Tag: ಎಸ್ ಟಿ ಸೋಮಶೇಖರ್

  • ಎಸ್.ಟಿ ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ: ಸಿ.ಪಿ ಯೋಗೇಶ್ವರ್

    ಎಸ್.ಟಿ ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ: ಸಿ.ಪಿ ಯೋಗೇಶ್ವರ್

    ರಾಮನಗರ: ಎಸ್‌.ಟಿ ಸೋಮಶೇಖರ್‌ ಅವರು ಬಿಜೆಪಿಯಿಂದ (BJP) ಹೊರಹೋಗುವ ತೀರ್ಮಾನ ಮಾಡಿದ್ದರೇ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ-ಜೆಡಿಎಸ್ ಮೈತ್ರಿಗೆ (BJP JDS Alliance) ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekar) ವಿರೋಧ ವ್ಯಕ್ತಪಡಿಸಿದ ವಿಚಾರ ಕುರಿತು ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

    ಎಸ್.ಟಿ ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದಮೇಲೆ ಮಂತ್ರಿಯಾಗಿ ಪ್ರಬಲ ಖಾತೆ ಪಡೆದರು, ಅಧಿಕಾರ ಅನುಭವಿಸಿದರು. ಇವತ್ತು ಅಧಿಕಾರವಿಲ್ಲವೆಂದು ಹೀಗೆ ಮಾತನಾಡುತ್ತಾರೆ. ಡಿಕೆಶಿ (DK Shivakumar) ಜೊತೆಗಿನ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡುತ್ತಿದ್ದರು, ಈಗಲೂ ಟೀಕೆ ಮಾಡ್ತಿದ್ದಾರೆ. ಬಹುಶಃ ಅವರು ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ. ಒಂದು ವೇಳೆ ಹೊರಹೋಗುವ ತೀರ್ಮಾನ ಮಾಡಿದ್ದರೆ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ. ಅಧಿಕಾರವಿದ್ದಾಗ ಅನುಭವಿಸಿ ಈಗ ಪಕ್ಷದ ವಿರುದ್ಧ ಮಾತನಾಡುವುದು ಶೋಭೆಯಲ್ಲ ಎಂದ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Bigg Boss Kannada 10: ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಇವರೇ ನೋಡಿ

    ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಹಳ ವಿರೋಧವಿದ್ದ ಕ್ಷೇತ್ರ ಚನ್ನಪಟ್ಟಣ. ನಾವು, ಕುಮಾರಸ್ವಾಮಿ ವಿರುದ್ಧ ರಾಜಕೀಯ ಮಾಡಿಕೊಂಡು ಬಂದೆವು. ಆದ್ರೆ ಹೊಂದಾಣಿಕೆ ಅನ್ನೋದು ತಾಳ್ಮೆಯಿಂದ ಪರಸ್ಪರ ಒಂದಾಗಿ ಎಲ್ಲರ ಮನಸ್ಸನ್ನು ಒಗ್ಗೂಡಿಸುವುದು. ಹಾಗಾಗಿ ಮೈತ್ರಿಯ ಅನಿವಾರ್ಯತೆ ಏನೆಂಬುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಬೂತ್ ಮಟ್ಟದಲ್ಲಿ ಎರಡೂ ಪಕ್ಷದವರನ್ನು ಒಗ್ಗೂಡಿಸಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ!

    ಇನ್ನೂ ಮೈತ್ರಿಗೆ ಕಾರ್ಯಕರ್ತರು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, 100% ಮೈತ್ರಿಗೆ ನಮ್ಮ ಕಾರ್ಯಕರ್ತರು ಒಪ್ಪಿದ್ದಾರೆ. ನಮ್ಮ ಹಾಗೂ ಜೆಡಿಎಸ್‌ನ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಳೆದ‌ ಎಂಎಲ್ಎ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಲಾಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆ ತಪ್ಪು ಆಗಬಾರದು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಹಾಗಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾಂಗ್ರೆಸ್ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಿಪಿವೈ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ಬರ್ತಾರೆ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ – ಸ್ವಪಕ್ಷೀಯರ ವಿರುದ್ಧವೇ ಎಸ್‌ಟಿಎಸ್ ಅಸಮಾಧಾನ

    ಮೋದಿ ಬರ್ತಾರೆ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ – ಸ್ವಪಕ್ಷೀಯರ ವಿರುದ್ಧವೇ ಎಸ್‌ಟಿಎಸ್ ಅಸಮಾಧಾನ

    ಬೆಂಗಳೂರು: ಮಾಜಿ ಸಚಿವ ಎಸ್‌.ಟಿ ಸೋಮಶೇಖರ್‌ (ST Somashekar) ಮತ್ತೆ ಬಿಜೆಪಿ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

    ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆ ಆಲಿಸಲು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಬಂದಿದ್ದರು. ಈ ವೇಳೆ, ಸೋಮಶೇಖರ್‌ಗೆ ಕಾಂಗ್ರೆಸ್ (Congress) ಕಾರ್ಯಕರ್ತನೋರ್ವ ಶಾಲು ಹಾಕಿ, ಈ ಶಾಲು ಚೆನ್ನಾಗಿದ್ಯಣ್ಣ ಅಂದೇ ಬಿಟ್ಟರು. ಕೆಲ ಹೊತ್ತು ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಕಾರ್ಯಕರ್ತ ಹಾಕಿದ್ದ ಶಾಲು ಹಾಕಿಕೊಂಡೇ ಕುಳಿತಿದ್ದರು. ಇದನ್ನೂ ಓದಿ: 140 ಕೋಟಿ ಭಾರತೀಯರಲ್ಲಿ ಕಾಂಗ್ರೆಸ್ಸಿಗರೂ ಇದ್ದಾರೆಂದು ಭಾವಿಸಿದ್ದೇನೆ: ಸಿ.ಟಿ ರವಿ ವ್ಯಂಗ್ಯ

    ಬಳಿಕ ಮಾತನಾಡಿ ಸೋಮಶೇಖರ್, ನನ್ನ ರಾಜಕೀಯ ಸಾಧನೆಗಳಿಗೆ ಕಾರಣ ಡಿಕೆಶಿ. ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ, ಇದು ನಿಜ. ಇವತ್ತು ಪ್ರಧಾನ ಮಂತ್ರಿಗಳು ಬಂದಿದ್ದರು. ನಿಮ್ಮ ಕ್ಷೇತ್ರದ ಜನರನ್ನ ಕಳಿಸಿ ಅಂತ ಹೇಳಿದ್ರು. ನಾನು ಸಹ ನನ್ನ ಕ್ಷೇತ್ರದಿಂದ ಬಸ್ ಬಿಟ್ಟು ಜನರನ್ನ ಕಳುಹಿಸಿದೆ. ಆದರೆ ಪಿಎಂ ಕಾರ್ಯಕ್ರಮ ಬನ್ನಿ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ. ಹೀಗಾಗಿ ನಾನು ಹೋಗಲಿಲ್ಲ. ಸಿಎಂ ಡಿಸಿಎಂ ಬಗ್ಗೆ ಒಂದೆರೆಡು ಒಳ್ಳೆ ಮಾತುಗಳನ್ನ ಆಡಿದ್ದಕ್ಕೆ ಹೀಗೆ ಆಗ್ತಿದೆ ಎಂದು ಅಸಮಾಧಾನ ಹೊರಹಾಕಿದರು.  

    ನಂತರ ಡಿ.ಕೆ ಶಿವಕುಮಾರ್ ಮಾತನಾಡಿ, ನನ್ನ-ಸೋಮಶೇಖರ್ ಸಂಬಂಧ 35 ವರ್ಷದ ಹಳೆಯದ್ದು. ನಾವು ಬಿತ್ತಿದ ಬೀಜ, ನಾವು ಗೊಬ್ಬರ ಹಾಕಿದ ಗಿಡ ಈಗ ಮರವಾಗಿ ಬೆಳೆದಿದೆ. ಹಣ್ಣು ಬೇರೆಯವರು ಕಿತ್ತು ತಿನ್ನೋದು ಬೇಡ ಅಂತಾ ನಾವು ಇಲ್ಲಿಗೆ ಅವರ ಜೊತೆ ಬಂದಿದ್ದೇವೆ. ನಿಮ್ಮ ಕಷ್ಟಗಳನ್ನ ಕೇಳೋಕೆ ಬರಲೇಬೇಕು ಅಂತಾ ಕರೆ ತಂದಿದ್ದಾರೆ. ಅವರ ಜೊತೆ ನೆಲಮಂಗಲ ಶಾಸಕ ಶ್ರೀನಿವಾಸ್ ಕೂಡ ಬೆಂಬಿಡದೆ ಯಶವಂತಪುರ ಕ್ಷೇತ್ರಕ್ಕೆ ಕರೆ ತಂದಿದ್ದಾರೆ. ನಿಮ್ಮ ಸಮಸ್ಯೆಗಳನ್ನ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರ ಇಲ್ಲಿನ ನಿವಾಸಿಗಳ ಬಗ್ಗೆ ಕಾಳಜಿ ವಹಿಸಲಿದೆ. ನಿಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಶಾಸಕರು ಕೂಡಲೇ ಸಭೆ ಮಾಡಲಿದ್ದಾರೆ. ಸಾಧ್ಯವಾದಷ್ಟು ಸಮಸ್ಯೆ ಬಗೆ ಹರಿಸಲಿದ್ದೇವೆ ಎಂದು ಆಶ್ವಾಸನೆ ನೀಡಿದ್ದಾರೆ.

    ವಾರದ ಹಿಂದಷ್ಟೇ ಕೆಂಪೇಗೌಡ ಲೇಔಟ್ ಸಮಸ್ಯೆ ಬಗ್ಗೆ ಡಿಕೆಶಿ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ಯಾದಗಿರಿ ಜಿಲ್ಲೆಯಾದ್ಯಂತ 1 ಗಂಟೆಗೂ ಹೆಚ್ಚು ಕಾಲ ಮಳೆ – ರೈತರ ಮೊಗದಲ್ಲಿ ಮಂದಹಾಸ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 100% ಬಿಜೆಪಿ ಬಿಡಲ್ಲ, ನನ್ನ ಮಗ ರಾಜಕೀಯಕ್ಕೆ ಬರಲ್ಲ – ST ಸೋಮಶೇಖರ್

    100% ಬಿಜೆಪಿ ಬಿಡಲ್ಲ, ನನ್ನ ಮಗ ರಾಜಕೀಯಕ್ಕೆ ಬರಲ್ಲ – ST ಸೋಮಶೇಖರ್

    ಬೆಂಗಳೂರು: ಕಾಂಗ್ರೆಸ್‌ಗೆ (Congress) ವಾಪಸ್ ಹೋಗೋ ಬಗೆಗಿನ ವದಂತಿ ಬಗ್ಗೆ ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekar) ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ನಾನು ಕಾಂಗ್ರೆಸ್‌ಗೆ ಹೋಗಲ್ಲ, 100% ಲೋಕಸಭೆಗೂ ಹೋಗಲ್ಲ, ನನ್ನ ಮಗನೂ 100% ರಾಜಕೀಯಕ್ಕೆ ಬರಲ್ಲ ಅಂತಾ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿ, ಕೆಲವರು ಶಾಸಕರಾಗಬೇಕು ಅಂತ ಕನಸು ಕಾಣ್ತಿದ್ದಾರೆ, ಸುಮ್ಮನೆ ವದಂತಿ ಹಬ್ಬಿಸ್ತಿದ್ದಾರೆ. ಸಿಎಂ, ಡಿಸಿಎಂ ನಮ್ಮ ಕ್ಷೇತ್ರಕ್ಕೆ ಬಂದಾಗ ಮಾಡಿರುವ ಕೆಲಸದ ಬಗ್ಗೆ ಒಳ್ಳೆ ಮಾತನಾಡಬಾರದು ಅಂದ್ರೆ ಹೇಗೆ? ಅಂತ ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: Gruhalakshmi Scheme: ಆಗಸ್ಟ್ 30ಕ್ಕೆ `ಗೃಹಲಕ್ಷ್ಮಿʼಯರ ಖಾತೆಗೆ ಕಾಂಚಾಣ

    ಆರ್‌ಆರ್ ನಗರ, ಕೆಆರ್‌ಪುರದಲ್ಲಿ ಬೆಂಬಲಿಗರು ಕಾಂಗ್ರೆಸ್‌ಗೆ ಹೋದಂತೆ ನನ್ನ ಕ್ಷೇತ್ರದಲ್ಲೂ ಹೋಗಿದ್ದಾರೆ ಅಷ್ಟೇ. ಆದರೆ, ನನ್ನ ಮೇಲ್ಯಾಕೆ ಇಷ್ಟು ಸಂಶಯ? ಅಂತ ಪ್ರಶ್ನಿಸಿದ್ದಾರೆ. ದೆಹಲಿಗೆ ಹೋಗಲು ಇನ್ನೂ ಬುಲಾವ್ ಬಂದಿಲ್ಲ ಅಂತಲೂ ಸೋಮಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ಪಾಸ್‌ಪೋರ್ಟ್, ವೀಸಾ ಇಲ್ಲದೆ ಬೋಟ್‌ನಲ್ಲಿ ಬೆಂಗಳೂರಿಗೆ ನುಸುಳಿದ್ದ ಶ್ರೀಲಂಕಾದ ಮೋಸ್ಟ್ ವಾಂಟೆಡ್‌ ಕ್ರಿಮಿನಲ್‌ಗಳು ಅರೆಸ್ಟ್

    ಸೋಮಶೇಖರ್ ಜೊತೆ ಆರ್.ಅಶೋಕ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಸೋಮಶೇಖರ್ ಕಾಂಗ್ರೆಸ್‌ಗೆ ಹೋಗಲ್ಲ. ಕಾಂಗ್ರೆಸ್‌ನವರು ಲೋಕಸಭೆಗೆ ಟಿಕೆಟ್ ಆಫರ್ ಕೊಟ್ಟಿದ್ದಾರೆ. ಎಲೆಕ್ಷನ್ ಪರಿಣಾಮ ಏನು ಅಂತ ವಿವರಿಸಿದ್ದೇನೆ. ಬೆಂಬಲಿಗರು ಇಲ್ಲಿ ಟಿಕೆಟ್ ಸಿಗಲ್ಲ ಅಂತ ಹೋಗಿದ್ದಾರೆ. ನಮಗೆ ಮೆಜಾರಿಟಿ ಇಲ್ಲದಿದ್ದಾಗ ಬಿಎಸ್‌ವೈ 10 ಶಾಸಕರನ್ನು, ನಾನು 5 ಶಾಸಕರನ್ನು ಆಪರೇಷನ್ ಮಾಡಿದ್ವಿ. ಕಾಂಗ್ರೆಸ್‌ನವರಿಗೆ ಮೆಜಾರಿಟಿ ಇದ್ರೂ ಯಾಕೆ ಆಪರೇಷನ್ ಮಾಡ್ತಿದ್ದಾರೆ ಅಂತ ಅಶೋಕ್ ಕಿಡಿಕಾರಿದ್ದಾರೆ.

    ಈ ನಡುವೆ ಬೈರತಿ ಬಸವರಾಜ್ ಪ್ರತಿಕ್ರಿಯಿಸಿ, ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ. ನಾನು ಬಿಜೆಪಿ ಬಿಡಲ್ಲ. ಪಕ್ಷ ಬಿಡುವ ಸಂದರ್ಭ ಬಂದರೆ ನಿವೃತ್ತಿ ಆಗಿ ಮನೆಯಲ್ಲಿ ಇರ್ತೇನೆ ಅಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BJPಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗ್ತಿದ್ದೀನಿ – ಎಸ್.ಟಿ ಸೋಮಶೇಖರ್

    BJPಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗ್ತಿದ್ದೀನಿ – ಎಸ್.ಟಿ ಸೋಮಶೇಖರ್

    ಬೆಂಗಳೂರು: ಬಿಜೆಪಿಯಲ್ಲಿ (BJP) ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ ಎನ್ನುವ ಮೂಲಕ ಶಾಸಕ ಎಸ್.ಟಿ.ಸೋಮಶೇಖರ್ (ST Somashekar) ಬಿಜೆಪಿಯಲ್ಲಿ ಸಮಾಧಾನಕರವಾಗಿಲ್ಲ ಎಂಬುದನ್ನ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.

    ಆಪರೇಷನ್ ಹಸ್ತದ ಸಂಬಂಧ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಬಿಜೆಪಿಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ. ಅಧಿವೇಶನ ನಡೆಯುವಾಗ ನಮ್ಮ‌ ಪಕ್ಷದ ನಾಯಕರ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಲಿಲ್ಲ ಆದ್ದರಿಂದ ಅನಿವಾರ್ಯಾವಾಗಿ ನಾನೆ ಅಪ್ರೋಚ್‌ ಮಾಡಿದೆ, ಅಭಿವೃದ್ಧಿಗೆ ಹಣ ಕೇಳಿದೆ ಹಣ ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಲೂಟಿ ಹೊಡೆಯೋದು ಬಿಟ್ಟರೆ ತಮ್ಮನಾಗಿ ಸ್ವೀಕಾರ ಮಾಡ್ತೀನಿ: ಕುಮಾರಸ್ವಾಮಿ ಷರತ್ತು

    ನಾನು ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಭೇಟಿ‌ ಮಾಡಿದ ನಂತರ ಸ್ಥಳೀಯ ಬಿಜೆಪಿ ನಾಯಕರು ನನ್ನ ವಿರುದ್ಧ ಹೀಗೆ ಪ್ರಚಾರ ಮಾಡುತ್ತಿದ್ದಾರೆ. ನಾನು ಲೋಕಸಭೆಗೆ ಹೋಗುತ್ತೇನೆ ಮಗ ವಿಧಾನಸಭೆ (Assembly Election) ಚುನಾವಣೆಗೆ ಬರ್ತಾನೆ ಅಂತಾ ಶುರು ಮಾಡಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದ ಆಪ್ತರು ಬಿಬಿಎಂಪಿ ಕ್ಯಾಟಗರಿ ಆದರೆ ಅವಕಾಶ ಸಿಕ್ಕರೆ ವಾಪಾಸ್ ಬರಬಹದು ಎಂದಿದ್ದಾರೆ. ಇದನ್ನೂ ಓದಿ: ಮಳೆ ಬೆಳೆ ರಾಜಕೀಯ ವೈಪರೀತ್ಯದ ಎಚ್ಚರಿಕೆ – ಕೋಮಾರನಹಳ್ಳಿ ಲಕ್ಷ್ಮಿ ರಂಗನಾಥ ಸ್ವಾಮಿ ಕಾರ್ಣಿಕ

    ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಎಲ್ಲವನ್ನೂ ಸರಿಪಡಿಸುವ ಮಾತನಾಡಿದ್ದಾರೆ, ಸರಿಪಡಿಸುತ್ತಾರೆ ಎಂಬ ಭರವಸೆ ಇದೆ. ಸದ್ಯಕ್ಕೆ ಬಿಜೆಪಿ ಬಿಡುವ ಯಾವುದೇ ಯೋಚನೆ ನನ್ನ ಮುಂದಿಲ್ಲ. ನನ್ನ ಚುನಾವಣೆಯಲ್ಲೇ ಕ್ಷೇತ್ರದ ಮೂಲ ಬಿಜೆಪಿ ಶಾಸಕರು ವಿರೋಧ ಮಾಡಿದ್ದರಿಂದ ಆತಂಕ ಆಗಿ ಕೆಲವರು ಹೋಗಿದ್ದಾರೆ. ಅವರಿಗೂ ಬಿಬಿಎಂಪಿ ಟಿಕೆಟ್ ಸಿಗುತ್ತೋ ಇಲ್ವಾ ಎಂಬ ಆತಂಕ ಅವರಲ್ಲೂ ಇತ್ತು ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಪರೇಷನ್ ಹಸ್ತ ತಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ?

    ಆಪರೇಷನ್ ಹಸ್ತ ತಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ?

    ಬೆಂಗಳೂರು: ಬಿಜೆಪಿ (BJP) ಶಾಸಕರನ್ನ ಆಪರೇಷನ್ ಹಸ್ತದ (Operation Hasta) ಮೂಲಕ ಸೆಳೆಯುವ ‘ಕೈ’ ಪ್ರಯತ್ನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಎಂಟ್ರಿಯಾಗುವ ಸಾಧ್ಯತೆ ಇದೆ.

    ಕಾಂಗ್ರೆಸ್ (Congress) ಆಪರೇಷನ್ ಪ್ರಯತ್ನಕ್ಕೆ ಅಮಿತ್ ಶಾ ಅಡ್ಡಿಯಾಗುವ ಸಾಧ್ಯತೆ ಇದೆ. ಶಾಸಕ ಎಸ್.ಟಿ. ಸೋಮಶೇಖರ್ (S.T.Somashekar) ಆಪರೇಷನ್ ಕಮಲಕ್ಕೆ ಒಳಗಾಗಬಹುದು ಎಂಬ ಅನುಮಾನಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮೇಕೆನೂ ಇಲ್ಲ, ದಾಟು ಇಲ್ಲ: ಡಿಕೆಶಿ ವಿರುದ್ಧ ಅಶೋಕ್ ಲೇವಡಿ

    ಸೆಪ್ಟೆಂಬರ್ 2 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಾಸಕ ಎಸ್.ಟಿ. ಸೋಮಶೇಖರ್ ಭೇಟಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಶಾಸಕ ಎಸ್.ಟಿ. ಸೋಮಶೇಖರ್ ಸೆಪ್ಟೆಂಬರ್ 2 ರಂದು ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದ್ದು, ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

    ಇನ್ನೊಂದು ಕಡೆ ಎಸ್.ಟಿ. ಸೋಮಶೇಖರ್‌ಗೆ ಬಿ.ಎಲ್. ಸಂತೋಷ್ ದೆಹಲಿಗೆ ಬುಲಾವ್ ನೀಡಿದ್ದಾರೆ. ಮಾಜಿ‌ ಶಾಸಕ ನಿರ್ಮಲ್ ಕುಮಾರ್ ಸುರಾನ ಮೂಲಕ ದೆಹಲಿಗೆ ಕರೆತರಲು ಸೂಚನೆ‌ ನೀಡಿದ್ದಾರೆ ಎನ್ನಲಾಗಿದೆ. ನಿರ್ಮಲ್ ಕುಮಾರ್ ಸುರಾನ ಹಾಗೂ ಎಸ್.ಟಿ.ಸೋಮಶೇಖರ್, ಬಿ.ಎಲ್.ಸಂತೋಷ್ ಭೇಟಿಗೆ ದೆಹಲಿಗೆ ತೆರಳಲಿದ್ದಾರೆ. ಆಗಸ್ಟ್ 25 ರಂದು ಭೇಟಿ ‌ಮಾಡಿ‌ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಲೂಟಿ ಹೊಡೆಯೋದು ಬಿಟ್ಟರೆ ತಮ್ಮನಾಗಿ ಸ್ವೀಕಾರ ಮಾಡ್ತೀನಿ: ಕುಮಾರಸ್ವಾಮಿ ಷರತ್ತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    ಬೆಂಗಳೂರು: ಆಪರೇಷನ್ ಹಸ್ತ (Operation Hasta) ಬೆನ್ನಲ್ಲೇ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಬಂಪರ್ ಆಫರ್ ಕೊಟ್ಟಿದೆ. ಎಸ್.ಟಿ.ಸೋಮಶೇಖರ್ (S.T.Somshekar) ಶಾಸಕರಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ 7.63 ಕೋಟಿ ರೂ. ಅನುದಾನ ನೀಡಲಾಗಿದೆ.

    ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಂಬ ಚರ್ಚೆ ಬೆನ್ನಲ್ಲೇ, ಬಿಬಿಎಂಪಿಯಿಂದ ಅನುದಾನ ಮಂಜೂರಿನ ಆದೇಶ ಬಂದಿದೆ. ಈ ಕ್ಷೇತ್ರಕ್ಕೆ ಕುಡಿಯುವ ನೀರಿಗೆ 7.63 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಬಿಬಿಎಂಪಿ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಗಿಫ್ಟ್ ನೀಡಿದರೇ ಎಂಬ ಚರ್ಚೆ ಶುರುವಾಗಿದೆ. ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಕುಡಿಯುವ ನೀರಿಗಾಗಿ ಅನುದಾನ ನೀಡಲಾಗಿದೆ. 1.63 ಕೋಟಿ ರೂ. ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಮೀಸಲಿಡಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ ರೂ. ಹಾಗೂ ನಿರ್ವಹಣೆ ಮಾಡಲು 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.

    ಆಪರೇಷನ್ ಹಸ್ತದ ಮೊದಲ ವಿಕೆಟ್‌ಗೆ ಅನುದಾನದ ನೆರವು ಸಿಕ್ಕಿದೆ. 7.63 ಕೋಟಿ ರೂ. ಅನುದಾನ ನೀಡಿ ಎಸ್.ಟಿ. ಸೋಮಶೇಖರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ಆಪರೇಷನ್ ಹಸ್ತ ಎನ್ನುತ್ತಿದ್ದಂತೆ ಮೊದಲ ಹೆಸರು ಕೇಳಿ ಬಂದಿದ್ದೇ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರದ್ದು. ನಿನ್ನೆಯಷ್ಟೆ ಸೋಮಶೇಖರ್ ಬೆಂಬಲಿತ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಸೇರಿದ್ದಾರೆ. ಈಗ ಯಶವಂತಪುರ ಕ್ಷೇತ್ರಕ್ಕೆ 7.63 ಕೋಟಿ ಹಣ ಬಿಡುಗಡೆಯಾಗಿದೆ. ಅಧಿಕೃತವಾಗಿ ‘ಕೈ’ ಹಿಡಿಯುವ ಎಸ್.ಟಿ. ಸೋಮಶೇಖರ್ ನಡೆಗೆ ಶೀಘ್ರವಾಗಿ ಮುಹೂರ್ತ ನಿಗದಿಯಾಗುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್‍ನವರು ಸಂಪರ್ಕಿಸಿದ್ದರು, ಸಿಎಂ ಭೇಟಿ ತಪ್ಪಾ..?- ಸೋಮಶೇಖರ್ ಸ್ಪಷ್ಟನೆ

    ಕಾಂಗ್ರೆಸ್‍ನವರು ಸಂಪರ್ಕಿಸಿದ್ದರು, ಸಿಎಂ ಭೇಟಿ ತಪ್ಪಾ..?- ಸೋಮಶೇಖರ್ ಸ್ಪಷ್ಟನೆ

    ಬೆಂಗಳೂರು: ಕಾಂಗ್ರೆಸ್‍ನವರು (Congress) ನನ್ನನ್ನು ಸಂಪರ್ಕಿಸಿದ್ದರು. ನಾನು ಕಾಂಗ್ರೆಸ್‍ಗೆ ಹೋಗಲ್ಲ, ಬಿಜೆಪಿಯಲ್ಲೇ ಇದ್ದೇನೆ. ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ತಪ್ಪಾ ಎಂದು ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.

    ಕಾಂಗ್ರೆಸ್ ಸಂಪರ್ಕ ಮಾಡ್ತಿದ್ದಾರಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಪ್ರಬಲ ನಾಯಕ ಅಲ್ಲ. ನಾನು ಯಶವಂತಪುರ ಕ್ಷೇತ್ರಕ್ಕೆ (Yeshwanthpur Constituency) ಮಾತ್ರ ಸೀಮಿತ. ಯಶವಂತಪುರ ಹೊರತುಪಡಿಸಿ ಯಾವ ನಾಯಕ ಅಲ್ಲ. ಸಮುದಾಯದ ಪ್ರಬಲ ನಾಯಕನೂ ಅಲ್ಲ. ಸಂಪರ್ಕ ಮಾಡ್ತಾರೆ ಅಂದ್ರೆ ನಾನೂ ಕಾಂಗ್ರೆಸ್‍ನಲ್ಲಿ 20 ವರ್ಷ ಇದ್ದೆ. ಹಾಗಾಗಿ ನನ್ನ ಸಂಪರ್ಕ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆ ಮೊದಲು ಸಂಪರ್ಕ ಮಾಡಿದ್ರು. ನಾನು ಕಾಂಗ್ರೆಸ್‍ಗೆ ಹೋದೆನಾ.? ನಾನು ಹೋದೆನಾ, ಹೋಗಲಿಲ್ಲ ಇಲ್ಲೇ ಇದ್ದೆ. ಆದರೂ ಕ್ರಿಯೇಟ್ ಮಾಡ್ತಾರೆ. ಸೋಮಶೇಖರ್ ಹೋಗ್ತಾನೆ, ಈ ವಾರದಲ್ಲಿ ಹೋಗ್ತಾನೆ ಅಂತ ಮಾಡಿದ್ರು. ಬೈರತಿ ಬಸವರಾಜ್ ಕೂಡ ಊರಲ್ಲಿ ಇರಲಿಲ್ಲ. ಯಡಿಯೂರಪ್ಪ ಅವರು ಕೂಡ ಕೇಳಿದ್ರು. ಅವರನ್ನ ನಾನು ಭೇಟಿಯಾಗ್ತೀನಿ ಎಂದು ಹೇಳಿದರು.

    ಯಡಿಯೂರಪ್ಪ (BS Yediyurappa) ಅವರು ನಮ್ಮ ನಾಯಕರು. ನನ್ನನ್ನ ಬಿಜೆಪಿಗೆ ಕರೆತಂದವರು ಅವರೇ. ಸಹಕಾರ ಸಚಿವರನ್ನಾಗಿ ಮಾಡಿ, ಮೈಸೂರು ಉಸ್ತುವಾರಿ ಕೂಡ ನೀಡಿದ್ರು. ಕೆಲಸ ಪ್ರಾಮಾಣಿಕವಾಗಿ ಮಾಡ್ತಾರೆ ಅಂತ ಹೇಳಿದ್ರು. ಯಡಿಯೂರಪ್ಪ ಅವರನ್ನು ಹೊರತಾಗಿ ನಾನು ಏನೂ ಮಾಡಲ್ಲ. ಬಾ ಮನೆಗೆ ಅಂತ ಕರೆದಿದ್ದಾರೆ. ಹೋಗಿ ಭೇಟಿಯಾಗಿ ಮಾತಾಡ್ತೇನೆ. ದುಡುಕಿ ನಿರ್ಧಾರ ಮಾಡಬೇಡ ಅಂತ ಹೇಳಿದ್ದಾರೆ. ಏನಾಗಿದೆ ಅಂತ ಮಾಹಿತಿ ಕೊಡ್ತೀನಿ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಎನ್‌ಇಪಿ ರದ್ದು; ರಾಜ್ಯ ಶಿಕ್ಷಣ ನೀತಿ ಜಾರಿ ಮಾಡ್ತೀವಿ: ಡಿಕೆಶಿ

    ತಮ್ಮ ವಿರೋಧಿಗಳ ವಿರುದ್ಧ ಶಿಸ್ತು ಕ್ರಮದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾರನ್ನೂ ಸಸ್ಪೆಂಡ್ ಮಾಡಿ, ತೊಂದರೆ ಮಾಡಿ ಅನ್ನೋದು ನಾನು ಹೇಳಿಲ್ಲ. ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಅನ್ನೋದು ನನ್ನ ಚಿಂತನೆ. ಇಬ್ನರನ್ನ ಸಸ್ಪೆಂಡ್ ಮಾಡಿದಾಕ್ಷಣಕ್ಕೆ ಒಳ ಹೊರಗೂ ಇರತಕ್ಕಂತದ್ದು ಬದಲಾಗಲ್ಲ. ಬಿಜೆಪಿಯವರು ಎಲ್ಲಾ ವಾಟ್ಸಪ್ ಗ್ರೂಪಲ್ಲಿ ವೀಡಿಯೋ ಹಾಕ್ತಿದ್ದಾರೆ. ಈಶ್ವರಪ್ಪ ಹೇಳಿರುವಂತೆ ವಲಸೆ ಆಗಿರೋರು ಬರೋರು ಬರ್ತಾರೆ, ಹೋಗೋರು ಹೋಗ್ತಾರೆ ಅಂತ ಹೇಳಿಕೆಗಳನ್ನ ಅವೈಡ್ ಮಾಡಿ ಅನ್ನೋದು ನನ್ನ ಚಿಂತನೆ ಎಂದರು.

    ನಾನಿರಬಹುದು, ಎಲ್ಲಾ ಪಕ್ಷದ ಕಾರ್ಯಕರ್ತರಿರಬಹುದು. ಒಳ್ಳೆಯ ವಾತಾವರಣ ಇತ್ತು. ಚುನಾವಣೆಗೆ ಮೊದಲು ಸೋಮಶೇಖರ್ (ST Somashekhar) ಈಗ ಹೋಗ್ತಾನೆ ಅಂತೆಲ್ಲಾ ಹೇಳಿದ್ರು. ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಹೋಗಲ್ಲ ಅಂತ ಹೇಳಿದ್ದೆ. ಸಿದ್ದರಾಮಯ್ಯ ಜೊತೆ ಮಾತಾಡಿದ್ದೇ ತಪ್ಪಾ.?. ಸಿದ್ದರಾಮಯ್ಯ ಅವರ ಜೊತೆ ರಾಜಕಾರಣ ಮಾತಾಡಿಲ್ಲ. ನಮ್ಮ ಕ್ಷೇತ್ರದ ವಿಚಾರ ಮಾತ್ರ ಮಾತಾಡಿದ್ದೇನೆ. ಅದಾದ ಮೇಲೆ ಸೋಮಶೇಖರ್ ಕಾಂಗ್ರೆಸ್ ಎಂಪಿಗೆ ಹೋಗ್ತಾನೆ. ಮಗ ಎಂಎಲ್‍ಎ ಗೆ ನಿಲ್ತಾನೆ. ಬಿಜೆಪಿಯಲ್ಲಿ ಅಪ್ಪ ಮಗನಿಗೆ ಟಿಕೆಟ್ ಕೊಡಲ್ಲ ಅಂತೆಲ್ಲಾ. ಅದನ್ನ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಅಂತ ಸಿ.ಟಿ ರವಿ ಅವರಿಗೆ ಹೇಳಿದ್ದೇನೆ. ಯಾರನ್ನೇ ಸಸ್ಪೆಂಡ್ ಮಾಡಿದ್ರೆ ಪರಿಹಾರ ಅಲ್ಲ ಎಂದರು. ಇದನ್ನೂ ಓದಿ: ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲಿದ್ದೇನೆ: ಎಸ್‍ಟಿ ಸೋಮಶೇಖರ್

    ನೆಲಮಂಗಲ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಎಸ್ ಟಿ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮಾಜಿ ಕಾಪೆರ್Çರೇಟರ್ ರಾಜಣ್ಣ, ಆರ್ಯ ಶ್ರೀನಿವಾಸ್, ಕುಂಬಳಗೋಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಾಜು, ಅನಿಲ್ ಕುಮಾರ್, ಹೊಸಳ್ಳಿ ಸತೀಶ್ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾರೆಲ್ಲ ಕಾಂಗ್ರೆಸ್ ಸೇರೋದಕ್ಕೆ ಸಿದ್ಧರಿದ್ದಾರೋ ಅವರನ್ನೆಲ್ಲ ಸೇರಿಸಿಕೊಳ್ಳಿ ಅಂದಿದ್ದೇನೆ: ಡಿಕೆಶಿ

    ಯಾರೆಲ್ಲ ಕಾಂಗ್ರೆಸ್ ಸೇರೋದಕ್ಕೆ ಸಿದ್ಧರಿದ್ದಾರೋ ಅವರನ್ನೆಲ್ಲ ಸೇರಿಸಿಕೊಳ್ಳಿ ಅಂದಿದ್ದೇನೆ: ಡಿಕೆಶಿ

    ಬೆಂಗಳೂರು: ಪಕ್ಷದಲ್ಲಿ ಕೆಲವು ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ನಿಮ್ಮ ಓಟ್ ಶೇರ್ ಜಾಸ್ತಿ ಮಾಡಿಕೊಳ್ಳಿ ಅಂತ ಕಾರ್ಯಕರ್ತರಿಗೆ ಹೇಳಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಯಾರೆಲ್ಲ ಕಾಂಗ್ರೆಸ್ (Congress) ಸೇರುವುದಕ್ಕೆ ಸಿದ್ಧರಿದ್ದಾರೋ ಅವರನ್ನೆಲ್ಲ ಸೇರಿಸಿಕೊಳ್ಳಿ ಅಂತ ಹೇಳಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಎಸ್.ಟಿ ಸೋಮಶೇಖರ್ (ST Somashekar) ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಯಾರೆಲ್ಲ ಕಾಂಗ್ರೆಸ್ ಸೇರುವುದಕ್ಕೆ ಸಿದ್ಧರಿದ್ದಾರೋ ಅವರನ್ನೆಲ್ಲ ಸೇರಿಸಿಕೊಳ್ಳಿ ಅಂತ ಹೇಳಿದ್ದೇನೆ. ಹಾಗಾಗಿ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಅವರು ವೈಯಕ್ತಿಕವಾಗಿ ಹೇಳಿರಬಹುದು. ಆ ವಿಚಾರ ಇನ್ನೂ ನನ್ನ ತನಕ ಬಂದಿಲ್ಲ. ರಾಜಕೀಯದಲ್ಲಿ ಯಾವಾಗ ಏನು ಬೇಕಾದ್ರೂ ಆಗಬಹುದು. ಯಾರು ಬರುತ್ತಾರೆ ಏನು ಎಂಬುದನ್ನ ನಾನು ಹೇಳೋದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ತಮಿಳುನಾಡಿಗೆ ನೀರು (TamilNadu Water) ಬಿಡುವುದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀರು ಬೀಡುವ ಬಗ್ಗೆ ಕಾನೂನು, ಸಂವಿಧಾನದಲ್ಲೇ ಇದೆ. ರೈತರನ್ನು ಕಾಪಡುವುದು ನಮ್ಮ ಜವಾಬ್ದಾರಿ ನಾವು ನೀರು ಬಿಟ್ಟಿದ್ದೇವೆ. ಸರ್ಕಾರ ಬ್ಯಾಲೆನ್ಸಿಂಗ್ ಆಕ್ಟ್ ಮಾಡಬೇಕಾಗುತ್ತೆ. ನಾವು ಬೋರ್ಡ್‌ಗೆ ಪತ್ರ ಬರೆದಿದ್ದೇವೆ. ದಿನಕ್ಕೆ 10,000 ಕ್ಯೂಸಿಕ್ ನೀರು ಬಿಟ್ಟ ಬಗ್ಗೆ ಆದೇಶ ಹೊರಡಿಸಿ. ಸದ್ಯ ಕುಡಿಯಲು ನೀರಿಲ್ಲ, ವ್ಯವಸಾಯಕ್ಕಂತೂ ನೀರು ಇಲ್ಲವೇ ಇಲ್ಲ. ಹಿಂದಿನ ಸರ್ಕಾರ ಎಷ್ಟು ನೀರು ಬಿಟ್ಟಿದ್ದಾರೆ. ಅದರ ಪಟ್ಟಿ ನಾನು ಬಿಡುಗಡೆ ಮಾಡ್ಲಾ? ನಾವು ಸರ್ವ ಪಕ್ಷ ಸದಸ್ಯರ ಸಭೆ ಖಂಡಿತಾ ಕರಿತೇವೆ. ರಾಜ್ಯದ ಜಲ ಸಮಸ್ಯೆ ವಿಚಾರವಾಗಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

    ಲೋಡ್ ಶೆಡ್ಡಿಂಗ್ ವಿಚಾರ ಕುರಿತು ಮಾತನಾಡಿ, ನಾನಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ. ಲೋಡ್ ಶೆಡ್ಡಿಂಗ್‌ಗೂ ಗೃಹಜ್ಯೋತಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರದಿಂದ ಕೊಡಬೇಕಿರುವ ಹಣವನ್ನು ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: `ಕೈ’ ಹಿಡಿಯಲು ಮುಂದಾದ್ರಾ BJP ಶಾಸಕ – ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್‌ ಹೆಬ್ಬಾರ್ ಹೇಳಿದ್ದೇನು?

    ರಾಜ್ಯದಲ್ಲಿ ಎನ್‌ಇಪಿ ರದ್ದತಿಗೆ ನಿರ್ಮಲಾ ಸೀತಾರಾಮ್ ವಿರೋಧ ವಿಚಾರಕ್ಕೆ ತಿರುಗೇಟು ನೀಡಿದ ಡಿಸಿಎಂ, ಎನ್‌ಇಪಿ ಜಾರಿ ಮಾಡಿದ್ದು ಬಿಜೆಪಿ ಸರ್ಕಾರದ ನಿರ್ಧಾರ. ನಮ್ಮ ಸರ್ಕಾರ ಬಂದ ಬಳಿಕ ಮರು ಚಿಂತನೆ ಮಾಡುತ್ತೇವೆ ಅಂತಾ ಹೇಳಿದ್ವಿ. ನಾವು ಮರು ಚಿಂತನೆ ಮಾಡುತ್ತಿದ್ದೇವೆ. ತರಾತುರಿಯಲ್ಲಿ ಯಾಕೆ ಎನ್‌ಇಪಿ ರಾಜ್ಯದಲ್ಲಿ ಜಾರಿಮಾಡಿದ್ರು. ಬೇರೆ ರಾಜ್ಯದಲ್ಲಿ ಯಾಕೆ ಮಾಡಿಲ್ಲ? ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶದಲ್ಲಿ ಯಾಕೆ ಮಾಡಿಲ್ಲ? ನಮ್ಮ ಜನರಿಗೆ ಎನ್‌ಇಪಿ ಬಗ್ಗೆ ತಳಮಳ ಇದೆ. ನಮ್ಮ ಶಿಕ್ಷಣ ಸರಿಯಿಲ್ವಾ? ಬೆಂಗಳೂರು ನಾಲೇಡ್ಜ್ ಕ್ಯಾಪಿಟಲ್, ಮೆಡಿಕಲ್ ಹಬ್, ಸಿಲಿಕಾನ್ ವ್ಯಾಲಿ ಅಂತ ಪ್ರಪಂಚದಲ್ಲಿ ಮಾತನಾಡ್ತಾರೆ. ನಮ್ಮ ಎಜುಕೇಶನ್ ಬಗ್ಗೆ ಎಲ್ಲರೂ ಒಳ್ಳೆಯ ಮಾತು ಆಡ್ತಾರೆ. ಎನ್‌ಇಪಿ ಒಳ್ಳೆಯದಿದ್ರೆ ಮುಂದೆ ಯೋಚನೆ ಮಾಡ್ತೀವಿ ಅಂತಾ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದ್ರು, ಈಗ ಬರ್ತೀವಿ ಅಂದ್ರೂ ಸೇರಿಸಿಕೊಳ್ಳೋರಿಲ್ಲ: ವಿಶ್ವನಾಥ್‌

    ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದ್ರು, ಈಗ ಬರ್ತೀವಿ ಅಂದ್ರೂ ಸೇರಿಸಿಕೊಳ್ಳೋರಿಲ್ಲ: ವಿಶ್ವನಾಥ್‌

    – ST ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ವಿಶ್ವನಾಥ್‌ ಹೇಳಿದ್ದೇನು?

    ನವದೆಹಲಿ: ಬಿಜೆಪಿಯವರು (BJP) ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದರು, ಈಗ ದಮ್ಮಯ್ಯ ಬರ್ತಿವಿ ಅಂದರೂ ಸೇರಿಸಿಕೊಳ್ಳೋರಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ (H Vishwanath) ಅಸಮಾಧಾನ ಹೊರಹಾಕಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಅವರು, ಎಸ್.ಟಿ ಸೋಮಶೇಖರ್ (ST Somashekar) ಕಾಂಗ್ರೆಸ್ ಸೇರಲು ಹಾಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಟ್ಟರೆ ಮರುಚುನಾವಣೆ ಆಗಬೇಕು, ಇದನ್ನು ಹೇಗೆ ಮಾಡ್ತಾರೆ ಅಂತಾ ನೋಡಬೇಕಾಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

    ಬಿಜೆಪಿ ಹಾಲಿ ಶಾಸಕರಾದ ಎಸ್.ಟಿ ಸೋಮಶೇಖರ್ ಮೂಲತಃ ಕಾಂಗ್ರೆಸ್ಸಿಗರು ಯಾವುದೋ ಪರಿಸ್ಥಿತಿಯಲ್ಲಿ‌ ಕಾಂಗ್ರೆಸ್ ತೊರೆದು ಹೋಗಿದ್ದರು, ಅವರು ಮತ್ತೆ ಕಾಂಗ್ರೆಸ್‌ಗೆ ಬರುತ್ತಿದ್ದಾರೆ, ಕಾಂಗ್ರೆಸ್‌ ಸೇರುವುದು ಒಳ್ಳೆಯ ಬೆಳವಣಿಗೆ. ಬಿಜೆಪಿ ನಾಯಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋ ಆರೋಪ ಸರಿಯಾಗಿದೆ. ಬಿಜೆಪಿಯವರು ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದರು, ಈಗ ದಮ್ಮಯ್ಯ ಬರ್ತಿವಿ ಅಂದರೂ ಸೇರಿಸಿಕೊಳ್ಳೋರಿಲ್ಲ. ಬಿಜೆಪಿಯವರ ಕೆಲಸವೇ ಸೋಲಿಸೋದು, ಅದ್ಯಾರೋ ಸೈನಿಕ ಅಂತೆ ಎಲೆಕ್ಷನ್ ದುಡ್ಡು ಎತ್ಕೊಂಡ್ ಹೋಗಿದ್ದ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನಾನು ಜೈಲಿಗೆ ಬೇಕಾದ್ರೂ ಹೋಗ್ತೀನಿ ಆದ್ರೆ, ಕಾಂಗ್ರೆಸ್‍ಗೆ ಹೋಗಲ್ಲ: ಮುನಿರತ್ನ

    ಮೋದಿಯಿಂದ ಬೆಂಗಳೂರಿಗೇನು ಉಪಯೋಗ?
    ಕಾಂಗ್ರೆಸ್ ಪಕ್ಷಕ್ಕೆ ನಾಯಕರು ಬರಬೇಕು, ದೇಶದಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಠ ಆಗಬೇಕು. ಮೋದಿಯವರು ಭೂತಕಾಲದಲ್ಲಿ ಮಾತನಾಡ್ತಾರೆ, ಭೂತಕಾಲದ‌ ಬಗ್ಗೆ ಮಾತನಾಡುವುದರಿಂದ ಉಪಯೋಗವಿಲ್ಲ. ಬೆಂಗಳೂರಿಗೆ (Bengaluru) ನೆಹರು ಬಹಳಷ್ಟು ಯೋಜನೆಗಳನ್ನ ಕೊಟ್ಟಿದ್ದಾರೆ. ಮೋದಿಯಿಂದ (Narendra Modi) ಬೆಂಗಳೂರಿಗೆ ಏನೂ ಉಪಯೋಗ ಆಯ್ತು? ಎನ್ನುವುದು ಮುಖ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಂದ್ರ ಇನ್ನೂ ಸನಿಹ – ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್‌ ಲ್ಯಾಂಡರ್‌

    ಜಾತಿ ಆಧಾರಿತ ಗಾದೆಗಳನ್ನ ತೆಗೆದು ಹಾಕಬೇಕು:
    ಉಪೇಂದ್ರ ಗಾದೆ ಮಾತು ಹೇಳಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕೆಲವು ಗಾದೆಗಳನ್ನ ತೆಗೆದುಹಾಕಬೇಕು. ಹೆಣ್ಣು ಮಕ್ಕಳ ಬಗ್ಗೆಯೂ ಗಾದೆಗಳಿವೆ ಅವುಗಳನ್ನ ತೆಗೆದುಹಾಕಬೇಕು. ಜಾತಿ ಆಧಾರಿತ ಗಾದೆಗಳನ್ನ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ನನ್ನ ಗುರುಗಳಾದ ಡಿಕೆಶಿ ಕಾರಣ: ಎಸ್‌.ಟಿ.ಸೋಮಶೇಖರ್‌

    ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ನನ್ನ ಗುರುಗಳಾದ ಡಿಕೆಶಿ ಕಾರಣ: ಎಸ್‌.ಟಿ.ಸೋಮಶೇಖರ್‌

    ಬೆಂಗಳೂರು: ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ನನ್ನ ಗುರುಗಳಾದ ಡಿ.ಕೆ. ಶಿವಕುಮಾರ್ (D.K. Shivakumar) ಕಾರಣ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ (S.T. Somashekar) ಹೇಳಿದರು.

    ಕೆಂಪೇಗೌಡ ಬಡಾವಣೆ ವೀಕ್ಷಣೆ ವೇಳೆ ಡಿಸಿಎಂ ಡಿಕೆಶಿ ಅವರನ್ನು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಹಾಡಿ ಹೊಗಳಿದ್ದಾರೆ. ನಾನು ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡುವುದಕ್ಕೆ ನನ್ನ ಗುರುಗಳಾದ ಡಿ.ಕೆ. ಶಿವಕುಮಾರ್ ಕಾರಣ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಿದೆ: ಯಡಿಯೂರಪ್ಪ

    ಉತ್ತರಹಳ್ಳಿ ಕ್ಷೇತ್ರದ ಶಾಸಕ ಆಗಬೇಕು ಅಂತ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದವರು ಡಿ.ಕೆ. ಶಿವಕುಮಾರ್. ಅವರ ಶ್ರಮದಿಂದ ನಾನು ಇವತ್ತು ಇಂತಹ ವೇದಿಕೆ ಮೇಲೆ ನಿಂತು ಮಾತನಾಡಲು ಕಾರಣವಾಗಿದೆ ಎಂದು ನೆನಪಿಸಿಕೊಂಡರು.

    ನಾನು ಈ ಮಟ್ಟಕ್ಕೆ ಬೆಳೆಯಲು 100 ಕ್ಕೆ 100 ಕಾರಣ ಡಿಕೆಶಿ. ನಿಮ್ಮಲ್ಲಿ ಒಳಗೊಂದು ಹೊರಗೊಂದು ಇಲ್ಲ. ನಿಮ್ಮಲ್ಲಿ ಬೆಂಗಳೂರಿನ ಜನ ವಿಶ್ವಾಸ ಇಟ್ಟಿದ್ದಾರೆ. ಅದರಂತೆ ನೀವು ಕೆಲಸ ಮಾಡ್ತಾ ಇದ್ದೀರಿ ಡಿ.ಕೆ. ಶಿವಕುಮಾರ್‌ ಅವರನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸರ್ಕಾರ ಇದ್ದಾಗಲೆಲ್ಲಾ ಭ್ರಷ್ಟಾಚಾರ ಇತ್ತು: ಡಾ.ಶರಣ ಪ್ರಕಾಶ್ ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]