ಮಂಗಳೂರು: ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಖಂಡಿಸಿ ಯಲಹಂಕದ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ನೇತೃತ್ವದಲ್ಲಿ ಧರ್ಮಸ್ಥಳ ಚಲೋ (Dharmasthala Chalo) ನಡೆದಿದೆ.
400ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ವಿಶ್ವನಾಥ್ ಅವರಿಗೆ ಧರ್ಮಸ್ಥಳದ ದ್ವಾರಬಾಗಿಲಿನಲ್ಲಿ ಬಿಜೆಪಿ ಕಾರ್ಯಕರ್ತರು ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು. ಸುಳ್ಳಿಗೆ ಸೋಲು,ಧರ್ಮಕ್ಕೆ ಜಯ ಘೋಷಣೆ ಕೂಗುತ್ತಾ ಬಿಜೆಪಿಗರು ಘೋಷಣೆ ಮೊಳಗಿಸಿದರು.
ಸೌಜನ್ಯ ಪ್ರಕರಣದ ಬಗ್ಗೆ ತನಿಖೆ ಮಾಡಲಿ. ಅದಕ್ಕೆ ನಮ್ಮ ಅಡ್ಡಿ ಇಲ್ಲ, ಸ್ವಾಗತ ಮಾಡಿದ್ದೇವೆ, ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸ ಮಾಡುತ್ತಿದ್ದಾರೆ, ಮಂಜುನಾಥ ಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಮಂಜುನಾಥಸ್ವಾಮಿ ಶಕ್ತಿವಂತ ದೇವರು, ಯಾರು ಇಂತಹ ಅಪಪ್ರಚಾರ ಮಾಡಿದ್ದಾರೆ ಅವರಿಗೆ ಶಿಕ್ಷೆಯನ್ನು ಕೊಡಲಿ, ಸರ್ಕಾರ ಕೊಡುವ ಶಿಕ್ಷೆ ಬೇರೆ, ದೇವರು ಕೊಡುವ ಶಿಕ್ಷೆ ಬೇರೆ, ರಾಜ್ಯ, ದೇಶದಲ್ಲಿರುವ ಮಂಜುನಾಥಸ್ವಾಮಿ ಭಕ್ತರಿಗೆ ಘಾಸಿ ಆಗುವ ಕೆಲಸವನ್ನು ವಿಚಾರವಾದಿಗಳು, ಧರ್ಮ ವಿರೋಧಿಗಳು ಮಾಡಿಕೊಂಡು ಬರುತ್ತಿದ್ದಾರೆ ಎಂದು ದೂರಿದರು. ಇದನ್ನೂಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ
ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಚಿಕ್ಕಬಳ್ಳಾಪುರ: ಕಳೆದ ಬಾರಿ 2019ರಲ್ಲಿ ಯಲಹಂಕ (Yalahanka) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ (BJP) 45,000 ಮತಗಳ ಲೀಡ್ ದೊರೆತಿತ್ತು. ಈ ಬಾರಿ ಎನ್‌ಡಿಎಗೆ (NDA) 1 ಲಕ್ಷಕ್ಕೂ ಹೆಚ್ಚು ಮತಗಳ ಲೀಡ್ ಸಿಗಲಿದೆ ಎಂದು ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ವಿಶ್ವಾಸ ವ್ಯಕ್ತಪಡಿಸಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ತೋಟದಗುಡ್ಡಹಳ್ಳಿ, ಅಂಚೆಪಾಳ್ಯ ಮೊದಲಾದ ಕಡೆಗಳಲ್ಲಿ ಶಾಸಕ ಎಸ್‌ಆರ್ ವಿಶ್ವನಾಥ್ ಅವರೊಂದಿಗೆ ಡಾ.ಕೆ ಸುಧಾಕರ್ ಪ್ರಚಾರ ಮತ್ತು ಸಭೆ ನಡೆಸಿದರು. ಬಳಿಕ ಮಾತನಾಡಿದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ (Dr K Sudhakar), ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾದ ಬಳಿಕ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. 80% ರಷ್ಟು ಮತಗಳು ಬಿಜೆಪಿಗೆ ದೊರೆಯಲಿದೆ. ಆದರೆ ಕಾಂಗ್ರೆಸ್‌ಗೆ 20% ರಷ್ಟು ಮತಗಳು ದೊರೆಯುವುದು ಅನುಮಾನ. ಇದಕ್ಕೆ ಶಾಸಕರ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದರು. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮಳೆ ಅಬ್ಬರ; ಶಿವಮೊಗ್ಗ, ಬೀದರ್‌ನಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ – ಇನ್ನೂ 3 ದಿನ ಮಳೆ ಮುನ್ಸೂಚನೆ
ಬೆಂಗಳೂರು: ಮಾಜಿ ಸಚಿವ, ಹಾಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಧಾಕರ್ (Sudhakar) ಮತ್ತು ಬಿಜೆಪಿಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ (Radha Mohan Das) ಅವರು ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanth) ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ (Amit Shah) ಸೂಚನೆ ಮೇರೆಗೆ ಬೆಳಗ್ಗೆ ಉಪಹಾರಕ್ಕೆ ಬರುವಂತೆ ಇಬ್ಬರು ನಾಯಕರಿಗೆ ಎಸ್‌ಆರ್ ವಿಶ್ವನಾಥ್ ಆಹ್ವಾನ ನೀಡಿದ್ದರು. ಆಹ್ವಾನದ ಹಿನ್ನೆಲೆಯಲ್ಲಿ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ನಿವಾಸಕ್ಕೆ ಇಬ್ಬರು ನಾಯಕರು ಭೇಟಿ ನೀಡಿ ಭಿನ್ನಾಭಿಪ್ರಾಯ ಮರೆತು ಮಾತುಕತೆ ನಡೆಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ಅಸಮಾಧಾನ ಪಕ್ಷದ ಮೇಲೆ ಯಾವತ್ತೂ ಮಾಡಿಲ್ಲ. ಸುಧಾಕರ್ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೆ ಅಷ್ಟೇ. ನರೇಂದ್ರ ಮೋದಿ ಗೆಲ್ಲಿಸಲು ಬಿಜೆಪಿ ಪಕ್ಷವನ್ನ ನೋಡಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಚುನಾವಣಾ ಚಾಣಾಕ್ಷ ಅಮಿತ್ ಶಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ.ನಾನು ಏನು ಹೇಳಬೇಕೋ ಹೇಳಿದ್ದೇನೆ. 8 ವಿಧಾನ ಸಭಾ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ರಾಧಾ ಮೋಹನ್ ದಾಸ್ ಅವರು ನಿನ್ನೆ ತಿಂಡಿಗೆ ಬರುತ್ತೇವೆ ಎಂದು ಹೇಳಿದರು. ಇವತ್ತು ಮನೆಗೆ ಬಂದಿದ್ದು ನಮ್ಮ ಕ್ಷೇತ್ರದ ಮುಖಂಡರ ಪರಿಚಯ ಮಾಡಿಸಿದ್ದೇನೆ ಎಂದರು.
ಯಾರೇ ಹೇಳಲಿ ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ. ಎಲ್ಲಾ ಕಾರ್ಯಕರ್ತರನ್ನು ಕರೆದು ಸಭೆ ಮಾಡಿ ಸೂಚನೆ ಕೊಡಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ನಾಳೆ ಹೋಗುತ್ತೇವೆ. ಮುಂದಿನ ಬಾರಿ ಅಲೋಕ್ ಗೆ ಅವಕಾಶ ಕೊಡುತ್ತೇವೆ ಎಂದು ರಾಧಾ ಮೋಹನ್ ಜಿ ಕೂಡಾ ಹೇಳಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ (K Sudhakar) ಹಾಗೂ ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ನಡುವೆ ಮುನಿಸು ಮುಂದುವರಿದಿದೆ. ವಿಶ್ವನಾಥ್ ಅವರನ್ನು ಭೇಟಿ ಮಾಡಲೆಂದು ಅವರ ನಿವಾಸಕ್ಕೆ ಆಗಮಿಸಿದ ಸುಧಾಕರ್ ಅನ್ನು ಭೇಟಿ ಮಾಡದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಶಾಸಕ ಎಸ್‌ಆರ್ ವಿಶ್ವನಾಥ್ ರೆಬೆಲ್ ಆಗಿದ್ದಾರೆ. ಟಿಕೆಟ್ ಘೋಷಣೆಯಾಗಿ ವಾರವಾದರೂ ವಿಶ್ವನಾಥ್ ಮುನಿಸು ಮುಗಿದಿಲ್ಲ. ವಿಶ್ವನಾಥ್ ಪುತ್ರ ಅಲೋಕ್‌ಗೆ ಚಿಕ್ಕಬಳ್ಳಾಪುರ ಟಿಕೆಟ್ ಕೇಳಿದ್ದರು. ಟಿಕೆಟ್ ಕೈತಪ್ಪಿದ ಹಿನ್ನೆಲೆ ವಿಶ್ವನಾಥ್ ಅಸಮಧಾನಗೊಂಡಿದ್ದಾರೆ. ಅಲ್ಲದೇ ಸುಧಾಕರ್‌ಗೆ ಬೆಂಬಲ ಕೊಡದಿರಲು ಎಸ್‌ಆರ್ ವಿಶ್ವನಾಥ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್ ಶ್ರೀಲಂಕಾಗೆ ನೀಡಿದೆ – ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ RTI ಉತ್ತರ
ಈ ಮಧ್ಯೆ ಖುದ್ದು ಸುಧಾಕರ್ ತಮ್ಮ ನಿವಾಸಕ್ಕೆ ಬಂದರೂ ಸಹ ವಿಶ್ವನಾಥ್ ಅವರನ್ನು ಭೇಟಿ ಮಾಡಿಲ್ಲ. ಪಕ್ಷದ ಅಭ್ಯರ್ಥಿ ಮನೆಗೆ ಬಂದರೂ ಎದುರುಗೊಳ್ಳದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ. ಸುಧಾಕರ್ ಜೊತೆ ಒಡನಾಟವೇ ಬೇಡ ಎಂಬ ತೀರ್ಮಾನಕ್ಕೆ ವಿಶ್ವನಾಥ್ ಬಂದಿದ್ದಾರೆ. ಚಿಕ್ಕಬಳ್ಳಾಪುರ ಭಿನ್ನಮತ ತೀವ್ರ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಲ್ಲಿ ಆತಂಕ ಹೆಚ್ಚಾಗಿದೆ. ಎಸ್‌ಆರ್ ವಿಶ್ವನಾಥ್ ಭೇಟಿ ಮಾಡಲು ಒಪ್ಪದ ಹಿನ್ನೆಲೆ ಸುಧಾಕರ್‌ಗೆ ಮುಜುಗರವುಂಟಾಗಿ ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
ಈ ಕುರಿತು ಸುಧಾಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ನಮ್ಮ ಸ್ನೇಹಿತರು. ಹಲವಾರು ಸಲ ನಾನು ಕರೆ ಮಾಡಿದ್ದೆ, ಮೆಸೇಜ್ ಮಾಡಿದ್ದೆ. ಅದಕ್ಕೆ ಯಾವುದೇ ಉತ್ತರ ಇಲ್ಲ. ಯಾವುದಕ್ಕೂ ಸ್ಪಂದಿಸಿರಲಿಲ್ಲ. ನಮ್ಮ ನಾಯಕರು ಯಡಿಯೂರಪ್ಪ ಅವರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಇದೇ ಚುನಾವಣೆ ಕೊನೆಯಲ್ಲ. ನಮ್ಮ ನಾಯಕರು ಸಮಸ್ಯೆ ಬಗೆಹರಿಸುತ್ತಾರೆ. ಇದರ ನಡುವೆ ನಮ್ಮ ಅವರ ಭೇಟಿ ಸಾಧ್ಯವಾಗಿಲ್ಲ. ಕೆಲವು ರಾಜಕಾರಣದಲ್ಲಿ ಎಲ್ಲವು ಸರಾಗವಾಗಿ ನಡೆದರೆ ಅದು ರಾಜಕಾರಣವಲ್ಲ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ನನ್ನ ಮತ್ತು ಅವರ ನಡುವೆ ವೈಯಕ್ತಿಕ ಕಲಹಗಳು ಏನು ಇಲ್ಲ. ನಾನು ಸೇರಿ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರೋದು. ಏ.4ರಂದು ನಾಮಪತ್ರ ಸಲ್ಲಿಸುತ್ತೇನೆ. ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಅಧಿಕೃತ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸುಮಲತಾರನ್ನು ಭೇಟಿಯಾಗಲಿದ್ದಾರೆ ಹೆಚ್‌ಡಿಕೆ
ಈ ಕುರಿತು ಎಸ್‌ಆರ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ಮಾಧ್ಯಮದವರಿಗೆ ಮಾಹಿತಿ ನೀಡಿದರೆ ಸಾಕೇ? ನಮ್ಮ ಮನೆಗೆ ಬರುವಾಗ ನನಗೆ ಹೇಳೋದು ಬೇಡ್ವಾ? ನಾನ್ಯಾಕೆ ಒಬ್ಬನೇ ಮಾತಾಡಲಿ? ಹೇಳಿದ್ದರೆ ಕಾರ್ಯಕರ್ತರನ್ನು ಸೇರಿಸಿ ಅವರ ಎದುರೇ ಮಾತನಾಡುತ್ತಿದ್ದೆ. ಅಮಿತ್ ಶಾ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಅಮಿತ್ ಶಾ ಕಾರ್ಯಕ್ರಮದ ತಯಾರಿಗಳನ್ನು ನೋಡಿಕೊಳ್ಳಲು ತೆರಳುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ
ಬೆಂಗಳೂರು: ಪ್ರತಿಪಕ್ಷ ನಾಯಕ್ ಆರ್ ಅಶೋಕ್ (R Ashok) ಮತ್ತು ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ಮಧ್ಯೆ ಅಸಮಾಧಾನ ಮುಂದುವರೆದಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಗೆ ಹೋಗಲು ವಿಶ್ವನಾಥ್ ಮತ್ತೆ ನಿರಾಕರಿಸಿದ್ದಾರೆ.
ಸದನದಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಆರ್ ಅಶೋಕ್ ಕಚೇರಿಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ ವಿಶ್ವನಾಥ್ ಅವರನ್ನು ಅಶೋಕ್ ಕೊಠಡಿಗೆ ಕರೆದೊಯ್ಯಲು ಕೈ ಹಿಡಿದುಕೊಂಡರು. ಈ ವೇಳೆ ವಿಶ್ವನಾಥ್ ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ನಾನು ಆ ಕೊಠಡಿಗೆ ಬರೋದಿಲ್ಲ. ಬೇಕಾದರೆ ನಾಮಫಲಕ ತೆಗೆಯಲಿ ಆಗ ಹೋಗುತ್ತೇನೆ ಎಂದು ಕಡ್ಡಿಮುರಿದಂತೆ ಹೇಳಿ ಕೊಠಡಿ ಮುಂಭಾಗದ ಮೊಗಸಾಲೆಯಲ್ಲಿ ಕುಳಿತಿದ್ದಾರೆ. ಇದನ್ನೂ ಓದಿ: ಹೊಸ ಟ್ರಕ್‌ಗಳಲ್ಲಿ ಚಾಲಕರಿಗೆ ಎಸಿ ಕ್ಯಾಬಿನ್ ಕಡ್ಡಾಯ – ಅಧಿಸೂಚನೆ ಪ್ರಕಟ
ಈ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಶ್ವನಾಥ್ ಜೊತೆ ಮಾತುಕತೆ ನಡೆಸಿದ್ದಾರೆ. ವಿಜಯೇಂದ್ರ ಜೊತೆಗಿನ ಮಾತುಕತೆ ವೇಳೆ ವಿಶ್ವನಾಥ್ ಅಶೋಕ್ ಮೇಲಿನ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ವಿಜಯೇಂದ್ರ ಅವರು ವಿಶ್ವನಾಥ್ ಅವರಿಗೆ ಅದನ್ನೆಲ್ಲಾ ಮಾತನಾಡೋದು ಬಿಡಿ ಒಗ್ಗಟ್ಟಾಗಿ ಹೋಗೋಣ ಎಂದು ಮನವೊಲಿಸಿ ಸಂಧಾನ ಮಾಡಿದ್ದಾರೆ. ಇದನ್ನೂ ಓದಿ: ಶಿವರಾಜ್‌ಸಿಂಗ್ ರಾಜ್ಯ ರಾಜಕೀಯ ಅಂತ್ಯ – ಲೋಕಸಭೆಗೆ ಸ್ಪರ್ಧೆ?
ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಕೊಲೆ ಸಂಚಿಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಆಪ್ತನಿಗೆ ಸುಪಾರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ವೀಡಿಯೋ, ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಯಲಹಂಕದಿಂದ ಗೋಪಾಲಕೃಷ್ಣ ಅವರು ಎಸ್. ಆರ್ ವಿಶ್ವನಾಥ್ ಚುನಾವಣೆಯಲ್ಲಿ ವಿರುದ್ಧವಾಗಿ ನಿಂತು ಸೋತಿದ್ದರು. ಎಸ್. ಆರ್ ವಿಶ್ವನಾಥ್ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಈ ವೀಡಿಯೋ 2 ತಿಂಗಳ ಹಿಂದೆ ಶೂಟ್ ಮಾಡಿದ್ದು ಎನ್ನಲಾಗಿದೆ. ಗೋಪಾಲಕೃಷ್ಣ ತನ್ನ ಆಪ್ತ ಕುಳ್ಳ ದೇವರಾಜ್‍ಗೆ ಸುಪಾರಿ ಕೊಟ್ಟಿರುವ ಎರಡು ವೀಡಿಯೋ ಹಾಗೂ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವೀಡಿಯೋದಲ್ಲಿ ಏನಿದೆ?: 6 ತಿಂಗಳು ಬೇಕಾದರೂ ಆಗಲಿ, ಕಡಬಗೆರೆ ಸೀನನ್ನು ಎತ್ತಿದ ಹಾಗೇ ಎಸ್.ಆರ್ ವಿಶ್ವನಾಥ್ ಎತ್ತಬೇಕು. ಕಾರ್‌ನಲ್ಲಿ ಹೋಗುವಾಗ ಅಟ್ಯಾಕ್ ಮಾಡಬಾರದು, ನಾಗಶೆಟ್ಟಿಯಲ್ಲಿ ಮಾಡೋಣ. ತೋಟ ಇರುವ ಜಾಗ ನೋಡಿ ಮಾಡೋಣ ಎಂದು ಹೇಳಿದ್ದಾರೆ. ಜೊತೆಗೆ ವೀಡಿಯೋದಲ್ಲಿ 20 ಲಕ್ಷ ರೂಪಾಯಿ ಹಣವನ್ನು ಕೊಡುವ ದೃಶ್ಯವೂ ಇದೆ.
ಕುಳ್ಳ ದೇವರಾಜ್ : ಹೇಳ್ತಿನಿ ಯಾರು ಅಂತ.. ಪಟ್ ಅಂತ ರೆಡಿ ಮಾಡಿ ಎಲ್ಲಾ ಮುಗಿಸಿಬಿಡೋಣ.. ಗೋಪಾಲಕೃಷ್ಣ : ಯಾವ ತರ ಮಾಡುತ್ತಾರೋ ಸೈಲೆಂಟಾಗಿ ಮಾಡುತ್ತಾರೆ.. ಕುಳ್ಳ ದೇವರಾಜ್ : ಸೈಲೆಂಟಾಗಿ ಮಾಡ್ತಾರೆ ನಿಂಗ್ ಯಾಕಣ್ಣ? ಗೋಪಾಲಕೃಷ್ಣ : ಪಕ್ಕಾ ತಾನೇ? ಕುಳ್ಳ ದೇವರಾಜ್ : ನಿನ್ನ ಕಥೆ ಕಟ್ಕೊ ನಾನು ಪಕ್ಕಾ ಮಾಡುಸ್ತೀನಿ. ಒಂದು ಹೊಡೆದವನಿಗೆ ಇನ್ನೊಂದು ಹೊಡೆಯೋದು ಕಷ್ಟಾನಾ? ಸಲ್ಪ ರಿಸ್ಕ್ ಆಗುತ್ತೆ. ಒಟ್ಟಿನಲ್ಲಿ ಡಿಪಾರ್ಟ್‍ಮೆಂಟದ್ದು ನಿನ್ನ ಇಂಚಾರ್ಜ್ ಡಿಪಾರ್ಟ್‍ಮೆಂಟ್ ಏನ್ ಮಾಡ್ತಾರೆ.. ಗೋಪಾಲಕೃಷ್ಣ : ಡಿಪಾರ್ಟ್‍ಮೆಂಟ್‍ದು ಏನಿದೆ?
ಕುಳ್ಳ ದೇವರಾಜ್ : ಒಂದೇಟು ಮುಟ್ಟಬಾರದು.. ಮಾಡಿ ಸೆರೆಂಡರ್ ಆಗ್ತಾರೆ. ಗೋಪಾಲಕೃಷ್ಣ : ಆದರೆ ಅವನು ಫಿನಿಶ್ ಆಗಿಬಿಡಬೇಕು. ಫುಲ್ಲು ಮರ್ಡರ್ ಅರ್ಧಂಬರ್ಧ ಇರಬಾರದು ಕುಳ್ಳ ದೇವರಾಜ್ : ಫಿನಿಶ್ ಆಗ್ತಾನೆ ಅಣ್ಣ, ಮಾಡಿ ಅವನ ಮೇಲೆ ಹೇಳೋ ತರ ಮಾಡೋಣ. ಗೋಪಾಲಕೃಷ್ಣ : ಅವನ ಮೇಲೆನೆ ಹೇಳಬೇಕು. ಕುಳ್ಳ ದೇವರಾಜ್ : ಅವರಿಗೂ ಅವನ ಮೇಲೆ ಕೋಪ ಇದೆ. ಅರ್ಥ ಆಯ್ತಾ. ಯಾವುದೋ 2-3 ಜಮೀನಿನ ಮೇಲೆ ಕೈ ಹಾಕಿ ಥಣಿಸಂದ್ರ ಕಡೆ ಇದು ಮಾಡವ್ರೆ.. ರೆಡಿ ಮಾಡ್ತಿನಿ ಅರ್ಥ ಆಯ್ತಾ. ಗೋಪಾಲಕೃಷ್ಣ : ಓಕೆ ಮಾಡಿಸು. ಕುಳ್ಳ ದೇವರಾಜ್ : ಕೊಡು ಅಡ್ವಾನ್ಸ್ ಎಷ್ಟು ಕೊಡ್ತಿಯಾ?
ಗೋಪಾಲಕೃಷ್ಣ: ಮಾಡಿಸು ಕೊಡ್ತಿನಿ. ಅರೇಂಜ್ ಮಾಡ್ತಿನಿ, ಹೌದಾ, ಪ್ಲ್ಯಾನ್ ರೆಡಿನಾ ಹಾಗಾದ್ರೆ? ಗೋಪಾಲಕೃಷ್ಣ: ಗಾಂಜಾ ಪ್ಲೇಯರ್ ಆದರೂ ಫಂಕ್ಷನ್‍ನಲ್ಲಿ ಮಾಡೋದಲ್ಲ. ಇವನು ಹೊಡೆದು ಬಿಸಾಕೋದು ಎಷ್ಟೊತ್ತು ಅವರಿಗೆ. ಕುಳ್ಳ ದೇವರಾಜ್ : ಇವಾಗ ಏನು ಅಣ್ಣ ಕತ್ತು ಕುಯ್ಕೊಂತಾರಾ ಏನು? ಇಲ್ಲಿ ಆಯ್ತಲ್ಲ ಸಿಗ್ನಲ್ಲಲ್ಲಿ ಕಡಬುಗೆರೆ ಸೀನಂದು ಹಂಗೆ ರೆಡಿ ಮಾಡ್ಕೊ.. ಢಮ್ ಅನ್ನಿಸೋಣ. ಗೋಪಾಲಕೃಷ್ಣ : ಕಾರಲ್ಲಿ ಹೋಗೋವಾಗ ಮಾಡಬಾರದು. ಕುಳ್ಳ ದೇವರಾಜ್ : ಅದು ಸಕ್ಕತ್ತಾಗ್ ಮಾಡಿದೆ ನೀನು ಪ್ಲಾನ್, ಹೆಂಗೋ ನಮಗೆಲ್ಲಾ ಗೊತ್ತು ತಗೋ.. ನೋಡು ಹಂಗೆ ಮಾಡಬೇಕು, ಸೈಲೆಂಟಾಗಿ.
ಗೋಪಾಲಕೃಷ್ಣ : ಉಳಿಬಾರ್ದು ಅರ್ಧಂಬರ್ಧ ಇದ್ರೆ ಕಷ್ಟ ಆಗುತ್ತೇ. ಫಿನಿಷ್ ಆಗಿಬಿಡಬೇಕು. ಕುಳ್ಳ ದೇವರಾಜ್ : ನೀನು ಎಲ್ಲಾ ಕರೆಕ್ಟಾಗಿ ಮಾಡಿದೆ ಲಾಸ್ಟ್ ಟೈಂ ಆದರೆ ಹಾಸ್ಪಿಟಲ್ ಅಲ್ಲಿ ಸ್ವಲ್ಪ ಯಾಮಾರ್ ಬಿಟ್ಟೆ ಅವನು ಕಡಬಗೆರೆ ಹತ್ತಿರ. ನೀನಾಗಿ ನೀನೇ ಹೆಸರು ಹೇಳ್ಬಿಟ್ಟೆ ಅವನು ಹೇಳಿಲ್ಲ. ಮಿ** ನನ್ನ ಮಗ ಆವಾಗ ಕೇಸ್ ಸ್ವಲ್ಪ ಲೂಸ್ ಆಯ್ತು. ಗೋಪಾಲಕೃಷ್ಣ : ಕೇಸ್ ಲೂಸ್ ಆಗಕ್ಕೆ ಪೊಲೀಸರಿಗೆ ಅವರ ಮೇಲೆ ನಂಬಿಕೆ ಇರಲಿಲ್ಲ. ಕಡಬಗೆರೆ ಅವರು ಬರೀ ಪೊಲೀಸ್ ಅವರ ಮೇಲೆ ಕೇಸ್ ಹಾಕ್ತಾ ಇದ್ದರು. ಎಸ್‍ಪಿ ಡಿಸಿಪಿ ಅಂತವರ ಮೇಲೆ ಕೇಸ್ ಹಾಕಿ ಬಿಟ್ಟಿದ್ದಾರೆ. ಅದಕ್ಕೆ ಪೊಲೀಸರು ಅಪೋಸಿಟ್ ಇದ್ದರು. ಹರ್ಷ ಡಿಸಿಪಿ ನನಗೆ ಹೇಳಿದ ಸರ್ ಯಾಕೆ ಹೋಗಿ ಹೋಗಿ ಈ ನನ್ನ ಮಕ್ಕಳಿಗೆ ಸಪೋರ್ಟ್ ಮಾಡುತ್ತೀರಾ ಸರ್, ಸರಿ ಇಲ್ಲ ಇವರು ಕಚಡಾ ನನ್ನ ಮಕ್ಕಳು. ಬ್ಯಾಗ್ರೌಂಡ್ ಗೊತ್ತಿಲ್ಲ ಸರ್ ನಿಮಗೆ. ಇಲ್ಲ ಅಂದಿದ್ರೆ ಇನ್ನಷ್ಟು ಮಾಡಿಸುತ್ತಿದ್ದೆ. ನೋಡು ಹುಷಾರಾಗಿ ಐಡಿಯಾ ಮಾಡು.
ಕುಳ್ಳ ದೇವರಾಜ್ : ಮಾಡೋಣ ಒಂದ್ 15 ದಿವಸ ಅಲ್ಲ, 6 ತಿಂಗಳು ಆಗಲಿ. ನಿಧಾನಕ್ಕೆ ರೆಡಿ ಮಾಡಿ ಹುಡುಗರನ್ನು ಫಿಲ್ಟರ್ ಮಾಡಬೇಕು. ಎಣ್ಣೆ ಇರಬಾರದು, ಗಾಂಜಾ ಇರಬಾರದು ಅವರಿಗೆ ಜಿದ್ದು ಇರಬೇಕು. ಗೋಪಾಲಕೃಷ್ಣ : ಜಿದ್ದು ಇರಬೇಕು, ಆಮೇಲೆ ಒಳ್ಳೆಯ ಜಾಗ ನೋಡಿ ಕೊಂಡು ತೋಟ ಅಂತ ಜಾಗ ನೋಡಿಕೊಂಡು.. ಅಂತ ಕಡೆ ನೊಡ್ಕೊಬೇಕು. ಗೋಪಾಲಕೃಷ್ಣ: ಅದನ್ನೆಲ್ಲಾ ಒಂದು ತಿಂಗಳು 2 ತಿಂಗಳಾದ್ರೂ ಪರವಾಗಿಲ್ಲ ಕುಳ್ಳ ದೇವರಾಜ್: 3 ಜನ ಟೀಂ ಇದೆ ಅದರಲ್ಲಿ ಫಿಲ್ಟರ್ ಮಾಡ್ಕೊಬೇಕು. ಕರೆಕ್ಟಾಗಿ ಇರೋರನ್ನ ಖಡಕ್ಕಾಗಿ ಇರುವವರನ್ನು ಮಾಡ್ಕೊಂಡು.
ಗೋಪಾಲಕೃಷ್ಣ : ಇವನು ಯಾವ ಲೆಕ್ಕ ಹೇಳು. ಸಿಲಿಂಡರ್ ತಗೊಂಡು ಬಂದು ಒಬ್ಬನೇ ತಗೊಂಡು ಬಂದ್ ಢಮ್ ಅನ್ಸಿದರೆ ಆಯ್ತು. ಕುಳ್ಳ ದೇವರಾಜ್ : ಆಗಲಿ ಕಾಸು ಬೇಡವಾ..?
ಕುಳ್ಳ ದೇವರಾಜ್ : ಒಬ್ಬನೇ ಇದ್ದಾಗ ಮಾಡ್ತಿವೋ… 10 ಜನ ಇದ್ದಾಗ ಮಾಡುತ್ತಿವೋ ನಿನಗ್ಯಾಕೆ.. ಗೋಪಾಲಕೃಷ್ಣ : 10 ಜನ ಬೇಡ ಸೈಲೆಂಟಾಗಿ ಮಾಡಿಸು, ತೋಟದಲ್ಲಿ ಕ್ಯಾಮೆರಾ ಇರಲ್ಲ.. ಟಿಂಗ್ ಟಿಂಗ್ ಟಿಂಗ್ ಅಂತ ಹಾರಿಸಬಹುದು. ಕುಳ್ಳ ದೇವರಾಜ್ : ಕ್ಯಾಮರಾ ಇರಲಿ, ಬಿಡಲಿ. ನೀನು ಪಟ್ಟಂತಾ ರೆಡಿ ಮಾಡು. 5 ಲಕ್ಷ ಕೊಡು ಅಡ್ವಾನ್ಸ್. ಗೋಪಾಲಕೃಷ್ಣ : ಆಯ್ತು. ಅಡ್ವಾನ್ಸ್ ಕೊಟ್ಟರೆ ಎಷ್ಟು ದಿನಕ್ಕೆ?
ಕುಳ್ಳ ದೇವರಾಜ್ : 20 ಇದೆ.. ಗೋಪಾಲಕೃಷ್ಣ : ಇದು ಎಲ್ಲಾ 2 ಲಕ್ಷ ಇದೆ.. ಇದು 1 ಲಕ್ಷ… ಕುಳ್ಳ ದೇವರಾಜ್ : ಪಕ್ಕಾನಾ..? 500 ಆದ್ರೂ ಎಣಿಸು. ಗೋಪಾಲಕೃಷ್ಣ : ಇಲ್ಲಾಪ್ಪ ಎಣಿಸು ಎಣಿಸು.. ಕುಳ್ಳ ದೇವರಾಜ್ : ಯಾವುದು ಲೆಕ್ಕಾ ಹಾಕೋದು.. ಗೋಪಾಲಕೃಷ್ಣ : ಅಲ್ಲೇ ಇದೆಯಲ್ಲ..
ಕುಳ್ಳ ದೇವರಾಜ್ : ಇದು 20 ಸಾವಿರ ಇದೆಯಲ್ಲ.. ಮಿಷಿನ್ ಅಲ್ಲಿ ಲೆಕ್ಕಾ ಹಾಕಿಸಿಕೊಂಡು ಬರಲಾ..? ಗೋಪಾಲಕೃಷ್ಣ: ಏ.. ಹಾಕಪ್ಪ? ಗೋಪಾಲಕೃಷ್ಣ: 2 ಲಕ್ಷದ 40 ಆಯ್ತು.. ಅದು ಸೇರಿ. ಎರಡೂ ವರೆ. ಗೋಪಾಲಕೃಷ್ಣ: ಡಿಸಿಪಿ ಹರ್ಷ ಇದ್ದರು. ನಾನು ಹೇಳಿದಂತೆ ಕೇಳ್ತಾ ಇದ್ರು.. ಕುಳ್ಳ ದೇವರಾಜ್: ಹರ್ಷ ಸರ್ ಅಲ್ವಾ? ಇನ್ನೊಬ್ಬರು ಯಾರು ನಾರಾಯಣ ಅಂತಾ ಹೇಳ್ತಾ ಇದ್ರಿ ಗೋಪಾಲಕೃಷ್ಣ: ಅವರು ಈ ಕೇಸಿಗೆ ಎನ್‌ಕ್ವೈರಿ ಆಫೀಸರ್ ಆಗಿ ಬಂದಿದ್ದರು. ಕುಳ್ಳ ದೇವರಾಜ್ : ಅವರು ಫುಲ್ ಸಪೋರ್ಟ್ ಅಲ್ವಾ ನಿಮಗೆ. ಅದುಕ್ಕಾದ್ರೆ 25 ಲಕ್ಷ ಖರ್ಚು ಮಾಡಿದ್ದೀಯಾ? ಇದಕ್ಕೆ ಕೊಡು ಅಂದ್ರೆ ಅಳ್ತಿಯಾ? ಗೋಪಾಲಕೃಷ್ಣ: 25 ಅಲ್ಲ 50 ಕೊಡ್ತಿನಿ, ತಲೆ ಕೆಡಿಸ್ಕೊಬೇಡ. ಗೋಪಾಲಕೃಷ್ಣ: ನಾನು ಎಲ್ಲೂ ಬರಬಾರದು. ರಿಮೋಟ್ ಥರ ಆಗ್ಬೇಕು. ಕುತ್ತಿಗೆಗೆ ಬಂದರೂ ನಮ್ಮ ವಿಷಯ ಬರಬಾರದು. ನಾವು ಕರೆಕ್ಟಾಗ್ ಇದ್ದಾಗ ಎಲ್ಲಿ ಎಲ್ಲಿ ಏನು ಬೇಕು. ಎಲ್ಲಾ ಕಡೆ ಮುಚ್ಚಿ ಹಾಕಬಹುದು.
ಕುಳ್ಳ ದೇವರಾಜ್: ಅಣ್ಣಾ ಇದು ಯಾವದೋ ಕೆಲ್ಸ ಸ್ಟಾರ್ಟ್ ಮಾಡಿಸಿ ಬಿಟ್ಟು ನೀನು ಗೋಪಾಲಕೃಷ್ಣ: ಮಾಡಯ್ಯ ಎಲ್ಲಿ ರಿಸಲ್ಟ್ ಬರಲಿಲ್ಲ ಇನ್ನ. ಕುಳ್ಳ ದೇವರಾಜ್: ಏನು ಹೊಡೆದ ಮೇಲೆ ಕಾಸ್ ಕೊಡ್ತಾರಾ? ಯಾರಾದ್ರೂ? ಗೋಪಾಲಕೃಷ್ಣ: ರಿಸಲ್ಟ್ ಇನ್ನೂ ಇಲ್ಲ. ಕುಳ್ಳ ದೇವರಾಜ್: ನಾವು ಕೈಯಿಂದ ಕೊಡಬೇಕು ಅಷ್ಟೆ. ನೀನ್ ಮಾಡೋ ಕೆಲಸ. ಗೋಪಾಲಕೃಷ್ಣ: ಕೊಡು, ಕೆಲಸ ಆದ ಮೇಲೆ ಅದರ ನೂರಷ್ಟು ತಗೊತಿಯಾ? ಅದು ಕಥೆನೇ ಬೇರೆ. ನೀನು ಎಲ್ಲೋ ಹೋಗ್ ಬಿಡ್ತಿಯಾ? ನನ್ನ ಜೊತೆ ಇಟ್ಟುಕೊಂಡು ಡಿಕೆ ಹತ್ತಿರ ಹೋಗ್ತಿನಿ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್(80) ಅವರು ಇಹಲೋಕ ತ್ಯಜಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.
Saddened by the demise of Rajya Sabha MP Shri Oscar Fernandes Ji. In this sad hour, my thoughts and prayers are with his family and well-wishers. May his soul rest in peace: PM @narendramodi
ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ದುಃಖವಾಗಿದೆ. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಎಸ್ ಆರ್ ವಿಶ್ವನಾಥ್ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ
ಪ್ರತಿಯೊಬ್ಬರನ್ನೂ ಅತ್ಯಂತ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಆಸ್ಕರ್ ಫರ್ನಾಂಡೀಸ್ ಅವರು, ದೇಶ ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ರಾಜಕೀಯವನ್ನು ಮೀರಿ ಎಲ್ಲರನ್ನೂ ಆದರಿಸುತ್ತಿದ್ದರು. ಪಕ್ಷ ರಾಜಕಾರಣಕ್ಕೆ ಮೀರಿದ ವ್ಯಕ್ತಿತ್ವ ಅವರದ್ದು. (3/5)
ಕಾಂಗ್ರೆಸ್‍ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಜನಾನುರಾಗಿಯಾಗಿದ್ದರು ಎಂದು ವಿಶ್ವನಾಥ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫರ್ನಾಂಡೀಸ್ ಅವರು ವಿಧಿವಶರಾಗಿದ್ದು, ಅವರ ಅಗಲುವಿಕೆ ಅತೀವ ದುಃಖ ತಂದಿದೆ.
ಅವರ ಕುಟುಂಬಕ್ಕೆ ಅಗಲುವಿಕೆಯ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/upwssehelS
ಫರ್ನಾಂಡಿಸ್ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಉತ್ತಮ ಜನನಾಯಕನನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ ಆಸ್ಕರ್ ಫರ್ನಾಂಡೀಸ್ ಅವರು ಇಹಲೋಕ ತ್ಯಜಿಸಿರುವುದು ಮನಸ್ಸಿಗೆ ತೀವ್ರ ನೋವನ್ನುಂಟುಮಾಡಿದೆ. ದೇಶಕ್ಕಾಗಿ ಮತ್ತು ಪಕ್ಷಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶ್ರೀಯುತರು, ತಮ್ಮ ದೂರದೃಷ್ಟಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳಿಂದಾಗಿ ಜನಮಾನಸದಲ್ಲಿ ಯಾವತ್ತಿಗೂ ನೆನಪಿನಲ್ಲುಳಿಯಲಿದ್ದಾರೆ.
ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ನ ಹಿರಿಯ ನಾಯಕ ,ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.ಲೋಕಸಭಾ ಸದಸ್ಯರಾಗಿ ರಾಜ್ಯ ಸಭಾ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು, ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ ಉಡುಪಿಯಲ್ಲಿ ಹುಟ್ಟಿ, ನಂತರ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದದ್ದು ಒಂದು ಸಾಹಸಗಾಥೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅತ್ಯುತ್ತಮ ಜನನಾಯಕ ನನ್ನ ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸುನಿಲ್ ಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.