Tag: ಎವಿ ಡಿವಿಲಿಯರ್ಸ್

  • 2019 ರ ಐಪಿಎಲ್ ಗೆ ಎಬಿ ಡಿವಿಲಿಯರ್ಸ್ ಕಮ್ ಬ್ಯಾಕ್?

    2019 ರ ಐಪಿಎಲ್ ಗೆ ಎಬಿ ಡಿವಿಲಿಯರ್ಸ್ ಕಮ್ ಬ್ಯಾಕ್?

    ಬೆಂಗಳೂರು: 2019ರ ಐಪಿಎಲ್ ಟೂರ್ನಿಗೆ ದಕ್ಷಿಣ ಆಫ್ರಿಕಾ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಕಾಮ್ ಬ್ಯಾಕ್ ಮಾಡುವಂತೆ ಆರ್ ಸಿಬಿ ಟ್ವೀಟ್ ಮಾಡಿದೆ.

    ಎಬಿಡಿ ಅವರ ನಿವೃತ್ತಿಯ ಶಾಕಿಂಗ್ ಸುದ್ದಿ ತಿಳಿದ ಬಳಿಕ ಹಲವು ಅಭಿಮಾನಿಗಳು ನಿರಾಸೆ ಅನುಭವಿಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಆರ್ ಸಿಬಿ, ಅಪಾರ ಅಭಿಮಾನಿ ಬಳಗವನ್ನು ಗಳಿಸಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ಕಾಮ್ ಬ್ಯಾಕ್ ಮಾಡಿ ಎಂದು ಬರೆದುಕೊಂಡಿದೆ.

    ಎಬಿಡಿ ನಿವೃತ್ತಿ ಘೋಷಿಸುವ ಮುನ್ನ 2018ರ ಐಪಿಎಲ್ ಟೂರ್ನಿಯಲ್ಲಿ ತಂಡ ತೋರಿದ್ದ ನೀರಸ ಪ್ರದರ್ಶನಕ್ಕೆ ಕ್ಷಮೆ ಕೋರಿದ್ದರು. ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಕ್ಷಮೆ ಕೋರಿ ಮುಂದಿನ ಐಪಿಎಲ್ ಗೆ ಮತ್ತಷ್ಟು ತಯಾರಿ ನಡೆಸಿ ಕಮ್ ಬ್ಯಾಕ್ ಮಾಡುವುದಾಗಿ ತಿಳಿಸಿದ್ದರು.

    https://www.instagram.com/p/BjFZIQfl2-F/?hl=en&taken-by=abdevilliers17

    ನಿವೃತ್ತಿ ಘೋಷಣೆ ಬಳಿಕವೂ ಐಪಿಎಲ್ ನಲ್ಲಿ ಭಾಗವಹಿಸುವ ಸಾಧ್ಯತೆಗಳಿದ್ದು, ಆದರೆ ಎಬಿಡಿ ಕುರಿತು ಸ್ಪಷ್ಟ ನಿರ್ಧಾರವನ್ನು ತಿಳಿಸಿಲ್ಲ. ದಕ್ಷಿಣ ಆಫ್ರಿಕಾ ಪರ 2015 ರಲ್ಲಿ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವಾಡಿದ್ದ ಎಬಿಡಿ ಇದೂವರೆಗೂ 228 ಏಕದಿನ ಪಂದ್ಯಗಳ 2018 ಇನ್ನಿಂಗ್ಸ್ ನಿಂದ ಒಟ್ಟು 9,577 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದ ಎಬಿಡಿ 114 ಪಂದ್ಯಗಳಲ್ಲಿ 8,765 ರನ್ ಗಳಿಸಿದ್ದಾರೆ. ಇನ್ನು 78 ಟಿ20 ಪಂದ್ಯವಾಡಿರುವ ಎಬಿಡಿ 75 ಇನ್ನಿಂಗ್ಸ್ ಗಳಲ್ಲಿ 1,672 ರನ್ ಗಳಿಸಿದ್ದಾರೆ. ಐಪಿಎಲ್ ಕೊನೆಯ ಪಂದ್ಯವನ್ನು ಮೇ 19 ರಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ್ದರು.

    ಐಪಿಎಲ್ ನಲ್ಲಿ ಆರ್ ಸಿಬಿ ಪರ 2011 ರಲ್ಲಿ ಮೊದಲ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಎಬಿಡಿ, ನಾಯಕ ಕೊಹ್ಲಿರೊಂದಿಗೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಪರ ಈ ಇಬ್ಬರ ಜೋಡಿ 5 ಬಾರಿ 100 ಪ್ಲಸ್ ರನ್ ಸಿಡಿಸಿದ ಹೆಗ್ಗಳಿಕೆ ಪಡೆದಿದೆ. ಅಲ್ಲದೇ 2 ಬಾರಿ 200 ಪ್ಲಸ್ ರನ್ ಜೊತೆಯಾಟ ನೀಡಿದ ಜೋಡಿ ಎಂಬ ದಾಖಲೆ ಹೊಂದಿದೆ.  ಇದನ್ನು ಓದಿ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ವಿರಾಟ್ ಕೊಹ್ಲಿ