Tag: ಎಲ್‌ಪಿಎಲ್

  • ಪೆಟ್ರೋಲ್ ಇಲ್ಲದೇ ಕ್ರಿಕೆಟ್ ಅಭ್ಯಾಸಕ್ಕೂ ಹೋಗೋಕಾಗ್ತಿಲ್ಲ- ಲಂಕಾ ಕ್ರಿಕೆಟಿಗ ಕರುಣಾರತ್ನೆ ಬೇಸರ

    ಪೆಟ್ರೋಲ್ ಇಲ್ಲದೇ ಕ್ರಿಕೆಟ್ ಅಭ್ಯಾಸಕ್ಕೂ ಹೋಗೋಕಾಗ್ತಿಲ್ಲ- ಲಂಕಾ ಕ್ರಿಕೆಟಿಗ ಕರುಣಾರತ್ನೆ ಬೇಸರ

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಜನಸಾಮಾನ್ಯರು ಮಾತ್ರವಲ್ಲದೇ ಕ್ರಿಕೆಟಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಪೆಟ್ರೋಲ್‌ಗಾಗಿ ಕಳೆದ ಎರಡು ದಿನಗಳಿಂದಲೂ ದೊಡ್ಡ ಸಾಲಿನಲ್ಲಿ ನಿಂತಿದ್ದ 2019ರಲ್ಲಿ ಲಂಕಾ ತಂಡಕ್ಕೆ ಪದಾರ್ಪಣೆ ಮಾಡಿದ ಕ್ರಿಕೆಟಿಗ ಚಮಿಕಾ ಕರುಣಾರತ್ನೆ ತಮ್ಮ ಬೇಸರವನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದಾರೆ.

    ಅದೃಷ್ಟವಶಾತ್ ಸತತ ಎರಡು ದಿನಗಳ ಕಾಲ ಸಾಲಿನಲ್ಲಿ ನಿಂತಿದ್ದಕ್ಕೆ ನನಗೆ ಪೆಟ್ರೋಲ್ ಸಿಕ್ಕಿದೆ. ಪ್ರಸ್ತುತ ತೈಲ ಬಿಕ್ಕಟ್ಟಿನಿಂದಾಗಿ, ನಾನು ಕ್ರಿಕೆಟ್ ಅಭ್ಯಾಸಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‍ಗಳು ಲಾಕ್ – ರಾಯಚೂರಿನಲ್ಲಿ ಹೆಚ್ಚಾದ ಪ್ರವಾಹ ಭೀತಿ

    ಸದ್ಯದಲ್ಲೇ ಶ್ರೀಲಂಕಾ `ಏಷ್ಯಾಕಪ್-2022′ ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸುತ್ತಿದೆ. ಆದರೆ ಇಡೀ ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ತೈಲದ ಕೊರತೆ ಕ್ರಿಕೆಟಿಗರ ಮೇಲೂ ಗಾಢವಾದ ಪರಿಣಾಮ ಬೀರಿದೆ. ಏಷ್ಯಾಕಪ್‌ನೊಂದಿಗೆ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ಸಹ ಹತ್ತಿರವಾಗುತ್ತಿದೆ. ಇದಕ್ಕಾಗಿ ವಿವಿಧ ಸ್ಥಳಗಳಲ್ಲಿ ಅಭ್ಯಾಸ ಮಾಡಬೇಕಿದೆ. ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯುವ ಸೀಸನ್‌ಗಳಲ್ಲಿಯೂ ಆಡಬೇಕಿದೆ. ಪೆಟ್ರೋಲ್ ಲಭ್ಯವಿಲ್ಲದ ಕಾರಣ ಎಲ್ಲಿಗೂ ಹೋಗಿ ಅಭ್ಯಾಸ ಮಾಡಲು ಆಗುತ್ತಿಲ್ಲ. ಮುಂದೆ ಏನಾಗಲಿದೆ ಎಂಬುದು ನನಗೆ ಗೊತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

    ಕಳೆದ ಎರಡು ದಿನಗಳಿಂದ ನಾನು ಎಲ್ಲಿಗೂ ತೆರಳಿಲ್ಲ. ಏಕೆಂದರೆ ಪೆಟ್ರೋಲ್‌ಗಾಗಿ ದೊಡ್ಡ ಸಾಲಿನಲ್ಲಿ ನಿಂತಿದ್ದೆ. ಅದೃಷ್ಟವಶಾತ್ ಇಂದು ನನಗೆ ಪೆಟ್ರೋಲ್ ಸಿಕ್ಕಿದೆ. 10 ಸಾವಿರ ರೂ. ಗಳಿಗೆ ಪೆಟ್ರೋಲ್ ತೆಗೆದುಕೊಂಡೆ. ಇದರಲ್ಲಿ ಎರಡು ಮೂರು ದಿನಗಳು ಮಾತ್ರ ನಾನು ಓಡಾಡಬಹುದು ಅಷ್ಟೇ ಎಂದು ಲಂಕಾ ಯುವ ಕ್ರಿಕೆಟಿಗ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ

    ಏಷ್ಯಾ ಕಪ್ ಟೂರ್ನಿಗೆ ನಾವು ಸಿದ್ಧರಾಗಿದ್ದೇವೆ ಹಾಗೂ ಇದು ದೊಡ್ಡ ಟೂರ್ನಿಯಾಗಿದ್ದು, ಇದಕ್ಕೆ ಬೇಕಾಗುವ ಪೆಟ್ರೋಲ್ ಅನ್ನು ದೇಶ ನೀಡಲಿದೆ ಎಂದು ಭಾವಿಸುತ್ತೇನೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಸರಣಿಗಳನ್ನು ಮುಗಿಸಿದ್ದೇವೆ, ಇದು ಅತ್ಯುತ್ತಮವಾಗಿತ್ತು. ಇದೀಗ ಏಷ್ಯಾ ಕಪ್ ಟೂರ್ನಿಗೆ ತಯಾರಿ ನಡೆಸುತ್ತಿದ್ದೇವೆ, ಎಂದು ಚಮಿಕಾ ಕರುಣಾರತ್ನೆ ಹೇಳಿದ್ದಾರೆ.

    Live Tv

    [brid partner=56869869 player=32851 video=960834 autoplay=true]