ಬೆಂಗಳೂರು: ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ (L R Shivarame Gowda) ಮನೆ ಮೇಲೆ ಮೊಟ್ಟೆ ದಾಳಿಗೆ ಯತ್ನ ನಡೆದಿದೆ.
ಪೆನ್ ಡ್ರೈವ್ ವಿಚಾರ ಮಾತನಾಡುವಾಗ ಮಾಜಿ ಸಂಸದರು ಜೆಡಿಎಸ್ ವರಿಷ್ಠರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಮೊಟ್ಟೆ ದಾಳಿಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.
ತಡರಾತ್ರಿ ಕಾರಿನಲ್ಲಿ ಬಂದ ಐದಾರು ಮಂದಿಯಿಂದ ಈ ಯತ್ನ ನಡೆದಿದೆ. ಪೊಲೀಸರು ಕಂಡು ಮನೆ ಮುಂದೆ ಮೊಟ್ಟೆ ಎಸೆದು ಪರಾರಿಯಾಗಿದ್ದಾರೆ. ಈ ನಡುವೆ ಪೊಲೀಸರ ಕಣ್ತಪ್ಪಿಸಿ ಅದಾಗಲೇ ಐದಾರು ಮೊಟ್ಟೆ ಎಸೆದಿದ್ದಾರೆ. ಇದನ್ನೂ ಓದಿ: ಮುಂಗಾರು ಪೂರ್ವದಲ್ಲೇ ಕಾವೇರಿಗೆ ಜೀವಕಳೆ; KRS ಒಳಹರಿವು ಹೆಚ್ಚಳ
ಸದ್ಯ ಮೊಟ್ಟೆ ಎಸೆಯಲು ಯತ್ನಿಸಿ ಪರಾರಿಯಾದವರಿಗಾಗಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಮೊಟ್ಟೆ ಎಸೆಯಲು ಯತ್ನಿಸಿದವರಿಗೆ ಬಲೆ ಬೀಸಲಾಗಿದೆ.
ಮೊಟ್ಟೆ ಎಸೆದು ಹೋದ ಬಳಿಕ ಪೊಲೀಸರು ಎಲ್ ಆರ್ ಎಸ್ ಮನೆ ರಸ್ತೆ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ (Prajwal Revanna Pendrive Case) ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ವಕೀಲ ದೇವರಾಜೇಗೌಡ ಮತ್ತು ಶಿವರಾಮೇಗೌಡ ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ.
ಕುಮಾರಸ್ವಾಮಿ ಹೆಸರೇಳುವಂತೆ ಶಿವರಾಮೇಗೌಡ (Shivarame Gowda) ಹೇಳಿದ್ದಾರೆನ್ನಲಾದ ಆಡಿಯೋ ಸ್ಫೋಟಗೊಂಡಿದ್ದು, ಇದೀಗ ಈ ಆಡಿಯೋ ಮತ್ತೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಶಿವರಾಮೇಗೌಡ-ದೇವರಾಜೇಗೌಡ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ದೇವೇಗೌಡರ ಬಗ್ಗೆಯೂ ಶಿವರಾಮೇಗೌಡ ಲಘು ಮಾತುಗಳನ್ನಾಡಿದ್ದಾರೆ.
ಆಡಿಯೋದಲ್ಲೇನಿದೆ..?: ದೇವರಾಜೇಗೌಡರ ಜೊತೆ ಮಾತನಾಡಿರುವ ಶಿವರಾಮೇಗೌಡ, ಕುಮಾರಸ್ವಾಮಿನೇ ಬಿಟ್ಟಿದ್ದಾನೆ ಅಂತಾನೇ ಹೇಳಿ. ಕುಮಾರಸ್ವಾಮಿಗೆ ಅವರ ಮಗ ಮುಂದಕ್ಕೆ ಬರಬೇಕೆಂಬ ಆಸೆ ಇದೆ, ಇವನು ಮುಂದಕ್ಕೆ ಬಂದುಬಟ್ಟನ್ನಲ್ಲ ಅಂತಾ, ಅದಕ್ಕೆ ಮಾಡಿದ್ದಾನೆ ಅಂತಾ ಹೇಳಿ. ದೇವೇಗೌಡ ಹಾಗೂ ದೇವೇಗೌಡ ಮಕ್ಕಳು ಏನು ಕಡಿಮೆ ಅಂದುಕೊಳ್ಳಬೇಡಿ. ಇನ್ನು ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲ್ಲಿಲ್ವಲಾ..?.ಇನ್ನೇನು ವಿಡಿಯೋ ಇದೆ. ಡಿಕೆ ಮಾತನಾಡಿದ್ರು ಬೆಳಗ್ಗೆ, ನಿಮ್ಮ ಹತ್ತಿರ ಏನೇನಿದೆ ನಮಗೆ ಕೊಡಿ ನಿವು ತಲೆನೆ ಕೆಡಿಸಿಕೊಳ್ಳಬೇಡಿ. ಅವರನ್ನ ಬಲಿ ಹಾಕೋಕೆ ಸರ್ಕಾರದಿಂದಲೇ ತೀರ್ಮಾನವಾಗಿದೆ ಎಂದಿದ್ದಾರೆ.
ನೀನೇನು ಪೆನ್ಡ್ರೈವ್‍ನ ನಾಗಮಂಗದಲ್ಲೋ, ಹಾಸನದಲ್ಲಿ ಹಂಚಿಲ್ಲ.. ಹಂಚಿದ್ರೂ ತಪ್ಪೇನಿದೆ ಹೇಳಿ. ನೀವ್ ಲಾಯರ್ ಅಲ್ವೇನಲ್ವೆನ್ರಿ..ಅದು ಏನು..? ಏನು ಆಗಲ್ಲ ಎಂದು ಶಿವರಾಮೇಗೌಡ ಹೇಳಿದಾಗ, ಅಣ್ಣ ಕಾನೂನು ಪ್ರಕಾರ ಶಿಕ್ಷೆ ಅಲ್ವೇನಣ್ಣ. ಹೆಣ್ಮಕ್ಕಳ ಮಾಣ ಮರ್ಯಾದೆ ಅಣ್ಣ. ಶೀಲದ ಬಗ್ಗೆ ನಾವೂ ಯೋಚನೆ ಮಾಡಬೇಕಲ್ವ ಎಂದು ದೇವರಾಜೇಗೌಡ ಹೇಳುತ್ತಾರೆ. ಈ ವೇಳೆ ಶಿವರಾಮೇಗೌಡ, ಅದರ ಬಗ್ಗೆ ನೀವೇಕೆ ತಲೆಕೆಡಿಸಿಕೊಳ್ತೀರಿ. ಅಮಿತ್ ಶಾ ಚನ್ನೈನಲ್ಲಿ ಹೇಳಿದ್ದಾರಲ್ಲ, ಹೆಣ್ಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ ಅಂತಾ ಎಂದಿದ್ದಾರೆ.
ಈ ಹಿಂದೆಯೋ ಆಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಎಸ್‍ಐಟಿಯವರು ಮಾಹಿತಿ ಕೇಳಿದ್ರೆ, ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಎಲ್ ಆರ್ ಶಿವರಾಮೇಗೌಡ, ದೇವರಾಜೆಗೌಡ ಗೌಡಗೆ ಹೇಳುತ್ತಾರೆ. ಈ ಆಡಿಯೋ ಇದೀಗ ಭಾರೀ ಸದ್ದು ಮಾಡಿತ್ತು.
ಬೆಂಗಳೂರು: ಪೆನ್‌ಡ್ರೈವ್‌ಗಳನ್ನ ದೇವರಾಜೇಗೌಡ (Devarajegowda), ಕಾರ್ತಿಕ್ ಅವರೇ ಮಾರಾಟಕ್ಕಿಟ್ಟಿದ್ದರು. ನಾನು ಅವನನ್ನ ಡಿಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿಸಿ ತಪ್ಪು ಮಾಡಿದೆ ಎಂಬ ನೋವು ಕಾಡುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (LR Shivaramegowda) ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸಲ್ಲಿ (Pen Drive Case) ಡಿಸಿಎಂ ಡಿಕೆಶಿ 100 ಕೋಟಿ ಆಫರ್ ನೀಡಿದ್ದರು. ಆಫರ್ ತಂದವರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಎಂಬ ವಕೀಲ ದೇವರಾಜೇಗೌಡ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಡಿ.ಕೆ ಶಿವಕುಮಾರ್ (DK Shivakumar) ಅವರ ಜೊತೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ನನಗೂ ಪೆನ್‌ಡ್ರೈವ್‌ಗೂ ಸಂಬಂಧ ಇಲ್ಲ. ಗೆಸ್ಟ್ ಅಪಿಯರೆನ್ಸ್ ತರ 2 ದಿನ ನಾನು ಸಿಲುಕಿದ್ದೆ, ಆದರೆ ಮೊನ್ನೆ ದಿನ ಏನೋ ಬುಲ್ಲೆಟ್ ಹೊಡೆದಿದ್ದಾನೆ. ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಮಾತನಾಡಬೇಕು ಅಂದಿರಲಿಲ್ಲ ಇವನೇ ಮಾತನಾಡಬೇಕು ಅಂದ ಅವರು ಹಲೋ ದೇವರಾಜೇಗೌಡ ಅಂದಿದ್ದರು ಅಷ್ಟೇ . ಈಗ ಡಿ.ಕೆ ಶಿವಕುಮಾರ್ ಅವರ ಜೊತೆಗೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್. ಮುಂದಾದರೂ ಅವನ ಜೊತೆ ವ್ಯವಹಾರ ಮಾಡೋರು ಜಾಗರೂಕರಾಗಿರಿ. ದೇವರಾಜೇಗೌಡ ಬರೀ ಫೋನ್‌ನಲ್ಲಿ ರೆಕಾರ್ಡ್ ಮಾಡಲ್ಲ, ಅವನ ಬಾಡಿನೇ ರೆಕಾರ್ಡ್ ಮಾಡುತ್ತೆ. ಆ ರೀತಿ ವ್ಯವಸ್ಥೆ ಇರುವ ಮನುಷ್ಯ. ಅವನು ಒಳಗೆ ಹೋದಾಗ, ನಂತರ ಸದ್ಯ ಹುಚ್ಚು ನಾಯಿ ಒಳಗೆ ಹೋಯ್ತಲ್ಲ ಅಂತ ತಿರುಪತಿ ತಿಮ್ಮಪ್ಪನಿಗೆ ಕೈಮುಗಿದೆ ಎಂದು ಏಕವಚದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಪೆನ್‌ಡ್ರೈವ್ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಲಿ. ಈ ಪೆನ್‌ಡ್ರೈವ್‌ಗಳನ್ನ ವ್ಯಾಪಾರಕ್ಕೆ ಇಟ್ಟುಕೊಂಡಿದ್ದೇ ದೇವರಾಜೇಗೌಡ ಮತ್ತು ಕಾರ್ತಿಕ್. ಪೊಲೀಸ್ ಭಾಷೆಯಲ್ಲಿ ಕೇಳಿದರೆ ಎಲ್ಲಾ ಹೊರಗೆ ಬರುತ್ತೆ. ನನಗೂ, ಡಿ.ಕೆ ಶಿವಕುಮಾರ್‌ಗೂ ಈ ಪ್ರಕರಣಕ್ಕೆ ಯಾವುದೇ ಸಂಬಧ ಇಲ್ಲ. ನಾನು ಬೌರಿಂಗ್ ಕ್ಲಬ್‌ಗೆ ಹೋಗಿಯೇ 4 ವರ್ಷಗಳಾಗಿವೆ. ಅವನು ಬೌರಿಂಗ್ ಕ್ಲಬ್‌ನಲ್ಲಿ ಕೂತಿದ್ದ ಜಾಗದಲ್ಲಿ ಮೊದಲು ಔಷಧಿ ಸಿಂಪಡಿಸಬೇಕು ಎಂದು ಲೇವಡಿ ಮಾಡಿದ್ದಾರೆ.
ಒಕ್ಕಲಿಗ ನಾಯಕತ್ವ ವಿಚಾರ ಎಳೆಯೋದು ಬೇಡ:
ಇದೇ ವೇಳೆ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪೆನ್‌ಡ್ರೈವ್ ಪ್ರಕರಣದ ಮಧ್ಯೆ ಒಕ್ಕಲಿಗ ನಾಯಕತ್ವದ ವಿಚಾರವನ್ನ ಎಳೆದು ತರೋದು ಬೇಡ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಿಗೆ ಏನೇನು ಮಾಹಿತಿ ಇದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಒಕ್ಕಲಿಗ ನಾಯಕತ್ವ ಇದರ ಮಧ್ಯೆ ತರುವುದು ಸರಿಯಲ್ಲ. ಜೆಡಿಎಸ್‌ನಲ್ಲಿ ಅಧಿಕಾರನೂ ಕೊಡ್ತಾರೆ ಹಾಗೆಯೆ ರುಬ್ಬಿ ಕಳುಹಿಸ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಮಂಡ್ಯ: ಚುನಾವಣೆ ಬಳಿಕ ಮಂಡ್ಯದಲ್ಲಿ ಆಣೆ ಪ್ರಮಾಣ ಪಾಲಿಟಿಕ್ಸ್ ಮುಂದುವರಿದಿದ್ದು, ನಾಗಮಂಗಲ ಕ್ಷೇತ್ರದ ಜೆಡಿಎಸ್ (JDS) ಪರಾಜಿತ ಅಭ್ಯರ್ಥಿ ಸುರೇಶ್ ಗೌಡ (Suresh Gowda) ರನ್ನು ಆಣೆ ಪ್ರಮಾಣಕ್ಕೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಆಹ್ವಾನಿಸಿದ್ದಾರೆ.
ಕಾಂಗ್ರೆಸ್ (Congress) ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ನನ್ನ ಸೋಲು ಆಯ್ತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರಿಂದ ಸುರೇಶ್ ಗೌಡರನ್ನ ಪ್ರಮಾಣಕ್ಕೆ ಎಲ್.ಆರ್.ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ. ನಾಗಮಂಗಲ ಕ್ಷೇತ್ರ (Nagamangala Constituency) ದಲ್ಲಿ ಜೆಡಿಎಸ್ ಸೋಲಿಸೋದಕ್ಕೆ ಶಿವರಾಮೇಗೌಡ ಒಳ ಒಪ್ಪಂದ ಮಾಡಿಕೊಂಡಿದ್ರು, ಮೂರು ವರ್ಷದಿಂದ ಕುತಂತ್ರ ನಡೆಯುತ್ತಿತ್ತು. ನನ್ನನ್ನ ಸೋಲಿಸೋದಕ್ಕಾಗಿಯೇ ಶಿವರಾಮೇಗೌಡ್ರು ಪತ್ನಿಯನ್ನ ಬಿಜೆಪಿಯಿಂದ ಕಣಕ್ಕಿಳಿಸಿ ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಲಾಯಿತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರು.
ಸುರೇಶ್ ಗೌಡ ಆರೋಪಕ್ಕೆ ಎಲ್.ಆರ್.ಶಿವರಾಮೇಗೌಡ ಕೆಂಡಾಮಂಡಲವಾಗಿದ್ದು, ನಾನು ನಮ್ಮ ಅಪ್ಪನಿಗೆ ಹುಟ್ಟಿರೋದು, ಸುರೇಶ್ ಗೌಡನ ಅಪ್ಪನಿಗಲ್ಲ. ಗೆಲ್ಲೋದಕ್ಕಾಗಿಯೇ ನನ್ನ ಪತ್ನಿಯನ್ನ ಚುನಾವಣೆಯಲ್ಲಿ ಬಿಜೆಪಿ (BJP) ಯಿಂದ ಸ್ಪರ್ಧೆ ಮಾಡಿಸಿದ್ದೆ. ಆದರೆ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಶಿವರಾಮೇಗೌಡ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?
ಜೆಡಿಎಸ್ ಸೋಲಿಸಲು ನಾನು ಚಲುವರಾಯಸ್ವಾಮಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ ಆರೋಪ ಮಾಡಿರುವ ಸುರೇಶ್ ಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ. ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಪ್ರಮಾಣ ಮಾಡುತ್ತೇನೆ. ಅವರೇ ದಿನಾಂಕವನ್ನ ನಿಗದಿ ಮಾಡಲಿ, ಇಲ್ಲ ನನಗೆ ಹೇಳಿದ್ರೂ ಡೇಟ್ ಫಿಕ್ಸ್ ಮಾಡ್ತೀನಿ. ತಾಕತ್ತಿದ್ರೆ ಆಣೆ ಪ್ರಮಾಣಕ್ಕೆ ಬರಲಿ ಎಂದು ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ.
ಬೆಂಗಳೂರು: ಇನ್ನೂ ಎರಡು, ಮೂರು ದಿನಗಳಲ್ಲಿ ಬಿಜೆಪಿ (BJP) ಸೇರುತ್ತೇನೆ. ಮಂಡ್ಯದಲ್ಲಿ (Mandya) ಇನ್ಮುಂದೆ ಮೂರನೇ ಆಟ ಶುರುವಾಗುತ್ತದೆ ಎಂದು ಮಂಡ್ಯದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ( L.R Shivarame gowda) ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಸೋಲಿಸುವ ಅವಕಾಶ ಇರುವುದು ನನ್ನೊಬ್ಬನಿಗೇ ಮಾತ್ರ. ಕ್ಷೇತ್ರದಲ್ಲಿ ನನಗೆ ನನ್ನದೇ ಆದಂತಹ ಮತಗಳು ಇವೆ. ಮಂಡ್ಯದಲ್ಲಿ 7ಕ್ಕೆ 7 ಸೀಟು ಗೆಲ್ಲಿಸಲು ಪಣ ತೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಬಿಜೆಪಿಯ ಎಲ್ಲಾ ನಾಯಕರ ಜೊತೆಗೆ ಚರ್ಚೆ ಮಾಡಿದ್ದೇನೆ. ನನಗೆ ಒಂದು ರಾಷ್ಟ್ರೀಯ ಪಕ್ಷದ ಶಕ್ತಿ ಬೇಕಾಗಿತ್ತು. ಮಂಡ್ಯದಲ್ಲಿ ಬಿಜೆಪಿಯ ಶಕ್ತಿ ಸ್ವಲ್ಪ ಕಡಿಮೆ ಇತ್ತು. ಆದರೆ ರಾಷ್ಟ್ರೀಯ ನಾಯಕರು ಅಲ್ಲಿ ಪಕ್ಷ ಕಟ್ಟುವ ಇಚ್ಛೆ ಪಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಮುಟ್ಟಿ ನೋಡಿಕೊಳ್ಳಬೇಕು ಆ ರೀತಿಯಲ್ಲಿ ಮಂಡ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಮಂಡ್ಯದ ಸ್ವಾಭಿಮಾನ ಅಮಿತ್ ಶಾ ಕಾಲು ಕೆಳಗೆ ಹೋಗಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಗೆ ಅಮಿತ್ ಶಾ ಜೊತೆ ಹೋದಾಗ ಅವರಿಗೆ ಅವರ ಪಾದ ನೆನಪು ಆಗಲಿಲ್ಲವೇ? ನರೇಂದ್ರ ಮೋದಿಯವರು ದೇವೇಗೌಡರನ್ನು ಅಷ್ಟೊಂದು ಗೌರವಯುತವಾಗಿ ಕಂಡಿದ್ದಾರೆ. ದೇವೇಗೌಡರು ಅಂತವರು ನರೇಂದ್ರ ಮೋದಿ, ಅಮಿತ್ ಶಾ ಮೇಲೆ ಪ್ರೀತಿ ಇಟ್ಕೊಂಡಿದ್ದಾರೆ. ಅಂತಹವರ ಕಾಲು ಕೆಳಗೆ ಬಿದ್ದಿದ್ದಾರೆ ಎಂದು ಯಾಕೆ ಅವರು ಹೇಳುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ಕಾಲಿಗೆ ಬಿದ್ದಿದ್ದಾರೆ ಅಂದರೆ ಅದು ಲೆಕ್ಕಕ್ಕೆ ಇಲ್ವಾ? ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವುದೇ ಸಂದರ್ಭದಲ್ಲೂ ಮಂಡ್ಯ ಜನರು ಅವರ ಜೊತೆಗೆ ಇರುತಾರೆ ಎಂಬುದನ್ನು ಅವರು ಬಿಡಬೇಕು. ಈ ಸಾರಿ ಅವರು ಮಂಡ್ಯದಲ್ಲಿ 7ಕ್ಕೆ 7 ಸ್ಥಾನ ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮೂರನೇ ಬಾರಿಗೆ ಛತ್ರಪತಿ ಶಿವಾಜಿ ಪ್ರತಿಮೆಗೆ ಎಂಇಎಸ್‌ನಿಂದ ಪೂಜೆ
ಚಲುವರಾಯಸ್ವಾಮಿಯನ್ನು ಸೋಲಿಸಲು ನನ್ನನ್ನು ಜೆಡಿಎಸ್‍ಗೆ ಕರೆದುಕೊಂಡು ಬಂದರು. ಆ ಮೇಲೆ 5 ತಿಂಗಳಿಗೆ ನನ್ನ ಸಂಸದನನ್ನಾಗಿ ಮಾಡಿ ಸಾಲಗಾರನನ್ನಾಗಿ ಮಾಡಿದರು. ಆಮೇಲೆ ಪಾರ್ಟಿಯಲ್ಲಿ ನನ್ನನ್ನು ಏನು ಅಂತಾ ನೋಡಿಲ್ಲ. ಪಾರ್ಟಿಯಿಂದ ಹೊರಗೆ ಹಾಕಿ ಆಮೇಲೆ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಕುಮಾರಸ್ವಾಮಿ ವಿರುದ್ಧ ಎಲ್.ಆರ್ ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಡಿಕೆಶಿ ಕರ್ನಾಟಕದ ಇತಿಹಾಸದ ಕಥೆ ಬರೆಯಲು ತಿಹಾರ್ ಜೈಲಿಗೆ ಹೋದ್ರಾ? – ಕಟೀಲ್ ಟೀಕೆ
ಮಂಡ್ಯ: ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಸಹಾನೂಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿಚಾರವಾಗಿ ಹೆಚ್ಚು ಮಾತನಾಡಬಾರದು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಮೂಲದಿಂದ ಬೆಳೆದು ಬಂದವರು. ಸಿದ್ದರಾಮಯ್ಯ ಅವರಿಗೆ ಸಿಟ್ಟು ಜಾಸ್ತಿ, ನಮ್ಮ ಕುಮಾರಸ್ವಾಮಿ ಅವರು ಸುಮ್ಮನೆ ಇರದೇ ಜಾಡಿಸಿ ಬಿಡುತ್ತಾರೆ. ಅಣ್ಣ ತಮ್ಮಂದಿರ ಜಗಳದಂತೆ ಇಬ್ಬರ ಜಗಳ ನಡೆಯುತ್ತಲೇ ಇರುತ್ತದೆ. ಸಿದ್ದರಾಮಯ್ಯ ಒಳ್ಳೆಯ ವಾಗ್ಮಿ, ಜನಪರ ಆಡಳಿತ ಕೊಡುವ ಶಕ್ತಿ ಇರುವ ಮನುಷ್ಯ. ನಮ್ಮ ಜೆಡಿಎಸ್ ಬಗ್ಗೆ ಅವರಿಗೆ ಸಾಫ್ಟ್ ಕಾರ್ನರ್ ಇರಬೇಕು. ಉಂಡ ಮನೆ, ಬೆಳೆದ ಮನೆ ಇವೆಲ್ಲನ್ನು ನೋಡಿಕೊಳ್ಳಬೇಕು. ಹಾಗಾಗಿ ಜೆಡಿಎಸ್ ಬಗ್ಗೆ ಸಹಾನುಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ವಿಚಾರದಲ್ಲಿ ಹೆಚ್ಚಿಗೆ ಮಾತನಾಡಬಾರದು ಎಂದು ಇಬ್ಬರು ಮಾಜಿಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ
ಎರಡು ರಾಷ್ಟ್ರೀಯ ಪಕ್ಷಗಳು ದೊಂಬರಾಟದಲ್ಲಿ ಮುಳುಗೋಗಿವೆ. ಮೇ ವೇಳೆಗೆ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಕಾಂಗ್ರೆಸ್‍ನಿಂದ ಬಿಜೆಪಿಗೆ 15 ಮಂದಿ ಬರುತ್ತಾರೆ ಅಂತ ಬೆಳಗಾವಿ ಸಾಹುಕಾರರು ಹೇಳುತ್ತಾರೆ. ಬಿಜೆಪಿಯಿಂದ ಕಾಂಗ್ರೆಸ್‍ಗೆ 25 ಮಂದಿ ಬರುತ್ತಾರೆ ಎನ್ನುವುದನ್ನು ಸಹ ನೋಡಿದ್ದೇವಿ. ಯಾರ್ಯಾರು ಯಾವ ಯಾವ ಪಕ್ಷಕ್ಕೆ ಹೋಗುತ್ತಾರೆ ಅನ್ನೋದು ಇನ್ನು 6 ತಿಂಗಳು ಗೊತ್ತಾಗಲ್ಲ. 6 ತಿಂಗಳ ಬಳಿಕ ಹೋಗುವವರು ಬರುವವರು ಗೊತ್ತಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು
ಕಾಂಗ್ರೆಸ್, ಜೆಡಿಎಸ್‍ನಿಂದ ವ್ಯಾಪಾರ ಮಾಡಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ವ್ಯಾಪಾರ ಮುಗಿದ ಮೇಲೆ ಏನ್ ಮಾಡುತ್ತಾರೆ ನೋಡಬೇಕು. ಮೇ ವೇಳೆಗೆ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ. ಬಿಜೆಪಿಯವರು ಹೈಜಾಕರ್ ಸಿಸ್ಟಮ್ ಇದ್ದಂಗೆ, ಯಾರನ್ನು ಬೇಕಾದರೂ ಹೈಜಾಕ್ ಮಾಡುತ್ತಾರೆ. ಇಂಡಿಯಾದ ಜನರನ್ನೇ ಹೈಜಾಕ್ ಮಾಡಿದ್ದಾರೆ. ನರೇಂದ್ರ ಮೋದಿಗೆ ಇಂಡಿಯಾ ಜನರನ್ನು ಹೇಗೆ ಮಾರ್ಕೆಟ್ ಮಾಡಬೇಕು ಅಂತ ಫಸ್ಟ್ ಲಾಸ್ ಆಗೆ ತಿಳಿದುಕೊಂಡಿದ್ದಾರೆ. ಬಿಜೆಪಿಯಲ್ಲಿ ಒಳಗಿನಿಂದ ಒಳಗೆ ಅಲ್ಲೋಲ, ಕಲ್ಲೋಲಗಳು ನಡೆಯುತ್ತಿವೆ. ಅದನ್ನು ಮುಚ್ಚಿಕೊಳ್ಳಲು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಏನು ಎನ್ನುವುದು ತಿಳಿಯುತ್ತದೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬಾರದಿತ್ತು ಎಂದು ತಿಳಿಸಿದ್ದಾರೆ.
ಬೆಂಗಳೂರು: ಪದ್ಮನಾಭನಗರದಲ್ಲಿ ಸಚಿವ ಆರ್.ಅಶೋಕ್ ಎದುರು ಪರಾಜಿತಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಪುತ್ರ ಚೇತನ್‍ಗೌಡ ಇದೀಗ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ.
ಚೇತನ್ ಗೌಡ ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ ಅವರ ಪುತ್ರರಾಗಿದ್ದು, ಜೆಡಿಎಸ್‍ನಿಂದ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದಾರೆ. ಪದ್ಮನಾಭನಗರ ಎಂಎಲ್‍ಎ ಚುನಾವಣೆಯಲ್ಲಿ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಚೇತನ್ ಸೋಲು ಕಂಡಿದ್ದರು. ರಾಜಕೀಯ ಭವಿಷ್ಯಕ್ಕಾಗಿ ಇದೀಗ ಜಿಲ್ಲಾ ಪಂಚಾಯತ್‍ನಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದ ಬಿಂಡಿಗನವಿಲೆ ಜಿ.ಪಂ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತಯಾರಿ ಆರಂಭಿಸಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯದಂತೆ ಚೇತನ್ ಜಿಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ. ಕೈ ನಾಯಕರನ್ನ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಚೇತನ್ ರಾಜೀನಾಮೆ ನೀಡಿದ್ದಾನೆ, ಈಗಾಗಲೇ JDS ಪಕ್ಷ ಸೇರ್ಪಡೆಗೆ ವರಿಷ್ಠರ ಸಮ್ಮತಿ ಸಿಕ್ಕಿದೆ. ಕೆಲ ದಿನಗಳಲ್ಲಿ ಮಂಡ್ಯ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗುತ್ತೇನೆ. ತಂದೆ ಮಗ ಬೇರೆ ಬೇರೆ ಪಕ್ಷ ಎಂಬ ಟೀಕೆಗಳಿದ್ದವು. ತಂದೆಯ ಮಾರ್ಗದರ್ಶನದಂತೆ ನಡೆಯಲು ಜೆಡಿಎಸ್ ಸೇರಿದ್ದೇನೆ. ವರಿಷ್ಠರ ಆಶೀರ್ವಾದ ಪಡೆದು ಜಿಲ್ಲಾ ಪಂಚಾಯತ್‍ಗೆ ಸ್ಪರ್ಧಿಸುತ್ತೇನೆ ಎಂದು ಚೇತನ್ ಹೇಳಿದ್ದಾರೆ. ಇದನ್ನೂ ಓದಿ: ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!
ಈ ಮೂಲಕ ಮಗನನ್ನ ಜೆಡಿಎಸ್‍ಗೆ ಕರೆತಂದಿರುವ ಶಿವರಾಮೇಗೌಡ ನಾಗಮಂಗಲ ಕ್ಷೇತ್ರದ ಎಂಎಲ್‍ಎ ಟಿಕೆಟ್ ಆಕಾಂಕ್ಷಿ ಸಹ ಆಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆ ಇದೆ. ನಾನು ಸ್ಪರ್ಧೆ ಮಾಡಿದ್ರೆ ಹಾಲಿ ಶಾಸಕ ಸುರೇಶ್‍ಗೌಡರನ್ನ ಮನೆಗೆ ಕಳುಹಿಸಲ್ಲ, ಅವರಿಗೆ ನನಗಿಂತ ಹೆಚ್ಚು ಭಾಷೆ ಗೊತ್ತಿದೆ. ಹಾಗಾಗಿ ಅವರನ್ನ ಲೋಕಸಭೆಗೆ ಪ್ರಮೋಷನ್ ಮಾಡೋಣ, ನಾನು ಅಥವಾ ಎಂಎಲ್‍ಸಿ ಅಪ್ಪಾಜಿಗೌಡ ಅಭ್ಯರ್ಥಿಯಾಗುತ್ತೇವೆ ಎಂದು ನಾಗಮಂಗಲದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ. ಇದನ್ನೂ ಓದಿ:ಪಂಜ್‍ಶೀರ್ ವಶಕ್ಕೆ ಪಡೆದ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು!
ಮಂಡ್ಯ: ಸ್ಯಾಂಡಲ್‍ವುಡ್ ಅಥವಾ ಬೆಂಗಳೂರಿಗೆ ಮಾತ್ರ ಡ್ರಗ್ಸ್ ದಂಧೆ ಸಿಮೀತವಾಗಿಲ್ಲ. ಡ್ರಗ್ಸ್ ದಂಧೆ ಗ್ರಾಮೀಣ ಭಾಗಗಳಿಗೆ ತಲುಪಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲೂ ಡ್ರಗ್ಸ್ ದೊರೆಯತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಶಿವರಾಮೇಗೌಡ, ಡ್ರಗ್ಸ್ ಮಾಫಿಯಾದಲ್ಲಿ ಬೆಂಗಳೂರು ಹಾಗೂ ಸ್ಯಾಂಡಲ್‍ವುಡ್ ಒಂದು ಕಡೆಯಾದ್ರೆ, ಗ್ರಾಮೀಣ ಭಾಗ ಇನ್ನೊಂದು ಕಡೆಯಾಗಿದೆ. ಗ್ರಾಮೀಣ ಭಾಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಯುವಕರು ಇದರಿಂದ ಹಾಳಾಗುತ್ತಿದ್ದಾರೆ. ಇದೆಲ್ಲವನ್ನು ಕಂಡರೂ ಕಾಣದಂತೆ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೆ. ನಾಗಮಂಗಲದಲ್ಲೂ ಡ್ರಗ್ಸ್ ಮಾರಾಟ ಜೋರಾಗಿ ನಡೆಯುತ್ತಿದೆ ಎಂದಿದ್ದಾರೆ.
ಸ್ಯಾಂಡಲ್‍ವುಡ್ ಈ ಮಟ್ಟಕ್ಕೆ ಆಗಿರೋದು ದುರ್ದೈವದ ಸಂಗತಿಯಾಗಿದೆ. ಈ ಹಿಂದೆ ಮಹಾನ್ ನಟರು ಇದ್ದ ಸ್ಯಾಂಡಲ್‍ವುಡ್‍ನಲ್ಲಿ ಈ ರೀತಿಯ ಚಟುವಟಿಕೆಗಳು ನಡೆದಿರೋದು ನಿಜಕ್ಕೂ ಬೇಸರದ ಸಂಗತಿ. ಬೆಂಗಳೂರಿನ ಕಲ್ಯಾಣ ನಗರದ ನನ್ನ ಶಾಲೆಯ ರಸ್ತೆಯಲ್ಲಿ ನೈಜೀರಿಯಾ, ಸೌಥ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದ್ರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಡ್ರಗ್ಸ್ ದಂಧೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಾತ್ರವಲ್ಲ ಕಳೆದ 20 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ಆದ್ರೆ ಇದೀಗ ಹಂತ ಹಂತವಾಗಿ ದೊಡ್ಡ ಪ್ರಮಾಣಕ್ಕೆ ಈ ದಂಧೆ ವ್ಯಾಪಿಸಿದೆ. ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲವಿದೆ. ಪ್ರಭಾವಿಗಳ ಬೆಂಬಲದಿಂದ ಇಷ್ಟರ ಮಟ್ಟಿಗೆ ಈ ದಂಧೆ ವ್ಯಾಪಿಸಿದೆ. ಇದಲ್ಲದೇ ಗೋವಾ, ಶ್ರೀಲಂಕಾಗಳಿಗೆ ಕರೆದುಕೊಂಡು ಹೋಗಿ ಇಸ್ಪೀಟ್ ಆಟ ಆಡಿಸಲಾಗುತ್ತಿದೆ ಹಾಗೂ ತೋಟದ ಮನೆಗಳಲ್ಲಿ ರೇವ್ ಪಾರ್ಟಿಗಳು ನಡೆಯುತ್ತಿವೆ. ಇಂತಹ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮವಹಿಸಬೇಕಾಗಿದೆ ಎಂದು ಶಿವರಾಮೇಗೌಡ ಆಗ್ರಹಿಸಿದ್ದಾರೆ.
ಮಂಡ್ಯ: ನಟಿ ಸುಮಲತಾ ಗೌಡ್ತಿ ಅಲ್ಲ ಎಂಬ ಎಂಎಲ್‍ಸಿ ಕೆ.ಟಿ ಶ್ರೀಕಂಠೇಗೌಡ ಅವರ ಹೇಳಿಕೆ ಸದ್ಯ ಅಂಬರೀಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಜೆಡಿಎಸ್ ಪಕ್ಷದ ವಿರುದ್ಧ ಅಂಬಿ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.
ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ ಈಗಾಗಲೇ ಮಂಡ್ಯದಲ್ಲಿ ಅಂಬಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಲ್ಲದೆ ಕಳೆದ ಎರಡು ದಿನಗಳಿಂದ ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ ಅಂಬಿ ಅಭಿಮಾನಿಗಳು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೂಡ ಮಾಡಿದ್ದಾರೆ. ಈ ಪ್ರತಿಭಟನೆ ಹಾಗೂ ಗಲಾಟೆಗಳ ಬೆನ್ನಲ್ಲೇ ಮಂಡ್ಯದಲ್ಲಿ ಅಂಬರೀಶ್ ಅವರ ಅಭಿಮಾನಿಯೋರ್ವ ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ 5 ನಿಮಿಷ 27 ಸೆಕೆಂಡ್ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ನಾನು ಕೂಡ ಜೆಡಿಎಸ್ ಕಾರ್ಯಕರ್ತ ಎನ್ನುತ್ತ ಕೆ.ಟಿ.ಶ್ರೀಕಂಠೇಗೌಡ, ಎಲ್.ಆರ್ ಶಿವರಾಮೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಂಬರೀಶಣ್ಣ ಕರ್ನಾಟಕದ ಜನರ ಮನಸ್ಸಿನಲ್ಲಿದ್ದಾರೆ. ಅವರು ಇಂದು ನಮ್ಮ ಮಧ್ಯೆ ಇಲ್ಲ ಎಂದು ಅವರ ಕುಟುಂಬದ ಬಗ್ಗೆ ಮಾತನಾಡುತ್ತೀರಾ? ಮಂಡ್ಯ ಕ್ಷೇತ್ರದ ಸಂಸದರಾಗಿ ನಿಮಗೆ ನಾಚಿಯಾಗಬೇಕು ಎಂದಿದ್ದಾರೆ.
ಅಲ್ಲದೆ ಅಂಬರೀಶ್ ಅವರ ಬಗ್ಗೆ ಮಾತನಾಡುತ್ತೀರಲ್ಲ, ನೀವು ಮಂಡ್ಯ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೆ ಅನಿತಾ ಕುಮಾರಸ್ವಾಮಿ, ನಿಖಿಲ್, ಪ್ರಜ್ವಲ್ ಸೇರಿದಂತೆ ದೇವೇಗೌಡರ ಕುಟುಂಬದವರ ವಿರುದ್ಧ ಹರಿಹಾಯ್ದಿರುವ ಅಂಬಿ ಅಭಿಮಾನಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮನಸ್ತಾಪ, ವಾಗ್ದಾಳಿಯು ದೆಹಲಿಯಲ್ಲಿಯೂ ಬಹಿರಂಗವಾಗಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಅವರು, ಮೈತ್ರಿ ಧರ್ಮ ಪಾಲಿಸುವಂತೆ ರಾಜ್ಯ ಕೈ ಶಾಸಕರಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ರಾಜ್ಯ ನಾಯಕರನ್ನು ನಿಯಂತ್ರಿಸುವಂತೆ ಕೈ ಹೈಕಮಾಂಡ್‍ಗೂ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ನಿಯಂತ್ರಿಸಬೇಕು. ಜೊತೆಗೆ ಮೈತ್ರಿಗೆ ಧಕ್ಕೆ ಆಗುವಂತಹ ಹೇಳಿಕೆ ನೀಡಬಾರದು. ಈ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿ ಕೆಲಸ ಮಾಡಲು ಬಿಡಬೇಕು ಎಂದ ಸಂಸದರು, ಕಾಂಗ್ರೆಸ್ ಶಾಸಕರ ಹೇಳಿಕೆ ನೀಡಿದ ನಂತರವೇ ನಮ್ಮ ಶಾಸಕರು ಪ್ರತಿಕ್ರಿಯೆ ನೀಡಿದ್ದು ಎಂದು ಹೇಳಿ ತಮ್ಮ ಶಾಸಕರನ್ನು ಸಮರ್ಥಿಸಿಕೊಂಡರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಲಿ. ಆದರೆ ಅದರಿಂದ ಮೈತ್ರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಬಣದ ಕಾಂಗ್ರೆಸ್ ಶಾಸಕರು, ನಾಯಕರ ವಿರುದ್ಧ ಸಂಸದರು ಕಿಡಿಕಾರಿದರು.