Tag: ಎಳ್ಳು ಉಂಡೆ

  • ಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ

    ಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ

    ಸಿಹಿ ಅಡುಗೆ ಇದ್ದರೆ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ಬರುತ್ತದೆ. ನವರಾತ್ರಿ ಹಬ್ಬವನ್ನು 9 ದಿನ ಆಚರಣೆ ಮಾಡುವುದರಿಂದ ಪ್ರತಿ ದಿನ ಒಂದೊಂದು ಬಗೆಯ ಸಿಹಿ ಅಡುಗೆಯನ್ನು ಮಾಡುವುದು ಸಾಮಾನ್ಯ. ಎಳ್ಳು ಉಂಡೆ ಸರವಾಗಿ ಮಾಡುವ ರುಚಿಯಾದ ಅಡುಗೆಯಾಗಿದೆ. ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ನವರಾತ್ರಿ ಹಬ್ಬವನ್ನು ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ. 9 ದಿನ ಆಚರಿಸುವ ಈ ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ವಿವಿಧ ಸಿಹಿತಿಂಡಿಗಳನ್ನು ಮಾಡುತ್ತೇವೆ.

    ಬೇಕಾಗುವ ಸಾಮಗ್ರಿಗಳು:
    * ಬಿಳಿಎಳ್ಳು- 1 ಕಪ್
    * ಬೆಲ್ಲ- 1ಕಪ್
    * ತುಪ್ಪ- ಅರ್ಧ ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ಪಿಸ್ತಾ (ಹುರಿದು ಪುಡಿ ಮಾಡಿದ್ದು)- ಸ್ವಲ್ಪ


    ಮಾಡುವ ವಿಧಾನ:
    * ಎಳ್ಳುನ್ನು ಒಂದು ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೂ ಹಾಗೂ ಎಳ್ಳು ಕಂದು ಬಣ್ಣಕ್ಕೆ ಬರುವವರೆಗು ಹುರಿದು ಒಂದು ಕಡೆ ತೆಗೆದಿಟ್ಟುಕೊಳ್ಳಿ.
    * ಈಗ ಅದೇ ಪಾತ್ರೆಗೆ ತುಪ್ಪ ಹಾಗೂ ಬೆಲ್ಲ ಸೇರಿಸಿ ಕರಗಿಸಿ ಚೆನ್ನಾಗಿ ಮಿಶ್ರಣವನ್ನು ಮಾಡಬೇಕು.

    * ನಂತರ ಬೆಲ್ಲ ಇರುವ ಪಾತ್ರೆಗೆ ಹುರಿದ ಎಳ್ಳು, ಪಿಸ್ತಾ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿ ಉಂಡೆ ಮಾಡುವ ಹದಕ್ಕೆ ಬರುವರೆಗೂ ಬೇಯಿಸಿಕೊಳ್ಳಿ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?


    * ನಂತರ ಮೇಲೆ ಸ್ವಲ್ಪ ತುಪ್ಪ ಹಾಕಿ. ಅದನ್ನು ತಕ್ಷಣಕ್ಕೆ ಬೇಕಾದ ಆಕಾರಕ್ಕೆ ಉಂಡೆ ಮಾಡಿಕೊಳ್ಳಿ.
    * ಈಗ ರುಚಿಯಾದ ಎಳ್ಳು ಉಂಡೆ ಸವಿಯಲು ಸಿದ್ಧವಾಗುತ್ತದೆ. ಈ ಉಂಡೆಯನ್ನು ನೀವು 20 ದಿನ ಬೇಕಾದರು ಸಂಗ್ರಹಿಸಿ ಇಡಬಹುದಾಗಿದೆ. ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ