Tag: ಎವೆಲಿನ್ ಶರ್ಮಾ

  • 2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

    2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

    ಬಾಲಿವುಡ್ (Bollywood) ಬ್ಯೂಟಿ ಎವೆಲಿನ್ ಶರ್ಮಾ (Evelyn Sharma) ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ಎವೆಲಿನ್ ಶರ್ಮಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ. ಜುಲೈ 6ರಂದು ಮಗು ಜನಿಸಿದ್ದು, ಒಂದು ತಿಂಗಳ ನಂತರ ನಟಿ ರಿವೀಲ್‌ ಮಾಡಿದ್ದಾರೆ.

    ‘ಯೇ ಜವಾನಿ ಹೇ ದಿವಾನಿ’ ಸಿನಿಮಾ ಸೇರಿದಂತೆ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿರುವ ಎವೆಲಿನ್ ಶರ್ಮಾ ಅವರ ಮನೆಯಲ್ಲಿ ಮುದ್ದು ಮಗನ ಆಗಮನದಿಂದ ಸಂಭ್ರಮ ಮನೆ ಮಾಡಿದೆ. ಎರಡನೇ ಮಗು ಜನಿಸಿರೋದರ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. 2ನೇ ಮಗುವಿಗೆ ಆರ್ಡೆನ್‌ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

    ಮೇ 15, 2021ರಂದು ತುಷಾನ್ ಜೊತೆ ಎವೆಲಿನ್ ಮದುವೆಯಾಗಿದ್ದರು. ನವೆಂಬರ್‌ನಲ್ಲಿ ಮೊದಲ ಮಗು ಜನಿಸಿತು. ಸಾಹೋ, ನೌಟಂಕಿ ಸಾಲಾ, ಯಾರಿಯಾನ್, ಇಶ್ಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಎವೆಲಿನ್ ನಟಿಸಿದ್ದಾರೆ.

    ಇಬ್ಬರ ಮಕ್ಕಳ ತಾಯಿಯಾಗಿರೋ ನಟಿ ಎವೆಲಿನ್ ಅವರು ಸದ್ಯ ನಟನೆಯಿಂದ ದೂರ ಸರಿದಿದ್ದಾರೆ. ದಾಂಪತ್ಯ, ಇಬ್ಬರ ಮಕ್ಕಳ ಪಾಲನೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಯಿಯಾಗುತ್ತಿರುವ ಗುಡ್‌ ನ್ಯೂಸ್‌ ಕೊಟ್ರು ʻಯೇ ಜವಾನಿ ಹೇ ದಿವಾನಿ’ ನಟಿ

    ತಾಯಿಯಾಗುತ್ತಿರುವ ಗುಡ್‌ ನ್ಯೂಸ್‌ ಕೊಟ್ರು ʻಯೇ ಜವಾನಿ ಹೇ ದಿವಾನಿ’ ನಟಿ

    ಬಾಲಿವುಡ್‌ನ `ಯೇ ಜವಾನಿ ಹೇ ದಿವಾನಿ’ ಚಿತ್ರದ ಪೋಷಕ ನಟಿ ಎವೆಲಿನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡೇ ವರ್ಷಗಳಲ್ಲಿ ಮತ್ತೊಮ್ಮೆ ತಾಯಿಯಾಗಿದ್ದಾರೆ. ಬೇಬಿ ಬಂಪ್ ಫೋಟೋ ಹಂಚಿಕೊಂಚಿಕೊಳ್ಳುವ ಮೂಲಕ ನಟಿ ತಾಯ್ತನದ ಸಂಭ್ರಮದಲ್ಲಿದ್ದಾರೆ.

     

    View this post on Instagram

     

    A post shared by Evelyn Sharma (@evelyn_sharma)

    ನಟಿ ಎವೆಲಿನ್ ಶರ್ಮಾ ಬಾಲಿವುಡ್‌ನ ಸಾಹೋ, ನೌಟಂಕಿ ಸಾಲಾ, ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಮೊದಲ ಮಗುವನ್ನ ನಟಿ ಬರಮಾಡಿಕೊಂಡಿದ್ದರು. ಈಗ ನಟಿ, ಎರಡನೇ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ.

     

    View this post on Instagram

     

    A post shared by Evelyn Sharma (@evelyn_sharma)

    ಮೇ 15, 2021ರಂದು ತುಷಾನ್ ಜೊತೆ ಎವೆಲಿನ್ ಮದುವೆಯಾಗಿದ್ದರು. ನವೆಂಬರ್‌ನಲ್ಲಿ ಮೊದಲ ಮಗು ಜನಿಸಿತು. ಈಗ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ತಾಯಿಯಾಗಿ ಒಂದೇ ವರ್ಷದಲ್ಲಿ ನಟಿ ಮತ್ತೊಂದು ಅಚ್ಚರಿಯ ಮಾಹಿತಿಯೊಂದನ್ನು ರಿವೀಲ್ ಮಾಡಿದ್ದಾರೆ. ಅದೇನೆಂದರೆ ಪತಿ ತುಷಾನ್ ಭಿಂಡಿ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

     

    View this post on Instagram

     

    A post shared by Evelyn Sharma (@evelyn_sharma)

    ಎವೆಲಿನ್ ಶರ್ಮಾ ಅವರು ಎರಡನೆಯ ಬಾರಿ ಪಾಲಕರಾಗಿರುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎವೆಲಿನ್ ಮಗುವಿನ ಬಂಪ್‌ನೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಡುವಾಗ ನಗು ಬೀರಿದ್ದಾರೆ. ನಟಿಯ ಸೆಲೆಬ್ರಿಟಿ ಸ್ನೇಹಿತರು ಮತ್ತು ಅಭಿಮಾನಿಗಳು ಪೋಸ್ಟ್‌ನಲ್ಲಿ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚುಂಬನದ ಫೋಟೋ ಮೂಲಕ ಎಂಗೇಜ್ ವಿಷ್ಯ ಹೇಳಿದ ನಟಿ

    ಚುಂಬನದ ಫೋಟೋ ಮೂಲಕ ಎಂಗೇಜ್ ವಿಷ್ಯ ಹೇಳಿದ ನಟಿ

    ಕ್ಯಾನ್ಬೆರಾ: ಬಾಲಿವುಡ್ ನಟಿ ಎವೆಲಿನ್ ಶರ್ಮಾ ಚುಂಬನದ ಫೋಟೋ ಹಂಚಿಕೊಳ್ಳುವ ಮೂಲಕ ತಾವು ಎಂಗೇಜ್ ಆಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

    ಎವೆಲಿನ್ ಶರ್ಮಾ ಹಲವು ದಿನಗಳಿಂದ ಆಸ್ಟ್ರೇಲಿಯಾದ ದಂತ ವೈದ್ಯ ತುಷಾನ್ ಭಿಂದಿ ಅವರೊಂದಿಗೆ ಡೇಟ್ ಮಾಡುತ್ತಿದ್ದರು. ಆದರೆ ಶನಿವಾರ ಎವೆಲಿನ್ ಹಾಗೂ ತುಷಾನ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಎವೆಲಿನ್ ಗೆಳೆಯನಿಗೆ ಕಿಸ್ ಮಾಡುತ್ತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

     

    View this post on Instagram

     

    Yessss!!! ????????????????????

    A post shared by Evelyn Sharma (@evelyn_sharma) on

    ತುಷಾನ್ ಸಿಡ್ನಿಯ ಪ್ರಸಿದ್ಧ ಹಾರ್ಬರ್ ಸೇತುವೆಯಲ್ಲಿ ಎವೆಲಿನ್ ಅವರನ್ನು ಪ್ರಪೋಸ್ ಮಾಡಿದ್ದರು. ಅಲ್ಲದೆ ಪ್ರಪೋಸ್ ಮಾಡುವ ಸಂದರ್ಭದಲ್ಲಿ ಎವೆಲಿನ್ ಅವರ ನೆಚ್ಚಿನ ಹಾಡನ್ನು ಬ್ಯಾಕ್‍ಗ್ರೌಂಡ್‍ನಲ್ಲಿ ಪ್ಲೇ ಮಾಡಲು ತುಷಾನ್ ಗಿಟಾರಿಷ್ಟ್ ನಲ್ಲಿ ನೇಮಿಸಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎವೆಲಿನ್, ತುಷಾನ್ ನನಗೆ ಪ್ರಪೋಸ್ ಮಾಡುವ ಮೊದಲು ಒಂದು ಕವಿತೆಯನ್ನು ಓದಿದ್ದರು. ಈ ಕನಸು ನನಸಾಗುವಂತಿದೆ. ತುಷಾನ್ ನನಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ಪರ್ಫೆಕ್ಟ್ ಆಗಿ ಪ್ರಪೋಸ್ ಮಾಡಿದ್ದರು ಎಂದು ತಿಳಿಸಿದ್ದಾರೆ.

    ನನ್ನ ಸ್ನೇಹಿತರೊಬ್ಬರು ಕಳೆದ ವರ್ಷ ಆಯೋಜಿಸಿದ ಬ್ಲೈಂಡ್ ಡೇಟ್‍ನಲ್ಲಿ ನಾನು ತುಷಾನ್ ಅವರನ್ನು ಭೇಟಿ ಮಾಡಿದೆ. ತುಷಾನ್ ತುಂಬಾನೇ ರೊಮ್ಯಾಂಟಿಕ್ ಹಾಗೂ ನನ್ನಗಿಂತ ಹೆಚ್ಚಾಗಿ ಸಿನಿಮಾಗಳನ್ನು ನೋಡುತ್ತಾರೆ. ನನ್ನ ಹಾಗೂ ತುಷಾನ್ ಸ್ನೇಹಿತರು ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದುಕೊಂಡಿದ್ದರು. ಆದರೆ ನಾವು ನಮ್ಮಿಬ್ಬರ ಕುಟುಂಬವನ್ನು ಪರಸ್ಪರ ಪರಿಚಯ ಮಾಡಿಸಿದ್ದೆವು. ಬಳಿಕ ನವರಾತ್ರಿಯ ಸಮಯದಲ್ಲಿ ನಿಶ್ಚಿತಾರ್ಥ ಮಾಡಲು ನಮ್ಮಿಬ್ಬರ ಕುಟುಂಬ ನಿರ್ಧರಿಸಿದ್ದರು ಎಂದರು.

    ಮದುವೆ ದಿನಾಂಕದ ಬಗ್ಗೆ ಎವೆಲಿನ್‍ರನ್ನು ಪ್ರಶ್ನಿಸಿದಾಗ ಅವರು, ಮದುವೆ ದಿನಾಂಕವನ್ನು ನಿಗದಿಪಡಿಸಿದಾಗ ಎಲ್ಲರಿಗೂ ತಿಳಿಸುತ್ತೇನೆ. ಈಗ ನಾವಿಬ್ಬರು ಜೊತೆಯಲ್ಲಿ ತುಂಬಾ ಎಂಜಾಯ್ ಮಾಡುತ್ತಿದ್ದೇವೆ. ಸಿಡ್ನಿ ನನ್ನ ಇಷ್ಟವಾದ ನಗರಗಳಲ್ಲಿ ಒಂದಾಗಿದ್ದು, ಮದುವೆ ನಂತರ ನಾನು ಆಸ್ಟ್ರೇಲಿಯಾಗೆ ಶಿಫ್ಟ್ ಆಗಲು ಇಷ್ಟಪಡುತ್ತೇನೆ. ಆದರೆ ಭಾರತದಲ್ಲೂ ನನ್ನ ಒಂದು ಮನೆ ಇರುತ್ತದೆ. ಏಕೆಂದರೆ ಇದೇ ನಮ್ಮ ಮನೆ ಎಂದು ಎವೆಲಿನ್ ಪ್ರತಿಕೆಯೊಂದರಲ್ಲಿ ಸಂದರ್ಶನ ನೀಡಿದ್ದರು.

    ಎವೆಲಿನ್ 2012ರಲ್ಲಿ ‘ಫ್ರಂ ಸಿಡ್ನಿ ವಿತ್ ಲವ್’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ‘ಹೇ ಜವಾನಿ ಹೇ ದಿವಾನಿ’, ‘ನೌಟಂಕಿಸಾಲಾ’, ‘ಮೈ ತೇರಾ ಹೀರೋ’, ಯಾರಿಯನ್ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ ಪ್ರಭಾಸ್ ನಟನೆಯ ‘ಸಹೋ’ ಚಿತ್ರದಲ್ಲೂ ಎವೆಲಿನ್ ಅಭಿನಯಿಸಿದ್ದರು.