Tag: ಎಸಿಎಂಎಂ ಕೋರ್ಟ್‌

  • ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ದರ್ಶನ್‌ – ʻದಾಸʼನ ಜೈಲು ದಿನಚರಿ ಹೇಗಿದೆ?

    ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ದರ್ಶನ್‌ – ʻದಾಸʼನ ಜೈಲು ದಿನಚರಿ ಹೇಗಿದೆ?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ಬಂಧನವಾಗಿರುವ ನಟ ದರ್ಶನ್‌ಗೆ ಜುಲೈ 4ರ ವರೆಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ. ದರ್ಶನ್‌ (Darshan) ಸೇರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ನಾಲ್ವರು ಆರೋಪಿಗಳನ್ನೂ ಪೊಲೀಸರು ಬಿಗಿಭದ್ರತೆಯಲ್ಲಿ ಸೆಂಟ್ರಲ್ ಜೈಲಿಗೆ ರವಾನಿಸಿದ್ದಾರೆ.

    ಇನ್ನೂ ಜೈಲಿನಲ್ಲಿ 6109 ಕೈದಿ ಸಂಖ್ಯೆ ಪಡೆದಿರುವ‌ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿ (Parappana Agrahara Jail) ಮೊದಲ ದಿನ ಕಳೆದಿದ್ದಾರೆ. ಇದನ್ನೂ ಓದಿ: ಜು. 4 ರವರೆಗೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ಜೈಲು

    ʻಜಗ್ಗುದಾದಾʼ ಜೈಲು ದಿನಚರಿ ಹೇಗಿತ್ತು?
    13 ವರ್ಷಗಳ ನಂತರ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್‌ ಸೆಂಟ್ರಲ್‌ ಜೈಲ್‌ನಲ್ಲಿ ಮುದ್ದೆ ಮುರಿದಿದ್ದಾರೆ. ರಾತ್ರಿ ದರ್ಶನ್‌ಗೆ ಮುದ್ದೆ, ಚಪಾತಿ, ಸಾಂಬಾರ್ ಮತ್ತು ಮಜ್ಜಿಗೆ ನೀಡಲಾಗಿತ್ತು. ಆದ್ರೆ ಸರಿಯಾಗಿ ಊಟ ಮಾಡದ ದರ್ಶನ್‌ ತಡವಾಗಿಯೇ ನಿದ್ರೆಗೆ ಜಾರಿದ್ದಾರೆ. ಕಸ್ಟಡಿಯಲ್ಲಿ ಪೊಲೀಸ್‌ ವಿಚಾರಣೆಯಿಂದ ಹೈರಾಣಾಗಿದ್ದ ನಟ, ಮೊದಲ ದಿನ ಜೈಲೂಟ ಸರಿಯಾಗಿ ಮಾಡಲಾಗದೇ ತಡರಾತ್ರಿ ವರೆಗೂ ಮಂಕಾಗಿಯೇ ಕುಳಿತಿದ್ದರು. ರಾತ್ರಿ 11:30ರ ನಂತರ ನಿದ್ರೆಗೆ ಜಾರಿದ್ದಾರೆ ಎಂಬುದಾಗಿ ಎಂದು ಜೈಲರ್‌ವೊಬ್ಬರು ತಿಳಿಸಿದ್ದಾರೆ.

    ಬೆಳಗ್ಗೆ 6:30ರ ವೇಳೆಗೆ ಎಚ್ಚರಗೊಂಡ ದರ್ಶನ್‌, ನಿತ್ಯಕರ್ಮ ಮುಗಿಸಿ, ಸೆಲ್‌ನಲ್ಲಿ ಕುಳಿತಿದ್ದಾರೆ, ದರ್ಶನ್ ಇರುವ ಅದೇ ಸೆಲ್‌ನಲ್ಲಿ ಸಹಖೈದಿ ವಿನಯ್ ಸೆರೆವಾಸ ಅನುಭವಿಸುತ್ತಿದ್ದಾರೆ. ಇಂದು (ಭಾನುವಾರ) ಜೈಲಿನ ಮೆನುವಿನ ಪ್ರಕಾರ ದರ್ಶನ್‌ಗೆ ಪಲಾವ್‌ ನೀಡಲಿದ್ದಾರೆ ಎಂದು ಜೈಲರ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 13 ವರ್ಷಗಳ ನಂತರ ‘ದಾಸ’ ಮತ್ತೆ ಜೈಲುಪಾಲು!

    ಜೈಲಿಗೆ ತೆರಳುವ ಮುನ್ನ ಆಗಿದ್ದೇನು?
    ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ ಅಂತ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಕೂಡಿ ಹಾಕಿ, ಚಿತ್ರಹಿಂಸೆ ಕೊಟ್ಟು ಕೊಂದ ಕೇಸಲ್ಲಿ ದರ್ಶನ್‌ಗೆ 13 ದಿನ ನ್ಯಾಯಾಂಗ ಬಂಧನ ವಿಧಿಸಲಾಯಿತು. 24ನೇ ಎಸಿಎಂಎಂ ಕೋರ್ಟ್ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತು. ಹೀಗಾಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇಡಲಾಯಿತು. ಪತ್ನಿ ವಿಜಯಲಕ್ಷ್ಮಿ ಮೇಲೆ 2011ರಲ್ಲಿ ಹಲ್ಲೆ ಮಾಡಿದ್ದಾಗ 13 ವರ್ಷಗಳ ಹಿಂದೆ ಜೈಲು ಸೇರಿದ್ದರು. ಈಗ ಕೊಲೆ ಕೇಸಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಪ್ರಕರಣದ 17 ಜನ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

    ಶನಿವಾರ ಮಧ್ಯಾಹ್ನ ಮಲ್ಲತಹಳ್ಳಿಯ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಕರೆತಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲೇ ದರ್ಶನ್, ಪ್ರದೋಶ್‌, ವಿನಯ್, ಧನರಾಜ್‌ಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಬಳಿಕ 4 ಗಂಟೆ ಸುಮಾರಿಗೆ ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಈ ವೇಳೆ, ಎಲ್ಲಾ ಆರೋಪಿಗಳು ಒಟ್ಟಿಗೆ ಇದ್ದರೆ ಗಲಾಟೆ ಮಾಡಿಕೊಳ್ಳುವ, ಒಳಸಂಚು ಮಾಡುವ, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಅಂತ ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದರು. ಇದಕ್ಕೆ ದರ್ಶನ್ & ಗ್ಯಾಂಗ್ ಪರ ವಕೀಲರು ಆಕ್ಷೇಪಿಸಿದರು. ಆದರೆ, ಸೋಮವಾರ ಈ ಬಗ್ಗೆ ತೀರ್ಮಾನ ಮಾಡೋದಾಗಿ ಜಡ್ಜ್ ಹೇಳಿದರು. ಬಳಿಕ, ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಿಗಿಭದ್ರತೆಯಲ್ಲಿ ಸೆಂಟ್ರಲ್ ಜೈಲಿಗೆ ರವಾನಿಸಿದರು. ದರ್ಶನ್‌ಗೆ ಖೈದಿ ನಂಬರ್ 6109 ಕೊಡಲಾಗಿದೆ.

  • ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

    ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಪ್ರಕರಣದಲ್ಲಿ (Valmiki Development Corporation Case) ಬಂಧಿತ ಆರೋಪಿಗಳಾಗಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್‌ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ ಅವರನ್ನ 6 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ, ಎಸಿಎಂಎಂ ಕೋರ್ಟ್‌ (ACMM Court) ಆದೇಶಿಸಿದೆ.

    ವಾಲ್ಮೀಕಿ ನಿಗಮ ಹಗರಣ ಪ್ರಕರಣದ ಸಮಗ್ರ ತನಿಖೆ ನಡೆಸಲು ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ಸರ್ಕಾರ ರಚಿಸಿತ್ತು. ತಂಡ ರಚನೆಯಾದ ಎರಡು ಗಂಟೆಗಳಲ್ಲೇ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನ ಎಸ್‌ಐಟಿ ಬಂಧಿಸಿ, ಆರೋಪಿಗಳನ್ನ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್‌ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತು.

    ನಿಗಮದ ಹಗರಣ ಬೆಳಕಿಗೆ ಬಂದ ಬಳಿಕ ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಎಸ್ಕೇಪ್ ಆಗಿದ್ದರು. ಬೆಂಗಳೂರು ಹೊರವಲಯದಲ್ಲಿ ಅವರನ್ನು ಬಂಧಿಸಲಾಗಿತ್ತು. ಇಂದು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಎಸ್‌ಐಟಿ ತನ್ನ ಕಸ್ಟಡಿಗೆ ಪಡೆಯಿತು. ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು

    SIT ತಂಡದಲ್ಲಿ ಯಾರ‍್ಯಾರು ಇದ್ದಾರೆ?
    ಎಸ್‌ಐಟಿಗೆ ಮುಖ್ಯಸ್ಥರಾಗಿ ಮನೀಶ್‌ ಖರ್ಬೀಕರ್‌ರನ್ನು ನೇಮಿಸಲಾಗಿದೆ. ಬೆಂಗಳೂರು ನಗರ ಉಪ ಪೊಲೀಸ್‌ ಆಯುಕ್ತ ಶಿವಪ್ರಕಾಶ್‌ ದೇವರಾಜು, ರಾಜ್ಯ ಗುಪ್ತ ವಾರ್ತೆ ಪೊಲೀಸ್‌ ಅಧೀಕ್ಷಕ ಹರಿರಾಮ್‌ ಶಂಕರ್‌, ಸಿಐಡಿ ಪೊಲೀಸ್‌ ಅಧೀಕ್ಷಕ ರಾಘವೇಂದ್ರ ಕೆ. ಹೆಗಡೆ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.

    ಏನಿದು ಪ್ರಕರಣ?
    ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ‌ ಡೆತ್‌ನೋಟ್‌ ಬರೆದಿಟ್ಟು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ 85 ಕೋಟಿ ರೂ. ಹಗರಣ ನಡೆದಿದೆ, ಇದರಲ್ಲಿ ನನ್ನ ತಪ್ಪು ಏನೂ ಇಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ

  • ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

    ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

    ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri), ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

    ಪತಿ ಸುಧೀರ್ ರೆಡ್ಡಿ (Sudhir Reddy) ಜೊತೆ ಖುದ್ದು 24ನೇ ಎಸಿಎಂಎಂ ಕೋರ್ಟ್‌ಗೆ (ACMM Court) ಹಾಜರಾಗಿದ್ದ ರೋಹಿಣಿ ಸಿಂಧೂರಿ, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ಇದನ್ನೂ ಓದಿ: ರಾಜ್ಯ ಭ್ರಷ್ಟಾಚಾರದ ರಾಜಧಾನಿಯಾಗಿರೋ ಬಗ್ಗೆ ಮೋದಿ ಏಕೆ ಮಾತಾಡ್ತಿಲ್ಲ?: ಡಿಕೆಶಿ

    `ತಡೆಯಾಜ್ಞೆ ಇದ್ದರೂ, ರೂಪಾ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಾತನಾಡಿದ್ರೆ ಪರವಾಗಿಲ್ಲ, ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯಡಿಯೂರಪ್ಪರಿಗೆ ಕಣ್ಣೀರು ಹಾಕಿಸಿದ ಬಗ್ಗೆ ಮೋದಿ ಉತ್ತರ ಕೊಡಲಿ- ಡಿಕೆಶಿ

    ಚಾಮರಾಜನಗರದ ಅಮ್ಲಜನಕ ಸಿಲಿಂಡರ್ ದುರಂತ ಪ್ರಕರಣದಲ್ಲಿ ಈಗಾಗಲೇ ಸರ್ಕಾರ ತನಿಖೆ ನಡೆಸಿದೆ. ಸರ್ಕಾರ ವರದಿ ನೀಡಿದ್ದರೂ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ಜಡ್ಜ್ ಗಮನಕ್ಕೆ ತಂದರು.

    ರೋಹಿಣಿ ಹೇಳಿಕೆ ಆಧರಿಸಿ, ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೋರ್ಟ್ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿದೆ.