Tag: ಎಲ್‍ಎಸ್‍ಜಿ

  • RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್‌ ಸೇರಿ ಎಲ್‌ಎಸ್‌ಜಿಗೆ ಬಿತ್ತು ಭಾರಿ ದಂಡ

    RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್‌ ಸೇರಿ ಎಲ್‌ಎಸ್‌ಜಿಗೆ ಬಿತ್ತು ಭಾರಿ ದಂಡ

    – ನಿಧಾನಗತಿಯ ಓವರ್‌ ಕಾಯ್ದುಕೊಂಡಿದ್ದಕ್ಕೆ ರಿಷಭ್‌ ಪಂತ್‌ಗೆ 30 ಲಕ್ಷ ಫೈನ್‌

    ಲಕ್ನೋ: ಐಪಿಎಲ್‌ ಟೂರ್ನಿಯ ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್ (Rishabh Pant) ಸೇರಿ ಎಲ್‌ಎಸ್‌ಜಿ (LSG) ತಂಡಕ್ಕೆ ಬಿಸಿಸಿಐ ದಂಡ ವಿಧಿಸಿದೆ.

    ಮಂಗಳವಾರ ನಡೆದ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಸಲಹಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಆರ್‌ಸಿಬಿ ಕ್ವಾಲಿಫೈಯರ್‌ 1 ಎಂಟ್ರಿಗೆ ಕೊಡುಗೆ ನೀಡಿದ ಕೊಹ್ಲಿಗೆ ದಿನೇಶ್‌ ಕಾರ್ತಿಕ್‌ ವಿಶೇಷ ಗೌರವ

    ಐಪಿಎಲ್‌ನ ಕನಿಷ್ಠ ಓವರ್ ದರ ಅಪರಾಧಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಅಡಿಯಲ್ಲಿ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ, ರಿಷಭ್ ಪಂತ್‌ಗೆ 30 ಲಕ್ಷ ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ XI ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ.

    ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ ವಿಕೆಟ್‌ಗಳ ಸೋಲನುಭವಿಸಿತು. ಲಕ್ನೋ ತಂಡದ ಐಪಿಎಲ್ 2025 ಅಭಿಯಾನವು ಅವರ ತವರು ನೆಲದಲ್ಲಿ ಕಹಿ ಅನುಭವದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ: ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ

    ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದು, ಆರ್‌ಸಿಬಿ ಎರಡು ಹೆಚ್ಚುವರಿ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ. ಆರ್‌ಸಿಬಿ ಗುರುವಾರ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ಇತ್ತ ಮೂರನೇ ಸ್ಥಾನಕ್ಕೆ ಕುಸಿದ ಗುಜರಾತ್ ಟೈಟಾನ್ಸ್ ಶುಕ್ರವಾರ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ.

  • ಕೊನೆಗೂ ಗೆದ್ದ ಚೆನ್ನೈ – ಲಕ್ನೋ ವಿರುದ್ಧ ರೋಚಕ ಜಯ

    ಕೊನೆಗೂ ಗೆದ್ದ ಚೆನ್ನೈ – ಲಕ್ನೋ ವಿರುದ್ಧ ರೋಚಕ ಜಯ

    ಲಕ್ನೋ: ಕೊನೆಯಲ್ಲಿ ನಾಯಕ ಧೋನಿ (MS Dhoni) ಮತ್ತು ಶಿವಂ ದುಬೆ (Shivam Dube) ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ ರೋಚಕ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 166 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 5 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು.

     

    ಚೆನ್ನೈ ಕಳೆದ 5 ಪಂದ್ಯಗಳಲ್ಲಿ ಸತತ ಸೋಲನ್ನು ಅನುಭವಿಸಿತ್ತು. ಈಗ 7ನೇ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ನೀಡಿದೆ. ಮುರಿಯದ 6ನೇ ವಿಕೆಟಿಗೆ ಧೋನಿ ಮತ್ತು ದುಬೆ 28 ಎಸೆತಗಳಲ್ಲಿ 57 ರನ್‌ ಹೊಡೆಯುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಧೋನಿ ಔಟಾದಗೇ 26 ರನ್‌ (11 ಎಸೆತ, 4 ಬೌಂಡರಿ) ಶಿವಂ ದುಬೆ ಔಟಾಗದೇ 43 ರನ್‌ (37 ಎಸೆತ, 3 ಬೌಂಡರಿ, 2 ಸಿಕ್ಸ್‌ ) ಹೊಡೆದರು.

    ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ ರಚಿನ್‌ ರವೀಂದ್ರ ಮತ್ತು ಶೇಕ್‌ ರಶೀದ್‌ 52 ರನ್‌ ಜೊತೆಯಾಟವಾಡಿದರು. ಇಂದು ಮೊದಲ ಪಂದ್ಯವಾಡಿದ ಶೇಕ್‌ ರಶೀದ್‌ 27 ರನ್‌ ಹೊಡೆದರೆ ರಚಿನ್‌ ರವೀಂದ್ರ 37 ರನ್‌(22 ಎಸೆತ, 5 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರೂ ದುಬೆ ತಾಳ್ಮೆಯಿಂದ ಇನ್ನಿಂಗ್ಸ್‌ ಕಟ್ಟಿದ್ದರು.

     

    ಲಕ್ನೋ ಪರ ನಾಯಕ ರಿಷಭ್‌ ಪಂತ್‌ ಈ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದರು. 63 ರನ್‌(49 ಎಸೆತ, 4 ಬೌಂಡರಿ, 4 ಸಿಕ್ಸ್‌) ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ 30 ರನ್‌( 25 ಎಸೆತ, 2 ಬೌಂಡರಿ, 2 ಸಿಕ್ಸ್‌) ಹೊಡೆದು ‌ಔಟಾದರು. ನೂರ್‌ ಅಹ್ಮದ್ ಮತ್ತು ಪತಿರಾನ ತಲಾ ಎರಡು ವಿಕೆಟ್‌ ಪಡೆದರು.

  • ಲಕ್ನೋ ವಿರುದ್ಧ ಕೆಕೆಆರ್‌ಗೆ 98 ರನ್‌ಗಳ ಭರ್ಜರಿ ಜಯ – ಪ್ಲೆ-ಆಫ್‌ಗೆ ಶ್ರೇಯಸ್‌ ಪಡೆ ಇನ್ನಷ್ಟು ಹತ್ತಿರ

    ಲಕ್ನೋ ವಿರುದ್ಧ ಕೆಕೆಆರ್‌ಗೆ 98 ರನ್‌ಗಳ ಭರ್ಜರಿ ಜಯ – ಪ್ಲೆ-ಆಫ್‌ಗೆ ಶ್ರೇಯಸ್‌ ಪಡೆ ಇನ್ನಷ್ಟು ಹತ್ತಿರ

    ಲಕ್ನೋ: ಸುನೀಲ್‌ ನರೇನ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ 98 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇ-ಆಫ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

    ಭಾನುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ತವರಿನಲ್ಲೇ ಲಕ್ನೋ ಸೋಲನುಭವಿಸಿತು. ಟಾಸ್‌ ಗೆದ್ದ ರಾಹುಲ್‌ ಪಡೆ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 235 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಲಕ್ನೋ 16.1 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್‌ ಆಗಿ ಸೋತಿತು.

    ಲಕ್ನೋ ಪರ ಯಾವೊಬ್ಬ ಬ್ಯಾಟರ್‌ ಕೂಡ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾದರು. ನಾಯಕ ಕೆ.ಎಲ್‌.ರಾಹುಲ್‌ (25), ಮಾರ್ಕಸ್ ಸ್ಟೊಯಿನಿಸ್ (36), ಆಯುಷ್ ಬದೋನಿ (15), ಆಷ್ಟನ್ ಟರ್ನರ್ (16) ಗಳಿಸಿದರು. ಉಳಿದ ಬ್ಯಾಟರ್‌ಗಳು ಕೂಡ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದರು.

    ರಾಹುಲ್‌ ಪಡೆಯನ್ನು ಕಟ್ಟಿ ಹಾಕುವಲ್ಲಿ ಕೆಕೆಆರ್‌ ಬೌಲರ್‌ಗಳು ಯಶಸ್ವಿಯಾದರು. ಕೆಕೆಆರ್‌ ಪರ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ಆಂಡ್ರೆ ರಸೆಲ್ 2, ಮಿಚೆಲ್ ಸ್ಟಾರ್ಕ್ ಹಾಗೂ ಸುನಿಲ್ ನರೇನ್‌ ತಲಾ 1 ವಿಕೆಟ್‌ ಕಿತ್ತರು.

    ಇದಕ್ಕೂ ಮೊದಲು ಕೆಕೆಆರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ಸುನೀಲ್‌ ನರೇನ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಹೊಡಿಬಡಿ ಆಟವಾಡಿದ ಜೋಡಿ 26 ಬಾಲ್‌ಗಳಿಗೆ 61 ರನ್‌ಗಳ ಜೊತೆಯಾಟವಾಡಿತು. ಸಾಲ್ಟ್‌ 14 ಬಾಲ್‌ಗೆ 32 ರನ್‌ ಗಳಿಸಿದರು.

    ನಂತರ ನರೇನ್‌ಗೆ ಆಂಗ್ಕ್ರಿಶ್ ರಘುವಂಶಿ (32) ಜೊತೆಯಾಗಿ ಉತ್ತಮ ರನ್‌ ಕಲೆಹಾಕಲು ಸಾಥ್‌ ನೀಡಿದರು. ಈ ಜೋಡಿ 46 ಬಾಲ್‌ಗೆ 79 ರನ್‌ಗಳ ಜೊತೆಯಾಟವಾಡಿತು.

    ನರೇನ್‌ ಬಿರುಸಿನ ಆಟ
    ಕೆಕೆಆರ್‌ ಪರ ಬಿರುಸಿನ ಆಟವಾಡಿದ ನರೇನ್‌ ಕೇವಲ 39 ಬಾಲ್‌ಗಳಿಗೆ 81 ರನ್‌ (6 ಫೋರ್‌, 7 ಸಿಕ್ಸರ್‌) ಚಚ್ಚಿದರು. ನಾಯಕ ಶ್ರೇಯರ್‌ ಐಯ್ಯರ್‌ 23, ರಮಣದೀಪ್ ಸಿಂಗ್ 25 ರನ್‌ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಇತ್ತ ಲಕ್ನೋ ಪರ ನವೀನ್-ಉಲ್-ಹಕ್ 3, ಯಶ್ ಠಾಕೂರ್, ರವಿ ಬಿಷ್ಣೋಯ್, ಯುದ್ಧವೀರ್ ಸಿಂಗ್ ತಲಾ 1 ವಿಕೆಟ್‌ ಕಿತ್ತರು.

  • ಆರ್‌ಸಿಬಿ ಬೌಲರ್‌ಗಳಿಗೆ ಭೇಷ್ ಅಂದ ಕೆ.ಎಲ್ ರಾಹುಲ್

    ಆರ್‌ಸಿಬಿ ಬೌಲರ್‌ಗಳಿಗೆ ಭೇಷ್ ಅಂದ ಕೆ.ಎಲ್ ರಾಹುಲ್

    ಕೋಲ್ಕತ್ತಾ: ಮೊನ್ನೆ ನಡೆದ ಆರ್‌ಸಿಬಿ ಮತ್ತು ಲಕ್ನೋ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳು ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕನ್ನಡಿಗ ಕೆ.ಎಲ್. ರಾಹುಲ್ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ನಮ್ಮ ತಂಡದ ಬ್ಯಾಟ್ಸ್‌ಮ್ಯಾನ್‌ಗಳು ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸಿದರು. ಆದರೆ ಎದುರಾಳಿ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದು ಹೇಳಿದ್ದಾರೆ.

    ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 208 ರನ್‌ಗಳ ಗುರಿ ಬೆನ್ನಟ್ಟಿದ್ದ ಲಕ್ನೋ ತಂಡವು 14 ರನ್‌ಗಳಿಂದ ಸೋಲನುಭವಿಸಿತು. ಅದಕ್ಕಾಗಿ ತಂಡದ ನಾಯಕ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.

    ಪವರ್‌ಪ್ಲೇ ನಂತರದ ಏಳು ಓವರ್‌ಗಳಲ್ಲಿ ರಾಹುಲ್ ಒಂದು ಬೌಂಡರಿ ಮಾತ್ರ ಗಳಿಸಿದ್ದರು. ಇದೇ ಮೊದಲ ಬಾರಿ ಟೂರ್ನಿಯಲ್ಲಿ ಆಡಿದ ಲಕ್ನೋ ತಂಡವು ಗುರಿ ಬೆನ್ನಟ್ಟಿದ್ದ ಏಳು ಪಂದ್ಯಗಳ ಪೈಕಿ ಐದರಲ್ಲಿ ಸೋತಿದೆ.

    ಟೂರ್ನಿಯಲ್ಲಿ ಚೇಸಿಂಗ್ ಮಾಡಿದ ಪಂದ್ಯಗಳಲ್ಲಿ ನಮ್ಮ ಸಾಧನೆ ಚೆನ್ನಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಈ ವಿಷಯದಲ್ಲಿ ಸುಧಾರಣೆಗೆ ಪ್ರಯತ್ನಿಸುತ್ತೇವೆ ಎಂದು ರಾಹುಲ್ ಹೇಳಿದರು.

    ಈ ಪಂದ್ಯದಲ್ಲಿ ರಾಹುಲ್ 58 ಎಸೆತಗಳನ್ನು ಎದುರಿಸಿ 79 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಒಟ್ಟು 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

  • ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿಂದು ಐಪಿಎಲ್ 2022ರ ಎಲಿಮಿನೇಟರ್ 2ನೇ ಪಂದ್ಯ ನಡೆಯಲಿದ್ದು, ಡುಪ್ಲೆಸಿ ಬಳಗಕ್ಕೆ ಕನ್ನಡಿಗ ರಾಹುಲ್ ನೇತೃತ್ವದ ಲಕ್ನೋ ತಂಡವು ಎದುರಾಗಲಿದೆ.

    ಐಪಿಎಲ್‍ನಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಹೊಸ ತಂಡ ಲಕ್ನೋ ಲೀಗ್ ಹಂತದಲ್ಲಿ ತನ್ನ ಚರಣದ 14 ಪಂದ್ಯಗಳನ್ನಾಡಿ 9ರಲ್ಲಿ ಜಯಗಳಿಸಿದ್ದು, 5 ಪಂದ್ಯಗಳಲ್ಲಿ ಸೋತಿದೆ. ಟೂರ್ನಿಯ ಉದ್ದಕ್ಕೂ ಉತ್ತಮ ಪ್ರರ್ದಶನ ತೋರಿದ ರಾಹುಲ್ 2 ಮತ್ತು ಕ್ವಿಂಟನ್ ಡಿಕಾಕ್ ಒಂದು ಶತಕ ಗಳಿಸಿದ್ದಾರೆ. ಕೋಲ್ಕತ್ತಾ ನೈಟ್‍ರೈಡರ್ಸ್ ಎದುರಿನ ಪಂದ್ಯದಲ್ಲಿ ಇವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ ಅಜೇಯ 210 ರನ್ ಗಳಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್‍ರೌಂಡರ್‌ಗಳಾದ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಫಾರ್ಮ್‍ನಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆರಂಭಿಕ ಓವರ್‌ಗಳಲ್ಲಿಯೇ ವಿಕೆಟ್ ಗಳಿಸುವ ಆವೇಶ್ ಖಾನ್, ಮೊಹಸೀನ್ ಖಾನ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರ ಮಾರಕ ಬೌಲಿಂಗ್ ಬೆಂಗಳೂರು ತಂಡಕ್ಕೆ ಸವಾಲಾಗಿ ನಿಂತಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮಿಂಚಿದ ತ್ರಿಪಾಠಿಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? – ರೊಚ್ಚಿಗೆದ್ದ ಅಭಿಮಾನಿಗಳು

    ಸತತ ವೈಫಲ್ಯಗಳ ನಂತರ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಫಾರ್ಮ್‍ಗೆ ಮರಳಿರುವುದು ತಂಡದಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಯಕ ಡುಪ್ಲೆಸಿ, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಆದರೆ ಬೌಲರ್‌ಗಳು ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ತಂಡಕ್ಕೆ ಇದೆ. ಹರ್ಷಲ್ ಪಟೇಲ್, ಸ್ಪಿನ್ನರ್ ವಣಿಂದು ಹಸರಂಗಾ ಮತ್ತು ಜೋಶ್ ಹ್ಯಾಜಲ್‍ವುಡ್ ಅವರು ರಾಹುಲ್ ಪಡೆಯ ಅಬ್ಬರಕ್ಕೆ ತಡೆಯೊಡ್ಡುವಲ್ಲಿ ಸಫಲರಾದರೆ ಆರ್‌ಸಿಬಿಗೆ ಎರಡನೇ ಕ್ವಾಲಿಫೈಯರ್ ಪ್ರವೇಶಿಸುವ ಅವಕಾಶ ಲಭಿಸಬಹುದು.

    IPL

    ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಾಗಿ ನಡೆದಿದ್ದ ಪೈಪೋಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಸೋತ ಕಾರಣಕ್ಕೆ ಆರ್‌ಸಿಬಿಯು ಹಾದಿ ಸುಗಮವಾಗಿತ್ತು. ಅದರಿಂದಾಗಿ ಸತತ ಮೂರನೇ ಆವೃತ್ತಿಯಲ್ಲಿಯೂ ಪ್ಲೇ ಆಫ್ ಪ್ರವೇಶಿಸಿದೆ.

  • ಕೆಎಲ್ ರಾಹುಲ್‍ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ

    ಕೆಎಲ್ ರಾಹುಲ್‍ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ

    ಮುಂಬೈ: ಮಂಗಳವಾರ ರಾತ್ರಿ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ.

    ಐಪಿಎಲ್ ನೀತಿ ಸಂಹಿತೆಯ ಹಂತ 1ರ ಪ್ರಕಾರ ರಾಹುಲ್‍ಗೆ ದಂಡ ವಿಧಿಸಲಾಗಿದೆ. ತಂಡದ ಸಹ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಅವರು ಸಹ ಅದೇ ಪಂದ್ಯದಲ್ಲಿ ಐಪಿಎಲ್‍ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಕೂಡಾ ಐಪಿಎಲ್ ನೀತಿ ಸಂಹಿತೆಯ ಹಂತ 1 ಅಡಿ ದಂಡ ಕಟ್ಟಬೇಕಾಗಿದೆ. ಇದನ್ನೂ ಓದಿ: ಲಕ್ನೋಗೆ ಕೆಜಿಎಫ್ ಚಿತ್ರದ ಡೈಲಾಗ್ ಮೂಲಕ ಟಕ್ಕರ್ ನೀಡಿದ ಆರ್‌ಸಿಬಿ

    ಜೋಶ್ ಹ್ಯಾಜಲ್‍ವುಡ್ ಎಸೆತದಲ್ಲಿ ಸ್ಟೊಯಿನಿಸ್ ಔಟಾಗಿದ್ದರು. ಆದರೆ ಇದಕ್ಕೂ ಮುನ್ನ ಅವರು ಅಂಪೈರ್ ಜೊತೆ ವಾಗ್ದಾಳಿ ನಡೆಸಿದರು. ಅವರ ಮಾತುಗಳು ಸ್ಟಂಪ್ ಮೈಕ್ರೋಫೋನ್‍ನಲ್ಲಿ ರೆಕಾರ್ಡ್ ಆಗಿವೆ. ಈ ಹಿನ್ನೆಲೆ ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಳಿಗೆ, ಮ್ಯಾಚ್ ರೆಫ್ರಿ ದಂಡ ವಿಧಿಸಿದ್ದಾರೆ.

    ಲಕ್ನೋ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್‍ಗಳಿಂದ ಜಯ ಸಾಧಿಸಿತು. ಇದನ್ನೂ ಓದಿ: ಪ್ಲೆ-ಆಫ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಔಟ್?