Tag: ಎಲೋನ್‌ ಮಸ್ಕ್‌

  • ಎಲೋನ್ ಮಸ್ಕ್‌ ವಹಿಸಿಕೊಂಡ ಬಳಿಕ ‘X’ ಬಳಕೆದಾರರ ಸಂಖ್ಯೆ ಕುಸಿಯುತ್ತಿದೆ: ಸಿಇಒ

    ಎಲೋನ್ ಮಸ್ಕ್‌ ವಹಿಸಿಕೊಂಡ ಬಳಿಕ ‘X’ ಬಳಕೆದಾರರ ಸಂಖ್ಯೆ ಕುಸಿಯುತ್ತಿದೆ: ಸಿಇಒ

    ವಾಷಿಂಗ್ಟನ್‌: ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ‌’ಎಕ್ಸ್’ (ಟ್ವಿಟ್ಟರ್) ತನ್ನ ದೈನಂದಿನ ಸಕ್ರಿಯ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ ಎಂದು ಸಿಇಒ ಲಿಂಡಾ ಯಾಕರಿನೊ (Linda Yaccarino) ತಿಳಿಸಿದ್ದಾರೆ.

    ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಲಿಂಡಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಬಳಕೆದಾರರಿಗೆ ಸಂಬಂಧಿಸಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಕಂಪನಿಯು ಪ್ರಸ್ತುತ 225 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಆದೆ ಎಲೋನ್‌ ಮಸ್ಕ್‌‌ (Elon Musk) ಅವರು ಟ್ವಿಟ್ಟರ್‌ ವಹಿಸಿಕೊಂಡ ನಂತರ 11.06% ಬಳಕೆದಾರರ ಸಂಖ್ಯೆ ಕುಸಿತ ಕಂಡಿದೆ ಎಂದಿದ್ದಾರೆ. ಇದನ್ನೂ ಓದಿ: 25 ವರ್ಷ ಪೂರೈಸಿದ ಸಂಭ್ರಮದಲ್ಲಿ ಗೂಗಲ್

    ಕಳೆದ ವರ್ಷ ಎಲೋನ್ ಮಸ್ಕ್ ಅವರು ಟ್ವಿಟ್ಟರ್ ವಹಿಸಿಕೊಳ್ಳುವುದಕ್ಕೂ ಮುನ್ನ ಮೊದಲು 254.5 ಮಿಲಿಯನ್ ಬಳಕೆದಾರರಿದ್ದರು. 2022 ರ ನವೆಂಬರ್ ಮಧ್ಯದಲ್ಲಿ ಟ್ವಿಟ್ಟರ್‌ 259.4 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. X ಸುಮಾರು 1.5 ಕೋಟಿ ಬಳಕೆದಾರರನ್ನು ಕಳೆದುಕೊಂಡಿದೆ. ಆ ಮೂಲಕ ಸರಿಸುಮಾರು 5.6% ರಷ್ಟು ಕುಸಿತ ಕಂಡಿದೆ.

    2024 ರ ಹೊತ್ತಿಗೆ ಎಕ್ಸ್‌ ಲಾಭದಾಯಕವಾಗಲಿದೆ. ನಾನು ಈಗ ಲಾಭದಾಯಕ ವ್ಯವಹಾರದಲ್ಲಿ ತೊಡಗಿದ್ದೇನೆ. ಮುಂದಿನ ದಿನಗಳಲ್ಲಿ ಲಾಭ ಗಳಿಸುತ್ತೇವೆ ಎಂದು ಸಿಇಒ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಕಳೆದ ವರ್ಷ ಎಲೋನ್‌ ಮಸ್ಕ್‌ 3.60 ಲಕ್ಷ ಕೋಟಿ ಮೊತ್ತಕ್ಕೆ ಟ್ವಿಟ್ಟರ್‌ ಕಂಪನಿಯನ್ನು ಖರೀದಿ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

    ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

    ವಾಷಿಂಗ್ಟನ್: ಸೀಟ್‌ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿ (Loose Bolts) ಮತ್ತು ಬಿಗಿಯಾಗಿಲ್ಲ ಎಂದು ಕಾರಣ ನೀಡಿ ಟೆಸ್ಲಾ (Tesla) ಕಂಪನಿ 3,470 ಕಾರುಗಳನ್ನ ಹಿಂದಕ್ಕೆ ಪಡೆದಿದೆ.

    ಅಮೆರಿಕದಲ್ಲಿ ಬಿಡುಗಡೆ ಮಾಡಿದ `ಮಾಡೆಲ್ ವೈ’ (Model Y) 2ನೇ ಸಾಲಿನಲ್ಲಿರುವ ಸೀಟ್ ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿಲ್ಲ ಎಂದು ಶನಿವಾರ ಹೇಳಿದೆ. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (NHTSA) ಈ ಬಗ್ಗೆ ಪ್ರತಿಕ್ರಿಯಿಸಿ, ಸಡಿಲವಾದ ಸೀಟ್ ಫ್ರೇಮ್ ಬೋಲ್ಟ್, ಸೀಟ್ ಬೆಲ್ಟ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕಡಿಮೆಮಾಡುತ್ತದೆ. ಜೊತೆಗೆ ಅಪಘಾತದ ಸಮಯದಲ್ಲಿ ಗಾಯ ಹಾಗೂ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಓಲಾದಿಂದ 7,614 ಕೋಟಿ ಹೂಡಿಕೆ- ಸಿಎಂ ಸ್ಟಾಲಿನ್‌ ಸಹಿ

    Elon Musk

    ಈ ಬಗ್ಗೆ ಪರಿಶೀಲಿಸುವುದಾಗಿ ಟೆಸ್ಲಾ ಹೇಳಿದೆ. 2ನೇ ಸಾಲಿನ ಡ್ರೈವರ್ ಸೈಡ್ ಮತ್ತು ಪ್ಯಾಸೆಂಜರ್ ಸೈಡ್ ಸೀಟ್ ಬ್ಯಾಕ್ ಫ್ರೇಮ್‌ಗಳ ಬೋಲ್ಟ್ಗಳನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದರೆ ಅವುಗಳನ್ನು ಸುರಕ್ಷಿತಗೊಳಿಸುವ (ಬಿಗಿಗೊಳಿಸುವ) ಕೆಲಸ ಮಾಡುತ್ತದೆ ಎಂದು ತಿಳಿಸಿದೆ.

  • ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

    ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

    ವಾಷಿಂಗ್ಟನ್: ಟ್ವಿಟ್ಟರ್‌ನ (Twitter) ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡಾರ್ಸೆ (Jack Dorsey) ಮೈಕೋಬ್ಲಾಗಿಂಗ್ ಸೈಟ್‌ಗೆ ಪರ್ಯಾಯವಾಗಿ ಹೊಸ ಆ್ಯಪ್ ರಚನೆ ಮಾಡಿದ್ದು, ಇದೀಗ ಆ್ಯಪ್ ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿದೆ.

    ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಮಾಜಿ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಉನ್ನತ ಅಧಿಕಾರಿಗಳನ್ನೇ ವಜಾಗೊಳಿಸಲಾಗಿದೆ. ಈ ಬದಲಾವಣೆಯ ನಡುವೆಯೇ ಡಾರ್ಸೆ ಟ್ವಿಟ್ಟರ್‌ಗೆ ಪರ್ಯಾಯವಾಗಿ ಬ್ಲೂಸ್ಕೈ (Bluesky) ಹೆಸರಿನ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು.

    ವರದಿಗಳ ಪ್ರಕಾರ ಬ್ಲೂಸ್ಕೈ ಅಪ್ಲಿಕೇಶನ್ ಐಒಎಸ್‌ನ ಆ್ಯಪ್ ಸ್ಟೋರ್‌ನಲ್ಲಿ ಬೀಟಾ ಪರೀಕ್ಷೆಗಾಗಿ ಬಿಡುಗಡೆ ಮಾಡಲಾಗಿದೆ. ಇದು ಮೊದಲ ಬಾರಿ ಫೆಬ್ರವರಿ 17 ರಂದು ಆ್ಯಪ್ ಸ್ಟೋರ್‌ನಲ್ಲಿ ಕಾಣಿಸಿಕೊಂಡಿತ್ತು. ಪರೀಕ್ಷಾ ಹಂತದಲ್ಲಿ ಇದನ್ನು 2,000 ಬಾರಿ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಎಂದು ವರದಿಯಾಗಿದೆ.

    ಬ್ಲೂಸ್ಕೈ ಆ್ಯಪ್‌ನ ಇಂಟರ್ಫೇಸ್ ಅನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಅಪ್ಲಿಕೇಶನ್‌ನಲ್ಲಿರುವ ಪ್ಲಸ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಬಳಕೆದಾರರು ಫೋಟೋಗಳನ್ನು ಒಳಗೊಂಡಂತೆ 256 ಅಕ್ಷರಗಳ ಪೋಸ್ಟ್ಅನ್ನು ಸುಲಭವಾಗಿ ರಚಿಸಬಹುದು. ಟ್ವಿಟ್ಟರ್‌ನಂತೆಯೇ ಬ್ಲೂಸ್ಕೈನಲ್ಲಿ ಲೈಕ್ಸ್, ರೀಪೋಸ್ಟ್, ಫಾಲೋ, ಹಾಗೂ ರಿಪ್ಲೈ ಮಾಡಬಹುದಾದ ಫೀಚರ್‌ಗಳಿವೆ. ಆದರೆ ಇದರಲ್ಲಿ ವ್ಯಕ್ತಿಗಳಿಗೆ ನೇರ ಸಂದೇಶ ಕಳುಹಿಸುವ ಫೀಚರ್ ಇಲ್ಲ. ಇದನ್ನೂ ಓದಿ: ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

    ಬ್ಲೂಸ್ಕೈನ ಯೋಜನೆಯನ್ನು 2019ರಲ್ಲಿ ಟ್ವಿಟ್ಟರ್ ಅಭಿವೃದ್ಧಿಪಡಿಸಿತ್ತು. ಆದರೆ ಬಳಿಕ 2022ರಲ್ಲಿ ಅದನ್ನು ಸ್ವತಂತ್ರ್ಯ ಕಂಪನಿಯಾಗಿ ಪ್ರತ್ಯೇಕಗೊಳಿಸಲಾಯಿತು. ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧಿನಪಡಿಸಿಕೊಳ್ಳುವುದಕ್ಕೂ 1 ವಾರ ಮೊದಲೇ ಡಾರ್ಸೆ ಬ್ಲೂಸ್ಕೈಗೆ ಬೀಟಾ ಪರೀಕ್ಷಕರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್