Tag: ಎಲ್ ಆರ್ ಶಿವರಾಮೇ ಗೌಡ

  • ದೇವರಾಜೇಗೌಡಗೆ ತಾಕತ್ತಿದ್ದರೆ ಆಡಿಯೋ ಬಿಡುಗಡೆ ಮಾಡಲಿ: ಶಿವರಾಮೇಗೌಡ

    ದೇವರಾಜೇಗೌಡಗೆ ತಾಕತ್ತಿದ್ದರೆ ಆಡಿಯೋ ಬಿಡುಗಡೆ ಮಾಡಲಿ: ಶಿವರಾಮೇಗೌಡ

    ಬೆಂಗಳೂರು: ಯಾವುದೆ ಆಮೀಷ ಒಡ್ಡಿಲ್ಲ‌. ಅವನಿಗೆ ತಾಕತ್ತಿದ್ದರೆ ಗಂಡಸು ಆಗಿದ್ದರೆ ಅವನು ಆಡಿಯೋ ಬಿಡುಗಡೆ ಮಾಡಲಿ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡಗೆ ಮಾಜಿ ಸಂಸದ ಎಲ್.‌ ಆರ್‌ ಶಿವರಾಮೇ ಗೌಡ (L.R Shivarame Gowda) ಸವಾಲೆಸೆದಿದ್ದಾರೆ.

    ದೇವರಾಜೇ ಗೌಡ (Devaraje Gowda) ತುರ್ತು ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆಗೈದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಎಸ್ ಐಟಿ ರಚನೆ ಆದ ದಿನ ದೇವರಾಜೇ ಗೌಡ ಬಂದು ನನ್ನ ಭೇಟಿ ಮಾಡಿದ. ಡಿ.ಕೆ ಅವರನ್ನ ಭೇಟಿ‌ ಮಾಡಿಸಿ ಅಂದ. ನಾನು ಡಿಕೆಯವರಿಗೆ ಹೇಳಿದಾಗ ಅವನು ಭೇಟಿ‌ ಮಾಡೋದು ಬೇಡ ಅಂದ್ರು‌. ಆಗ ಫೋನಲ್ಲಾದರು ಮಾತಾಡಿ ಅಂತ ನಾನೇ ಫೋನ್ ಮಾಡಿ ಕೊಟ್ಟೆ ಎರಡು ನಿಮಿಷ ಮಾತಾಡಿದರು‌ ಎಂದರು.

    ಅವನೇ ನನ್ನ ಹತ್ತಿರ ಹೇಳಿದ ಬಿಜೆಪಿ ನಾಯಕರ ಹತ್ತಿರ ಮಾತನಾಡಿದ್ದೇನೆ. ಅವರು ವೀಡಿಯೋ ಬಿಡಿ ಎಂದಿದ್ದಾರೆ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೆ ಅವರು ಬಿಡಿ ಅಂದ್ರು ಅದಕ್ಕೆ ಬಿಟ್ಟೆ ಅಂತ ಹೇಳಿದ್ದಾನೆ. ಸಿಬಿಐ ಬಿಟ್ಟು ಯಾವ ತನಿಖೆ ಬೇಕಾದರು ಮಾಡಲಿ. ಯಾವುದೇ ಭಯವಿಲ್ಲ. ಇದರ ಹಿಂದೆ ನನ್ನ ಪಾತ್ರವಾಗಲಿ ಡಿಕೆಶಿ ಪಾತ್ರವಾಗಲಿ ಇಲ್ಲಾ ಎಂದು ಮಾಜಿ ಸಂಸದರು ಸ್ಪಷ್ಟಪಡಿಸಿದರು.

    ಹಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾನೆ ಅಂತ ನನ್ನ ಅಭಿಪ್ರಾಯ. ನನ್ನ ಹತ್ತಿರ ನಿನ್ನೆ ಬಂದು ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದ ಊಟ ಮಾಡಿಕೊಂಡು ಹೋಗು ಅಂತ ಊಟ ಮಾಡಿಸಿ ಕಳುಹಿಸಿದೆ ಎಂದರು. ಇದನ್ನೂ ಓದಿ: ಬೆದರಿಕೆಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ- ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು

  • ಜೆಡಿಎಸ್‍ನಲ್ಲೇ ನನ್ನ ರಾಜಕೀಯ ಅಂತ್ಯ: ಶಿವರಾಮೇ ಗೌಡ

    ಜೆಡಿಎಸ್‍ನಲ್ಲೇ ನನ್ನ ರಾಜಕೀಯ ಅಂತ್ಯ: ಶಿವರಾಮೇ ಗೌಡ

    ಮಂಡ್ಯ: ನಾನು ಜೆಡಿಎಸ್ ಬಿಡಲ್ಲ, ಶಿವರಾಮೇಗೌಡನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾನಾಗಿಯೇ ಹೋಗಬೇಕೇ ಹೊರತು, ಯಾರೂ ನನ್ನ ಕರೆಯೋದಿಲ್ಲ. ಜೆಡಿಎಸ್ ನಲ್ಲೇ ನನ್ನ ರಾಜಕೀಯ ಅಂತ್ಯ ಎಂದು ಸಂಸದ ಎಲ್ ಆರ್ ಶಿವರಾಮೇ ಗೌಡ ಹೇಳಿದ್ದಾರೆ.

    ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ನನಗೆ ಯಾವ ಆಫರ್ ಸಹ ಬಂದಿಲ್ಲ. ಸೋಮವಾರ ಅನಿರೀಕ್ಷಿತವಾಗಿ ಬಿಜೆಪಿ, ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದೇನೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    ನನಗೆ ನಾಲ್ಕೂವರೆ ತಿಂಗಳ ಅಧಿಕಾರ ಸಾಕಾಗಿಲ್ಲ. ನನಗೆ 22 ವರ್ಷದಿಂದ ಅಧಿಕಾರ ಇರಲಿಲ್ಲ. ದೇವೇಗೌಡ, ಕುಮಾರಸ್ವಾಮಿ ಅಧಿಕಾರ ಕೊಟ್ಟಿದ್ದಾರೆ. ಕೆಲವರು ನನಗೆ ಅಧಿಕಾರ ಸಿಗದಂತೆ ತೊಂದರೆ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ರು.

    ನನಗೆ ಈ ಬಾರಿ ಟಿಕೆಟ್ ಕೊಡದಿರೋದಕ್ಕೆ ಬೇಕಾದಷ್ಟು ಕಾರಣಗಳಿವೆ. ನನಗಿಂತ ಭಾರೀ ಅಂತರದಲ್ಲಿ ನಿಖಿಲ್ ಗೆಲ್ತಾರೆ. ನಿಖಿಲ್ ಕುಮಾರಸ್ವಾಮಿಗೆ ವಿರೋಧ ಕೇಳಿ ಬರುತ್ತಿರುವ ವಿಚಾರದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ನಾನು ಚುನಾವಣೆಗೆ ನಿಂತಾಗ ನನ್ನ ವಿರುದ್ಧವೂ ಹಲವು ವಿರೋಧಗಳು ಕೇಳಿ ಬಂದಿತ್ತು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕಿದ್ರು ಶಿವರಾಮೇಗೌಡ!

    ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕಿದ್ರು ಶಿವರಾಮೇಗೌಡ!

    ಮಂಡ್ಯ: ಜಿಲ್ಲೆಯಲ್ಲಿ ಇದೀಗ ಕಣ್ಣೀರಿನ ಪಾಲಿಟಿಕ್ಸ್ ಆರಂಭವಾಗಿದೆ. ಮಂಡ್ಯ ಲೋಕಸಭಾ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡ ಅವರು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.

    ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಹಿಂದೆ ನಡೆದ ಪತ್ರಕರ್ತನ ಗಂಗಾಧರ ಮೂರ್ತಿ ಕೊಲೆ ಪ್ರಕರಣ ನೆನೆದು ಕಣ್ಣೀರು ಹಾಕಿದ್ದಾರೆ. ಪತ್ರಕರ್ತನ ಕೊಲೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಬಂದಿತ್ತು. ಆರೋಪ ಕೇಳಿ ಬಂದ ಬಳಿಕ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ದೇವರೇ ನನಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ನಿಮಗೆ ಗೊತ್ತು. ಬೇರೆಯವರಿಗೆ ಗೊತ್ತಿಲ್ಲ. ಆದರೆ ನಾನು ನಿರಪರಾಧಿ ಎಂಬುದು ಆನಂತರ ಸಾಬೀತಾಯ್ತು. ಆದರೂ ಕೂಡ ಈಗ ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಲೇ ಸೇರಿದ್ದ ಜನರ ಮುಂದೆ ಅತ್ತುಬಿಟ್ಟರು.

    ಇಂದು ಕುಮಾರಸ್ವಾಮಿ ಅವರು ಶಿವರಾಮೇ ಗೌಡ ಅವರಿಗೆ ಅಧಿಕಾರವಿಲ್ಲ, ಅವರಿಗೆ ಅಧಿಕಾರಿ ಕೊಡಿಸಬೇಕು ಅಂತ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿಕೊಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಯಾವತ್ತೂ ಯಾರ ಜೇಬಿಗೂ ಕೈ ಹಾಕಿಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ ಅಂತ ಅವರು ತಿಳಿಸಿದ್ರು.

    ಕುಡುಕನಲ್ಲಿ ಮನವಿ:
    ಶಿವರಾಮೇಗೌಡರು ಮಾತನಾಡುವಾಗ ಕುಡುಕನೊಬ್ಬ ಪದೇ ಪದೇ ಮಧ್ಯೆ ಮಾತನಾಡುತ್ತಿದ್ದನು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡರು ಕುಡುಕನಲ್ಲಿ, ನಿನ್ನ ದಮ್ಮಯ್ಯ ಕಣೋ ಕಾಲಿಗೆ ಬೀಳುತ್ತೇನೆ ಕುಳಿತುಕೋ.. ಅಂತ ಜೋರಾಗಿ ಗದರಲಾಗದೇ ಸುಮ್ಮನಿರುವಂತೆ ಬೇಡಿಕೊಂಡ ಪ್ರಸಂಗ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv