Tag: ಎಸ್ ಆರ್ ಹಿರೇಮಠ

  • ಮುಂಬರುವ ಚುನಾವಣೆಯಲ್ಲಿ ಮೋದಿ ಸರ್ಕಾರ ಸೋಲಿಸಲು ನಿರ್ಧರಿಸಿದೆ: ಎಸ್‌.ಆರ್ ಹೀರೆಮಠ

    ಮುಂಬರುವ ಚುನಾವಣೆಯಲ್ಲಿ ಮೋದಿ ಸರ್ಕಾರ ಸೋಲಿಸಲು ನಿರ್ಧರಿಸಿದೆ: ಎಸ್‌.ಆರ್ ಹೀರೆಮಠ

    ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಲು ಹೊರಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಗ ತಾನೇ ಭರವಸೆ ನೀಡಿದ ಬೆಂಬಲ ಬೆಲೆ ಕಾನೂನು ಜಾರಿ ಮಾಡುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡದೇ ರೈತ ವಿರೋಧಿ ಧೋರಣೆ ತೋರುತ್ತಿದ್ದು, ಈ ಸರ್ಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ನಿರ್ಧರಿಸಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್ ಹೀರೆಮಠ (SR Hiremath) ಹೇಳಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ರೈತ ಪಂಚಾಯತ್ ಸಭೆಯನ್ನು ನಡೆಸಲಾಯಿತು. ದೇಶದ್ಯಾಂತ ಬಂದಿದ್ದ ರೈತ ಮುಖಂಡರು, ವಿವಿಧ ಸಂಘಟನೆಗಳ ನಾಯಕರು ಭಾಗಿಯಾಗಿದ್ದರು. ಎಲ್ಲರೂ ಸೇರಿ ಮುಂಬರುವ ಚುನಾವಣೆಯಲ್ಲಿ ರೈತ ವಿರೋಧಿ ಪ್ರಧಾನಿ ಮೋದಿ ಸರ್ಕಾರವನ್ನು ಸೋಲಿಸಲು ನಿರ್ಧರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೆ ಟಿಕೆಟ್ ಕೊಡಿಸಿದ್ದು ಪತ್ನಿ ಕುಟುಂಬ ಅಲ್ಲ: ಯದುವೀರ್ ಸ್ಪಷ್ಟನೆ

    2019 ರಲ್ಲಿ ಬಹುಮತ ಪಡೆದ ಮೋದಿ (Narendra Modi) ಸರ್ಕಾರ ಬೇಕಾದ್ದು, ಮಾಡಬಹುದು ಎನ್ನುವ ರೀತಿಯಲ್ಲಿ ವರ್ತಿಸಿತು. ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಜಾರಿ ಮಾಡಿತು. ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ವಾಪಸ್ ಪಡೆಯಿತು. ಇದರ ಭಾಗವಾಗಿ ಶುಕ್ರವಾರ ರೈತ ಪಂಚಾಯತ್ ನಡೆಸಲಾಯಿತು. ರಾಜ್ಯದಿಂದ ಸಂಯುಕ್ತ ಹೋರಾಟ ಕರ್ನಾಟಕದಿಂದ ಭಾಗಿಯಾಗಿತ್ತು ಎಂದರು.

    ರೈತರ (Farmers) ಬೇಡಿಕೆ ಬಗ್ಗೆ ನಿನ್ನೆ ಧ್ವನಿ ಎತ್ತುವ ಕೆಲಸ ಮಾಡಿದೆ. ಸ್ವಾಮಿನಾಥನ್ ವರದಿ ಜಾರಿಗೆ ನಾವು ಆಗ್ರಹಿಸಿದ್ದೇವೆ, ನಿನ್ನೆ ನಡೆಸಿದ ಪ್ರತಿಭಟನೆ ಒಂದು ಪ್ರಭಾವಶಾಲಿ ಪ್ರತಿಭಟನೆಯಾಗಿದೆ ರೈತರ ಈ ಹೋರಾಟ ಮೋದಿ ಸರ್ಕಾರದ ಸೋಲಿಗೆ ನಾಂದಿಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಚುನಾವಣಾ ಬಾಂಡ್ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಒಂದು ರಾಜಕೀಯ ಭ್ರಷ್ಟಚಾರ, ಸುಪ್ರೀಂಕೋರ್ಟ್ ಇದರ ವಿರುದ್ಧ ಆದೇಶ ನೀಡಿದೆ. ಲೋಕಸಭಾ ಚುನಾವಣೆ ಒಳಗೆ ಜನರಿಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಮಾಡಿದೆ. ಇದೇ ರೀತಿಯ ಧೈರ್ಯ ಚುನಾವಣಾ ಆಯೋಗದ ಸ್ವಾಯತ್ತತೆಯ ನೀಡುವಲ್ಲಿಯೂ ಕೋರ್ಟ್ ಮಾಡಬೇಕು. ಈ ನಿಟ್ಟಿನಲ್ಲಿ ಅರ್ಜಿಯನ್ನು ದಾಖಲಿಸಿದೆ ಮಾರ್ಚ್ 2 ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ. ರಾಜಕೀಯ ಪ್ರಭಾವದಿಂದ ಚುನಾವಣಾ ಆಯೋಗ ಹೊರಬರಬೇಕಿದೆ ಕೇಂದ್ರ ಸರ್ಕಾರ ತಂದಿರುವ ಕಾನೂನು ರದ್ದು ಮಾಡಬೇಕಿದೆ ಎಂದು ಹೇಳಿದರು.

  • ಜನಾರ್ದನ ರೆಡ್ಡಿ ಪಕ್ಷ ಧೂಳಿಪಟವಾಗಲಿದೆ: ಎಸ್. ಆರ್ ಹಿರೇಮಠ್ ಭವಿಷ್ಯ

    ಜನಾರ್ದನ ರೆಡ್ಡಿ ಪಕ್ಷ ಧೂಳಿಪಟವಾಗಲಿದೆ: ಎಸ್. ಆರ್ ಹಿರೇಮಠ್ ಭವಿಷ್ಯ

    ಹುಬ್ಬಳ್ಳಿ: ಗಾಲಿ ಜನಾರ್ದನ ರೆಡ್ಡಿ (JanardhanReddy) ಯ ಪಕ್ಷ ಧೂಳಿಪಟವಾಗಲಿದೆ. ಸುಪ್ರೀಂಕೋರ್ಟ್ ಬಳ್ಳಾರಿ ಮತ್ತು ಆಂಧ್ರ ಪ್ರದೇಶ ಪ್ರವೇಶಕ್ಕೆ ನಿರ್ಬಂಧ ಹಾಕಿದೆ. ಇಂಥವರು ಸಾರ್ವಜನಿಕ ಜೀವನಕ್ಕೆ ಬರಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ (S. R. Hiremath) ಎಂದು ಹೇಳಿದರು.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಂಥವರ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ತರುವುದು ಸರಿಯಲ್ಲ. ದಶಕಗಳ ಹಿಂದ ಇಂಥದ್ದೊಂದು ಪ್ರಯತ್ನ ನಡೆದಿತ್ತು. ಗಾಲಿ ಜನಾರ್ದನ ರೆಡ್ಡಿ ಬಲಗೈ ಬಂಟ ಶ್ರೀರಾಮುಲು (Sriramulu) ಬಿ.ಎಸ್.ಆರ್. ಆರಂಭಿಸಿದ್ದರು. ಬಿಎಸ್‍ಆರ್ ಗಾಳಿಪಟದಂತೆ ಹಾರಿ ಹೋಗಲು ನಾವು ಪಾದಯಾತ್ರೆ ಮಾಡಿದ್ದೆವು ಎಂದರು. ಇದನ್ನೂ ಓದಿ: ಮತ್ತೆ ಒಂದಾದ ಕೆ.ಹೆಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ

    ಜನಾರ್ದನ ರೆಡ್ಡಿಗೂ ನೆಲ ಕಚ್ಚುವ ಸಮಯ ಬಂದೇ ಬರುತ್ತದೆ. ಇಂಥವರ ಪಕ್ಷಕ್ಕೆ ನಮ್ಮ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನ ಇರಬಾರದು ಎಂದು ಅವರು ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಕಾನೂನು ಸಚಿವ ಕಿರಣ್‌ ರಿಜೀಜು ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಸಂವಿಧಾನದ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಇವರು ತಮ್ಮ ಸ್ಥಾನದಲ್ಲಿ ಮುಂದುವರಿಯುವ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಇಂಥವರ ವಿರುದ್ಧದ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.

    ವಿ.ಜಿ.ಸಿದ್ಧಾರ್ಥ್ ಮಾಲೀಕತ್ವದ ಜಮೀನನ್ನು ಕೆಲವು ಎನ್.ಜಿ.ಒ ಹಾಗೂ ಪ್ರಭಾವಿ ಅಧಿಕಾರಿಗಳು ಶಾಮೀಲಾಗಿ 708ಕೋಟಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಸರ್ಕಾರದ ಬೆಲೆಗಿಂತ ಹೆಚ್ಚಿನ ಬೆಲೆ ಮಾರಾಟ ಮಾಡುವ ಕುತಂತ್ರ ನಡೆಸುತ್ತಿದ್ದಾರೆ. ಇವರ ವಿರುದ್ಧ ರಾಜ್ಯ ಸರ್ಕಾರ ತನಿಖೆ ಆದೇಶಿಸಬೇಕೆಂದು ಅವರು ಒತ್ತಾಯಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ಗೋಮಾಳ ಜಮೀನು ಕಬಳಿ ಮಾಡಿ ಪಾರ್ಮಂಹೌಸ್ ಕಟ್ಟಿದ್ದಾರೆ. ಇದರ ವಿರುದ್ದ ನ್ಯಾಯಾಲಯ ಕೊಟ್ಟ ತೀರ್ಪು ಸ್ವಾಗತಿಸಲಾಗುವುದು ಎಂದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನ ಸೋಲಿಸಿ: ಎಸ್.ಆರ್ ಹಿರೇಮಠ

    ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನ ಸೋಲಿಸಿ: ಎಸ್.ಆರ್ ಹಿರೇಮಠ

    ಧಾರವಾಡ: ಕೇಂದ್ರ ಸರ್ಕಾರಕ್ಕೆ ಸಂವೇದನಾಶೀಲತೆ ಇಲ್ಲ, ಇವರನ್ನು ರಾಜಕೀಯವಾಗಿ ಉಚ್ಛಾಟನೆ ಮಾಡುವ ಅವಶ್ಯಕತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನ ಸೋಲಿಸಿ ಎಂದು ನಾವು ರಾಜ್ಯದ ಜನತೆಗೆ ಕರೆ ಕೊಡುತ್ತೇವೆ. ಬಿಜೆಪಿ ಸರ್ಕಾರ ಸರ್ವಾಧಿಕಾರತ್ವ ತೋರುತ್ತಿದೆ. ದಬ್ಬಾಳಿಕೆಯಿಂದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಹೇರುತ್ತಿದೆ ಎಂದರು.

    ಜನರಿಂದ ಆಯ್ಕೆಯಾದ ಸರ್ಕಾರ ಜನರನ್ನ ಕೇಳಿ ಕಾಯ್ದೆ ತರಬೇಕು. ಅದನ್ನ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

  • ಹೆಚ್‍ಡಿಕೆ ಭೂಹಗರಣಕ್ಕೆ ಶೀಘ್ರದಲ್ಲೇ ತಾತ್ವಿಕ ಅಂತ್ಯ: ಎಸ್.ಆರ್.ಹಿರೇಮಠ

    ಹೆಚ್‍ಡಿಕೆ ಭೂಹಗರಣಕ್ಕೆ ಶೀಘ್ರದಲ್ಲೇ ತಾತ್ವಿಕ ಅಂತ್ಯ: ಎಸ್.ಆರ್.ಹಿರೇಮಠ

    – ಕ್ರಿಮಿನಲ್ಸ್ ಗಳನ್ನ ಬೆಳೆಸಿದ್ದಕ್ಕೆ ಎಸ್.ಎಂ.ಕೃಷ್ಣ ಕ್ಷಮೆ ಕೇಳಲಿ
    – ಕಾಫಿ ಡೇ ಹಗರಣ ವರದಿಯಲ್ಲಿ ಪ್ರಮುಖ ಭ್ರಷ್ಟರ ಉಲ್ಲೇಖವಿಲ್ಲ

    ರಾಯಚೂರು: ಒಂದು ತಿಂಗಳಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಭೂಹಗರಣ ಸಂಪೂರ್ಣ ಬಿಚ್ಚಿಡುತ್ತೇವೆ ಅಂತ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ, ರಾಮನಗರದ ಕೇತಗಾನಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ 200 ಎಕರೆ, 65 ಎಕರೆ ಗೋಮಾಳ ಕಬಳಿಕೆ ಬಗ್ಗೆ ಶೀಘ್ರದಲ್ಲೇ ಹಗರಣವನ್ನ ತಾತ್ವಿಕ ಹಂತಕ್ಕೆ ಒಯ್ಯುತ್ತೇವೆ. ಪ್ರಕರಣ ಲೋಕಾಯುಕ್ತ ಮೆಟ್ಟಿಲು ಏರಿದ್ದರೂ, ಹೈಕೋರ್ಟ್ ಸೂಚಿಸಿದ್ದರು ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರು.

    ಇನ್ನೂ ಕಾಫಿ ಡೇ ಹಗರಣ ಕುರಿತು ಸಿಬಿಐ ನಿವೃತ್ತ ಡಿಐಜಿ ಅಶೋಕ್ ಮಲ್ಹೋತ್ರ ವರದಿ ನೀಡಿದ್ದಾರೆ. ಆದರೆ ವರದಿಯಲ್ಲಿ ಅನೇಕ ಭ್ರಷ್ಟರ, ಭ್ರಷ್ಟತನದ ಉಲ್ಲೇಖವಿಲ್ಲ. ಡಿಕೆಶಿ, ಮಾಳವಿಕ ಹೆಗಡೆ ಸೇರಿ ಅನೇಕರು ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಹಗರಣದ ಬಗ್ಗೆ ಗಂಭೀರವಾದ ತನಿಖೆ ನಡೆದಿಲ್ಲ ಅಂತ ಆರೋಪಿಸಿದರು. ನಿವೃತ್ತ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಕಾಫಿ ಡೇ ಛೇರ್ಮನ್ ಆಗಿದ್ದಾರೆ. ರಂಗನಾಥ್ ಎಷ್ಟು ಪ್ರಮಾಣಿಕರೋ ಗೊತ್ತಿಲ್ಲ, ತನಿಖೆ ಸರಿಯಾಗಿ ನಡೆಯುವಂತೆ ಮಾಡುವುದು ಅವರ ಕರ್ತವ್ಯ ಎಂದರು.

    ಮಾಜಿ ಸಿಎಂ ಎಸ್.ಎಂ.ಕೃಷ್ಣ ಕ್ರಿಮಿನಲ್ಸ್ ಗಳನ್ನ ಬೆಳೆಸಿದ್ದಕ್ಕೆ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಕೃಷ್ಣ ತಮ್ಮ ಅಪರಾಧಗಳನ್ನ ಮುಚ್ಚಿಕೊಳ್ಳಲು ಬಿಜೆಪಿ ಸೇರಿದ್ದಾರಾ ಹೇಳಬೇಕು. ಹೊರಗೆ ಬಂದು ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಅನ್ನೋದನ್ನ ಎಸ್.ಎಂ.ಕೃಷ್ಣ ಸ್ವತಃ ಹೇಳಬೇಕು ಅಂತ ಒತ್ತಾಯಿಸಿದರು. ಎಸ್.ಎಂ.ಕೃಷ್ಣ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಅಕ್ರಮ ಹಣದಿಂದ ಕಾಫಿ ಡೇ ಎಂಟರ್ ಪ್ರೈಸಸ್ ಮಾಡಿದ್ದಾರೆ. ಎಸ್ ಎಂ ಕೃಷ್ಣರ ಅಳಿಯ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನವಿದೆ. ಕ್ರಿಮಿನಲ್ಸ್ ಗಳನ್ನು ಬೆಳೆಸಿದ್ದಕ್ಕೆ ಎಸ್.ಎಂ.ಕೃಷ್ಣ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

    ದೆಹಲಿಯಲ್ಲಿ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸರ್ಕಾರ ದುಡಿಯುವ ಜನರ ಪರವಾಗಿ ಕೆಲಸ ಮಾಡಬೇಕು. ಶ್ರೀಮಂತರ ಪರವಾಗಿ ಕಾನೂನು ಮಾಡುವುದನ್ನು ಬಿಡಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಮೂರು ಜನವಿರೋಧಿ ಕಾಯ್ದೆಗಳನ್ನ ಹಿಂಪಡೆಯಬೇಕು ಅಂತ ಎಸ್.ಆರ್.ಹಿರೇಮಠ ಒತ್ತಾಯಿಸಿದರು.

  • ಡಿಕೆಶಿ ಸಂಪಾದಿಸಿದ್ದು ಸಾರ್ವಜನಿಕರ ಹಣ: ಎಸ್ ಆರ್ ಹಿರೇಮಠ

    ಡಿಕೆಶಿ ಸಂಪಾದಿಸಿದ್ದು ಸಾರ್ವಜನಿಕರ ಹಣ: ಎಸ್ ಆರ್ ಹಿರೇಮಠ

    ಧಾರವಾಡ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಗಳಿಸಿದ್ದು ಸಾರ್ವಜನಿಕರ ಹಣ. ಅವರ ಮೇಲೆ ಎಫ್‍ಐಆರ್ ದಾಖಲಿಸಬೇಕು. ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಹೇಳಿದರು.

    ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮೇಲೆ ಎಫ್‍ಐಆರ್ ದಾಖಲಿಸಿ ಬೇರೆ ಯಾರೂ ಇಂತಹ ಕೆಲಸ ಮಾಡದಂತೆ ಮಾಡಬೇಕು. ಅವರ ಅಕ್ರಮ ಸಂಪಾದನೆ ಮೇಲೆ ಸಿಬಿಯ ದಾಳಿ ಮಾಡಿರುವುದು ಬಹಳ ಮಹತ್ವದ ವಿಷಯ. ಅವರ ಪರವಾಗಿ ಈ ಕಾಂಗ್ರೆಸ್ಸಿನವರು ಪ್ರತಿಭಟನೆ ಮಾಡುವುದನ್ನು ಬಂದ್ ಮಾಡಬೇಕು ಎಂದರು.

    ಸಚಿವ ಶ್ರೀರಾಮುಲು 100 ಕೋಟಿ ರೂಪಾಯಿ ಮೌಲ್ಯದ ಮನೆ ಕಟ್ಟಲು ಹಣ ಎಲ್ಲಿಂದ ಬಂತು? ನಾವು ಈಗಾಗಲೇ ಈ ರೀತಿ ಅಕ್ರಮ ಸಂಪಾದನೆ ಮಾಡಿದವರ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೆವೆ ಎಂದರು.

  • ಗೊಗೊಯ್ ದೇಶದ ನಿರೀಕ್ಷೆ ಹುಸಿಗೊಳಿಸಿದ್ರು: ಎಸ್.ಆರ್.ಹಿರೇಮಠ

    ಗೊಗೊಯ್ ದೇಶದ ನಿರೀಕ್ಷೆ ಹುಸಿಗೊಳಿಸಿದ್ರು: ಎಸ್.ಆರ್.ಹಿರೇಮಠ

    ಧಾರವಾಡ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಮ್ಮ ದೇಶದೊಳಗಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ, ರಂಜನ್ ಗೊಗೊಯ್ ರಾಜ್ಯಸಭೆಗೆ ಆಯ್ಕೆಯಾದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು. ರಂಜನ್ ಗೊಗೊಯ್ ನವೆಂಬರ್ ನಲ್ಲಿ ನಿವೃತ್ತಿಯಾಗಿದ್ದಾರೆ, ಕೆಲವೇ ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಹಿಂದೆಯೂ ಕೆಲವರು ಇದೇ ರೀತಿ ನಿವೃತ್ತಿ ನಂತರ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಕೆಲವೇ ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದರು.

    ನಿವೃತ್ತಿ ಜೀವನದ ನಂತರ ಲಾಭ ಪಡೆಯಲು ನ್ಯಾಯಾಧೀಶರು ಮಾಡಬಾರದ ಕೆಲಸವನ್ನು ಮಾಡ್ತಾರೆ ಎಂದು ಜನರು ಹೇಳುತ್ತಾರೆ. ಮಾನ, ಮರ್ಯಾದೆ, ನಾಚಿಕೆ ಇದ್ರೆ ನಿವೃತ್ತಿ ಜೀವನದ ಲಾಭ ಪಡೆಯಲು ಮುಂದಾಗಬಾರದು. ನಿವೃತ್ತಿ ಬಳಿಕ ಮನೆಯಲ್ಲಿರಬೇಕು. ದೇಶದ ಜನತೆಗಿದ್ದ ಎಲ್ಲ ನಿರೀಕ್ಷೆಗಳನ್ನು ರಂಜನ್ ಗೊಗೊಯ್ ಹುಸಿಗೊಳಿಸಿದ್ದಾರೆ ಎಂದು ಕಿಡಿಕಾರಿದರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಕರೆ ನೀಡಿರುವುದನ್ನು ಸ್ವಾಗತಿಸಿದರು. ಮೋದಿ ಒಳ್ಳೆಯದು ಹೇಳಿದ್ದು, ನಾವು ಅದನ್ನು ಒಪ್ಪಿಕೊಳ್ಳಬೇಕು. ಕೊರೊನಾವನ್ನು ಚೀನಾದವರು ಮೊದಲು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಅದರ ಗಂಭೀರತೆ ಗೊತ್ತಾದಾಗ ಎಲ್ಲ ಸಂಪರ್ಕ ಬಂದ್ ಮಾಡಿದರು. ಕೊರೊನಾ ವೈರಸ್‍ಗೆ ಸದ್ಯ ಮದ್ದು ಇಲ್ಲ. ಕೊರೊನಾ ಬಗ್ಗೆ ನಮ್ಮ ದೇಶದಲ್ಲಿ ಮಾಡುತ್ತಿರುವ ಕ್ರಮಗಳು ಒಳ್ಳೆಯದು. ಎಷ್ಟು ಮುಂಜಾಗ್ರತೆ ತೆಗೆದುಕೊಳ್ಳುತ್ತೆವೆಯೋ ಅಷ್ಟು ಒಳ್ಳೆಯದು ಎಂದರು.

  • ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು- ಹಿರೇಮಠ್‍ಗೆ ಶಾಸಕ ಮಂಜುನಾಥ್ ಪ್ರಶ್ನೆ

    ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು- ಹಿರೇಮಠ್‍ಗೆ ಶಾಸಕ ಮಂಜುನಾಥ್ ಪ್ರಶ್ನೆ

    – ಜಾಗ ಒತ್ತುವರಿಯಾಗಿದ್ದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ
    – ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಗಲಾಟೆ ಮಾಡುವುದೇಕೆ?

    ರಾಮನಗರ: ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಅವರನ್ನೊಳಗೊಂಡ ತಂಡ ಕೇತಗಾನಹಳ್ಳಿಗೆ ಬಂದು ಪ್ರಕ್ಷುಬ್ದ ವಾತಾವರಣ ನಿರ್ಮಿಸಿದೆ ಎಂದು ಶಾಸಕ ಎ.ಮಂಜುನಾಥ್ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಲೀಕತ್ವದ ಆಸ್ತಿ ಬಗ್ಗೆ ಹಿರೇಮಠ ಅಲ್ಲದೆ, ಹಲವರು ತನಿಖೆ ನಡೆಸಿದ್ದಾರೆ. ಪ್ರಪಂಚದಲ್ಲಿ ನಡೆಯದ್ದು ಕೇತಗಾನಹಳ್ಳಿಯಲ್ಲಿ ನಡೆದಿದೆ ಎಂಬ ಚರ್ಚೆ, ತನಿಖೆಗಳು ನಡೆದಿವೆ. ಈ ಮೂಲಕ ಗ್ರಾಮಸ್ಥರಲ್ಲೇ ತಂದಿಕ್ಕುವ ಕೆಲಸ ಮಾಡಿದ್ದು, ಗುಂಪುಗಳಾಗಿ ಒಡೆದಿದ್ದಾರೆ. ಏಕೆ ಕೇತಗಾನಹಳ್ಳಿಗೆ ಬಂದಿರಿ, ಕೋರ್ಟ್ ಹೇಳಿತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಚ್‍ಡಿಕೆ, ಡಿ.ಸಿ.ತಮ್ಮಣ್ಣಗೆ ಮಾನ ಮರ್ಯಾದೆ ಇದ್ದರೆ ಭೂಕಬಳಿಕೆ ಜಾಗವನ್ನ ಮರಳಿಸಲಿ: ಹಿರೇಮಠ್

    ಬೀದಿ ನಾಯಿ, ಸಾಕು ನಾಯಿ ಅಂತೀರಲ್ಲ ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು, ನಿಮಗಿಂತ ಮಾತನಾಡಲು ನಮಗೂ ಬರುತ್ತೆ. ಬೇರೆ ಊರಿನಿಂದ ಬಂದ ನೀವೇ ದೊಣ್ಣೆ ಹಿಡಿದು ನಿಂತಿದ್ದಿರಿ. ಹೀಗಿರುವಾಗ ಗ್ರಾಮಸ್ಥರು ಸುಮ್ಮನಿರಬೇಕಾ, ಕನಿಷ್ಟ ಊರಿನ ಹಿರಿಯರನ್ನೂ ಕೇಳದೆ ಊರಿಗೆ ನುಗ್ಗಿದ್ದೀರಿ ಎಂದು ಎಸ್.ಆರ್.ಹಿರೇಮಠ ಹಾಗೂ ರವಿಕೃಷ್ಣಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    ಒತ್ತುವರಿಯಾಗಿದೆ, ಅವ್ಯವಹಾರವಾಗಿದೆ ಎಂದರೆ ಕೇಳಲು ಕೋರ್ಟ್ ಗಳಿವೆ. ನೀವು ಯಾಕೆ ಇಲ್ಲಿಗೆ ಬಂದಿರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಡಾಕ್ಯುಮೆಂಟ್ ಆಗಬೇಕು, ಪ್ರಚಾರ ಪಡೆಯಬೇಕು ಸುದ್ದಿಯಾಗಬೇಕೆಂದು ಇಲ್ಲಿಗೆ ಬಂದಿದ್ದೀರಿ. ಸುಖಾ ಸುಮ್ಮನೆ ನಮ್ಮ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿದ್ದೀರಿ, ನಮ್ಮ ಕಾರ್ಯಕರ್ತರ ಮೇಲೆ ಆರೋಪ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

    ಎಚ್‍ಡಿಕೆ ಬಳಿ 46.27 ಎಕರೆ ಜಾಗವಿದೆ, ಸರಿಯಾಗಿ ಅಳತೆ ಮಾಡಿದರೆ, ಇನ್ನೂ ಎರಡು ಎಕರೆ ಸರ್ಕಾರ ನೀಡಬೇಕು. ಜಿ.ಮಾದೇಗೌಡರ ಹೋರಾಟದಿಂದ ನಾಲ್ಕುವರೆ ಎಕರೆ ಹೆಚ್ಚುವರಿ ಇದ್ದದ್ದನ್ನು ಬಿಟ್ಟಿದ್ದಾರೆ. ಅದನ್ನು ಬಿಡದಿ ಸ್ಮಶಾನಕ್ಕೆ ನೀಡಿದ್ದೇವೆ. 4.5 ಎಕರೆ ಜಾಗವನ್ನು ಬಿಟ್ಟುಕೊಡಲು ಆದೇಶ ಮಾಡಲಾಗಿದೆ, ಡಿ.ಸಿ.ತಮ್ಮಣ್ಣ ಅವರು ಬಿಟ್ಟು ಕೊಟ್ಟಿದ್ದಾರೆ. ಒಂದು ವೇಳೆ ಒತ್ತುವರಿಯಾಗಿದ್ದರೆ, ಕಂದಾಯ ಇಲಾಖೆಯವರನ್ನು ಯಾಕೆ ಮರಳಿ ನೀಡಿಲ್ಲ ಎಂದು ಕೇಳಿ ಎಂದು ಕಿಡಿಕಾರಿದರು.

    ಸರ್ಕಾರಿ ಜಾಗ, ಗೋಮಾಳ ಇದ್ದರೆ ಬಿಟ್ಟುಕೊಡಲು ಕುಮಾರಸ್ವಾಮಿ ಸಿದ್ಧರಿದ್ದಾರೆ. ಡಿ.ಸಿ.ತಮ್ಮಣ್ಣ ಅವರು 200 ಎಕರೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಬೆಂಗಳೂರಿಗೆ ಹತ್ತಿರವಿರುವ ಜಾಗದಲ್ಲಿ ಒತ್ತುವರಿ ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಗಲಾಟೆ ಮಾಡುವ ಉದ್ದೇಶದಿಂದಲೇ ಅವರು ಗ್ರಾಮಕ್ಕೆ ಬಂದಿದ್ದಾರೆ. ಎಚ್‍ಡಿಕೆ ಒತ್ತುವರಿ ಮಾಡಿದ್ದಾರೆ ಎಂದು ಹೇಳುವಂತೆ ಬಲವಂತವಾಗಿ ಕೇಳಿದ್ದಾರೆ, ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳನ್ನು ಎಚ್ಡಿಕೆ ಮನೆಗೆ ಕರೆದುಕೊಂಡು ಇಟ್ಕೊಂಡಿದ್ದಾರಾ, ಅಧಿಕಾರಿಗಳು ಬಂದು ಪರಿಶೀಲನೆ ನಡೆಸಲಿ, ಸರ್ಕಾರಿ ಖರಾಬು, ಗೋಮಾಳ ಇದೆ ಎಂದು ಸಾಬೀತಾದರೆ ಬಿಡಲು ಸಿದ್ಧರಿದ್ದಾರೆ ಎಂದರು.

  • ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ- ಡಿಕೆಶಿ ವಿರುದ್ಧ ಹಿರೇಮಠ್ ಕಿಡಿ

    ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ- ಡಿಕೆಶಿ ವಿರುದ್ಧ ಹಿರೇಮಠ್ ಕಿಡಿ

    ಬಳ್ಳಾರಿ: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಿರುವುದು ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ ಎಸ್ ಆರ್ ಹಿರೇಮಠ್ ಲೇವಡಿ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂಧನ ಸಚಿವರಾಗಿ ಸೋಲಾರ್ ಹಗರಣ, ರಿಪಬ್ಲಿಕ್ ಆಫ್ ರಾಮನಗರ ಮಾಡಿದ್ದು ಡಿಕೆಶಿ. ಭ್ರಷ್ಟಾಚಾರದ ಪ್ರತಿರೂಪವಾದ ಡಿಕೆಶಿಯನ್ನು ಬಳ್ಳಾರಿ ಜಿಲ್ಲೆಗೆ ಉಸ್ತುವಾರಿ ಮಾಡಿರುವುದು ಸರ್ಕಾರದ ನಿಷ್ಕ್ರಿಯತೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎಂಎಂಎಲ್ ಗಣಿ ಕಂಪೆನಿಯಿಂದ 10.8 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಡಿಕೆಶಿ ಲೂಟಿ ಮಾಡಿದ್ದಾರೆ. ಇಂಥವರಿಗೆ ಜಿಲ್ಲಾ ಉಸ್ತುವಾರಿ ಸಚಿವ ನೀಡುವುದು ಸರಿಯಲ್ಲ. ಇದು ಸಮ್ಮಿಶ್ರ ಸರ್ಕಾರಕ್ಕೆ ನಾಚಿಗೇಡುತನದ ವಿಷಯವಾಗಿದೆ. ನಾಚಿಕೆಗೇಡಿಗೂ ಮಿತಿಯಿರುತ್ತದೆ ಅದನ್ನು ಈ ಸರ್ಕಾರ ಮೀರಿದೆ. ಅಕ್ರಮ ಗಣಿಗಾರಿಕೆ ಸಂಬಂಧ ನ್ಯಾಯಾಧೀಶ ಸಂತೋಷ್ ಹೆಗಡೆ ಅವರು ನೀಡಿದ ಎರಡು ವರದಿಗಳು ಇದುವರೆಗೂ ಅನುಷ್ಠಾನವಾಗಿಲ್ಲ. ಈಗಿನ ಸಮ್ಮಿಶ್ರ ಸರ್ಕಾರಕ್ಕೆ ಮರ್ಯಾದೆಯಿದ್ದರೆ ಅನುಷ್ಠಾನ ಮಾಡಲಿ ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿರುವ ಸಾವಿರಾರು ಕೋಟಿ ಹಣ ಬೇರೆಡೆ ಬಳಕೆಯಾಗಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

    ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರಿಗೆ ರಾಮನಗರ ಮತ್ತು ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬೃಹತ್ ಬೆಂಗ್ಳೂರು ಭೂ ಹಗರಣ ತನಿಖೆ ನಡೆಸಿ- ಎಚ್‍ಡಿಕೆಗೆ ಹಿರೇಮಠ ಸವಾಲ್

    ಬೃಹತ್ ಬೆಂಗ್ಳೂರು ಭೂ ಹಗರಣ ತನಿಖೆ ನಡೆಸಿ- ಎಚ್‍ಡಿಕೆಗೆ ಹಿರೇಮಠ ಸವಾಲ್

    ಬೆಂಗಳೂರು: ಬೃಹತ್ ಕಂಪೆನಿಯಿಂದ ನಡೆದಿರುವ ಭೂ ಹಗರಣವೊಂದನ್ನು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಆಗ್ರಹಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಬಿಡಿ) ಬಿಪಿಎಲ್ ಕಂಪನಿ ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಭೂಮಿಯನ್ನು ಪಡೆದಿತ್ತು. ಈ ವೇಳೆ ರೈತರಿಗೆ ಪ್ರತಿ ಎಕರೆ ಭೂಮಿಗೆ ಕೇವಲ 1.10 ಲಕ್ಷ ರೂ. ನೀಡಲಾಗಿತ್ತು. ಆದರೆ ಈಗ ಅದೇ ಭೂಮಿಯನ್ನು ಪ್ರತಿ ಎಕರೆಗೆ 1.30 ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ತನಿಖೆಗೆ ಆದೇಶ ನೀಡುವಿರಾ ಎಂದು ಸಿಎಂಗೆ ಸವಾಲು ಹಾಕಿದರು.

    ಖರೀದಿಯಾದ ಜಮೀನು ಎಷ್ಟು?
    ಕೆಐಎಡಿಬಿ ರೈತರಿಂದ 276 ಎಕರೆ ಭೂಮಿಯನ್ನು ಖರೀದಿ ಮಾಡಿತ್ತು. ಈ ಪೈಕಿ 175 ಎಕರೆ ಭೂಮಿಯನ್ನು ಬಿಪಿಎಲ್ ಕಂಪೆನಿಗೆ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಮಾರಾಟ ಮಾಡಲಾಗಿತ್ತು. ಆದರೆ ಬಿಪಿಎಲ್ ಕಂಪನಿಯು ಇತರೆ ಕಂಪೆನಿಗಳಿಗೆ 149 ಎಕರೆ ಭೂಮಿಯನ್ನು ಕೋಟ್ಯಂತರ ಹಣ ಪಡೆದು ಅಕ್ರಮವಾಗಿ ಮಾರಾಟ ಮಾಡಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಕೈಗಾರಿಕೆ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ ಎಂದು ಆರೋಪಿಸಿದರು.

    ಸಿಎಂ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಈ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದರು. ಸದ್ಯ ಅವರೇ ಮುಖ್ಯಮಂತ್ರಿ ಆಗಿದ್ದು, ಹಗರಣದ ಕುರಿತು ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದ ಅವರು, ಬಿಪಿಎಲ್ ಕಂಪನಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕರಾಗಿರುವ ಅನುಮಾನವನ್ನು ವ್ಯಕ್ತ ಪಡಿಸಿದರು.

  • `ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ- ಎಸ್‍ಆರ್ ಹಿರೇಮಠ ಕಿಡಿ

    `ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ- ಎಸ್‍ಆರ್ ಹಿರೇಮಠ ಕಿಡಿ

    ಹಾವೇರಿ: ರಾಜ್ಯದಲ್ಲಿ ಮೂರು ಪಕ್ಷಗಳು ಲೂಟಿಕೋರರ ಪಕ್ಷಗಳಾಗಿವೆ. ಕಳೆದ ಹಲವಾರು ವರ್ಷಗಳಿಂದ `ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್‍ಆರ್ ಹಿರೇಮಠ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದರು. ರೆಡ್ಡಿಯಂತಹ ಕಳ್ಳರ ತಾಳಕ್ಕೆ ಕುಣಿದು ಜೈಲು ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ರಾಜ್ಯಕ್ಕೆ ದೊಡ್ಡ ಕಳಂಕವಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಮೈತುಂಬಾ ಭ್ರಷ್ಟಾಚಾರ ಮೈಗೂಡಿಸಿಕೊಂಡಿದೆ. ಒಟ್ಟಿನಲ್ಲಿ ಇವರು ಸ್ವತಂತ್ರ ಭಾರತದ ಕನಸನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

    ಜೆಡಿಎಸ್ ಪಕ್ಷ ರಾಜ್ಯಸಭೆ ಸ್ಥಾನಗಳನ್ನು ಹರಾಜು ಇಟ್ಟು ಮಾರಿಕೊಂಡಿದೆ. ಇವರ ನಾಟಕದಿಂದ ರಾಜ್ಯ ಹಾಳಾಗಿ ಹೋಗಿದೆ. ಪ್ರಧಾನ ಮಂತ್ರಿ ದೇಶದ ಬ್ಯಾಂಕುಗಳು ದಿವಾಳಿಯಾದ್ರೂ ಮೌನ ವಹಿಸಿದ್ದಾರೆ. ಬ್ಯಾಂಕ್ ಕೊಳ್ಳೆ ಹೊಡೆದ್ರೂ ಸುಮ್ಮನಿರುವ ಪ್ರಧಾನಿಗೆ ನಾಚಿಕೆಯಾಗಬೇಕು. ಅಲ್ಲದೇ ಪ್ರಧಾನಿ, ಜೇಟ್ಲಿ, ಅಮಿತ್ ಶಾ ರಿಂದ ದೇಶವಿನಾಶದತ್ತ ಸಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಮಲಿಂಗಾರೆಡ್ಡಿ ಸೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.