Tag: ಎಸ್ಕಲೇಟರ್

  • ಚಲಿಸುತ್ತಿದ್ದ ಎಸ್ಕಲೇಟರ್‌ನಿಂದ ಬಿದ್ದು ಒಂಬತ್ತು ಮಕ್ಕಳಿಗೆ ಗಾಯ

    ಚಲಿಸುತ್ತಿದ್ದ ಎಸ್ಕಲೇಟರ್‌ನಿಂದ ಬಿದ್ದು ಒಂಬತ್ತು ಮಕ್ಕಳಿಗೆ ಗಾಯ

    ಹೈದರಾಬಾದ್: ಚಲಿಸುತ್ತಿದ್ದ ಎಸ್ಕಲೇಟರ್‌ನಿಂದ ಜಾರಿ ಬಿದ್ದು  ಒಂಬತ್ತು ಮಕ್ಕಳು ಗಾಯಗೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    1982ರಲ್ಲಿ ಬಿಡುಗಡೆಯಾಗಿದ್ದ ಗಾಂಧಿ ಸಿನಿಮಾದ ಉಚಿತ ಪ್ರದರ್ಶನವನ್ನು ನಗರದ ಬಂಜಾರಾ ಹಿಲ್ಸ್‍ನ ಪಿವಿಆರ್ ಸಿನೆಪ್ಲೆಕ್ಸ್‍ನಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಈ ವೇಳೆ ಎಸ್ಕಲೇಟರ್‌ನಿಂದ ಜಾರಿ ಬಿದ್ದು ಮಕ್ಕಳು ಗಾಯಗೊಂಡಿದ್ದಾರೆ. ಇದೀಗ ಗಾಯಗೊಂಡಿರುವ ಮಕ್ಕಳನ್ನು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ

    ತೆಲಂಗಾಣ ಸರ್ಕಾರವು ದೇಶಭಕ್ತಿ ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆಯನ್ನು ಮೂಡಿಸಲು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಸ್ಕ್ರೀನಿಂಗ್ ಕೂಡ ಒಂದಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಮಾರು 22 ಲಕ್ಷ ಮಕ್ಕಳಿಗಾಗಿ 552 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಇದನ್ನೂ ಓದಿ : 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    Live Tv
    [brid partner=56869869 player=32851 video=960834 autoplay=true]

  • ನಮ್ಮ ಮೆಟ್ರೋ ಎಸ್ಕಲೇಟರ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಂದಮ್ಮ ಸಾವು

    ನಮ್ಮ ಮೆಟ್ರೋ ಎಸ್ಕಲೇಟರ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಂದಮ್ಮ ಸಾವು

    ಬೆಂಗಳೂರು: ನಗರದ ಶ್ರೀರಾಮಪುರ ಮೆಟ್ರೋ ಸ್ಟೇಷನ್‍ನ ಎಸ್ಕಲೇಟರ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದ್ದಾಳೆ.

    ಹಾಸಿನಿ ಮೃತಪಟ್ಟ ಪುಟ್ಟ ಕಂದಮ್ಮ. ಭಾನುವಾರ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ಹತ್ತಲು ಬರುತ್ತಿದ್ದ ವೇಳೆ ಆಯತಪ್ಪಿ ಹಾಸಿನಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಹಾಸಿನಿಯನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಆಕೆ ಇಂದು ಮೃತಪಟ್ಟಿದ್ದಾಳೆ.

    ಘಟನೆ ನಡೆದಿದ್ದು ಹೇಗೆ..?:
    ಮಗು ಹಾಸಿನಿ ತನ್ನ ತಾತ- ಅಜ್ಜಿ ಜೊತೆ ಹೋಗುವಾಗ ಈ ಘಟನೆ ನಡೆದಿದೆ. ತಾತ ಬಾಲಕೃಷ್ಣ ಅವರು ಶ್ರೀರಾಮಪುರದಿಂದ ಉತ್ತರಹಳ್ಳಿಗೆ ಹೋಗುತ್ತಿದ್ದರು. ಹೀಗಾಗಿ ಎಸ್ಕಲೇಟರ್ ನಲ್ಲಿ ಹತ್ತುವಾಗ ಬಾಲಕೃಷ್ಣ ಅವರ ಒಂದು ಕಾಲು ಸ್ಕಿಡ್ ಆಗಿದೆ. ಇದರಿಂದ ಅವರು ಹಿಂದೆ ಬರುವಾಗ ಮಗು ಎಸ್ಕಲೇಟರ್ ಪಕ್ಕದಲ್ಲಿದ್ದ ಸಣ್ಣ ಗ್ಯಾಪ್‍ನಿಂದ ಕೆಳಗೆ ರಸ್ತೆಗೆ ಬಿದ್ದಿದೆ. ಸುಮಾರು 35 ಎತ್ತರದ ಅಡಿಯಿಂದ ಬಿದ್ದ ಹಾಸಿನಿ ಗಂಭೀರ ಗಾಯಗೊಂಡಿದ್ದಳು.

    ಹಾಸಿನಿ ಮೃತಪಟ್ಟಿದ್ದರಿಂದ ಆಕೆಯ ತಾತ, ನಿರ್ಲಕ್ಷ್ಯ ಹಾಗೂ ಸರಿಯಾಗಿ ಸುರಕ್ಷತಾ ಕ್ರಮಗಳನ್ನ ಕೈಗೊಂಡಿಲ್ಲ ಎಂದು ಆರೋಪಿಸಿ ಮೆಟ್ರೋ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಬಾಲಕಿಯ ತಾತ ನೀಡಿದ್ದ ದೂರು ಆಧರಿಸಿ ಮೆಟ್ರೋ ಅಧಿಕಾರಿಗಳ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಮುರಿದು ಒಬ್ಬರ ಮೇಲೋಬ್ಬರು ಬಿದ್ರು: ವಿಡಿಯೋ

    ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಮುರಿದು ಒಬ್ಬರ ಮೇಲೋಬ್ಬರು ಬಿದ್ರು: ವಿಡಿಯೋ

    ರೋಮ್: ವೇಗವಾಗಿ ಚಲಿಸುತ್ತಿದ್ದ ಎಸ್ಕಲೇಟರ್ ಮುರಿದು 20 ಮಂದಿ ಗಾಯಗೊಂಡ ಘಟನೆ ಇಟಲಿಯ ರೋಮ್‍ನಲ್ಲಿ ನಡೆದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ರೋಮ್ ನಗರದ ರಿಪಬ್ಲಿಕ್ ಮೆಟ್ರೋ ಸ್ಟೇಷನ್‍ನಲ್ಲಿ ಈ ಅವಘಡ ಸಂಭವಿಸಿದ್ದು, ಪ್ರಯಾಣಿಕರು ಸೇರಿದಂತೆ ರಷ್ಯಾ ಫುಟ್‍ಬಾಲ್ ತಂಡ ಅಭಿಮಾನಿಗಳು ಗಾಯಗೊಂಡಿದ್ದಾರೆ. ರೋಮಾ ಹಾಗೂ ಸಿಎಸ್‍ಕೆಎ ಮಾಸ್ಕೋ ಫುಟ್‍ಬಾಲ್ ತಂಡಗಳ ನಡುವೆ ಇಂದು ಚಾಂಪಿಯನ್ಸ್ ಲೀಗ್ ಪಂದ್ಯವು ರೋಮ್‍ನಲ್ಲಿ ನಡೆಯುತ್ತಿತ್ತು. ಹೀಗಾಗಿ ಪಂದ್ಯ ವಿಕ್ಷಣೆಗಾಗಿ ರಷ್ಯಾದ ಅನೇಕ ಫುಟ್‍ಬಾಲ್ ಅಭಿಮಾನಿಗಳು ನಗರಕ್ಕೆ ಆಗಮಿಸಿದ್ದರು.

    ಮೆಟ್ರೋ ಸ್ಟೇಷನ್‍ನ ಎಸ್ಕಲೇಟರ್ ಮೇಲೆ ಹೆಚ್ಚು ಜನರು ಹತ್ತಿದ್ದಾರೆ. ಪರಿಣಾಮ ಅತಿಯಾದ ಭಾರ ತಾಳಲಾರದೇ ಎಸ್ಕಲೇಟರ್‍ನ ಒಂದು ಭಾಗ ಮುರಿದಿದೆ. ಎಸ್ಕಲೇಟರ್ ವೇಗವಾಗಿ ಚಲಿಸುತ್ತಿದ್ದರಿಂದ ಪ್ರಯಾಣಿಕರು ಕೆಳಗೆ ಕುಸಿದು, ಒಬ್ಬರ ಮೇಲೋಬ್ಬರು ಬಿದ್ದು ಗಾಯಗೊಂಡಿದ್ದಾರೆ. ಇದೇ ವೇಳೆ ಯುವಕನೊಬ್ಬ ಅನಾಹುತದಿಂದ ಪಾರಾಗಲು, ಎಸ್ಕೇಲೇಟರ್ ಪಕ್ಕದ ಕಟ್ಟಿಯ ಮೇಲೆ ಜೀಗಿದು ಅನಾಹುತದಿಂದ ತಪ್ಪಿಸಿಕೊಂಡಿದ್ದಾನೆ. ಎಸ್ಕಲೇಟರ್ ನಿಲ್ಲುತ್ತಿದ್ದಂತೆ ಸ್ಥಳದಲ್ಲಿದ್ದ ಅನೇಕರು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಇತ್ತ ಜನರ ಕೆಳಗೆ ಸಿಕ್ಕು, ಗಂಭೀರವಾಗಿ ಗಾಯಗೊಂಡಿದ್ದ 20 ಜನರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಕುರಿತು ರೋಮ್ ಮೇಯರ್ ವರ್ಜಿನಿಯಾ ರಾಗ್ಗಿ ಅವರು ಪ್ರತಿಕ್ರಿಯೆ ನೀಡಿ, ರಷ್ಯಾ ಫುಟ್‍ಬಾಲ್ ಅಭಿಮಾನಿಗಳು 1,500 ಜನರು ನಗರಕ್ಕೆ ಆಗಮಿಸಿದ್ದು, ಅವರು ಎಸ್ಕಲೇಟರ್ ಮೇಲೆ ಡಾನ್ಸ್ ಮಾಡಿದ್ದಾರೆ. ಪಂದ್ಯ ವೀಕ್ಷಣೆಗೆ ತಾ ಮುಂದು, ನಾ ಮುಂದು ಅಂತಾ ಹೋಗಲು, ರೌಡಿಗಳಂತೆ ವರ್ತಿಸಿದ್ದಾರೆ, ಹೀಗಾಗಿ ಅನಾಹುತ ಸಂಭವಿಸಿದೆ ಎಂದು ದೂರಿದ್ದಾರೆ.

    ಎಸ್ಕಲೇಟರ್ ಅಸಮರ್ಪಕ ಕಾರ್ಯನಿರ್ವಹಿಸದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ ಅಂತಾ ಕೆಲವರು ದೂರಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ 20 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಲ್ ಎಸ್ಕಲೇಟರ್ ನಿಂದ ಬಿದ್ದು 10ರ ಬಾಲಕ ದುರ್ಮರಣ

    ಮಾಲ್ ಎಸ್ಕಲೇಟರ್ ನಿಂದ ಬಿದ್ದು 10ರ ಬಾಲಕ ದುರ್ಮರಣ

    ಚೆನ್ನೈ: ಮಾಲ್ ಒಂದರಲ್ಲಿ ಎಸ್ಕಲೇಟರ್ ಮೇಲಿಂದ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚೆನ್ನೈನ ರಾಯ್ಪೆಟ್ಟಾದಲ್ಲಿ ನಡೆದಿದೆ.

    ಈ ಘಟನೆ ಏಪ್ರಿಲ್ 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನವೀನ್ ಕುಮಾರ್(10) ಮೃತ ದುರ್ದೈವಿ. ಈತ 5ನೇ ತರಗತಿಯಲ್ಲಿ ಓದುತ್ತಿದ್ದು, ತೊಡಿಯಾರ್ ಪೇಟ್‍ನ ಡ್ರೈವರ್ಸ್  ಕಾಲೋನಿಯಲ್ಲಿ ವಾಸಿಸುತ್ತಿದ್ದನು.

    ಘಟನೆಯ ವಿವರ?
    ಏಪ್ರಿಲ್ 10 ರಂದು ನವೀನ್ ಕುಮಾರ್ ಮತ್ತು ಆತನ ಸಹೋದರಿ ಗೀತಾ ರಾಯ್ಪೆಟ್ಟಾದಲ್ಲಿರುವ ಎಕ್ಸ್ ಪ್ರೆಸ್ ಅವೆನ್ಯೂ ಮಾಲ್ ಗೆ ವಿಡಿಯೋ ಗೇಮ್ ಆಡಲು ಹೋಗಿದ್ದರು. ನವೀನ್ ಎರಡನೇ ಮಹಡಿಯಲ್ಲಿ ಎಸ್ಕಲೇಟರ್ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಆತನ ಬ್ಯಾಗ್ ಎಸ್ಕಲೇಟರ್ ಗೆ ಸಿಕ್ಕಿಹಾಕಿಕೊಂಡಿದೆ. ಆಗ ನವೀನ್ ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ.

    ನಾವು ಮಾಲ್ ನ ಸಿಸಿಟಿವಿಯನ್ನು ಪರಿಶೀಲಿಸಿದ್ದೇವೆ. ಆದರೆ ನವೀನ್ ಎಸ್ಕಲೇಟರ್ ನಲ್ಲಿ ಚಲಿಸುತ್ತಿದ್ದಾಗ ಬ್ಯಾಗ್ ಸಿಕ್ಕಿಹಾಕಿಕೊಂಡಿದ್ದರಿಂದ ಈ ದುರಂತ ನಡೆದಿದೆ ಎಂದು ನವೀನ್ ತಂದೆ ಸುನಿಲ್ ಕುಮಾರ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎಸ್ಕಲೇಟರ್ ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ನವೀನ್ ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ನವೀನ್ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಮೃತ ಪಟ್ಟಿದ್ದಾನೆ. ದೇಹದ ಯಾವುದೇ ಭಾಗದಲ್ಲಿ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಫಟನೆ ಕುರಿತಂತೆ ತಂದೆ ಸುನಿಲ್ ಮಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.