Tag: ಎಸ್

  • ಟ್ರಂಪ್‌ ಆಡಳಿತದ ಮೊದಲ ಕ್ವಾಡ್‌ ಸಭೆಯಲ್ಲಿ ಸಚಿವ ಎಸ್.‌ ಜೈಶಂಕರ್‌ ಭಾಗಿ

    ಟ್ರಂಪ್‌ ಆಡಳಿತದ ಮೊದಲ ಕ್ವಾಡ್‌ ಸಭೆಯಲ್ಲಿ ಸಚಿವ ಎಸ್.‌ ಜೈಶಂಕರ್‌ ಭಾಗಿ

    ವಾಷಿಂಗ್ಟನ್‌: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ʻಕ್ವಾಡ್‌ʼ ವಿದೇಶಾಂಗ ಸಚಿವರ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S. Jaishankar) ಭಾಗವಹಿಸಿದ್ದರು.

    ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಸಚಿವರೊಂದಿಗೆ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಕ್ವಾಡ್‌ ಸಭೆ (Quad meet) ಇದಾಗಿದೆ. ಇದನ್ನೂ ಓದಿ: ಬ್ರಹ್ಮಪುತ್ರದ ನದಿಗೆ ಬೃಹತ್ ಡ್ಯಾಮ್‌ ಕಟ್ಟಲು ಮುಂದಾದ ಚೀನಾ – ಭಾರತದ ಆತಂಕವೇನು?

    ಇದೇ ವೇಳೆ ಟ್ರಂಪ್‌ ಆಡಳಿತದಲ್ಲಿ ಹೊಸದಾಗಿ ನೇಮಕಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ ಅವರೊಂದಿಗೆ ಸಭೆ ನಡೆಸಿದರು. ಜೊತೆಗೆ ಕ್ವಾಡ್‌ ಸಭೆ ಆಯೋಜಿಸಿದ್ದಕ್ಕಾಗಿ ರೂಬಿಯೊ ಅವರಿಗೆ ಧನ್ಯವಾದ ತಿಳಿಸಿದರು.

    ಕ್ವಾಡ್ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿ ಹೊಂದಿರುವ ನಾಲ್ಕು (ಭಾರತ, ಅಮೆರಿಕ. ಜಪಾನ್, ಆಸ್ಟ್ರೇಲಿಯಾ) ದೇಶಗಳ ಗುಂಪಾಗಿದೆ. ಇದನ್ನೂ ಓದಿ: ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ನಂದಿಸಲು‌ ಪಿಂಕ್‌ ಪೌಡರ್, ಸೂಪರ್‌ ಸ್ಕೂಪರ್ಸ್‌ ವಿಮಾನಗಳ ಬಳಕೆ- ವಿಶೇಷತೆ ಏನು?

    ಸ್ಥಿರ ಮತ್ತು ಸಮೃದ್ದ ಇಂಡೊ-ಫೆಸಿಫಿಕ್ ರಾಷ್ಟ್ರಗಳ ನಿರ್ಮಾಣ, ಮಿತ್ರ ರಾಷ್ಟ್ರಗಳೊಂದಿಗೆ ಕೆಲಸ ಮಾಡುವ ಕುರಿತು ಚರ್ಚಿಸಲಾಯಿತು. ಕ್ವಾಡ್ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಮುಂದುವರಿಯಲಿದೆ ಎನ್ನುವ ಸಂದೇಶವನ್ನು ಈ ಸಭೆ ನೀಡಲಿದೆ ಎಂದು ರೂಬಿಯೊ ವಾಹಿನಿಯೊಂದಕ್ಕೆ ತಿಳಿಸಿದರು.

  • ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ

    ಬೆಳಗಾವಿ ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಮುಂದಾದ ಅರುಣ್ ಸಿಂಗ್, ಬಿಎಸ್‍ವೈ

    ಬೆಳಗಾವಿ: ಕುಂದಾನಗರಿ ಬಿಜೆಪಿಯಲ್ಲಿ ಬಣ ರಾಜಕೀಯ ಶಮನ ಸೇರಿದಂತೆ ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುವ ಸಲುವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎರಡು ದಿನಗಳ ಕಾಲ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ.

    ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಎರಡು ದಿನ ಪ್ರವಾಸ ಕೈಗೊಂಡಿದ್ದು ಯಡಿಯೂರಪ್ಪ ಹಾಗೂ ಅರುಣ್ ಸಿಂಗ್, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಅವರು ನಾಳೆ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಎರಡು ದಿನ ಸಂಘಟನಾತ್ಮಕ ಕಾರ್ಯಕ್ರಮಗಳ ಆಯೋಜನೆ ಮಾಡಲಿದ್ದು, ಜಿಲ್ಲೆ, ಬೆಳಗಾವಿ ಗ್ರಾಮೀಣ, ಚಿಕ್ಕೋಡಿ ನಗರದನಾಯಕರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಹಗರಣ – ED ಅಧಿಕಾರಿಗಳಿಂದ ಮಲ್ಲಿಕಾರ್ಜುನ್‌ ಖರ್ಗೆ ವಿಚಾರಣೆ

    ಈ ವೇಳೆ ಜಿಲ್ಲೆಯ ಬಣ ರಾಜಕೀಯದ ಬಗ್ಗೆ ಎರಡು ದಿನ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯ್ತಿ ಚುನಾವಣೆ ಹಾಗೂ 2023ರ ವಿಧಾನಸಭೆಯ ಸಾರ್ವಜನಿಕ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಜಿಲ್ಲೆಯ ಹೆಚ್ಚು ಸ್ಥಾನ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಎರಡು ದಿನಗಳ ಕಾಲ ಪಕ್ಷ ಸಂಘಟನೆ, ಸೇರಿದಂತೆ ಭಿನ್ನಮತ ಬಗೆಹರಿಸಲು ನಾಯಕರು ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು: ಬಿಎಸ್‍ವೈ

    ಬಣ ರಾಜಕೀಯ ಶಮನಕ್ಕೂ ಯತ್ನ: ಬೆಳಗಾವಿ ಪರಿಷತ್ ಚುನಾವಣೆ ಸೋಲಿನ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಬಣ ರಾಜಕೀಯ ಹೆಚ್ಚಾಗಿದೆ. ಸದ್ಯ ಜಿಲ್ಲೆಯಲ್ಲಿ ಕತ್ತಿ, ಜಾರಕಿಹೊಳಿ ಬಣಗಳ ನಡುವೆ ತಿಕ್ಕಾಟ ಇದೆ. ಇದನ್ನು ಪರಿಹರಿಸಲು ಪ್ರಯತ್ನ ನಡೆದಿದೆ. ಕಳೆದ ಹಲವು ದಿನಗಳ ಹಿಂದೆ ಜಾರಕಿಹೊಳಿ ಸಹೋದರನ್ನು ಹೊರಗಿಟ್ಟು ಸಚಿವ ಉಮೇಶ್ ಕತ್ತಿ ನೇತೃತ್ವದ ಬಣದ ಲಕ್ಷಣ್ ಸವದಿ, ಶಶಿಕಲಾ ಜೊಲ್ಲೆ, ಮಹಾಂತೇಶ್ ಕವಟಗಿಮಠ ಒಂದಾಗಿ ಮಹತ್ವದ ಸಭೆ ನಡೆಸುವ ಮೂಲಕ ಜಾರಕಿಹೊಳಿ ಬಣದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತೆಲೆಕೆಡಿಸಿಕೊಳ್ಳದ ರಮೇಶ್ ಜಾರಕಿಹೊಳಿ, ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯಲು ತೀವ್ರ ಕಸರತ್ತು ಮಾಡುತ್ತಿದ್ದಾರೆ.

    ಇದರ ಜೊತೆಗೆ ಕಾಂಗ್ರೆಸ್ ತೊರೆದು ರಮೇಶ್ ಜಾರಕಿಹೊಳಿ ಜತೆಗೆ ಬಂದ ಶಾಸಕ ಮಹೇಶ್ ಕುಮಠಹಳ್ಳಿ, ಶ್ರೀಮಂತ ಪಾಟೀಲ್ ಅತಂತ್ರರಾಗಿದ್ದು ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಹೇಗಾದರೂ ಮಾಡಿ ತಮ್ಮ ಜೊತೆಗೆ ಬಂದ ಬೆಂಬಲಿಗರಿಗೆ, ತಮಗೆ ಸಚಿವ ಸ್ಥಾನ ಪಡೆದುಕೊಳ್ಳಲು ಜಾರಕಿಹೊಳಿ ದೆಹಲಿ, ಮಹಾರಾಷ್ಟ್ರ ನಾಯಕರ ಮೂಲಕ ಲಾಬಿ ಮಾಡುತ್ತಿದ್ದಾರೆ. ಸದ್ಯ ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಲ್ಲಿ ಬಹುತೇಕ ರಿಲೀಫ್ ಆಗಿದ್ದರಿಂದ ಸಚಿವ ಸಂಪುಟ ವಿಸ್ತರಣೆಯಾದರೆ ಮಂತ್ರಿ ಸ್ಥಾನ ಫಿಕ್ಸ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

  • ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಗೆಲ್ಲದಂತೆ ಜನ ನೋಡಿಕೊಳ್ಬೇಕು: ಎಸ್.ಆರ್.ಹಿರೇಮಠ

    ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಗೆಲ್ಲದಂತೆ ಜನ ನೋಡಿಕೊಳ್ಬೇಕು: ಎಸ್.ಆರ್.ಹಿರೇಮಠ

    ರಾಯಚೂರು: ಮಹಾಭ್ರಷ್ಟ ಜನಾರ್ದನ ರೆಡ್ಡಿ ಮತ್ತೆ ಜನಪ್ರತಿನಿಧಿಯಾಗಬಾರದು, ಚುನಾವಣೆ ಎದುರಿಸಿದರೆ ಜನರೇ ತಕ್ಕ ಪಾಠ ಕಲಿಸಬೇಕು ಅಂತ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ ಜನಾರ್ದನ ರೆಡ್ಡಿ ಭ್ರಷ್ಟಾಚಾರ ಮಾಡಿದ ಹಣವನ್ನ ಹಿಂಪಡೆಯುವ ಕೆಲಸ ಇನ್ನೂ ಆಗಿಲ್ಲ. ರೆಡ್ಡಿಯ 40 ಸಾವಿರ ಕೋಟಿ ರೂಪಾಯಿ ಅಕ್ರಮ ಸಂಪಾದನೆ ಹಣ ವಾಪಸ್ ಬರಬೇಕು. ಅದರ ಬಗ್ಗೆ ಸರ್ಕಾರ, ಜನ ತಲೆಕೆಡಿಸಿಕೊಂಡಿಲ್ಲ, ಕೇಸ್‍ಗಳು ಸರಿಯಾಗಿ ನಡೆಯುತ್ತಿಲ್ಲ. ಭ್ರಷ್ಟ, ಅನೈತಿಕ ವ್ಯಕ್ತಿಗೆ ಜನರೇ ಪಾಠ ಕಲಿಸಬೇಕು. ಇರುವ ಒಂದು ಜೀವನವನ್ನ ಸಾರ್ಥಕತೆ ಕಡೆ ಒಯ್ಯುವ ಕೆಲಸವನ್ನ ಜನಾರ್ದನ ರೆಡ್ಡಿ ಮಾಡಬೇಕು ಎಂದರು. ಇದನ್ನೂ ಓದಿ: ಮಹಿಳೆ ಬ್ಲಾಕ್‍ಮೇಲ್ ಮಾಡ್ತಿದ್ದು, ನನ್ನದೇನೂ ತಪ್ಪಿಲ್ಲ: ಶಾಸಕ ತೇಲ್ಕೂರ್ ಕಣ್ಣೀರು

    ಇನ್ನೂ ಮಾರ್ಚ್ 1 ರಿಂದ ರಾಜ್ಯ ಸರ್ಕಾರದ 3 ಕರಾಳ ಕಾಯ್ದೆ ವಾಪಸ್ ಹಾಗೂ ಎಂಎಸ್‍ಪಿಗೆ ಲೀಗಲ್ ಗ್ಯಾರೆಂಟಿಗಾಗಿ ಜನಾಂದೋಲನ ಮಹಾ ಮೃತ್ರಿಯಿಂದ ಯಾತ್ರೆ ನಡೆಸುವುದಾಗಿ ಹೇಳಿದರು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಎಪಿಎಂಸಿ ತಿದ್ದು ಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕು, ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು. ಈ ಮೂರು ವಿಚಾರಗಳನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

    ಬಸವಕಲ್ಯಾಣದಿಂದ ಬೆಂಗಳೂರು, ಮಲೆಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಯಾತ್ರೆ ನಡೆಸುವುದಾಗಿ ಎಸ್.ಆರ್.ಹಿರೇಮಠ ಹೇಳಿದ್ದಾರೆ.

  • ಸಿಎಂ ಬಿಎಸ್‍ವೈಗೆ ಅಗ್ನಿ ಪರೀಕ್ಷೆ-ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು?

    ಸಿಎಂ ಬಿಎಸ್‍ವೈಗೆ ಅಗ್ನಿ ಪರೀಕ್ಷೆ-ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು?

    ಬೆಂಗಳೂರು: ನಾಟಕೀಯ ತಿರುವುಗಳು, ಕಾನೂನು ಹೋರಾಟಗಳ ಆತಂಕದ ಮಧ್ಯೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವ್ರಿಗೆ ಬಹುಮತ ಸಾಬೀತುಪಡಿಸುವ ಮುನ್ನವೇ ಸುಪ್ರೀಂ ಪರೀಕ್ಷೆ ಎದುರಾಗಿದೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ಕೂಡ ಮುಂದುವರೆಯಲಿದೆ. ಸುಪ್ರೀಂಕೋರ್ಟ್ ನ ತ್ರಿಸದಸ್ಯಪೀಠ ಗುರುವಾರ ಸೂಚಿಸಿದ್ದ ಪ್ರಕಾರ, ರಾಜ್ಯಪಾಲರಿಗೆ ಸಲ್ಲಿಸಲಾದ ಶಾಸಕರ ಬೆಂಬಲ ಪತ್ರವನ್ನು ಬಿಎಸ್‍ವೈ ಇಂದು ಹಾಜರುಪಡಿಸಬೇಕಿದೆ. ಮಂಗಳವಾರ ಮತ್ತು ಬುಧವಾರ ಯಡಿಯೂರಪ್ಪ ಸರ್ಕಾರ ರಚೆನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಎರಡು ಪತ್ರಗಳನ್ನು ನೀಡಿದ್ದರು. ಬಿಎಸ್‍ವೈ ಸಲ್ಲಿಸುವ ಈ ಬೆಂಬಲ ಪತ್ರಗಳಲ್ಲಿ ಕಂಟೆಂಟ್ ಆಧಾರದ ಮೇಲೆ ಇವತ್ತು ವಿಚಾರಣೆ ನಡೆಯೋ ಸಾಧ್ಯತೆಗಳಿವೆ.

    ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ, ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್, ಬಿಎಸ್‍ವೈ ಪರ ಮುಕುಲ್ ರೊಹ್ಟಗಿ ವಾದ ಮಂಡಿಸಲಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ರಾಜ್ಯಪಾಲರ ನಡೆ ಪ್ರಶ್ನಿಸಿದ ಜೇಠ್ಮಲಾನಿ ಕೂಡ ತಮ್ಮ ವಾದ ಮಂಡಿಸುವ ಸಾಧ್ಯತೆಗಳಿವೆ. ಈ ನಡುವೆ ಬಿಜೆಪಿಗೆ ಅನುಕೂಲ ಮಾಡಿಕೊಡಲು ರಾಜ್ಯಪಾಲರು ಆಂಗ್ಲೋ ಇಂಡಿಯನ್ ಶಾಸಕರಾಗಿ ವಿನಿಶಾ ನಿರೋರಾ ನಾಮನಿರ್ದೇಶನಕ್ಕೆ ರಾಜ್ಯಪಾಲರು ತರಾತುರಿಯಲ್ಲಿ ಅಂಕಿತ ಹಾಕಿದ್ದಾರೆ ಆರೋಪಿಸಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿ ಸಲ್ಲಿಸಿದೆ. ಈ ಅರ್ಜಿಯೂ ಇಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.

    ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು..?
    * 104 ಶಾಸಕರನ್ನು ಹೊರತುಪಡಿಸಿ ನಿಮ್ಮ ಬೆಂಬಲಕ್ಕಿರುವ ಶಾಸಕರು ಯಾರು ಎಂದು ಪ್ರಶ್ನಿಸಬಹುದು.
    * 104 ಶಾಸಕರಷ್ಟೇ ನಿಮ್ಮ ಬಳಿ ಇದ್ದಾರೆ.. ಬಹುಮತ ಹೇಗೆ ಸಾಬೀತುಪಡಿಸುವಿರಿ ಎಂದು ಪ್ರಶ್ನೆ ಮಾಡಬಹುದು.
    * ಬಹುಮತ ಸಾಬೀತಿಗೆ ನೀಡಲಾದ ಕಾಲಾವಕಾಶವನ್ನು ಕಡಿಮೆ ಮಾಡಬಹುದು.
    * ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಬಿಎಸ್‍ವೈಗೆ ಸೂಚಿಸಬಹುದು.
    * ಶಾಸಕರ ಪ್ರಮಾಣ ಸ್ವೀಕಾರಕ್ಕೆ ಮುನ್ನ ಅನ್ವಯ ಆಗಲ್ಲವೇ.. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯಬಹುದು.

    ಗುರುವಾರ ವಿಚಾರಣೆ ವೇಳೆ ಅಟಾರ್ನಿ ಜನರಲ್ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವಷ್ಟೇ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಎಂದು ಹೇಳಿದ್ದರು.