Tag: ಎಸ್ಟೇಟ್

  • ರಸ್ತೆ ಮಧ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷ – ವಿಡಿಯೋ ನೋಡಿ

    ರಸ್ತೆ ಮಧ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷ – ವಿಡಿಯೋ ನೋಡಿ

    ಚಿಕ್ಕಮಗಳೂರು: ಜಿಲ್ಲೆಯ ತಿಪ್ಪೇನಹಳ್ಳಿ ಎಸ್ಟೇಟ್ ಬಳಿ ರಸ್ತೆ ಮಧ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷವಾಗಿವೆ.

    ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಮಾರ್ಗದ ತೋಟಗಳ ಬಳಿ ಕೋಣಗಳು ಹಿಂಡು ಹಿಂಡಾಗಿ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕೋಣಗಳ ಹಿಂಡು ಕಂಡು ಪ್ರವಾಸಿಗರು ಆಶ್ಚರ್ಯ ಪಟ್ಟಿದ್ದು, ಪ್ರವಾಸಿಗರೊಬ್ಬರು ಕಾಡು ಕೋಣಗಳು ಹೋಗುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    ಮುಳ್ಳಯ್ಯನ ಗಿರಿ, ದತ್ತಪೀಠ, ಸೀತಾಳಯ್ಯನಗಿರಿ ಮಾರ್ಗದಲ್ಲಿ ಈ ಕೋಣಗಳು ಕಂಡು ಬಂದಿವೆ. ಕಾಡು ಕೋಣಗಳು ಸಾಲಾಗಿ ಒಂದರಂತೆ ಒಂದು ರಸ್ತೆ ದಾಟಿ ಕಾಫಿ ತೋಟಕ್ಕೆ ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಅಪರೂಪ ಎಂಬಂತೆ ಕಾಡುಕೋಣಗಳ ಹಿಂಡನ್ನು ನೋಡಿ ಪ್ರವಾಸಿಗರು ಸಂತಸದಿಂದ ಕಣ್ತುಂಬಿಕೊಂಡಿದ್ದಾರೆ. ಆದರೆ ಕೋಣಗಳನ್ನ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    https://www.youtube.com/watch?v=pZJj7J9QNiQ

  • ಮಲೆನಾಡಿನಲ್ಲಿ ಗೋಚರವಾಯ್ತು ಹಾರುವ ಬೆಕ್ಕು- ರೆಕ್ಕೆ ಇರುವ ಬೆಕ್ಕನ್ನು ಕಂಡು ಅಚ್ಚರಿ ಪಟ್ಟ ಜನ : ವಿಡಿಯೋ ನೋಡಿ

    ಮಲೆನಾಡಿನಲ್ಲಿ ಗೋಚರವಾಯ್ತು ಹಾರುವ ಬೆಕ್ಕು- ರೆಕ್ಕೆ ಇರುವ ಬೆಕ್ಕನ್ನು ಕಂಡು ಅಚ್ಚರಿ ಪಟ್ಟ ಜನ : ವಿಡಿಯೋ ನೋಡಿ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊರಡಿ ಎಸ್ಟೇಟ್ ಬಳಿ ರೆಕ್ಕೆ ಇರುವ ಅಪರೂಪದ ಹಾರುವ ಬೆಕ್ಕೊಂದು ಗೋಚರವಾಗಿ ಜನರನ್ನು ಅಚ್ಚರಿಗೊಳಿಸಿದೆ.

    ಹಿಂದೆಂದೂ ಕಂಡುಬರದ ರೆಕ್ಕೆ ಇರುವ ಬೆಕ್ಕೊಂದು ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ. ಹೆಚ್ಚಾಗಿ ದಟ್ಟಾರಣ್ಯದಲ್ಲಿ ವಾಸ ಮಾಡುವ ಹಾರುವ ಬೆಕ್ಕು ಮೊದಲ ಬಾರಿ ಜನರಿರುವ ಪ್ರದೇಶದಲ್ಲಿ ಕಂಡಿದೆ. ಕಾಡಂಚಿನ ಗ್ರಾಮದ ತೋಟಕ್ಕೆ ಬಂದು ಹಾರುವಾಗ ಸುತ್ತು ಹಾಕಿದ್ದ ತಂತಿ ಬೇಲಿಗೆ ಸಿಲುಕಿ ನರಳಾಡಿದೆ. ಈ ವೇಳೆ ನರಳುತ್ತಿದ್ದ ಬೆಕ್ಕನ್ನು ಕಂಡ ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ. ಬೇಲಿಯಿಂದ ಬೆಕ್ಕನ್ನು ಬಿಡಿಸಿದ ತಕ್ಷಣವೇ ಅದು ಕಾಡಿನೆಡೆಗೆ ಹಾರಿ ಹೋಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

    ಈ ತರಹದ ಅಪರೂಪದ ಹಾರುವ ಬೆಕ್ಕನ್ನು ಕಂಡ ಮಲೆನಾಡಿಗರು ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ ಹಕ್ಕಿಗಳಂತೆ ಎರಡು ರೆಕ್ಕೆಯನ್ನು ಹೊಂದಿರುವ ಬೆಕ್ಕನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದು, ಮೊಬೈಲ್‍ನಲ್ಲಿ ಈ ಅಪರೂಪದ ಪ್ರಾಣಿಯ ದೃಶ್ಯಾವಳಿಯನ್ನು ಸೆರೆಹಿಡಿದಿದ್ದಾರೆ.

    ಪ್ರಸ್ತುತ ಕಾಲಮಾನದಲ್ಲಿ ಅಪರೂಪದ ಹಾರುವ ಬೆಕ್ಕಿನ ಸಂತತಿ ಅಳಿವಿನಂಚಿನಲ್ಲಿದೆ. ಸದ್ಯ ಈ ಅಪರೂಪದ ಹಾರುವ ಬೆಕ್ಕನ್ನು ನೋಡಿ ಜನರು ಖುಷಿ ಪಟ್ಟಿದಾರೆ.

    https://www.youtube.com/watch?v=fKktPY1wQQs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಜ್ಜಿ ಮನೆಯಿಂದ ಶಾಲೆಗೆ ಬರೋದಕ್ಕೆ ಕಷ್ಟವಾಗುತ್ತಿದೆ: ಹಟ್ಟಿಹೊಳೆ ವಿದ್ಯಾರ್ಥಿ ನವೀನ್

    ಅಜ್ಜಿ ಮನೆಯಿಂದ ಶಾಲೆಗೆ ಬರೋದಕ್ಕೆ ಕಷ್ಟವಾಗುತ್ತಿದೆ: ಹಟ್ಟಿಹೊಳೆ ವಿದ್ಯಾರ್ಥಿ ನವೀನ್

    ಮಡಿಕೇರಿ: ಆತೂರಿನಲ್ಲಿರುವ ಅಜ್ಜಿ ಮನೆಯಿಂದ ಶಾಲೆಗೆ ಬರೋದಕ್ಕೆ ಕಷ್ಟವಾಗುತ್ತಿದೆ. ನಾನು ಮನೆಗೆ ಹೋಗಿದ್ದರೆ, ಚೆನ್ನಾಗಿ ಇರುತ್ತಿತ್ತು ಎಂದು ವಿದ್ಯಾರ್ಥಿ ನವೀನ್ ಹೇಳಿದ್ದಾರೆ.

    ನಮ್ಮ ಮನೆ ಹಟ್ಟಿಹೊಳೆಯಲ್ಲಿದೆ. ನಮ್ಮ ಮನೆ ಹತ್ತಿರ ಗುಡ್ಡ ಕುಸಿಯುತ್ತಿತ್ತು. ಆ ವೇಳೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ನೀವು ಇಲ್ಲಿ ಇರಬೇಡಿ, ಇಲ್ಲಿಂದ ಹೋಗಿ ಎಂದು ಹೇಳಿದರು. ಅವರ ಮಾತು ಕೇಳಿ ನನ್ನ ತಂದೆ ಕೂಡ ಹೆದರಿ ಇಲ್ಲಿಂದ ಹೋಗೋಣ ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಹಟ್ಟಿಹೊಳೆ ಬಿಟ್ಟು ನಾನು ಹಾಗೂ ನನ್ನ ಕುಟುಂಬದವರು ಈಗ ಆತೂರು ಎಸ್ಟೇಟ್‍ನಲ್ಲಿರುವ ನಮ್ಮ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆ ದಿನ ಜೋರಾಗಿ ಮಳೆ ಬಂದಾಗ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ 50ಕ್ಕೂ ಹೆಚ್ಚು ಹಸು ಹೆದರಿಕೊಂಡು ಓಡಿ ಹೋಗಿದೆ ಎಂದು ತುಂಬಾ ಜನ ಅಳುತ್ತಾ ಹೇಳುತ್ತಿದ್ದಾರೆ. ಸದ್ಯ ಈಗ ಹಟ್ಟಿಹೊಳೆಯಲ್ಲಿರುವ ಮನೆಗೆ ಕೆಲವರು ಹೋಗಬಹುದು ಎಂದು ಹೇಳಿದರೆ ಇನ್ನೂ ಕೆಲವರು ಹಟ್ಟಿಹೊಳೆಗೆ ಹೋಗಲು ಸಾಧ್ಯವಿಲ್ಲ. ನಿಮ್ಮ ಅಜ್ಜಿ ಮನೆಯಲ್ಲೇ ಸ್ವಲ್ಪ ದಿನ ವಾಸವಿರು. ಅಲ್ಲಿ ಮತ್ತೆ ಏನಾದರೂ ಆದರೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಕೊಡಗಿನ 61 ಶಾಲೆಗಳಿಗೆ ಹೋಗುವಂತಿಲ್ಲ, 76 ರಿಪೇರಿಯಾಗಬೇಕಿದೆ: ಎನ್.ಮಹೇಶ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv