Tag: ಎಸ್ ಟಿ ಸೋಮಶೇಖರ್

  • ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧನಿದ್ದೇನೆ: ಎಸ್‍ಟಿಎಸ್

    ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧನಿದ್ದೇನೆ: ಎಸ್‍ಟಿಎಸ್

    ಮೈಸೂರು: ನಾನು ಈ ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧನಿದ್ದೇನೆ. ಹಗಲಿರುಳು ಈ ಜಿಲ್ಲೆಯ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಜಿಲ್ಲೆಯ ಜನ ಗಮನಿಸಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವರ ಬದುಕಿದ್ದಾರಾ..? ಎಂಬ ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಎಸ್‍ಟಿಎಸ್, ನಾನು ಬದುಕಿದ್ದಾನಾ? ಕೆ.ಆರ್. ನಗರದ ಶಾಸಕರು ಬದುಕಿದ್ದಾರಾ? ಎಂದು ಜನರ ತೀರ್ಮಾನ ಮಾಡಿ ಹೇಳಲಿ. ಮೈಸೂರಿನ 11 ವಿಧಾನಸಭಾ ಕ್ಷೇತ್ರದಲ್ಲಿ ಕರೋನಾ ಕುರಿತು ಸಭೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರದಲ್ಲೂ ಆಯಾ ಆಯಾ ಶಾಸಕರು ಸಭೆಗೆ ಬಂದು ಚರ್ಚೆ ಮಾಡಿದ್ದಾರೆ. ಆದರೆ ಕೆ.ಆರ್.ನಗರದ ಕ್ಷೇತ್ರದ ಶಾಸಕರು ಸಭೆಗೆ ಬರಲಿಲ್ಲ. ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ ಅವರು ಸಭೆಗೆ ಬರಬೇಕಿತ್ತು ಎಂದರು.

    ಈಗ ಜನರೇ ತೀರ್ಮಾನ ಮಾಡಲಿ ಯಾರು ಬದುಕಿದ್ದಾರೆ ಅಂತ. ನನಗೂ ದಿನಕ್ಕೂ ವೆಂಟಿಲೇಟರ್, ಬೆಡ್ ಗಾಗಿ ಹತ್ತಾರು ಕರೆಗಳು ಬರುತ್ತವೆ. ನಾನು ಯಾರಿಗೂ ಇನ್‍ಫ್ಲೂಯೆನ್ಸ್ ಮಾಡಿಲ್ಲ. ಯಾಕೆಂದರೆ ನನ್ನ ಪ್ರಭಾವದಿಂದ ಇನ್ನೊಬ್ಬ ರೋಗಿಗೆ ತೊಂದರೆ ಆಗುತ್ತದೆ ಅಂತಾ. ಇದು ನನ್ನ ಬದ್ಧತೆ. ಇದು ನನ್ನ ಕಾರ್ಯವೈಖರಿ ಎಂದರು.

  • ಸರ್ಕಾರ ಐಸಿಯುವಿನಲ್ಲಿಲ್ಲ, ಸಿದ್ದರಾಮಯ್ಯನವರೇ ಐಸಿಯುನಲ್ಲಿದ್ದಾರೆ: ಸೋಮಶೇಖರ್

    ಸರ್ಕಾರ ಐಸಿಯುವಿನಲ್ಲಿಲ್ಲ, ಸಿದ್ದರಾಮಯ್ಯನವರೇ ಐಸಿಯುನಲ್ಲಿದ್ದಾರೆ: ಸೋಮಶೇಖರ್

    ಮೈಸೂರು: ಸರ್ಕಾರ ಐಸಿಯುವಿನಲ್ಲಿಲ್ಲ, ಸಿದ್ದರಾಮಯ್ಯನವರೇ ಐಸಿಯುವಿನಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಎಸ್‍ಟಿ ಸೋಮಶೇಖರ್ ಅವರಿಗೆ ತಿರುಗೇಟು ನೀಡಿದ್ದಾರೆ.

    ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಬಿಎಸ್‍ವೈ ಆಸ್ಪತ್ರೆಯಲ್ಲಿದ್ದಾರೆ, ರಾಜ್ಯ ಬಿಜೆಪಿ ಸರ್ಕಾರ ಐಸಿಯುವಿನಲ್ಲಿದೆ ಎಂದು ಸಿದ್ದರಾಮಯ್ಯ ನಿನ್ನೆ ಸಾಲು ಸಾಲು ಟ್ವೀಟ್ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಎಸ್ ಟಿ ಸೋಮಶೇಖರ್, ಸಿಎಂಗೆ ಕೋವಿಡ್ ಪಾಸಿಟಿವ್ ಇರುವ ಕಾರಣ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಐಸಿಯುವಿನಲ್ಲಿರುವುದು ಸರ್ಕಾರ ಅಲ್ಲ, ಸಿದ್ದರಾಮಯ್ಯ ಎಂದಿದ್ದಾರೆ.

    ಮೈಸೂರಿನಲ್ಲಿ ದಿನೇದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುನ್ನಚ್ಚರಿಕೆ ಕ್ರಮ ಏನು ಕೈಗೊಳ್ಳಬೇಕು ಹಾಗೂ ಯಾವುದಾದರು ಹೊಸ ಆದೇಶ ಜಾರಿಗೊಳಿಸಬೇಕಾ ಎಂಬುದರ ಬಗ್ಗೆ ಇಂದು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಮೈಸೂರಿನಲ್ಲಿ ಬೆಡ್ ಆಕ್ಸಿಜನ್ ಕೊರತೆ ಇಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಲಾಕ್‍ಡೌನ್ ಅವಶ್ಯಕತೆ ಇಲ್ಲ. ಲಾಕ್‍ಡೌನ್‍ನಿಂದ ಜನರು ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ಕಠಿಣ ಕ್ರಮಗಳ ಮೂಲಕ ವೈರಸ್ ನಿಯಂತ್ರಣ ಮಾಡಬಹುದು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

    ಮೈಸೂರು ಡಿಸಿ ಆದೇಶ ರದ್ದಿಗೆ ಸಚಿವ ಸೋಮಶೇಖರ್ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕಡ್ಡಾಯವಾಗಿ ಕೊರೋನಾ ರಿಪೋರ್ಟ್ ತರಬೇಕೆಂದು ಮೈಸೂರು ಡಿಸಿ ಆದೇಶಿಸಿರಲಿಲ್ಲ. ಕೇವಲ ಸಲಹೆ ನೀಡಿ ಮನವಿ ಮಾಡಿದ್ದರು. ಆದರೆ ಇದನ್ನು ಯಾರೋ ತಿರುಚಿ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಡಿಸಿ ಅವರ ಎಲ್ಲ ಆದೇಶಗಳು ರದ್ದಾದವು. ಈ ವಿಚಾರವಾಗಿ ನಾನು ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನ ಪಟ್ಟೆ. ಅಷ್ಟರಲ್ಲಿ ಕಾಲ ಮಿಂಚಿತ್ತು ಎಂದು ಸ್ಪಷ್ಟನೆ ನೀಡಿದರು.

  • ಎಸ್‍ಐಟಿ ತನಿಖೆ ಆರಂಭವಾಗಿದೆ, ಸದ್ಯದಲ್ಲೇ ಎಲ್ಲಾ ಹೊರಬರಲಿದೆ: ಎಸ್.ಟಿ ಸೋಮಶೇಖರ್

    ಎಸ್‍ಐಟಿ ತನಿಖೆ ಆರಂಭವಾಗಿದೆ, ಸದ್ಯದಲ್ಲೇ ಎಲ್ಲಾ ಹೊರಬರಲಿದೆ: ಎಸ್.ಟಿ ಸೋಮಶೇಖರ್

    ಚಾಮರಾಜನಗರ: ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತಂತೆ ಶುಕ್ರವಾರದಿಂದ ಎಸ್‍ಐಟಿ ತನಿಖೆ ಆರಂಭವಾಗಿದೆ. ಸದ್ಯದಲ್ಲೇ ಎಲ್ಲವೂ ಹೊರಬರಲಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿಡಿ ಬಗ್ಗೆ ಹೆಚ್ಚಿನ ವಿಚಾರಗಳಿಗೆ ರಮೇಶ್ ಜಾರಕಿಹೊಳಿ ಅವರನ್ನೇ ಕೇಳಬೇಕು ಎಂದಿದ್ದು, ಮಹಾನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸದೆ ನುಣಚಿಕೊಂಡರು.

    ಇದೇ ವೇಳೆ ಮೈಮುಲ್ ಚುನಾವಣೆಗೆ ಮಾಜಿ ಸಿಎಂ ಹೆಚ್.ಡಿ.ಕೆ. ಎಂಟ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಇರಬಾರದು. ಯಾರೋ ಪುಣ್ಯಾತ್ಮರು ಸಹಕಾರಿ ಚಳವಳಿ ಕಟ್ಟಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸಿ ಹಾಳುಮಾಡುವುದು ಸರಿಯಲ್ಲ. ಸಹಕಾರಿ ಚುನಾವಣೆಯ ವಿಚಾರವನ್ನು ಸ್ಥಳೀಯರಿಗೆ ಬಿಟ್ಟುಬಿಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕೆ.ಗೆ ಟಾಂಗ್ ನೀಡಿದರು.

    ಹಾಲು ಒಕ್ಕೂಟಗಳಲ್ಲಿ ಭ್ರಷ್ಟಾಚಾರ ಎಂಬ ಹೆಚ್.ಡಿ.ಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಅವರು ಮಾಜಿ ಸಿಎಂ ಆಗಿದ್ದವರು. ಸಹಕಾರಿ ಕ್ಷೇತ್ರದ ಬಗ್ಗೆ ಅವರಿಗಿಂತ ಅವರ ಅಣ್ಣ ಹೆಚ.ಡಿ.ರೇವಣ್ಣ ಅವರಿಗೆ ಗೊತ್ತಿದೆ. ಅವರು ಹೇಳುವ ರೀತಿ ಯಾವ ಭ್ರಷ್ಟಾಚಾರವೂ ನಡೆಯುತ್ತಿಲ್ಲ. ಹಾಲು ಒಕ್ಕೂಟಗಳು ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಡುತ್ತಿವೆ. ಇಲ್ಲಿ ಭ್ರಷ್ಟಾಚಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

  • ಸಚಿವ ಎಸ್‍ಟಿ ಸೋಮಶೇಖರ್‌ಗೆ ಡಿಕೆಶಿ ಚಾಲೆಂಜ್

    ಸಚಿವ ಎಸ್‍ಟಿ ಸೋಮಶೇಖರ್‌ಗೆ ಡಿಕೆಶಿ ಚಾಲೆಂಜ್

    ಬೆಂಗಳೂರು: ಸಚಿವ ಎಸ್. ಟಿ ಸೋಮಶೇಖರ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲೆಸೆದಿದ್ದಾರೆ.

    ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಡಿ ವಿಚಾರದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬ ಎಸ್‍ಟಿಎಸ್ ಹೇಳಿಕೆಗೆ ಗರಂ ಆದ ಡಿಕೆಶಿ, ಬಿಜೆಪಿಯವರಗಿಂತ ಜಾಸ್ತಿ ಹತ್ತಿರವಾಗಿ ನಾನು ಎಸ್ ಟಿ ಸೋಮಶೇಖರ್ ನನ್ನ ನಾನು ನೋಡಿದ್ದೇನೆ. ನಾವು ಜೊತೆಯಲ್ಲಿ ರಾಜಕಾರಣ ಮಾಡಿದ್ದೇವೆ. 20 ವರ್ಷದಿಂದ ಎಸ್ ಟಿ ಸೋಮಶೇಖರ್ ಏನೇನು ಮಾಡಿದ್ದಾರೆ ಅದನ್ನ ಹೇಳಲಿ ಎಂದು ಚಾಲೆಂಜ್ ಹಾಕಿದರು.

    ಸೋಮಶೇಖರ್ ಹೇಳಿಕೆ ನಾನು ನೋಡಿದ್ದೇನೆ, ಅವರು ನನ್ನ ಸ್ನೇಹಿತ. ಅವರು ಹೇಳಿದ್ದಾರೋ, ಹೇಳಿಸಿದ್ದಾರೋ ಏನೋ ಅವರ ಪಕ್ಷದ ತೀರ್ಮಾನ. ಕಾಂಗ್ರೆಸ್ ಪಕ್ಷಕ್ಕೆ ಇವರು 20 ವರ್ಷ ಭಾಗವಾಗಿದ್ದರು. ಏನೇನು ಮಾಡಿದ್ದಾರೆ ಅಂತ ಅವರೇ ಸಾಕ್ಷಿ ಕೊಟ್ಟರೆ ಸಂತೋಷ. ಬಾಂಬೆಯಲ್ಲಿ ನಡಿತೋ ಬೆಂಗಳೂರಲ್ಲಿ ನಡಿತೋ ಬಿಜೆಪಿ ಸರ್ಕಾರ ಇತ್ತೋ ಶಿವಸೇನೆ ಸರ್ಕಾರ ಇತ್ತೋ..? ಏನು ಮಾಡೋಕೆ ಆಗುತ್ತೆ ಎಂದರು.

    ಸೋಮಶೇಖರ್ ಜೊತೆಯಲ್ಲಿ ಇರುವವರು ಎಲ್ಲರೂ ಸೇರಿಕೊಂಡು ಒಂದು ಸುದ್ದಿಗೋಷ್ಠಿ ಮಾಡಲಿ. ಸುದ್ದಿಗೋಷ್ಟಿ ಮಾಡಿ ಎಲ್ಲವನ್ನೂ ಬಿಚ್ಚಡಲಿ. ಕಾಂಗ್ರೆಸ್ ಪಕ್ಷದ ಜೊತೆ 20 ವರ್ಷ ಏನ್ ಮಾಡಿದ್ದಾರೋ ಅದನ್ನ ಹೇಳಲಿ. ಇಂತಹ ಕೆಲಸನೇ ಮಾಡಿದ್ದಾರೆ ಎಂದು ಅದನ್ನ ಹೇಳಲಿ ಎಂದು ಒತ್ತಾಯಿಸಿದರು.

    ಮುಖ್ಯಮಂತ್ರಿ ಸಿಡಿ ಎಂದ ಯತ್ನಾಳ್, ವಿಶ್ವನಾಥ್ ಹೇಳಿದ್ದರು. ಬ್ಲಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಅವರು ಹೇಳಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಲು ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ ಒಬ್ಬರು ಹೇಳ್ತಾರೆ. ಅದರ ಬಗ್ಗೆ ತನಿಖೆಯಾಗಲಿ ಎಂದು ಡಿಕೆಶಿ ಆಗ್ರಹಿಸಿದರು.

    ಎಸ್‍ಟಿಎಸ್ ಹೇಳಿದ್ದೇನು..?: ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ಸಿನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ಸಿನವರೇ ಮಾಡಿದ್ದಾರೆ ಎಂದು ಆರೋಪಿಸಿದ್ದರು.

  • ನನಗೆ ಯಾವುದೇ ಆತಂಕವಿಲ್ಲ, ಕೋರ್ಟಿಗೆ ಅರ್ಜಿ ಹಾಕಲ್ಲ: ಎಂಟಿಬಿ

    ನನಗೆ ಯಾವುದೇ ಆತಂಕವಿಲ್ಲ, ಕೋರ್ಟಿಗೆ ಅರ್ಜಿ ಹಾಕಲ್ಲ: ಎಂಟಿಬಿ

    – ಸೋಮಶೇಖರ್ ಹೇಳಿಕೆ ಬಗ್ಗೆ ಗೊತ್ತಿಲ್ಲ

    ಬೆಂಗಳೂರು: ನಾನು ಕೊರ್ಟ್ ಮೊರೆ ಹೋಗಲ್ಲ. ನನಗೆ ಅಂತಹ ಯಾವುದೇ ಆತಂಕ ಇಲ್ಲ. ಹೀಗಾಗಿ ನಾನು ಕೋರ್ಟಿಗೆ ಅರ್ಜಿ ಹಾಕಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

    ಮಾಜಿ ಸಚಿವರ ಸಿಡಿ ಹೊರಬರುತ್ತಿದ್ದಂತೆಯೇ ಆರು ಮಂದಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟಿಗೆ ಹೋಗುವ ವಿಚಾರದ ಬಗ್ಗೆ ನಾನು ಅವರ ಜೊತೆ ಚರ್ಚೆ ಮಾಡಿಲ್ಲ ಎಂದು ಎಂಟಿಬಿ ಹೇಳಿದರು.

    ಇದೇ ವೇಳೆ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ ವಿಚಾರ ಪ್ರತಿಕ್ರಿಯಸಿ, ಸೋಮಶೇಖರ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಸೋಮಶೇಖರ್ ಎಷ್ಟರ ಮಟ್ಟಿಗೆ ಮಾಹಿತಿ ಕಲೆ ಹಾಕಿದಾರೋ ಗೊತ್ತಿಲ್ಲ. ಸೋಮಶೇಖರ್ ಬಳಿಯೇ ನೀವು ಕೇಳಬೇಕು. ನನಗೆ ಮಾಹಿತಿ ಇರುವ ಹಾಗೆ ಕಾಂಗ್ರೆಸ್ಸಿನಲ್ಲಿ ಹಾಗೇನಿಲ್ಲ ಎಂದರು.

    ಸೋಮಶೇಖರ್ ಹೇಳಿದ್ದೇನು..?
    ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ ನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ಸಿನವರೇ ಮಾಡಿದ್ದಾರೆ ಎಂದು ಆರೋಪಿಸಿದರು.

  • ನೂರಕ್ಕೆ ನೂರರಷ್ಟು ಮನೆ ಹಾಳು ಕೆಲಸ ಮಾಡಿದ್ದು ಕಾಂಗ್ರೆಸ್: ಎಸ್.ಟಿ.ಸೋಮಶೇಖರ್ ಆರೋಪ

    ನೂರಕ್ಕೆ ನೂರರಷ್ಟು ಮನೆ ಹಾಳು ಕೆಲಸ ಮಾಡಿದ್ದು ಕಾಂಗ್ರೆಸ್: ಎಸ್.ಟಿ.ಸೋಮಶೇಖರ್ ಆರೋಪ

    – ಮಾಜಿ ಸಚಿವರ ರಾಸಲೀಲೆ ವೀಡಿಯೋ ಪ್ರಕರಣ
    – ಮುಂಬೈ ಟೀಂನ ಸಚಿವರನ್ನ ಟಾರ್ಗೆಟ್ ಮಾಡಲಾಗ್ತಿದೆ
    – ರಕ್ಷಣೆ ಕೇಳಿ ನ್ಯಾಯಾಲಯಕ್ಕೆ ಹೋಗಿದ್ದು ತಪ್ಪಾ?

    ಬೆಂಗಳೂರು: ಸಿಡಿ ಬಿಡುಗಡೆ ಮಾಡುವ ಮನೆ ಹಾಳು ಕೆಲಸವನ್ನ ಮಾಡಿದ್ದು ನೂರಕ್ಕೆ ನೂರರಷ್ಟು ಕಾಂಗ್ರೆಸ್ ಎಂದು ಸಚಿವ ಎಸ್.ಟಿ.ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

    ನಮ್ಮನ್ನ ಟಾರ್ಗೆಟ್ ಮಾಡಲಾಗ್ತಿದೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರ ರಾಸಲೀಲೆ ವಿರುದ್ಧ ದಾಖಲಾದ ದೂರು ವಾಪಸ್ ಪಡೆದರು. ಆದ್ರೆ ಹೋದ ಗೌರವ ಮತ್ತೆ ಹಿಂದಿರುಗುತ್ತಾ? ಇಡೀ ರಾಜ್ಯದ ಜನತೆಯ ಮೊಬೈಲ್ ನಲ್ಲಿ ವೀಡಿಯೋ ಹರಿದಾಡಿತು. ದೆಹಲಿ ಮಟ್ಟದ ಎಷ್ಟೋ ಜನರು ಸಹ ಬೇಲ್ ಮೇಲೆ ಹೊರಗಿದ್ದಾರೆ. ಅವರೆಲ್ಲ ತಪ್ಪು ಮಾಡಿದ್ದಾರೆ ಎಂದರ್ಥ ಅಲ್ಲ. ಉದ್ದೇಶಪೂರ್ವಕವಾಗಿ ನಮ್ಮನ್ನ ಗುರಿಯಾಗಿಸಿ ತೇಜೋವಧೆಗೆ ಮುಂದಾಗುವ ಮಾಹಿತಿ ಲಭ್ಯವಾಗಿದ್ದರಿಂದ ಕೋರ್ಟ್ ಮೊರೆ ಹೋಗಿದ್ದೇವೆ. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಅವಕಾಶ ಬಳಸಿಕೊಂಡಿದ್ದೇವೆ. ಬೇರೆ ರೀತಿ ರಾಜಕೀಯ ದ್ವೇಷ ಸಾಧಿಸಿದ್ರೂ ಅದನ್ನೆಲ್ಲ ನಾವು ಎದುರಿಸಲು ಸಿದ್ಧವಿದ್ದೇವೆ.

    ಕೋರ್ಟಿಗೆ ಹೋಗಿದ್ದು ತಪ್ಪಾ?: ನಮ್ಮನ್ನು ಕೇಳುವ ನೈತಿಕತೆ ಅವರಿಗಿಲ್ಲ. ಅವರ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ. ಸಮ್ಮಿಶ್ರ ಸರ್ಕಾರ ಆಗಿದ್ದೆ ನಾಯಕರು ಅನೈತಿಕ ಒಪ್ಪಂದದಿಂದ ಆಗಿದ್ದೆರಿಂದ ಮೈತ್ರಿ ಮುರಿದು ಬಿತ್ತು. ಮುಂಬೈಗೆ ಹೋಗಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ವಿಷಯ ತಿಳಿದಾಗ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಆದ್ರೆ ಮಾಧ್ಯಮಗಳಲ್ಲಿ ಈ ವಿಷಯವೇ ಬೇರೆ ರೂಪ ಪಡೆದುಕೊಂಡಿತು. ನ್ಯಾಯಾಲಯಕ್ಕೆ ಹೋಗಿದ್ದು ತಪ್ಪಾ ಎಂದು ಎಸ್‍ಟಿಎಸ್ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    ಕಾಂಗ್ರೆಸ್‍ನವರಿಂದ ಸಿಡಿ ಕೆಲಸ: ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ ನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್‍ನವರೇ ಮಾಡಿದ್ದಾರೆ. ಇದನ್ನೂ ಓದಿ: ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    ಈಗಾಗಲೇ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ. ಸಿಬಿಐ ತನಿಖೆ ಆಗಲಿ ಅನ್ನೋದು ಬೇಡಿಕೆ. ಇಂದು ಸಂಜೆಯೊಳಗೆ ತನಿಖೆ ಕುರಿತಾಗಿ ಆದೇಶ ಪ್ರಕಟವಾಗಲಿದೆ. ತನಿಖೆ ಆದ್ರೆ ಯಾರೆಲ್ಲ ಮಿಕ್ಸ್ ಮಾಡಿದ್ದಾರೆ? ಯಾರು ಇದ್ದಾರೆ ಅನ್ನೋದು ತಿಳಿಯಲಿದೆ ಎಂದರು. ಇದನ್ನೂ ಓದಿ: ಕಷ್ಟಪಟ್ಟು ಮೇಲೆ ಬಂದವರ ವಿರುದ್ಧ ಷಡ್ಯಂತ್ರ ಅಂದ್ರು ಬಿ.ಸಿ.ಪಾಟೀಲ್

  • ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ – ಸಚಿವ ಎಸ್.ಟಿ ಸೋಮಶೇಖರ್

    ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ – ಸಚಿವ ಎಸ್.ಟಿ ಸೋಮಶೇಖರ್

    ಹಾವೇರಿ: ಬಿಜೆಪಿ ಮುಂದಿನ ರಾಜಾಹುಲಿ ವಿಜಯೇಂದ್ರ ಅಂತಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಬಸರಿಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ. ಯಡಿಯೂರಪ್ಪ ನಾಲ್ವತ್ತು ವರ್ಷಗಳ ರಾಜಕಾರಣದಲ್ಲಿ ಅನೇಕ ಏಳು ಬೀಳುಗಳನ್ನ ನೋಡಿದ್ದಾರೆ. ಸಾವಿರಾರು ಉಳಿ ಪೆಟ್ಟುಗಳನ್ನ ನೋಡಿದ್ದಾರೆ. ಈಗ ನಾಲ್ಕನೇ ಬಾರಿ ಸಿಎಂ ಆಗಿ ರಾಜಾಹುಲಿ ಅನಿಸಿಕೊಂಡಿದ್ದಾರೆ ಎಂದರು.

    ಈಗಾಗಲೇ ಐವತ್ತರಿಂದ ಅರವತ್ತು ಪರ್ಸೆಂಟ್ ಉಳಿ ಪೆಟ್ಟು ಬೀಳುತ್ತದೆ. ಅದೆಲ್ಲ ಬಿದ್ದ ಮೇಲೆ ಒಂದು ಸುಂದರ ಮೂರ್ತಿ ಆಗುತ್ತದೆ. ತಂದೆ ಹೇಗೆ ರಾಜಾಹುಲಿ ಅನಿಸಿಕೊಂಡಿದ್ದಾರೋ ಹಾಗೇ ನೀವು ರಾಜಾಹುಲಿಯಂತೆ ಸೇವೆ ಮಾಡಿ ಎಂದು ಹೇಳಿರುವುದಾಗಿ ತಿಳಿಸಿದರು.

    ಟಿವಿ, ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೊಸ ಮಂತ್ರಿಗಳು ಬಂದಿದ್ದಾರೆ. ಹೊಸ ಮಂತ್ರಿಗಳು ಹೇಳಿದ್ದರೂ ಹೇಳಿರಬಹುದು. ಆದರೆ ಆ ರೀತಿ ಮಾಡಲು ಆಗುವುದಿಲ್ಲ. ಕೆಲವರು ಮೂರು, ನಾಲ್ಕು ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಇದೆ. ನಿಯಮ ಉಲ್ಲಂಘನೆ ಮಾಡಿದವರ ಕಾರ್ಡ್ ಕ್ಯಾನ್ಸಲ್ ಮಾಡುವುದಾಗಿ ಹೇಳಿರಬೇಕಷ್ಟೆ ಎಂದು ಹೇಳಿದರು.

    ಕೋವಿಡ್ 19 ಇರುವುದರಿಂದ ಹೆಚ್ಚುವರಿ ಸೆಸ್ ಹಾಕಿದ್ದಾರೆ. ಅದು ಬಿಟ್ಟರೆ ಬೇರೆ ಏನಿಲ್ಲ. ಏರಿಳಿತ ಆಗುತ್ತಿರುತ್ತೆ. ಒಂದು ಸಲ ಕಡಿಮೆ ಆಗುತ್ತಿರುತ್ತದೆ. ಎಲ್ಲವನ್ನು ಸ್ವಲ್ಪ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ಹೋಗಬೇಕು ಎಂದರು.

  • ಸಿದ್ದರಾಮಯ್ಯ ಜ್ಯೋತಿಷ್ಯ ಕಲಿಯುತ್ತಿರಬೇಕು : ಎಸ್.ಟಿ. ಸೋಮಶೇಖರ್ ವ್ಯಂಗ್ಯ

    ಸಿದ್ದರಾಮಯ್ಯ ಜ್ಯೋತಿಷ್ಯ ಕಲಿಯುತ್ತಿರಬೇಕು : ಎಸ್.ಟಿ. ಸೋಮಶೇಖರ್ ವ್ಯಂಗ್ಯ

    – ಮಾಡೋ ಕೆಲಸ ಮಾಡಲಿ, ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಡ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷ್ಯ ಹೇಳುವುದಕ್ಕೆ ಶುರು ಮಾಡಿದರೋ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರಾಗಿರುವ ಕಾರಣ ಕೆಲಸ ಇಲ್ಲದೆ ಜ್ಯೋತಿಷ್ಯ ಕಲಿಯುತ್ತಿರಬೇಕು. ಅದಕ್ಕೆ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಆಗಾಗಾ ಜ್ಯೋತಿಷ್ಯ ಹೇಳುತ್ತಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

    ಸರ್ಟಿಫಿಕೇಟ್ ಬೇಡ: ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಈಗ ಪುರುಸೊತ್ತು ಇರಬೇಕು. ವಿರೋಧ ಪಕ್ಷದ ನಾಯಕರಾಗಿ ಮಾಡಬೇಕಾದ ಕೆಲಸವನ್ನು ಮಾಡುವುದು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಅವರ ಪಕ್ಷದಲ್ಲಾಗುತ್ತಿರುವುದನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ಉಸಾಬರಿ ಏಕೆ? ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಮಗೆ ಕೇಂದ್ರ ಗೃಹ ಸಚಿವರ ಸರ್ಟಿಫಿಕೇಟ್ ಸಾಕು ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ ಎಂದರು.

    ಅವರು ಪದೇ ಪದೇ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ತಮ್ಮ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಪ್ರಚಾರಕ್ಕಾಗಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಅಷ್ಟೇ. ಮುಖ್ಯಮಂತ್ರಿಗಳು ಕೋವಿಡ್ ಹಾಗೂ ಉಳಿದ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೇ ಹೇಳಿದ್ದಾರೆ. ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಇನ್ನು ಎರಡೂವರೆ ವರ್ಷ ಆಡಳಿತ ನಡೆಸುತ್ತಾರೆ. ಉತ್ತಮ ಮತ್ತು ದಕ್ಷ ಆಡಳಿತ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮಗೆ ಶಾ ಅವರ ಸರ್ಟಿಫಿಕೇಟ್ ಸಾಕು. ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ. ಅದನ್ನು ಅವರೇ ಇಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.

    ರಾಜ್ಯದಲ್ಲಿ ದೊಡ್ಡ ಸುದ್ದಿಯಲ್ಲಿರುವ ಸಿಡಿ ವಿಚಾರದ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ಸಿಡಿ ಬಗ್ಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವುದು ಬೆಂಗಳೂರು ಅಭಿವೃದ್ಧಿಯ ಸಿಡಿ. ಮುಖ್ಯಮಂತ್ರಿಗಳು ಈಗಾಗಲೇ 2 ಸಭೆ ನಡೆಸಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೊಂದು ರೂಪುರೇಷೆ ನೀಡಿ ಸಂಬಂಧಿಸಿದ ಸಿಡಿಯನ್ನು ನಮಗೆ ಕಳುಹಿಸುವುದಾಗಿ ಹೇಳಿದ್ದಾರೆ. ಅದು ಬಿಟ್ಟು ಬೇರೆ ಮಾಹಿತಿ ನನಗೆ ಇಲ್ಲ. ಅದನ್ನು ಹೇಳಿದವರಿಗೇ ಕೇಳಬೇಕು ಎಂದು ಪ್ರತಿಕ್ರಿಯಿಸಿದರು.

    ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ “ಡಬಲ್ ಇಂಜಿನ್” ಅಭಿವೃದ್ಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ರಾಜ್ಯದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದಲ್ಲದೆ, ವೇಗ ಪಡೆದುಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ 8-9 ತಿಂಗಳು ಎಲ್ಲ ಕಡೆಯೂ ಅಭಿವೃದ್ಧಿ ಕುಂಠಿತಗೊಂಡಿತ್ತು. ಆದರೆ ಈಗ ಎಲ್ಲವೂ ಪ್ರಾರಂಭವಾಗಿದೆ. ಒಂದೊಂದು ಕ್ಷೇತ್ರಕ್ಕೆ ಲೋಕೋಪಯೋಗಿಯಿಂದ ಸುಮಾರು 25 ಕೋಟಿ ರೂಪಾಯಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗೆ ಒಂದೊಂದಾಗಿ ಚಾಲನೆ ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

  • ನಿಂಬೆಹಣ್ಣಿನ ಬಗ್ಗೆ ಮಾತಾಡೋರಿಗೆ ಹಿಂದುತ್ವ ಗೊತ್ತಿಲ್ಲ: ಎಸ್‍ಟಿಎಸ್ ಹೇಳಿಕೆಗೆ ಪ್ರಜ್ವಲ್ ತಿರುಗೇಟು

    ನಿಂಬೆಹಣ್ಣಿನ ಬಗ್ಗೆ ಮಾತಾಡೋರಿಗೆ ಹಿಂದುತ್ವ ಗೊತ್ತಿಲ್ಲ: ಎಸ್‍ಟಿಎಸ್ ಹೇಳಿಕೆಗೆ ಪ್ರಜ್ವಲ್ ತಿರುಗೇಟು

    – ವಿಜಯೇಂದ್ರ ತಂದೆ ಸ್ಥಾನ ಉಳಿಸಿಕೊಳ್ಳಲಿ

    ಹಾಸನ: ನಿಂಬೆಹಣ್ಣಿನ ಬಗ್ಗೆ ಮಾತಾಡೋರಿಗೆ ಹಿಂದುತ್ವದ ಕುರಿತು ಗೊತ್ತಿಲ್ಲ ಎಂದು ಹೇಳುವ ಮೂಲಕ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ತಿರಗೇಟು ನೀಡಿದ್ದಾರೆ. ತಂದೆ, ಮಾಜಿ ಸಚಿವರಾಗಿರುವ ಹೆಚ್.ಡಿ.ರೇವಣ್ಣ ಅವರ ಬಗ್ಗೆ ಮಾತನಾಡೋರಿಗೆ ನಿಂಬೆಹಣ್ಣಿನ ಮಹತ್ವ ಹೇಳಿ ಕಿಡಿಕಾರಿದ್ದಾರೆ.

    ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ಕೇಂದ್ರ ಸಚಿವ ರಾಜನಾಥ್ ಸಿಂಗ್ ರಫೆಲ್ ಖರೀದಿಸುವ ವೇಳೆ ವಿಮಾನದ ಚಕ್ರಕ್ಕೆ ನಿಂಬೆಹಣ್ಣು ಇರಿಸಿದ್ದರು. ಅವರು ಮಾಟ-ಮಂತ್ರ ಮಾಡಿ ನಿಂಬೆಹಣ್ಣು ಇಟ್ಟಿದ್ದರಾ ಎಂದು ಪ್ರಶ್ನಿಸಿದರು.

    ಪ್ರತಿ ಗ್ರಾಮಕ್ಕೆ ಹೋದರು ಕೂಡ ಅಲ್ಲಿ ನಿಂಬೆಹಣ್ಣನ್ನ ಕೊಡುವ ಸಂಪ್ರದಾಯವಿದೆ. ಹಾಗಂತ ನಿಂಬೆಹಣ್ಣನ್ನು ಕೊಟ್ಟವರೆಲ್ಲ ಮಾಟ-ಮಂತ್ರ ಮಾಡಿಸುತ್ತಾರೆ ಅಂತ ಅಲ್ಲ. ಯಾವುದೇ ದೇವಸ್ಥಾನಗಳಿಗೆ ಹೋದರೂ ಅಲ್ಲಿ ಮೊದಲಿಗೆ ನಿಂಬೆಹಣ್ಣನ್ನು ಕೊಡುವುದು ಸಂಪ್ರದಾಯ. ಶೃಂಗೇರಿ ದೇವಾಲಯವನ್ನು ರೇವಣ್ಣನವರು ಬಹಳವಾಗಿ ನಂಬಿದ್ದಾರೆ. ಅಲ್ಲಿಯೂ ನಿಂಬೆಹಣ್ಣನ್ನು ಕೊಡುತ್ತಾರೆ. ಹಾಗಂತ ರೇವಣ್ಣನವರು ಮಾಟ-ಮಂತ್ರ ಮಾಡಿಸುತ್ತಿದ್ದಾರೆ ಅಂತ ಹೇಳುವುದಕ್ಕೆ ಆಗುತ್ತಾ? ಅವರಿಗೆ ಹಿಂದುತ್ವದ ಬಗ್ಗೆ ಗೊತ್ತಿಲ್ಲ ಅಂತ ಕಾಣಿಸುತ್ತದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

    ಹಾಸನದ ಬೇಲೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುತ್ತ ವಿಜಯೇಂದ್ರ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ, 50 ವರ್ಷದಿಂದ ನಮ್ಮ ಕುಟುಂಬ ರಾಜಕೀಯ ನೋಡಿಕೊಂಡು ಬಂದಿದೆ. ಇಲ್ಲಿ ಗೆಲುವು ಸೋಲು ಶಾಶ್ವತವಲ್ಲ. ನಮ್ಮ ಬಗ್ಗೆ ಮಾತನಾಡುವ ಬದಲು ಅವರ ತಂದೆ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡಲಿ ಎಂದರು.

    ಎಸ್.ಟಿ.ಸೋಮಶೇಖರ್ ಹೇಳಿದ್ದೇನು?: ಹಾಸನದಲ್ಲಿ ಪ್ರೀತಂಗೌಡ್ರೇ ಇರಬೇಕು. ನಿಂಬೆಹಣ್ಣಿಗೆ ಪ್ರತಿ ವಿರುದ್ಧ ನಿಂಬೆಹಣ್ಣು ತೋರಿಸುವಂತವರು ಪ್ರೀತಂಗೌಡ. ಹೀಗಾಗಿ ಹಾಸನ ಜಿಲ್ಲೆಗೆ ಅವರೇ ಸರಿ ಎಂದು ಪ್ರೀತಂಗೌಡರನ್ನು ಹಾಡಿಹೊಗಳಿದ್ದರು. ಇದನ್ನೂ ಓದಿ: ಎಲೆಕ್ಷನ್ ಅಂದ್ರೆ ಏನೂಂತ ಗ್ರಾ.ಪಂ ಚುನಾವಣೆಯಲ್ಲಿ ತೋರಿಸ್ತೇವೆ: ಪ್ರಜ್ವಲ್

    ಆ ನಿಂಬೆಹಣ್ಣು ತೋರಿಸಿದರೆ ರಾಜ್ಯದ ಎಂತೆಂತಹ ನಾಯಕರೇ ತತ್ತರಿಸಿ ಹೋಗುತ್ತಾರೆ. ಆದರೆ ಆ ನಿಂಬೆಹಣ್ಣಿಗೆ ಪ್ರತಿ ನಿಂಬೆಹಣ್ಣು ತೋರಿಸಿ ಕಂಟ್ರೋಲ್ ಮಾಡುವ ಶಕ್ತಿ ಇದ್ದರೆ ಅದು ಪ್ರೀತಂಗೌಡರಿಗೆ ಮಾತ್ರ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನಾವು ನೀಡುತ್ತೇವೆ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ನಿಂಬೆಹಣ್ಣಿನ ಶಕ್ತಿ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದರು.

  • ಈ ವಾರ ಬಿಎಸ್‍ವೈ ಸಂಪುಟ ಸರ್ಜರಿ ಸಾಧ್ಯತೆ – ಹಾಲಿ ಮೂವರು ಸಚಿವರಿಗೆ ಕೊಕ್?

    ಈ ವಾರ ಬಿಎಸ್‍ವೈ ಸಂಪುಟ ಸರ್ಜರಿ ಸಾಧ್ಯತೆ – ಹಾಲಿ ಮೂವರು ಸಚಿವರಿಗೆ ಕೊಕ್?

    – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಸಿಟ್ಟು

    ಬೆಂಗಳೂರು: ಇಂದು ಬಿಹಾರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಸಂಪುಟ ಸರ್ಜರಿ ವಿಚಾರವಾಗಿ ಚರ್ಚೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ರೆ ಬುಧವಾರವೇ ದೆಹಲಿಗೆ ಹಾರಲು ಸಿಎಂ ಯಡಿಯೂರಪ್ಪ ರೆಡಿ ಆಗಿದ್ದಾರೆ. ಸಿಎಂ ದೆಹಲಿಗೆ ತೆರಳುವ ಮುನ್ನ ಬುಧವಾರ ಸಂಪುಟ ಸಭೆ ಕರೆದಿದ್ದು, ಕೆಲವರ ಪಾಲಿಗೆ ಅದೇ ಕೊನೆಯ ಕ್ಯಾಬಿನೆಟ್ ಸಭೆ ಆಗುವ ಸಾಧ್ಯತೆಗಳಿವೆ.

    ಕ್ರಿಯಾಶೀಲರಲ್ಲದ ಕೆಲ ಸಚಿವರನ್ನು ಸಂಪುಟದಿಂದ ಕೈಬಿಡಲು ಸಿಎಂ ಪ್ಲಾನ್ ಮಾಡ್ಕೊಂಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಸಂಪುಟ ಲಾಬಿ ಜೋರಾಗಿದೆ. ಸಚಿವ ಸ್ಥಾನ ಪಡೆದೇ ತೀರಬೇಕೆಂದು ಪ್ರಯತ್ನ ನಡೆಸುತ್ತಿರುವ ಎಂಎಲ್‍ಸಿ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್‍ಗೆ ಮಿತ್ರಮಂಡಳಿ ಸದಸ್ಯ, ಸಚಿವ ಎಸ್‍ಟಿ ಸೋಮಶೇಖರ್ ಬಿಗ್ ಶಾಕ್ ನೀಡಿದ್ದಾರೆ.

    ಎಂಟಿಬಿ ಹಾಗೂ ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಚರ್ಚೆಯೇ ಆಗಿಲ್ಲ. ಇದಕ್ಕಾಗಿ ನಾವು ಪ್ರತ್ಯೇಕವಾಗಿ ಸಿಎಂ ಭೇಟಿ ಆಗುವ ಅಗತ್ಯವೂ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಬಾಂಬ್ ಸಿಡಿಸಿದ್ದಾರೆ. ಅತ್ತ ಮಂತ್ರಿಗಿರಿ ಮೇಲೆ ಟವೆಲ್ ಹಾಕುತ್ತಿರುವ ಶಾಸಕ ರೇಣುಕಾಚಾರ್ಯ, ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ಮಾತ್ರ ಮಂತ್ರಿಗಿರಿ ನೀಡಬೇಕು. ಜನರಿಂದ ಆಯ್ಕೆಯಾದವರನ್ನು ಮಾತ್ರ ಮಂತ್ರಿ ಮಾಡಬೇಕು. ಸೋತವರಿಗೆ ಸಚಿವ ಸ್ಥಾನ ನೀಡಬಾರ್ದು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ವಾದ ಮಂಡಿಸಿದ್ದಾರೆ.

    ಬ್ಯಾಂಡ್ ಬಾರಿಸಿ ತಮಟೆ ಹೊಡೆದು ಬಾಯಿ ಬಡ್ಕೊಂಡ್ರೆ ಸಚಿವ ಸ್ಥಾನ ಸಿಗಲ್ಲ. ಹಾದಿ ರಂಪ ಮಾಡೋದು ನನಗಿಷ್ಟವಿಲ್ಲ. ಆದ್ರೆ ರಾಜಕೀಯವಾಗಿ ಯಾರೂ ಸನ್ಯಾಸಿಗಳಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಈ ಮಧ್ಯೆ ಗೆಲುವಿಗೆ ಸಹಕರಿಸಿದ ಸಚಿವ ಸೋಮಣ್ಣರನ್ನು ಭೇಟಿಯಾದ ಆರ್.ಆರ್.ನಗರ ಶಾಸಕ ಮುನಿರತ್ನ ಧನ್ಯವಾದ ಹೇಳಿದ್ದಾರೆ.