Tag: ಎಸಿಬಿ

  • ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ 18 ಸಾವಿರಕ್ಕೂ ಹೆಚ್ಚು ಕೇಸ್‌

    ಲೋಕಾಯುಕ್ತದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ 18 ಸಾವಿರಕ್ಕೂ ಹೆಚ್ಚು ಕೇಸ್‌

    ಬೆಂಗಳೂರು: ರಾಜ್ಯ ಲೋಕಾಯುಕ್ತ (Karnataka Lokayukta) ಸಂಸ್ಥೆಯಲ್ಲಿ ಸಾವಿರಾರು ಕೇಸ್‌ಗಳು ಬಾಕಿ ಉಳಿದಿರುವುದು ಕಂಡುಬಂದಿದೆ. ಸುಮಾರು 18 ಸಾವಿರಕ್ಕೂ ಹೆಚ್ಚು ಕೇಸ್‌ಗಳು (Lokayukta Case File) ವಿಚಾರಣೆ ಆಗದೇ, ಕಡತಗಳು ಮೂಲೆ ಸೇರಿವೆ.

    ಕಳೆದ ಜುಲೈ ತಿಂಗಳ ಅಂತ್ಯದ ವರೆಗೆ 18 ಸಾವಿರ ಕೇಸ್‌ಗಳು ಲೋಕಾಯುಕ್ತದದಲ್ಲಿ ಬಾಕಿಯಿವೆ ಎಂದು ಕೇಸ್‌ ಡಿಟೇಲ್ಸ್‌ನಲ್ಲಿ ತಿಳಿದುಬಂದಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯೇ ಕೊಟ್ಟಿರುವ ಕೇಸ್ ಡಿಟೇಲ್ಸ್‌ ಪ್ರತಿ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ: ಛಲವಾದಿ ಲೇವಡಿ

    ಎಸಿಬಿ ರದ್ದಾದ ಬಳಿಕ ಎಲ್ಲಾ ಕೇಸ್‌ಗಳು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಹಾಗಾಗಿ ಎಸಿಬಿ + ಲೋಕಾಯುಕ್ತದಲ್ಲಿ ದಾಖಲಾದ ಕೇಸ್‌ಗಳ ಪೈಕಿ ಸುಮಾರು 18 ಸಾವಿರ ಕೇಸ್‌ಗಳು ವಿಚಾರಣೆಯಾಗದೇ ಬಾಕಿ ಉಳಿದಿದೆ. ದೂರು ದಾಖಲಾಗಿದ್ದರೂ ಕೆಲವು ಕಾರಣಗಳಿಂದ ವಿಚಾರಣೆ ಬಾಕಿ ಉಳಿದಿದೆ ಅಂತ ಲೋಕಾಯುಕ್ತ ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?

    ಲೋಕಾಯುಕ್ತರ ಮುಂದೆ ಎಷ್ಟು ಕೇಸ್ ಬಾಕಿ!?
    ಮಾನ್ಯ ಲೋಕಾಯುಕ್ತರು- 5495 ಕೇಸ್ ಬಾಕಿ.
    ಉಪ ಲೋಕಾಯುಕ್ತ 1- 7028 ಕೇಸ್ ಬಾಕಿ.
    ಉಪ ಲೋಕಾಯುಕ್ತ 2- 6363 ಕೇಸ್ ಬಾಕಿ.
    ಒಟ್ಟು – 18,886 ಕೇಸ್‌ ಬಾಕಿ

  • 84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ

    84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ

    ಹೈದರಾಬಾದ್: ಲಂಚ ಸ್ವೀಕರಿಸುವ ವೇಳೆ ತೆಲಂಗಾಣದ (Telangana) ಬುಡಕಟ್ಟು ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಎಸಿಬಿಗೆ (Anti-Corruption Bureau) ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಹಿಳೆ ಎಸಿಬಿಗೆ ಸಿಕ್ಕಿಬಿದ್ದ ಬಳಿಕ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬುಡಕಟ್ಟು ಕಲ್ಯಾಣ ಇಲಾಖೆಯ (Telangana’s Tribal Welfare Engineering department) ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಜಗಜ್ಯೋತಿ 84,000 ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ವ್ಯಕ್ತಿಯೊಬ್ಬರು ಲಂಚ ಅಧಿಕಾರಿ ಕೇಳುತ್ತಿದ್ದಾರೆ ಎಂದು ಎಸಿಬಿಗೆ ದೂರು ನೀಡಿದ್ದರು. ಇದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಬಂಧಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ ಆದೇಶದ ಮೇರೆಗೆ ವಯನಾಡು ವ್ಯಕ್ತಿಗೆ 15 ಲಕ್ಷ ಪರಿಹಾರ – ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

    ಜಗಜ್ಯೋತಿ ಅವರನ್ನು ಫಿನಾಲ್ಫ್ಥಲೀನ್ ಪರೀಕ್ಷೆಗೆ ಎಸಿಬಿ ಅಧಿಕಾರಿಗಳು ಒಳಪಡಿಸಿದಾಗ ಅವರು ಲಂಚ ಪಡೆದಿರುವುದು ಸಾಬೀತಾಗಿದೆ. ಅವರು ಕರ್ತವ್ಯ ನಿರ್ವಹಣೆಯಲ್ಲಿ ಅನುಚಿತವಾಗಿ ಮತ್ತು ಅಪ್ರಾಮಾಣಿಕವಾಗಿ ವರ್ತಿಸಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಆರೋಪಿಸಿದ್ದಾರೆ.

    ಅಧಿಕಾರಿಯ ಬಳಿ ಇದ್ದ 84,000 ರೂ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನು ಹೈದರಾಬಾದ್‍ನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಎಸಿಬಿ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಡ್ರೈವರ್‌ಲೆಸ್ ಮೆಟ್ರೋದ ಫಸ್ಟ್ ಫೋಟೋ ರಿವೀಲ್

  • ತೆಲಂಗಾಣ ಅಧಿಕಾರಿಯ ಮನೆ, ಕಚೇರಿಗಳಿಗೆ ACB ದಾಳಿ- 100 ಕೋಟಿಗೂ ಅಧಿಕ ಆಸ್ತಿ ಪತ್ತೆ

    ತೆಲಂಗಾಣ ಅಧಿಕಾರಿಯ ಮನೆ, ಕಚೇರಿಗಳಿಗೆ ACB ದಾಳಿ- 100 ಕೋಟಿಗೂ ಅಧಿಕ ಆಸ್ತಿ ಪತ್ತೆ

    ಹೈದರಾಬಾದ್: ತೆಲಂಗಾಣ (Telangana) ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (TSRERA) ಕಾರ್ಯದರ್ಶಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (HMDA) ಮಾಜಿ ನಿರ್ದೇಶಕ ಶಿವ ಬಾಲಕೃಷ್ಣ ಅವರ ಒಟ್ಟು 100 ರೂ. ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಪತ್ತೆ ಮಾಡಿದೆ .

    ಎಸಿಬಿಯ ಪ್ರಾಥಮಿಕ ವರದಿಗಳ ಪ್ರಕಾರ, ಬಾಲಕೃಷ್ಣ ಹಲವಾರು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಮತಿ ನೀಡುವ ಮೂಲಕ ಕೋಟಿಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳಿಂದ ಟೆಂಪಲ್ ರನ್

    ಬಾಲಕೃಷ್ಣ ಅವರು ತಮ್ಮ ಆದಾಯದ ಮೂಲಗಳನ್ನು ಮೀರಿ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ಬಾಲಕೃಷ್ಣ ಮತ್ತು ಅವರ ಸಂಬಂಧಿಕರ ಮನೆಗಳು ಮತ್ತು ಕಚೇರಿಗಳು ಸೇರಿದಂತೆ ರಾಜ್ಯದಾದ್ಯಂತ ಹಲವಾರು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು.

    ಮುಂಜಾನೆ 5 ಗಂಟೆಗೆ ಬಾಲಕೃಷ್ಣ ಅವರಿಗೆ ಸೇರಿದ ಸುಮಾರು 20 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಎಸಿಬಿ ತಂಡಗಳು ಎಚ್‌ಎಂಡಿಎ ಮತ್ತು RERA ಕಚೇರಿಗಳ ಮೂಲಕ ದಾಳಿ ನಡೆಸಿದೆ. ತಮ್ಮ ಅಧಿಕೃತ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಸಂಪತ್ತು ಗಳಿಸಿರುವ ಶಂಕೆ ವ್ಯಕ್ತಪಡಿಸಿರುವ ಬಾಲಕೃಷ್ಣ ವಿರುದ್ಧ ಲೆಕ್ಕಕ್ಕೆ ಬಾರದ ಆಸ್ತಿ ಪ್ರಕರಣ ದಾಖಲಾಗಿದೆ.

    ಚಿನ್ನ, ಫ್ಲಾಟ್, ಬ್ಯಾಂಕ್ ಠೇವಣಿ, ಬೇನಾಮಿ ಆಸ್ತಿ ಸೇರಿದಂತೆ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಪೈಕಿ 40 ಲಕ್ಷ ನಗದು, 2 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳು, 60 ಅತ್ಯಾಧುನಿಕ ಕೈಗಡಿಯಾರಗಳು, ಆಸ್ತಿ ದಾಖಲೆಗಳು ಮತ್ತು ಗಣನೀಯ ಬ್ಯಾಂಕ್ ಠೇವಣಿಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ 14 ಫೋನ್‌ಗಳು, 10 ಲ್ಯಾಪ್‌ಟಾಪ್‌ಗಳು ಮತ್ತು ಹಲವಾರು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಜಪ್ತಿ ಮಾಡಲಾಗಿದೆ.

    ಇದೀಗ ಎಸಿಬಿಯು ಬಾಲಕೃಷ್ಣ ಅವರ ಬ್ಯಾಂಕ್ ಲಾಕರ್‌ಗಳು ಮತ್ತು ಇತರ ಬಹಿರಂಗಪಡಿಸದ ಆಸ್ತಿಗಳ ಮೂಲಕ ಹುಡುಕುತ್ತಿದ್ದ, ನಾಳೆಯೂ ತನಿಖೆಯ ಮುಂದುವರಿಯುವ ಸಾಧ್ಯತೆ ಇದೆ.

  • ಟಿಕೆಟ್ ಸಿಗದಿದ್ದಕ್ಕೆ 5 ವರ್ಷಗಳ ಬಳಿಕ ಮತ್ತೆ ಹುದ್ದೆಯನ್ನೇರಿದ ಪೊಲೀಸ್ ಅಧಿಕಾರಿ: ಸಾರ್ವಜನಿಕ ವಲಯದಲ್ಲಿ ಚರ್ಚೆ

    ಟಿಕೆಟ್ ಸಿಗದಿದ್ದಕ್ಕೆ 5 ವರ್ಷಗಳ ಬಳಿಕ ಮತ್ತೆ ಹುದ್ದೆಯನ್ನೇರಿದ ಪೊಲೀಸ್ ಅಧಿಕಾರಿ: ಸಾರ್ವಜನಿಕ ವಲಯದಲ್ಲಿ ಚರ್ಚೆ

    ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವಾಗಲೇ ಪ್ರಚಾರ ನಡೆಸುತ್ತಿರುವುದನ್ನು ಪಬ್ಲಿಕ್ ಟಿವಿ ವರದಿ ಮಾಡಿದ್ದ ಬೆನ್ನಲ್ಲೇ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದ್ದ ಎಸಿಬಿ (ACB) ಸಿಪಿಐ ದೇವೇಂದ್ರಪ್ಪ ಕುಣೆಬೆಳಕೆರೆ, ಈಗ ಯಾವ ಪಕ್ಷದಲ್ಲೂ ಟಿಕೆಟ್ ಸಿಗದೇ ಮತ್ತೆ ಪೊಲೀಸ್ ಇಲಾಖೆಯ ಹುದ್ದೆಗೆ ಮರಳಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು ಹಲವಾರು ಚರ್ಚೆಗೆ ಕಾರಣವಾಗಿದೆ.

    ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihar) ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ನಿರ್ಧಾರದಿಂದ ದೇವೇಂದ್ರಪ್ಪ ಕುಣೆಬೆಳಕೆರೆ 2018 ರಲ್ಲಿ ಕೋಲಾರದಲ್ಲಿ ಎಸಿಬಿ ಸಿಪಿಐ ಆಗಿ ಕೆಲಸ ಮಾಡುತ್ತಲೇ ಮಾಜಿ ಸಚಿವ ಜನಾರ್ದನರೆಡ್ಡಿಯವರ ಜೊತೆ ಹರಿಹರದಲ್ಲಿ ಪ್ರಚಾರ ಶುರು ಮಾಡಿದ್ದರು. ಇದರ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರ ಮಾಡಿತ್ತು. ನಂತರ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯವಾಗಿ ರಾಜಕೀಯಕ್ಕೆ ಇಳಿದಿದ್ದರು. ಆಗ ಬಿಜೆಪಿಯಿಂದ ಟಿಕೆಟ್ ಕೈತಪ್ಪಿತ್ತು. ಕೆಲ ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ನಂತರ ಕಳೆದ ಒಂದು ವರ್ಷದ ಕೆಳಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಲಾಬಿ ನಡೆಸುತ್ತಿದ್ದರು. ಇದನ್ನೂ ಓದಿ: ಬರೊಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ

    ಈ ಚುನಾವಣೆಯ ಕಾಂಗ್ರೆಸ್ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದ ದೇವೇಂದ್ರಪ್ಪ ಅವರು ಎಲ್ಲರ ಜತೆಗೂ ಮಾತುಕತೆ ನಡೆಸಿದ್ದರು. ಆದರೆ, ಕಾಂಗ್ರೆಸ್ (Congress) ಕೂಡಾ ಅವರಿಗೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ರಾಜೀನಾಮೆ ನೀಡಿದ್ದ ದೇವೇಂದ್ರಪ್ಪ ಈಗ ಮತ್ತೆ ಯಾದಗಿರಿ (Yadgir) ಜಿಲ್ಲೆಯ ಡಿ.ಎಸ್.ಬಿ ಠಾಣೆಯ ಸಿಪಿಐ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ದೇವೇಂದ್ರಪ್ಪ ಅವರು ಐದು ವರ್ಷದ ಬಳಿಕ ಹೇಗೆ ಪೊಲೀಸ್ ಇಲಾಖೆಗೆ ವಾಪಸ್ ಆದರು ಎನ್ನುವುದು ಜನರ ಪ್ರಶ್ನೆ. ಐದು ವರ್ಷ ರಾಜಕಾರಣ ಮಾಡಿ, ಪುನಃ ಪೊಲೀಸ್ ಇಲಾಖೆಗೆ ಸೇರಬಹುದಾ? ಎಂದು ಜನರು ಪ್ರಶ್ನೆ ಎತ್ತಿದ್ದಾರೆ. ದೇವೇಂದ್ರಪ್ಪ ಅವರು ಐದು ವರ್ಷ ಕಾಲ ರಜೆಯಲ್ಲಿದ್ದರಾ? ಎನ್ನುವುದು ಇನ್ನೊಂದು ಪ್ರಶ್ನೆ, ಕೆಲವು ಇಲಾಖೆಗಳಲ್ಲಿ ಸೂಕ್ತ ಕಾರಣ ನೀಡಿದರೆ ಸುದೀರ್ಘ ಕಾಲ ವೇತನ ರಹಿತ ರಜೆಯ ಅವಕಾಶವೂ ಇರುತ್ತದೆ. ಅದನ್ನು ದೇವೇಂದ್ರಪ್ಪ ಅವರು ಬಳಸಿಕೊಂಡಿದ್ದಾರಾ? ಎಂದು ಜನ ಚರ್ಚಿಸುತ್ತಿದ್ದಾರೆ. ಇದನ್ನೂ ಓದಿ: ಪುತ್ರನ ನಾಮಪತ್ರ ಸಲ್ಲಿಸಲು ತನ್ನ ಹಳೆಯ ಅಂಬಾಸಿಡಾರ್ ಕಾರಿನಲ್ಲಿ ಪ್ರಯಾಣಿಸಿದ ಯಡಿಯೂರಪ್ಪ

  • ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿದರು: ಬೊಮ್ಮಾಯಿ

    ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿದರು: ಬೊಮ್ಮಾಯಿ

    ಬೆಂಗಳೂರು: ಕಾಂಗ್ರೆಸ್ (Congress) ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ (Lokayukta) ಸಂಸ್ಥೆಯನ್ನು ಮುಚ್ಚಿಹಾಕಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು (Bengaluru) ಉಳಿಸಿ ಎಂದು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಶೇ.60 ರಷ್ಟು ಪ್ರೀಮಿಯಂ ಬೆಂಗಳೂರಿನಲ್ಲಿ ನೀಡಿರುವ ದಾಖಲೆ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ ಸರ್ಕಾರದ ದಾಖಲೆಗಳಲ್ಲಿದೆ. ಸುಮಾರು 800 ಕೋಟಿ ರೂ.ಗಳಲ್ಲಿ ಶೇ.60 ರಷ್ಟು ಪ್ರೀಮಿಯಂನ್ನು ದೇಶದಲ್ಲಿ ಎಲ್ಲಿಯಾದರೂ ಕೊಟ್ಟಿದ್ದಾರೆಯೇ? ಇವರು ಅಂತಹ ಶೂರರು. ಇಷ್ಟು ಮುಕ್ತವಾಗಿ 40-60 ಪ್ರೀಮಿಯಂ ಕೊಟ್ಟು ಭ್ರಷ್ಟಾಚಾರ ನಡೆಸಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅದು ಸೊಗಲಾಡಿತನ. ತಾವು ಮಾಡಿರುವುದನ್ನು ಮುಚ್ಚಿಕೊಳ್ಳುವ ಸಲುವಾಗಿ ಈ ರೀತಿ ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದೆ. ಆರೋಪ ಮಾಡುತ್ತಿರುವುದರ ಪ್ರಕರಣದ ಬಗ್ಗೆ ವಿವರಗಳನ್ನು ಲೋಕಾಯುಕ್ತಕ್ಕೆ ನೀಡಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದ ಮುಂಭಾಗದಲ್ಲಿ ಬೋಸ್ ಪ್ರತಿಮೆ ಮರು ಪ್ರತಿಷ್ಠಾಪನೆ: ಬೊಮ್ಮಾಯಿ

    ನೈತಿಕ ಹಕ್ಕಿಲ್ಲ:
    ಲೋಕಾಯುಕ್ತ ಮುಚ್ಚಿದ ಪುಣ್ಯಾತ್ಮರು ಇವರು. 300 ಕಡೆ ಪ್ರತಿಭಟನೆ ಮಾಡುತ್ತಿರುವವರು ಲೋಕಾಯುಕ್ತ ಎಂಬ ಸ್ವತಂತ್ರ, ಸಂವಿಧಾನಬದ್ಧ ಸಂಸ್ಥೆಯನ್ನು ಮುಚ್ಚಿರುವ ಇವರು ನಮಗೆ ಪಾಠ ಹೇಳುತ್ತಾರೆ. ಲೋಕಾಯುಕ್ತ ಯಾಕೆ ಮುಚ್ಚಿದರು? ಇವರ ವಿರುದ್ಧ 59 ಪ್ರಕರಣಗಳು ಮುಖ್ಯಮಂತ್ರಿಗಳ ಸಮೇತವಾಗಿ ದಾಖಲಾಗಿತ್ತು. ಎಸಿಬಿ ತಂದು ಪ್ರಕರಣ ಮುಚ್ಚಿಹಾಕಲು ಬಿ ವರದಿ ಹಾಕಿದರು. ಅವೆಲ್ಲವನ್ನೂ ಲೋಕಾಯುಕ್ತಕ್ಕೆ ಶಿಫಾರಸು ಮಾಡುತ್ತಿದ್ದೇವೆ. ಇವರಿಗೆ ಯಾವ ನೈತಿಕ ಹಕ್ಕಿದೆ. ಲೋಕಾಯುಕ್ತ ಮುಚ್ಚಿದ ಪ್ರಶಸ್ತಿ ಭ್ರಷ್ಟಾಚಾರ ಬೆಂಬಲಿಸಲು, ಅದರ ಪರವಾಗಿ, ಕುಮ್ಮಕ್ಕು ನೀಡಲು, ಭ್ರಷ್ಟಾಚಾರದೊಂದಿಗೆ ಕೈಜೋಡಿಸಿ ಸರ್ಕಾರ ನಡೆಸಿದವರು. ಭ್ರಷ್ಟಾಚಾರ ಇವರ ಸರ್ಕಾರದ ಆಡಳಿತದ ಒಂದು ಭಾಗವಾಗಿದೆ. ಅದಕ್ಕಾಗಿ ಅದನ್ನು ಮುಚ್ಚಿಹಾಕಿದರು. ದಾಖಲೆ ಸಮೇತ ದೂರು ನೀಡಿದರೆ ವಿಚಾರಣೆಯನ್ನೂ ಮುಚ್ಚಿಹಾಕುವ ಕೆಲಸ ಮಾಡಿದ್ದಾರೆ. ತಾವು ಮಾಡಿರುವ ಕೆಲಸವನ್ನು ಮುಚ್ಚಿಕೊಳ್ಳಲು ಈ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಾಧುಸ್ವಾಮಿ ಮೊದಲು ಮಾತಾಡಲಿ- ಸಚಿವರ ಹೇಳಿಕೆಗೆ ಸಿಎಂ ವ್ಯಂಗ್ಯ

    ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ:
    ಜನ ಇದನ್ನು ಒಪ್ಪುವುದಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಂದರೆ ನಿಜವಾಗಿಯೂ ಹಾಸ್ಯಾಸ್ಪದ. ಇದು ನ್ಯಾಯವೇ ಎಂದು ಪ್ರಶ್ನಿಸಿದರು. ತಮ್ಮ ಕೈಗೆ ಹತ್ತಿರುವ ಮಸಿಯನ್ನು ಮೊದಲು ನೋಡಿಕೊಳ್ಳಲಿ. ತಮ್ಮ ಎಲೆಯಲ್ಲಿ ಕತ್ತೆ ಬಿದ್ದಿರುವುದನ್ನು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.

    ಜನ ಬೆಂಬಲವಿದೆ:
    ಪ್ರಧಾನಿಗಳನ್ನು ಹಿಟ್ಲರ್ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಟೀಕೆಗಳನ್ನು ನಾನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತೇನೆ. ಪ್ರಧಾನಿಗಳು ವಿಶ್ವವ್ಯಾಪಿ ನಾಯಕರು. ಇಡೀ ಭಾರತ ದೇಶದಲ್ಲಿ ಜನಮನ್ನಣೆ ಗಳಿಸಿದವರು. ಅವರ ಬಗ್ಗೆ ಇರುವ ಸದಭಿಪ್ರಾಯ ಬಹುತೇಕ ಯಾವುದೇ ಪ್ರಧಾನಿಗಳಿಗಿಲ್ಲ. ಅಂತವರ ಬಗ್ಗೆ ಮಾತನಾಡಿದರೆ ಜನ ನಂಬುವುದಿಲ್ಲ. ಆಕಾಶಕ್ಕೆ ಉಗುಳಿದಂತೆ. ಗುಜರಾತ್‍ನಲ್ಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕಾಂಗ್ರೆಸ್ ನಾಯಕಿ ಮೋತ್ ಕಾ ಸೌದಾಗರ್ ಎಂದಿದ್ದರು. ಆಗ ಅವರಿಗೆ ಹೆಚ್ಚು ಮತ ದೊರೆತು ಜಾಸ್ತಿ ಸ್ಥಾನಗಳು ದೊರೆಯಿತು. ಅವರು ಏನು ಹೇಳುತ್ತಾರೋ ಹೇಳಲಿ ಜನಬೆಂಬಲ ನಮ್ಮ ಜೊತೆಗಿದೆ. ಇನ್ನಷ್ಟು ಬೆಂಬಲ ಹೆಚ್ಚಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಮೊದಲು ಬಸವರಾಜ ಬೊಮ್ಮಾಯಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿಂದ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಮನ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ಕಲಬುರಗಿ (Kalaburagi), ಬೆಳಗಾವಿ (Belagavi), ಬಳ್ಳಾರಿ ಹಾಗೂ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 11 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ (Government Of Karnataka) ಆದೇಶ ಹೊರಡಿಸಿದೆ.

    ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪ್ರಿನ್ಸಿಪಲ್ ಸೆಕ್ರೇಟರಿ ಆಗಿದ್ದ ಮಾಲಿನಿ ಕೃಷ್ಣ ಮೂರ್ತಿ ಅವರನ್ನು ಐಎಸ್‌ಡಿ ಹೆಚ್ಚುವರಿ ಪೊಲೀಸ್ (Police) ಮಹಾ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಎಸಿಬಿ (ACB) ಸೀಮಂತ್ ಕುಮಾರ್ ಸಿಂಗ್ ಅವರನ್ನ ಕೆಎಸ್‌ಆರ್‌ಪಿ (KSRP) ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಸೇರಲಿದ್ದಾರೆ ಜಡೇಜಾ

    ಕೆಎಸ್‌ಆರ್‌ಪಿ ಐಜಿಪಿ (IGP) ಆಗಿದ್ದ ಎಸ್.ರವಿ ಅವರನ್ನು ಪೊಲೀಸ್ ಅಂಡ್ ಪ್ರಿನ್ಸಿಪಲ್ ಸೆಕ್ರಟೆರಿ ಆಗಿ ವರ್ಗಾಯಿಸಲಾಗಿದೆ. ಅಜಯ್ ಹಿಲೋರಿ ಅವರನ್ನ ಡಿಸಿಆರ್‌ಇ (DCRE) ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಿದೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್‌ – ಟೆಂಡರ್‌ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ

    ಸಾಂದರ್ಭಿಕ ಚಿತ್ರ

    ಇನ್ನುಳಿದಂತೆ ಎಸಿಬಿ ಪೊಲೀಸ್ ಅಧೀಕ್ಷಕರಾಗಿದ್ದ ಯತೀಶ್ ಚಂದ್ರ ಅವರನ್ನ ಡಿಸಿಪಿ-2 ಅಪರಾಧ ವಿಭಾಗಕ್ಕೆ, ಕಲಬುರಗಿ ಜಿಲ್ಲೆಯ ಎಸಿಬಿ ಎಸ್ಪಿ ಆಗಿದ್ದ ವೈ ಅಮರನಾಥ ರೆಡ್ಡಿ ಅವರನ್ನ ಗುಪ್ತಚರ ದಳದ ಅಧೀಕ್ಷಕರಾಗಿ, ಎಸಿಬಿ ಎಸ್ಪಿ ಆಗಿದ್ದ ಡಾ.ಶೋಭಾರಾಣಿ ಅವರನ್ನ ಬೆಂಗಳೂರಿನ ಬಿಎಂಟಿಎಫ್ ಆಗಿ, ಎಸಿಬಿ ಎಸ್ಪಿ ಆಗಿದ್ದ ವಿ.ಜಿ ಸುಜೀತ್, ಬಳ್ಳಾರಿ ಎಸಿಬಿ ಎಸ್ಪಿ ಆಗಿದ್ದ ಬಿ.ಎಲ್. ಶ್ರೀಹರಿ ಬಾಬು ಹಾಗೂ ವಿಜಯಪುರದ ಹೆಚ್ಚುವರಿ ಎಸ್ಪಿ ಆಗಿದ್ದ ರಾಮ್ ಎಲ್ ಅರಸಿದ್ದಿ ಅವರನ್ನ ಲೋಕಾಯುಕ್ತ ಎಸ್ಪಿ ಆಗಿ ವರ್ಗಾಯಿಸಿದರೆ, ಬೆಳಗಾವಿ ಎಸಿಬಿ ಎಸ್ಪಿ ಆಗಿದ್ದ ಬಾಬಸಾಬ್ ನೇಮಗೌಡ್ ಅವರನ್ನು ಬೆಳಗಾವಿ ಗುಪ್ತಚರ ದಳದ ಅಧೀಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ – ಪೊಲೀಸ್ ಮಹಾಸಂಘ ಸೇರಿ ಎಲ್ಲ ಅರ್ಜಿಗಳು ವಜಾ

    ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ – ಪೊಲೀಸ್ ಮಹಾಸಂಘ ಸೇರಿ ಎಲ್ಲ ಅರ್ಜಿಗಳು ವಜಾ

    ನವದೆಹಲಿ: ಎಸಿಬಿಯನ್ನು (ACB) ರದ್ದು ಮಾಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಎಲ್ಲ ಖಾಸಗಿ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ (Supreme Court) ವಜಾ ಮಾಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಮಧ್ಯಪ್ರದೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.

    ಹೈಕೋರ್ಟ್ (High Court) ಆದೇಶ ಪ್ರಶ್ನಿಸಿ ಕನಕರಾಜು ಮತ್ತು ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದರು. ವಿಚಾರಣೆ ವೇಳೆ ಎಸಿಬಿಯಲ್ಲಿರುವ ಅರ್ಜಿಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವುದಾಗಿ ಹೈಕೋರ್ಟ್ ಹೇಳಿದೆ. ಇದರಿಂದ ದೂರುದಾರರಿಗೆ ಏನು ಅನ್ಯಾಯ ಆಗಿದೆ ಎಂದು ಪೀಠ ಪ್ರಶ್ನಿಸಿತು.

    ಅರ್ಜಿ ಸಲ್ಲಿಸಿದ ನಿಮ್ಮಗೆ ಏನು ಸಮಸ್ಯೆಯಾಗಿದೆ. ಲೋಕಾಯುಕ್ತಕ್ಕೆ ಅಧಿಕಾರ ವರ್ಗಾವಣೆಯಾಗುತ್ತಿರುವ ಹಿನ್ನಲೆಯಲ್ಲಿ ನಾವು ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ ಎಂದು ಹೇಳಿತು. ಇದಕ್ಕೆ ಅರ್ಜಿದಾರ ಪರ ವಕೀಲರೊಬ್ಬರು ಉತ್ತರಿಸಿ, ಎಸಿಬಿಗೆ ಸಾಧ್ಯವಿರುವ ಎಲ್ಲ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಉದಾಹರಣೆಗೆ, ಆರೋಪಿ ಸಾರ್ವಜನಿಕ ನೌಕರನ ತಿಂಗಳಿಗೆ 20,000 ರೂ.ಗಿಂತ ಕಡಿಮೆ ಆದಾಯವನ್ನು ಹೊಂದಿರುವ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ಮಾಡುವಂತಿಲ್ಲ ಎಂಬ ಅಧಿಸೂಚನೆ ಇದೆ ಎಂದು ಉಲ್ಲೇಖಿಸಿದರು. ಇದನ್ನೂ ಓದಿ: ಕಾರು ಮಾಲೀಕರೇ ಹುಷಾರ್ – ಮೈಸೂರಿನಲ್ಲಿ ಶುರುವಾಗಿದೆ ಕಳ್ಳರ ಹಾವಳಿ

    ಇದಕ್ಕೆ ಉತ್ತರಿಸಿದ ಪೀಠ, ಅಂತಹ ಅರ್ಜಿಗಳು ಪ್ರಾಕ್ಸಿ ವ್ಯಾಜ್ಯಕ್ಕೆ ಸಮನಾಗಿವೆ. ಕರ್ನಾಟಕ ಪೊಲೀಸ್ ಮಹಾಸಂಘದ ಮೂಲಕ ರಾಜ್ಯದ ಅಧಿಕಾರಿಗಳು ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಇದು ನಿಮ್ಮ ಕೆಲಸ ಅಲ್ಲ, ಹೈಕೋರ್ಟ್ ಆದೇಶದಿಂದ ಅನ್ಯಾಯವಾಗಿರುವ ವ್ಯಕ್ತಿಯೊಬ್ಬರು ನೇರ ಅರ್ಜಿ ಸಲ್ಲಿಸಿದ್ದರೇ ಮಾತ್ರ ವಿಚಾರಣೆ ನಡೆಸಲಾಗುವುದು ಎಂದು ಹೇಳಿ ಎಲ್ಲ ಅರ್ಜಿಗಳನ್ನು ವಜಾ ಮಾಡಿತು. ಇದನ್ನೂ ಓದಿ: ಮಹಾರಾಷ್ಟ್ರದ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಲೋಕಾಯುಕ್ತ ಅಬ್ಬರ ಶುರು – ಮೊದಲ ದಾಳಿಯಲ್ಲೇ BBMP ಜಂಟಿ ಆಯುಕ್ತ ಅರೆಸ್ಟ್

    ಲೋಕಾಯುಕ್ತ ಅಬ್ಬರ ಶುರು – ಮೊದಲ ದಾಳಿಯಲ್ಲೇ BBMP ಜಂಟಿ ಆಯುಕ್ತ ಅರೆಸ್ಟ್

    ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಲೋಕಾಯುಕ್ತ (Lokayukta Karnataka) ಅಬ್ಬರ ಶುರುವಾಗಿದೆ. ಮರುಸ್ಥಾಪನೆಗೊಂಡ ಬಳಿಕ ಲೋಕಾಯುಕ್ತ ಮೊದಲ ದಾಳಿ ನಡೆಸಿದ್ದು, ಪಶ್ಚಿಮ ವಿಭಾಗದ ಬಿಬಿಎಂಪಿ (BBMP) ಜಂಟಿ ಆಯುಕ್ತ ಶ್ರೀನಿವಾಸ್ (Shrinivas) ಜಾಗೂ ಪಿಎ ಉಮೇಶ್‌ನನ್ನು ಬಂಧಿಸಿದೆ.

    ಡಿವೈಎಸ್‌ಪಿ (DYSP) ಮಂಜಯ್ಯ, ಶಂಕರ್ ನಾರಾಯಣ್, ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದ ಲೋಕಾಯುಕ್ತ ಟೀಂ (Lokayukta Team) ಮಲ್ಲೇಶ್ವರಂನಲ್ಲಿರುವ ಪಶ್ಚಿಮ ವಿಭಾಗ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ್ದು, ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

    ಮಂಜುನಾಥ್ ಎಂಬವರ ದೂರಿನ ಮೇರೆಗೆ ಖಾತೆ ಬದಲಾವಣೆ ವಿಚಾರದಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು (Police) ದಾಳಿ ನಡೆಸಿದೆ. 4 ಲಕ್ಷ ಹಣದ ಸಮೇತ ನಿಂತಿದ್ದ ಶ್ರೀನಿವಾಸ್ ಪಿಎ ಉಮೇಶ್ ಹಾಗೂ ಶ್ರೀನಿವಾಸ್‌ರನ್ನ ಬಂಧಿಸಿ, ಕಚೇರಿಯಲ್ಲೇ ವಿಚಾರಣೆ ನಡೆಸಿದೆ. ಇದೀಗ ನ್ಯಾಯಾಧೀಶರ (Judge) ಮುಂದೆ ಹಾಜರುಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

    ರಾಜ್ಯದಲ್ಲಿ ಎಸಿಬಿ (ACB) ರದ್ದುಗೊಂಡು ಇಂದು ಎಸಿಬಿಯಿಂದ ಲೋಕಾಯುಕ್ತಕ್ಕೆ ಸಿಬ್ಬಂದಿ ವರ್ಗಾವಣೆಯನ್ನು ಮಾಡಲಾಗಿದೆ. ಬೆಂಗಳೂರು ಹಾಗೂ ಎಲ್ಲಾ ಜಿಲ್ಲೆ ಸೇರಿದಂತೆ ಒಟ್ಟು 141 ಸಿಬ್ಬಂದಿಯನ್ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಕಾನ್ಸ್ ಟೇಬಲ್ ಮತ್ತು ಹೆಡ್ ಕಾನ್ಸ್ ಟೇಬಲ್ ಮಟ್ಟದ ಸಿಬ್ಬಂದಿ ಮಾತ್ರ ವರ್ಗಾವಣೆ ಮಾಡಲಾಗಿದೆ. ಪ್ರಕರಣಗಳ ಹಸ್ತಾಂತರವಾದ ಬಳಿಕ ಪಿಎಸ್‌ಐ, ಪಿಐ, ಡಿವೈಎಸ್ ಪಿ, ಎಸ್‌ಪಿ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ACB ರದ್ದು ತೀರ್ಪಿನ ಅನುಷ್ಠಾನ‌ ಮಾಡಿ ಸರ್ಕಾರದಿಂದ ಆದೇಶ

    ACB ರದ್ದು ತೀರ್ಪಿನ ಅನುಷ್ಠಾನ‌ ಮಾಡಿ ಸರ್ಕಾರದಿಂದ ಆದೇಶ

    ಬೆಂಗಳೂರು: ರಾಜ್ಯದಲ್ಲಿ ಎಸಿಬಿ (ACB) ರದ್ದು ಮಾಡಿ ತೀರ್ಪು ನೀಡಿದ್ದ ಹೈಕೋರ್ಟಿನ (High Court) ಆದೇಶದಂತೆ ಎಸಿಬಿ ರದ್ದನ್ನು ಅನುಷ್ಠಾನ ಮಾಡಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ.

    ಈ ಕುರಿತು ಇಂದು ಅನುಷ್ಠಾನ ಆದೇಶ ನೀಡಿದ ಸರ್ಕಾರ ಲೋಕಾಯುಕ್ತಕ್ಕೆ (Lokayukta) ಎಸಿಬಿಯ ಎಲ್ಲ ಪ್ರಕರಣಗಳೂ ವರ್ಗಾಯಿಸಿ ಆದೇಶ ಹೊರಡಿಸಿದ್ದು, ಎಸಿಬಿಗೆ ನೀಡಿದ್ದ ತನಿಖಾಧಿಕಾರವನ್ನು ಸರ್ಕಾರ ವಾಪಸ್ ಪಡೆದಿದೆ. ಆಗಸ್ಟ್ 11 ರಂದು ಎಸಿಬಿ ರದ್ದು ಮಾಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದೀಗ ಹೈಕೋರ್ಟಿನ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಈ ಮೂಲಕ ಇದೀಗ ಎಸಿಬಿ ಇತಿಹಾಸ ಪುಟ ಸೇರಿದೆ. ರಾಜ್ಯದಲ್ಲಿ ಆರು ವರ್ಷಕ್ಕೂ ಹೆಚ್ಚು ಕಾಲದಿಂದ ಎಸಿಬಿ ಕಾರ್ಯಚರಣೆ ಮಾಡುತ್ತಿತ್ತು. 2016ರ ಮಾರ್ಚ್ 19 ರಂದು ಎಸಿಬಿಯನ್ನು ಸಿದ್ದರಾಮಯ್ಯ (Siddaramaiah)  ಸರ್ಕಾರ ರಚಿಸಿತ್ತು. ಇದನ್ನೂ ಓದಿ: ಮಹಿಳೆಯೊಬ್ಬರ ಮಗುವನ್ನು ಮುಸ್ಲಿಂ ದಂಪತಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ – ಆಸ್ಪತ್ರೆ ಸೀಲ್

    ಆದೇಶದಲ್ಲಿ ಏನಿದೆ?:
    ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಭ್ರಷ್ಟಾಚಾರ ನಿಗ್ರಹ ರದ್ದುಗೊಳಿಸಿರುವ ಆದೇಶವನ್ನು ಅನುಷ್ಕಾನಗೊಳಿಸಲಾಗುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಗೊಳಿಸಿ, ಮಾನ್ಯ ಉಚ್ಚ ನ್ಯಾಯಾಲಯದಿಂದ ಹೊರಡಿಸಲಾದ ಆದೇಶದಿಂದಾಗಿ ಹೊರಹೊಮ್ಮಿರುವ ತತ್ಪರಿಣಾಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನೂ ಓದಿ: PSI ಅಕ್ರಮದಲ್ಲಿ ಸಚಿವರು, ಶಾಸಕರ ಕೈವಾಡ ಬಯಲಾಗಿರುವುದನ್ನು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ: ಕಾಂಗ್ರೆಸ್ ಪ್ರಶ್ನೆ

    ಉಚ್ಚ ನ್ಯಾಯಾಲಯದ ಆದೇಶದನ್ವಯ ಸರ್ಕಾರದ ಅಧಿಸೂಚನೆ ಪ್ರಕಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಉಪಬಂಧ 2(ಎಸ್)ರನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ, ಪೊಲೀಸ್ ಠಾಣಾಧಿಕಾರವನ್ನು ನೀಡಿ ಆದೇಶಿಸಿದ, ಸರ್ಕಾರದ ಅಧಿಸೂಚನೆಗಳನ್ನು ಪುನರುಜ್ಜೀವನಗೊಳಿಸಿ ಆದೇಶಿಸಿದೆ.

    ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವುದರಿಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ರಾಜ್ಯವ್ಯಾಪ್ತಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡೆದಿರುವುದರಿಂದ ಭಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು, ವಿಚಾರಣೆಗಳು, ಇತರ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವುದು ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ಚಿಕ್ಕಬಳ್ಳಾಪುರ: ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಸಂಬಂಧ ಹೈಕೋರ್ಟ್‌ ಆದೇಶ ಪಾಲಿಸುತ್ತೇವೆಯೇ ಹೊರತು ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ಎಸಿಬಿ ರದ್ದು ಸಂಬಂಧ ಹೈಕೋರ್ಟ್‌ ಆದೇಶ ಪಾಲಿಸುತ್ತೇವೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸಿಬಿ ರದ್ದು – ಹೈ ಆದೇಶಕ್ಕೆ ತಡೆ ಕೋರಿ ಸುಪ್ರೀಂನಲ್ಲಿ ಅರ್ಜಿ

    ಎಸಿಬಿ ವಿಚಾರವಾಗಿ ಹೈಕೋರ್ಟ್ ಆದೇಶ ಪಾಲನೆ ಪ್ರಕ್ರಿಯೆ ಆರಂಭ ಆಗಿದೆ. ಸರ್ಕಾರದಿಂದ ಸುಪ್ರೀಂ ಮೊರೆ ಹೋಗಿಲ್ಲ. ಖಾಸಗಿ ವ್ಯಕ್ತಿ ಮೇಲ್ಮನವಿ ಹೋಗಿರೋದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

    ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗದಿರಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ಅದಕ್ಕೆ ನಾವು ಬದ್ಧ ಎಂದಿದ್ದಾರೆ. ಇದನ್ನೂ ಓದಿ: ಆಗಸ್ಟ್‌ 26ಕ್ಕೆ ಮಡಿಕೇರಿ ಚಲೋ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    ಭ್ರಷ್ಟಾಚಾರ ನಿಗ್ರಹ ದಳವನ್ನು(ಎಸಿಬಿ) ರದ್ದುಗೊಳಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಖಾಸಗಿ ಅರ್ಜಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]