Tag: ಎಳ್ಳು ಚಿಕ್ಕಿ

  • ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ

    ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ

    ಸಿಹಿಯಾದ ಚಿಕ್ಕಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಇದನ್ನೂ ಇಷ್ಟಪಟ್ಟು ತಿನ್ನುವುದರಲ್ಲಿ ಅನುಮಾನವೇ ಇಲ್ಲ. ಎಳ್ಳು ಸೇವನೆ ನಮ್ಮ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಎಳ್ಳು ಚಿಕ್ಕಿ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ

    ಬೇಕಾಗುವ ಸಾಮಗ್ರಿಗಳು:
    ಬಿಳಿ ಎಳ್ಳು – 1 ಕಪ್
    ಪುಡಿ ಮಾಡಿದ ಬೆಲ್ಲ – 1 ಕಪ್
    ನೀರು- ಸ್ವಲ್ಪ
    ಸಿಲ್ವರ್ ಫಾಯಿಲ್
    ತುಪ್ಪ – ಸ್ವಲ್ಪ
    ಏಲಕ್ಕಿ ಪುಡಿ – ಕಾಲು ಚಮಚ
    ಅಡುಗೆ ಸೋಡಾ – ಕಾಲು ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಎಳ್ಳನ್ನು ಹಾಕಿಕೊಂಡು 2 ನಿಮಿಷಗಳವರೆಗೆ ಫ್ರೈ ಮಾಡಿಕೊಂಡು ಬೇರೆ ಬೌಲ್‌ಗೆ ಹಾಕಿಟ್ಟುಕೊಳ್ಳಿ.
    * ಬಳಿಕ ಅದೇ ಪ್ಯಾನ್‌ಗೆ ಬೆಲ್ಲ ಹಾಕಿಕೊಂಡು ಅದಕ್ಕೆ 2 ಚಮಚ ನೀರನ್ನು ಸೇರಿಸಿಕೊಳ್ಳಿ. ಬಳಿಕ ಅದನ್ನು ಮೀಡಿಯಮ್ ಉರಿಯಲ್ಲಿ ಬೆಲ್ಲವನ್ನು ಕರಗಿಸಿಕೊಳ್ಳಿ.
    * ಬಳಿಕ ಕರಗಿಸಿದ ಬೆಲ್ಲಕ್ಕೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಬೆಲ್ಲದ ಪಾಕ ಕಂದು ಬಣ್ಣ ಆಗುವವರೆಗೆ ತಿರುವಿಕೊಳ್ಳಿ.
    * ನಂತರ ಆ ಮಿಶ್ರಣಕ್ಕೆ ಕಾಲು ಚಮಚ ಅಡುಗೆ ಸೋಡಾವನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು ಎಳ್ಳನ್ನು ಸೇರಿಸಿಕೊಳ್ಳಿ.
    * ಸಣ್ಣ ಉರಿಯಲ್ಲಿ 2ರಿಂದ ಮೂರು ನಿಮಿಷ ಈ ಮಿಶ್ರಣವನ್ನು ತಿರುವಿಕೊಳ್ಳಬೇಕು.
    * ಈಗ ಒಂದು ಪ್ಲೇಟ್‌ಗೆ ಸಿಲ್ವರ್ ಫಾಯಿಲ್ ಅನ್ನು ಹಾಕಿಕೊಂಡು ಅದಕ್ಕೆ ತುಪ್ಪ ಹಚ್ಚಿಕೊಂಡು ಬೆಲ್ಲ ಮತ್ತು ಎಳ್ಳಿನ ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿಕೊಳ್ಳಿ.
    * ಈಗ ಅದನ್ನು ಸಮತಟ್ಟಾಗಿ ಪ್ಲೇಟ್‌ಗೆ ಹರಡಿಕೊಂಡು ಬಿಸಿಯಿರುವಾಗಲೇ ಚೌಕಾಕಾರದಲ್ಲಿ ಚಾಕುವಿನಿಂದ ತುಂಡರಿಸಿಕೊಳ್ಳಿ.
    * ಬಳಿಕ ಇದನ್ನು ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ಬಿಸಿ ಆರಿದ ಬಳಿಕ ಇದನ್ನು ತುಂಡು ತುಂಡಾಗಿ ಮುರಿದು ತಿನ್ನಲು ಕೊಡಿ. ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ

    ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ

    ಅಂಗಡಿಗಳಲ್ಲಿ ಸಿಗುವ ಚಿಕ್ಕಿಯನ್ನು (Chikki) ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಹಲವು ಬಗೆಯ ಒಣ ಬೀಜಗಳನ್ನು ಬಳಸಿ ಚಿಕ್ಕಿಯನ್ನು ಮಾಡಲಾಗುತ್ತದೆ. ಅದೇ ರೀತಿ ಎಳ್ಳಿನಿಂದಲೂ ಚಿಕ್ಕಿ (Sesame Chikki) ಮಾಡಬಹುದು. ಒಮ್ಮೆ ಮನೆಯಲ್ಲಿಯೇ ಎಳ್ಳು ಚಿಕ್ಕಿಯನ್ನು ಮಾಡಿ ನೋಡಿ. ಎಳ್ಳಿನ ಚಿಕ್ಕಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬಿಳಿ ಎಳ್ಳು- 1 ಕಪ್
    ತುಪ್ಪ- 1 ಟೀಸ್ಪೂನ್
    ಬೆಲ್ಲ- 1 ಕಪ್ ಇದನ್ನೂ ಓದಿ: ಸಿಹಿಯಾದ ಆಲೂಗಡ್ಡೆಯ ಹಲ್ವಾ

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್‌ನಲ್ಲಿ ಎಳ್ಳು ಹಾಕಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಬಳಿಕ ಬದಿಗಿಡಿ.
    * ಇನ್ನೊಂದು ಕಡಾಯಿ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ.
    * ಬಳಿಕ ಬೆಲ್ಲ ಸೇರಿಸಿ ಅದು ಸಂಪೂರ್ಣ ಕರಗುವ ತನಕ ಮಧ್ಯಮ ಉರಿಯಲ್ಲಿ ಕುದಿಸಿ.
    * ಬೆಲ್ಲ ಸಂಪೂರ್ಣ ಕರಗಿದ ಬಳಿಕ ಸಿರಪ್‌ನಂತೆ ಆಗುತ್ತದೆ.
    * ಅದರ ಒಂದು ಹನಿಯನ್ನು ತೆಗೆದುಕೊಂಡು, ನೀರಿರುವ ಬಟ್ಟಲಿನಲ್ಲಿ ಹಾಕಿ ನೋಡಿ. ಅದು ತಕ್ಷಣ ಗಟ್ಟಿಯಾದ ಚೆಂಡಿನಂತಾದರೆ

    ಪಾಕ ತಯಾರಾಗಿದೆ. ಇಲ್ಲದೇ ಹೋದರೆ ಮತ್ತೊಂದು ನಿಮಿಷ ಕುದಿಸಿ ಮತ್ತೆ ಪರಿಶೀಲಿಸಿ.
    * ಈಗ ಬೆಲ್ಲದ ಸಿರಪ್‌ಗೆ ಎಳ್ಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಒಂದು ತಟ್ಟೆಗೆ ತುಪ್ಪವನ್ನು ಸವರಿ(ಬಟರ್ ಪೇಪರ್ ಬಳಸಬಹುದು), ಅದರ ಮೇಲೆ ಎಳ್ಳಿನ ಮಿಶ್ರಣವನ್ನು ಸುರಿಯಿರಿ.
    * ಮಿಶ್ರಣ ಬೇಗ ಗಟ್ಟಿಯಾಗುವುದರಿಂದ ಅದು ಬೆಚ್ಚಗಿರುವಾಗಲೇ ಚಾಕುವಿನ ಮೂಲಕ ಚೌಕಾಕಾರದಲ್ಲಿ ಕತ್ತರಿಸಿ.
    * ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ.
    * ಎಳ್ಳು ಚಿಕ್ಕಿ ಇದೀಗ ತಯಾರಾಗಿದ್ದು, ಇದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ, 1 ತಿಂಗಳ ವರೆಗೂ ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ

    Live Tv
    [brid partner=56869869 player=32851 video=960834 autoplay=true]

  • ಸಂಕ್ರಾಂತಿ ವಿಶೇಷ – ಸಿಹಿಯಾದ ಕ್ರಿಸ್ಪಿ ಎಳ್ಳು ಚಿಕ್ಕಿ ಮಾಡುವ ವಿಧಾನ

    ಸಂಕ್ರಾಂತಿ ವಿಶೇಷ – ಸಿಹಿಯಾದ ಕ್ರಿಸ್ಪಿ ಎಳ್ಳು ಚಿಕ್ಕಿ ಮಾಡುವ ವಿಧಾನ

    ಸೌರಮಂಡಲದ ಅಧಿಪತಿ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಕಾಲ ಮಕರ ಸಂಕ್ರಾಂತಿ. ಸಂಕ್ರಾಂತಿ ಎಂದೊಡನೆ ದಕ್ಷಿಣ ಭಾರತದ ಮನೆಮನೆಯಲ್ಲಿ ಎಳ್ಳು ಬೆಲ್ಲದ್ದೆ ದರ್ಬಾರು. ವರ್ಷದ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿಯಾಗಿದ್ದು, ಈ ವಿಶೇಷ ದಿನದಂದು ಜನ ಎಳ್ಳು ಬೆಲ್ಲ ತಿಂದು ಬಾಹಿ ಸಿಹಿ ಮಾಡಿಕೊಳ್ಳುತ್ತಾರೆ. ಅಲ್ಲದೆ ಚಳಿಗಾಲದಲ್ಲಿ ಎಳ್ಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಕೂಡ ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ.

    ಈ ಬಾರಿ ಸಂಕ್ರಾಂತಿ ದಿನದಂದು ಮನೆಯಲ್ಲೇ ತಕ್ಷಣಕ್ಕೆ ಸುಲಭ ಮತ್ತು ಸರಳವಾಗಿ ಮನೆಯಲ್ಲಿಯೇ ಎಳ್ಳು ಚಿಕ್ಕಿ ಮಾಡಿ ಸವಿಯಿರಿ. ಇದು ಮುಖ್ಯವಾಗಿ ಚಿಕ್ಕ ಮಕ್ಕಳಿಗೆ ಮತ್ತು ದೊಡ್ಡವರಿಗೆ ಬಹಳ ಇಷ್ಟವಾದ ತಿನಿಸಾಗಿದೆ.

    ಎಳ್ಳು ಚಕ್ಕಿ ಮಾಡಲು ಬೇಕಾಗುವ ಸಾಮಾಗ್ರಿಗಳು :

    * ಬಿಳಿ ಎಳ್ಳು – ಒಂದು ಕಪ್
    * ಬೆಲ್ಲ – ಒಂದು ಕಪ್
    * ಏಲಕ್ಕಿ – ಎರಡು
    * ತುಪ್ಪ – ಒಂದು ಟೀ ಸ್ಪೂನ್

    ಎಳ್ಳು ಚಕ್ಕಿ ಮಾಡುವ ವಿಧಾನ:

    * ಮೊದಲಿಗೆ ಒಂದು ಪ್ಯಾನ್‍ಗೆ 1 ಕಪ್ ಬಿಳಿ ಎಳ್ಳನ್ನು ಹಾಕಿ 2 ರಿಂದ 3 ನಿಮಿಷ ಹುರಿಯಬೇಕು. ಬಳಿಕ ಫ್ರೈ ಮಾಡಿದ ಎಳ್ಳನ್ನು ಒಂದು ತಟ್ಟೆಗೆ ಹಾಕಬೇಕು.
    * ನಂತರ ಅದೇ ಪ್ಯಾನ್‍ಗೆ ಒಂದು ಕಪ್ ಪುಡಿ ಮಾಡಿದ ಬೆಲ್ಲವನ್ನು ಸುರಿದು ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೂ ಕುದಿಸಬೇಕು. ಎಷ್ಟು ಪ್ರಮಾಣದ ಎಳ್ಳನ್ನು ತೆಗೆದುಕೊಳ್ಳುತ್ತೀರೋ ಅಷ್ಟೇ ಪ್ರಮಾಣದ ಬೆಲ್ಲವನ್ನು ಎಳ್ಳು ಚಿಕ್ಕಿಗೆ ಬಳಸಬೇಕು.

    * ಬೆಲ್ಲ ಕರಗಿ ಪಾಕ ತಯಾರಾದ ನಂತರ ಕುಟ್ಟಿಕೊಂಡಿರುವ 2 ಏಲಕ್ಕಿ ಬೆರಸಬೇಕು.
    * ನಂತರ ಒಂದು ಟೀ ಸ್ಪೂನ್ ತುಪ್ಪವನ್ನು ಹಾಕಬೇಕು. ಬಳಿಕ ಸ್ಟವ್ ಆಫ್ ಮಾಡಿ ಹುರಿದಿಟ್ಟುಕೊಂಡಿದ್ದ ಎಳ್ಳನ್ನು ಬೆಲ್ಲದ ಪಾಕದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು.

    *ಬಟರ್ ಪ್ಲೇಟ್ ಅಥವಾ ಪ್ಲಾಸ್ಟಿಕ್ ಪೇಪರ್ ಮೇಲೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸವರಿ ಅದರ ಮೇಲೆ ಬಿಸಿಬಿಸಿಯಾದ ಎಳ್ಳು ಚಿಕ್ಕಿಯ ಮಿಶ್ರಣ ಹಾಕಬೇಕು.
    * ಬಳಿಕ ಒಂದು ಲಟ್ಟಣೆ ತೆಗೆದುಕೊಂಡು ಅದಕ್ಕೆ ತುಪ್ಪ ಅಥವಾ ಬೆಣ್ಣೆ ಸವರಿ ಎಳ್ಳು ಚಕ್ಕಿಯನ್ನು ತೆಳ್ಳಗೆ ಲಟ್ಟಿಸಿ ಹದಮಾಡಿಕೊಳ್ಳಬೇಕು. ಚಾಕು ತೆಗೆದುಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಎಳ್ಳು ಚಿಕ್ಕಿಯನ್ನು ಕಟ್ ಮಾಡಿ 10 ನಿಮಿಷಗಳ ನಂತರ ಅದನ್ನು ಹೊರತೆಗೆದುಕೊಂಡರೆ ಎಳ್ಳಿನ ಚಿಕ್ಕಿ ಸವಿಯಲು ಸಿದ್ದ.