Tag: ಎಸ್ಸಿ ಮೀಸಲಾತಿ

  • ದಲಿತರನ್ನ ಎದುರು ಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ – ಸಿಎಂ

    ದಲಿತರನ್ನ ಎದುರು ಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ – ಸಿಎಂ

    ಹುಬ್ಬಳ್ಳಿ: ದಲಿತರನ್ನ (Dalits) ಎದುರುಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ಪರಿಶಿಷ್ಟ ಸಮುದಾಯಗಳ ಒಳಮೀಸಲಾತಿ (SC Reservation) ಜಾರಿಗೊಳಿಸಿದ್ದಕ್ಕಾಗಿ ಹುಬ್ಬಳ್ಳಿಯಲ್ಲಿ (Hubballi) ನಡೆದ ಅಭಿನಂದನಾ ಸಮಾರಂಭದಲ್ಲಿ ಸಿಎಂ ವೀರಾವೇಶದ ಭಾಷಣ ಮಾಡಿದರು. ಇದೇ ವೇಳೆ ಕೇಂದ್ರಕ್ಕೆ ನೀಡಿದ ಮೀಸಲಾತಿ ಶಿಫಾರಸ್ಸಿನ ಪ್ರತಿಯನ್ನೂ ಪ್ರದರ್ಶನ ಮಾಡಿದರು. ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಈ ಬಾರಿ ಟಿಕೆಟ್ ಸಿಗೋದು ಅನುಮಾನ

    ಬಳಿಕ ಭಾಷಣ ಮುಂದುವರಿಸಿದ ಸಿಎಂ, ನಾನು ಬೇರೆ ಮುಖ್ಯಮಂತ್ರಿಗಳಂತಲ್ಲ, ಕೆಲಸ ಮಾಡಿ ಮಾತನಾಡುವ ಮುಖ್ಯಮಂತ್ರಿ. ನಾವು ಯಾರಿಗೂ, ಯಾವ ಸಮುದಾಯದಕ್ಕೂ ಅನ್ಯಾಯ ಮಾಡಿಲ್ಲ. ಯಡಿಯೂರಪ್ಪ ತಾಂಡ ಅಭಿವೃದ್ಧಿ ಮಾಡಿದ್ರು, ಆಗ ಮಾತನಾಡಿಲ್ಲ. ಈಗ ಅವರ ಪರವಾಗಿ ಕಾಂಗ್ರೆಸ್ ಮಾತನಾಡುತ್ತಿದೆ. ತಾಂಡಗಳಿಗೆ ಹಕ್ಕುಪತ್ರ ಕೊಟ್ಟಿದ್ದು ನಾವು. ನಾವು ಇನ್ನೊಬ್ಬರಿಗೆ ನೋವಾಗದಂತೆ ಮೀಸಲಾತಿ ನೀಡಿದ್ದವೆ. ದಲಿತರನ್ನ ಎದುರು ಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರೋದಕ್ಕೆ ಸಾಧ್ಯವಿಲ್ಲ. ಇನ್ನೂ ಕಾಂಗ್ರೆಸ್ ಅಧಿಕಾರ ಬರೋದು ಕನಸು ಎಂದು ಕುಟುಕಿದರು.

    ಒಳ ಮೀಸಲಾತಿಯನ್ನ ಮುಟ್ಟಿದ್ರೆ ಕ್ರಾಂತಿಯಾಗುತ್ತದೆ ಅಂತಾ ಕಾಂಗ್ರೆಸ್‌ನವರು ಹೇಳುತ್ತಿದ್ದರು. ಆದರೆ ಅಸಾಧ್ಯವಾದುದನ್ನ ಸಾಧ್ಯ ಮಾಡಿ ತೋರಿಸಿದ್ದವೆ. ಇದು ಸಾಮಾಜಿಕ, ಸಮಾನತೆ ಇರುವ, ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ತತ್ವಾದರ್ಶಗಳನ್ನಿಟ್ಟುಕೊಂಡು ಮಾಡಿರುವ ಕಾನೂನು ನನಗೆ ಭರವಸೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಪ್ರೀಥಮ್ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ

    ಆಕಸ್ಮಿಕವಾಗಿ ಬಡವರಾಗಿ ಹುಟ್ಟಬಹುದು. ಆದರೆ ಬಡವರಾಗಿ ಸಾಯಬೇಕು ಅಂತಾ ಯಾವ ಕಾನೂನಲ್ಲೂ ಹೇಳಿಲ್ಲ. ನಮ್ಮ ದುಡಿಮೆ, ಶ್ರಮ, ನಮ್ಮ ಬುದ್ಧಿವಂತಿಕೆಯಿಂದ ಮುಂದೆ ಬರುತ್ತೇವೆ ಅನ್ನೋರಿಗೆ ಅವಕಾಶ ಮಾಡಿಕೊಡದಿದ್ದ ಮೇಲೆ ಇದೆಂತಾ ವ್ಯವಸ್ಥೆ, ಈ ಅವ್ಯವಸ್ಥೆಗಳನ್ನ ನಾವಿಂದು ಪ್ರಶ್ನಿಸುತ್ತಿದ್ದೇವೆ. 70 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಎಸ್ಸಿ-ಎಸ್ಟಿಯನ್ನ ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಆದ್ರೆ ಸಾಮಾಜಿಕ ನ್ಯಾಯ ಕೊಡ್ತೀವಿ ಅಂದವರು ಮುಂದೆ ಹೋಗಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಕಿಡಿ ಕಾರಿದರು.

    ಸಿದ್ದು ವಿರುದ್ಧ ಸಿಎಂ ಕಿಡಿ:
    ಇದೇ ವೇಲೆ ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದ ಸಿಎಂ, ಸಿದ್ದರಾಮಯ್ಯ ನಿಮಗೆ ತಾಕತ್ತಿದ್ದರೆ ನೀವು ಮೀಸಲಾತಿ, ಒಳ ಮೀಸಲಾತಿ ಪರವಾಗಿದ್ದರೋ ವಿರೋಧವಾಗಿದ್ದರೋ ಎಂಬ ಸ್ಪಷ್ಟ ಚಿತ್ರಣ ನೀಡಿ. ಒಳ ಮೀಸಲಾತಿ ಹೋರಾಟ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಒಳ ಮೀಸಲಾತಿಯನ್ನ ಯಾರು ಮಾಡುತ್ತಾರೆ ಅವರು ಭಸ್ಮವಾಗುತ್ತಾರೆ ಅಂತಾ ಕಾಂಗ್ರೆಸ್‌ನವರು ಹೇಳುತ್ತಿದ್ದರು. ನಾನು ಆ ಕೆಲಸ ಮಾಡಿ, ನಿಮ್ಮ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದೇನೆ ಅದೇ ನನಗೆ ಸಾಕು ಎಂದು ಬೊಮ್ಮಾಯಿ ತಿಳಿಸಿದರು.

  • ಒಳಮೀಸಲಾತಿ ಹಂಚಿಕೆ; ಪ್ರತ್ಯೇಕ ಮೀಸಲಾತಿ ರದ್ದು – EWS ಕೋಟಾ ವ್ಯಾಪ್ತಿಗೆ ಮುಸ್ಲಿಮರು

    ಒಳಮೀಸಲಾತಿ ಹಂಚಿಕೆ; ಪ್ರತ್ಯೇಕ ಮೀಸಲಾತಿ ರದ್ದು – EWS ಕೋಟಾ ವ್ಯಾಪ್ತಿಗೆ ಮುಸ್ಲಿಮರು

    ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನವಾಗಿದೆ. ಲಿಂಗಾಯತರಿಗೆ 2D ಮೀಸಲಾತಿ, ಒಕ್ಕಲಿಗರಿಗೆ 2C ಮೀಸಲಾತಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಮುಸ್ಲಿಮರಿಗೆ 2B ಮೀಸಲಾತಿ ರದ್ದುಗೊಳಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿಯಲ್ಲೇ ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದ್ರೆ, ಈ ಬಗ್ಗೆ ತೀರ್ಮಾನ ಹೊರಬೀಳಬೇಕಿದೆ.

    ಮೀಸಲಾತಿ ಗಿಫ್ಟ್ – ಸರ್ಕಾರದ ನಿರ್ಣಯಗಳೇನು?
    ಲಿಂಗಾಯತ ಸಮುದಾಯಕ್ಕೆ ಶೇ.2 ಹೆಚ್ಚುವರಿ ಮೀಸಲಾತಿ ಕಲ್ಪಿಸುವ ನಿರ್ಣಯ ಕೈಗೊಂಡಿದೆ. 2D ಪ್ರವರ್ಗದಲ್ಲಿ ಲಿಂಗಾಯತರಿಗೆ ಇದ್ದ ಶೇ.5ರಷ್ಟು ಇದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಶೇ.2 ಹೆಚ್ಚುವರಿ ಮೀಸಲಾತಿ ಕಲ್ಪಿಸಲಾಗಿದೆ. ಈ ಮೂಲಕ 2C ಪ್ರವರ್ಗದಲ್ಲಿ ಒಕ್ಕಲಿಗರಿಗೆ ಶೇ.4ರಷ್ಟು ಇದ್ದ ಮೀಸಲಾತಿಯನ್ನು ಶೇ.6ಕ್ಕೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಲಿಂಗಾಯತರಿಗೆ ಶೇ.7, ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ – SC ಒಳ ಮೀಸಲಾತಿಗೆ ಸಂಪುಟ ಅಸ್ತು

    ಮುಸ್ಲಿಮರಿಗೆ ಇದ್ದ ಪ್ರತ್ಯೇಕ 2B ಮೀಸಲಾತಿ ರದ್ದುಗೊಳಿಸಲಾಗಿದೆ. EWS (ಆರ್ಥಿಕ ದುರ್ಬಲ ವರ್ಗ) ಕೋಟಾ ವ್ಯಾಪ್ತಿಗೆ ಮುಸ್ಲಿಮರನ್ನು ಸೇರಿಸಿದ್ದು, ಅದೇ ಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಕಾಡು ಕುರುಬ, ಗೊಂಡ ಕುರುಬರನ್ನ ಎಸ್‌ಟಿಗೆ ಸೇರಿಸಿ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಸಂಬಂಧ ಸದಾಶಿವ ಆಯೋಗದ ವರದಿ ಜಾರಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರಕ್ಕೆ ಭೇಟಿ ಕೊಟ್ರೆ ಅಧಿಕಾರ ಹೋಗುತ್ತೆ – ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ, ಬೊಮ್ಮಾಯಿ‌