Tag: ಎಸ್‍ಆರ್ ಶ್ರೀನಿವಾಸ್

  • ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ

    ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ

    – ಎಲ್ಲರೊಂದಿಗೆ ಚರ್ಚಿಸಿ ಕ್ಯಾಬಿನೆಟ್‌ಗೆ ತರಲಿ ಎಂದ ಮಾಜಿ ಸಚಿವ

    ತುಮಕೂರು: ಜಾತಿಗಣತಿ ವರದಿ (Caste Census Report) ಅನುಷ್ಠಾನಕ್ಕೆ ತರುವ ವಿಚಾರದ ಕುರಿತು ಕಾಂಗ್ರೆಸ್ (Congress) ಶಾಸಕ, ಮಾಜಿ ಸಚಿವ ಎಸ್‌ಆರ್ ಶ್ರೀನಿವಾಸ್ (SR Srinivas) ವಿರೋಧ ವ್ಯಕ್ತಪಡಿಸಿದ್ದಾರೆ.

    ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಜಾತಿಗಣತಿ ಅನುಷ್ಠಾನ ವಿರೋಧಿಸಿದ್ದು, ವರದಿಯ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಂತರ ಕ್ಯಾಬಿನೆಟ್‌ಗೆ ತರಲಿ ಎಂದು ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿ. ಎಲ್ಲಾ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು. ಆ ರೀತಿಯಲ್ಲಿ ವರದಿಯನ್ನು ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದರು. ಇದನ್ನೂ ಓದಿ: ನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!

     

    ನಾನು ಹಿಂದೆ ಇದರ ಬಗ್ಗೆ ಒಂದು ಸಾರಿ ಪ್ರಸ್ತಾಪ ಮಾಡಿದ್ದೆ. ನಮ್ಮ ಒಕ್ಕಲಿಗರಲ್ಲಿ ಒಳಪಂಗಡಗಳು ಇವೆ. ಲಿಂಗಾಯತರಲ್ಲೂ ಒಳಪಂಗಡಗಳು ಇವೆ. ಕುಂಚಿಟಿಗರು ಕೇವಲ ಕುಂಚಿಟಿಗ ಅಂತ ಬರೆದಿರುತ್ತಾರೆ. ನಮ್ಮಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಬರೆದಿರಲ್ಲ. ಸರ್ಪ ಒಕ್ಕಲಿಗರು ಇದ್ದಾಗ ಕೇವಲ ಸರ್ಪರು ಅಂತ ಬರೆಯುತ್ತಾರೆ. ಅದ್ಯಾವುದು ಕೂಡ ಆಗ ನಮ್ಮ ಸಮುದಾಯದ ಪಟ್ಟಿಯಲ್ಲಿ ಬರಲ್ಲ. ಇವರು ವರದಿ ತಯಾರು ಮಾಡಿದವರು ಕೂಡಾ ಕುಂಚಿಟಿಗ ಅಂತ ಬರೆದುಕೊಂಡು ಹೋಗಿರುತ್ತಾರೆ. ನಮ್ಮಲ್ಲಿ ವಿರೋಧ ಯಾಕೆ ಅಂದರೆ ಒಟ್ಟಿಗೆ ಒಕ್ಕಲಿಗ ಅಂತ ಮಾಡಲಿ ಅಂತ. ಲಿಂಗಾಯತ ಸಮುದಾಯದಲ್ಲೂ ಸಹ ಅದೇ ರೀತಿ ಆಗಿರಬಹುದು. ಅವರಲ್ಲಿಯೂ ಅನೇಕ ಒಳಪಂಗಡಗಳು ಇವೆ. ಆದ್ದರಿಂದ ಅದನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರಾ ಅನ್ನೋ ಅನುಮಾನ ಇದೆ. ಮಾಡದೇ ಇದ್ದಾಗ ಜನಾಂಗಕ್ಕೆ ಅನ್ಯಾಯ ಆಗುತ್ತೆ ಅನ್ನುವ ಕಳಕಳಿ ಎಲ್ಲರಲ್ಲಿ ಇದೆ. ಆ ದೃಷ್ಟಿ ಇಟ್ಟುಕೊಂಡು ಈ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ ಅಂತ ನನಗೆ ಅನಿಸುತ್ತಿದೆ. ವರದಿ ಯಾವ ರೀತಿ ತಯಾರು ಮಾಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದುವರೆಗೂ ಯಾರಿಗೂ ಗೊತ್ತಿಲ್ಲ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆ ರೀತಿಯಾದರೇ ಅನ್ಯಾಯ ಆಗುತ್ತದೆ ಎಂದರು. ಇದನ್ನೂ ಓದಿ: ನಿಗೂಢವಾಗಿ ನೆಲೆಸಿದ್ದ ಪಾಕ್‌ ದಂಪತಿ; ಬೆಂಗಳೂರಲ್ಲಿದ್ದುಕೊಂಡೇ ಧರ್ಮ ಪ್ರಚಾರ, ಪ್ರಚೋದಕರಾಗಿ ಕೆಲಸ

    ಸಿಎಲ್‌ಪಿ ಸಭೆಯಲ್ಲಿ ವರದಿ ಬಗ್ಗೆ ಚರ್ಚೆ ಆಗಲಿ ಎಂದು ಶಾಸಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಎಲ್ಲರಿಗೂ ಕೂಡ ಅದೊಂದು ದುಗುಡ ಇದೆ. ಯಾವ ರೀತಿಯಾಗಿ ಅವರು ತಯಾರು ಮಾಡಿದ್ದಾರೆ ಅನ್ನೊದು ನಮಗ್ಯಾರಿಗೂ ಸ್ಪಷ್ಟತೆ ಇಲ್ಲ. ಹಾಗಾಗಿ ಅದರ ಬಗ್ಗೆ ಸ್ಪಷ್ಟನೆ ನೀಡಿ, ಅದರ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿ ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

    ಎಲ್ಲೋ ಒಂದು ಕಡೆ ಕುಳಿತು ವರದಿ ತಯಾರಿಸಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಇರಬಹುದು. ಅದನ್ನೆಲ್ಲಾ ನೋಡಿದಾಗ ಗೊತ್ತಾಗುತ್ತದೆ. ನಮ್ಮ ಊರು, ನಮ್ಮ ತಾಲೂಕು ತೆಗೆದುಕೊಂಡರೆ ನಮಗೆ ಸಂಪೂರ್ಣ ಮಾಹಿತಿ ಇರುತ್ತದೆ. ಅದನ್ನು ನಾವು ನೋಡಿದರೆ ಗೊತ್ತಾಗುತ್ತದೆ. ನಮ್ಮ ಬಳಿ ಎಲ್ಲಾ ಮಾಹಿತಿ ಇರುತ್ತದೆ. ಹೀಗಾಗಿ ಇದು ಸರಿಯೋ, ತಪ್ಪೋ ಅಂತ ವರದಿಯನ್ನು ನೋಡಿದ ತಕ್ಷಣ ಗೊತ್ತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

  • ಟಿಕೆಟ್‌ ದರ ಏರಿಸದೇ ಇದ್ದರೆ ಸಂಸ್ಥೆ ಉಳಿಯಲ್ಲ: ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷ ಶ್ರೀನಿವಾಸ್‌

    ಟಿಕೆಟ್‌ ದರ ಏರಿಸದೇ ಇದ್ದರೆ ಸಂಸ್ಥೆ ಉಳಿಯಲ್ಲ: ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷ ಶ್ರೀನಿವಾಸ್‌

    – ಕಳೆದ ತ್ರೈಮಾಸಿಕದಲ್ಲಿ 295 ಕೋಟಿ  ರೂ. ನಷ್ಟ

    ತುಮಕೂರು: ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್‌ ದರ (Ticket Price) ಏರಿಸದೇ ಇದ್ದರೆ ಕೆಎಸ್‌ಆರ್‌ಟಿಸಿ (KSRTC) ಸಂಸ್ಥೆ ಉಳಿಯುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯದಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಮೊನ್ನೆ ನಿಗಮದ ಮೀಟಿಂಗ್ ಮುಗಿದಿದ್ದು 15-20% ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

     

    ತೈಲ ಬೆಲೆ ಏರಿಕೆ, ಹೊಸ ಬಸ್‌ಗಳ ಖರೀದಿಯಿಂದ ಸಂಸ್ಥೆಗೆ ಹೊರೆಯಾಗಿದೆ. ಅಲ್ಲದೇ ಈ ಬಾರಿ ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆ ಮಾಡಲಿದ್ದೇವೆ. ಬಿಡಿ ಭಾಗಗಳ ದರ ಏರಿಕೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ

    ಕಳೆದ ತ್ರೈಮಾಸಿಕದಲ್ಲಿ ನಿಗಮಕ್ಕೆ 295 ಕೋಟಿ ರೂ. ನಷ್ಟವಾಗಿದೆ. ಪ್ರತಿ ಬಾರಿಯೂ ನಷ್ಟವನ್ನು ಸರಿದೂಗಿಸಿಕೊಡುವಂತೆ ಸರ್ಕಾರವನ್ನು ಕೇಳುವುದು ಸರಿಯಲ್ಲ. ನಷ್ಟವನ್ನು ಸರಿದೂಗಿಸಲು ಹಾಗೂ ಸಂಸ್ಥೆಯನ್ನು ಉಳಿಸಬೇಕಾದರೆ ಟಿಕೆಟ್ ದರ ಹೆಚ್ಚಿಗೆ ಮಾಡಲೇಬೇಕು ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

     

    ಟಿಕೆಟ್ ದರ ಹೆಚ್ಚಳ ಮಾಡುವುದರಿಂದ ಪುರುಷ ಪ್ರಯಾಣಿಕರಿಗೆ ಹೊರೆಯಾಗುತ್ತದೆ ಎನ್ನುವ ಪ್ರಶ್ನೆಯೇ ಇಲ್ಲ. ಶಕ್ತಿ ಯೋಜನೆಯಲ್ಲಿನ ಮಹಿಳಾ ಪ್ರಯಾಣಿಕರ ಟಿಕೆಟ್ ದರ ಕೂಡ ಹೆಚ್ಚಾಗಲಿದ್ದು ಅದನ್ನು ಸರ್ಕಾರ ಭರಿಸುತ್ತದೆ ಎಂದು ತಿಳಿಸಿದರು.

  • ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ್ ಇಂದು ರಾಜೀನಾಮೆ

    ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ್ ಇಂದು ರಾಜೀನಾಮೆ

    ತುಮಕೂರು: ಗುಬ್ಬಿ (Gubbi) ಕ್ಷೇತ್ರದ ಜೆಡಿಎಸ್ (JDS) ಉಚ್ಛಾಟಿತ ಶಾಸಕ ಎಸ್‌ಆರ್ ಶ್ರೀನಿವಾಸ್ (SR Srinivas) ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆ ಅಂಗೀಕಾರ ಆದ ಬಳಿಕ ಕಾಂಗ್ರೆಸ್ ಸೇರುತ್ತೇನೆ. ದೇವೇಗೌಡರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ದೇವೇಗೌಡರು (HD Devegowda), ಕುಮಾರಸ್ವಾಮಿ ನಾಯಕತ್ವದಲ್ಲಿ ಕೆಲಸ ಮಾಡಿದ್ದೇನೆ. ದೇವೇಗೌಡರು ಹೆಚ್ಚಿನ ಪ್ರೋತ್ಸಾಹ ಕೊಟ್ಟು ಮಗನಂತೆ ನೊಡಿಕೊಂಡರು. ಕುಮಾರಸ್ವಾಮಿ ಅವರು ಕೂಡ ಒಡಹುಟ್ಟಿದ ತಮ್ಮನ ಹಾಗೆ ನೊಡಿಕೊಂಡಿದ್ದಾರೆ. ಅದ್ಯಾವ ಸಂದರ್ಭಕ್ಕೊಸ್ಕರ ನನ್ನನ್ನು ಹೊರಹಾಕಿದ್ರೋ ಗೊತ್ತಿಲ್ಲ. ಆದರೂ ಇವತ್ತು ಭಾರವಾದ ಹೃದಯದಿಂದ, ನೋವಿನಿಂದ ಆ ಪಕ್ಷಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಭಾವುಕರಾದರು.

    2021ರ ಅಕ್ಟೋಬರ್‌ನಲ್ಲಿ ಕುಮಾರಸ್ವಾಮಿ (HD Kumaraswamy) ಬಂದು ಗುಬ್ಬಿಗೆ ಬೇರೆ ಅಭ್ಯರ್ಥಿ ಘೋಷಣೆ ಮಾಡಿದರು. ಅವತ್ತಿನಿಂದ ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ ಅಂತರ ಜಾಸ್ತಿ ಆಯ್ತು. ಅವರು ನನ್ನ ಮೇಲೆ ಇಲ್ಲದ ಆರೋಪ ಮಾಡಿದರು. ದೇವೇಗೌಡರನ್ನು ಸೋಲಿಸಲು ನಾನು ಮುಖ್ಯ ಕಾರಣ ಅಂದರು. ಯಾವತ್ತೂ ನಾನೂ ಅಂತಹ ಪಕ್ಷ ದ್ರೋಹ ಮಾಡಿಲ್ಲ ಎಂದು ಹೇಳಿದರು.

    ನಾನು ಮತ್ತು ಕುಮಾರಸ್ವಾಮಿ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಅವರು ಯಾರ ಮಾತು ಕೇಳಿದ್ರೋ ಗೊತ್ತಿಲ್ಲ. ನಾನು ಪಕ್ಷ ಬಿಡಲ್ಲ ಅಂದರೂ ಅಧಿಕೃತವಾಗಿ ಅವರನೇ ಬೇರೆ ಅಭ್ಯರ್ಥಿ ಘೋಷಣೆ ಮಾಡಿದರು. ಅಡ್ಡ ಮತದಾನ ಮಾಡಿರುವ ಆರೋಪ ಮಾಡಿದರು. ಪಕ್ಷದಿಂದ ವಜಾಗೊಳಿಸಿದರು. ಇದುವರೆಗೂ ನನಗೆ ಸಹಕಾರ ಕೊಟ್ಟ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

    ನಾವು ಕುಟುಂಬದ ಸದಸ್ಯರಂತೆ ಕೆಲಸ ಮಾಡಿದ್ದೇವೆ. ಎಲ್ಲರೂ ನನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಪಟ್ಟರು. ಕುಮಾರಸ್ವಾಮಿ 20 ವರ್ಷ ತಮ್ಮನ ರೀತಿಯಲ್ಲಿ ನೋಡಿಕೊಂಡಿದ್ದಾರೆ. ರೇವಣ್ಣ ಅವರು ಅಭಿವೃದ್ಧಿ ಕೆಲಸಕ್ಕೆ ಸ್ಪಂದಿಸಿದ್ದಾರೆ. ನಾನು ಮಲಗಿದ್ದರೂ ಫೋನ್ ಮಾಡಿ ನಿನ್ನ ಕ್ಷೇತ್ರಕ್ಕೆ ಏನು ಬೇಕು ಎಂದು ಕೇಳಿ ಕೆಲಸ ಹಾಕಿಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ದಂಪತಿ ಸಜೀವದಹನ

  • ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    ತುಮಕೂರು: ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರುತ್ತೇನೆ ಎಂದು ಗುಬ್ಬಿ (Gubbi) ಜೆಡಿಎಸ್ (JDS) ಉಚ್ಛಾಟಿತ ಶಾಸಕ ಎಸ್.ಆರ್. ಶ್ರೀನಿವಾಸ್ (S. R. Srinivas) ಭವಿಷ್ಯ ನುಡಿದರು.

    ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಜ್ಯೋತಿ ಶಾಸ್ತ್ರದವರು ನನ್ನ ಕುಂಡಳಿ ನೋಡಿದ್ರೆ ಹೆದರಿ ಓಡ್ತಾರೆ ಹಂಗಿದೆ ನನ್ನ ಕುಂಡಳಿ. ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯವಾಗಿದೆ. ಚುನಾವಣೆ ಹತ್ತಿರ ಬಂದಾಗ ಕಾಗೆ, ಗೂಬೆಗಳೆಲ್ಲ ವೇಷ ಹಾಕಿಕೊಂಡು ಬರುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು. ಇದನ್ನೂ ಓದಿ: 1 ವರ್ಷದಲ್ಲಿ 3 ಬಾರಿ ಭರ್ತಿ – ದಾಖಲೆ ಬರೆದ ಕೆಆರ್‌ಎಸ್ ಡ್ಯಾಂ

    ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ಅದಾದ ಬಳಿಕ ನಾನು ಶಾಸಕನಾಗಿದ್ದೇನೆ. ನಮ್ಮಪ್ಪನಾಣೆ ನಾನೇ ಮುಂದಿನ ಐದು ವರ್ಷ ಶಾಸಕನಾಗಿರುತ್ತೇನೆ. ನನ್ನನು ಸುಲಭವಾಗಿ ಸೋಲಿಸಿ ಬಿಡುತ್ತೇನೆ ಅಂದುಕೊಂಡವರೆ ಅದು ಸಾಧ್ಯ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಲಕಿ ರೇಪ್ & ಮರ್ಡರ್ – ಅನಧಿಕೃತ ಟ್ಯೂಷನ್ ಸೆಂಟರ್‌ಗಳಿಗೆ ಡಿಡಿಪಿಐ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]