪರ್ಧಿಯೇ ಇಲ್ಲ: ಅಮಿತ್‌ ಶಾ

    5 ಬ್ಯಾಂಕ್ ಬಿಟ್ಟು ಉಳಿದ 21 ಡಿಸಿಸಿ ಬ್ಯಾಂಕ್ ನಬಾರ್ಡ್, ಇಲಾಖೆ ನಿಯಮದ ಪ್ರಕಾರ ನಡೆಯುತ್ತಿದೆ. ಅಕ್ರಮ ಮಾಡಿರೋ ಬ್ಯಾಂಕ್ ತನಿಖೆ ಆಗುತ್ತಿದೆ ಕ್ರಮ ಆಗುತ್ತೆ ಎಂದರು. ಯಾರೇ ಆಕ್ರಮದಲ್ಲಿ ಇದ್ದರೂ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಅಂತ ಭರವಸೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿರತೆ ದಾಳಿ – ಕುಟುಂಬಗಳನ್ನು ಭೇಟಿಯಾಗಿ ಗ್ರಾಮಸ್ಥರ ಅಹವಾಲು ಆಲಿಸಿದ ಎಸ್‌ಟಿಎಸ್‌

    ಚಿರತೆ ದಾಳಿ – ಕುಟುಂಬಗಳನ್ನು ಭೇಟಿಯಾಗಿ ಗ್ರಾಮಸ್ಥರ ಅಹವಾಲು ಆಲಿಸಿದ ಎಸ್‌ಟಿಎಸ್‌

    ಮೈಸೂರು: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಚಿರತೆ ದಾಳಿಗೆ ಒಳಗಾದ ಕುಟುಂಬಗಳ ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ.

    ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಮೃತಪಟ್ಟ 11 ವರ್ಷದ ಬಾಲಕ ಜಯಂತ್‌ ನಿವಾಸ ಹಾಗೂ ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಮೃತಪಟ್ಟ ಸಿದ್ದಮ್ಮ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಗ್ರಾಮಸ್ಥರ ಅಹವಾಲು ಆಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

    ಚಿರತೆ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು, ಜಿಲ್ಲಾಡಳಿತದೊಂದಿಗೆ ಸಭೆ ಕರೆಯಲಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದಾರೆ. ಕಬ್ಬು ಕಟಾವು, ರಸ್ತೆ ಬದಿಯ ಮರದ ರೆಂಬೆ ಕಟಾವು, ಗ್ರಾಮಕ್ಕೆ ಬಸ್ ಸೌಕರ್ಯ, ಬೀದಿದೀಪಗಳ ವ್ಯವಸ್ಥೆ ಕಲ್ಪಿಸುವುದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರ ಕುರಿತು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದಾರೆ ಎಂದರು. ಇದನ್ನೂ ಓದಿ: PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ – ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ.‌ ಮತ್ತೆ ಈ ರೀತಿಯ ಅನಾಹುತ ಮರುಕಳಿಸದಂತೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು. ಮೃತರ ಕುಟುಂಬ ಸದಸ್ಯರಿಗೆ ಪರಿಹಾರ ಕಲ್ಪಿಸಲಾಗಿದೆ. ಚಿರತೆ ದಾಳಿ ತಡೆಗೆ ಜಿಲ್ಲಾಡಳಿತದ ಜೊತೆ ವಿಶೇಷ ಸಭೆ ನಡೆಸಿ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ರಾತ್ರಿ ವೇಳೆ ಬೀದಿದೀಪಗಳ ವ್ಯವಸ್ಥೆ, ಶಾಲೆಗೆ ತೆರಳಲು ಮಕ್ಕಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಗ್ರಾಮಸ್ಥರು ಬಿಚ್ಚಿಟ್ಟರು. ಇದೇ ವೇಳೆ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಸಚಿವರು, ಚಿರತೆ ದಾಳಿ ತಡೆಗೆ ಶಾಶ್ವತ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಲಾಗುವುದು.

    ಶಾಸಕರಾದ ಎಂ.ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    ಮೈಸೂರು: ಜಿಲ್ಲಾಡಳಿತ ದಸರಾ (Dasara) ಲೆಕ್ಕಚಾರ ದಾಖಲೆ ಬಿಡುಗಡೆ ಮಾಡಿದ್ದು, ಈ ಬಾರಿ ನೆರವೇರಿದ ಅದ್ಧೂರಿ ದಸರಾಗೆ ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿದೆ.

    ಕಳೆದ ಎರಡು ವರ್ಷ ಕೊರೊನಾದಿಂದಾಗಿ (Corona) ಅರಮನೆ (Mysore Palace) ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ನಡೆದಿದೆ. ಅದ್ಧೂರಿ ಆಚರಣೆಗೆ ಮೈಸೂರು ಜಿಲ್ಲಾಡಳಿತಕ್ಕೆ ವಿವಿಧ ಮೂಲಗಳಿಂದ ಒಟ್ಟು 31 ಕೋಟಿ 8 ಲಕ್ಷ ರೂಪಾಯಿ ಹಣ ಸಂದಾಯವಾಗಿತ್ತು. ಇದರಲ್ಲಿ 76 ಲಕ್ಷ ರೂಪಾಯಿ ಗೋಲ್ಡ್ ಕಾರ್ಡ್ (Dasara GoldCard) ಹಾಗೂ ದಸರಾ ಟಿಕೆಟ್ ಮಾರಾಟದಿಂದಲೇ ಬಂದಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    ಬಂದ 31 ಕೋಟಿ 8 ಲಕ್ಷ ರೂಪಾಯಿಯಲ್ಲಿ 28 ಕೋಟಿ 74 ಲಕ್ಷ ರೂಪಾಯಿ ದಸರಾಗೆ ಖರ್ಚಾಗಿದೆ. ಇದರಲ್ಲೇ ಮಂಡ್ಯ (Mandya), ಚಾಮರಾಜನಗರ (Chamarajanagar) ಹಾಗೂ ಹಾಸನ (Hassan) ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ದಸರಾ ಅನುದಾನ ಕೂಡ ಸೇರಿದೆ. ಮೈಸೂರಿನ ಯದುವಂಶದವರಿಗೆ ಗೌರವಧನವಾಗಿ (ರಾಜಧನ) 47 ಲಕ್ಷ ರೂಪಾಯಿ ನೀಡಲಾಗಿದೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

    ಯುವ ದಸರಾ ಹಾಗೂ ಯುವ ಸಂಭ್ರಮಕ್ಕೆ 6 ಕೋಟಿ 36 ಲಕ್ಷ ರೂಪಾಯಿ ವೆಚ್ಚವಾಗಿದೆ. ದಸರಾ ಮೆರವಣಿಗೆಗೆ 2 ಕೋಟಿ 22 ಲಕ್ಷ, ಪಂಜಿನ ಕವಾಯತಿಗೆ 1 ಕೋಟಿ 17 ಲಕ್ಷ ರೂ.ಗಳಷ್ಟು ಹಣ ಖರ್ಚಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ಮಾಹಿತಿ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಸಚಿವರು, ಒಟ್ಟು 22 ವಿವಿಧ ಸಮಿತಿ ಅಧಿಕಾರಿಗಳು ತಾವು ಖರ್ಚು ಮಾಡಿರುವ ಹಣದ ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಆದರೆ, ಲೆಕ್ಕ ಸಲ್ಲಿಸುವ ವೇಳೆಗೆ ಜಿಲ್ಲಾಧಿಕಾರಿ ಬದಲಾದ ಕಾರಣ ಈ ಲೆಕ್ಕದ ಪರಿಶೀಲನೆ ನಡೆದಿಲ್ಲ. ಹೀಗಾಗಿ, ಉಪ ಸಮಿತಿ ನೀಡಿರುವ ಲೆಕ್ಕದ ಪರಿಶೀಲನೆ ಜವಾಬ್ದಾರಿ ಹೊಸ ಜಿಲ್ಲಾಧಿಕಾರಿ ಹೆಗಲಿಗೆ ಬಿದ್ದಿದೆ. ಇವರು ಲೆಕ್ಕ ಪರಿಶೀಲಿಸಿದ ಬಳಿಕ ಎಲ್ಲಾ ಉಪ ಸಮಿತಿಗಳ ಖರ್ಚಿನ ಪಟ್ಟಿ ಅಂತಿಮವಾಗುತ್ತದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • RSS ಬ್ಯಾನ್ ಮಾಡೋ ನೆಸೆಸಿಟಿ ಇಲ್ಲ: ಸೋಮಶೇಖರ್

    RSS ಬ್ಯಾನ್ ಮಾಡೋ ನೆಸೆಸಿಟಿ ಇಲ್ಲ: ಸೋಮಶೇಖರ್

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಏನ್ ಮಾತನಾಡುತ್ತಾರೆ ಅನ್ನೊದು ಗೊತ್ತಾಗಲ್ಲ. ಆರ್ ಎಸ್‍ಎಸ್ (RSS) ಬ್ಯಾನ್ ಮಾಡೋ ನೆಸೆಸಿಟಿ ಇಲ್ಲ. ಅವರೇನು ದೇಶದ್ರೋಹಿ ಕೆಲಸ ಮಾಡ್ತಾರಾ ಎಂದು ಸಚಿವ ಎಸ್.ಟಿ ಸೋಮಶೇಖರ್ (S.T Somashekhar) ಪ್ರಶ್ನಿಸಿದ್ದಾರೆ.

    ಆರ್ ಎಸ್‍ಎಸ್ ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆರ್ ಎಸ್‍ಎಸ್ ಏನ್ ಕೆಲಸ ಮಾಡುತ್ತೆ, ಪಿಎಫ್‍ಐ ಏನ್ ಕೆಲಸ ಮಾಡುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆರ್ ಎಸ್‍ಎಸ್ ದೇಶಭಕ್ತಿ ಕೆಲಸ ಮಾಡುತ್ತೆ. ಪಿಎಫ್‍ಐ (PFI) ದೇಶದ್ರೋಹಿ ಕೆಲಸ ಮಾಡುತ್ತೆ. ಆರ್ ಎಸ್‍ಎಸ್ ಬ್ಯಾನ್ ಮಾಡುವ ಪ್ರಮೇಯವೇ ಇಲ್ಲ. ಪಿಎಫ್‍ಐ ಬ್ಯಾನ್ ಗೆ ಎಲ್ಲಾ ಕಡೆಯಿಂದ ಒತ್ತಡ ಇತ್ತು. ಹಾಗಾಗಿ ಎಲ್ಲಾ ಮಾಹಿತಿ ಕಲೆ ಹಾಕಿ ಕೇಂದ್ರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದರು.

    ಭಾರತ್ ಜೋಡೋ ಯಾತ್ರೆ (Bharat Jodo Yatre) ಯಿಂದ ದಸರಾ ಕಾರ್ಯಕ್ರಮಕ್ಕೆ ತೊಂದರೆ ಯಾಗುತ್ತೆ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ. ಭಾರತ್ ಜೋಡೋ ಯಾತ್ರೆಯಿಂದ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸರು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಟ್ರಾಫಿಕ್ (Traffic) ಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಎಂದು ವಿವರಿಸಿದರು.  ಇದನ್ನೂ ಓದಿ: PFI ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ಆಗ್ತಿದೆ: ಆರಗ ಜ್ಞಾನೇಂದ್ರ

    ಡಿ.ಕೆ.ಶಿವಕುಮಾರ್ (D.K Shivakumar) ಮೇಲೆ ಸಿಬಿಐ (CBI) ದಾಳಿ ಸಂಬಂಧ ಮಾತನಾಡಿ, ಕಾನೂನು ಬಾಹಿರ ಚಟುವಟಿಕೆಗಳ ಆರೋಪದ ಮೇಲೆ ದಾಳಿ ಮಾಡಿದ್ದಾರೆ. ಇದು ರೊಟಿನ್ ಪ್ರೋಸಸ್. ಡಿಕೆಶಿ ಅವರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡ್ತಿಲ್ಲ. ಎಲ್ಲಾ ಕಡೆಯೂ ದಾಳಿ ಆಗ್ತಿದೆ. ಅವರು ಪರಿಶುದ್ಧ ಆದ್ರೆ ಯಾಕೆ ಹೆದರಬೇಕು ಎಂದರು.

    Live Tv
    [brid partner=56869869 player=32851 video=960834 autoplay=true]

  • ಮೈಸೂರಿನಲ್ಲಿ ದಸರಾ ಸಂಭ್ರಮ- ಚಿನ್ನದ ಅಂಬಾರಿಯ ಉತ್ಸವ ಮೂರ್ತಿಗೆ ಪೂಜೆ

    ಮೈಸೂರಿನಲ್ಲಿ ದಸರಾ ಸಂಭ್ರಮ- ಚಿನ್ನದ ಅಂಬಾರಿಯ ಉತ್ಸವ ಮೂರ್ತಿಗೆ ಪೂಜೆ

    ಮೈಸೂರು: ನಾಡಹಬ್ಬ ದಸರಾ (Mysuru Dasara 2022) ಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದ ಅಂಬಾರಿಯಲ್ಲಿ ಕೂರುವ ತಾಯಿ ಚಾಮುಂಡಿ (Chamundi) ಯ ಉತ್ಸವ ಮೂರ್ತಿ ನೋಡಲು ಕೋಟ್ಯಂತರ ಜನ ಕಾಯುತ್ತಿದ್ದಾರೆ. ದಸರಾದ ಪ್ರಮುಖ ಆಕರ್ಷಣೆಯಾದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯ ಸ್ವಚ್ಛತಾ ಕಾರ್ಯ ಚಾಮುಂಡಿ ಬೆಟ್ಟದಲ್ಲಿ ಶುರುವಾಗಿದೆ.

    ದಸರಾ ಮುಗಿದ ಮೇಲೆ ಈ ಉತ್ಸವ ಮೂರ್ತಿ ಅರಮನೆ (Mysuru palace) ಮಂಡಳಿಯ ಖಜಾನೆಯಲ್ಲಿ ಇರುತ್ತದೆ. ದಸರೆಗೆ ಎರಡು ದಿನ ಮುಂಚಿತವಾಗಿ ಚಾಮುಂಡಿ ಬೆಟ್ಟಕ್ಕೆ ಉತ್ಸವ ಮೂರ್ತಿ ತಂದು ಸ್ವಚ್ಛತಾ ಕಾರ್ಯ ನೆರವೇರಿಸಿ ಪೂಜೆ ಆರಂಭಿಸಲಾಗುತ್ತದೆ. ನವರಾತ್ರಿಯ 9 ದಿನವೂ ಈ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ.

    ನಾಳೆ (ಸೋಮವಾರ) ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ (Droupadi Murmu) ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯ್ಲಲಿ ಇಂದು ಚಾಮುಂಡಿ ಬೆಟ್ಟಕ್ಕೆ ಸಚಿವ ಎಸ್.ಟಿ.ಸೋಮಶೇಖರ್ (S.T Somashekhar) ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ಭೇಟಿ ನೀಡಿ ಸಿದ್ಧತೆ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ನಾಳೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿನ ಪೂಜಾ ಕೈಂಕರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ ಬೃಹತ್ ವೇದಿಕೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ವೇದಿಕೆ ಇರಲಿದೆ. ವೇದಿಕೆ ಹಿಂಭಾಗದಲ್ಲಿ ಎಲ್‍ಇಡಿ ಪರದೆ ಇರಲಿದೆ. ವೇದಿಕೆಯಲ್ಲಿ ರಾಷ್ಟ್ರಪತಿ (President), ರಾಜ್ಯಪಾಲರು (Governor), ಸಿಎಂ (Chief Minister), ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೇಂದ್ರ 6 ಸಚಿವರು ಸೇರಿದಂತೆ 13 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.  ಇದನ್ನೂ ಓದಿ: ಕೊರೋನಾ ಬಳಿಕ ಅದ್ದೂರಿ ದಸರಾ- ವಿದ್ಯುತ್ ದೀಪಾಲಂಕಾರದ ಬೆಳಕಲ್ಲಿ ಸಾಗಲಿದೆ ಅಂಬಾರಿ

    ಸಾರ್ವಜನಿಕರಿಗೂ ದಸರಾ ಉದ್ಘಾಟನೆ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ತಾವರೆಕಟ್ಟೆ ಬಳಿ ಪೊಲೀಸರಿಂದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಬೆಟ್ಟಕ್ಕೆ ಹೋಗುವ ಪ್ರತಿಯೊಂದು ವಾಹನಗಳನ್ನು 20 ಕ್ಕೂ ಹೆಚ್ಚು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್

    ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್

    ಬೆಂಗಳೂರು: ರಾಜ್ಯದಲ್ಲಿ ಯಾವ ರೈತರು (Farmers) ಎಪಿಎಂಸಿ (APMC) ಕಾಯ್ದೆ ವಾಪಸ್‌ ಪಡೆಯುವಂತೆ ಮನವಿ ಮಾಡಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿ ಆಗಿರೋ ಎಪಿಎಂಸಿ ಕಾಯ್ದೆ ರದ್ದು ಮಾಡೋದಿಲ್ಲ ಅಂತ ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್ (ST Somashekar) ‌ಸ್ಪಷ್ಟಪಡಿಸಿದ್ದಾರೆ‌.

    ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ (APMC Act) ರದ್ದು ಮಾಡಬೇಕು, ಈ ಕಾಯ್ದೆಯಿಂದ ರೈತರಿಗೆ ಅನ್ಯಾಯ ಆಗುತ್ತದೆ. ಕೇಂದ್ರ ಸರ್ಕಾರ ಈಗಾಗಲೇ ಕಾಯ್ದೆ ರದ್ದು ಮಾಡಿದೆ. ಡಬಲ್ ಎಂಜಿನ್ ಸರ್ಕಾರ ಇಲ್ಲಿ ಬೇರೆ ನಿರ್ಧಾರ ಮಾಡಿದೆ. ಕೂಡಲೇ ಕಾಯ್ದೆ ರದ್ದು ಮಾಡಬೇಕೆಂದು ಒತ್ತಾಯಿಸಿದರು.

    ಇದಕ್ಕೆ ಉತ್ತರಿಸಿದ ಎಸ್‌.ಟಿ ಸೋಮಶೇಖರ್‌, ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ರಾಜ್ಯದಲ್ಲಿ ವಾಪಸ್ ಪಡೆಯಲ್ಲ‌ (ರದ್ದು ಮಾಡುವುದಿಲ್ಲ) ಎಂದು ಪುನರುಚ್ಚರಿಸಿದರು. ಇದನ್ನೂ ಓದಿ: ಅಕ್ಟೋಬರ್ 2 ರಿಂದ ಯಶಸ್ವಿನಿ ಯೋಜನೆ ಜಾರಿ: ಎಸ್.ಟಿ.ಸೋಮಶೇಖರ್

    ST SOMASHEKAr2

    ಕೇಂದ್ರದ ಕಾಯ್ದೆ ಬೇರೆ ನಮ್ಮ ಕಾಯ್ದೆ ಬೇರೆ. ರೈತರಿಗೆ ಅನುಕೂಲ ಮಾಡಲು ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ರೈತರು ತಮ್ಮ ಬೆಳೆ (Crop) ಎಪಿಎಂಸಿಯಲ್ಲಿ ಬೇಕಾದರೂ ಮಾರಾಟ ಮಾಡಬಹುದು ಅಥವಾ ಎಲ್ಲಿ ಬೇಕಾದ್ರು ಖಾಸಗಿಯಾಗಿ ಬೇಕಾದ್ರು ಮಾರಾಟ ಮಾಡಬಹುದು. ಅದಕ್ಕಾಗಿಯೇ ನಾವು ಕಾಯ್ದೆ ತಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನ ನೆರವಿಗೆ ನಿಂತ ಸಚಿವೆ ಜೊಲ್ಲೆ

    ಇದಲ್ಲದೆ ರೈತ ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದರೆ ಮೊದಲು ದಂಡ ಇತ್ತು. ಅದನ್ನ ಈ ಕಾಯ್ದೆ ಮೂಲಕ ತೆಗೆದು ಹಾಕಲಾಗಿದೆ. ರಾಜ್ಯದ ಯಾವ ರೈತರು ಕಾಯ್ದೆ ವಾಪಸ್ ಪಡೆಯುವಂತೆ ಮನವಿ ಮಾಡಿಲ್ಲ‌. ಈ ಕಾಯ್ದೆ ರೈತರ ಪರವಾದ ಕಾಯ್ದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ ಅಂತ ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರಲ್ಲ: ಎಸ್.ಟಿ.ಸೋಮಶೇಖರ್

    ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರಲ್ಲ: ಎಸ್.ಟಿ.ಸೋಮಶೇಖರ್

    ಮೈಸೂರು: ಅದ್ಧೂರಿಯಾಗಿ ನಡೆಯುವ ಮೈಸೂರು ದಸರಾ ಜಂಬೂಸವಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪಾರ್ಚನೆಗೆ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದರು.

    ಮೈಸೂರು ದಸರಾದಲ್ಲಿ ಭಾಗವಹಿಸಲಿರುವ ಗಣ್ಯರ ಬಗ್ಗೆ ಮಾಹಿತಿ ನೀಡಿದ ಅವರು, ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅವರನ್ನು ಅರಮನೆಯ ಭೇಟಿ ಬಗ್ಗೆ ಈಗಾಗಲೇ ಕೇಳಲಾಗಿದೆ. ಆದರೆ ಇನ್ನೂ ರಾಷ್ಟ್ರಪತಿಗಳಿಂದ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್

    ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರದ 4 ಮಂತ್ರಿಗಳು ಬರುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ವೇದಿಕೆ ಮೇಲೆ ಕುಳಿತುಕೊಳ್ಳುವವರ ಪಟ್ಟಿ ಅಂತಿಮಗೊಳ್ಳುತ್ತದೆ. ದಸರಾ ಪಾಸ್ ಹಾಗೂ ಗೋಲ್ಡ್ ಕಾರ್ಡ್ ಕುರಿತು ಇಂದು ಸಂಜೆಯೊಳಗೆ ಅಂತಿಮ ತೀರ್ಮಾನವಾಗುತ್ತದೆ. ಯುವದಸರಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಧ್ಯಾಹ್ನ ಸಭೆ ನಡೆಸಿ ಸಂಜೆಯೊಳಗೆ ತೀರ್ಮಾನವನ್ನು ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

    ದಸರಾಗೆ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಹಣ ಬಿಡುಗಡೆ ಮಾಡಿರುವುದಾಗಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿದ್ಯುತ್ ದೀಪಾಲಂಕಾರಕ್ಕೆ 4.5 ಕೋಟಿ ರೂ. ನಿಗದಿ ಮಾಡಲಾಗಿದೆ. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುತ್ತೇವೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ರಮೇಶ್ ಜಾರಕಿಹೊಳಿ ಮಾತ್ರವಲ್ಲ ಹೆಬ್ಬಾಳ್ಕರ್ ಕೂಡಾ ಸಾಲ ಉಳಿಸಿಕೊಂಡಿದ್ದಾರೆ : ಸೋಮಶೇಖರ್

    ರಮೇಶ್ ಜಾರಕಿಹೊಳಿ ಮಾತ್ರವಲ್ಲ ಹೆಬ್ಬಾಳ್ಕರ್ ಕೂಡಾ ಸಾಲ ಉಳಿಸಿಕೊಂಡಿದ್ದಾರೆ : ಸೋಮಶೇಖರ್

    ಬೆಳಗಾವಿ: ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ 600 ಕೋಟಿ ಸಾಲ ಬಾಕಿ ಆರೋಪದ ವಿಚಾರವಾಗಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.

    ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ ಸಾಲವೂ ಬಾಕಿ ಇದೆ. ಜೆಡಿಎಸ್‍ನ ಬಂಡೆಪ್ಪ ಕಾಶೆಂಪೂರ್ ಸೇರಿ ಹಲವರು ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು 6 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿವೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಅವರು ಪರೋಕ್ಷವಾಗಿ ಟಾಂಗ್ ನೀಡಿದರು. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‍ಗಳು ಇದೆ. ಅದರಲ್ಲಿ 16 ಡಿಸಿಸಿ ಬ್ಯಾಂಕ್ ರಿವ್ಯೂ ಮಾಡಿದ್ದೇನೆ. ಇವತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ನೋಟಿಸ್ ಮಾಡೋದಕ್ಕೆ ಬಂದಿದ್ದೇನೆ. ರಮೇಶ್ ಒಬ್ಬರೇ ಸಾಲ ಪಡೆದಿಲ್ಲ. 23 ಸಕ್ಕರೆ ಕಾರ್ಖಾನೆಗೂ ಸಾಲ ಕೊಟ್ಟಿದ್ದೇವೆ. ಅಪೆಕ್ಸ್ ಬ್ಯಾಂಕ್‍ಗೆ ಗಂಭೀರವಾಗಿ ಹೇಳಿದ್ದೇವೆ. ನೋಟಿಸ್ ನೀಡಿ ವಸೂಲಾತಿ ಮಾಡುತ್ತಿದ್ದಾರೆ. ಒಟ್ಟಾರೆ 23 ಜನ ಸಾಲ ಪಡೆದಿದ್ದಾರೆ ಎಂದರು.

    BRIBE

    ನಗರದ ಡಿಸಿಸಿ ಬ್ಯಾಂಕ್‍ನಿಂದ ಒಟ್ಟು 1,024 ಕೋಟಿ ರೂ. ಸಾಲ ನೀಡಲಾಗಿದೆ. ಯಾರಿಗೆ ಸಾಲ ಕೊಟ್ಟಿದ್ದಾರೆ? ಯಾರು ಮರುಪಾವತಿಸಿಲ್ಲ. ಅವರಿಗೆ ನೋಟಿಸ್ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ಗಂಭಿರವಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನವರೂ ನಮ್ಮಲ್ಲಿ ಸಾಲ ಪಡೆದಿದ್ದಾರೆ. ಕಾಂಗ್ರೆಸ್‍ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಖಾನೆ ಸಾಲ ತೆಗೆದುಕೊಂಡಿದೆ. ಜೆಡಿಎಸ್‍ನಿಂದ ಬಂಡೆಪ್ಪ ಕಾಂಶೆಪೂರ್ ಸಾಲ ತೆಗೆದುಕೊಂಡಿದ್ದಾರೆ. ಎಸ್. ಆರ್ ಪಾಟೀಲ್ ಕೂಡ ಸಾಲ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಯಾರೂ ಸಾಲ ಕಟ್ಟಿಲ್ಲ ಅವರಿಗೆ ನೋಟಿಸ್ ನೀಡಲಾಗುತ್ತಿದೆ. ಯಾರದು ಎಷ್ಟು ಸಾಲ ಬಾಕಿ ಇದೆ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ, ಮುಚ್ಚು ಮರೆಯೂ ಇಲ್ಲ ಎಂದು ತಿಳಿಸಿದರು.